Tag: Union Budget 2019

  • 26 ಬಿಜೆಪಿ ಸಂಸದರಿದ್ದರೂ ರಾಜ್ಯ ಅತಿದೊಡ್ಡ ಲೂಸರ್ ನಂತೆ ಕಾಣಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ

    26 ಬಿಜೆಪಿ ಸಂಸದರಿದ್ದರೂ ರಾಜ್ಯ ಅತಿದೊಡ್ಡ ಲೂಸರ್ ನಂತೆ ಕಾಣಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ: 26 ಬಿಜೆಪಿ ಸಂಸದರಿದ್ದರೂ ನಮ್ಮ ರಾಜ್ಯ ಅತಿದೊಡ್ಡ ಲೂಸರ್ ನಂತೆ ಕಾಣಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಬಜೆಟ್ ಕುರಿತು ಕಿಡಿಕಾರಿದ್ದಾರೆ.

    ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಅವರು, ಈ ಬಾರಿಯ ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ. ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಆದರೆ ತೆರಿಗೆಗೆ ಪ್ರತಿಯಾಗಿ ನಮಗೆ ಏನೂ ಪಾವತಿಯಾಗಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಭಾರೀ ನಿರೀಕ್ಷೆ ಇತ್ತು. 26 ಬಿಜೆಪಿ ಸಂಸದರಿದ್ದರೂ ಬಜೆಟ್‍ನಲ್ಲಿ ರಾಜ್ಯವು ಸೋತಂತೆ ಆಗಿದೆ ಎಂದು ಹೇಳಿದ್ದಾರೆ.

    ಸಮಾನತೆಯನ್ನು ಸಾರಿದ ಬಸವಣ್ಣನವರ ಹೆಸರನ್ನು ಬಜೆಟ್ ಮಂಡನೆಯ ಸಂದರ್ಭದಲ್ಲಿ ವಿತ್ತ ಸಚಿವರು ಉಲ್ಲೇಖ ಮಾಡಿದ್ದು ಸ್ವಾಗತಾರ್ಹ. ಆದರೆ ನಿರ್ಮಲಾ ಸೀತಾರಾಮನ್ ಅವರು ಬಸವಣ್ಣನವರ ಮೂಲ ಆಶಯವಾಗಿದ್ದ ಸಮಬಾಳು ತತ್ವಕ್ಕೆ ಅನುಗುಣವಾಗಿ ತಾವು ಪ್ರತಿನಿಧಿಸಿರುವ ನಾಡಿನ ಜನತೆಗೆ ಯಾವುದೇ ಕಾರ್ಯಕ್ರಮಗಳನ್ನು ನೀಡದಿರುವುದು ನಿರಾಸೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಬಜೆಟ್ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಆದರೆ ಈ ಬಾರಿ ಬಜೆಟ್‍ನಲ್ಲಿ ಬೆಲೆ ಇಳಿಕೆಗಿಂತ ಬೆಲೆ ಏರಿಕೆಯಾಗಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ಸಂಕ್ಷಿಪ್ತವಾಗಿದೆ. ಎಲ್ಲವೂ ಸೂರ್ಯನ ಕೆಳಗಿದೆ. ಆದರೆ ಯಾವುದೂ ಕೈಗೆ ಸಿಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    “ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಕೇಂದ್ರ ಬಜೆಟ್ ನರೇಂದ್ರ ಮೋದಿ ಸರ್ಕಾರದ ಹುಸಿ ಹೆಗ್ಗಳಿಕೆಗಳ ಮಹಾಪೂರದ ಗುಚ್ಚ. ರೈತರು, ಬಡವರು ಮಧ್ಯಮ ವರ್ಗಗಳಿಗೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಗುರುತರ ಹೊಸ ಯೋಜನೆಗಳಿಲ್ಲ. 2030ಕ್ಕೆ ಏನಾಗಬಹುದೆಂಬ ಊಹೆಗಿಂತ 2019ರಲ್ಲಿ ಏನು ದೇಶಕ್ಕೆ ಕೊಡುವಿರಿ ಎಂಬುದರ ಸ್ಪಷ್ಟತೆ ಇಲ್ಲ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

  • ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ ಕೇಂದ್ರದ ಬಜೆಟ್

    ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ ಕೇಂದ್ರದ ಬಜೆಟ್

    – ಕಾಂಗ್ರೆಸ್ಸಿಗರಿಗೆ ದೃಷ್ಟಿಯೇ ಇಲ್ಲ, ದೂರದೃಷ್ಟಿ ಎಲ್ಲಿಂದ ಬರಬೇಕು
    – ಮಾಜಿ ಸಿಎಂ, ಡಿಸಿಎಂ ವಿರುದ್ಧ ಶಾಸಕ ಕಿಡಿ

    ಬೆಂಗಳೂರು: ಕೇಂದ್ರದ ಬಜೆಟ್ ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗಿದೆ. ರೈತ ಭಾರತ, ಯುವ ಭಾರತ, ಮಹಿಳಾ ಭಾರತ ಬಜೆಟ್‍ನಲ್ಲಿ ಕಾಣುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಬಡವರಿಗೆ ಏನೂ ಮಾಡಿಲ್ಲ ಅಂತ ಆರೋಪಿಸಿದ್ದಾರೆ. ಬಡವರಿಗೆ 1.95 ಕೋಟಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ತಂದಿದ್ದು ಕಾಂಗ್ರೆಸ್ ಅಲ್ಲ ಬಿಜೆಪಿ ಎಂದು ಕುಟುಕಿದರು.

    ಕಾಂಗ್ರೆಸ್‍ನವರಿಗೆ ದೃಷ್ಟಿಯೇ ಇಲ್ಲ. ಇನ್ನು ದೂರದೃಷ್ಟಿ ಎಲ್ಲಿಂದ ಬರಬೇಕು. ವಿರೋಧ ಮಾಡಬೇಕು ಅಂತ ವಿರೋಧ ಮಾಡುವುದು ಸರಿಯಲ್ಲ. ಅವರಿಗೆ 2019 ಬಜೆಟ್ ಅರ್ಥನೇ ಆಗಿಲ್ಲ ಎಂದು ವ್ಯಂಗ್ಯವಾಡಿದರು.

    ಬಜೆಟ್‍ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳಲ್ಲೂ ರಾಜ್ಯಕ್ಕೂ ಫಲ ಸಿಗುತ್ತಿದೆ. ಯುಪಿಎ ಅವಧಿಯಲ್ಲಿ ತೈಲ ಬೆಲೆ ಹೆಚ್ಚಿಸಿದ್ದಾಗ ಕಾಂಗ್ರೆಸ್ ನವರು ಬಾಯಿ ಮುಚ್ಚಿಕೊಂಡಿದ್ದರು. ಈಗ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

    ಪುತ್ತೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಸಂಬಂಧ ಎಬಿವಿಪಿ ಸಂಘಟನೆ ನಿಷೇಧಕ್ಕೆ ಆಗ್ರಹ ಕೇಳಿ ಬರುತ್ತಿದೆ. ಆರೋಪಿಗಳು ಸಂಘಟನೆಯಲ್ಲಿ ಇದ್ದರು ಅಂದರೆ ಅವರು ಏನಾಗಿದ್ದರು ಎನ್ನುವುದು ಮುಖ್ಯವಾಗುತ್ತದೆ. ಅವರ ಅಪರಾಧಕ್ಕೂ ಸಂಘಟನೆಗೂ ಸಂಬಂಧವಿಲ್ಲ. ಎಬಿವಿಪಿ ಈಗಾಗಲೇ ಆರೋಪಿಗಳು ನಮ್ಮ ಸದಸ್ಯರಲ್ಲ ಎಂದು ಸ್ಪಷ್ಟಪಡಿಸಿದೆ. ಕಾನೂನು ತನ್ನ ಕೆಲಸ ಮಾಡುತ್ತದೆ ಹಾಗೂ ಈ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

  • ಅರ್ಧ ಕುದುರೆ, ಇನ್ನರ್ಧ ವ್ಯಂಗ್ಯ ಚಿತ್ರ- ಮೋದಿ ವಿರುದ್ಧ ರಮ್ಯಾ ಪೋಸ್ಟ್

    ಅರ್ಧ ಕುದುರೆ, ಇನ್ನರ್ಧ ವ್ಯಂಗ್ಯ ಚಿತ್ರ- ಮೋದಿ ವಿರುದ್ಧ ರಮ್ಯಾ ಪೋಸ್ಟ್

    ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಮಂಡ್ಯ ಮಾಜಿ ಸಂಸದೆ, ನಟಿ, ರಮ್ಯಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಹಾಕಿದ್ದಾರೆ.

    ರಮ್ಯಾ ಅವರು ದಿವ್ಯ ಸ್ಪಂದನ/ರಮ್ಯಾ ಫೇಸ್‍ಬುಕ್ ಖಾತೆಯಲ್ಲಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಒಂದು ಭಾಗದಲ್ಲಿ ಕುದುರೆ ಹಿಂಭಾಗವಿದ್ದು ಅದನ್ನು 2014ರಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆ ಅಂತ ಹೇಳಿದ್ದಾರೆ. ಮತ್ತೊಂದು ಭಾಗದಲ್ಲಿ ಕುದುರೆಯ ವ್ಯಂಗ್ಯ ಚಿತ್ರವಿದ್ದು, ಅದನ್ನು 2019ರ ನೈಜತೆ (ರಿಯಾಲಿಟಿ) ಎಂದು ಬರೆದಿದ್ದಾರೆ. ಇದನ್ನು ಓದಿ: ಮಂಡ್ಯ ಮನೆಯನ್ನು ರಾತ್ರೋರಾತ್ರಿ ಖಾಲಿ ಮಾಡಿದ್ದಕ್ಕೆ ಕಾರಣ ತಿಳಿಸಿದ ರಮ್ಯಾ

    ಈ ಪೋಸ್ಟ್ ನೋಡಿದ ನೆಟ್ಟಿಗರಲ್ಲಿ ಕೆಲವರು ಹೊಗಳಿದರೆ ಕೆಲವರು ಕಿಡಿಕಾರಿದ್ದಾರೆ. ಯಾರು ಮೇಡಂ ಈ ಕಲಾವಿದ ಥೇಟ್ ನಿಮ್ಮ ರೀತಿಯಲ್ಲಿ ಚಿತ್ರ ಬಿಡಿಸಿದ್ದಾನೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನು ಓದಿ: ಸ್ಯಾಂಡಲ್‍ವುಡ್ ಕ್ವೀನ್‍ಗೆ ಫುಲ್‍ಕ್ಲಾಸ್- ರಮ್ಯಾ ಬರ್ತ್ ಡೇ ನಮ್ಗೆ ಕರಾಳ ದಿನವೆಂದ್ರು ಅಭಿಮಾನಿ

    ರಮ್ಯಾ ಅವರ ಪೋಸ್ಟ್ ಗೆ ಎರಡು ಗಂಟೆಯಲ್ಲಿ 3,200ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, 560 ಜನ ಕಮೆಂಟ್, 495 ಮಂದಿ ಶೇರ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಈ ಬಜೆಟ್ ಜಸ್ಟ್ ಟ್ರೇಲರ್ ಮತ್ತೆ ಆಡಳಿತಕ್ಕೆ ಬಂದ್ರೆ ಇನ್ನಷ್ಟು ಅಭಿವೃದ್ಧಿ: ಪ್ರಧಾನಿ ಮೋದಿ

    ಈ ಬಜೆಟ್ ಜಸ್ಟ್ ಟ್ರೇಲರ್ ಮತ್ತೆ ಆಡಳಿತಕ್ಕೆ ಬಂದ್ರೆ ಇನ್ನಷ್ಟು ಅಭಿವೃದ್ಧಿ: ಪ್ರಧಾನಿ ಮೋದಿ

    ನವದೆಹಲಿ: ಇದು ಕೇವಲ ಮಧ್ಯಂತರ ಬಜೆಟ್ ಹಾಗೂ ಟ್ರೇಲರ್ ಇದ್ದಂತೆ. ಚುನಾವಣೆ ಬಳಿಕ ನಾವು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಲೋಕಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಮಾತನಾಡಿದ ನರೇಂದ್ರ ಮೋದಿ ಅವರು, ಬಜೆಟ್ ಮಂಡಿಸಲು ತೆರಿಗೆ ಪಾವತಿಸಿದ 12 ಕೋಟಿ ರೈತರು, ಅವರ ಕುಟುಂಬಸ್ಥರಿಗೆ, 3 ಕೋಟಿ ರೂ. ವಾರ್ಷಿಕ ವೇತನ ಹೊಂದಿರುವ ಜನರಿಗೆ ಮತ್ತು 40 ಕೋಟಿ ಶ್ರಮಿಕರಿಗೆ ನೇರವಾಗಿ ಸರ್ಕಾರದ ಯೋಜನೆಗಳು ಮುಟ್ಟಲಿವೆ. ಉಜ್ವಲ ಯೋಜನೆ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. 6 ಕೋಟಿಗೂ ಅಧಿಕ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಸಿಕ್ಕಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 1.5 ಕೋಟಿ ಜನರಿಗೆ ಮನೆಗಳು ಸಿಗಲಿವೆ ಎಂದು ತಿಳಿಸಿದರು.

    ಸರ್ಕಾರದ ಶ್ರಮದಿಂದ ದಾಖಲೆಯ ಮಟ್ಟದಲ್ಲಿ ಬಡತನ ಕಡಿಮೆಯಾಗುತ್ತಿದೆ. ಕೋಟ್ಯಂತರ ಜನರು ಬಡತನದಿಂದ ಹೊರಬಂದು, ಮಧ್ಯಮ ವರ್ಗವನ್ನು ತಲುಪುತ್ತಿದ್ದಾರೆ. ಅವರ ಕನಸುಗಳನ್ನು ಈಡೇರಿಸಿಕೊಳ್ಳುವ ಮೂಲಕ ದೇಶದ ವಿಕಾಸಕ್ಕೆ ಶ್ರಮಿಸುತ್ತಿದ್ದಾರೆ. ಸರ್ಕಾರವು ಬಡ ಜನರಿಗೆ ಭದ್ರತೆ ಹಾಗೂ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

    ಮಧ್ಯಮ ವರ್ಗ ಹಾಗೂ ಉನ್ನತ ಮಧ್ಯಮ ವರ್ಗದಿಂದ ಕಾನೂನು ಬದ್ಧವಾಗಿ ದೇಶಕ್ಕೆ ತೆರಿಗೆ ಪಾವತಿಯಾಗುತ್ತಿದೆ. ಇದರಿಂದ ಯೋಜನೆಗಳು ಸಾಕಾರಗೊಳ್ಳುತ್ತಿವೆ. ಬಡವರ ಕಲ್ಯಾಣವಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ಸರ್ಕಾರ ಆದಾಯ ಮಿತಿಯನ್ನು ಏರಿಕೆ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರವು ಆದಾಯ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿದೆ ಎಂದರು.

    ವಿವಿಧ ಸರ್ಕಾರಗಳು ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ಆದರೆ ಅವುಗಳು ಕೇವಲ 2 ರಿಂದ 3 ಕೋಟಿ ರೈತರಿಗೆ ಮಾತ್ರ ಸಿಗುತ್ತಿದ್ದವು. ಆದರೆ ಈಗ ಜಾರಿಯಾಗಲಿರುವ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿಯು ಐದು ಎಕರೆ ಕಡಿಮೆ ಜಮೀನು ಹೊಂದಿರುವ 12 ಕೋಟಿಗೂ ಅಧಿಕ ರೈತರಿಗೆ ಸಿಗಲಿದೆ. ಸ್ವಾತಂತ್ರ್ಯ ನಂತರ ರೈತರಿಗಾಗಿ ರೂಪಿಸಿದ ಮಹತ್ವದ ಯೋಜನೆ ಇದಾಗಿದೆ ಎಂದು ಹೇಳಿದರು.

    ನಮ್ಮ ಸರ್ಕಾರವು ರೈತರಿಗೆ ಹಂತ ಹಂತವಾಗಿ ಯೋಜನೆಗಳನ್ನು ಕೊಡುತ್ತಾ ಬಂದಿದೆ. ಪಶುಪಾಲನೆ, ಗೋ ರಕ್ಷಣೆ, ಮೀನುಗಾರಿಕೆ ಸೇರಿದಂತೆ ಕೃಷಿಗೆ ಪೂರಕ ಯೋಜನೆಗಳನ್ನು ನಾವು ನೀಡಿದ್ದೇವೆ. ಮೀನುಗಾಗರರು ಹಾಗೂ ರೈತರನ್ನು ಬಲಗೊಳಿಸಲು ಶ್ರಮಿಸುತ್ತಿದ್ದೇವೆ ಎಂದರು.

    ದೇಶ ಅನೇಕ ಕ್ಷೇತ್ರದಲ್ಲಿ ಇಂದು ಅಭಿವೃದ್ಧಿಯಾಗುತ್ತದೆ. ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ನಿರಂತರವಾಗಿ ಬಡ್ತಿ ಪಡೆಯುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಮಾನ್ ಧನ್ ಯೋಜನಾ ರೂಪಿಸಲಾಗಿದೆ. ಅಯುಷ್ಮಾನ್ ಭಾರತ್ ಯೋಜನೆ, ಪ್ರಧಾನಿ ಮಂತ್ರಿ ಭಿಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಂದ ಜನರಿಗೆ ಲಾಭ ಸಿಗುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಎಲೆಕ್ಷನ್ ಟೈಂನಲ್ಲಿ ದುಡ್ಡು ಕೊಡೋಕೆ ಆಗಲ್ಲ ಅಂತ ಅಕೌಂಟ್‍ಗೆ ಹಾಕ್ತಿದ್ದಾರೆ- ರೇವಣ್ಣ ವ್ಯಂಗ್ಯ

    ಎಲೆಕ್ಷನ್ ಟೈಂನಲ್ಲಿ ದುಡ್ಡು ಕೊಡೋಕೆ ಆಗಲ್ಲ ಅಂತ ಅಕೌಂಟ್‍ಗೆ ಹಾಕ್ತಿದ್ದಾರೆ- ರೇವಣ್ಣ ವ್ಯಂಗ್ಯ

    ಬೆಂಗಳೂರು: ಚುನಾವಣೆ ಸಮಯದಲ್ಲಿ ಹಣ ಹಂಚಲು ಆಗಲ್ಲ. ಹೀಗಾಗಿ ರೈತರ ನೆಪದಲ್ಲಿ ಅಕೌಂಟ್‍ಗೆ ದುಡ್ಡು ಜಮೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ದೇಶದ ಜನರು 5 ವರ್ಷ ಕಾದಿರುವುದಕ್ಕೆ 6 ಸಾವಿರ ರೂ. ಬೋನಸ್ ನೀಡಿದ್ದಾರೆ. ಹೀಗಾಗಿ ಅವರ ಅಧಿಕಾರ ಅವಧಿಯ ಮುಕ್ತಾಯವಾಗಲು 4 ತಿಂಗಳು ಬಾಕಿ ಇದ್ದು, 2 ಸಾವಿರ ರೂ. ನಂತೆ ಪಾವತಿ ಮಾಡುತ್ತಾರೆ ಅಷ್ಟೇ ಎಂದು ಕುಟುಕಿದರು.

    ನಮ್ಮ ನಿರೀಕ್ಷೆಯಂತೆ ಬಜೆಟ್ ಮಂಡನೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲಮನ್ನಾ ಮಾಡುತ್ತಾರೆ ಎನ್ನುವ ಭರವಸೆ ಇಟ್ಟುಕೊಂಡಿದ್ದೇವು. ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 10 ಸಾವಿರ ರೂ. ಹಾಕುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಹಾಗೆ ಮಾಡಲಿಲ್ಲ ಎಂದ ಅವರು, ಚುನಾವಣೆ ಸಮಯದಲ್ಲಿ ಹಣ ಹಂಚಲು ಹೋದರೆ ಚುನಾವಣಾ ಆಯೋಗ ಬಿಡಲ್ಲ. ಅದಕ್ಕೆ ಸಣ್ಣ ಹಿಡುವಳಿದಾರರ ರೈತರ ಬ್ಯಾಂಕ್‍ಗೆ ಹಣ ಹಾಕುವ ಪ್ಲಾನ್ ಮಾಡಿದ್ದಾರೆ ಎಂದು ಕಾಲೆಳೆದರು.

    ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಪಕ್ಷದ ವರಿಷ್ಠ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ. ಹಾಸನದಲ್ಲಿ ತ್ರೀಕೋನ ಸ್ಪರ್ಧೆಗೂ ನಾವು ಸಿದ್ಧರಿದ್ದೇವೆ ಹಾಗೂ ಕಾಂಗ್ರೆಸ್ ಜತೆ ಹೊಂದಾಣಿಕೆಗೂ ರೆಡಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಧ್ಯಮ ವರ್ಗಕ್ಕೆ ಬಂಪರ್ – 5 ಲಕ್ಷ ರೂ. ವರೆಗೆ ತೆರಿಗೆ ಕಟ್ಟಬೇಕಿಲ್ಲ

    ಮಧ್ಯಮ ವರ್ಗಕ್ಕೆ ಬಂಪರ್ – 5 ಲಕ್ಷ ರೂ. ವರೆಗೆ ತೆರಿಗೆ ಕಟ್ಟಬೇಕಿಲ್ಲ

    ನವದೆಹಲಿ: ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ ಬಂಪರ್ ಬಜೆಟ್ ನೀಡಿದ್ದು ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ.

    ಬಜೆಟ್ ನಡೆಯುವ ಮೊದಲೇ ಇದು 5 ಲಕ್ಷಕ್ಕೆ ಏರಿಕೆ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಯಾಕೆಂದರೆ ಕೇಂದ್ರ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗರಿಷ್ಟ 8 ಲಕ್ಷ ಆದಾಯ ಮಿತಿ ಇರುವ ಹಿಂದುಳಿದ ಮೇಲ್ವರ್ಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿದ ಪರಿಣಾಮ ಇದು ಹೇಗೆ ಘೋಷಣೆಯಾಗಲಿದೆ ಎನ್ನುವ ಪ್ರಶ್ನೆ ಮೂಡಿತ್ತು.

    ಈ ಎಲ್ಲ ಪ್ರಶ್ನೆಗಳಿಗೆ ಗೋಯಲ್ ಉತ್ತರ ನೀಡಿದ್ದು ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ ರೂ. ವಿನಾಯಿತಿ, ಗೃಹ ಸಾಲ 2.5 ಲಕ್ಷ ರೂ. ವಿನಾಯಿತಿ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದೆ.

    ಆದಾಯ ತೆರಿಗೆ ವಿಶ್ಲೇಷಕರ ಪ್ರಕಾರ ತಿಂಗಳಿಗೆ 40-50 ಸಾವಿರ ರೂ. ಅಸುಪಾಸಿನಲ್ಲಿ ಸಂಪಾದನೆ ಮಾಡುತ್ತಿರುವ ಎಲ್ಲ ಉದ್ಯೋಗಿಗಳಿಗೆ ಇದು ನೆರವಾಗಲಿದೆ.  ಈ ಹಿಂದೆ 2.50 ಲಕ್ಷ ದಿಂದ 5 ಲಕ್ಷ ರೂ.ವರೆಗೆ ಶೇ. 10 ರಷ್ಟು ತೆರಿಗೆ ಇತ್ತು. ಆದರೆ 2017 ರಲ್ಲಿ ಅರುಣ್ ಜೇಟ್ಲಿ ಈ ತೆರಿಗೆಯನ್ನು ಶೇ.5ಕ್ಕೆ ಇಳಿಕೆ ಮಾಡಿದ್ದರು. ಇದರಿಂದಾಗಿ ವಾರ್ಷಿಕವಾಗಿ 13 ಸಾವಿರ ರೂ. ತೆರಿಗೆಯನ್ನು ಕಟ್ಟಬೇಕಿತ್ತು.

    ಸರ್ಕಾರದ ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯವೇನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv