Tag: Union Minister A. Narayanaswamy

  • ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಗದಗ: ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದಾಗಿ, ಕರ್ತವ್ಯ ನಿರತ ಯೋಧನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿರುವ ಘಟನೆ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

    ಗುರುವಾರ ರಾತ್ರಿ ಗದಗನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮುಳಗುಂದ ಪಟ್ಟಣದ ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿಬರುವ ಪ್ಲಾನ್ ಹಾಕಿಕೊಂಡಿದ್ದರು. ಈ ವೇಳೆ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಮಾಹಿತಿ ಕೊರತೆಯಿಂದಾಗಿ ಎಡವಟ್ಟಾಗಿದೆ. ಇದನ್ನೂ ಓದಿ: ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್

    ಒಂದೂವರೆ ವರ್ಷದ ಹಿಂದೆ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಹಿರೇಮಠ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಸವರಾಜ್ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಿತ್ತು. ಆದರೆ ಸ್ಥಳೀಯ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಅವರ ಮನೆಗೆ ಭೇಟಿ ನೀಡಿದ್ದರು.

    ಕುಟುಂಬದವರ ಯೋಗಕ್ಷೇಮ ವಿಚಾರಿಸಿ, ಕರ್ತವ್ಯ ನಿರತ ಸೈನಿಕನ ಪತ್ನಿಗೆ ಸರ್ಕಾರಿ ಕೆಲಸ ಹಾಗೂ ಕುಟುಂಬಕ್ಕೆ ಜಮೀನು ಕೊಡುವ ಭರವಸೆಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೀಡಿದ್ದರು. ಕೇಂದ್ರ ಸಚಿವರ ತರಾತುರಿ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಸ್ಥಳೀಯ ಕಾರ್ಯಕರ್ತರು ಮಾಡಿದ ಎಡವಟ್ಟಿನಿಂದ ಕೇಂದ್ರ ಸಚಿವರು ಪೇಚಿಗೆ ಸಿಲುಕಿದಂತಾಗಿದೆ.

  • ಕೇಂದ್ರ ಸಚಿವ ನಾರಾಯಣಸ್ವಾಮಿ ಕಾರ್ಯಕ್ರಮಲ್ಲಿ ಮೂವರ ಜೇಬಿಗೆ ಕತ್ತರಿ, 20 ಸಾವಿರ ಕಳ್ಳತನ

    ಕೇಂದ್ರ ಸಚಿವ ನಾರಾಯಣಸ್ವಾಮಿ ಕಾರ್ಯಕ್ರಮಲ್ಲಿ ಮೂವರ ಜೇಬಿಗೆ ಕತ್ತರಿ, 20 ಸಾವಿರ ಕಳ್ಳತನ

    ಹಾವೇರಿ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗಮನದ ವೇಳೆ ಕಳ್ಳರು ಮೂವರು ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಿದ್ದು, ಒಟ್ಟು 20 ಸಾವಿರ ರೂ.ಕಳ್ಳತನ ಮಾಡಿರುವ ಘಟನೆ ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ನಡೆದಿದೆ.

    ಮೂವರು ಕಾರ್ಯಕರ್ತರ ಜೇಬು ಕತ್ತರಿಸಿದ್ದು, ಪುಷ್ಪಾರ್ಪಣೆ ಮಾಡುವ ವೇಳೆಯಲ್ಲಿ ಜೇಬಿನಲ್ಲಿದ್ದ 20 ಸಾವಿರಕ್ಕೂ ಅಧಿಕ ಹಣವನ್ನ ಖದೀಮರು ಎಗರಿಸಿದ್ದಾರೆ. ಖದೀಮರ ಕೈಚಳಕಕ್ಕೆ ಹಣ ಕಳೆದುಕೊಂಡ ಮೂವರು ಕಂಗಾಲಾಗಿದ್ದಾರೆ.

    ಸಚಿವ ನಾರಾಯಣಸ್ವಾಮಿ ಆಗಮನದ ಹಿನ್ನೆಲೆ ಹೆಚ್ಚು ಜನ ಜಮಾಯಿಸಿದ್ದ ವೇಳೆ ಮೂವರು ಬಿಜೆಪಿ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಲಾಗಿದೆ. ಸಚಿವರ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ಕಳ್ಳರು ಕೈಚಳಕ ತೋರಿಸಿದ್ದು, ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿತ್ತು. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. Watch PUBLiC TV LIVE