Tag: Union Defense Minister

  • ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣನೆ

    ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣನೆ

    ಹುಬ್ಬಳ್ಳಿ: ಬೆಳಗಾವಿ (Belagavi) ಕರ್ನಾಟಕದ ಮಸ್ತಕ ಇದ್ದಂತೆ. ಇದು ಬಸವೇಶ್ವರ, ಅಕ್ಕ ಮಹಾದೇವಿ ಪರಂಪರೆಯ ನೆಲ. ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ (Karnataka) ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಬಣ್ಣಿಸಿದರು.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ರಾಣಿ ಚನ್ನಮ್ಮನ ಮಹಿಮೆ ವಿದೇಶಗಳಲ್ಲಿಯೂ ಇದೆ. ಚನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ. ವೇದಿಕೆಗೆ ಬರುವ ಮುಂಚೆ ನಾನು ರಾಯಣ್ಣನ ಪ್ರತಿಮೆ ಮತ್ತು ಸಮಾಧಿಗೂ ಮಾಲಾರ್ಪಣೆ ಮಾಡಿದೆ. ಇದು ನನ್ನ ಸೌಭಾಗ್ಯ. ವೀರತ್ವಕ್ಕೆ ಕರ್ನಾಟಕ ಹೆಸರುವಾಸಿ. ಕನ್ನಡಿಗ ಹನುಮಂತಪ್ಪ ಸಿಯಾಚಿಯಲ್ಲಿ ಹೋರಾಡಿದವರು. ಹನುಮಂತಪ್ಪನ ವೀರತ್ವ ಯಾರೂ ಮರೆಯೊಲ್ಲ. ಫಿಲ್ಡ್ ಮಾರ್ಷಲ್ ಕರಿಯಪ್ಪ ಸಹ ಹೆಸರುವಾಸಿ ಎಂದು ಹಾಡಿ ಹೊಗಳಿದರು. ಇದನ್ನೂ ಓದಿ: ಕಾಂಗ್ರೆಸ್ ಭಯದಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಕ್ರೆಡಿಟ್‌ ತೆಗೆದುಕೊಂಡ ಡಿಕೆಶಿ

    ಬೆಳಗಾವಿಯ ನೆಲದಲ್ಲಿ ನಾವು ಇವತ್ತು ಇದ್ದೇವೆ. ಇಂತಹ ಸ್ಥಳದಲ್ಲಿ ನಾವು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ತರುವ ಸಂಕಲ್ಪ‌ ಇಲ್ಲಿ ಮಾಡಬೇಕಿದೆ. ಕರ್ನಾಟಕದ ವಿಕಾಸ ಮೋದಿ ಮನಸ್ಸಿನಲ್ಲಿದೆ. ಅದಕ್ಕಾಗಿಯೇ ಕರ್ನಾಟಕಕ್ಕೆ ಅನೇಕ ಯೋಜನೆ ಕೊಟ್ಟಿದ್ದಾರೆ. ಕೈಗಾರಿಕಾ ಕಾರಿಡಾರ್‌ ಕೊಡುತ್ತಿದ್ದಾರೆ. ಇದರಿಂದ ಕರ್ನಾಟಕದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಈಗ ನೀರಿನ ಅಭಾವ ಇಲ್ಲ. ಪ್ರತಿ ಮನೆಗೆ ನೀರು, ಪ್ರತಿ ಜಮೀನಿಗೂ ನೀರಾವರಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್‌ನ ಹೇಳಿಕೆಯಲ್ಲಿ ಮತ್ತು ಕೆಲಸದಲ್ಲಿ ಅಂತರ ಇದೆ. ಆದರೆ ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಅದಕ್ಕಾಗಿ ಏನೇ ಅಡ್ಡಿಯಾದರೂ ಹಿಂದೆ ಸರಿಯುವುದಿಲ್ಲ. ನಾವು ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ. ಪ್ರಾಣ ಹೋದರೂ ಕೊಟ್ಟ ವಚನ ಬಿಡಲಾರೆವು. ಇದು ಬಿಜೆಪಿಯ ಧ್ಯೇಯ ವಾಕ್ಯ. ಇವತ್ತು ಭಾರತ ಏನಾದರೂ ಹೇಳಿದರೆ, ಜಗತ್ತು ಕಿವಿಗೊಟ್ಟು ಕೇಳುತ್ತದೆ. ಇಡೀ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ನಾವು ಭಯೋತ್ಪಾದನೆಯನ್ನೂ ಹೊಡೆದು ಹಾಕುತ್ತೇವೆ. ಪಿಎಫ್‌ಐ ಸಹ ಬ್ಯಾನ್ ಮಾಡಿದ್ದೇವೆ. ಭಯೋತ್ಪಾದಕರನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನಗೆ, ಕುಮಾರ ಬಂಗಾರಪ್ಪಗೆ ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ : ಮಧು ಬಂಗಾರಪ್ಪ

    ಕಾಂಗ್ರೆಸ್‌ನ ಓರ್ವ ಯುವ ನಾಯಕ (ರಾಹುಲ್‌ ಗಾಂಧಿ) ಇದ್ದಾರೆ ಗೊತ್ತಲ್ವಾ ನಿಮಗೆ. ಅವರು ಭಾರತ ಜೋಡೋ ಮಾಡುತ್ತಿದ್ದಾರೆ. ಅವರು ಭಾರತವನ್ನು ಜೋಡಿಸುವುದೇ ಆದಲ್ಲಿ ಕರಾಚಿ, ಲಾಹೋರ್‌ಗೆ ಹೋಗಬೇಕಿತ್ತು. ಭಾರತ ಯಾವತ್ತಿಗೂ ಒಂದಾಗಿಯೇ ಇದೆ. ಜನರ ಕಣ್ಣಲ್ಲಿ ಧೂಳು ಹಾರಿಸಿ ಆಡಳಿತ ಮಾಡೋದಲ್ಲ. ಜನರ ಕಣ್ಣಲ್ಲಿ ಕಣ್ಣಿಟ್ಟು ಆಡಳಿತ ಮಾಡಬೇಕು. ಅಂತಹ ಆಡಳಿತ ಮಾಡಿದ ಮೋದಿಯನ್ನು ಮುಗಿಸುತ್ತೇನೆ ಅಂತಾರೆ. ಆದರೆ ‌ಮೋದಿಗೆ ಖೆಡ್ಡಾ ತೋಡೋಕೆ ಹೋದರೆ, ಅದು ತಮಗೆ ತಾವೇ ಖೆಡ್ಡಾ ತೋಡಿಕೊಂಡಂತೆ ಎಂದು ಎಚ್ಚರಿಸಿದರು.

  • ಉರಿ ಸಿನಿಮಾ ನೋಡಿ  How’s the josh ಎಂದ ನಿರ್ಮಲಾ ಸೀತಾರಾಮನ್

    ಉರಿ ಸಿನಿಮಾ ನೋಡಿ How’s the josh ಎಂದ ನಿರ್ಮಲಾ ಸೀತಾರಾಮನ್

    ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಹು ನಿರೀಕ್ಷಿತಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾವನ್ನು ಮಾಜಿ ಸೈನಿಕರ ಜೊತೆ ನಗರದ ಸೆಂಟ್ರಲ್ ಸ್ಪಿರಿಟ್ ಮಾಲ್ ನಲ್ಲಿ ನೋಡಿದ್ದು, ಸಿನಿಮಾ ನೋಡಿದ ಬಳಿಕ ‘ಹೈ ಜೋಷ್’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಮಾಲ್‍ಗೆ ಪ್ರವೇಶ ನೀಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಾರ್ವಜನಿಕರು ಬೆಂಗಳೂರಿಗೆ ಸ್ವಾಗತ ಎಂದು ಶುಭಕೋರಿದರು. ಅಲ್ಲದೇ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಆದಿತ್ಯ ಧಾರ್ ನಿರ್ದೇಶನದ ಉರಿ ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಉಗ್ರರರನ್ನು ಹತ್ಯೆಗೈದ ಭಾರತೀಯ ಯೋಧರ ರೋಚಕ ಕಥೆಯನ್ನು ಸಿನಿಮಾವನ್ನಾಗಿ ರೂಪಿಸಲಾಗಿದೆ.

    ಸಿನಿಮಾ ನೋಡಿ ಮತ್ತಷ್ಟು ಉಲ್ಲಾಸಗೊಂಡಿದ್ದ ಸಚಿವೆ ನಿರ್ಮಲಾ ಅವರು, ‘ವಾಟ್ ಎ ಪವರ್ ಪ್ಯಾಕ್ಡ್ ಮೂವಿ’ ಎಂದಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ನಟನೆ ಮಾಡಿರುವ ವಿಕಿ ಕೌಶಲ್, ಯಾಮಿ ಗೌತಮ್, ಮೋಹಿತ್ ರೈನಾ, ಮತ್ತು ಪರೇಶ್ ರಾವಲ್ ಅವರು ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದಕ್ಕು ಮುನ್ನ ಟ್ವೀಟ್ ಮಾಡಿದ್ದ ಸಚಿವರು, ಕೊನೆಗೂ ಸಿನಿಮಾ ನೋಡಲು ಸಮಯವನ್ನ ಪಡೆದಿದ್ದಾಗಿ ಬರೆದುಕೊಂಡಿದ್ದರು.

    2016ರಲ್ಲಿ ಉರಿಯಲ್ಲಿ ನಡೆದ ಭಯೋತ್ಪಾದಕರ ದಾಳಿಯ ಪ್ರತಿಕವಾಗಿ ಭಾರತೀಯ ಸೈನ್ಯ ಪಾಕ್ ಆಕ್ರಮಿತ ಕಾಶ್ಮೀರ ನಸುಕಿನ ವೇಳೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಉಗ್ರರನ್ನು ಹೊಡೆದುರುಳಿಸಿತ್ತು. ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ‘ಹೌ ಇಸ್ ದಿ ಜೋಷ್’ ಎಂದು ಕೇಳುವಾಗ ಪ್ರತಿಕ್ರಿಯೆಯಾಗಿ ‘ಹೈ ಸರ್’ ಎಂದು ಕೇಳುವುದೇ ರೋಮಾಂಚನವಾಗಿರುತ್ತದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv