Tag: Union Territory

  • ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಆದಿತ್ಯ ಠಾಕ್ರೆ ಕಿರಿಕ್‌

    ಬೆಳಗಾವಿ: ಚಳಿಗಾಲದ ಅಧಿವೇಶನ (Winter Session) ಆರಂಭಗೊಳ್ಳುವ ಸಂದರ್ಭದಲ್ಲೇ ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್‌ ಠಾಕ್ರೆ (Uddhav Thackeray) ಪುತ್ರ ಆದಿತ್ಯ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಮಹಾ ವಿಕಾಸ ಅಘಾಡಿ ಒಕ್ಕೂಟ ಮಾಡಿಕೊಂಡಿರುವ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ (Aditya Thackeray) ಗಡಿ ವಿವಾದವನ್ನು ಕೆದಕಿದ್ದಾರೆ. ಬೆಳಗಾವಿ ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

    ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಎಸ್‌ಪಿ ಬಿಜೆಪಿಯ ಬಿ ಟೀಂ – ಆದಿತ್ಯ ಠಾಕ್ರೆ ಆಕ್ರೋಶ

    ಉದ್ದವ್‌ ಠಾಕ್ರೆ ನೇತೃತ್ವದ ಬಣ ಗಡಿ ವಿಚಾರವನ್ನು ಕೆದಕುವುದು ಹೊಸದೆನಲ್ಲ. ಇಲ್ಲಿಯವರೆಗೆ ಭಾಷಾ ವಿಷ ಬೀಜ ಬಿತ್ತುತ್ತಿದ್ದ ಉದ್ಧವ ಠಾಕ್ರೆ ಈಗ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಮತ್ತೆ ಕ್ಯಾತೆ ತೆಗೆದಿದ್ದಾರೆ.

  • ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 29 ಕೋಟಿ ಡೋಸ್ ಲಸಿಕೆ ಪೂರೈಕೆ

    ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 29 ಕೋಟಿ ಡೋಸ್ ಲಸಿಕೆ ಪೂರೈಕೆ

    ನವದೆಹಲಿ: ದೇಶದಲ್ಲಿ ಇದುವರೆಗೂ 29 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿದೆ. 29,10,54,050 ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಉಚಿತವಾಗಿ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

    ಲಸಿಕೆ ವ್ಯರ್ಥವಾಗಿರುವುದು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ದೇಶದಲ್ಲಿ 26,04,19,412 ಡೋಸ್ ಲಸಿಕೆ ಹಾಕಲಾಗಿದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬಾಕಿ ಇದೆ ಅವುಗಳನ್ನು ಕೆಲವೇ ದಿನಗಳಲ್ಲಿ ಹಾಕಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿರುವ ಒಟ್ಟಾರೆ ಲಸಿಕೆಯ ಪೈಕಿ ಇನ್ನೂ 3.06 ಕೋಟಿ ಡೋಸ್ ಲಸಿಕೆ ಬಾಕಿ ಇದೆ. ಇಂದು ಬೆಳಗ್ಗೆಯ ತನಕ 3,06,34638 ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ದಾಸ್ತಾನು ಇದೆ ಎಂದು ಕೇಂದ್ರ ಸಚಿವಾಲಯ ತನ್ನ ಮಾಹಿತಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಮೂರು ದಿನಗಳಲ್ಲಿ 24.53,080 ಡೋಸ್ ಲಸಿಕೆಯನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದು, ದೇಶದಾದ್ಯಂತ ನಾಳೆಯಿಂದ ಉಚಿತವಾಗಿ ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

  • ನೈಸರ್ಗಿಕ ವಿಕೋಪ – 5 ರಾಜ್ಯಗಳಿಗೆ ಕೇಂದ್ರದಿಂದ ನೆರವು

    ನೈಸರ್ಗಿಕ ವಿಕೋಪ – 5 ರಾಜ್ಯಗಳಿಗೆ ಕೇಂದ್ರದಿಂದ ನೆರವು

    ದೆಹಲಿ: 2020ರ ಅವಧಿಯಲ್ಲಿ ಉಂಟಾದ ನೈಸರ್ಗಿಕ ವಿಕೋಪ ಮತ್ತು ಕೀಟಗಳ ದಾಳಿಯಿಂದ ತತ್ತರಿಸಿದ್ದ 5 ರಾಜ್ಯಗಳಿಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ಸುಮಾರು 3,113 ಕೋಟಿ ಅನುಮೋದನೆ ನೀಡುವುದಾಗಿ ಶನಿವಾರ ಗೃಹ ಸಚಿವಾಲಯ ಪ್ರಕಟಿಸಿದೆ.

    ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ(ಎನ್‍ಡಿಆರ್‍ಎಂಎಫ್) ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಮತ್ತು ಮಧ್ಯಪ್ರದೇಶಕ್ಕೆ ಹೆಚ್ಚುವರಿ ನೆರವು ನೀಡಲಾಗುತ್ತಿದೆ.

    ನೈಋತ್ಯ ಮಾನ್ಸೂನ್‍ನಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹಕ್ಕೆ 280.78 ಕೋಟಿ ಮತ್ತು ಬಿಹಾರಕ್ಕೆ 1,255.27 ಕೋಟಿ ರೂ. ನೆರವು ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಉಂಟಾದ ನಿವಾರ್ ಚಂಡಮಾರುತಕ್ಕೆ 63.14 ಕೋಟಿ ಮತ್ತು ಬುರೆವಿ ಚಂಡಮಾರುತಕ್ಕೆ 3,22,377 ಕೋಟಿ ನೆರವು ನೀಡಲಾಗುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ 9.91 ಕೋಟಿ ರೂ. ದೊರೆತಿದೆ.

    ಜೊತೆಗೆ ಮಿಡತೆ ದಾಳಿಯಿಂದ ಕೃಷಿ ನಷ್ಟಕ್ಕೆ ತುತ್ತಾಗಿದ್ದ ಮಧ್ಯ ಪ್ರದೇಶದಲ್ಲಿ 1,280.18 ಕೋಟಿ ಹಣ ನೆರವು ನೀಡಲಾಗುತ್ತಿದೆ.

  • ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

    ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

    ನವದೆಹಲಿ: ಗಡಿ ಪ್ರದೇಶದಲ್ಲಿ 44 ಹೊಸ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಚಾರಕ್ಕೆ ಮುಕ್ತಗೊಳಿಸಿದ ಬೆನ್ನಲ್ಲೇ ಇದೀಗ ಚೀನಾ ಲಡಾಖ್ ವಿಚಾರದಲ್ಲಿ ಮೂಗು ತೂರಿಸುತ್ತಿದೆ.

    ಭಾರತ ಅಕ್ರಮವಾಗಿ ಮಾಡಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಪರಿಗಣಿಸುವುದಿಲ್ಲ. ಆದರೆ ಆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವುದನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ಹೇಳಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಕುರಿತು ಹೇಳಿಕೆ ನೀಡಿದ್ದು, ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಎರಡೂ ಕಡೆಯ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ. ಉದ್ವಿಗ್ನತೆ ಹೆಚ್ಚಿಸುವ ರೀತಿ ಯಾವುದೇ ದೇಶ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

    ಲಡಾಖ್‍ನಲ್ಲಿ 8 ಹಾಗೂ ಅರುಣಾಚಲ ಪ್ರದೇಶದಲ್ಲಿ 8 ಸೇತುವೆ ಸೇರಿದಂತೆ ಭಾರತದಲ್ಲಿ ಉದ್ಘಾಟಿಸಲಾಗಿರುವ ಹಲವು ಸೇತುವೆಗಳ ಕುರಿತು ಪ್ರತಿಕ್ರಿಯಿಸುವಂತೆ ಅವರು ಕೇಳಿದ್ದಾರೆ. ಕಾನೂನು ಬಾಹಿರವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದನ್ನು ಚೀನಾ ಪರಿಗಣಿಸುವುದಿಲ್ಲ. ಆದರೆ ಗಡಿಯುದ್ದಕ್ಕೂ ಸೇನೆ ಜಮಾವಣೆಗೊಳಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ವಿರೋಧಿಸುತ್ತೇವೆ. ಪರಿಸ್ಥಿತಿ ಉದ್ವಿಗ್ನಗೊಳಿಸುವಂತೆ ಗಡಿಯಲ್ಲಿ ಕ್ರಮ ಕೈಗೊಳ್ಳಬಾರದು. ಈ ಮೂಲಕ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ಎರಡೂ ಕಡೆಯ ಪ್ರಯತ್ನಗಳನ್ನು ದುರ್ಬಲಗೊಳಿಸಬಾರದು ಎಂದು ಹೇಳಿದ್ದಾರೆ.

    ಗಡಿಯಲ್ಲಿ ಮೂಲಭುತ ಸೌಕರ್ಯ ನಿರ್ಮಿಸುವುದು ಹಾಗೂ ಗಡಿಯುದ್ದಕ್ಕೂ ಸೇನೆಯನ್ನು ಹಾಕುವುದರಿಂದ ಎರಡೂ ಕಡೆ ಒತ್ತಡ ಹೆಚ್ಚುತ್ತದೆ. ಒಮ್ಮತದ ಶ್ರದ್ಧೆಯನ್ನು ಕಾರ್ಯಗತಗೊಳಿಸಿ, ಪರಿಸ್ಥಿತಿ ಉಲ್ಬಣಿಸಬಹುದಾದ ಕ್ರಮಗಳಿಂದ ದೂರವಿರುವ ಮೂಲಕ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಝಾವೋ ಹೇಳಿದ್ದಾರೆ.

    ಹೊಸ ಸೇತುವೆಗಳ ನಿರ್ಮಾಣದಿಂದ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ವೇಗವಾಗಿ ಗಡಿ ಬಳಿಗೆ ಕೊಂಡೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಿವೆ? ಮೀಸಲಾತಿ ಹೇಗಿದೆ?

    ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಿವೆ? ಮೀಸಲಾತಿ ಹೇಗಿದೆ?

    ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ 412 ಸ್ಥಾನಗಳು ಸಾಮಾನ್ಯ ಅಭ್ಯರ್ಥಿಗಳಿಗೆ, 84 ಎಸ್‍ಸಿ ಅಭ್ಯರ್ಥಿಗಳಿಗೆ ಹಾಗೂ ಎಸ್‍ಟಿ ಅಭ್ಯರ್ಥಿಗಳಿಗೆ 47 ಕ್ಷೇತ್ರಗಳು ಅಂತಾ ವಿಭಜಿಸಲಾಗಿದೆ. ಒಟ್ಟು 543 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆ ನಡೆಯುತ್ತಿದೆ.

    ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಜಾತಿವಾರು ವಿಂಗಡನೆ ನೋಡುವುದಾದರೆ

    1. ಆಂಧ್ರ ಪ್ರದೇಶ:
    ಆಂಧ್ರ ಪ್ರದೇಶದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 32 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, ಎಸ್‍ಸಿ 7 ಮತ್ತು ಎಸ್‍ಟಿ 3 ಕ್ಷೇತ್ರಗಳನ್ನು ಮೀಸಲಿಡಲಾಗಿದೆ.

    2. ಅರುಣಾಚಲ ಪ್ರದೇಶ:
    ಅರುಣಾಚಲ ಪ್ರದೇಶದಲ್ಲಿ ಕೇವಲ ಎರಡು ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಇಲ್ಲಿ ಎರಡು ಕ್ಷೇತ್ರಗಳು ಸಾಮಾನ್ಯ ಅಭ್ಯರ್ಥಿಗಳು ನಿಲ್ಲಲಿದ್ದು, ಎಸ್‍ಸಿ, ಎಸ್‍ಟಿ ಮೀಸಲಾತಿ ಇಲ್ಲ.

    3. ಅಸ್ಸಾಂ:
    ಅಸ್ಸಾಂ ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಸಾಮಾನ್ಯರು 11 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ, 1 ಕ್ಷೇತ್ರ ಎಸ್‍ಸಿ ಹಾಗೂ 2 ಕ್ಷೇತ್ರ ಎಸ್‍ಟಿಗೆ ಮೀಸಲಿರಿಸಲಾಗಿದೆ.

    4. ಬಿಹಾರ:
    ಬಿಹಾರ ರಾಜ್ಯದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 34 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, ಎಸ್‍ಸಿ 6 ಕ್ಷೇತ್ರಗಳಾಗಿವೆ. ಈ ರಾಜ್ಯದಲ್ಲಿ ಎಸ್‍ಟಿಗೆ ಯಾವುದೇ ಮೀಸಲಾತಿ ಇಲ್ಲ.

    5. ಗೋವಾ:
    ಗೋವಾ ರಾಜ್ಯದಲ್ಲಿ ಒಟ್ಟು 2 ಲೋಕಸಭಾ ಕ್ಷೇತ್ರಗಳಿವೆ. ಈ ಎರಡು ಕ್ಷೇತ್ರಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.

    6. ಗುಜರಾತ್
    ಗುಜರಾತ್ ರಾಜ್ಯದಲ್ಲಿ 26 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 20 ಸಾಮಾನ್ಯ, 2 ಎಸ್‍ಸಿ ಮತ್ತು ಎಸ್‍ಟಿ ವರ್ಗಕ್ಕೆ 4 ಕ್ಷೇತ್ರವನ್ನು ಮೀಸಲಿಡಲಾಗಿದೆ.

    8. ಹರಿಯಾಣ:
    ಹರಿಯಾಣ ಒಟ್ಟು 10 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 8 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, 2 ಕ್ಷೇತ್ರ ಎಸ್‍ಸಿ ವರ್ಗಕ್ಕೆ ಮೀಸಲಿಡಲಾಗಿದೆ.

    9. ಹಿಮಾಚಲ ಪ್ರದೇಶ:
    ಹಿಮಾಚಲ ಪ್ರದೇಶದಲ್ಲಿ ಒಟ್ಟು 4 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 3 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, 1 ಕ್ಷೇತ್ರವನ್ನು ಎಸ್‍ಸಿ ವರ್ಗಕ್ಕೆ ನೀಡಲಾಗಿದೆ.

    10. ಜಮ್ಮು ಮತ್ತು ಕಾಶ್ಮೀರ
    ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 6 ಲೋಕಸಭಾ ಕ್ಷೇತ್ರಗಳಿವೆ. ಈ ಆರು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಹೀಗಾಗಿ ಇಲ್ಲಿ ಎಸ್‍ಸಿ ಮತು ಎಸ್‍ಟಿ ಜಾತಿಯವರಿಗೆ ಯಾವುದೇ ಮೀಸಲಾತಿ ನೀಡಿಲ್ಲ.

    11. ಕರ್ನಾಟಕ
    ಕರ್ನಾಟದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಸಾಮಾನ್ಯರಿಗೆ 21 ಕ್ಷೇತ್ರ, ಎಸ್‍ಸಿ ಅವರಿಗೆ 5 ಮತ್ತು ಎಸ್‍ಟಿ ಅವರಿಗೆ 2 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    12. ಕೇರಳ
    ಕೇರಳ ರಾಜ್ಯದಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಸಾಮಾನ್ಯರಿಗೆ 18 ಕ್ಷೇತ್ರ, ಎಸ್‍ಸಿ ಅವರಿಗೆ 2 ಕ್ಷೇತ್ರಗಳು ಎಂದು ವಿಂಗಡನೆ ಮಾಡಲಾಗಿದೆ. ಕೇರಳ ರಾಜದಲ್ಲಿ ಎಸ್‍ಟಿ ಅವರಿಗೆ ಯಾವುದೇ ರೀತಿ ಸ್ಥಾನವನ್ನು ನೀಡಿಲ್ಲ.

    13. ಮಧ್ಯ ಪ್ರದೇಶ
    ಮಧ್ಯ ಪ್ರದೇಶದಲ್ಲಿ 29 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 19 ಸಾಮಾನ್ಯ, 4 ಎಸ್‍ಸಿ ಮತ್ತು ಎಸ್‍ಟಿ ಅವರಿಗೆ 6 ಕ್ಷೇತ್ರಗಳನ್ನು ಮೀಸಲಿಡಲಾಗಿದೆ.

    14. ಮಹಾರಾಷ್ಟ್ರ
    ಮಹಾರಾಷ್ಟ್ರದಲ್ಲಿ 48 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 39 ಸಾಮಾನ್ಯ ಕ್ಷೇತ್ರ, 5 ಎಸ್‍ಸಿ ಕ್ಷೇತ್ರ ಮತ್ತು ಎಸ್‍ಟಿ ಅವರಿಗೆ 4 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    15. ಮಣಿಪುರ: ಮಣಿಪುರದಲ್ಲಿ 2 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 1 ಸಾಮಾನ್ಯ ಕ್ಷೇತ್ರ, ಮತ್ತೊಂದು ಎಸ್‍ಟಿ ಕ್ಷೇತ್ರವಾಗಿದೆ.

    16. ಮೇಘಾಲಯ: ಮೇಘಾಲಯದಲ್ಲಿ ಒಟ್ಟು 2 ಲೋಕಸಭಾ ಕ್ಷೇತ್ರಗಳು ಇದೆ. ಎರಡು ಕ್ಷೇತ್ರವನ್ನು ಎಸ್‍ಟಿ ವರ್ಗಕ್ಕೆ ಮೀಸಲಿಡಲಾಗಿದೆ.

    17. ಓಡಿಶಾ: ಒಡಿಶಾದಲ್ಲಿ 21 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 13 ಸಾಮಾನ್ಯ, 3 ಎಸ್‍ಸಿ ಮತ್ತು ಎಸ್‍ಟಿ ಅವರಿಗೆ 5 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    18. ಪಂಜಾಬ್: ಪಂಜಾಬ್‍ನಲ್ಲಿ ಒಟ್ಟು 13 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 9 ಸಾಮಾನ್ಯ ಕ್ಷೇತ್ರ, 4 ಕ್ಷೇತ್ರ ಎಸ್‍ಸಿ ವರ್ಗಕ್ಕೆ ಮೀಸಲಿಡಲಾಗಿದೆ.

    16. ರಾಜಸ್ಥಾನ: ರಾಜಸ್ಥಾನದಲ್ಲಿ 25 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 18 ಸಾಮಾನ್ಯ ಕ್ಷೇತ್ರ, 4 ಎಸ್‍ಸಿ ಕ್ಷೇತ್ರ ಮತ್ತು ಎಸ್‍ಟಿ ಅವರಿಗೆ 3 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    20. ತಮಿಳುನಾಡು: ಇಲ್ಲಿ ಒಟ್ಟು 39 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ. ಅವುಗಳಲ್ಲಿ 32 ಸಾಮಾನ್ಯ, ಎಸ್‍ಸಿ ವರ್ಗಕ್ಕೆ 7 ಕ್ಷೇತ್ರಗಳನ್ನು ಮೀಸಲಿರಿಸಲಾಗಿದೆ. ಇಲ್ಲಿ ಎಸ್‍ಟಿ ವರ್ಗಕ್ಕೆ ಯಾವುದೇ ಕ್ಷೇತ್ರವನ್ನು ಮೀಸಲಿಟ್ಟಿಲ್ಲ.

    21. ತ್ರಿಪುರ
    ತ್ರಿಪುರದಲ್ಲಿ ಒಟ್ಟು 2 ಲೋಕಸಭಾ ಕ್ಷೇತ್ರಗಳು ಇದೆ. ಸಾಮಾನ್ಯ ಒಂದು ಮತ್ತು ಮತ್ತೊಂದು ಕ್ಷೇತ್ರದಲ್ಲಿ ಎಸ್‍ಟಿ ವರ್ಗದ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ.

    22. ಉತ್ತರ ಪ್ರದೇಶ
    ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 63 ಸಾಮಾನ್ಯ ಕ್ಷೇತ್ರವಾಗಿದ್ದು 17 ಕ್ಷೇತ್ರ ಎಸ್‍ಸಿ ವರ್ಗಕ್ಕೆ ಮೀಸಲಿಡಲಾಗಿದೆ.

    23. ಪಶ್ಚಿಮ ಬಂಗಾಳ
    ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 30 ಸಾಮಾನ್ಯ ಕ್ಷೇತ್ರ, 10 ಎಸ್‍ಸಿ ಕ್ಷೇತ್ರ ಮತ್ತು ಎಸ್‍ಟಿ ಅವರಿಗೆ 02 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    24. ಛತೀಸ್‍ಗಢ
    ಛತೀಸ್‍ಗಢದಲ್ಲಿ ಒಟ್ಟು 11 ಲೋಕಸಭಾ ಕ್ಷೇತ್ರಗಳು ಇದೆ. ಸಾಮಾನ್ಯರಿಗೆ 6 ಕ್ಷೇತ್ರ, ಎಸ್‍ಸಿಗೆ 1 ಹಾಗೂ ಎಸ್‍ಟಿ ಅವರಿಗೆ 4 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    25. ಜಾರ್ಖಂಡ್
    ಜಾರ್ಖಂಡ್ ನಲ್ಲಿ ಒಟ್ಟು 14 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಸಾಮಾನ್ಯರಿಗೆ 8 ಕ್ಷೇತ್ರ, ಎಸ್‍ಸಿಗೆ 1 ಹಾಗೂ ಎಸ್‍ಟಿ ಅವರಿಗೆ 5 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.

    26. ಉತ್ತರಾಖಂಡ
    ಉತ್ತರಾಖಂಡದಲ್ಲಿ 5 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 4 ಸಾಮಾನ್ಯ ಕ್ಷೇತ್ರ ಮತ್ತು 1 ಎಸ್‍ಸಿ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಉತ್ತರಾಖಂಡದಲ್ಲಿ ಎಸ್‍ಟಿ ಅವರಿಗೆ ಯಾವುದೇ ಕ್ಷೇತ್ರ ವಿಂಗಡನೆ ಮಾಡಿಲ್ಲ.

    27. ಚಂಡೀಗಢ
    ಚಂಡೀಗಢದಲ್ಲಿ ಒಟ್ಟು 11 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಸಾಮಾನ್ಯರಿಗೆ 6 ಕ್ಷೇತ್ರ, ಎಸ್‍ಸಿಗೆ 1 ಹಾಗೂ ಎಸ್‍ಟಿ ಅವರಿಗೆ 4 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ. ಇಲ್ಲಿ ಒಟ್ಟು 11 ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ.

    28. ದೆಹಲಿ
    ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳು ಇದೆ. ಇದರಲ್ಲಿ 6 ಸಾಮಾನ್ಯ ಕ್ಷೇತ್ರವಾಗಿದ್ದರೆ ಒಂದು ಎಸ್‍ಸಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.

    ಒಂದು ಲೋಕಸಭಾ ಚುನಾವಣಾ ಕ್ಷೇತ್ರ:
    ಲಕ್ಷದ್ವೀಪ, ಪುದುಚೇರಿ, ದಮನ್ ಮತ್ತು ದಿಯು, ದಾದ್ರ ಮತ್ತು ನಗರ ಹವೇಲಿ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಒಂದು ಕ್ಷೇತ್ರವಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಮೀಜೋರಾಂನಲ್ಲಿ ಒಂದು ಕ್ಷೇತ್ರವಿದ್ದು ಎಸ್‍ಟಿ ವರ್ಗಕ್ಕೆ ಮೀಸಲಿಡಲಾಗಿದೆ.