Tag: UNHRC

  • ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ಲಂಡನ್‌: ಇತ್ತೀಚೆಗೆ ಪಾಕಿಸ್ತಾನ (Pakistan) ತನ್ನ ದೇಶದ ಮೇಲೆಯೇ ನಡೆಸಿದ ವಾಯುದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿರುವ ಘಟನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಸಭೆಯಲ್ಲಿ ಭಾರತ ತೀವ್ರವಾಗಿ ಖಂಡಿಸಿದೆ.

    ತನ್ನ ದೇಶದಲ್ಲೇ ವೈಮಾನಿಕ ದಾಳಿ ನಡೆಸಿದ ಪಾಕ್‌ ನಡೆಗೆ ಭಾರತ ಪ್ರತಿಕ್ರಿಯಿಸಿದೆ. ಜಾಗತಿಕವಾಗಿ ಅಸ್ಥಿರತೆ ಉಂಟುಮಾಡಲು ಭಯೋತ್ಪಾದನೆ ರಫ್ತು ಮಾಡುತ್ತದೆ. ಈಗ ನೋಡಿದ್ರೆ ತನ್ನ ಸ್ವಂತ ನಾಗರಿಕರ ಮೇಲೆಯೇ ಬಾಂಬ್‌ ದಾಳಿ ಮಾಡಿದೆ. ಭಯೋತ್ಪಾದನೆಯ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳನ್ನ ದುರುಪಯೋಗಪಡಿಸಿಕೊಂಡಿದೆ. ಎಂದು UNHRCಯಲ್ಲಿನ ಭಾರತೀಯ ಪ್ರತಿನಿಧಿ ಕ್ಷಿತಿಜ್ ತ್ಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    30 killed as pakistan air force drops bombs during strikes in khyber pakhtunkhwa

    ಕಾರ್ಯಸೂಚಿ ಐಟಂ-4ರ ವೇಳೆ ಮಾತನಾಡುವಾಗ, ಸೋಮವಾರ ಬೆಳಗ್ಗಿನ ಜಾವ ಜೆಎಫ್ -17 ಪಾಕಿಸ್ತಾನಿ ಯುದ್ಧ ವಿಮಾನಗಳು ತನ್ನ ಮಾಟ್ರೆ ದಾರಾ ಗ್ರಾಮದ ಮೇಲೆ 8 SL-6 ಬಾಂಬ್‌ಗಳ ಮೂಲಕ ವಾಯುದಾಳಿ ನಡೆಸಿದೆ. ಆ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿ 30 ಮಂದಿ ಬಲಿಯಾಗಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು.

    ನಮ್ಮ ಪ್ರದೇಶವನ್ನು ಅಪೇಕ್ಷಿಸುವ ಬದಲು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಬೇಕು ಎಂದರಲ್ಲದೇ ಭಯೋತ್ಪಾದನೆ ರಫ್ತು ಮಾಡುವುದರಿಂದ, ತಮ್ಮದೇ ಜನರ ಮೇಲೆ ಬಾಂಬ್ ದಾಳಿ ಮಾಡುವುದರಿಂದ, ವಿಶ್ವಸಂಸ್ಥೆ ಗುರುತಿಸಿದ ಉಗ್ರರಿಗೆ ಆಶ್ರಯ ನೀಡುವುದರಿಂದ ಸಮಯ ಸಿಕ್ಕರೆ ಜೀವ ಬೆಂಬಲದ ಮೇಲೆ ಆರ್ಥಿಕತೆ ಸುಧಾರಿಸುವತ್ತ ಗಮನಹರಿಸಬೇಕು. ಆದ್ರೆ ಪಾಕಿಸ್ತಾನಕ್ಕೆ ಸಮಯ ಸಿಕ್ಕರೆ ತನ್ನದೇ ದೇಶದ ನಾಗರಿಕೆ ಮೇಲೆ ದಾಳಿ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ತಾಳಿ ನಡೆಸಿದರು. ಇದನ್ನೂ ಓದಿ: ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಮಿಸ್ಸಿಂಗ್‌

    ಮುಂದುವರಿದು.. ಪುಲ್ವಾಮಾ, ಉರಿ, ಪಠಾಣ್‌ಕೋಟ್ ಮತ್ತು ಮುಂಬೈ ಸೇರಿದಂತೆ ಹಿಂದಿನ ದಾಳಿಗಳು ಹಾಗೂ ಪಹಲ್ಗಾಮ್‌ ದಾಳಿಯನ್ನು ಉಲ್ಲೇಖಿಸಿ ಪಾಕ್‌ ವಿರುದ್ಧ ಕಿಡಿ ಕಾರಿದರು.

  • ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    – ಪಿಒಕೆಯಲ್ಲಿ ಯುವಕರನ್ನು ಯುದ್ಧಕ್ಕೆ ತಯಾರಿ ಮಾಡಲಾಗುತ್ತಿದೆ
    – ಪಾಕ್ ಭಯೋತ್ಪಾದಕ ಚಟುವಟಿಕೆಯನ್ನು ಜೀವಂತವಾಗಿರಿಸಿದೆ

    ಜಿನೀವಾ: ಜಮ್ಮು ಕಾಶ್ಮೀರದಲ್ಲಿನ ಜನರ ಸ್ವಾತಂತ್ರ್ಯವನ್ನು ಭಾರತ ಕಿತ್ತುಕೊಂಡಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ಬೊಬ್ಬೆ ಹಾಕುವ ಪಾಕಿಸ್ತಾನದ ಬಣ್ಣ ಇದೀಗ ಬಯಲಾಗಿದೆ. ವಿಶ್ವ ಸಂಸ್ಥೆಯ ಸಭೆಯಲ್ಲಿ ಸ್ವತಃ ಪಿಒಕೆ ನಾಯಕ ಈ ಆರೋಪ ಮಾಡಿದ್ದು, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಜನರನ್ನು ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಸಜದ್ ರಾಜಾ ಆರೋಪಿಸಿದ್ದಾರೆ.

    ಸ್ವಿಟ್ಜರ್ಲೆಂಡ್‍ನ ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 45ನೇ ಅಧಿವೇಶನದಲ್ಲಿ ಅವರು ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದಾರೆ. ಅಲ್ಲದೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ರಾಜಕೀಯ, ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕಗಳನ್ನು ಮರು ಸ್ಥಾಪಿಸಲು ಸಹಾಯ ಮಾಡುವಂತೆ ವಿಶ್ವಸಂಸ್ಥೆಗೆ ಕೇಳಿಕೊಂಡಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಪ್ರದೇಶದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರಾದ ನಾವು ಮಂಡಳಿಯನ್ನು ಕೇಳಿಕೊಳ್ಳುವುದೇನೆಂದರೆ, ಪಾಕಿಸ್ತಾನ ಪ್ರಾಣಿಗಳ ರೀತಿ ನೋಡಿಕೊಳ್ಳುತ್ತಿರುವುದನ್ನು ತಡೆಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ. ಪಿಒಕೆ ಚುನಾವಣಾ ಕಾಯ್ದೆ-2020 ನಮ್ಮ ಎಲ್ಲ ಸಾಂವಿಧಾನಿಕ, ನಾಗರಿಕ ಹಾಗೂ ರಾಜಕೀಯ ಹಕ್ಕನ್ನು ಕಿತ್ತುಕೊಂಡಿದೆ. ಪಾಕಿಸ್ತಾನದ ಪಿಒಕೆ ಮೇಲಿನ ಹಸ್ತಕ್ಷೇಪವನ್ನು ವಿರೋಧಿಸುವ ನಮ್ಮ ನಡೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆಯಲ್ಲಿ ರಾಜ್ಯ ವಿರೋಧಿ ಎಂದು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ಸಮಾನತೆ ಪಕ್ಷದ ಅಧ್ಯಕ್ಷ ಸಜದ್ ರಾಜಾ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ(ಯುಎನ್‍ಎಚ್‍ಆರ್‍ಸಿ) ಮನವಿ ಸಲ್ಲಿಸುತ್ತಿದ್ದಂತೆ ಪಿಒಕೆ ಕಾರ್ಯಕರ್ತ ಕಣ್ಣೀರು ಹಾಕಿದ್ದಾರೆ. ನಮ್ಮ ಸ್ವಂತ ಮನೆಯನ್ನು ರಕ್ಷಿಸಿಕೊಳ್ಳುತ್ತಿರುವುದಕ್ಕೆ ನಮ್ಮನ್ನು ದೇಶದ್ರೋಹಿಗಳಾಗಿ ಪರಿಗಣಿಸಲಾಗಿದೆ. ನಮ್ಮ ರಾಜಕೀಯ ಚಟುವಟಿಕೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿದ್ದು, ಈ ಕಾಯ್ದೆಯ ಮೂಲಕ ನಮ್ಮ ಜನರನ್ನು ಹತ್ಯೆ ಮಾಡಲು ಪಾಕಿಸ್ತಾನ ಸೈನ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.

    ಜಮ್ಮು ಕಾಶ್ಮೀರದ ಗಡಿಯ ಎರಡೂ ಬದಿಗಳಲ್ಲಿರುವ ಯುವ ಸಮೂಹವನ್ನು ಅಧಿಕಾರಿಗಳು ಮೈಂಡ್ ವಾಶ್ ಮಾಡುವ ಮೂಲಕ ಭಾರತದೊಂದಿಗೆ ಪ್ರಾಕ್ಸಿ ಯುದ್ಧ ಮಾಡಲು ಫಿರಂಗಿಗೆ ಆಹಾರವನ್ನಾಗಿಸುತ್ತಿದ್ದಾರೆ. ಪಾಕಿಸ್ತಾನ ಪಿಒಕೆಯಿಂದ ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಲೇ ಇದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

    ಪಾಕಿಸ್ತಾನ ಏಜೆನ್ಸಿಗಳಿಂದಾಗಿ ಕಣ್ಮರೆಯಾಗುತ್ತಿರುವ ಸಿಂಧಿ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ಪೂರೈಸಬೇಕು. ಪಾಕಿಸ್ತಾನ ಸರ್ಕಾರವನ್ನು ಹೊಣೆಗಾರರನ್ನಾಗಿಸಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ತರಬೇಕು. ಕಳೆದ ಮೂರು ತಿಂಗಳಲ್ಲಿ 60ಕ್ಕೂ ಹೆಚ್ಚು ಸಿಂಧಿಯರನ್ನು ಅಪಹರಿಸಲಾಗಿದೆ. ಭಯೋತ್ಪಾದನೆಯನ್ನು ಪಸರಿಸಲು ಇವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಿಂಧಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

  • ನಂ.1 ಆಗಲು ಚೀನಾದಿಂದ ಜೈವಿಕ ಅಸ್ತ್ರ- ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ನಂ.1 ಆಗಲು ಚೀನಾದಿಂದ ಜೈವಿಕ ಅಸ್ತ್ರ- ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

    ಆಲ್ ಇಂಡಿಯಾ ಬಾರ್ ಅಸೊಶಿಯೇಶನ್, ಇಂಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ವತಿಯಿಂದ ಈ ದೂರು ದಾಖಲಿಸಿದ್ದು, ಅನಿರ್ದಿಷ್ಟ ಮೊತ್ತ ಪರಿಹಾರಕ್ಕೆ ಅರ್ಜಿಯಲ್ಲಿ ವಕೀಲ ಅದೀಶ್ ಸಿ.ಅಗ್ರವಾಲ್ ಆಗ್ರಹಿಸಲಾಗಿದೆ.

    ಕೊರೊನಾ ವಿಚಾರದಲ್ಲಿ ಚೀನಾ ಹೊಣೆಗಾರಿಕೆ ಮರೆತು ನಿಯಮಗಳ ಉಲ್ಲಂಘಿಸಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದೆ, ಇದನ್ನು ತಡೆಯವ ವಿಚಾರದಲ್ಲಿ ನಿಷ್ಕ್ರಿಯತೆ ತೋರಿದೆ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಜೈವಿಕ ಅಸ್ತ್ರದ ಮೂಲಕ ಇತರೆ ದೇಶಗಳನ್ನು ಮುಗಿಸಿ ತಾನು ನಂಬರ್ ಒನ್ ಆಗಲು ಪ್ರಯತ್ನಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

    ಚೀನಾ ಸರ್ಕಾರದ ವಿರುದ್ಧ ತನಿಖೆಗೆ ಆಗ್ರಹಿಸಿರು ಅಗ್ರವಾಲ್, ಜಾಗತಿಕ ಮಟ್ಟದಲ್ಲಿ ವೈರಸ್‍ನ ಹರಡಿದಕ್ಕೆ ಆರ್ಥಿಕವಾಗಿ ದೇಶಗಳು ಕುಸಿದಿದೆ. ಇದಕ್ಕಾಗಿ ಚೀನಾ ಬೆಲೆ ತೆರಬೇಕಿದೆ. ಭಾರತವೂ ಸೇರಿ ಇತರೆ ದೇಶಗಳಿಗೆ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.