Tag: Unethical Relationship

  • ಮೊಬೈಲ್‍ನಲ್ಲಿ ಬೇರೊಬ್ಬನ ಜೊತೆ ಮಾತಾಡಿದ್ದಕ್ಕೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಮೊಬೈಲ್‍ನಲ್ಲಿ ಬೇರೊಬ್ಬನ ಜೊತೆ ಮಾತಾಡಿದ್ದಕ್ಕೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಬೆಂಗಳೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯೇ ಪತ್ನಿಯ ಬರ್ಬರ ಹತ್ಯೆಗೈದಿರುವ ಘಟನೆ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ.

    ಪ್ರೇಮ (25) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿಯನ್ನು ವೆಂಕಟೇಶಾಚಾರಿ ಎಂದು ಗುರುತಿಸಲಾಗಿದೆ. 9 ವರ್ಷದ ಹಿಂದೆ ಪ್ರೇಮ ಮತ್ತು ವೆಂಕಟೇಶಾಚಾರಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 7 ವರ್ಷದ ಹೆಣ್ಣು ಮಗುವಿತ್ತು. ಆದರೆ ಶುಕ್ರವಾರ ರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ. ಇದನ್ನೂ ಓದಿ: ಹೂಮಾಲೆಯಲ್ಲಿ ಹುಳು ಇರುತ್ತೆ ನನಗೆ ಹಾಕ್ಬೇಡಿ – ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ

    ಪತ್ನಿ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದ ವೆಂಕಟೇಶಾಚಾರಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪತ್ನಿಯ ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಇದೀಗ ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೀಡಿಯೋ ಬಂದ್ ವಿಚಾರ – ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ: ಸಿಎಂ

    Live Tv
    [brid partner=56869869 player=32851 video=960834 autoplay=true]

  • ಒಬ್ಬನೊಂದಿಗೆ ತಾಯಿ-ಮಗಳ ಅಕ್ರಮ ಸಂಬಂಧ – ಗೂಢಚಾರಿಕೆ ನಡೆಸ್ತಿದ್ದವನನ್ನ ಕೊಂದೇ ಬಿಟ್ರು!

    ಒಬ್ಬನೊಂದಿಗೆ ತಾಯಿ-ಮಗಳ ಅಕ್ರಮ ಸಂಬಂಧ – ಗೂಢಚಾರಿಕೆ ನಡೆಸ್ತಿದ್ದವನನ್ನ ಕೊಂದೇ ಬಿಟ್ರು!

    – ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ ಅಮ್ಮ, ಮಗಳು

    ಲಕ್ನೊ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಯುವಕನ್ನು ತಾಯಿ, ಮಗಳು ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ತಾಯಿ-ಮಗಳು ಇಬ್ಬರು ಒಬ್ಬನೊಂದಿಗೆಯೇ ಅನೈತಿಕ ಸಂಬಂಧ ಹೊಂದಿದ್ದರು.

    ನವೀನ್ ಅನೈತಿಕ ಸಂಬಂಧದ ಗೂಢಚಾರಿ ನಡೆಸಿ ಕೊಲೆಯಾದ ಯುವಕ. ಭರತ್ ಎಂಬವನು ತನ್ನ ತಾಯಿ ಮತ್ತು ಸೋದರಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದನು. ಹೀಗಾಗಿ ಇಬ್ಬರ ಜೊತೆ ಇರೋ ವ್ಯಕ್ತಿಯನ್ನ ಪತ್ತೆ ಮಾಡಲು ನವೀನ್‍ಗೆ ಸೂಚಿಸಿದ್ದನು. ಭರತ್ ಸೂಚನೆಯಂತೆ ನವೀನ್, ಆ ಇಬ್ಬರ ನಡೆಯನ್ನು ಗಮನಿಸುತ್ತಿದ್ದನು.

    ಗೂಢಚಾರಿಕೆಯ ವಿಷಯ ಭರತ್ ನ ತಾಯಿ ಮತ್ತು ತಂಗಿಗೆ ಗೊತ್ತಾಗಿದೆ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ನವೀನ್ ನನ್ನು ಕೊಲ್ಲಲು ಇಬ್ಬರು ಪ್ಲಾನ್ ಮಾಡಿದ್ದರು. ನಂತರ ಗೆಳೆಯ ರಂಜಿತ್ ಪಾಲ್‍ಗೆ ಆತನನ್ನು ಕೊಲ್ಲುವಂತೆ ಹೇಳಿದ್ದಾರೆ. ತಾಯಿ-ಮಗಳ ಮಾತು ಕೇಳಿದ ರಂಜಿತ್, ಮೊದಲಿಗೆ ನವೀನ್ ಸ್ನೇಹ ಸಂಪಾದಿಸಿದ್ದಾನೆ. ಭಾನುವಾರ ಉಪಾಯವಾಗಿ ನವೀನ್ ನನ್ನು ಟೆಸ್ಕೋ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮದ್ವೆಯಾದ್ರೂ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ- ಸಿಕ್ಕಿ ಬಿದ್ದಾಗ ಕೊಂದೇ ಬಿಟ್ರು!

    ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಪೊಲೀಸುರ ಘಟನಾ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದರು. ಮೊದಲಿಗೆ ಅನುಮಾನದ ಮೇಲೆ ರಂಜಿತ್ ಪಾಲ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ವಿಷಯ ಬಾಯಿಬಿಟ್ಟಿದ್ದಾನೆ. ರಂಜಿತ್ ಹೇಳಿಕೆಯ ಮೇಲೆ ಇದೀಗ ಪೊಲೀಸರು ತಾಯಿ-ಮಗಳನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಬೇಡ, ಸೆಕ್ಸ್ ವೇಳೆ ಮಾಸ್ಕ್ ಧರಿಸಿ- ತಜ್ಞರ ಸಲಹೆ

  • ಒಂದು ವರ್ಷ ಎರಡು ತಿಂಗಳ ಅನೈತಿಕ ಸಂಬಂಧ ಇಂದಿಗೆ ಅಂತ್ಯ – ಉಮೇಶ್ ಕತ್ತಿ

    ಒಂದು ವರ್ಷ ಎರಡು ತಿಂಗಳ ಅನೈತಿಕ ಸಂಬಂಧ ಇಂದಿಗೆ ಅಂತ್ಯ – ಉಮೇಶ್ ಕತ್ತಿ

    ಬೆಂಗಳೂರು: ಮೈತ್ರಿ ಸರ್ಕಾರದ ಒಂದು ವರ್ಷ ಎರಡು ತಿಂಗಳ ಅನೈತಿಕ ಸಂಬಂಧ ಮುರಿದು ಹೋಯ್ತು ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ವ್ಯಂಗ್ಯವಾಡಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡಲು ಅನೈತಿಕ ಸಂಬಂಧ ಬೆಳೆಸಿಕೊಂಡು ಬಂದರು. ಒಂದು ವರ್ಷ ಎರಡು ತಿಂಗಳಿಗೆ ಅದು ಬಿದ್ದು ಹೋಯ್ತು. ಮುಂದೆ ಹೊಸ ಸರ್ಕಾರ ರಚನೆ ಮಾಡುತ್ತೇವೆ ಮತ್ತು ಉತ್ತಮ ಆಡಳಿತ ಕೊಡುತ್ತೇವೆ ಎಂದು ಹೇಳಿದರು.

    ಕಾಂಗ್ರೆಸ್, ಜೆಡಿಎಸ್ ಅನೈತಿಕ ಸಂಬಂಧ ಇಂದಿಗೆ ಅಂತ್ಯವಾಗಿದೆ. ಈ ಸಂಬಂಧ ಅಂತ್ಯವಾಗಲು ಸಿದ್ದರಾಮಯ್ಯ ಎಂದ ಅವರು, ಸರ್ಕಾರ ರಚನೆ ಮಾಡಲು ರಾಜ್ಯಪಾಲರನ್ನು ಭೇಟಿ ಆಗುತ್ತೇವೆ. ಇಲ್ಲದೆ ಇದ್ದರೆ ಮತ್ತೊಂದು ಚುನಾವಣೆಗೂ ಹೋಗಲು ನಾವು ಸಿದ್ಧ ಎಂದು ಹೇಳಿದರು.