Tag: union government

  • ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ- ಬಿಜೆಪಿ ವಿರುದ್ಧ ಹೋರಾಟದ ಬಗ್ಗೆ ಚರ್ಚೆ

    ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ- ಬಿಜೆಪಿ ವಿರುದ್ಧ ಹೋರಾಟದ ಬಗ್ಗೆ ಚರ್ಚೆ

    ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ ಕೆಲವು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಚುನಾವಣಾ ಕಸರತ್ತು ಆರಂಭಿಸಿದೆ.

    ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮರ ಸಾರಲು ಸಿದ್ಧತೆ ನಡೆಸಿರುವ ಕಾಂಗ್ರೆಸ್, ಇಂದು ಎರಡನೇ ಕಾರ್ಯಕಾರಣಿ ಸಮಿತಿ ಸಭೆ ನಡೆಸಲಿದೆ. ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯರು ಭಾಗಿಯಾಗಲಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆಯ ನೇತೃತ್ವ ವಹಿಸಿಕೊಳ್ಳಲಿದ್ದು, ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಒಟ್ಟು 51 ಜನ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ದೇಶದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವಾಗಿ ಚರ್ಚೆ ನಡೆಯಲಿದೆ.

    ಸಭೆಯ ಮುಖ್ಯ ವಿಷಯವಾಗಿ ರಾಷ್ಟ್ರೀಯ ಪೌರತ್ವ ನೊಂದಣಿ ವಿಷಯ ಪರಿಗಣಿಸಿದ್ದು, ಇದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವ ರೂಪುರೇಷೆಗಳ ಬಗ್ಗೆ ಚರ್ಚೆ ಆಗಲಿದೆ. ಈಗಾಗಲೇ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿದ್ದು, ಅವರೊಂದಿಗೆ ಕಾಂಗ್ರೆಸ್ ಒಟ್ಟಾಗಿ ಹೋರಾಟ ನಡೆಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಜೊತೆಗೆ ಲೋಕಸಭೆಗೆ ಮುನ್ನ ಎದುರಾಗುವ ರಾಜಸ್ಥಾನ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ಚುನಾವಣೆ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ.

    ಚುನಾವಣೆ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸುವುದು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಸೇರಿದಂತೆ ಎನ್ ಆರ್ ಸಿ ಮುಂದಿಟ್ಟುಕೊಂಡು ಬಿಜೆಪಿ ಬಗ್ಗು ಬಡೆಯಲು ಕಾಂಗ್ರೆಸ್ ಪ್ಲಾನ್ ರೂಪಿಸಲಿದೆ. ರಾಜ್ಯದಲ್ಲಿ ಸ್ಥಳೀಯ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ.ವೇಣುಗೋಪಾಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.

    ಈಗಾಗಲೇ ಲೋಕಸಭೆ ಮೈತ್ರಿ ವಿಚಾರವಾಗಿ ಸಾಕಷ್ಟು ಗೊಂದಲ ಹಾಗೂ ಸ್ವಪಕ್ಷೀಯರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಇದೇ ತಿಂಗಳ 13ಕ್ಕೆ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೀದರ್ ನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವಾಗಿರುವ ಮಸೂದೆಯಲ್ಲಿ ಏನಿದೆ? ಎಷ್ಟಿದ್ದ ದಂಡ ಎಷ್ಟು ಏರಿಕೆ ಆಗುತ್ತೆ?

    ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವಾಗಿರುವ ಮಸೂದೆಯಲ್ಲಿ ಏನಿದೆ? ಎಷ್ಟಿದ್ದ ದಂಡ ಎಷ್ಟು ಏರಿಕೆ ಆಗುತ್ತೆ?

    ನವದೆಹಲಿ: ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ಸಾರಿಗೆ ಸಂಘಟನೆಗಳು ಆಗಸ್ಟ್ 7 ರಂದು ಮುಷ್ಕರಕ್ಕೆ ಕರೆ ನೀಡಿವೆ. ಈ ಶಾಸನ ಕಾಯ್ದೆಯಾಗಿ ಜಾರಿಯಾದರೆ ಮರಣಶಾಸನ ಎಂದು ಸಂಘಟನೆಗಳು ಆರೋಪಿಸಿವೆ. ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿರುವ ತಿದ್ದುಪಡಿ ಮಸೂದೆಯಲ್ಲಿ ಏನಿದೆ ಎನ್ನುವುದಕ್ಕೆ ಇಲ್ಲಿ 18 ಪ್ರಮುಖ ವಿಚಾರಗಳನ್ನು ನೀಡಲಾಗಿದೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
    1. ಚಾಲನಾ ಪರವಾನಿಗೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ.

    2. ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ ಈಗ ಸರ್ಕಾರದಿಂದ ಸಿಗುವ ಪರಿಹಾರ ಧನದ ಮೊತ್ತ 25 ಸಾವಿರ ರೂ ನೀಡುವ ಬದಲು 2 ಲಕ್ಷ ರೂಪಾಯಿಗೆ ಹೆಚ್ಚಳ.

    3. ಅಪ್ರಾಪ್ತರು ವಾಹನ ಚಾಲನೆ ನಡೆಸಿ ಅಪಘಾತ ನಡೆಸಿದರೆ ವಾಹನ ಮಾಲೀಕರು ಅಥವಾ ಪೋಷಕರ ಮೇಲೆ ಕೇಸ್ ದಾಖಲಿಸುವುದು. ಒಂದು ವೇಳೆ ಪೋಷಕರಿಗೆ ತಿಳಿಯದೇ ಕೃತ್ಯ ಎಸಗಿದರೆ ಕೇಸ್ ದಾಖಲಿಸದೇ ಇರುವುದು. ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಈ ಪ್ರಕರಣಗಳನ್ನು ವಿಚಾರಣೆ ನಡೆಸುವುದು.

    4. ಅಪಘಾತಗಳಲ್ಲಿ ಗಾಯಗೊಂಡವರ ರಕ್ಷಣೆಗೆ ಧಾವಿಸುವವರ ಮೇಲೆ ಯಾವುದೇ ಕೇಸುಗಳನ್ನು ದಾಖಲಿಸಬಾರದು, ಪೊಲೀಸರು ಮತ್ತು ಆಸ್ಪತ್ರೆಗಳು ರಕ್ಷಿಸಿದವರ ಮಾಹಿತಿಯನ್ನು ಕೇಳಬಾರದು.

    5. ಕುಡಿದು ವಾಹನ ಚಾಲನೆ ಎಸಗಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ 10 ಸಾವಿರ ರೂ.ಗೆ ಏರಿಕೆ. ಈಗ 2 ಸಾವಿರ ರೂ. ವಿಧಿಸಲಾಗುತ್ತಿದೆ.

    6. ನಿರ್ಲಕ್ಷ್ಯ ವಾಹನ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತ 1 ಸಾವಿರ ರೂ. ನಿಂದ 5 ಸಾವಿರ ರೂ.ಗೆ ಏರಿಕೆ.

    7. ಚಾಲನಾ ಪರವಾನಿಗೆ ಇಲ್ಲದೆ, ವಾಹನ ಚಲಾಯಿಸಿದರೆ 500 ರೂ. ದಂಡದ ಬದಲು 5 ಸಾವಿರಕ್ಕೆ ಏರಿಕೆ.

    8. ಓವರ್ ಸ್ಪೀಡಿಂಗ್ ಗೆ ವಿಧಿಸಲಾಗುತ್ತಿದ್ದ ದಂಡ 400 ರೂ. ಬದಲು 1 ಸಾವಿರ ರೂ, 2 ಸಾವಿರ ರೂ.ಗೆ ಏರಿಕೆ.

    9. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 100 ರೂ. ಇದ್ದ ದಂಡವನ್ನು 1 ಸಾವಿರಕ್ಕೆ ಏರಿಕೆ.

    10. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ದಲ್ಲಿ 1 ಸಾವಿರದಿಂದ 5 ಸಾವಿರ ರೂ.ಗೆ ದಂಡ ಏರಿಕೆ.

    11. ಅಪಘಾತ ಸಂದರ್ಭಗಳಲ್ಲಿ ಎಲ್ಲಾ ಗಾಯಗೊಂಡ, ಸಾವನ್ನಪ್ಪಿದ ವ್ಯಕ್ತಿಗಳಿಗೆ ಕಡ್ಡಾಯ ವಿಮೆ.

    12.ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ವಾಹನ ಬದಲಾವಣೆ ಮಾಡಿಕೊಡಲು ಅನುಮತಿ ನೀಡಬೇಕು.

    13. ಕಳಪೆ ಕಾಮಗಾರಿ ಹಾಗೂ ರಸ್ತೆಯನ್ನು ಸರಿಯಾಗಿ ನಿರ್ಮಾಣ ಮಾಡದೇ ಸಂಭವಿಸುವ ಅಪಘಾತಗಳಲ್ಲಿ ಕಾಮಗಾರಿ ನಡೆಸಿದ ಕಂಟ್ರಾಕ್ಟರ್, ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಹೊಣೆಯಾಗಿಸುವುದು.

    14. ಅಪಘಾತ ಸಂಭವಿಸಿದ 6 ತಿಂಗಳ ಒಳಗಡೆ ಸಂತ್ರಸ್ತರಿಗೆ ವಿಮೆ ಮೊತ್ತ ಪಾವತಿ ಮಾಡುವಂತೆ ಅವಧಿ ನಿಗದಿ.

    15. 2016ರ ಮಸೂದೆಯಲ್ಲಿದ್ದ ಮೂರನೇ ವ್ಯಕ್ತಿ ವಿಮಾ ಯೋಜನೆ ರದ್ದು. ಈ ಹಿಂದಿನ ಮಸೂದೆಯಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ 5 ಲಕ್ಷ ರೂ. ಹಾಗೂ ಸಾವನ್ನಪ್ಪಿದ್ದ ವ್ಯಕ್ತಿಗೆ 10 ಲಕ್ಷ ರೂ. ವಿಮೆ ನೀಡಬೇಕಿತ್ತು.

    16. ಚಾಲನಾ ಪರವಾನಗಿ ಅವಧಿ ನವೀಕರಣವನ್ನು ಸುಲಭಗೊಳಿಸಲು ಅವಧಿ ಮುಗಿಯುವ ಒಂದು ತಿಂಗಳ ಮೊದಲು ಅಥವಾ ಅವಧಿ ಮುಗಿದ ಒಂದು ವರ್ಷದವರೆಗೆ ನವೀಕರಣಕ್ಕೆ ಅನುಮತಿ.

    17. ನಿಗದಿಪಡಿಸಿದ ಮಾನದಂಡದ ಪ್ರಕಾರ ಗುಣಮಟ್ಟದ ಭಾಗಗಳು ಅಥವಾ ಎಂಜಿನ್‍ಗಳು ಇಲ್ಲದೇ ಇದ್ದಲ್ಲಿ ಆ ವಾಹನಗಳನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಉತ್ಪಾದಕಾ ಕಂಪೆನಿಗಳಿಗೆ 500 ಕೋಟಿ ರೂ. ದಂಡ ವಿಧಿಸಲು ಅವಕಾಶ.

    18. ವಾಣಿಜ್ಯ ವಾಹನಗಳ ಗರಿಷ್ಠ ಬಳಕೆ ಅವಧಿ 20 ವರ್ಷಕ್ಕೆ ಸೀಮಿತಗೊಳಿಸಿರುವುದು

  • ರಾಹುಲ್ ಭಾಷಣದ ವೇಳೆ ಮೋದಿ ನಕ್ಕಿದ್ದೇಕೆ?

    ರಾಹುಲ್ ಭಾಷಣದ ವೇಳೆ ಮೋದಿ ನಕ್ಕಿದ್ದೇಕೆ?

    ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸಗೊತ್ತುವಳಿ ನಿರ್ಣಯ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರ ಗಮನ ಸೆಳೆದರು. ಆದರೆ ಈ ವೇಳೆ ಬಹುಕಾಲ ಸಮ್ಮನೆ ಕುಳಿತ್ತಿದ್ದ ಪ್ರಧಾನಿ ಮೋದಿ ಒಮ್ಮೆಲೆ ರಾಹುಲ್ ಮಾತು ಕೇಳಿ ನಗು ಬೀರಿದ್ದರು.

    ಭಾಷಣದ ಆರಂಭದಿಂದಲೂ ಗಂಭೀರ ಆರೋಪಗಳನ್ನು ಮಾಡಿದ ರಾಹುಲ್ ಗಾಂಧಿ, ಮೋದಿ ಹಲವು ವಿಷಯಗಳಲ್ಲಿ ಮೌನವಹಿಸಿದ್ದಾರೆ. ಆದರೆ ಅವರು ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವ ಶಕ್ತಿ ಹೊಂದಿಲ್ಲ. ನನ್ನ ಕಣ್ಣಿನಿಂದ ಮೋದಿ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

    ರಾಹುಲ್ ಭಾಷಣದ ವೇಳೆ ಬಿಜೆಪಿ ಸಂಸದರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಮೂಡಿಸಿದ್ದರೂ ಸಹ ಮೋದಿ ಗಂಭೀರವಾಗಿ ರಾಹುಲ್ ಭಾಷಣವನ್ನು ಆಲಿಸುತ್ತಿದ್ದರು. ಆದರೆ ಪ್ರಧಾನಿಗಳು ತಮ್ಮ ಕಣ್ಣಿನಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ ಎಂದಾಕ್ಷಣ ಮೋದಿ ನಕ್ಕು ಸುಮ್ಮನಾದರು.

    ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದ ರಾಹುಲ್, ಹಿಂದೂಸ್ತಾನ ಮಹಿಳೆಯರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಎಡವಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಮಹಿಳೆಯರ ದೌರ್ಜನ್ಯ, ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮೊದಲು ಈ ರೀತಿಯ ಪ್ರಕರಣಗಳು ದೇಶದಲ್ಲಿ ನಡೆದಿರಲಿಲ್ಲ. ಮಹಿಳೆಯರ ರಕ್ಷಣಾ ವಿಚಾರದಲ್ಲಿ ಪ್ರಧಾನಿ ಮೋದಿ ಎಡವಿದ್ದಾರೆ. ದಲಿತ ಮತ್ತು ಆದಿವಾಸಿ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಸತತವಾಗಿ ನಡೆಯುತ್ತಿವೆ. ಬಿಜೆಪಿ ಮಂತ್ರಿಗಳ ಹೆಸರುಗಳು ಅತ್ಯಾಚಾರದಂತಹ ಪ್ರಕರಣದಲ್ಲಿ ಕೇಳಿ ಬರುತ್ತಿವೆ. ಎಲ್ಲದರ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ವಿಚಾರದಲ್ಲಿ ಮಾತ್ರ ಮೌನವಾಗಿದ್ದಾರೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಭಾರತೀಯರು ಅಲ್ಲವೇ ಎಂದು ಪ್ರಶ್ನಿಸಿದರು. ಈ ರೀತಿಯ ಪ್ರಕರಣಗಳು ದೇಶಕ್ಕೆ ಶೋಭೆ ತರುವುದಿಲ್ಲ. ಕೊಲೆಗಡುಕರಿಗೆ ಸಚಿವರೇ ಹಾರ ಹಾಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

  • ಯುಪಿಯಂತೆ ಕೇಂದ್ರದ ಸಹಕಾರ ಪಡೆಯದೇ ಸರ್ಕಾರ ಸಾಲಮನ್ನಾ ಮಾಡಲಿ: ಸಿಎಂಗೆ ಬಿಎಸ್‍ವೈ ತಿರುಗೇಟು

    ಯುಪಿಯಂತೆ ಕೇಂದ್ರದ ಸಹಕಾರ ಪಡೆಯದೇ ಸರ್ಕಾರ ಸಾಲಮನ್ನಾ ಮಾಡಲಿ: ಸಿಎಂಗೆ ಬಿಎಸ್‍ವೈ ತಿರುಗೇಟು

    ಬೆಂಗಳೂರು: ಸಾಲಮನ್ನಾ ಮಾಡಲು ಕೇಂದ್ರದ ಸಹಾಯ ಕೇಳಿದ ಸಿಎಂ ಕುಮಾರಸ್ವಾಮಿ ಅವರಿಗೆ ವಿಪಕ್ಷ ನಾಯಕ ಯಡಿಯೂರಪ್ಪ ತಿರುಗೇಟು ನೀಡಿದ್ದು, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಸರ್ಕಾರ ಸಾಲಮನ್ನಾ ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ. ಅಲ್ಲಿನ ಸರ್ಕಾರದಂತೆ ರಾಜ್ಯ ಸರ್ಕಾರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ಕೇಂದ್ರ ಸರ್ಕಾರ ಈಗಾಗಲೇ ಸಾಲಮನ್ನಾ ವಿಚಾರ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದು ಎಂದು ಸ್ಪಷ್ಟಪಡಿಸಿದೆ. ಸಾಲಮನ್ನಾಗೆ ಕೇಂದ್ರ ಹಣ ನೀಡಲ್ಲ ಎಂದು ಗೊತ್ತಿದ್ದರೂ ಸಿಎಂ ಕುಮಾರಸ್ವಾಮಿ ಅವರು ಗೊಂದಲ ಮೂಡಿಸಲು ಹೀಗೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಹಲವು ಭರವಸೆ ನೀಡಿ ಸಿಎಂ ಆಗಿದ್ದಾರೆ. ಆದರೆ ಈಗ ಅಪ್ಪ ಮಕ್ಕಳು ನಮಗೆ ಕಡಿಮೆ ಸ್ಥಾನ ಇದೆ. ಕಾಂಗ್ರೆಸ್ ಪಕ್ಷವನ್ನು ಕೇಳಬೇಕು ಎಂದು ಹೇಳುತ್ತಿದ್ದಾರೆ. ಖುರ್ಚಿಗಾಗಿ ಸಿಎಂ ಆಗಿ ಈಗ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಬಜೆಟ್ ಮಂಡನೆ ವಿಚಾರದ ಜಗಳಕ್ಕೆ ಪ್ರತಿಕ್ರಿಯಿಸಿದ ಬಿಎಸ್‍ವೈ, ಸಿದ್ದರಾಮಯ್ಯ ಪೂರಕ ಬಜೆಟ್ ಮಂಡಿಸಿ ಅಂತಿದ್ದಾರೆ. ಆದರೆ ಡಿಸಿಎಂ ಸೇರಿ ಕಾಂಗ್ರೆಸ್ ನವರೇ ಬಜೆಟ್ ಮಂಡಿಸಲಿ ಅಂತಿದ್ದಾರೆ. ಇದನ್ನು ನೋಡಿದರೆ ಸರ್ಕಾರ ಗೊಂದಲದ ಗೂಡಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಕೊಟ್ಟ ಭರವಸೆ ಮರೆಯಬಾರದು. ರಾಜ್ಯದ ಜನ ಯಾವಾಗ ಭರವಸೆ ಈಡೇರಿಸುತ್ತಾರೆ ಎಂದು ಕಾದು ನೋಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ರೈತರ ಸಾಲಮನ್ನಾದ ಹಣ ಇನ್ನು ಬಿಡುಗಡೆಯಾಗಿಲ್ಲ. ಯಾವುದೇ ಕಾರಣಕ್ಕೂ ಸಿಎಂ ಕೊಟ್ಟ ಭರವಸೆಯಿಂದ ಹಿಂದೆ ಹೋಗಬಾರದು. ಬಜೆಟ್ ಮುನ್ನ ಜೆಡಿಎಸ್ ಕಾಂಗ್ರೆಸ್ ಪ್ರಣಾಳಿಕೆ ಸಿಎಂ ಓದಬೇಕು. ಬಜೆಟ್ ವರೆಗೂ ನಾವು ಕಾಯುತ್ತೇವೆ. ಒಂದು ವೇಳೆ ಕೊಟ್ಟ ಭರವಸೆ ಈಡೇರಿಸದೇ ಇದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು!

    ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು!

    ನವದೆಹಲಿ: ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯನ್ನು ತಡೆಯಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ನಡೆಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.

    ಕಾಂಗ್ರೆಸ್ ಒಂದೊಮ್ಮೆ ಕೇವಲ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದರೆ, ಸ್ವಾತಂತ್ರ್ಯ ನಂತರ ಅತೀ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದಂತಾಗುತ್ತದೆ. ಎರಡನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆ ಮಾಡದಂತೆ ತಡೆಯುವ ಮೂಲಕ ಸಮಾನ ಮನಸ್ಸಿನ ಇತರೇ ಪಕ್ಷಗಳೊಂದಿಗೆ `ಮಹಾಮೈತ್ರಿ’ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ ಎನ್ನಲಾಗಿದೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ರೂಪುಗೊಳ್ಳಲಿರುವ ಮಹಾಮೈತ್ರಿಗೆ ಕಾಂಗ್ರೆಸ್ ಹಿರಿಯ ನಾಯಕ ಎಕೆ ಅ್ಯಂಟನಿ ನೇತೃತ್ವದ ಹಿರಿಯರ ಸಮಿತಿ ದೇಶಾದ್ಯಂತ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳಿಂದ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲು ಮುಂದಾಗಿದೆ. ಕಾಂಗ್ರೆಸ್ ಕಮಿಟಿ ನೀಡುವ ಸಲಹೆ ಮೇರೆಗೆ ರಾಹುಲ್ ಗಾಂಧಿ ಅವರು ಮೈತ್ರಿ ಮಾಡಿಕೊಳ್ಳುವ ಅಂತಿಮ ತೀರ್ಮಾನ ಮಾಡಲಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕರ ಸಮಿತಿ ಮತ್ತೊಂದು ಹಂತದಲ್ಲಿ ಕ್ಷೇತ್ರವಾರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಸಿದ್ಧತೆ ನಡೆಸುತ್ತಿದ್ದು, ಉತ್ತಮ ಹಿನ್ನೆಲೆ ಹೊಂದಿರುವ, ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡುತ್ತಿದ್ದು, ಇದು ಮಹಾಮೈತ್ರಿಗೆ ಸೂಚನೆ ಎನ್ನಲಾಗಿದೆ. ಆದರೆ 2014 ರ ಚುನಾವಣೆಯಲ್ಲಿ ಮೋದಿ ಅಲೆ ನಡುವೆಯೂ ಗೆದ್ದು ಬೀಗಿದ್ದ 44 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

    ಪ್ರಮುಖವಾಗಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಈ ಮೈತ್ರಿ ಪರಿಣಾಮಕಾರಿಯಾಗಿ ರೂಪುಗೊಳ್ಳಲು ಸಿದ್ಧತೆ ನಡೆಸಿದೆ. ಈ ಮೈತ್ರಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹತ್ವದ ಸ್ಥಾನ ಪಡೆಯಲು ಚಿಂತನೆ ನಡೆಸಿದೆ. ಆದರೆ ದಕ್ಷಿಣ ರಾಜ್ಯಗಳಾದ ತೆಲಂಗಾಣದಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ನೀಡಲು ಮುಂದಾಗಿದೆ. ಇದು ರಾಹುಲ್ ಗಾಂಧಿ ಅವರ ಮಹಾಮೈತ್ರಿಗೆ ಸವಾಲಾಗಿದೆ.

    ಮಹಾಮೈತ್ರಿಯಲ್ಲಿ ಪ್ರಧಾನಿ ಪಟ್ಟಕ್ಕಾಗಿ ರಾಹುಲ್ ಗಾಂಧಿ ಈ ಹಿಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಸಹ ಮೈತ್ರಿ ಮುಂದಾಗಿರುವ ಹಲವು ಪಕ್ಷಗಳಲ್ಲಿ ಈ ಕುರಿತು ಅಸಮಾಧಾನ ಇರುವ ಸಾಧ್ಯತೆಗಳಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಂತಹ ನಾಯಕರು ಈ ಕುರಿತು ಒಮ್ಮತ ವ್ಯಕ್ತಪಡಿಸಬೇಕಾದ ಅನಿವಾರ್ಯತೆ ಇದೆ.

  • ಆಧಾರ್ ಕಡ್ಡಾಯದಿಂದ ದೇಶದ ಭದ್ರತೆಗೆ ಅಪಾಯ: ಸುಬ್ರಮಣಿಯನ್ ಸ್ವಾಮಿ

    ಆಧಾರ್ ಕಡ್ಡಾಯದಿಂದ ದೇಶದ ಭದ್ರತೆಗೆ ಅಪಾಯ: ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ಎಲ್ಲದಕ್ಕೂ ಆಧಾರ್ ಕಡ್ಡಾಯಗೊಳಿಸಿರುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಾಗುತ್ತದೆ ಎಂದು ರಾಜ್ಯಸಭಾ ಬಿಜೆಪಿ ಸಂಸದ  ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಆಧಾರ್ ಕಡ್ಡಾಯಗೊಳಿಸಿರುವುದರಿಂದ ದೇಶದ ಭದ್ರತೆಗೆ ಯಾವ ರೀತಿಯಾಗಿ ಅಪಾಯವಿದೆ ಎಂದು ವಿವರಿಸಿ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ,

    ವಿವಿಧ ಸೇವೆಗಳನ್ನು ಹಾಗೂ ಸಮಾಜ ಕಲ್ಯಾಣ ಯೋಜನೆಯನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವ ವಿಷಯವು ಸವಾಲು ಆಗುವುದರಿಂದ ಸುಪ್ರೀಂ ಕೊರ್ಟ್ ರದ್ದು ಪಡಿಸಲಿದೆ ಎಂದು  ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಆಧಾರ್ ಮಾಹಿತಿ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕರಿಂದ ಹಿಗ್ಗಾಮುಗ್ಗ ಥಳಿತ, ಸರ್ಜರಿಯೇ ಮಾಡಿಸಬೇಕಾಯ್ತು

    ಮೊಬೈಲ್ ಫೋನ್ ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಸೂಚಿಸಿದೆ. ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯ ಗೊಳಿಸುವುದನ್ನು ಪ್ರಶ್ನಿಸಿರುವ ಕೋರ್ಟ್ ಎಲ್ಲಾ ಅರ್ಜಿಗಳನ್ನು ಸಂವಿಧಾನ ಪೀಠ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದು ಹೇಳಿದೆ.

    ಇದನ್ನೂ ಓದಿ: ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ

    ಈ ಹಿಂದೆಯೂ ಸುಬ್ರಮಣಿಯನ್ ಸ್ವಾಮಿಯವರು ಆಧಾರ್ ವಿರುದ್ಧ ಮಾತನಾಡಿದ್ದರು. ಆಧಾರ್ ವಿವರಗಳು ವಿದೇಶಿ ಗುಪ್ತಚರ ಸಂಸ್ಥೆಗಳ ಪಾಲಾಗುವ ಅಪಾಯವಿದೆ ಎಂದು ವಾದಿಸಿದ್ದರು.

     

  • ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್: ಪ್ರಕಾಶ್ ಜಾವ್ಡೇಕರ್

    ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್: ಪ್ರಕಾಶ್ ಜಾವ್ಡೇಕರ್

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಸರ್ಕಾರ. ಸಿದ್ದರಾಮಯ್ಯ ಅಲ್ಲ ನಿದ್ದೆರಾಮಯ್ಯ. ರಾಜ್ಯದಲ್ಲಿ ಸುರಕ್ಷತೆ ಇಲ್ಲ. ಆಡಳಿತ ವಿರೋಧಿ ಅಲೆ ಇದೆ. ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

    ಬೆಂಗಳೂರಿನ ಶೇಷಾದ್ರಿಪುರಂನ ಗುರುರಾಜ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಿಜೆಪಿ ನಾಯಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗೂ, 2018 ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಆಗ ಯುಪಿಎ ಸರ್ಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಪರಿಸ್ಥಿತಿ ಬೇರೆ ಆಗಿದೆ. ಪಕ್ಷದಿಂದ ದೂರ ಸರಿದವರೆಲ್ಲಾ ವಾಪಸ್ ಬಂದಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರ್ಕಾರವಿದೆ. ಇಡೀ ರಾಷ್ಟ್ರದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲೇಬೇಕು ಎಂದು ಹೇಳಿದರು.

    ರೈತರ ಸಾಲ ಮನ್ನಾ ಎಂಬುದು ಅದು ಬರೀ ನಾಟಕ. ರೈತರು ಪೂರ್ಣ ಸಾಲ ಮನ್ನಾ ಕೇಳಿದ್ರೆ, ಈ ಸರ್ಕಾರ ಸ್ವಲ್ಪ ಭಾಗ ಮಾತ್ರ ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಬರ ಪರಿಹಾರದ ಹಣ ಚಾಕೋಲೆಟ್, ಲಾಲಿಪಾಪ್ ಕೊಳ್ಳಲೂ ಸಾಧ್ಯವಾಗಷ್ಟು ಕಡಿಮೆ ಪ್ರಮಾಣದಲ್ಲಿ ವಿತರಣೆಯಾಗಿದೆ. ಕರ್ನಾಟಕದಲ್ಲಿ ಸಾಮಾಜಿಕ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ. 18ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಗಳಾಗಿವೆ. ಇದರ ಬಗ್ಗೆ ಅರಿವು ಮೂಡಿಸಲು ನಾವು ಬೈಕ್ ರ‍್ಯಾಲಿ ಮಾಡಿದರೆ ಅದನ್ನು ಪ್ರತಿಬಂಧಿಸುತ್ತಾರೆ ಎಂದರು.

    ಇದೇ ವೇಳೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತನಾಡಿ, ನವೆಂಬರ್ ನಿಂದ ಡಿಸೆಂಬರ್ ಒಳಗಾಗಿ ಎಲ್ಲಾ 224 ಕ್ಷೇತ್ರಗಳಿಗೆ ಪ್ರವಾಸ ಮಾಡಿ. ಚುನಾವಣಾ ಸಿದ್ಧತೆ ಮಾಡಬೇಕು, ಕಾರ್ಯಕರ್ತರನ್ನು ಅಣಿಗೊಳಿಸಬೇಕು. ಆ ಜವಾಬ್ದಾರಿಯನ್ನು ಹಾಲಿ ಮತ್ತು ಮಾಜಿ ಶಾಸಕರು ಮತ್ತು ಸಂಸದರು ನಿರ್ವಹಿಸಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಬೇಡ. ಒಂದು ಕ್ಷೇತ್ರಗಳಲ್ಲಿ ಎಷ್ಟು ಜನ ಆಕಾಂಕ್ಷಿಗಳು ಇರ್ತಾರೋ ಎಲ್ಲರೂ ಒಂದೇ ಕಾರಿನಲ್ಲಿ ಓಡಾಡಿ. ಬಿಜೆಪಿ ಅಭ್ಯರ್ಥಿಯ ಗೆಲುವು ನಮಗೆ ಮುಖ್ಯವಾಗಬೇಕು ಅಷ್ಟೇ ಎಂದು ಹೆಳಿದರು.

    224 ಕ್ಷೇತ್ರಗಳ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ಪಡೆಯಲಿರುವ ಚುನಾವಣಾ ಉಸ್ತುವಾರಿಗಳು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ-ಉಸ್ತುವಾರಿ ಪಿಯೂಷ್ ಗೋಯೆಲ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಹಾಗೂ ಸಭೆಯಲ್ಲಿ ಬಿಜೆಪಿಯ ಮಾಜಿ, ಹಾಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದರು.

  • 50 ಸಾವಿರ ರೂ. ಹಣದ ವರ್ಗಾವಣೆಗೆ ಆಧಾರ್ ಕಡ್ಡಾಯ

    50 ಸಾವಿರ ರೂ. ಹಣದ ವರ್ಗಾವಣೆಗೆ ಆಧಾರ್ ಕಡ್ಡಾಯ

    ನವದೆಹಲಿ: ಪಾನ್ ಕಾರ್ಡ್ ಮತ್ತು ಆದಾಯ ತೆರಿಗೆ ವಿವರ ಸಲ್ಲಿಕೆಗೆ ಆಧಾರ್ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಈಗ ಬ್ಯಾಂಕ್ ಖಾತೆ ತೆರೆಯಲು ಮತ್ತು 50 ಸಾವಿರ ರೂ. ಹಣದ ವರ್ಗಾವಣೆಗೆ ಆಧಾರ್ ಅನ್ನು ಕಡ್ಡಾಯಗೊಳಿಸಿದೆ.

    ಬ್ಯಾಂಕ್ ಖಾತೆಗಳಿಗೆ ಆಧಾರ್ ಅನ್ನು ಈ ಹಿಂದೆ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಈಗ, 2017ರ ಡಿಸೆಂಬರ್ 31ರ ಒಳಗಡೆ ಕಡ್ಡಾಯವಾಗಿ ಖಾತೆಗೆ ಆಧಾರ್ ಜೋಡಣೆ ಮಾಡಬೇಕು. ಒಂದು ವೇಳೆ ಜೋಡಣೆ ಮಾಡದೇ ಇದ್ದರೆ ಬ್ಯಾಂಕ್ ಖಾತೆಯನ್ನು ಅಸಿಂಧುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ಕಂಪೆನಿಗಳು, ವ್ಯಕ್ತಿಗಳು, ಜೊತೆಯಾಗಿ ವ್ಯವಹಾರ ನಡೆಸುವ ಮಂದಿ 50 ಸಾವಿರ ರೂ. ಹಣದ ವ್ಯವಹಾರ ನಡೆಸಿದರೆ ಆಧಾರ್ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದೆ.

    ಜೂನ್ 1ರಿಂದ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಮತ್ತು ಪಾನ್ ಕಾರ್ಡ್ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆಧಾರ್ ನಂಬರ್ ನೀಡಬೇಕೆಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಈ ಹಿಂದೆ ತಿಳಿಸಿತ್ತು.

    2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವ ಮಂದಿಗೆ ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಲಾಗುವುದು ಎಂದು ಈಗಾಗಲೇ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

    ಕೇಂದ್ರ ಸರ್ಕಾರ ಈ ವರ್ಷದ ಏಪ್ರಿಲ್ 1ರ ಬಳಿಕ 2 ಲಕ್ಷ ರೂ. ನಗದು ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧ ಇದ್ದರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸಿದರೆ ಅಂತವರ ಮೇಲೆ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

    ಅಕ್ರಮವಾಗಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆಸಿದವರ ಮಾಹಿತಿಯನ್ನು blackmoneyinfo@incometax.gov.in ಇಮೇಲ್ ಮಾಡುವಂತೆ ತೆರಿಗೆ ಇಲಾಖೆ ಜನರಲ್ಲಿ ಕೇಳಿಕೊಂಡಿದೆ.

     

  • ಜಾನುವಾರು ಮಾರಾಟ ನಿಷೇಧ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

    ಜಾನುವಾರು ಮಾರಾಟ ನಿಷೇಧ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ಮಾಂಸದ ಉದ್ದೇಶದಿಂದ ಜಾನುವಾರು ಮಾರಾಟವನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ಎರಡು ವಾರಗಳಲ್ಲಿ ಉತ್ತರಿಸಬೇಕೆಂದು ಸೂಚಿಸಿದ್ದು, ಜುಲೈ 11ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ನ್ಯಾ.ಆರ್‍ಕೆ ಅಗರ್‍ವಾಲ್ ಮತ್ತು ನ್ಯಾ, ಎಸ್‍ಕೆ ಕೌಲ್ ಅವರಿದ್ದ ರಜಾಕಾಲದ ಪೀಠ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

    ಮಾಂಸ ಉದ್ದೇಶದಿಂದ ಜಾನುವಾರು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಹೈದರಾಬಾದ್ ಮೂಲದ ಫಾಹಿಮ್ ಖುರೇಷಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದ್ದು, ಈ ನಿರ್ಧಾರದಿಂದ ಮಾಂಸ ವ್ಯಾಪಾರೋದ್ಯಮಿಗಳಿಗೆ ಸಮಸ್ಯೆ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

  • ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಇನ್ನು ಮುಂದೆ ನಿಮಗೆ ಪಾನ್ ಕಾರ್ಡ್ ಸಿಗಲ್ಲ!

    ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಇನ್ನು ಮುಂದೆ ನಿಮಗೆ ಪಾನ್ ಕಾರ್ಡ್ ಸಿಗಲ್ಲ!

    ನವದೆಹಲಿ: ಪಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ವೇಳೆ  ಮತ್ತು ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

    ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿದೆ. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಹಣಕಾಸು ಮಸೂದೆಯ ಬಗ್ಗೆ ಬುಧವಾರ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ.

    ಕಳೆದ ಕೆಲ ವರ್ಷಗಳ ಐಟಿಆರ್ ಸಲ್ಲಿಕೆಯ ಆಧಾರ್ ಐಚ್ಚಿಕವಾಗಿತ್ತು. ಭಾರತದಲ್ಲಿ ವಿದೇಶಿ ಪ್ರಜೆಗಳು ತೆರಿಗೆ ಪಾವತಿಸುತ್ತಿರುವುದರಿಂದ ಈಗ ಕೆಲ ಪ್ರಶ್ನೆಗಳು ಎದ್ದಿದ್ದು ಈ ಸಮಸ್ಯೆಗೆ ಪರಿಹಾರ ಏನು ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.

    ಕೇಂದ್ರ ಸರ್ಕಾರ ಈಗ ಎಲ್ಲ ಸೇವೆಗಳಿಗೂ ಆಧಾರ್ ಕಡ್ಡಾಯಗೊಳಿಸುತ್ತಿದ್ದು, ಕೆಲ ದಿನಗಳ ಹಿಂದೆ ಬಡ ಮಹಿಳೆಯರು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಅಡಿಗೆ ಅನಿಲ(ಎಲ್ ಪಿಜಿ) ಸಂಪರ್ಕ ಪಡೆಯಯಲು ಆಧಾರ ಕಾರ್ಡ್ ಅನ್ನು ಕಡ್ಡಾಯಗೊಳಿಸಿತ್ತು.