Tag: unemployment

  • ನಿರುದ್ಯೋಗ ಸಮಸ್ಯೆ, ಯುಜನರ ವಲಸೆಗೆ ಬಿಜೆಪಿ ಆಡಳಿತವೇ ಕಾರಣ – ರಾಹುಲ್‌ ಗಾಂಧಿ ಕಿಡಿ

    ನಿರುದ್ಯೋಗ ಸಮಸ್ಯೆ, ಯುಜನರ ವಲಸೆಗೆ ಬಿಜೆಪಿ ಆಡಳಿತವೇ ಕಾರಣ – ರಾಹುಲ್‌ ಗಾಂಧಿ ಕಿಡಿ

    ಹರಿಯಾಣ: ಇಲ್ಲಿನ ಎಷ್ಟೋ ಯುವಜನರು ಅಮೆರಿಕಕ್ಕೆ (USA) ವಲಸೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬಿಜೆಪಿ ಸರ್ಕಾರದ ಆಡಳಿತ, ನಿರುದ್ಯೋಗ ಸಮಸ್ಯೆ ಸೃಷ್ಟಿಸಿರುವುದೇ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಕಿಡಿ ಕಾರಿದರು.

    ಅ.5ರಂದು ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಕರ್ನಾಲ್‌ನ ಅಸ್ಸಾಂದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಗಾ, ನಿರುದ್ಯೋಗ ಸಮಸ್ಯೆಗಳ ಕುರಿತು ಮಾತನಾಡುತ್ತಾ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಹರಿಯಾಣ ಯುವಕರು ಏಕೆ ಅಮೆರಿಕ್ಕೆ ಹೋಗುತ್ತಿದ್ದಾರೆ ಗೊತ್ತೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: WWCL : ಯಾವ ತಂಡಕ್ಕೆ ಯಾವ ನಟಿ ಕ್ಯಾಪ್ಟನ್?

    ಇತ್ತೀಚೆಗೆ ನಾನು ಯುಎಸ್‌ನ ಡಲ್ಲಾಸ್‌ಗೆ ಭೇಟಿ ನೀಡಿದ್ದೆ. ಅಲ್ಲಿ ಹರಿಯಾಣದಿಂದ ವಲಸೆ (Migration) ಹೋಗಿದ್ದ ಹಲವಾರು ಯುವಕರನ್ನು ಭೇಟಿಯಾದೆ. ಅವರ ವಲಸೆಗೆ ಬಿಜೆಪಿ ಸರ್ಕಾರದ ಆಡಳಿತವೇ ಕಾರಣ ಎಂದು ದೂರಿದರು. ಇದನ್ನೂ ಓದಿ: KWIN City Project | ಕರ್ನಾಟಕದ ಅಭಿವೃದ್ಧಿಯೇ ಕ್ವಿನ್ ಸಿಟಿ ಯೋಜನೆಯ ಮೂಲ ಆಶಯ: ಡಿ.ಕೆ.ಶಿವಕುಮಾರ್

    ಒಂದೇ ರೂಮ್‌ನಲ್ಲಿ 15 ರಿಂದ 20 ಜನ ಮಲಗಿದ್ದನ್ನು ನೋಡಿದೆ. ಅಲ್ಲೊಬ್ಬ ಯುವಕ ಅಮೆರಿಕಕ್ಕೆ ಬರೋದಕ್ಕಾಗಿಯೇ ಸುಮಾರು 30 ರಿಂದ 50 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಮತ್ತೊಬ್ಬ ಯುವಕ ತಮ್ಮ ಭೂಮಿಯನ್ನೇ ಮಾರಾಟ ಮಾಡಿರುವುದಾಗಿ ಹೇಳಿಕೊಂಡರು. ಇನ್ನೂ ಕೆಲವರು ಇಲ್ಲಿ ಕೆಲಸ ಗಿಟ್ಟಿಕೊಳ್ಳಲು ಪಟ್ಟ ಹರಸಾಹಸಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು. ಅದೇ ರೀತಿ ಕರ್ನಾಲ್‌ನ ಮನೆಯೊಂದಕ್ಕೆ ಭೇಟಿ ನೀಡಿದ್ದಾಗ ಅಮೆರಿಕದಲ್ಲಿ ಕೆಲಸಮಾಡುತ್ತಿದ್ದ ಇಲ್ಲಿನ ಯುವಕ ಕುಟುಂಬಸ್ಥರಿಗೆ ಕರೆ ಮಾಡಿದ್ದ, ಆತನ ಮಗು ವೀಡಿಯೋ ಕರೆಯಲ್ಲಿ ಮಾತನಾಡುತ್ತಾ ನಮ್ಮೂರಿಗೆ ವಾಪಸ್‌ ಬನ್ನಿ ಅಂತ ಚೀರಾಡುತ್ತಿತ್ತು. ಇದೆಲ್ಲವನ್ನೂ ನೋಡಿದಾಗ ಹರಿಯಾಣ ಸರ್ಕಾರ ತನ್ನ ರಾಜ್ಯ ಮತ್ತು ಇಲ್ಲಿನ ಯುವ ಜನತೆಯನ್ನು ಮಗಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ ಇಲ್ಲಿನ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದರು.

    ಇದೇ ವೇಳೆ ರಾಹುಲ್ ಗಾಂಧಿ ಹರಿಯಾಣಕ್ಕೆ ಕಾಂಗ್ರೆಸ್‌ ನೀಡಿರುವ ಭರವಸೆಗಳನ್ನು ಪುನರುಚ್ಚರಿಸಿದರು. ತಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: ಆಫ್ರಿಕಾದ ಮಹಿಳೆಗೆ ಏಕಕಾಲದಲ್ಲೇ ಎರಡು ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗ್ಳೂರು ವೈದ್ಯರು

  • ಚೀನಾಗಿಂತ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು – ಅಮೆರಿಕದಲ್ಲಿ ರಾಹುಲ್‌ ಗಾಂಧಿ ಭಾಷಣ

    ಚೀನಾಗಿಂತ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು – ಅಮೆರಿಕದಲ್ಲಿ ರಾಹುಲ್‌ ಗಾಂಧಿ ಭಾಷಣ

    – ಮಹಿಳೆಯರು ಮನೆಯಲ್ಲೇ ಇರಬೇಕೆಂದು ಬಿಜೆಪಿ, ಆರ್‌ಎಸ್‌ಎಸ್‌ ಬಯಸುತ್ತದೆ ಎಂದ ರಾಗಾ
    – ಭಾರತವನ್ನು ವಿಭಜಿಸಿ ಆಳಬೇಕೆಂಬುದು ರಾಹುಲ್‌ ಗಾಂಧಿ ಕುತಂತ್ರ; ಬಿಜೆಪಿ ತಿರುಗೇಟು

    ವಾಷಿಂಗ್ಟನ್‌: ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದ್ರೆ, ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. ಆದ್ರೆ ಚೀನಾ, ವಿಯೆಟ್ನಾಂನಂತರ ದೇಶಗಳಲ್ಲಿ ಉದ್ಯೋಗ ಸಮಸ್ಯೆಯೇ ಇಲ್ಲ. ಭಾರತವು ಉತ್ಪಾದನಾ ಪರಿಕಲ್ಪನೆ ಕೈಬಿಟ್ಟಿದ್ದೇ ಇದಕ್ಕೆ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

    ಅಮೆರಿಕದ (USA) ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ (RSS) ವಿರುದ್ಧ ಹರಿಹಾಯ್ದರು. ಆರ್‌ಎಸ್‌ಎಸ್‌ ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ. ಆದ್ರೆ ಕಾಂಗ್ರೆಸ್‌ಗೆ ಬಹುತ್ವ ಭಾರತದಲ್ಲಿ ನಂಬಿಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್‌ ಪಿತ್ರೋಡಾ

    ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದ್ರೆ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಆದ್ರೆ ಚೀನಾ (China), ವಿಯೆಟ್ನಾಂನಲ್ಲಿ ಉದ್ಯೋಗ ಸಮಸ್ಯೆಯೇ (Employment Problem) ಇಲ್ಲ. ಭಾರತವು ಉತ್ಪಾದನಾ ಪರಿಲ್ಪನೆಯ ಕೈಬಿಟ್ಟಿರುವುದರಿಂದ ಅದರ ಲಾಭವನ್ನು ಚೀನಾ ಪಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಪಪ್ಪು ಅಲ್ಲ, ದೂರದೃಷ್ಟಿ ಹೊಂದಿರುವ ವ್ಯಕ್ತಿ: ಸ್ಯಾಮ್‌ ಪಿತ್ರೋಡಾ

    ಅಮೆರಿಕ ಜಾಗತಿಕ ಉತ್ಪಾದನಾ ಕೇಂದ್ರವಾಗಿತ್ತು:
    1940, 50 ಮತ್ತು 60ರ ದಶಕಗಳಲ್ಲಿ ಅಮೆರಿಕವನ್ನು ನೋಡಿದರೆ, ಅದು ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ಕಾರುಗಳು, ವಾಷಿಂಗ್ ಮಿಷಿನ್‌ಗಳು, ಟಿವಿಗಳು, ಎಲ್ಲವೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉತ್ಪಾದನೆಯಾಗುತ್ತಿತ್ತು. ನಂತರ, ಉತ್ಪಾದನಾ ಪ್ರಮಾಣ ಕೊರಿಯಾಕ್ಕೆ ಸ್ಥಳಾಂತರಗೊಂಡಿತು. ಅಲ್ಲಿಂದ ಜಪಾನ್‌ಗೆ ಹೋಯ್ತು. ಅಂತಿಮವಾಗಿ, ಅದು ಚೀನಾಕ್ಕೆ ಹೋಯಿತು. ಇಂದು ನೋಡಿದ್ರೆ ಜಾಗತಿಕ ಉತ್ಪಾದನೆಯಲ್ಲಿ ಚೀನಾ ಮೇಲುಗೈ ಸಾಧಿಸುತ್ತಿದೆ. ಅಮೆರಿಕ, ಯುರೋಪ್ ಮತ್ತು ಭಾರತವು ಉತ್ಪಾದನೆಯ ಪರಿಕಲ್ಪನೆ ಕೈಬಿಟ್ಟಿದ್ದೇ ಇದಕ್ಕೆ ಕಾರಣವಾಯಿತು. ಉತ್ಪಾದನಾ ಪರಿಕಲ್ಪನೆಯು ಉದ್ಯೋಗ ಸೃಷ್ಟಿಸುತ್ತದೆ ಎಂದು ಸಲಹೆ ನೀಡಿದರು.

    ಪ್ರಧಾನಿ ಮೇಲಿದ್ದ ಭಯ ಹೋಗಿದೆ:
    ಇದೇ ವೇಳೆ 2024ರ ಲೋಕಸಭಾ ಚುನಾವಣಾ ಫಲಿತಾಂಶ ಉಲ್ಲೇಖಿಸಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಬಹುಮತ ನಿರಾಕರಿಸಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಮೇಲೆ ಜನರಿಗೆ ಇದ್ದ ಭಯ ಮಾಯವಾಗಿದೆ. ಭಾರತದ ಪ್ರಧಾನಿ ಮೇಲಿದ್ದ ಭಯವೂ ಹೋಗಿದೆ. ಇದಕ್ಕೆ ಕಾರಣ‌ ರಾಹುಲ್‌ ಗಾಂಧಿಯಾಗಲಿ, ಕಾಂಗ್ರೆಸ್‌ ಆಗಲಿ ಅಲ್ಲ. ಭಾರತ ಸಂವಿಧಾನ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

    ಬಳಿಕ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲೂ ಅನೇಕ ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯ ಭಾರತೀಯ ಪುರುಷರಲ್ಲಿ ಮಹಿಳೆಯರ ಬಗೆಗಿನ ವರ್ತನೆಯು ಹಾಸ್ಯಾಸ್ಪದವಾಗಿದೆ. ಹಾಗಾಗಿ ಮಹಿಳೆಯರ ಬಗ್ಗೆ ಯೋಚಿಸುವ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದಿದ್ದಾರೆ.

    ಮಹಿಳೆಯರು ಮನೆಯಲ್ಲಿರಬೇಕೆಂಬುದು ಆರ್‌ಎಸ್‌ಎಸ್‌ ಬಯಕೆ:
    ಮುಂದುವರಿದು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಹಿಳೆಯರು ನಿರ್ದಿಷ್ಟ ಪಾತ್ರಕ್ಕೆ ಸೀಮಿತವಾಗಿರಬೇಕು ಎಂದು ಬಯಸುತ್ತದೆ. ಮಹಿಳೆಯರು ಮನೆಯಲ್ಲೇ ಇರಬೇಕು, ಅಡುಗೆ ಮಾಡಿಕೊಂಡಿರಬೇಕು, ಹೆಚ್ಚು ಮಾತನಾಡಬಾರದು ಅಂತ ಬಯಸುತ್ತಾರೆ. ಆದ್ರೆ ಮಹಿಳೆಯರು ಏನು ಮಾಡಲು ಬಯಸುತ್ತಾರೆಯೋ ಅದನ್ನು ಮಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಬಯಸುತ್ತದೆ ಎಂದು ಬಿಜೆಪಿ-ಆರ್‌ಎಸ್‌ಎಸ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಆಯ್ತು ಈಗ ಪಾಕ್‌ನಲ್ಲಿ ಪ್ರತಿಭಟನೆ – ಇಮ್ರಾನ್‌ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಸಾವಿರಾರು ಬೆಂಬಲಿಗರು

    ರಾಗಾ ವಿರುದ್ಧ ಬಿಜೆಪಿ ಕೆಂಡಾಮಂಡಲ:
    ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ರಾಹುಲ್‌ ಗಾಂಧಿ ಅವರಿಗೆ ಭಾರತವನ್ನು ಅವಮಾನಿಸುವ ಅಭ್ಯಾಸ ಯಾವಾಗಲೂ ಇದೆ. ಈಗ ಚೀನಾ ಪರ ಬ್ಯಾಟಿಂಗ್‌ ಮಾಡಲು ಉತ್ಸುಕರಾಗಿದ್ದಾರೆ. ಭಾರತ ದೇಶವನ್ನು ವಿಭಜಿಸಿ ಆಳಬೇಕೆಂಬುದು ಅವರ ಕುತಂತ್ರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕಿಡಿ ಕಾರಿದ್ದಾರೆ. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್‌ ತಪ್ಪೊಪ್ಪಿಗೆ!

  • ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

    ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

    ಶಿವಮೊಗ್ಗ: ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ (Unemployment) ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah0 ಹೇಳಿದ್ದಾರೆ.

    ಯುವನಿಧಿಗೆ (Yuvanidhi) ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರಿದ್ದಾರೆ. ನಿಮ್ಮೆಲ್ಲರ ಎದುರಿನಲ್ಲಿ ಯುವನಿಧಿಗೆ ಚಾಲನೆ ಕೊಡ್ತಿದ್ದೇವೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ಮಭಾಗ್ಯ, ಯುವನಿಧಿ ಎಲ್ಲಾ ಭರವಸೆ ನೀಡಿದ್ದೆವು ಎಂದು ಹೇಳಿದರು.

    ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆಹಾರ ಪದಾರ್ಥ ಬೆಲೆ ಗಗನಕ್ಕೇರಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬಬೇಕು. ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಸಾಗಿಸೋದು ಕಷ್ಟವಾಗುತ್ತದೆ. ಅನೇಕ ಭರವಸೆ ಕೊಟ್ಟಿದ್ದೆವು. ಐದು ಗ್ಯಾರಂಟಿ ಜಾರಿಗೆ ತಂದೇ ತರುತ್ತೇವೆ ಎಂದಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

    ಬಹಳ ಜನ ಯುವನಿಧಿ ಏಕೆ ಜಾರಿಗೆ ತಂದಿಲ್ಲ ಅಂತಿದ್ದರು. ನಿರುದ್ಯೋಗಿ ಭತ್ಯೆ ಕೊಡುವ ಭರವಸೆ ನೀಡಿದ್ದೆವು. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಯ ಜಾರಿ ಬಗ್ಗೆ ಭರವಸೆ ಕೊಟ್ಟಿದ್ದೆವು. ಸಮಾಜದಲ್ಲಿ 100ಕ್ಕೆ 50ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕೊಟ್ಟಿದ್ದು ನಮ್ಮ ಸರ್ಕಾರ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬ ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

    ಅನ್ನಭಾಗ್ಯ ಯೋಜನೆಯಲ್ಲಿ (Annabhagya Scheme) 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ದೆವು. ಅಕ್ಕಿ ಸಿಗಲಿಲ್ಲ, ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅದರ ಬದಲಿಗೆ ಬಿಪಿಎಲ್ ಕಾರ್ಡ್ ನವರಿಗೆ 170 ರೂಪಾಯಿ ಹಣ ಕೊಡ್ತಿದ್ದೇವೆ. 1 ಕೋಟಿ 18 ಲಕ್ಷ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಿದ್ದೇವೆ. ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೆರ್ಯ ಹೆಚ್ಚಿಸಬೇಕು ಎಂದು ಹೇಳಿದರು.

    ವಿವೇಕಾನಂದ (Vivekananda) ಅವರ ಜಯಂತಿ ದಿನವೇ ಯುವನಿಧಿ ಕಾರ್ಯಕ್ರಮ ಚಾಲನೆ ಕೊಡಬೇಕು ಅಂತಾ ಚಾಲನೆ ಕೊಟ್ಟಿದ್ದೇವೆ. 70 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡವರಿಗೆ ಸರ್ಕಾರ ಎರಡು ವರ್ಷದ ಅವಧಿಗೆ ಮಾಸಾಶನ ಕೊಡುತ್ತೇವೆ. ಯುವಕರಿಗೆ ಎರಡು ವರ್ಷದೊಳಗೆ ಕೆಲಸ ಸಿಕ್ಕರೆ ಈ ಯೋಜನೆ ನಿಲ್ಲಿಸುತ್ತೇವೆ. ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಅಂದ್ರು. ಯಾವ ಸಮಾಜ ಹಸಿದವರಿಗೆ ಅನ್ನ ಕೊಡಲ್ಲ ಆ ಸಮಾಜದಲ್ಲಿ, ಧರ್ಮದಲ್ಲಿ ನಂಬಿಕೆ ಇಲ್ಲ. ವಿವೇಕಾನಂದರು ಈ ಮಾತನ್ನು ಹೇಳಿದ್ದರು. ರಾಜೀವ್ ಗಾಂಧಿ ಅವರು ವಿವೇಕಾನಂದ ಜಯಂತಿ ಆರಂಭಿಸಿದ್ದು, ವಿವೇಕಾನಂದರು ಯುವಕ ಯುವತಿಯರ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು. ನಿರುದ್ಯೋಗ ಬೆಳೆಯುತ್ತಿದೆ. 100 ಕ್ಕೆ 10.5 ನಿರುದ್ಯೋಗ ಬೆಳೆದಿದೆ. 5.5 ರಿಂದ 10.5 ಕ್ಕೆ ನಿರುದ್ಯೋಗ ಏರಿಕೆ ಆಗ್ತಿದೆ. ರಾಜ್ಯದ 1 ಕೋಟಿ 50 ಲಕ್ಷ ಕುಟುಂಬಗಳು ಸರ್ಕಾರದಿಂದ ಪ್ರತಿ ತಿಂಗಳು 5-6 ಸಾವಿರ ರೂ ಹಣ ಪಡೆಯುತ್ತಿವೆ ಎಂದು ತಿಳಿಸಿದರು.

    ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ದೇಶ ಅಭಿವೃದ್ಧಿ ಆಗ್ತದೆ ಅಂತಾ ಅಂಬೇಡ್ಕರ್ ಹೇಳಿದ್ರು. ಅದರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ನಾವು. ಸಾಮಾಜಿಕ ಆರ್ಥಿಕ ಶಕ್ತಿ ಬಲಗೊಳ್ಳಬೇಕು. ಸರ್ವ ಜನಾಂಗದ ಶಾಂತಿಯ ತೋಟ ಈಡಿ ರಾಜ್ಯದಲ್ಲಿ, ದೇಶದಲ್ಲಿ ನಿರ್ಮಾಣ ಆಗಬೇಕು. ಆ ಕಾರ್ಯ ಈ ಜಿಲ್ಲೆಯಿಂದಲೇ ಆಗಲಿ. ಈ ಫ್ರೀಡಂ ಪಾರ್ಕಿಗೆ ಅಲ್ಲಮ ಪ್ರಭು ಹೆಸರು ಇಡಬೇಕು ಅಂತಾ ಮಧು ಬಂಗಾರಪ್ಪ ಹೇಳಿದ್ದಾರೆ. ಚನ್ನಬಸಪ್ಪ ಅವರೇ ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು, 12 ನೇ ಶತಮಾನದವರು. ಅಲ್ಲಮ ಪ್ರಭು ಹೆಸರಿಡೋದು ಸೂಕ್ತ ಅಂತಾ ನನಗೆ ಅನಿಸುತ್ತದೆ. ಭದ್ರಾವತಿ ಎಂಪಿಎಂ ಕಾರ್ಖಾನೆ ಬಗ್ಗೆ ಇನ್ನೊಂದು ದಿನ ಮಾತನಾಡ್ತೇನೆ. ಎಂಪಿಎಂ ಪರ ನಾನು ಯಾವಾಗಲು ಇರುತ್ತೇನೆ.

  • ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಿಂದಲೇ ಚೀನಿ ಪತ್ರಕರ್ತನಿಗೆ ಗೇಟ್‌ಪಾಸ್‌

    ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಿಂದಲೇ ಚೀನಿ ಪತ್ರಕರ್ತನಿಗೆ ಗೇಟ್‌ಪಾಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

    ಬೀಜಿಂಗ್‌: ದೇಶದ ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಚೀನಾ ಸರ್ಕಾರ (China Government) ಪ್ರಮುಖ ಹಣಕಾಸು ಪತ್ರಕರ್ತನನ್ನು ಸಾಮಾಜಿಕ ಜಾಲತಾಣದಿಂದಲೇ (Social Media) ನಿಷೇಧಿಸಿದೆ.

    ಪ್ರಭಾವಿ ಪತ್ರಕರ್ತ Wu Xiaobo ಅವರನ್ನು ಟ್ವಿಟ್ಟರ್‌ ರೀತಿಯ Weibo ವೇದಿಕೆಯಲ್ಲಿ ಬ್ಲಾಕ್‌ ಮಾಡಲಾಗಿದೆ. ಆ ಖಾತೆಯನ್ನು ತೆರೆದಾಗ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದ್ದಕ್ಕೆ ಆ ಖಾತೆಯನ್ನು ನಿಷೇಧಿಸಲಾಗಿದೆ ಎಂಬ ಸಂದೇಶ ಕಾಣುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೊನೆಯ ಭಾರತದ ಪತ್ರಕರ್ತನಿಗೆ ದೇಶ ತೊರೆಯುವಂತೆ ಸೂಚಿಸಿದ ಚೀನಾ

    ಸುಮಾರು 47 ಲಕ್ಷ ಫಾಲೋವರ್ಸ್‌ ಹೊಂದಿದ್ದ Wu Xiaobo ಅವರು ನಿರುದ್ಯೋಗ (Unemployment) ಸಮಸ್ಯೆಯನ್ನು ಉಲ್ಲೇಖಿಸಿ ಚೀನಾದ ನಿರಂಕುಶ ಆಡಳಿತವನ್ನು 1930 ರ ದಶಕದ ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿ ಅಂಕಣ ಬರೆದಿದ್ದರು. ಸರ್ಕಾರವನ್ನು ಟೀಕಿಸಿದ್ದಕ್ಕೆ ಈಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ.

    ಅಂಕಿಅಂಶಗಳ ಪ್ರಕಾರ16 ರಿಂದ 24 ವರ್ಷ ವಯಸ್ಸಿನ ಯುವಜನರಲ್ಲಿ ನಿರುದ್ಯೋಗ ಪ್ರಮಾಣ ದರವು ಮೇ ತಿಂಗಳಲ್ಲಿ ದಾಖಲೆಯ ಗರಿಷ್ಠ 20.8% ಏರಿಕೆಯಾಗಿದೆ. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

     

    ಉದ್ಯೋಗಗಳ ಕೊರತೆಯಿಂದಾಗಿ (Job Crisis) ಚೀನೀ ಪದವೀಧರರು ತಾವು ಕುರ್ಚಿಯ ಮೇಲೆ ಕುಸಿದು ಬಿದ್ದಿರುವ, ಪದವಿ ಗೌನ್‌ಗಳನ್ನು ಧರಿಸಿ ನೆಲದ ಮೇಲೆ ಬಿದ್ದಿರುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಬಹಿರಂಗವಾಗಿ ಪ್ರತಿಭಟನೆ ನಡೆಸಲು ಸಾಧ್ಯವಾಗದ ಕಾರಣ ಮೌನ ಪ್ರತಿಭಟನೆಯ ಭಾಗವಾಗಿ “ಬದುಕಿಯೂ ಸತ್ತಿದ್ದೇವೆ” ಎಂಬ ಸಂದೇಶ ಬರೆದು ವಿದ್ಯಾರ್ಥಿಗಳು ಶವಗಳಂತೆ ಪೋಸ್‌ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

  • ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಬೆಳಗಾವಿ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ (Employment) ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭರವಸೆ ನೀಡಿದರು.

    ಬೆಳಗಾವಿಯಲ್ಲಿ (Belagavi) ನಡೆದ `ಯುವಕ್ರಾಂತಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ನೀಡಲಿದೆ. ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 2.5 ಲಕ್ಷ  ಉದ್ಯೋಗವನ್ನು ರಾಜ್ಯದ ಯುವಜನರಿಗೆ ಸಿಗುವಂತೆ ಮಾಡಲಿದೆ ಎಂದು ಘೋಷಣೆ ಮಾಡಿದರು.

    ಮುಂದುವರಿದು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ದನ್ನೂ ಓದಿ: ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ.: ಕಾಂಗ್ರೆಸ್‌ 4ನೇ ಗ್ಯಾರಂಟಿ ಘೋಷಣೆ

    ಕೆಲ ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಸಲಾಯಿತು. ಅದಕ್ಕೆ ರಾಜ್ಯದಿಂದಲೂ ಜನರು ಅಪಾರ ಬೆಂಬಲ ಕೊಟ್ಟಿದ್ದರು. ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಯುವಕರು ನಮಗೆ ಕೆಲ ಸಂದೇಶ ಕೊಟ್ಟರು. ಯಾವುದೇ ಪದವೀಧರರಿಗೂ ಕರ್ನಾಟಕ ಸರ್ಕಾರ ಉದ್ಯೋಗ ಕೊಡುತ್ತಿಲ್ಲ, ಯಾವುದೇ ಕೆಲಸ ಆಗಬೇಕು ಅಂದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂಬ ಸಂದೇಶಗಳನ್ನ ನೀಡಿದರು. ಯುವಕರಿಗೆ ನಿರುದ್ಯೋಗದಿಂದ ಸಮಸ್ಯೆಗಳಾಗುತ್ತಿವೆ. ಸಾಕಷ್ಟು ಮುಜುಗರ ಎದುರಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ನಮ್ಮ ಸರ್ಕಾರ `ಯುವನಿಧಿ’ಯನ್ನ ಘೋಷಣೆ ಮಾಡಿದೆ ಎಂದು ಹೇಳಿದರು.

    ದೇಶದಲ್ಲಿ ಎಲ್ಲ ಕೈಗಾರಿಕೆಗಳನ್ನ ಅದಾನಿ ಕೈಗೆ ಕೊಡುತ್ತಿದ್ದಾರೆ. ರಸ್ತೆ ಏರ್‌ಪೋರ್ಟ್‌ಗಳನ್ನ ಅವರಿಗೇ ಬಿಟ್ಟುಕೊಡಲಾಗುತ್ತಿದೆ. ಬಿಜೆಪಿ ಸರ್ಕಾರದಿಂದ ತಮ್ಮ ಗೆಳೆಯರಿಗೆ ಮಾತ್ರ ಲಾಭವಾಗುತ್ತಿದೆ. ಇದರಿಂದಲೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಕಾಂಗ್ರೆಸ್ ಯುವಕರಿಗೆ ತಿಳಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.

  • ಮಲ್ಲೇಶ್ವರಂನಲ್ಲಿ ಇನ್ನೂ 10 Language Lab ಸ್ಥಾಪನೆ – ಅಶ್ವತ್ಥ ನಾರಾಯಣ ಭರವಸೆ

    ಮಲ್ಲೇಶ್ವರಂನಲ್ಲಿ ಇನ್ನೂ 10 Language Lab ಸ್ಥಾಪನೆ – ಅಶ್ವತ್ಥ ನಾರಾಯಣ ಭರವಸೆ

    ಬೆಂಗಳೂರು: ಯುವಜನರನ್ನು ಉದ್ಯೋಗಕ್ಕೆ (Employment) ಅರ್ಹರನ್ನಾಗಿ ಮಾಡುವ ನಿಟ್ಟಿನಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂ 10 ಲ್ಯಾಂಗ್ವೇಜ್ ಲ್ಯಾಬ್‌ಗಳನ್ನು (ಭಾಷಾ ಕಲಿಕೆಯ ಪ್ರಯೋಗಾಲಯ) (Language Lab) ಸ್ಥಾಪಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ (CN Ashwath Narayan) ಭರವಸೆ ನೀಡಿದರು.

    ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿ ಇರುವ ಸರ್ಕಾರಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು (Government College) ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಅಶ್ವಿನ್, ಶಮಿ ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಕಾಂಗರೂ ಪಡೆ – ಭಾರತಕ್ಕೆ 1-0 ಜಯದ ಮುನ್ನಡೆ

    ಕರ್ನಾಟಕದಲ್ಲಿ ಉದ್ಯೋಗ (Employment) ಅವಕಾಶಗಳಿಗೆ ಕೊರತೆ ಇಲ್ಲ. ಮುಖ್ಯಮಂತ್ರಿಗಳ ಮತ್ತು ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಯಡಿ 18 ರಿಂದ 35 ವರ್ಷಗಳ ಒಳಗಿನ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಟ್ಟು, ಉದ್ಯೋಗಗಳಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

    ಸ್ಕಿಲ್ ಪೋರ್ಟಲ್ (Skill Portal) ವೇದಿಕೆಯಲ್ಲಿ ಈಗಾಗಲೇ 250 ಕಂಪನಿಗಳು ನೋಂದಣಿ ಆಗಿವೆ. ಹಾಗೆಯೇ ಸ್ಕಿಲ್ ಕನೆಕ್ಟ್ ಉಪಕ್ರಮದಡಿ 25 ಸಾವಿರ ಉದ್ಯೋಗ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಒಂದೇ ತಿಂಗಳಲ್ಲಿ 6,085 ಕೋಟಿ GST ಸಂಗ್ರಹ – ಸಿಎಂ ಬೊಮ್ಮಾಯಿ

    ಇದೀಗ ಬೆಂಗಳೂರು ದೇಶದ ಜ್ಞಾನ, ಆರ್ಥಿಕ, ಸ್ಟಾರ್ಟಪ್ ಮತ್ತು ಅಗ್ರಿಟೆಕ್ ರಾಜಧಾನಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಬೆಂಗಳೂರಿನಲ್ಲಿ (Bengaluru) ಯುವಜನರ ಉಜ್ವಲ ಭವಿಷ್ಯ ಅಡಗಿದೆ. ಹೀಗಾಗಿ ಲಕ್ಷಾಂತರ ಯುವಜನತೆಗೆ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಇವೆಲ್ಲದರ ಪರಿಣಾಮದಿಂದಲೇ ರಾಜ್ಯದಲ್ಲಿ ನಿರುದ್ಯೋಗ ಪರಿಣಾಮ ಕಡಿಮೆಯಾಗಿದೆ ಎಂದು ವಿವರಿಸಿದರು.

    ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಲು ವಿಫಲರಾಗುವ ವಿದ್ಯಾರ್ಥಿಗಳಿಗೂ ಸರ್ಕಾರ ವಿಶೇಷ ತರಬೇತಿಗೆ ವ್ಯವಸ್ಥೆ ಮಾಡಿದೆ. ಸರ್ವರಿಗೂ ಉದ್ಯೋಗ ಎನ್ನುವುದೇ ಸರ್ಕಾರದ ನೀತಿ. ಪ್ರಸ್ತತ ದಿನದ ಉದ್ಯೋಗ ಮೇಳದಲ್ಲಿ 125 ಕಂಪನಿಗಳು ಪಾಲ್ಗೊಂಡಿದ್ದು, 28 ಸಾವಿರ ಉದ್ಯೋಗ ಅವಕಾಶಗಳು ಲಭ್ಯವಿವೆ. ಎಸ್ಸೆಸ್ಸೆಲ್ಸಿಯಿಂದ ಎಂಜಿನಿಯರಿಂಗ್ ಪದವೀಧರರವರೆಗೆ ಇಲ್ಲಿ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ

    BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ

    ಶಿಮ್ಲಾ: ಯುವ ಸಮೂಹಕ್ಕೆ ಉದ್ಯೋಗದ (Employment) ಬದಲಾಗಿ ಡ್ರಗ್ಸ್ (Drugs) ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಹಿಮಾಚಲ ಪ್ರದೇಶದಲ್ಲಿ ಚುನಾವಣಾ (Himachal Pradesh Elections) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನಿಲುವುಗಳ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿ (BJP) ಪರಿಕಲ್ಪನೆಯನ್ನು ಯಾರೂ ಒಪ್ಪುವುದಿಲ್ಲ. ಹಿಮಾಚಲ ಪ್ರದೇಶದ ಜನರು ತಮ್ಮ ಒಳಿತಿಗಾಗಿ ಸರ್ಕಾರವನ್ನು ಬದಲಾಯಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ನೆರೆಮನೆಯವನಿಂದಲೇ 14ರ ಬಾಲಕಿಯ ಕತ್ತು ಹಿಸುಕಿ ಕೊಲೆ

    ಇದೇ ವೇಳೆ ಬಿಜೆಪಿ (BJP) ಉದ್ಯೋಗ ಸೃಷ್ಟಿಸುವ ಭರವಸೆಗಳ ಕುರಿತು ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಉದ್ಯೋಗ ಹಕ್ಕನ್ನು ಬೆಂಬಲಿಸುವ ಕಾಂಗ್ರೆಸ್ ಆಡಳಿತ ರಾಜ್ಯಗಳಾದ ಛತ್ತಿಸ್‌ಗಢ (Chhattisgarh) ಹಾಗೂ ರಾಜಸ್ಥಾನವನ್ನು (Rajasthan) ಉದಾಹರಣೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಉದ್ಯೋಗಿಗಳ ವಜಾ – ಟ್ವಿಟ್ಟರ್‌ ನಡೆಯನ್ನು ಖಂಡಿಸಿದ ಕೇಂದ್ರ

    ಛತ್ತಿಸ್‌ಗಢದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ಇದೆ. ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅಲ್ಲಿ 5 ಲಕ್ಷ ಉದ್ಯೋಗಗಳನ್ನು ನೀಡಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ 1.3 ಲಕ್ಷ ಉದ್ಯೋಗ (Employment) ಕಲ್ಪಿಸಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ 63 ಸಾವಿರ ಹುದ್ದೆಗಳು ಖಾಲಿಯಿದ್ದರೂ, ಬಿಜೆಪಿ ಅವುಗಳನ್ನು ಭರ್ತಿ ಮಾಡಿಲ್ಲ. ವಿದ್ಯಾವಂತ ಯುವಕರು, ಶ್ರಮಜೀವಿಗಳು ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ಬಿಜೆಪಿ ಉದ್ಯೋಗದ ಬದಲಿಗೆ ಡ್ರಗ್ಸ್ ನೀಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಯುವ ಸಮೂಹ ಏನಾದರೂ ಕೆಲಸ ಮಾಡಿ ತಮ್ಮ-ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಅವರ ಕನಸುಗಳು ಈಡೇರುತ್ತಿಲ್ಲ. ಡ್ರಗ್ಸ್ ಹಾವಳಿ ಹೆಚ್ಚಾಗಿ ದಾರಿ ತಪ್ಪುತ್ತಿದ್ದಾರೆ. ಹಾಗಾಗಿ ಹಿಮಾಚಲ ಪ್ರದೇಶದಲ್ಲಿ ಸುಮಾರು 30 ಲಕ್ಷ ಮಂದಿ ಯುವಸಮೂಹದವರು ಇದ್ದರೂ, 15 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    ಮುಂಬೈ: ಮುಸ್ಲಿಮರು (Muslims) ಎಲ್ಲಾ ಕ್ಷೇತ್ರಗಳಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ ಎಂದು ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಬೇಸರ ವ್ಯಕ್ತಪಡಿಸಿದ್ದಾರೆ.

    ಶನಿವಾರ `ಭಾರತೀಯ ಮುಸ್ಲಿಮರ ಸಮಸ್ಯೆಗಳು’ಶೀರ್ಷಿಕೆ ಅಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ (Muslim Community) ಸೂಕ್ತ ಸೌಲಭ್ಯ ಒದಗಿಸುವ ಬಗ್ಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಕಚ್ಚಾಟ ಬಿಡಿ, ಎಲೆಕ್ಷನ್ ಗೆಲ್ಲಿಸಿ – ಮುಂದಿನ ಸಿಎಂ ಚರ್ಚೆಗೆ ಬ್ರೇಕ್ ಹಾಕಿದ ರಾಗಾ

    ನಿರುದ್ಯೋಗ (Unemployment) ದೇಶದ ಎಲ್ಲಾ ಸಮುದಾಯಗಳ ಸಮಸ್ಯೆಯೂ ಆಗಿದೆ. ಆದಾಗ್ಯೂ ಅಲ್ಪ ಸಂಖ್ಯಾತರ ದೂರುಗಳನ್ನು ಪರಿಶೀಲಿಸುವ ಅಗತ್ಯವಿದೆ. ಮುಸ್ಲಿಂ ಸಮುದಾಯವು ಉರ್ದು ಮೂಲಕ ಕಲೆ, ಕವನ, ಬರವಣಿಗೆ ಕ್ಷೇತ್ರಗಳಲ್ಲಿ ಕೊಡುಗೆ ನೀಡಬಹುದಾಗಿದೆ. ಇದಕ್ಕೆ ಬೆಂಬಲ ಹಾಗೂ ಸಮಾನ ಅವಕಾಶ ಸಿಗಬೇಕಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್

    ಹಿಂದಿ ಚಲನಚಿತ್ರೋದ್ಯಮವನ್ನು (Hindi Film Industry) ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಕೊಡುಗೆ ನೀಡಿದೆ. ಯಾರೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಕೇರಳದಲ್ಲಿ ಅಲ್ಪ ಸಂಖ್ಯಾತರು ಮುಖ್ಯಭಾಷೆಗೆ ಹೇಗೆ ಬೆಂಬಲ ನೀಡುತ್ತಿದ್ದಾರೆ? ಅದರಿಂದ ಹೇಗೆ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ? ಎಂಬುದನ್ನು ಅಧ್ಯಯನ ಮಾಡಬೇಕು. ಆ ಮೂಲಕ ಅಭಿವೃದ್ಧಿಯ ಹಾದಿ ಕಾಣಬೇಕು ಎಂದು ಪವಾರ್ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 8 ಚೀತಾಗಳು ಬಂದವು , ಆದ್ರೆ 16 ಕೋಟಿ ಉದ್ಯೋಗ ಬರಲಿಲ್ಲ – ರಾಹುಲ್‌ ಗಾಂಧಿ ಟೀಕೆ

    8 ಚೀತಾಗಳು ಬಂದವು , ಆದ್ರೆ 16 ಕೋಟಿ ಉದ್ಯೋಗ ಬರಲಿಲ್ಲ – ರಾಹುಲ್‌ ಗಾಂಧಿ ಟೀಕೆ

    ನವದೆಹಲಿ: ಚೀತಾ ಮರು ಪರಿಚಯ ಯೋಜನೆಯಡಿ ನಮೀಬಿಯಯಾದಿಂದ ಭಾರತಕ್ಕೆ 8 ಚೀತಾಗಳನ್ನು ತರಿಸಿಕೊಳ್ಳಲಾಗಿದೆ.

    ಇವುಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ- 25ಕ್ಕೂ ಹೆಚ್ಚು ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಮುಸ್ಲಿಂ ಮುಖಂಡ

    ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘8 ಚೀತಾಗಳು ಬಂದವು. ಈಗ ಹೇಳಿ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ಏಕೆ ಬಂದಿಲ್ಲ?’ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ‘ರಾಷ್ಟ್ರೀಯ ಬೆರೋಜ್‌ಗರ್ ದಿವಾಸ್’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    ಕೇಂದ್ರ ಸರ್ಕಾರದ ಚೀತಾ ಯೋಜನೆಯು ರಾಷ್ಟ್ರೀಯ ಸಮಸ್ಯೆಗಳು ಮತ್ತು ಕಾಂಗ್ರೆಸ್‌ ನಡೆಸುತ್ತಿರುವ ‘ಭಾರತ್ ಜೋಡೊ ಯಾತ್ರೆ’ ಕಡೆಗಿನ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಟೀಕಿಸಿದ್ದರು.

    ಪ್ರಧಾನಿಯವರ ಜನ್ಮದಿನವನ್ನು ಯುವಜನರು ʻರಾಷ್ಟ್ರೀಯ ನಿರುದ್ಯೋಗ ದಿನʼವನ್ನಾಗಿ ಆಚರಿಸುತ್ತಿದ್ದಾರೆ. ವಾರ್ಷಿಕವಾಗಿ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ನರೇಂದ್ರ ಮೋದಿ 8 ವರ್ಷಗಳಾದರೂ ಕೇವಲ 7 ಲಕ್ಷ ಉದ್ಯೋಗ ಮಾತ್ರ ಸೃಷ್ಟಿ ಮಾಡಿದ್ದಾರೆ. 22 ಕೋಟಿ ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಉದ್ಯೋಗ ಸೃಷ್ಟಿಗೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಹೇಳಲಿ ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    ನವದೆಹಲಿ: ಸುತ್ತಮುತ್ತ ನಿರಂತರವಾಗಿ ಶತ್ರು ದೇಶದ ಯುದ್ಧ ಭೀತಿ ಇರುವುದರಿಂದ ಇಸ್ರೇಲ್‍ನಲ್ಲಿ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಗೆ ಮಿಲಿಟರಿ ಟ್ರೈನಿಂಗ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮಾದರಿಯಲ್ಲಿಯೇ ಕೊಂಚ ಬದಲಾವಣೆ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆಯ ಜೊತೆಗೆ ಯುವಕರನ್ನು ಮಿಲಿಟರಿಯತ್ತ ಸೆಳೆಯಲು ದೇಶದಲ್ಲಿ ಅಗ್ನಿಪಥ್ ಯೋಜನೆಯನ್ನು ತರಲಾಗಿದೆ.

    ಏನಿದು ಅಗ್ನಿಪಥ್?:
    ನೂತನ ಅಗ್ನಿಪಥ್ ಯೋಜನೆ ಪ್ರಕಾರ ಸೇನೆಯ 3 ವಿಭಾಗಗಳಲ್ಲಿ ಆಸಕ್ತ ಯುವಕ-ಯುವತಿಯರ ತರಬೇತಿಯೂ ಸೇರಿದಂತೆ ನಾಲ್ಕು ವರ್ಷದ ಮಟ್ಟಿಗೆ ಅಗ್ನಿವೀರ್ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ. 10ನೇ ತರಗತಿ ಹಾಗೂ ಪಿಯುಸಿ ಪಾಸಾಗಿರುವವರು ಅಗ್ನಿವೀರರಾಗಲು ಅರ್ಹರಾಗಿದ್ದಾರೆ. 4 ವರ್ಷದಲ್ಲಿ ಮೊದಲು 6 ತಿಂಗಳು ತರಬೇತಿ ಇರುತ್ತದೆ. ಮೆರಿಟ್ ರೀತಿಯ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ. ಇದು ಇಡೀ ದೇಶಕ್ಕೆ ಅನ್ವಯ ಆಗುತ್ತದೆ.

    ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ 4.62 ಲಕ್ಷ ರೂ. ದಿಂದ 6.92 ಲಕ್ಷ ರೂ.ದವರೆಗೆ ಸ್ಯಾಲರಿ ಪ್ಯಾಕೇಜ್ ಇರುತ್ತದೆ. ತಿಂಗಳಿಗೆ 30 ಸಾವಿರದಿಂದ 40 ಸಾವಿರವರೆಗೆ ಸಂಬಳ ಸಿಗಲಿದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಅಗ್ನಿವೀರರಿಗೆ ಸುಮಾರು 11.70 ಲಕ್ಷ ರೂ. ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ಟ್ಯಾಕ್ಸ್ ಇರಲ್ಲ. ವೈದ್ಯಕೀಯ ವಿಮೆಯೂ ಇರಲಿದೆ. ಆದರೆ ಪಿಂಚಣಿ ಇರಲ್ಲ.

    ಇದರಲ್ಲಿ ಶೇ. 25ರಷ್ಟು ಅಗ್ನಿವೀರರು ಸೇನೆಯಲ್ಲಿ 15 ವರ್ಷ ಸೇನೆಯ ವಿವಿಧ ವಿಭಾಗದಲ್ಲಿ ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ. ಅಗ್ನಿವೀರರು ತಮ್ಮ ಸೇವೆಯ ಅವಧಿಯಲ್ಲಿ ಹುತಾತ್ಮರಾದರೆ ಅವರಿಗೆ ವಿಮೆ ಹೊರತುಪಡಿಸಿ 1 ಕೋಟಿ ರೂ. ಪರಿಹಾರ ನೀಡಲಾಗುವುದು. ಇದನ್ನೂ ಓದಿ: ಮೋದಿ ನಾಟಕ ನಂಬಲು ಯುವಕರು ಮೂರ್ಖರಲ್ಲ: ದಿನೇಶ್ ಗುಂಡೂರಾವ್

    ಅಗ್ನಿಪಥ್ ವಿರೋಧ ಯಾಕೆ?: ನಿರುದ್ಯೋಗದಿಂದ ಹೊರಬರಲು ತಕ್ಷಣ ಮಾಡಿರುವ ಯೋಜನೆಯಾಗಿದೆ. ಇದು ತಾತ್ಕಾಲಿಕ ಪರಿಹಾರ ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ. 4 ವರ್ಷದ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದರ ಬದಲು ಬೇರೆ ವಲಯಕ್ಕೆ ಸೀಮಿತವಾಗುವಂತೆ ಉದ್ಯೋಗಾವಕಾಶವನ್ನು ಮಾಡಬಹುದು. 4 ವರ್ಷದ ಅವಧಿಗೆ ಕೆಲಸ ಮಾಡುವ ಉದ್ದೇಶ ಇದ್ದರೆ ಇವರಲ್ಲಿ ದೇಶ ಸೇವೆಯ ಮನೋಭಾವ ಬರಲ್ಲ ಎನ್ನುವ ವಾದದ ಮೇಲೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆಗೆ ಸಿದ್ದು ವಿರೋಧ

    Live Tv