Tag: Union Ministry

  • ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

    ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

    ನವದೆಹಲಿ: ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಸುಗಂಧ ದ್ರವ್ಯ (ಪರ್ಫ್ಯೂಮ್) ಬ್ರಾಂಡ್ ಜಾಹೀರಾತುಗಳನ್ನು ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟ್ಟರ್, ಯುಟ್ಯೂಬ್ ಹಾಗೂ ಟಿವಿ ಚಾನೆಲ್‌ಗಳಿಗೆ ಹೇಳಿದೆ.

    ಸುಗಂಧ ದ್ರವ್ಯದ ಬ್ರಾಂಡ್ (ಪರ್ಫ್ಯೂಮ್) ಜಾಹಿರಾತುಗಳು ಉದ್ದೇಶಪೂರ್ವಕವಾಗಿ ಗ್ಯಾಂಗ್ ರೇಪ್ ಸಂಸ್ಕೃತಿಗೆ ಉತ್ತೇಜನ ನೀಡುತ್ತಿವೆ. ಇದರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪತ್ರ ಬರೆದಿದ್ದರು. ಅಲ್ಲದೆ ಅನೇಕ ಜಾಹೀರಾತಿನ ನಿದರ್ಶನಗಳನ್ನೂ ಉಲ್ಲೇಖಿಸಿದ್ದರು. ಇದಕ್ಕೆ ಶೀಘ್ರವೇ ಸ್ಪಂದಿಸಿರುವ ಸಚಿವರು ಮಧ್ಯಾಹ್ನದ ವೇಳೆಗೆ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ – ಕಮಲಕ್ಕೆ ಹಾಯ್

    ಆಯುಕ್ತರ ಪತ್ರವನ್ನಾಧರಿಸಿ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡಿರುವ ಸಚಿವಾಲಯ ತನಿಖೆ ನಡೆಸಿ FIR ದಾಖಲಿಸಲು ಮತ್ತು ಸಮೂಹ ಮಾಧ್ಯಮದಿಂದ ಜಾಹೀರಾತನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ತನಿಖೆ ಸಂಬಂಧಿತ ವರದಿಯನ್ನು ಜೂನ್ 9ರ ಒಳಗೆ ನೀಡುವಂತೆ ಹೇಳಿದೆ.

  • ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ನವದೆಹಲಿ: ಕೋವಿನ್ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಲ್ಲ ಎಂದು  ಕೇಂದ್ರ ಆರೋಗ್ಯ ಸಚಿವಾಲಯ(Union Ministry of Health and Family Welfare) ಸ್ಪಷ್ಟನೆ ನೀಡಿದೆ.

    ಕೋವಿನ್ ಬಳಕೆದಾರರ ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರ ಮಾಹಿತಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೋವಿನ್ ಬಳಕೆದಾರರ ಯಾವ ಮಾಹಿತಿಯು ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

    20,000ಕ್ಕೂ ಅಧಿಕ ಭಾರತೀಯರ ಕೊರೊನಾ ಸಂಬಂಧಿತ ಖಾಸಗಿ ಮಾಹಿತಿ ಆನ್ ಲೈನ್‌ನಲ್ಲಿ ಸೋರಿಕೆಯಾಗಿದ್ದು, ಕೆಲ ಜಾಲತಾಣಗಳಲ್ಲಿ ಈ ದಾಖಲೆಗಳ ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರ ಮಾಹಿತಿ ಮಾರಾಟಕ್ಕೆ ಇಡಲಾಗಿದೆ ಎಂದು ದೂರಲಾಗಿತ್ತು.

    ಭಾರತೀಯರ ಖಾಸಗಿ ಮಾಹಿತಿ ಸೋರಿಕೆ ಕುರಿತಾದ ವರದಿಗಳು ಸುಳ್ಳು ಎಂದಿರುವ ಆರೋಗ್ಯ ಸಚಿವಾಲಯ ಕೋವಿನ್ ಪೋರ್ಟಲ್‍ನಲ್ಲಿ ಭಾರತೀಯರ ವಿಳಾಸ ಮತ್ತು ಕೊರೊನಾ ಪರೀಕ್ಷಾ ಫಲಿತಾಂಶ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಮತ್ತು ಜಾಗೃತಿ ಮೂಡಿಸುವ ಮತ್ತು ಅದರ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರವು ಡಿಜಿಟಲ್ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕೋವಿಡ್-19 ಸಂಬಂಧಿತ ಸೇವೆಗಳು ಮತ್ತು ಮಾಹಿತಿಗಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಲು ಸರ್ಕಾರಿ ಇಲಾಖೆಗಳಲ್ಲಿ ಜನರನ್ನು ಕಡ್ಡಾಯಗೊಳಿಸುತ್ತವೆ ಎಂದು ತಿಳಿಸಿದ್ದಾರೆ.

  • ಗೃಹ ಸಚಿವಾಲಯದಿಂದ ಇನ್ಫೋಸಿಸ್ ಫೌಂಡೇಶನ್ ನೋಂದಣಿ ರದ್ದು

    ಗೃಹ ಸಚಿವಾಲಯದಿಂದ ಇನ್ಫೋಸಿಸ್ ಫೌಂಡೇಶನ್ ನೋಂದಣಿ ರದ್ದು

    ನವದೆಹಲಿ: ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್‍ನ ಸರ್ಕಾರೇತರ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಶನ್ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.

    ವಿದೇಶದಿಂದ ದೇಣಿಗೆ ಪಡೆಯುವ ವಿಚಾರದಲ್ಲಿ ಸಂಸ್ಥೆ ವಿದೇಶಿ ದೇಣಿಗೆ ನಿಯಂತ್ರಣಾ ಕಾಯ್ದೆ(ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಂಡಿದೆ ಎಂದು ವರದಿಯಾಗಿದೆ.

    ವಿದೇಶದಿಂದ ದೇಣಿಗೆ ಸ್ವೀಕರಿಸುತ್ತಿರುವ ದೇಶದ ಎಲ್ಲಾ ಎನ್‍ಜಿಒಗಳು ಎಫ್‌ಸಿಆರ್‌ಎ ಅಡಿ ನೋಂದಣಿ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

    ಇನ್ಫೋಸಿಸ್ ಫೌಂಡೇಶನ್ 6 ವರ್ಷದ ಹಿಂದಿನ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸದ ಕಾರಣ ಗೃಹ ಇಲಾಖೆ ಕಳೆದ ವರ್ಷವೇ ಶೋಕಾಸ್ ನೋಟಿಸ್ ಕಳುಹಿಸಿತ್ತು. ಆದರೆ ಸಂಸ್ಥೆ ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿಯಮಗಳ ಅನ್ವಯ ಯಾವುದೇ ಸಂಸ್ಥೆ ವಿದೇಶಿ ದೇಣಿಗೆ ಪಡೆಯದಿದ್ದರೂ ಕೂಡ ಈ ಕುರಿತು ಮಾಹಿತಿ ನೀಡಬೇಕಿದೆ. ಇನ್ಫೋಸಿಸ್ ಮಾತ್ರವಲ್ಲದೇ ದೇಶದ ಸುಮಾರು 1,755 ಎನ್‍ಜಿಒಗಳಿಗೆ ಕೇಂದ್ರ ಸಚಿವಾಲಯ ಕಳೆದ ವರ್ಷ ನೋಟಿಸ್ ಜಾರಿ ಮಾಡಿತ್ತು.

    ಎಫ್‌ಸಿಆರ್‌ಎ ಮಾರ್ಗದರ್ಶಿ ಸೂತ್ರದ ಪ್ರಕಾರ, ಎನ್‍ಜಿಒ ಸಂಸ್ಥೆ ವಾರ್ಷಿಕ ಲೆಕ್ಕಪತ್ರವನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಖರ್ಚುಗಳ ವಿವರ ಮತ್ತು ಆದಾಯದ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಹಣಕಾಸು ವರ್ಷ ಆರಂಭಗೊಂಡ 9 ತಿಂಗಳ ಒಳಗಡೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಕಂಪನಿ ಆ ವರ್ಷದಲ್ಲಿ ವಿದೇಶದಿಂದ ದೇಣಿಗೆ ಸ್ವೀಕರಿಸದೇ ಇದ್ದಲ್ಲಿ ಆ ವರ್ಷ ದೇಣಿಗೆ ಸ್ವೀಕರಿಸಿಲ್ಲ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ.

    ಈ ವಿಚಾರದ ಬಗ್ಗೆ ಇನ್ಫೋಸಿಸ್ ಫೌಂಡೇಶನ್ ವಕ್ತಾರರನ್ನು ಸಂಪರ್ಕಿಸಿದಾಗ, ನಮ್ಮ ಸಂಸ್ಥೆ ಎಫ್‌ಸಿಆರ್‌ಎ ಕಾಯ್ದೆಯ ಅಡಿ ಬರುವುದಿಲ್ಲ ಎಂದಿದ್ದಾರೆ.

    1966 ರಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಗೆ ಸುಧಾಮೂರ್ತಿಯವರು ಮುಖ್ಯಸ್ಥೆಯಾಗಿದ್ದು, ಭಾರತ ಹಳ್ಳಿಗಳ ಅಭಿವೃದ್ಧಿ, ಆರೋಗ್ಯ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು ಇನ್ಫೋಸಿಸ್ ಫೌಂಡೇಶನ್ ಪ್ರಮುಖ ಕಾರ್ಯವಾಗಿದೆ.