Tag: Union Minister Ananth Kumar

  • ಅನಂತಕುಮಾರ್ ಅಂತಿಮ ದರ್ಶನ – ನ್ಯಾಷನಲ್ ಕಾಲೇಜು ಮೈದಾನ ಸಿದ್ಧತೆ ವೀಕ್ಷಿಸಿದ ಡಿಸಿಎಂ

    ಅನಂತಕುಮಾರ್ ಅಂತಿಮ ದರ್ಶನ – ನ್ಯಾಷನಲ್ ಕಾಲೇಜು ಮೈದಾನ ಸಿದ್ಧತೆ ವೀಕ್ಷಿಸಿದ ಡಿಸಿಎಂ

    ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ನಾಳೆ ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರು ಕಾರ್ಯಕ್ರಮದ ಸಿದ್ಧತೆಗಳನ್ನು ವೀಕ್ಷಿಸಿದರು.

    ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಾಳೆ ಅನಂತಕುಮಾರ್ ಅವರ ಪಾರ್ಥೀವ ಶರೀರ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಈ ಕುರಿತು ಸಿದ್ಧತೆಗಳನ್ನು ಆರಂಭಿಸಿದೆ. ಕಾರ್ಯಕ್ರಮದ ಕುರಿತು ಡಿಸಿಎಂ ಪರಮೇಶ್ವರ್ ಅವರಿಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ಡಿಸಿಪಿಗಳಾದ ಅಣ್ಣಾಮಲೈ ಹಾಗೂ ಸಂದೀಪ್ ಪಾಟೀಲ್ ಮಾಹಿತಿ ನೀಡಿದರು. ಈ ವೇಳೆ ಮೇಯರ್ ಗಂಗಾಂಬಿಕೆ ಕೂಡ ಪರಮೇಶ್ವರ್ ಅವರೊಂದಿಗೆ ಆಗಮಿಸಿದ್ದರು.

    ಈ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ಅನಂತಕುಮಾರ್ ಅವರ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನ ಹಿನ್ನೆಲೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ. ನಾಳೆ ಎರಡೂವರೆ ಗಂಟೆ ಕಾಲ ಅಂತಿಮ ದರ್ಶಕ್ಕೆ ಅವಕಾಶ ಇರಲಿದೆ. ಇಂದು ಸಂಜೆ 8.30 ಕ್ಕೆ ಪ್ರಧಾನಿ ಮೋದಿ ಅವರು ಕೂಡ ಆಗಮಿಸಲಿದ್ದು, ಉಪರಾಷ್ಟ್ರಪತಿಗಳು, ಗೃಹ ಸಚಿವರು ಮತ್ತು ಕೇಂದ್ರದ ಹಲವು ಸಚಿವರ ಆಗಮಿಸಲಿದ್ದಾರೆ. ಎಲ್ಲರಿಗೂ ವ್ಯವಸ್ಥಿತವಾಗಿ ದರ್ಶನ ಮಾಡುವ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪಕ್ಷ ಯಾವುದಿದ್ರೂ ಅನಂತಕುಮಾರ್ ಸ್ನೇಹ ಅಜರಾಮರ : ಉಮೇಶ್ ಕತ್ತಿ

    ಪಕ್ಷ ಯಾವುದಿದ್ರೂ ಅನಂತಕುಮಾರ್ ಸ್ನೇಹ ಅಜರಾಮರ : ಉಮೇಶ್ ಕತ್ತಿ

    ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಬಿಜೆಪಿ ಮುಖಂಡ ಹಾಗೂ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಸಂತಾಪ ಸೂಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಅನಂತಕುಮಾರ್ ತುಂಬಾ ಆತ್ಮೀಯರಾಗಿದ್ದೇವು. ಸಾಕಷ್ಟು ಬಾರಿ ರೈಲಿನಲ್ಲಿ ಇಬ್ಬರು ಕುಳಿತು ಜೋಳದ ರೊಟ್ಟಿ ಊಟ ಸವಿಯುತ್ತಿದ್ದೇವು. ಉತ್ತರ ಕರ್ನಾಟಕದ ಬಗ್ಗೆ ಅವರು ಆತ್ಮವಿಶ್ವಾಸದ ಮಾತನಾಡುತ್ತಿದ್ದರು. ಮೊದಲು ನಮ್ಮ ಪಕ್ಷಗಳು ಬೇರೆ ಇದ್ದರು ನನ್ನ ಹಾಗೂ ಅವರ ಸ್ನೇಹ ಅಜರಾಮರ. ಅನಂತಕುಮಾರ್ ಅವರ ಅಗಲಿಕೆ ಬಿಜೆಪಿ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ ಎಂದರು.

    ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನ ಒಳ್ಳೆಯ ರೀತಿಯಲ್ಲಿ ಕಟ್ಟಿದ್ದರು. ರಾಜ್ಯದ ಹೆಸರನ್ನ ರಾಷ್ಟ್ರಮಟ್ಟದಲ್ಲಿ ತಂದರು. ತನ್ನ ತಂದೆ ತಾಯಿಗೆ ಆದಂತ ಕಷ್ಟ ಬೇರೆ ಯಾರಿಗೂ ಆಗದಿರಲಿ ಎಂದು ಜೆನೆರಿಕ್ ಔಷಧಿ ಯೋಜನೆ ತಂದರು. ಆದರೆ ಅವರು ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದು ಮಾತ್ರ ಅತೀವ ನೋವು ತಂದಿದೆ. ಅವರ ಕುಟುಂಬದ ದುಃಖದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದರು. ಇದೇ ವೇಳೆ ಮಾಜಿ ಸಚಿವ ಶಶಿಕಾಂತ ನಾಯಕ ಕೂಡ ಅಗಲಿದ ಅನಂತಕುಮಾರ್ ಅವರಿಗೆ ಸಂತಾಪ ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅನಂತ್ ಕುಮಾರ್ ಓದಿದ ಹುಬ್ಬಳ್ಳಿ ಕಾಲೇಜಿನಲ್ಲಿ ನೀರವ ಮೌನ

    ಅನಂತ್ ಕುಮಾರ್ ಓದಿದ ಹುಬ್ಬಳ್ಳಿ ಕಾಲೇಜಿನಲ್ಲಿ ನೀರವ ಮೌನ

    ಧಾರವಾಡ: ಕೇಂದ್ರ ಸಚಿವ ಅನಂತಕುಮಾರ ಅವರು ಪಿಯುಸಿ ಕಾಲೇಜು ಶಿಕ್ಷಣ ಪಡೆದಿದ್ದ ಹುಬ್ಬಳ್ಳಿಯ ಪಿ ಸಿ ಜಾಬಿನ್ ಕಾಲೇಜಿನ ಆವರಣದಲ್ಲಿ ನೀರವ ಮೌನ ಆವರಿಸಿದ್ದು, ಅನಂತಕುಮಾರ ಅವರ ನಿಧನದ ಸುದ್ದಿ ತಿಳಿಯುತಿದ್ದಂತೆಯೇ ಇಡೀ ಕಾಲೇಜಿನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

    1974 ರಿಂದ 76 ವರೆಗೂ ಪಿಸಿ ಜಾಬಿನ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ ಅನಂತ್ ಕುಮಾರ್ ಅವರು, ಎಬಿವಿಪಿಯಲ್ಲಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಾಲೇಜು ದಿನಗಳಿಂದಲೇ ಸಂಘಟನಾ ಚತುರರಾಗಿದ್ದು, ಹಲವು ಹೋರಾಟಗಳನ್ನ ಮಾಡಿದ್ದರು.

    ಈ ವೇಳೆ ಅನಂತ್ ಕುಮಾರ್ ಅವರನ್ನು ನೆನೆಸಿಕೊಂಡ ಕಾಲೇಜಿನ ಪ್ರಾಂಶುಪಾಲರಾದ ಶಿವಪ್ರಕಾಶ್ ಅವರು, ಅನಂತ್ ಕುಮಾರ್ ಅವರ ನಿಧನ ಸಾಕಷ್ಟು ನೋವು ತಂದಿದೆ. ರಾಷ್ಟ್ರದ ಮಟ್ಟದಲ್ಲಿ ಅನಂತ್ ಕುಮಾರ್ ಅವರು ನಾಯಕರಾಗಿ ಹೆಸರು ಪಡೆದಿದ್ದರು. ಅವರ ಸಾವಿನ ನೋವಿನವನ್ನು ಭರಿಸುವಂತಹ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ತಿಳಿಸಿದರು. ಇದೇ ವೇಳೆ ಅನಂತ್ ಕುಮಾರ್ ಅವರ ಧರ್ಮಪತ್ನಿ ಅವರು ಕೂಡಾ ಇದೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಓದಿದ್ದರು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು: ತಾರಾ

    ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು: ತಾರಾ

    ಬೆಂಗಳೂರು: ಒಬ್ಬ ಕಲಾವಿದೆಯಾಗಿದ್ದ ನಾನು ರಾಜಕೀಯ ಪ್ರವೇಶ ಪಡೆದ ನಂತರ ನನಗೆ ಗಣ್ಯ ರಾಜಕೀಯ ವ್ಯಕ್ತಿಗಳ ಹಿಂದಿನ ಶ್ರಮ ಅರಿವಾಯಿತು. ಇತ್ತೀಚೆಗೆ ಅನಂತ್ ಕುಮಾರ್ ಅವರ ಆತ್ಮಕಥೆಯ ಪುಸ್ತಕವನ್ನು ಅವರಿಂದಲೇ ಪಡೆದಿದ್ದೆ. ಅಲ್ಲದೇ ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು ಎಂದು ಮಾಜಿ ವಿಧಾನಪರಿಷತ್ ಸದಸ್ಯೆ, ನಟಿ ತಾರಾ ಅವರು ಹೇಳಿದ್ದಾರೆ.

    ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ತಾರಾ ಅವರು ಅನಂತ್ ಕುಮಾರ್ ಅವರ ಬಗೆಗಿನ ನೆನಪುಗಳನ್ನು ಬಿಚ್ಚಿಟ್ಟರು. ಕಳೆದ 6 ತಿಂಗಳ ಹಿಂದೆಯಷ್ಟೇ ಅನಂತ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದೆ. ಅವರೇ ತಮ್ಮ ಆತ್ಮಕಥೆಯ ಪುಸ್ತಕವನ್ನು ನನಗೆ ನೀಡಿ ಓದು ಎಂದು ತಿಳಿಸಿದರು. ಅವರ ಪುಸ್ತಕ ಓದಿದ ಬಳಿಕ ನನಗೆ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು ಎಂದರು.

    ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಹೆಗ್ಗಳಿಕೆಯಲ್ಲಿ ಅವರ ಪಾಲು ದೊಡ್ಡದು. ರಾಜಕೀಯ ಹೊರತು ಪಡಿಸಿ ಅವರ ಮನಸ್ಸು ಸೂಕ್ಷ್ಮವಾಗಿತ್ತು. ಯಾರನ್ನಾದರು ನೋಡಿದರೆ ಮನಸ್ಸಿನಿಂದ ನಗು ತೋರುತ್ತಿದ್ದರು. ದೆಹಲಿಗೆ ಹೋಗಿದ್ದ ವೇಳೆ ಕರೆ ಮಾಡಿದರೆ ತಾರಾ ಜೀ ಎಂದು ಕರೆಯುತ್ತಿದ್ದರು. ಆಗ ನನಗೆ ಅವರು ದೆಹಲಿಯಲಿದ್ದಾರೆ ಎಂದು ತಿಳಿಯುತ್ತಿತ್ತು. ಕರ್ನಾಟಕದಲ್ಲಿ ಇರುವ ವೇಳೆ ತಾರಾಮ್ಮ ಎಂದು ಕರೆಯುತ್ತಿದ್ದಾಗಿ ತಿಳಿಸಿದರು.

    ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅವರು ಅನ್ವರ್ಥರಾಗಿದ್ದರು. ಅವರನ್ನು ಕೊನೆ ಬಾರಿಗೆ ನೋಡಿದ್ದು, ಸಾವಿತ್ರಿ ಬಾಯಿ ಪುಲೆ ಅವರ ಸಿನಿಮಾ ಟ್ರೇಲರ್ ಬಿಡುಗಡೆಯ ವೇಳೆ ನಾನು ದೆಹಲಿಗೆ ತೆರಳಿದ್ದೆ. ಆಗ ಅವರು ನಮ್ಮೊಂದಿಗೆ ಹೆಚ್ಚು ಸಮಯ ಇದ್ದರು. ಪಕ್ಷದ ಕಾರ್ಯದಲ್ಲಿ ನಮಗೇ ಮುಂದೇ ಇರುವಂತೆ ಮಾಡುತ್ತಿದ್ದರು. ಅವರ ಈ ಅನಿರೀಕ್ಷತ ಸಾವು ನಮಗೇ ಹೆಚ್ಚಿನ ನೋವು. ಹೆಬ್ಬೆಟ್ಟು ರಾಮಕ್ಕ ಸಿನಿಮಾ ಸಿಡಿ ನೀಡುವಂತೆ ಇಂಗ್ಲೆಂಡ್‍ಗೆ ತೆರಳುವ ಮುನ್ನ ಮನವಿ ಮಾಡಿದ್ದರು. ಆದರೆ ನಾನು ಸಿಡಿ ನೀಡಲು ಸಾಧ್ಯವಾಗಿರಲಿಲ್ಲ. ನನ್ನ ಅಣ್ಣ ಕಳೆದುಕೊಂಡ ನೋವು ಆಗುತ್ತಿದೆ ಎಂದು ಭಾವುಕರಾದರು.

    https://www.youtube.com/watch?v=tqWFvDrVIAs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೈ ಪರ ಮತಯಾಚಿಸಿದ ಚಂಪಾಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟ ಅನಂತ್ ಕುಮಾರ್: ವಿಡಿಯೋ ನೋಡಿ

    ಕೈ ಪರ ಮತಯಾಚಿಸಿದ ಚಂಪಾಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟ ಅನಂತ್ ಕುಮಾರ್: ವಿಡಿಯೋ ನೋಡಿ

    ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ದಿನದಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿ ಕಾಂಗ್ರೆಸ್ ಗೆ ಮತ ನೀಡಿ ಎಂದಿದ್ದ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಅವರಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಆಕ್ರೋಶ ಭರಿತವಾಗಿ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ.

    ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತಾನಾಡಿದ ಅನಂತ್ ಕುಮಾರ್, ಈ ವೇದಿಕೆ ರಾಜಕೀಯ ಭಾಷಣ ಮಾಡಲು ಅಲ್ಲ. ಯಾರಿಗೆ ಮತ ಹಾಕಬೇಕು ಅನ್ನುವುದನ್ನು ಹೇಳುವುದಕ್ಕೆ ಬೇರೆ ವೇದಿಕೆಗಳಿವೆ ಅಲ್ಲಿ ಹೇಳಿ. ಕನ್ನಡ ಸಮ್ಮೇಳನದಲ್ಲಿ ಕನ್ನಡ ದ ಬಗ್ಗೆ ಮಾತನಾಡಿ. ಇಡೀ ದೇಶವೇ ಸಮ್ಮೇಳವನ್ನು ನೋಡುತ್ತಿದೆ. ಹೀಗಿರುವಾಗ ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳದಲ್ಲಿ ಡೋಂಗಿತನಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ವೇದಿಕೆಯ ಮೌಲ್ಯ ಹಾಳಾಗುತ್ತದೆ ಎಂದು ನೇರವಾಗಿ ಹೇಳಿದರು.

    ತಮ್ಮ ಭಾಷಣದ ಉದ್ದಕ್ಕೂ ಚಂಪಾ ಹೇಳಿಕೆಗೆ ತಮ್ಮ ಮೊಣಚು ಭಾಷಣದ ಮೂಲಕ ಕೇಂದ್ರ ಸಚಿವ ಟಾಂಗ್ ನೀಡಿದರು. ವೇದಿಕೆ ಮೇಲೆ ಕನ್ನಡದ ಬಗ್ಗೆ ಚರ್ಚೆ ಮಾಡಿ, ರಾಜಕೀಯ ಬೇಡ. ಕಸಾಪ ಸ್ಥಾಪನೆ ಮಾಡಿದ ರಾಜಮನೆತನಕ್ಕೆ ಸಮ್ಮೇಳಕ್ಕೆ ಆಹ್ವಾನ ನೀಡದೇ ಅವಮಾನ ಮಾಡಿದ್ದು ಸರಿಯಲ್ಲ. ನಾವು ನಾಡು, ನುಡಿ, ಜಲ, ನೆಲದ ವಿಷಯಕ್ಕೆ ಬಂದಾಗ ಪಕ್ಷತೀತವಾಗಿ ಕೆಲಸ ಮಾಡಿದ್ದೇವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಷಯದಲ್ಲೂ ಹೋರಾಡಿದ್ದೇವೆ. ಕನ್ನಡದ ವಿಷಯಕ್ಕೆ ಬಂದಾಗ ಎಲ್ಲಕ್ಕೂ ಸಿದ್ಧ. ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇವೆ ಎಂದು ಹೇಳಿ ತಿರುಗೇಟು ನೀಡಿದರು.

    ಈ ವೇಳೆ ವೇದಿಕೆ ಮೇಲಿದ್ದ ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅನಂತ್ ಕುಮಾರ್ ಭಾಷಣವನ್ನು ಲೈವ್ ಮಾಡಿದ್ದು ವಿಶೇಷವಾಗಿತ್ತು. ಭಾಷಣ ಮುಗಿಯುತ್ತಿದಂತೆ ಸಮ್ಮೇಳನದ ಪ್ರತಿಕ್ರಿಯೆಯನ್ನು ಅಲಿಸದ ಅನಂತ್ ಕುಮಾರ್ ಹಾಗೂ ಪ್ರತಾಪ್ ಸಿಂಹ ವೇದಿಕೆಯಿಂದ ನಿರ್ಗಮಿಸಿದರು.

    ಅನಂತ್ ಕುಮಾರ್ ಅಕ್ರೋಶದ ಭಾಷಣ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಫೇಸ್‍ಬುಕ್ ನಲ್ಲಿ ಲೈವ್ ಮಾಡಿದ್ದು ನೋಡಿ ಚಂಪಾಗೆ ತಿರುಗೇಟು ನೀಡಲು ಸಿದ್ಧರಾಗಿಯೇ ಬಿಜೆಪಿ ನಾಯಕರು ವೇದಿಕೆಯನ್ನು ಏರಿದ್ದಾರೆ ಎನ್ನುವ ಅಭಿಪ್ರಾಯ ಜನರಲ್ಲಿ ಮೂಡಿತ್ತು.

    ಚಂಪಾ ಹೇಳಿದ್ದು ಏನು?: ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಾತಂತ್ರ್ಯ, ಸಮಾನತೆ, ಸಹಭಾವ, ಸೆಕ್ಯುಲರಿಸಂ, ಸಾಮಾಜಿಕ ನ್ಯಾಯ ಮುಂತಾದವುಗಳಿಗೆ ಕಂಟಕ ಒದಗಿಬಂದಿದೆ ಎಂಬ ಆತಂಕ ವ್ಯಕ್ತಪಡಿಸಿದ್ರು. ಅಲ್ಲದೇ ನಮ್ಮ ರಾಜ್ಯದ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಸೆಕ್ಯುಲರ್ ಪಕ್ಷಗಳ ಪರವಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದ್ದರು.

    ಒಂದು ರಾಷ್ಟ್ರೀಯ ಪಕ್ಷ ಕನ್ನಡದ ಪರ ಕೆಲಸ ಮಾಡುತ್ತಿದೆ. ಆದರೆ, ಇನ್ನೊಂದು ರಾಷ್ಟ್ರೀಯ ಪಕ್ಷವು ನಾಡಧ್ವಜ ವಿವಾದ, ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯೆತ್ತುತ್ತಿ ಮೌನ ತಾಳಿದೆ. ಈ ಚುನಾವಣೆಯಲ್ಲಿ ಆ ಪಕ್ಷವನ್ನು ಜನ ದೂರವಿಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ನೆರೆದಿದ್ದ ಜನತೆಗೆ ಕರೆಕೊಟ್ಟಿದ್ದರು.

    ಕನ್ನಡ ಸಂಸ್ಕೃತಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಡುವೈರಿಯಾಗಲು ಕೇಂದ್ರ ಸರಕಾರದ ನೀತಿಯೇ ಕಾರಣವಾಗಿದೆ. ಒಂದೇ ಭಾಷೆ-ಒಂದೇ, ಧರ್ಮ-ಒಂದೇ ಸಿದ್ಧಾಂತ ಎಂಬ ಧಾಟಿಯಲ್ಲಿ ನಾವೆಲ್ಲ ಒಕ್ಕೊರಲಿನಿಂದ ಹಾಡುತ್ತಿದ್ದ ವಂದೇಮಾತರಂ ಗೀತೆಯನ್ನೇ ಹೈಜಾಕ್ ಮಾಡಲಾಗಿದೆ. ಭಾರತ ಮಾತೆ, ಬರೀ ಹಿಂದೂ ಮಾತೆ ಆಗುತ್ತಿರುವಳೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಮಾಡುವುದೇ ರಾಷ್ಟ್ರದ್ರೋಹವಾಗಿ, ವೈಚಾರಿಕತೆ ಮೇಲೆ ಹಲ್ಲೆ ಎಸಗುವುದೇ ಸಂಸ್ಕೃತಿಯಾಗಿ, ದಟ್ಟ ಭಯ ಆವರಿಸಿದೆ ಎಂದಿದ್ದರು.