Tag: Union Law Minister

  • CJI ಹುದ್ದೆಗೆ ನ್ಯಾಯಮೂರ್ತಿ ಚಂದ್ರಚೂಡ್ ಹೆಸರು ಶಿಫಾರಸು

    CJI ಹುದ್ದೆಗೆ ನ್ಯಾಯಮೂರ್ತಿ ಚಂದ್ರಚೂಡ್ ಹೆಸರು ಶಿಫಾರಸು

    ನವದೆಹಲಿ: ಸುಪ್ರೀಂಕೋರ್ಟ್ (Supreme Court) ಹಾಲಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ (UU Lalit) ಅವರು, ಮುಂದಿನ ಸಿಜೆಐ (CJI) ಆಗಿ ಅಧಿಕಾರ ವಹಿಸಿಕೊಳ್ಳಲು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY ChandraChud) ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

    ಸಿಜೆಐ ಲಲಿತ್ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ (Central Government Of India) ಪತ್ರ ಬರೆದಿದ್ದು, 2 ವರ್ಷಗಳ ಸುದೀರ್ಘ ಅಧಿಕಾರವಧಿಯನ್ನು ಹೊಂದಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಳಿನಿ

    ಇಂದು ನ್ಯಾಯಾಧೀಶರ ಲಾಂಜ್‌ನಲ್ಲಿ ಸುಪ್ರೀಂ ಕೋರ್ಟ್‌ನ (Supreme Court) ಎಲ್ಲಾ ನ್ಯಾಯಾಧೀಶರು ಹಾಜರಿರಬೇಕು ಎಂದು ಹಾಲಿ ಸಿಜೆಐ (CJI) ಮನವಿ ಮಾಡಿದ್ದರು. ಈ ವೇಳೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಮುಂದಿನ ಸಿಜೆಐ ಆಗಿ ಶಿಫಾರಸು ಮಾಡುವ ಬಗ್ಗೆ ಪ್ರಸ್ತಾಪಿಸಲಾಯಿತು. ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವಂತೆ ಅಕ್ಟೋಬರ್ 7 ರಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಂದ ಸಿಜೆಐ ಸಚಿವಾಲಯವು ಸಂದೇಶವನ್ನು ಸ್ವೀಕರಿಸಿತ್ತು. ನವೆಂಬರ್ 8 ರಂದು ಸಿಜೆಐ ಲಲಿತ್ ಅವರ ಅಧಿಕಾರಾವಧಿ ಅಂತ್ಯವಾಗುತ್ತಿರುವ ಹಿನ್ನಲೆ ಈ ಸಂದೇಶ ಕಳುಹಿಸಲಾಗಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಈ ವರ್ಷ ಆಗಸ್ಟ್ 27ರಂದು ಎನ್.ವಿ.ರಮಣ (NV Ramana) ಅವರು 48ನೇ ಸಿಜೆಐ ಆಗಿ ನಿವೃತ್ತಿ ಹೊಂದಿದ ಬಳಿಕ 49ನೇ ಸಿಜೆಐ ಆಗಿ ಯುಯು ಲಲಿತ್ ಅಧಿಕಾರ ವಹಿಸಿಕೊಂಡಿದ್ದರು. ಲಲಿತ್ ಅವರ ನಂತರ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅಧಿಕಾರದ ಗದ್ದುಗೆ ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]