Tag: United Nations

  • ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಲಂಡನ್: ಅಮೆರಿಕದ (USA) ತೀವ್ರ ವಿರೋಧದ ನಡುವೆಯೂ ಬ್ರಿಟನ್ ಸರ್ಕಾರವು ಪ್ಯಾಲೆಸ್ಟೀನ್‌ಗೆ (Palestine) ದೇಶದ ಮಾನ್ಯತೆ ನೀಡಲು ಮುಂದಾಗಿದೆ.

    ಗಾಜಾದಲ್ಲಿ ನಡೆಸುತ್ತಿರುವ ಯುದ್ಧ ಸಂಬಂಧ ಬ್ರಿಟನ್ ಸರ್ಕಾರ ಇಸ್ರೇಲ್‌ಗೆ (Israel) ಕೆಲ ನಿಬಂಧನೆ ವಿಧಿಸಿತ್ತು. ಆದ್ರೆ ಇಸ್ರೇಲ್‌ ನಿಬಂಧನೆ ಪಾಲಿಸದ ಹಿನ್ನೆಲೆ ಬ್ರಿಟನ್‌ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

    ಸೋಮವಾರದಿಂದ (ಸೆ.22) ವಿಶ್ವಸಂಸ್ಥೆಯ (United Nations) 80ನೇ ಸಾಮಾನ್ಯ ಸಭೆ ಆರಂಭವಾಗಲಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧ, ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಅದಕ್ಕೂ ಮುನ್ನ ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್ ಸೇರಿದಂತೆ ಸುಮಾರು 140 ದೇಶಗಳು ಪ್ಯಾಲೆಸ್ಟೀನ್ ಅನ್ನು ಪ್ರತ್ಯೇಕ ದೇಶವನ್ನಾಗಿ ಪರಿಗಣಿಸಲು ಮುಂದಾಗಿವೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಇದೊಂದು ಸಾಂಕೇತಿಕ ನಡೆಯಾಗಲಿದೆಯಾದರೂ ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಈ ನಿರ್ಧಾರವು ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು. ಇದರಿಂದ ಗಾಜಾದಲ್ಲಿ ಶಾಂತಿ ನೆಲಸಬಹುದು ಎಂದು ಬ್ರಿಟನ್ ಆಶಿಸಿದೆ. ಫ್ರಾನ್ಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಇಸ್ರೇಲ್‌ನಲ್ಲಿರುವ ಶಾಂತಿಪರ ಹೋರಾಟಗಾರರು ಸ್ವಾಗತಿಸಿದ್ದಾರೆ. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    ಈ ಬೆಳವಣಿಗೆ ನಡುವೆಯೇ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಒಂದೇ ದಿನ 91 ಸಾವು ಸಾವನ್ನಪ್ಪಿದ್ದಾರೆ. ಇದರಿಂದ ಟೆಲ್ ಅವೀವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನಾ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಇಸ್ರೇಲಿ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ 91 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ. ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಮತ್ತು ಉತ್ತರ ಗಾಜಾ ನಗರದ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

  • ಭಾರತದ ಜನಸಂಖ್ಯೆ 146 ಕೋಟಿ – ಮಹಿಳೆಯರಲ್ಲಿ ಕುಸಿಯುತ್ತಿದೆ ಸಂತಾನೋತ್ಪತ್ತಿ

    ಭಾರತದ ಜನಸಂಖ್ಯೆ 146 ಕೋಟಿ – ಮಹಿಳೆಯರಲ್ಲಿ ಕುಸಿಯುತ್ತಿದೆ ಸಂತಾನೋತ್ಪತ್ತಿ

    – ಫಲವತ್ತತೆ ಕುಸಿದಿರುವುದು ಜನಸಂಖ್ಯಾ ಬದಲಾವಣೆಯ ಆರಂಭ ಮುನ್ಸೂಚನೆ
    – ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವರದಿ ಪ್ರಕಟ

    ನವದೆಹಲಿ: ಭಾರತದ ಜನಸಂಖ್ಯೆ (India’s population) 2025ರ ಅಂತ್ಯದ ವೇಳೆಗೆ 146 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆಯ ವರದಿ ತಿಳಿಸಿದೆ.

    United Nations Population Fund (UNFPA) ತನ್ನ ವರದಿಯಲ್ಲಿ ಭಾರತದ ಪ್ರತಿ ಮಹಿಳೆಯ ಸಂತಾನೋತ್ಪತಿ ಸರಾಸರಿ ಫಲವತ್ತತೆ ದರ (Fertility Rate ) 2.1 ಇತ್ತು. ಆದರೆ ಈಗ ಇದು 1.9ಕ್ಕೆ ಕುಸಿದಿದೆ. ಫಲವತ್ತತೆ ಕುಸಿದಿರುವುದು ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಆರಂಭದ ಮುನ್ಸೂಚನೆ ಎಂದು ಹೇಳಿದೆ.

    ತಲೆಮಾರಿನಿಂದ ತಲೆಮಾರಿಗೆ ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಅಗತ್ಯವಿರುವಷ್ಟು ಮಕ್ಕಳಿಗೆ ಜನ್ಮನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ ಎಂಬ ಆತಂಕವನ್ನು ವರದಿ ಹೊರಹಾಕಿದೆ. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ ರಾಹುಲ್ ಗಾಂಧಿ ಅತೃಪ್ತಿ – ಕ್ರೆಡಿಟ್ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನ?

    ವರದಿಯಲ್ಲಿ ಏನಿದೆ?
    150 ಕೋಟಿ ಸನಿಹದಲ್ಲಿರುವ ಜನಸಂಖ್ಯೆ 170 ಕೋಟಿಗೆ ಏರಿ ನಂತರ 40 ವರ್ಷಗಳ ಬಳಿಕ ಇಳಿಮುಖವಾಗಲಿದೆ. ಜನನ ದರ ನಿಧಾನವಾಗುತ್ತಿದ್ದರೂ, ಭಾರತದ ಯುವ ಜನಸಂಖ್ಯೆಯು ಗಮನಾರ್ಹವಾಗಿ ಉಳಿದಿದೆ.

    0-14ರ ವಯೋಮಾನದವರ ಸಂಖ್ಯೆ ಶೇ.24ರಷ್ಟಿದ್ದರೆ 10 ರಿಂದ 19ರ ವಯೋಮಾನದವರು ಶೇ.17ರಷ್ಟಿದ್ದಾರೆ. 15ರಿಂದ 64ರ ವಯೋಮಾನದ ದುಡಿಯುವ ವರ್ಗ ಶೇ.68ರಷ್ಟಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಜಾತಿ ಗಣತಿ ಸಮೀಕ್ಷೆ – ಪ್ರಬಲ ಸಮುದಾಯದ ಒತ್ತಡಕ್ಕೆ ಮಣಿದ ʼಕೈʼಕಮಾಂಡ್

    2025ರಲ್ಲಿ ಭಾರತೀಯರ ಜೀವಿತಾವಧಿಯು ಸರಾಸರಿಯಾಗಿ ಪುರುಷರಲ್ಲಿ 71 ವರ್ಷ ಹಾಗೂ ಮಹಿಳೆಯರಲ್ಲಿ 74 ವರ್ಷಕ್ಕೆ ಏರಿಕೆಯಾಗಿದೆ. ವಯಸ್ಸಾದ ಜನಸಂಖ್ಯೆ (65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಪ್ರಸ್ತುತ ಏಳು ಪ್ರತಿಶತದಷ್ಟಿದ್ದು, ಜೀವಿತಾವಧಿ ಸುಧಾರಿಸಿದಂತೆ ಮುಂಬರುವ ದಶಕಗಳಲ್ಲಿ ಸರಾಸಿ ವರ್ಷ ಹೆಚ್ಚಾಗುವ ನಿರೀಕ್ಷೆಯಿದೆ.

    1960 ರಲ್ಲಿ ಭಾರತದ ಜನಸಂಖ್ಯೆಯು ಸುಮಾರು 43.6 ಕೋಟಿ ಇದ್ದಾಗ ಸರಾಸರಿ ಮಹಿಳೆ ಸುಮಾರು ಆರು ಮಕ್ಕಳನ್ನು ಹೆರುತ್ತಿದ್ದರು. ಈಗ ಮಹಿಳೆ ಸರಾಸರಿಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

  • ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ

    ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ

    ಮಡಿಕೇರಿ: ಯುನೈಟೆಡ್ ನೇಷನ್ಸ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಕೌನ್ಸಿಲ್‌ನ 2025ನೇ ಸಾಲಿನ ಯೂತ್ ಫೋರಂಗೆ (ECOSOC Youth Forum 2025) ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

    ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಯ ಯೂತ್ ಫೋರಂ ಇದೇ ಏ.15 ರಿಂದ 17ರ ವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು, ಭಾರತ ಸೇರಿದಂತೆ ವಿಶ್ವದ 138 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್

    ʻಅಭಿವೃದ್ಧಿ ಶೀಲ ವಿಜ್ಞಾನ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಅಭಿವೃದ್ಧಿಶೀಲತೆಯನ್ನು ಹೆಚ್ಚಿಸುವುದುʼ ವಿಷಯದ ಅಡಿಯಲ್ಲಿ ಯೂತ್ ಫೋರಂ ಆಯೋಜಿಸಲ್ಪಟ್ಟಿದೆ. ಈ ಪ್ರತಿಷ್ಠಿತ ಶೃಂಗಸಭೆಗೆ ಭಾರತದ ಪ್ರತಿನಿಧಿಯಾಗಿ ಯದೀಶ್ ರಮೇಶ್ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಣ್ಣಮ್ಮ ದೇವಿಗೆ ಹರಕೆ ಸಲ್ಲಿಸಿದ ದರ್ಶನ್ ಪತ್ನಿ

    ಯದೀಶ್‌ ಯಾರು?
    ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್ ರಮೇಶ್ ಹಾಗೂ ಕೆ.ಆರ್ ರಮ್ಯಾ ದಂಪತಿಯ ಪುತ್ರ ಯದೀಶ್. ಅಮೆರಿಕದ ಬೋಸ್ಟನ್‌ನ ನಾರ್ಥ್‌ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ ಭಾರೀ ಅಕ್ರಮ – ಲೋಕಾಯುಕ್ತಕ್ಕೆ ದೂರು

    ಈ ಶೃಂಗಸಭೆಯಲ್ಲಿ 2030ರ ಕಾರ್ಯಸೂಚಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ನೇತೃತ್ವದಲ್ಲಿ ಜಗತ್ತನ್ನು ಹೆಚ್ಚು ನ್ಯಾಯಯುತ, ಹಸಿರು ಮತ್ತು ಸುಸ್ಥಿರ ಸ್ಥಳವಾಗಿ ಪರಿವರ್ತಿಸಲು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಶಿಫಾರಸುಗಳ ಬಗ್ಗೆ ಚರ್ಚಿಸಲು ಯುವಜನರಿಗೆ ವೇದಿಕೆ ಕಲ್ಪಿಸಲಾಗಿದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ

  • ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳನ್ನು ಬಂಧಿಸಿದ ಉಗಾಂಡಾ – ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮನವಿ

    ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳನ್ನು ಬಂಧಿಸಿದ ಉಗಾಂಡಾ – ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮನವಿ

    ಕಂಪಾಲಾ: ಭಾರತ (India) ಮೂಲದ ಸ್ವಿಸ್ ಉದ್ಯಮಿ ಪಂಕಜ್ ಓಸ್ವಾಲ್ (Pankaj Oswal) ಅವರ ಮಗಳನ್ನು ಉಗಾಂಡಾದಲ್ಲಿ (Uganda) ಬಂಧಿಸಲಾಗಿದೆ. ಅವರ ಬಂಧನ ಅಕ್ರಮವಾಗಿದ್ದು, ಮಧ್ಯಪ್ರವೇಶಿಸುವಂತೆ ಓಸ್ವಾಲ್ ವಿಶ್ವಸಂಸ್ಥೆಗೆ (United Nations) ಮೇಲ್ಮನವಿ ಸಲ್ಲಿಸಿದ್ದಾರೆ.

    ವಸುಂಧರಾ ಓಸ್ವಾಲ್ (26) ಅವರನ್ನು ಉಗಾಂಡಾದ ಎಕ್ಸ್‌ಟ್ರಾ-ನ್ಯೂಟ್ರಲ್ ಆಲ್ಕೋಹಾಲ್ (ENA) ಸ್ಥಾವರದಿಂದ ಅ.1 ರಂದು ಬಂಧಿಸಲಾಗಿತ್ತು. ಅವರನ್ನು ಸುಮಾರು 20 ಶಸ್ತ್ರಸಜ್ಜಿತ ಪೊಲೀಸರು ಯಾವುದೇ ವಾರಂಟ್ ತೋರಿಸದೆ ಬಂಧಿಸಿದ್ದಾರೆ. ಅವರ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಧ್ಯೆ ಪ್ರವೇಶಿಸುವಂತೆ ಈ ವಾರದ ಆರಂಭದಲ್ಲಿ ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್‌ಗೆ (WGAD) ಪಂಕಜ್ ಓಸ್ವಾಲ್ ತುರ್ತು ಮನವಿ ಸಲ್ಲಿಸಿದ್ದರು. WGAD ಎಂಬುದು ಮಾನವ ಹಕ್ಕುಗಳ ಕೌನ್ಸಿಲ್‌ನಿಂದ ನೇಮಕಗೊಂಡ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ತಜ್ಞರ ಸಂಸ್ಥೆಯಾಗಿದೆ.

     

    View this post on Instagram

     

    A post shared by Vasundhara Oswal (@vasundharaoswal)

    ವಸುಂಧರಾ ಅವರ ಇನ್ಸ್ಟಾಗ್ರಾಮ್‌ನಲ್ಲಿ ಅವರ ʻಕಾನೂನುಬಾಹಿರ ಬಂಧನʼ ವಿಚಾರವನ್ನು ಪೋಸ್ಟ್‌ ಮಾಡಲಾಗಿದೆ. ಪೋಸ್ಟ್‌ನಲ್ಲಿ ನೆಲದ ಮೇಲೆ ರಕ್ತ ಮತ್ತು ಗಲೀಜಾಗಿರುವ ಶೌಚಾಲಯದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಬಂಧನದ ವೇಳೆ 90 ಗಂಟೆಗಳಿಗೂ ಹೆಚ್ಚು ಕಾಲ ಶೂಗಳಿಂದ ತುಂಬಿದ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ. ಸುಮಾರು ಐದು ದಿನಗಳವರೆಗೆ ಸ್ನಾನ ಮಾಡಲು ಅಥವಾ ಬಟ್ಟೆ ಬದಲಾಯಿಸಲು ಅನುಮತಿಸಲಿಲ್ಲ. ಇಷ್ಟೇ ಅಲ್ಲದೇ ಶುದ್ಧ ನೀರು ಮತ್ತು ಸರಿಯಾದ ಆಹಾರ ನಿರಾಕರಿಸಲಾಗಿದೆ. ಮಲಗಲು ಸಣ್ಣ ಬೆಂಚ್ ನೀಡಲಾಗಿದೆ ಎಂದು ಪೊಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

    ವಸುಂಧರಾ ಅವರಿಗೆ ಸಸ್ಯಾಹಾರ ಆಹಾರವನ್ನು ನಿರಾಕರಿಸಲಾಗಿದೆ. ಅವರ ಕುಟುಂಬ ಮತ್ತು ವಕೀಲರಿಗೆ ಭೇಟಿಯನ್ನೂ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

    ವಸುಂಧರಾ ಅವರ ಬಂಧನವು 68 ವರ್ಷದ ಕಾರ್ಪೊರೇಟ್ ಒಬ್ಬನ ಅಸೂಯೆಯ ಪರಿಣಾಮವಾಗಿದೆ. ಓಸ್ವಾಲ್ ಅವರ ಹಣವನ್ನು ಸುಲಿಗೆ ಮಾಡಲು ಮತ್ತು ಅವರ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ಅವಳನ್ನು ಬಿಡುಗಡೆ ಮಾಡಲಿಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ.

    ಬಾಣಸಿಗ ಮುಖೇಶ್ ಕುಮಾರ್ ಮೆನಾರಿಯಾ ಅವರನ್ನು ಕೊಲ್ಲುವ ಉದ್ದೇಶದಿಂದ ಅಪಹರಣ ಮಾಡಿದ ಆರೋಪವನ್ನು ವಸುಂಧರಾ ಮತ್ತು ಅವರ ಕಂಪನಿಯ ವಕೀಲ ಎದುರಿಸುತ್ತಿದ್ದಾರೆ.

  • ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ನ್ಯೂಯಾರ್ಕ್‌: ವಿಶ್ವಸಂಸ್ಥೆಯ (United Nations) ಭಾಷಣದಲ್ಲಿ ಇಸ್ರೆಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಭಾರತದ ನಕ್ಷೆ ತೋರಿಸಿ ವರ (Blessing) ಎಂದು ಹೇಳಿ ಹೊಗಳಿದ್ದಾರೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡಿದರು. ಈ ವೇಳೆ ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್, ಸುಡಾನ್, ಭಾರತ ಮತ್ತು ಯುಎಇ ಸೇರಿದಂತೆ ಇಸ್ರೇಲ್‌ಗೆ ಸ್ನೇಹ ಪರವಾಗಿರುವ ದೇಶಗಳ ಚಿತ್ರವನ್ನು ತೋರಿಸಿ ʼವರʼ ಎಂದು ಬಣ್ಣಿಸಿದ್ದಾರೆ. ನಂತರ ಇರಾನ್‌,ಇರಾಕ್‌ ಸಿರಿಯಾ ಮ್ಯಾಪ್‌ ತೋರಿಸಿ ಶಾಪ (Curse) ಎಂದು ಹೇಳಿದ್ದಾರೆ.

    ನೆತನ್ಯಾಹು ಅವರು ತಮ್ಮ ಭಾಷಣದಲ್ಲಿ, ಇರಾನ್ ಅನ್ನು ಬಹಳ ಸಮಯದವರೆಗೆ ಜಗತ್ತು ಸಮಾಧಾನದಿಂದ ನೋಡಿದೆ. ಆದರೆ ಅದರ ಆಂತರಿಕ ದಮನದ ವಿಚಾರದಲ್ಲಿ ಕುರುಡಾಗಿ ಬಾಹ್ಯ ಆಕ್ರಮಣ ನಡೆಸುತ್ತಿದೆ. ಈ ತುಷ್ಟೀಕರಣ ಕೊನೆಗೊಳ್ಳಬೇಕು ಮತ್ತು ಈಗಲೇ ಕೊನೆಯಾಗಬೇಕು ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹತ್ಯೆ – ಇಸ್ರೇಲ್ ಸೇನೆಯಿಂದ ಘೋಷಣೆ

    ಟೆಹರಾನ್‌ ನಿರಂಕುಶಾಧಿಕಾರಿಗಳಿಗೆ ನನ್ನ ಬಳಿ ಸಂದೇಶವಿದೆ. ನೀವು ನಮ್ಮನ್ನು ಹೊಡೆದರೆ, ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಗುಡುಗಿದರು.

    ನೆತನ್ಯಾಹು ಅವರು ಹಿಡಿದ ವರ ನಕ್ಷೆಯು ಇಸ್ರೇಲ್ ಮತ್ತು ಅದರ ಅರಬ್ ಪಾಲುದಾರರ ನಡುವಿನ ಏಕತೆಯ ದೃಷ್ಟಿಯನ್ನು ವಿವರಿಸುತ್ತದೆ. ಹಿಂದೂ ಮಹಾಸಾಗರ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ಭೂ ಸೇತುವೆಯ ಮೂಲಕ ಏಷ್ಯಾ ಮತ್ತು ಯುರೋಪ್‌ನೊಂದಿಗೆ ಸಂಪರ್ಕಿಸುತ್ತದೆ.

  • ಹೈ ಸೀಸ್ ಒಪ್ಪಂದಕ್ಕೆ ಭಾರತದ ಸಹಿ – ಒಪ್ಪಂದದ ಮಹತ್ವವೇನು?

    ಹೈ ಸೀಸ್ ಒಪ್ಪಂದಕ್ಕೆ ಭಾರತದ ಸಹಿ – ಒಪ್ಪಂದದ ಮಹತ್ವವೇನು?

    ಹೈ ಸೀಸ್ ಒಪ್ಪಂದ (High Seas Treaty) ಎಂದು ಕರೆಯಲ್ಪಡುವ ರಾಷ್ಟ್ರೀಯ ನ್ಯಾಯವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ ಒಪ್ಪಂದವನ್ನು (ಬಿಬಿಎನ್‍ಜೆ) ಅಂಗೀಕರಿಸಲು ಜು.2 ರಂದು ಭಾರತ (India) ಒಪ್ಪಿಗೆ ನೀಡಿದೆ. ಇದು ರಾಷ್ಟ್ರೀಯ ನ್ಯಾಯವ್ಯಾಪ್ತಿಗೆ ಒಳಪಡದ ಸಮುದ್ರದ ಸಂರಕ್ಷಣೆಗೆ ಅವಕಾಶ ನೀಡುತ್ತದೆ ಮತ್ತು ಅದರ ಅನುಷ್ಠಾನವನ್ನು ಭೂ ವಿಜ್ಞಾನ ಸಚಿವಾಲಯ ಮೇಲ್ವಿಚಾರಣೆ ಮಾಡುತ್ತದೆ. ಈ ಮೂಲಕ ಭಾರತ ಸುಸ್ಥಿರ ಅಭಿವೃದ್ಧಿಗೆ ಕೊಡುವ ಬದ್ಧತೆಯನ್ನು ಪುನರುಚ್ಚರಿಸಿದೆ.

    ಹೈ ಸೀಸ್ ಎಂದರೇನು?

    ಯಾವುದೇ ದೇಶದ ವ್ಯಾಪ್ತಿಗೆ ಸೇರದ ಸಮುದ್ರದ ಭಾಗಗಳನ್ನು ಎತ್ತರದ ಸಮುದ್ರಗಳು ಎಂದು ಕರೆಯಲಾಗುತ್ತದೆ. ಇದು ದೇಶದ ವಿಶೇಷ ಆರ್ಥಿಕ ವಲಯವನ್ನು ಮೀರಿದ ಪ್ರದೇಶವಾಗಿದೆ. ಈ ಸಮುದ್ರಗಳಲ್ಲಿನ ಸಂಪನ್ಮೂಲಗಳ ನಿರ್ವಹಣೆ ಮತ್ತು ರಕ್ಷಣೆಗೆ ಯಾವುದೇ ದೇಶವು ಜವಾಬ್ದಾರಿ ಹೊಂದಿರುವುದಿಲ್ಲ. 

    ಹೈ ಸೀಸ್ ಒಪ್ಪಂದ ಎಂದರೇನು?

    ರಾಷ್ಟ್ರೀಯ ನ್ಯಾಯವ್ಯಾಪ್ತಿಯ ಆಚೆಗಿನ ಪ್ರದೇಶಗಳ ಸಮುದ್ರ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಒಪ್ಪಂದ ಎಂದು ಕರೆಯಲಾಗುತ್ತದೆ. ಇದು ಸಾಗರದ ಪರಿಸರ ರಕ್ಷಣೆಗಾಗಿ ಮಾಡಲಾದ ಅಂತರರಾಷ್ಟ್ರೀಯ ಕಾನೂನಾಗಿದೆ.

    ಈ ಒಪ್ಪಂದವನ್ನು 2023 ರಲ್ಲಿ ಮಾತುಕತೆ ನಡೆಸಲಾಯಿತು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಯಾವುದೇ ದೇಶದ ರಾಷ್ಟ್ರೀಯ ನ್ಯಾಯವ್ಯಾಪ್ತಿಯ ಹೊರಗಿನ ಸಾಗರ ನೀರಿನಲ್ಲಿ ಜೀವವೈವಿಧ್ಯ ಮತ್ತು ಇತರ ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ.

    ಹೈ ಸೀಸ್ ಒಪ್ಪಂದದ ಗುರಿ 

    ಹೈ ಸೀಸ್ ಒಪ್ಪಂದವು 2030 ರ ವೇಳೆಗೆ 30%ನಷ್ಟು ಸಮುದ್ರ ಜೀವಿಗಳ ಆವಾಸಸ್ಥಾನಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಗುರಿ ಸಾಧನೆಗೆ ಹಲವಾರು ಹೊಸ ಕಾರ್ಯವಿಧಾನಗಳ ಜಾರಿಗೆ ಯೋಜಿಸಲಾಗಿದೆ. 

    ಒಪ್ಪಂದದ ಪ್ರಮುಖ ಅಂಶಗಳು

    ಸಾಗರ ಸಂರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಜೀವವೈವಿಧ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಕ್ರಮವಹಿಸುವುದು. ಈ ಬಗ್ಗೆ ಯಾವ ದೇಶಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ತಿರ್ಮಾನಿಸುವುದು. ಸಮುದ್ರ ಭಾಗಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪ್ರಯತ್ನ ಮಾಡುವುದು. 

    ಆಳ ಸಮುದ್ರಗಳಲ್ಲಿನ ವಾಣಿಜ್ಯ ಚಟುವಟಿಕೆ ಪರಿಸರ ಪ್ರಭಾವದ ಮೌಲ್ಯಮಾಪನಕ್ಕಾಗಿ ಹೊಸ ನಿಯಮಗಳನ್ನು ರಚಿಸುವುದು. ರಾಷ್ಟ್ರಗಳು ಮತ್ತು ಅಲ್ಲಿನ ಕಂಪನಿಗಳು ಸಾಗರದಲ್ಲಿ ಲಾಭದಾಯಕ ಉದ್ಯಮಗಳನ್ನು ಪ್ರಾರಂಭಿಸುವ ಮೊದಲು ಸಮುದ್ರ ಪರಿಸರ ವ್ಯವಸ್ಥೆಗಳು ಮತ್ತು ಜೀವಿಗಳಿಗೆ ಸಂಭಾವ್ಯ ಹಾನಿಯನ್ನು ನಿರ್ಣಯಿಸಬೇಕು. ಈ ಬಗ್ಗೆ ಸಾರ್ವಜನಿಕವಾಗಿ ವರದಿ ಮಾಡಬೇಕು.

    ಶ್ರೀಮಂತ ರಾಷ್ಟ್ರಗಳು ವೈಜ್ಞಾನಿಕ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ಬಡ ರಾಷ್ಟ್ರಗಳಿಗೆ ಹಂಚಿಕೊಳ್ಳಬೇಕು. ಈ ಮೂಲಕ ಸಮುದ್ರ ಸಂಪನ್ಮೂಲಗಳನ್ನು ಪ್ರವೇಶಿಸಲು ಮತ್ತು ನೀಲಿ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು.

    ಸಾಗರ ತಂತ್ರಜ್ಞಾನದ ವರ್ಗಾವಣೆ, ಮಾಹಿತಿ ವಿನಿಮಯ, ಅರಿವು ಮೂಡಿಸುವುದು ಮತ್ತು ಮೂಲಸೌಕರ್ಯ, ಹಣಕಾಸು ಮತ್ತು ಸಾಗರ ರಕ್ಷಣೆಗೆ ಶ್ರಮಿಸುವ ಸಂಸ್ಥೆಗಳ್ನನು ಬಲಪಡಿಸುವ ಬಗ್ಗೆ ಕ್ರಮವಹಿಸುವ ಅಂಶಗಳು ಈ ಒಪ್ಪಂದದಲ್ಲಿವೆ. 

    ಹೈ ಸೀಸ್ ಒಪ್ಪಂದಕ್ಕೂ ಮೊದಲಿದ್ದ ಒಪ್ಪಂದದ ಸಮಸ್ಯೆ ಏನು?  

    1982 ರಲ್ಲಿ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ 16 ನವೆಂಬರ್ 1994 ರಂದು ಜಾರಿಗೆ ಬಂದಿತ್ತು. ಈ ಒಪ್ಪಂದ ರಾಷ್ಟ್ರೀಯ ನ್ಯಾಯವ್ಯಾಪ್ತಿಯ ರೇಖೆಗಳನ್ನು ಸ್ಥಾಪಿಸುತ್ತದೆ. ಈ ಮೂಲಕ ಸಾಗರದಲ್ಲಿ ಮಾನವನ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಸಮುದ್ರ ಪರಿಸರವನ್ನು ಸಂರಕ್ಷಿಸಲು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತದೆ. ಈ ಒಪ್ಪಂದದ ಷರತ್ತುಗಳು ತೀರದಿಂದ 200 ನಾಟಿಕಲ್ ಮೈಲುಗಳಷ್ಟು ದೂರಕ್ಕೆ ಕೊನೆಗೊಳ್ಳುತ್ತವೆ. ರಾಷ್ಟ್ರೀಯ ನ್ಯಾಯವ್ಯಾಪ್ತಿಯನ್ನು ಮೀರಿದ ಆಳದ ಸಮುದ್ರಗಳಿಗೆ ಇದು ಅನ್ವಯಿಸುವುದಿಲ್ಲ.

    ಹೈ ಸೀಸ್ ಒಪ್ಪಂದವು ಈ ಹಿಂದಿನ ಒಪ್ಪಂದದ ಕೊರತೆಗಳನ್ನು ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬುದು ತಜ್ಞರ ಅಭಿಪ್ರಾಯ. 

    ಹೈ ಸೀಸ್ ಸಂರಕ್ಷಣೆ ಯಾಕೆ ಅಗತ್ಯ?

    ಎತ್ತರದ ಸಮುದ್ರ, ಸಾಗರಗಳ 64% ಕ್ಕಿಂತ ಹೆಚ್ಚು ಮತ್ತು ಭೂಮಿಯ ಮೇಲ್ಮೈಯ 50% ಅನ್ನು ಆವರಿಸಿದೆ. ಇದು ಸಮುದ್ರ ಜೀವಿಗಳಿಗೆ ಪ್ರಮುಖವಾಗಿದೆ. ಈ ಭಾಗದಲ್ಲಿ ಸುಮಾರು 270,000 ಸಮುದ್ರ ಜೀವಿಗಳ ಪ್ರಬೇಧಗಳ ನೆಲೆಯಾಗಿದೆ. ಇನ್ನೂ ಅನೇಕವನ್ನು ಕಂಡುಹಿಡಿಯಬೇಕಾಗಿದೆ. 

    ಹೈ ಸೀಸ್ ಹವಾಮಾನವನ್ನು ನಿಯಂತ್ರಿಸುತ್ತದೆ. ಇಂಗಾಲವನ್ನು ಹೀರಿಕೊಳ್ಳುತ್ತದೆ. ಸಮುದ್ರಾಹಾರ, ಕಚ್ಚಾ ವಸ್ತುಗಳು ಮತ್ತು ಔಷಧೀಯ ಸಂಪನ್ಮೂಲಗಳಂತಹ ಸಂಪನ್ಮೂಲಗಳನ್ನು ಒದಗಿಸುತ್ತದೆ. 

    ಹೈ ಸೀಸ್ ಎದರಿಸುತ್ತಿರುವ ಅಪಾಯಗಳೇನು?

    ಸಮುದ್ರದ ಆಮ್ಲೀಕರಣದಂತಹ ವಿದ್ಯಮಾನಗಳಿಂದ ಸಮುದ್ರ ಸಸ್ಯ ಮತ್ತು ಪ್ರಾಣಿಗಳಿಗೆ ಅಪಾಯವಿದೆ. ಪ್ರಸ್ತುತ ತಾಪಮಾನ ಮತ್ತು ಆಮ್ಲೀಕರಣದ ಪ್ರವೃತ್ತಿಗಳು ಮುಂದುವರಿದರೆ 2100ರ ವೇಳೆಗೆ ಸಾವಿರಾರು ಸಮುದ್ರ ಪ್ರಭೇದಗಳು ಅಳಿವಿಗೆ ಕಾರಣವಾಗಲಿದೆ.

    ಸಮುದ್ರದ ತಳದ ಗಣಿಗಾರಿಕೆ, ಶಬ್ದ ಮಾಲಿನ್ಯ, ರಾಸಾಯನಿಕ ಮತ್ತು ತೈಲ ಸೋರಿಕೆ, ಸಂಸ್ಕರಿಸದ ತ್ಯಾಜ್ಯದ ವಿಲೇವಾರಿ (ಆಂಟಿಬಯೋಟಿಕ್ಸ್ ಸೇರಿದಂತೆ), ಅತಿಯಾದ ಮೀನುಗಾರಿಕೆಯಿಂದ ಈ ಸಮುದ್ರ ಭಾಗಗಳು ಆತಂಕದಲ್ಲಿವೆ. ಈ ಬೆದರಿಕೆಗಳ ಹೊರತಾಗಿಯೂ, ಕೇವಲ 1% ನಷ್ಟು ಎತ್ತರದ ಸಮುದ್ರಗಳನ್ನು ಪ್ರಸ್ತುತ ರಕ್ಷಿಸಲಾಗಿದೆ.

    ಜೂನ್ 2024 ರವರೆಗೆ, 91 ದೇಶಗಳು ಇಲ್ಲಿಯವರೆಗೆ ಒಪ್ಪಂದಕ್ಕೆ ಸಹಿ ಹಾಕಿವೆ , ಅವುಗಳಲ್ಲಿ 8 ದೇಶಗಳು ಅದನ್ನು ಅನುಮೋದಿಸಿವೆ. 60 ದೇಶಗಳು ಇದನ್ನು ಅನುಮೋದಿಸಿದ 120 ದಿನಗಳ ನಂತರ ಇದು ಕಾನೂನು ಬದ್ಧವಾಗುತ್ತದೆ.

  • ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

    ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

    – 2014-2023 ವರದಿ ಹೇಳೋದೇನು? – ತಜ್ಞರ ಆತಂಕವೇನು?

    ಮನುಕುನ ಉಳಿಯಬೇಕು ಎಂದಿದ್ದರೆ, ಇನ್ನೂ 100 ವರ್ಷಗಳಲ್ಲಿ ಭೂಮಿ ಬಿಟ್ಟು ಹೊರಡಿ ಎಂದು ವಿಶ್ವವಿಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಆರು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು. ಅವರ ಮಾತು ನಿಜ ಎನ್ನುವಂತಹ ಒಂದೊಂದು ಸನ್ನಿವೇಶಗಳು ಈ ಭೂಮಿ ಮೇಲೆ ಜರುಗುತ್ತಿವೆ. ಜನಸಂಖ್ಯಾ ಸ್ಫೋಟ, ಭೂಮಿ ಬಿಸಿಯಾಗುತ್ತಿರುವುದು ಮತ್ತು ಮನುಕುಲದ ಭವಿಷ್ಯದ ಬಗ್ಗೆ ಹಾಕಿಂಗ್ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇದ್ದರು. ಇದೇ ಹೊತ್ತಿನಲ್ಲಿ ಭೂಮಿ ಕುದಿಯುತ್ತಿರುವ ಸಂಬಂಧ ವರದಿಯೊಂದು ಬಿಡುಗಡೆಯಾಗಿದ್ದು, ಆತಂಕ ಮೂಡಿಸಿದೆ.

    ಮಾನವನ ದುರಾಸೆಗೆ ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಕಳೆದ ವರ್ಷದ ತಾಪಮಾನವು, ಜಾಗತಿಕ ಶಾಖದ ದಾಖಲೆಯನ್ನೇ ಬ್ರೇಕ್ ಮಾಡಿದೆ ಎಂಬ ಆತಂಕಕಾರಿ ವಿಚಾರವನ್ನು ಯುಎನ್ ಈಚೆಗೆ ದೃಢಪಡಿಸಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯು ತನ್ನ ವಾರ್ಷಿಕ ಹವಾಮಾನ ವರದಿಯನ್ನು ಬಿಡುಗಡೆ ಮಾಡಿತು. ‘2023’ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷ ಎಂದು ತಿಳಿಸಿದೆ.

    ಅಳಿವಿನಂಚಿನಲ್ಲಿದೆ ಭೂಮಿ
    ಶಾಖದ ಅಲೆಗಳು ಸಾಗರಗಳಲ್ಲಿ ಹೆಚ್ಚುತ್ತಿದೆ. ಹಿಮನದಿಗಳು ದಾಖಲೆಯ ಪ್ರಮಾಣದಲ್ಲಿ ಕರಗಿ ಹರಿಯುತ್ತಿವೆ. ನಮ್ಮ ಭೂಮಿ ಅಳವಿನಂಚಿನಲ್ಲಿದೆ ಎಂದು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯು ಸಂಕಷ್ಟದ ಕರೆಯನ್ನು ನೀಡುತ್ತಿದೆ. ಪಳೆಯುಳಿಕೆ ಇಂಧನ ಮಾಲಿನ್ಯವು ಹವಾಮಾನ ಅವ್ಯವಸ್ಥೆಗೆ ಕಾರಣವಾಗಿದೆ. ಬದಲಾವಣೆಗಳು ವೇಗಗೊಳ್ಳುತ್ತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಪಾಯಕಾರಿ 1.5 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಹತ್ತಿರ
    ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ 2015 ರಲ್ಲಿ ‘ಪ್ಯಾರಿಸ್ ಒಪ್ಪಂದ’ವಾಗಿತ್ತು. ಅದರಲ್ಲಿ ಹೇಳಿರುವಂತೆ 1850 ರಿಂದ 1900 ರ ವರೆಗಿನ ಅವಧಿಯಲ್ಲಿ ದಾಖಲಾದ ತಾಪಮಾನದ ಸರಾಸರಿಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿತ್ತು. ಇಷ್ಟಾದರೂ, ಕನಿಷ್ಠಪಕ್ಷ 1.5 ಡಿಗ್ರಿ ಸೆಲ್ಸಿಯನಷ್ಟು ಕಡಿಮೆ ಮಾಡಬೇಕು ಎಂಬ ಆಶಯ ಹೊಂದಲಾಗಿತ್ತು. ಆದರೆ ಈಗಿನ ಹವಾಮಾನ ಬದಲಾವಣೆ ಗಮನಿಸಿದರೆ, 1.5 ಡಿಗ್ರಿಗೆ ಅಪಾಯಕಾರಿ ಹತ್ತಿರದಲ್ಲಿದೆ. ಕಳೆದ ವರ್ಷ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ ಸರಾಸರಿ ಮೇಲ್ಮೈ ತಾಪಮಾನವು 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಡಬ್ಲ್ಯೂಎಂಒ ತಿಳಿಸಿದೆ. ಅಲ್ಲದೇ, ಪ್ಯಾರಿಸ್ ಒಪ್ಪಂದದ 1.5 ಡಿಗ್ರಿ ಸೆಲ್ಸಿಯಸ್ ಮಿತಿಗೆ ಭೂಮಿ ತಾಪಮಾನ ಯಾವಾಗಲೂ ಹತ್ತಿರ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

    ಭೂಮಿಗೆ ರೆಡ್ ಅಲರ್ಟ್
    ಹವಾಮಾನ ಬದಲಾವಣೆಯನ್ನು ಗಮನಿಸಿದರೆ ಈ ಭೂಮಿಗೆ ರೆಡ್ ಅಲರ್ಟ್ ಘೋಷಣೆಯಾದಂತೆ ಕಾಣುತ್ತಿದೆ ಎಂದು ಆಂಡ್ರಿಯಾ ಸೆಲೆಸ್ಟ್ ಸೌಲೊ ತಿಳಿಸಿದ್ದಾರೆ. ಹವಾಮಾನ ಬದಲಾವಣೆಯೂ ತಾಪಮಾನಕ್ಕಿಂತ ಹೆಚ್ಚು. 2023 ರಲ್ಲಿ ಸಮುದ್ರದ ಉಷ್ಣತೆ ಹೆಚ್ಚಳ, ಹಿಮನದಿ ಕರಗುವಿಕೆ ಮತ್ತು ಅಂಟಾರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿರುವ ಮಂಜುಗಡ್ಡೆಯ ನಿರ್ದಿಷ್ಟ ಕಾಳಜಿಗೆ ಕಾರಣವಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಸಮುದ್ರದ ಶಾಖದ ಅಲೆಗಳು ಜಾಗತಿಕ ಸಾಗರದ ಸುಮಾರು ಮೂರನೇ ಒಂದು ಭಾಗವನ್ನು ಆವರಿಸಿವೆ ಎಂಬ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ. 2023 ರ ಅಂತ್ಯದ ವೇಳೆಗೆ ಸಮುದ್ರದ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಭಾಗವು ಶಾಖದ ಅಲೆ ಪರಿಣಾಮವನ್ನು ಅನುಭವಿಸಿದೆ. ಈ ಶಾಖದ ಅಲೆಗಳು ಸಮುದ್ರ ಪರಿಸರ ವ್ಯವಸ್ಥೆ ಮತ್ತು ಹವಳದ ಬಂಡೆಗಳ ಮೇಲೆ ಪರಿಣಾಮ ಬೀರುತ್ತಿವೆ. ವಿಶ್ವದಲ್ಲೇ ಪ್ರಮುಖ ಹಿಮನದಿಗಳಿರುವ ಪಶ್ಚಿಮ ಉತ್ತರ ಅಮೆರಿಕ ಮತ್ತು ಯೂರೋಪ್ ಎರಡರಲ್ಲೂ ತೀವ್ರವಾದ ಕರಗುವಿಕೆ ಉಂಟಾಗುತ್ತಿದೆ. ಆಲ್ಫೆನ್ಸ್ ಹಿಮನದಿಗಳು ಕಳೆದ 2 ವರ್ಷಗಳಲ್ಲಿ ಶೇ.10 ಕಳೆದುಕೊಂಡಿದೆ. ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯು ದಾಖಲೆ ಪ್ರಮಾಣದಲ್ಲಿ ಕರಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಏರುತ್ತಿದೆ ಸಮುದ್ರ ಮಟ್ಟ
    ಭೂಮಿ ಮೇಲ್ಮೈನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ 1993 ರಿಂದ ಉಪಗ್ರಹಗಳು ಅಧ್ಯಯನ ಮಾಡುತ್ತಿವೆ. ಅದರ ದಾಖಲೆ ಪ್ರಕಾರ, ಹಿಮನದಿಗಳು ಕರಗುತ್ತಿವೆ. ಸಾಗರ ತಾಪಮಾನವೂ ಹೆಚ್ಚುತ್ತಿದೆ. ಈ ಬೆಳವಣಿಗೆಯಿಂದಾಗಿ ಸಮುದ್ರ ಮಟ್ಟ ಏರುತ್ತಿದೆ. ಕಳೆದ ದಶಕದಲ್ಲಿ (2014-2023) ಜಾಗತಿಕ ಸರಾಸರಿ ಸಮುದ್ರ ಮಟ್ಟ ಏರಿಕೆಯು, ಮೊದಲ ದಶಕದಲ್ಲಿನ ಉಪಗ್ರಹ ದಾಖಲೆಗಳ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಸಂಸ್ಥೆ ತಿಳಿಸಿದೆ.

    ಹವಾಮಾನ ಬದಲಾವಣೆಯು ಜಗತ್ತಿನಾದ್ಯಂತ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿದೆ. ಗುಳೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜೀವವೈವಿಧ್ಯ ನಶಿಸಿ ಹೋಗುತ್ತಿದೆ. ಆಹಾರ ಅಭದ್ರತೆ ಹೆಚ್ಚಾಗುತ್ತಿದೆ. ಹವಾಮಾನ ಬಿಕ್ಕಟ್ಟು ಮಾನವೀಯತೆ ಎದುರಿಸುತ್ತಿರುವ ಸವಾಲಾಗಿದೆ. ಅಸಮಾನತೆಯ ಬಿಕ್ಕಟ್ಟಿನೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ.

    ಆಹಾರ ಬಿಕ್ಕಟ್ಟು
    ಪ್ರಪಂಚದಾದ್ಯಂತ ಜನರನ್ನು ತೀವ್ರವಾಗಿ ಆಹಾರ ಬಿಕ್ಕಟ್ಟು ಕಾಡುತ್ತಿದೆ. ಕೋವಿಡ್ ಸಾಂಕ್ರಾಮಿಕದ ಮೊದಲು ಆಹಾರ ಅಸುರಕ್ಷಿತ ಬಾಧಿತ ಜನರ ಸಂಖ್ಯೆಯು 14.90 ಕೋಟಿಯಷ್ಟಿತ್ತು. 2023 ರ ಕೊನೆಯಲ್ಲಿ ಅದು 33.03 ಕೋಟಿಗೆ ದ್ವಿಗುಣಗೊಂಡಿದೆ.

    ಭರವಸೆಯ ಬೆಳಕು
    ಹವಾಮಾನ ಬದಲಾವಣೆ ಎಫೆಕ್ಟ್‌ ತಗ್ಗಿಸಲು ಯುಎನ್‌ನ ಹವಾಮಾನ ಮತ್ತು ಹವಾಮಾನ ಏಜೆನ್ಸಿಯು ಭರವಸೆಯೊಂದನ್ನು ವ್ಯಕ್ತಪಡಿಸಿದೆ. ನವೀಕರಿಸಬಹುದಾದ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಳೆದ ವರ್ಷ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸೌರ, ಗಾಳಿ ಮತ್ತು ಜಲವಿದ್ಯುತ್‌ನಿಂದ 2022 ರಿಂದ ಸುಮಾರು 50% ನಷ್ಟು ಉತ್ಪಾದನೆಯು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಮಾಹಿತಿ ನೀಡಿದೆ.

    ಕಾಲ ಮಿಂಚಿ ಹೋಗಿದೆಯೇ?
    ಭೂಮಿಯ ದೀರ್ಘಾವಧಿಯ ಉಷ್ಣತೆಯ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಮಿತಿಗಿಂತ ಕೆಳಗಿರಿಸಲು ಮತ್ತು ಹವಾಮಾನ ಅವ್ಯವಸ್ಥೆಯಿಂದ ಆಗುತ್ತಿರುವ ಪರಿಣಾಮವನ್ನು ತಪ್ಪಿಸಲು ಜಗತ್ತಿಗೆ ಇನ್ನೂ ಅವಕಾಶವಿದೆ ಎಂದು ಗುಟೆರಸ್ ಒತ್ತಿ ಹೇಳಿದ್ದಾರೆ. ಅದನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ ಎಂದಿದ್ದಾರೆ.

  • ಲಿಬಿಯಾ ಡ್ಯಾಂ ದುರಂತ ಒಂದು ಎಚ್ಚರಿಕೆಯ ಗಂಟೆ

    ಲಿಬಿಯಾ ಡ್ಯಾಂ ದುರಂತ ಒಂದು ಎಚ್ಚರಿಕೆಯ ಗಂಟೆ

    ದೇ ತಿಂಗಳ ಆರಂಭದಲ್ಲಿ ಸಂಭವಿಸಿದ ಲಿಬಿಯಾದ (Libya) ಎರಡು ಅಣೆಕಟ್ಟುಗಳ (Dam) ಕುಸಿತದಿಂದ ಉಂಟಾದ ಭೀಕರ ಪ್ರವಾಹದಿಂದ 5,300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಅಲ್ಲದೇ 11 ಸಾವಿರಕ್ಕೂ ಹೆಚ್ಚು ಜನ ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಭೀಕರ ಮಳೆಯಿಂದ ಕುಸಿತಕ್ಕೊಳಗಾದ ಡ್ಯಾಂಗಳ ವಿಚಾರವಾಗಿ ವಿಶ್ವಸಂಸ್ಥೆ (United Nations) ಈ ಹಿಂದೆ ಹಲವು ಬಾರಿ ಎಚ್ಚರಿಸಿದ್ದರೂ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರ ಪರಿಣಾಮ ಈ ಭೀಕರ ದುರಂತಕ್ಕೆ ಲಿಬಿಯಾ ಸಾಕ್ಷಿಯಾಗಿದೆ. ಇದೇ ರೀತಿ ವಿಶ್ವದ ನಾನಾ ಭಾಗಗಳ ಹಲವಾರು ಅಣೆಕಟ್ಟುಗಳು ತಮ್ಮ ಆಯಸ್ಸನ್ನು ಮುಗಿಸುತ್ತ ಬಂದಿದ್ದು ಲಿಬಿಯಾ ದುರಂತದಿಂದ ಎಚ್ಚೆತ್ತುಕೊಳ್ಳುವಂತೆ ಕೂಗಿ ಹೇಳುತ್ತಿವೆ.

    ಅಣೆಕಟ್ಟುಗಳ ಜೀವಿತಾವಧಿ ಎಷ್ಟು?
    ಡ್ಯಾಂಗಳ ಜೀವಿತಾವಧಿಯನ್ನು ಸುಮಾರು 50 ರಿಂದ 100 ವರ್ಷ ಎಂದು ಅಂದಾಜಿಸಲಾಗುತ್ತದೆ. ಈ ಅಂದಾಜು ಸಿಮೆಂಟ್‌ನ ಜೀವಿತಾವಧಿ, ಡ್ಯಾಂನಲ್ಲಿನ ಬಿರುಕು, ಒಣಗುವಿಕೆ, ಭೂಕಂಪ ಅಲ್ಲದೇ ಬಿರುಕುಗಳಲ್ಲಿ ಹುಟ್ಟಬಹುದಾದ ಸಸ್ಯಗಳ ಆಧಾರದ ಮೇಲೆ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ. ಡ್ಯಾಂಗಳ ನಿರ್ಮಾಣದ ಜಾಗದಲ್ಲಿರುವ ಬಂಡೆಗಳಲ್ಲಿನ ಪಲ್ಲಟ ಇಲ್ಲವೇ ಮೃದುಗೊಳ್ಳುವಿಕೆ ಕೂಡ ಡ್ಯಾಂಗಳ ಕುಸಿತಕ್ಕೆ ಕಾರಣವಾಗಬಹುದು. ಅಣೆಕಟ್ಟುಗಳ ಮರು ನವೀಕರಣ ಸ್ವಲ್ಪ ಪ್ರಮಾಣದಲ್ಲಿ ಜೀವಿತಾವಧಿಯನ್ನೂ ಮುಂದೂಡಬಹುದು. ಆದರೆ ಅದು ಶಾಶ್ವತ ಪರಿಹಾರ ಆಗಲು ಸಾಧ್ಯವಿಲ್ಲ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ಕೆಲವೇ ದಿನಗಳಲ್ಲಿ ಭಾರತದ 1000 ಡ್ಯಾಂಗಳು 50 ವರ್ಷ ಪೂರೈಸಲಿವೆ
    ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು 50 ವರ್ಷಗಳನ್ನು ಪೂರೈಸಲಿವೆ. ಇದರಿಂದಾಗಿ ಶಿಥಿಲಗೊಂಡಿರುವ ಡ್ಯಾಂಗಳ ಸಂಖ್ಯೆ ಹೆಚ್ಚುವ ಮೂಲಕ ದುರಂತಗಳ ಭೀತಿ ಕೂಡ ಕಾಡುತ್ತಿದೆ. ಈ ವಿಚಾರದಲ್ಲಿ ಅಣೆಕಟ್ಟುಗಳ ಸುತ್ತಲಿನ ಪ್ರದೇಶಗಳಲ್ಲಿನ ಜನರ ಜೀವದ ಬಗ್ಗೆ ಯೋಚಿಸಲೇ ಬೇಕಾದ ಅನಿವಾರ್ಯ ಕೂಡ ಇದೆ. ಈ ಬಗ್ಗೆ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.

    1930 ರಿಂದ 1970ರ ನಡುವೆ ವಿಶ್ವಾದ್ಯಂತ 58,700 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಅವುಗಳ ಕಾಲಾವಧಿಯನ್ನು 50 ರಿಂದ 100 ವರ್ಷಗಳು ಎಂದು ವಿನ್ಯಾಸ ತಜ್ಞರು ಮತ್ತು ಸಿವಿಲ್ ಇಂಜಿನಿಯರ್‌ಗಳು ನಿರ್ಧರಿಸಿದ್ದಾರೆ. ಅದರಂತೆ 2025ಕ್ಕೆ ಭಾರತವೊಂದರಲ್ಲೇ ಸಾವಿರಕ್ಕೂ ಹೆಚ್ಚು ಡ್ಯಾಂಗಳ ನಿರ್ಮಾಣಗೊಂಡು 50 ವರ್ಷಗಳ ಅವಧಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಅವುಗಳು ಶಿಥಿಲಗೊಳ್ಳುತ್ತಾ ಹೋಗುತ್ತವೆ ಎಂದು ವಿಶ್ವಸಂಸ್ಥೆ ಅಧ್ಯಯನ ವರದಿಯಲ್ಲಿ ಕೂಡ ತಿಳಿಸಿತ್ತು.

    2050ರ ಹೊತ್ತಿಗೆ ಬಹುತೇಕ ಡ್ಯಾಂಗಳ ಕುಸಿತ
    ಸದ್ಯ 50 ವರ್ಷ ದಾಟಿರುವ ಮತ್ತು ಅದಕ್ಕೂ ಹಳೆಯದಾದ ಡ್ಯಾಂಗಳು 2050ರ ಹೊತ್ತಿಗೆ ತೀವ್ರ ಶಿಥಿಲಗೊಂಡು ಕುಸಿಯಲು ಆರಂಭಗೊಳ್ಳಲಿವೆ. ಇಲ್ಲವೇ ಸರ್ಕಾರವೇ ಡ್ಯಾಂಗಳನ್ನು ಕೆಡವಲು ಮುಂದಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಸಿದ್ಧಪಡಿಸಲು ಅಮೆರಿಕ, ಕೆನಡಾ, ಫ್ರಾನ್ಸ್, ಭಾರತ, ಜಪಾನ್, ಜ್ಯಾಂಬಿಯಾ ಹಾಗೂ ಜಿಂಬಾಬ್ವೆಗಳಲ್ಲಿನ ದೊಡ್ಡ ಅಣೆಕಟ್ಟುಗಳ ಅಧ್ಯಯನವನ್ನೂ ಮಾಡಲಾಗಿದೆ.

    ಏಷ್ಯಾ ಒಂದರಲ್ಲೇ ವಿಶ್ವದ 55% ಬೃಹತ್ ಡ್ಯಾಂಗಳು
    ವಿಶ್ವದಲ್ಲಿರುವ ಡ್ಯಾಂಗಳ ಪ್ರಮಾಣದ 55%ರಷ್ಟು ಏಷ್ಯಾದ ನಾಲ್ಕೇ ರಾಷ್ಟ್ರಗಳಲ್ಲಿ ನಿರ್ಮಿಸಲಾಗಿದೆ. ಅಂದರೆ ಭಾರತ (India), ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ 32,716 ಬೃಹತ್ ಗಾತ್ರದ ಅಣೆಕಟ್ಟುಗಳಿವೆ. ಇದರಲ್ಲಿ ಬಹುತೇಕ ಡ್ಯಾಂಗಳು ಮುಂದಿನ ಎರಡು ವರ್ಷಗಳಲ್ಲಿ 50 ವರ್ಷಗಳನ್ನು ಪೂರೈಸಲಿವೆ. ಇದನ್ನೂ ಓದಿ: ISKCON ಗೋಶಾಲೆಗಳಿಂದ ಕಟುಕರಿಗೆ ಹಸುಗಳ ಮಾರಾಟ – ಸಂಸದೆ ಮೇನಕಾ ಗಾಂಧಿ ಗಂಭೀರ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

    ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

    ನ್ಯೂಯಾರ್ಕ್: ಭಾರತದ (India) ಹೆಮ್ಮೆಯ ಚಂದ್ರಯಾನ-3 (Chandrayaan-3) ಮಿಷನ್ ಯಶಸ್ವಿಯಾದ ಹಿನ್ನೆಲೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಮಿಷನ್ (India’s Permanent Mission To UN) ಶುಕ್ರವಾರ ಸಂಭ್ರಮಾಚರಣೆ ಮಾಡಿದೆ.

    ಚಂದ್ರಯಾನ-3 ಮಿಷನ್‌ನ ಯಶಸ್ವಿಯನ್ನು ಗುರುತಿಸುತ್ತಾ ನಾವು ನ್ಯೂಯಾರ್ಕ್‌ನಲ್ಲಿರುವ ಖಾಯಂ ಮಿಷನ್‌ಗಳಿಂದ ನಮ್ಮ ಸಹೋದ್ಯೋಗಿಗಳು ಒಟ್ಟಾಗಿದ್ದೇವೆ. ಈ ಸಂದರ್ಭದಲ್ಲಿ ನಿಮ್ಮ ಉಪಸ್ಥಿತಿ ಹಾಗೂ ಅಚಲ ಬೆಂಬಲಕ್ಕಾಗಿ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಭಾರತೀಯ ಖಾಯಂ ಮಿಷನ್ ಟ್ವಿಟ್ಟರ್‌ನಲ್ಲಿ ವಿಶ್ವಸಂಸ್ಥೆಗೆ ತಿಳಿಸಿದೆ.

    ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ಐತಿಹಾಸಿಕ ಕ್ಷಣವಾಗಿದೆ. ಭಾರತದ ಚಂದ್ರಯಾನ-3 ಮಿಷನ್ ತನ್ನ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿತು. ಇದರ ಗಮನಾರ್ಹ ಸಂಗತಿಯೆಂದರೆ, ವಿಶ್ವದ ಯಾವುದೇ ದೇಶ ಇಲ್ಲಿಯವರೆಗೆ ತಲುಪಲು ಸಾಧ್ಯವಾಗದ ಚಂದ್ರನ ದಕ್ಷಿಣ ಧ್ರುವವನ್ನು ಭಾರತ ತಲುಪಿದೆ ಎಂದು ಅವರು ಶ್ಲಾಘಿಸಿದರು.

    ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಭಾರತದ ಉಪಸ್ಥಿತಿಯನ್ನು ಗುರುತಿಸುವುದು ಮಾತ್ರವಲ್ಲದೆ 1.4 ಶತಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಸಂಕೇತಿಸುತ್ತದೆ. ಅದಕ್ಕೂ ಮೀರಿ ನಾವು ಚಂದ್ರನ ದಕ್ಷಿಣ ಧ್ರುವದ ಬಳಿ ಇಟ್ಟಿರುವ ಹೆಜ್ಜೆ ಮಾನವೀಯತೆಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ನೀರು ಬಂದ್ – ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ

    ಚಂದ್ರಯಾನ-3 ಬುಧವಾರ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ನಡೆಸಿತು. ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್‌ನ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಚುನಾವಣಾ ಅಕ್ರಮ ಆರೋಪ – ಡೊನಾಲ್ಡ್ ಟ್ರಂಪ್ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

    ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

    ವಾಷಿಂಗ್ಟನ್: ಯೋಗ ಭಾರತದಿಂದ ಬಂದಿದ್ದು, ಅತ್ಯಂತ ಹಳೆಯ ಸಂಪ್ರದಾಯವಾಗಿದೆ. ಯೋಗಾಸನಗಳನ್ನು ಮಾಡಲು ಯಾವುದೇ ವಯಸ್ಸು, ಲಿಂಗ ಭೇದವಿಲ್ಲ. ಮಾತ್ರವಲ್ಲದೆ ಪ್ರತಿಯೊಬ್ಬರ ಆರೋಗ್ಯದ ಮಟ್ಟಕ್ಕೂ ಇದು ಹೊಂದಿಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.

    ವಿಶ್ವಸಂಸ್ಥೆಯ (UN) ಪ್ರಧಾನ ಕಚೇರಿಯಲ್ಲಿ ವಿಶ್ವ ಯೋಗ ದಿನದ (International Yoga Day) ನೇತೃತ್ವ ವಹಿಸಿದ ಮೋದಿ, ಕಳೆದ ವರ್ಷ ಇಡೀ ವಿಶ್ವವೇ 2023ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಭಾರತದ ಪ್ರಸ್ತಾಪವನ್ನು ಒಮ್ಮತದಿಂದ ಒಪ್ಪಿಕೊಂಡಿತು. ಇದೀಗ ಜಗತ್ತು ಈ ವಿಶೇಷ ದಿನಕ್ಕಾಗಿ ಒಟ್ಟುಗೂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಈ ಕಾರ್ಯಕ್ರಮ ಸಂಪೂರ್ಣ ಮಾನವೀಯತೆಯ ಸಂಗಮ ಸ್ಥಳದಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ ಹಾಗೂ ವಿಶ್ವ ಯೋಗ ದಿನವನ್ನಾಚರಿಸಲು ಬಂದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

    ಇಂದು ಇಲ್ಲಿ ಪ್ರತಿಯೊಂದು ರಾಷ್ಟ್ರದಿಂದ ಪ್ರತಿನಿಧಿಯಾಗಿ ಸೇರಿದ್ದಾರೆ ಎಂದು ಆಯೋಜಕರು ನನಗೆ ಹೇಳಿದರು. ಯೋಗ ಎಂದರೆ ಒಂದುಗೂಡಿಸುವುದು. ಆದ್ದರಿಂದ ನೀವು ಒಟ್ಟಿಗೆ ಸೇರುತ್ತಿರುವುದು ಯೋಗದ ಮತ್ತೊಂದು ರೂಪದ ಅಭಿವ್ಯಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

    ಯೋಗವು ಹಕ್ಕುಸ್ವಾಮ್ಯಗಳು, ಪೇಟೆಂಟ್‌ಗಳಿಂದ ಮಾತ್ರವಲ್ಲದೇ ದುಬಾರಿ ಪಾವತಿಗಳಿಂದಲೂ ಮುಕ್ತವಾಗಿದೆ. ಯೋಗ ಯಾವುದೇ ವಯಸ್ಸು, ಲಿಂಗ ಹಾಗೂ ಫಿಟ್‌ನೆಸ್ ಮಟ್ಟಕ್ಕೂ ಹೊಂದಿಕೊಳ್ಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣದಿಂದ ಜು.1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ: ಸಿಎಂ