Tag: uniongovernment

  • ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ನವದೆಹಲಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ದೇಶದಲ್ಲಿ ಹಿಂದಿ ಬಳಕೆಯಾಗಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೀಗ ಸಚಿವ ಸಂಪುಟದ ಶೇ.70ರಷ್ಟು ಕಾರ್ಯಸೂಚಿ ಹಿಂದಿಯಲ್ಲೇ ಸಿದ್ಧವಾಗಿದೆ ಎಂದು ಸಭೆಗೆ ತಿಳಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭ್ರಷ್ಟಾಚಾರ ಕಿತ್ತೊಗೆಯುವ ಸಮಯ ಬಂದಿದೆ: ಕೇಜ್ರಿವಾಲ್

    Amith

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಧಿಕೃತ ಭಾಷೆಯಲ್ಲಿ ಸರ್ಕಾರ ಸಂವಹನ ನಡೆಸಬೇಕು ಎಂದು ನಿರ್ಧರಿಸಿದ್ದಾರೆ. ಇದು ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ದೇಶದ ಅಧಿಕೃತ ಭಾಷೆಯನ್ನು ಘೋಷಿಸುವ ಮೂಲಕ ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಬಂದಿದೆ. ಒಂದು ರಾಜ್ಯದ ಜನರು ಇನ್ನೊಂದು ರಾಜ್ಯದ ಜನರ ಜೊತೆ ಭಾರತದ ಭಾಷೆಯಲ್ಲೇ ಸಂವಹನ ಮಾಡಬೇಕು ಎಂದು ಅಮಿತ್ ಶಾ ಹೇಳಿದರು.

    ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನೇ ಬಳಸಬೇಕು ವಿನಾ: ಬೇರೆ ಭಾಷೆಯನ್ನಲ್ಲ. ಬೇರೆ ಭಾಷೆಯಲ್ಲಿರುವ ಪದಗಳನ್ನು ಹಿಂದಿಗೆ ತರುವ ಮೂಲಕ ಭಾಷೆಯನ್ನು ಸರಳಗೊಳಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಅಸ್ತಿತ್ವಕ್ಕಾಗಿ ಶಸ್ತ್ರಾಸ್ತ್ರ ಹಿಡಿಯುವಂತಾಗಿದೆ: ಯತಿ ನರಸಿಂಹಾನಂದ ವಿರುದ್ಧ ಖರ್ಗೆ ಕಿಡಿ 

    shah

    ಈಗಾಗಲೇ 8 ಈಶಾನ್ಯ ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಶಾನ್ಯದ 9 ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಗರಿಗೆ ಪರಿವರ್ತಿಸಿದ್ದಾರೆ. ಈಶಾನ್ಯದ ಎಲ್ಲ 8 ರಾಜ್ಯಗಳು ಶಾಲೆಗಳಲ್ಲಿ 10ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ. ಹೀಗಾಗಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆಯನ್ನೇ ಅನುಷ್ಠಾನಗೊಳಿಸಬೇಕು ಎಂದು ಅಮಿತ್ ಶಾ ಸಭೆಗೆ ತಿಳಿಸಿದ್ದಾರೆ.

  • ನಾನೂ ಪರಿಹಾರ ಕೇಳಿದ್ದೇನೆ, ನನಗ್ಯಾಕೆ ಶೋಕಾಸ್ ನೋಟಿಸ್ ನೀಡಿಲ್ಲ: ಸಿ.ಟಿ ರವಿ

    ನಾನೂ ಪರಿಹಾರ ಕೇಳಿದ್ದೇನೆ, ನನಗ್ಯಾಕೆ ಶೋಕಾಸ್ ನೋಟಿಸ್ ನೀಡಿಲ್ಲ: ಸಿ.ಟಿ ರವಿ

    ಚಿಕ್ಕಬಳ್ಳಾಪುರ: ನಾನು ಕೂಡ ನೆರೆ ಪರಿಹಾರ ಕೇಳಿದ್ದೇನೆ. ಆದರೆ ನನಗೆ ಯಾಕೆ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

    ನಗರದ ಜಿಲ್ಲಾಡಳಿತ ಭವನದ ಬಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರೇ ಆಗಲಿ ನೆರೆ ಪರಿಹಾರ ಕೇಳುವುದು ಖಂಡಿತಾ ತಪ್ಪಲ್ಲ. ನಾನು ಸಹ ನೆರೆ ಪರಿಹಾರ ಕೇಳಿದ್ದೇನೆ. ನನಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ಆದರೆ ಪಕ್ಷದ ವಿಚಾರವನ್ನ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಸಾರ್ವಜನಿಕ ವಿಷಯವನ್ನ ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಇದು ಬಿಟ್ಟು ಪಕ್ಷದ ಆಂತರಿಕ ವಿಚಾರವನ್ನ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡೋದು ಸರಿಯಲ್ಲ ಎಂದು ಹೇಳಿದರು.

    ಪಕ್ಷದಲ್ಲಿ ಆಂತರಿಕ ಶಿಸ್ತು ಅನ್ನೋದಿದೆ. ಯಾವುದೇ ವಿಚಾರದಲ್ಲಿ ನನ್ನಷ್ಟು ಕಠೋರವಾಗಿ ಮಾತನಾಡವವರಿಲ್ಲ. ನಾನು ಯಾವ ವಿಷಯವನ್ನ ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡ್ತೇನೆ. ಒಂದು ವೇಳೆ ಕೇಂದ್ರ ಒಂದು ರಾಜ್ಯಕ್ಕೆ ಪರಿಹಾರ ಕೊಟ್ಟು ನಮಗೆ ನೆರೆ ಪರಿಹಾರ ಕೊಡಲಿಲ್ಲ ಅಂದರೆ ಮೊದಲು ಧ್ವನಿ ಎತ್ತುವವನೇ ನಾನು ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಶೋಕಾಸ್ ನೀಡಿರುವ ಬಿಜೆಪಿ ಶಿಸ್ತು ಸಮಿತಿಯ ಕ್ರಮವನ್ನ ಸಮರ್ಥಿಸಿಕೊಂಡರು.

    ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನ ತಿರಸ್ಕರಿಸಿದೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನೆರೆ ಪರಿಹಾರದ ಅಂಕಿ ಅಂಶಗಳ ವರದಿಯನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಲ್ಲ. ಕೆಲವೊಂದು ಸ್ಪಷ್ಟನೆಗಳನ್ನ ಕೇಳಿದೆ ಅಷ್ಟೇ. ಅಂದಾಜು ಪಟ್ಟಿಗೂ ವಾಸ್ತವಿಕವಾಗಿಯೂ ಸಾಕಷ್ಟು ವ್ಯತ್ಯಾಸವಾಯಿತು. ಹೀಗಾಗಿ ಹೊಸದಾಗಿ ಸ್ಪಷ್ಟಪಡಿಸಿದ ವರದಿ ನೀಡಲಿದ್ದೇವೆ ಎಂದರು.

    ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ 10000 ರೂ. ಪರಿಹಾರ ನೀಡಲಾಗಿದ್ದು, ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡುವ ತೀರ್ಮಾನ ಮಾಡಿದ್ದೇವೆ. ಮೊದಲ ಕಂತಿನಲ್ಲಿ ಕ್ಯಾಬಿನೆಟ್ ನಲ್ಲಿ ಅನುಮತಿ ಪಡೆದು 1 ಲಕ್ಷ ನೀಡಲು ಡಿಸಿಗಳಿಗೆ ಹಣ ಕೂಡ ಕಳುಹಿಸಲಾಗಿದೆ. ಯಾವುದೇ ಜಿಲ್ಲಾಧಿಕಾರಿ ತಾತ್ಕಾಲಿಕ ಪರಿಹಾರಕ್ಕೆ ಹಣ ಇಲ್ಲ ಅಂತ ಹೇಳಿಲ್ಲ. ಆದರೆ ಶಾಶ್ವತ ಪರಿಹಾರಕ್ಕಾಗಿ ಅಂಕಿ ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಅವರ ರಾಜ್ಯದ ಅಂಕಿ ಅಂಶಗಳ ವರದಿಗೆ ಸ್ಪಷ್ಟನೆ ಕೇಳಿದ್ದಾರೆ. ಆದರೆ ತಿರಸ್ಕಾರ ಮಾಡಿಲ್ಲ. ಎನ್‍ಡಿಆರ್ ಎಫ್ ನಿಯಮಾವಳಿಗಳ ಪ್ರಕಾರ ಎಷ್ಟು ಪರಿಹಾರ ಕೊಡಬೇಕೋ ಅಷ್ಟು ಕೊಡುತ್ತಾರೆ ಎಂದು ತಿಳಿಸಿದರು.

    ಮೋದಿ ಬಳಿ ಪರಿಹಾರ ಕೇಳಲು ಸಂಸದರಿಗೆ ಧೈರ್ಯವಿಲ್ಲ ಎಂಬ ಎಚ್‍ಡಿಡಿ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಸಚಿವರು, ಎಚ್‍ಡಿಡಿ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಎಚ್‍ಡಿ ಕುಮಾರಸ್ವಾಮಿ ಸಹ ಪ್ರಧಾನಿಗಳನ್ನ ಎಷ್ಟು ಬಾರಿ ಭೇಟಿ ಮಾಡಿದ್ದರು. ಅವರು ಭಯದಿಂದ ಪ್ರಧಾನಿಗಳನ್ನ ಭೇಟಿ ಮಾಡಿದ್ರಾ..? ಅವರಿಗೆ ಇಲ್ಲದ ನಮಗೆ ಇರುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಎಚ್‍ಡಿಡಿ ಕಾರ್ಯಕರ್ತರಾಗಿ ಪ್ರಧಾನ ಮಂತ್ರಿ ಆದವರು. ಕಾರ್ಯಕರ್ತರಾಗಿ ಪ್ರಧಾನಮಂತ್ರಿ ಆದವರು ಭಯ ಹುಟ್ಟಿಸುವ ಕೆಲಸ ಮಾಡಲ್ಲ. ವಾಮಮಾರ್ಗದಲ್ಲಿ ಬರುವವರು ಭಯ ಹುಟ್ಟಿಸುವ ಕೆಲಸ ಮಾಡುತ್ತಾರೆ. ಪರಿಹಾರ ಕೇಳಲು ನಮಗೆ ಯಾವುದೇ ಭಯ ಇಲ್ಲ ಎಂದರು.

    ಇದೇ ವೇಳೆ ಪರಿಹಾರ ವಿಳಂಬಕ್ಕೆ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ಯಾನಿಕ್ ನಿಂದ ಸಂಸದರು ಹೇಳಿಕೆ ನೀಡಿರಬಹುದು ಅಂತ ತೇಪೆ ಹಚ್ಚಿದರು. ಕಳೆದ 10 ವರ್ಷಗಳ ಹಿಂದಿನ ಅಂಕಿ ಅಂಶಗಳ ಪ್ರಕಾರ ತಕ್ಷಣಕ್ಕೆ ಪರಿಹಾರ ಬಂದಿಲ್ಲ. 3-4 ತಿಂಗಳ ನಂತರವೇ ಪರಿಹಾರ ಬಂದಿರುವುದು ಅಂತ ನೆರೆ ಪರಿಹಾರ ವಿಳಂಬ ಧೋರಣೆಯನ್ನ ಸಮರ್ಥನೆ ಮಾಡಿಕೊಂಡರು.

  • ಮಾಧ್ಯಮಕ್ಕೆ ಹೋಗದ ರೀತಿಯಲ್ಲಿ ನೆರೆಪರಿಹಾರದ ಕರ್ತವ್ಯ ಮಾಡಿದ್ದೇವೆ – ರಾಘವೇಂದ್ರ

    ಮಾಧ್ಯಮಕ್ಕೆ ಹೋಗದ ರೀತಿಯಲ್ಲಿ ನೆರೆಪರಿಹಾರದ ಕರ್ತವ್ಯ ಮಾಡಿದ್ದೇವೆ – ರಾಘವೇಂದ್ರ

    – ಬೆಂಗ್ಳೂರಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ

    ಶಿವಮೊಗ್ಗ/ಬೆಂಗಳೂರು: ನೆರೆ ಪರಿಹಾರವನ್ನು ಎಲ್ಲಿ, ಯಾವ ರೀತಿ ಮಾಡಿದ್ದೇವೆ ಎಂಬುದರ ಬಗ್ಗೆ ಮಾಧ್ಯಮದ ಮುಂದೆ ಹೋಗದ ರೀತಿಯಲ್ಲಿ ಎಲ್ಲ ಸಂಸದರು ತಮ್ಮ ಕರ್ತವ್ಯವನ್ನು ಮಾಡಿದ್ದೇವೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಹೇಳಿದ್ದಾರೆ.

    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ಪರಿಹಾರದ ನೆರವಿಗೆ ನಮ್ಮ ಕರ್ತವ್ಯ ಯಾವ ರೀತಿ, ಎಲ್ಲಿ ಮಾಡಬೇಕೋ ಆ ರೀತಿ ರಾಜ್ಯದ ಸಂಸದರು ಮಾಡಿದ್ದೇವೆ. ಆದರೆ ಮಾಧ್ಯಮದ ಮುಂದೆ ಹೋಗಿಲ್ಲ ಅಷ್ಟೇ ಎಂದರು.

    ಇಡೀ ದೇಶದಲ್ಲಿ 16 ರಾಜ್ಯಗಳಲ್ಲಿ ಪ್ರವಾಹ ಬಂದು ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇನ್ನೆರಡು ಮೂರು ದಿನದಲ್ಲಿ ಪರಿಹಾರ ಬಿಡುಗಡೆಯಾಗುತ್ತದೆ ಎಂದು ಸಿಎಂ ಅವರು ಕೂಡ ಹೇಳಿದ್ದಾರೆ. ಹೀಗಾಗಿ ಆದಷ್ಟು ಬೇಗ ಪರಿಹಾರ ಬಿಡುಗಡೆ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

    ಇತ್ತ ರಾಜ್ಯದ ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಮಮಂದಿರ ಗ್ರೌಂಡ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿಗೆ ನಿವೃತ್ತ ಪೋಲಿಸ್ ಮಹಾನಿರ್ದೇಶಕ ಶಂಕರಿ ಬಿದರಿ ಚಾಲನೆ ನೀಡಿದ್ದಾರೆ.

    ಪ್ರತಿಭಟನೆ ವೇಳೆ ಮಹಾ ಸಂಘದ ಅಧ್ಯಕ್ಷ ಶಿವಕುಮಾರ್ ಮೇಟಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾಗದ ಸಂಸದರು ಶಾಸಕರು, ಸಚಿವರು, ಡಿಸಿಎಂ, ಮಾಜಿ ಸಿಎಂ ಅನ್ನು ಕ್ಷೇತ್ರದಲ್ಲೇ ಕಟ್ಟಿ ಹಾಕುತ್ತೇವೆ ಎಂದಿದ್ದಾರೆ. ಅಲ್ಲದೆ ಸಂಸದ ತೇಜಸ್ವಿ ಸೂರ್ಯ ಯಾಕೆ ದುಡ್ಡು ಅಂತ ಕೇಳ್ತಾರೆ. ಸಾಯುವ ಜನರಿಗೆ ಪರಿಹಾರ ಸಿಗಬೇಕಿದೆ. ದಸರಾ ಒಳಗೆ ಪರಿಹಾರ ಕೊಡದಿದ್ರೆ ಖಂಡಿತಾ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ ಎಂದು ಖಡಕ್ಕಾಗಿ ನುಡಿದಿದ್ದಾರೆ.

    ಇದೇ ವೇಳೆ ಶಂಕರ್ ಬಿದರಿ ಮಾತನಾಡಿ, ಕಳೆದ 70 ವರ್ಷಗಳ ಕಾಲದಲ್ಲಿ ಈ ರೀತಿಯ ಪ್ರವಾಹ ಯಾವತ್ತೂ ಆಗಿಲ್ಲ. ನಮ್ಮ ಉತ್ತರ ಕರ್ನಾಟಕದ ಜನ ಪ್ರವಾಹದಿಂದ ನಲುಗಿಹೋಗಿದ್ದಾರೆ. ಪ್ರವಾಹವಾಗಿ 60 ದಿನಗಳು ಆದರೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ನಮ್ಮ ಕೇಂದ್ರ ಸರ್ಕಾರ, ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಉತ್ತರ ಕರ್ನಾಟಕದ ಜನ ಮುಗ್ಧರು, ದೈವ ಭಕ್ತರು. ಯಾವುದೇ ಸಹಾಯ ಮಾಡದ ಸಂಸದರನ್ನ ಆಯ್ಕೆ ಮಾಡಿದ್ದು ನಮ್ಮ ತಪ್ಪು. ಇಂಥವರನ್ನು ಆಯ್ಕೆ ಮಾಡಿದ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು. ಜನರಲ್ಲಿ ಪ್ರಜಾಪ್ರಭುತ್ವ ಜಾಗೃತಿ ಆಗೋ ಕೆಲಸವಾಗಬೇಕು ಎಂದರು.