ಪ್ಯಾರಿಸ್: 300 ಕ್ಕೂ ಹೆಚ್ಚು ಭಾರತೀಯ (Indians) ಪ್ರಯಾಣಿಕರನ್ನು ಹೊತ್ತು ನಿಕರಾಗುವಾಗೆ ಹೊರಟಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ (France) ಶಂಕಿತ ಮಾನವ ಕಳ್ಳಸಾಗಣೆಯ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ.
ಮಾನವ ಕಳ್ಳಸಾಗಣೆಯ (Human Trafficking) ಬಗ್ಗೆ ಅಪರಿಚಿತರಿಂದ ಸುಳಿವು ಸಿಕ್ಕ ಬಳಿಕ ವಿಮಾನವನ್ನು (Plane) ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ 303 ಭಾರತೀಯ ಪ್ರಯಾಣಿಕರು ಇದ್ದರು. ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (United Arab Emirates) ಟೇಕಾಫ್ ಆಗಿದೆ. ಮಾನವ ಕಳ್ಳಸಾಗಾಣಿಕೆ ಅಥವಾ ಪ್ರವಾಸದ ಉದ್ದೇಶವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ನ್ಯಾಯಾಂಗ ತನಿಖೆ ಪ್ರಾರಂಭಿಸಲಾಗಿದೆ ಎಂದು ಪ್ಯಾರಿಸ್‍ನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಮೈಸೂರಿಗ ಮನೋರಂಜನ್: ದೆಹಲಿ ಪೊಲೀಸರು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು I2U2(ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್) ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಪಿಎಂ ಯೈರ್ ಲ್ಯಾಪಿಡ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್‌ನ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲ ಶೃಂಗಸಭೆಯಿಂದಲೇ I2U2 ಸಕಾರಾತ್ಮಕ ಕಾರ್ಯಸೂಚಿಯನ್ನು ಸ್ಥಾಪಿಸಿದೆ. ನಾವು ವಿವಿಧ ವಲಯಗಳಲ್ಲಿ ಜಂಟಿ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ ಹಾಗೂ ಮುಂದುವರಿಯಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.
I2U2 ಚೌಕಟ್ಟಿನ ದೇಶಗಳು ನೀರು, ಇಂಧನ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರ ಭದ್ರತೆಯಂತಹ 6 ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ಹೂಡಿಕೆಯನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದೇವೆ. I2U2ನ ದೃಷ್ಟಿ ಮತ್ತು ಕಾರ್ಯಸೂಚಿ ಪ್ರಗತಿಪರ ಮತ್ತು ಪ್ರಾಯೋಗಿಕವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಇತಿಹಾಸದ ಪುಟ ಸೇರಲಿದೆ ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ – ಕೊನೆಯ ಅಧಿವೇಶನಕ್ಕೆ ಸಿದ್ಧತೆ
ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆಯ ನಡುವೆ ನಮ್ಮ ಚೌಕಟ್ಟು ಪ್ರಾಯೋಗಿಕ ಸಹಕಾರಕ್ಕೆ ಉತ್ತಮ ಮಾದರಿಯಾಗಿದೆ. ನಮ್ಮ ಪರಸ್ಪರ ಸಹಕಾರ, ಶಕ್ತಿ, ಬಂಡವಾಳಗಳಿಂದ ನಮ್ಮ ಕಾರ್ಯಸೂಚಿಯನ್ನು ವೇಗಗೊಳಿಸಬಹುದು ಹಾಗೂ ಜಾಗತಿಕ ಆರ್ಥಿಕತೆಗೆ ಪ್ರಮುಖ ಕೊಡುಗೆಗಳನ್ನು ನೀಡಬಹುದು ಎಂದರು.
ಇದೀಗ I2U2 ಗುಂಪು ಮುಂದಿನ 3 ವರ್ಷಗಳಲ್ಲಿ ಜಂಟಿಯಾಗಿ ಹೂಡಿಕೆ ಮಾಡಿ, ಒಟ್ಟಿಗೆ ಅಭಿವೃದ್ಧಿಪಡಿಸಬಹುದಾದ ಯೋಜನೆಗಳಲ್ಲಿ ಕೆಲಸ ಮಾಡಲಿವೆ. ನಾವೆಲ್ಲರೂ ಜೊತೆಯಾಗಿ ದೊಡ್ಡ ಸಾಧನೆಯನ್ನು ಮಾಡಬಹುದಾಗಿದೆ ಎಂದು ಬೈಡನ್ ಹೇಳಿದರು.
ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್ ಮಾತನಾಡಿ, ನಾವು ಜಗತ್ತನ್ನು ಉತ್ತಮವಾಗಿ ಬದಲಿಸಲು ಬಯಸುತ್ತೇವೆ. ಇದನ್ನು ಸಾಧಿಸಲು ಸಂಪನ್ಮೂಲಗಳನ್ನು ಹೇಗೆ ಒಟ್ಟುಗೂಡಿಸಬೇಕು ಎಂದು ತಿಳಿದಿರುವ ದೇಶಗಳಿಂದ ಮಾತ್ರವೇ ಪರಿಹಾರ ಸಿಗಲು ಸಾಧ್ಯ ಎಂದರು.
ಖಾಸಗಿ ಮಾರುಕಟ್ಟೆಯನ್ನು ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. 4 ವಿಭಿನ್ನ ದೇಶಗಳಾಗಿದ್ದರೂ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪರಿಸರದ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವುದು ಸೇರಿದಂತೆ ನಾವೆಲ್ಲರೂ ಒಂದೇ ಗುರಿಯನ್ನು ಹೊಂದಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ಇಸ್ರೇಲ್ ಪ್ರಧಾನಿ ತಿಳಿಸಿದರು.
ಒಟ್ಟಿನಲ್ಲಿ I2U2 ಮೊದಲ ನಾಯಕರ ಸಭೆಯಲ್ಲಿ ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ ದೇಶಗಳು ಜಂಟಿಯಾಗಿ ನೀರು, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ನಿರ್ಧರಿಸಿವೆ.
Live Tv
[brid partner=56869869 player=32851 video=960834 autoplay=true]
ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಅವರನ್ನು ರಾಜಕೀಯ ಹಾಗೂ ವ್ಯಾಪಾರ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಜುಮಾ ಅವರು ಅಧಿಕಾರದಲ್ಲಿದ್ದಾಗ 2009 ರಿಂದ 2018 ರವರೆಗೆ ಗುಪ್ತಾ ಸಹೋದರರು ದಿ ನ್ಯೂ ಏಜ್(ಟಿಎನ್‌ಎ) ಪತ್ರಿಕೆಗಾಗಿ ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ
ಉತ್ತರ ಪ್ರದೇಶದ ಸಹರಾನ್‌ಪುರ ಮೂಲದ ಮೂವರು ಗುಪ್ತಾ ಸಹೋದರರಾದ ಅಜಯ್, ಅತುಲ್ ಹಾಗೂ ರಾಜೇಶ್ ಟಿಎನ್‌ಎ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸದ್ಯ ಪತ್ರಿಕೆ ಮುಚ್ಚಲಾಗಿದೆ. ಬಳಿಕ ಮೂರೂ ಸಹೋದರರು ದುಬೈನಲ್ಲಿ ನೆಲೆಸಿದ್ದು, ಅವರ ವಿರುದ್ಧ ದಕ್ಷಿಣ ಆಫ್ರಿಕಾ ಕ್ರಿಮಿಲ್ ಆರೋಪಗಳನ್ನು ಹೊರಿಸಿ, ಹಸ್ತಾಂತರಿಸುವಂತೆ ಕೇಳಿಕೊಂಡಿದೆ.
ದುಬೈ: ಮೇಕಪ್ ಇಲ್ಲದೇ ಹೆಂಡತಿ ಮುಖವನ್ನು ದಿನ ನೋಡಲಾಗುತ್ತಿಲ್ಲ ಎಂದು ಈಜಿಪ್ಟಿಯನ್ ವ್ಯಕ್ತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದೆ.
34 ವಯಸ್ಸಿನ ವ್ಯಕ್ತಿ ತನ್ನ 28 ವಯಸ್ಸಿನ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿಚ್ಛೇದನ ನಿರ್ಧಾರದಿಂದ ಆಘಾತಗೊಂಡಿರುವ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ
ಮದುವೆಗೂ ಮುನ್ನ ನನ್ನ ಪತ್ನಿ ತುಂಬಾ ಮೇಕಪ್ ಬಳಸುತ್ತಿದ್ದಳು. ಮೇಕಪ್ ರಹಿತವಾಗಿ ಆಕೆಯ ಮುಖವನ್ನು ನೋಡಲು ಬೇಸರವಾಗುತ್ತೆ. ಮೇಕಪ್ ಇಲ್ಲದೇ ಆಕೆ ಚೆನ್ನಾಗಿ ಕಾಣುವುದಿಲ್ಲ ಎಂದು ಪತಿ ದೂರಿದ್ದಾರೆ. ಅಲ್ಲದೇ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು
ಈಕೆ ನನಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದರು. ಮೇಕಪ್‌ನಲ್ಲಿರುವ ಸುಂದರ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಇಬ್ಬರಿಗೂ ಪರಿಚಯವಾಯಿತು. ನಂತರ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದೆವು. ಇವರು ಅತಿಯಾಗಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ನಂತರ ಇಬ್ಬರೂ ವಿವಾಹವಾದೆವು. ಈಗ ಆಕೆಯನ್ನು ಮೇಕಪ್ ಇಲ್ಲದೇ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ತಿಳಿಸಿದ್ದಾರೆ.