Tag: underwear

  • ಕೆಣಕಿದ ನೆಟ್ಟಿಗನಿಗಾಗಿ ಒಳಉಡುಪು ಹಾಕದೇ ಫೋಟೋ ಶೂಟ್ ಮಾಡಿಸಿದ ನಟಿ ಸಾಕ್ಷಿ

    ಕೆಣಕಿದ ನೆಟ್ಟಿಗನಿಗಾಗಿ ಒಳಉಡುಪು ಹಾಕದೇ ಫೋಟೋ ಶೂಟ್ ಮಾಡಿಸಿದ ನಟಿ ಸಾಕ್ಷಿ

    ನಾನಾ ರೀತಿಯ ಫೋಟೋ ಶೂಟ್ ಗಳನ್ನು ಮಾಡಿಸಿ, ಅಭಿಮಾನಿಗಳಿಗಾಗಿ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡುತ್ತಲೇ ಇರುತ್ತಾರೆ ದಕ್ಷಿಣದ ಖ್ಯಾತ ನಟಿ ಸಾಕ್ಷಿ ಅಗರವಾಲ್ (Sakshi Agrawal). ಇತ್ತೀಚೆಗೆ ಸಾಕ್ಷಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಆ ಫೋಟೋ ನೋಡಿದ ನೆಟ್ಟಿಗನೊಬ್ಬ ಸಾಕ್ಷಿಯನ್ನು ಕೆದಕಿದ್ದ. ಅದಕ್ಕೆ ತಕ್ಕ ಉತ್ತರ ಎನ್ನುವಂತೆ ಫೋಟೋವನ್ನು ಶೇರ್ ಮಾಡಿದ್ದಾರೆ ಸಾಕ್ಷಿ.

    Sakshi-Agarwal-1
    ( Photos : Instagram )

    ಫೋಟೋವೊಂದರ ಕೆಳಗೆ ಕಾಮೆಂಟ್ ಮಾಡಿದ್ದ ನೆಟ್ಟಿಗ ‘ಸೌತ್ ನಟಿಯರು ಒಳ ಉಡುಪು (Underwear) ಹಾಕದೇ ಫೋಟೋಶೂಟ್ ಮಾಡಿಸಿಕೊಳ್ಳುವ ಧೈರ್ಯವಿಲ್ಲ.

    Sakshi-Agarwal-3
    ( Photos : Instagram )

    ಒಳ ಉಡುಪಿನಲ್ಲೂ ಫೋಟೋ ಶೂಟ್ ಮಾಡಿಸಿಕೊಳ್ಳುವ ಧೈರ್ಯ ಎಲ್ಲಿದೆ ಎಂದು ಕೆಣಗಿದ್ದ. ಆ ನೆಟ್ಟಿಗನಿಗೆ ತಕ್ಕ ಉತ್ತರ ಎನ್ನುವಂತೆ ಒಳಉಡುಪು ಹಾಕದೇ ಫೋಟೋಶೂಟ್ ಮಾಡಿಸಿ, ಆ ಫೋಟೋವನ್ನು ಹಂಚಿಕೊಂಡಿದ್ದಾರೆ ಸಾಕ್ಷಿ.

    Sakshi-Agarwal-2
    ( Photos : Instagram )

    ಆ ನೆಟ್ಟಿಗನಿಗೆ ಬರೀ ಫೋಟೋ ಮೂಲಕ ಮಾತ್ರವಲ್ಲ, ಸೌತ್ ನಟಿಯರಿಗೆ ಆ ರೀತಿಯ ಉಡುಪು ಧರಿಸಿ, ಫೋಟೋ ಶೂಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಟ್ಯಾಲೆಂಟ್ ನಿಂದ ಅವರು ಅವಕಾಶ ಪಡೆಯುತ್ತಾರೆ ಅಂತಾನೂ ತಿರುಗೇಟು ನೀಡಿದ್ದರು. ಅನೇಕರು ಸಾಕ್ಷಿ ಪರ ಕಾಮೆಂಟ್ ಮಾಡಿದ್ದರು. ಇದೀಗ ಫೋಟೋಗೂ ಅನೇಕರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    Sakshi-Agarwal-4
    ( Photos : Instagram )

    ಸಾಕ್ಷಿ ಕೇವಲ ತಮಿಳು, ತೆಲುಗಿನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಒಂದು ಚಿತ್ರದಲ್ಲಿ ನಟಿಸಿದ್ದಾರೆ.

    Sakshi-Agarwal-5
    ( Photos : Instagram )

    ಜಗ್ಗೇಶ್ ಮುಖ್ಯಭೂಮಿಕೆಯ ಸಾಫ್ಟ್ ವೇರ್ ಗಂಡ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಅವರು ಗ್ಲಾಮರೆಸ್ ಪಾತ್ರ ಮಾಡಿದ್ದರು.

    ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತಮಿಳಿನ ಬಿಗ್ ಬಾಸ್ ಶೋನಲ್ಲೂ ಸಾಕ್ಷಿ ಭಾಗಿಯಾಗಿದ್ದರು.

    Sakshi-Agarwal-6
    ( Photos : Instagram )

    ಕಮಲ್ ಹಾಸನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 3ರಲ್ಲಿ ಸಾಕ್ಷಿ ದೊಡ್ಮೆನೆಯ ಸದಸ್ಯಯಾಗಿ ಮನೆ ಪ್ರವೇಶ ಮಾಡಿದ್ದರು. ಈ ಮೂಲಕವೂ ಅವರು ಫೇಮಸ್ ಆಗಿದ್ದರು.

  • ಕ್ರಿಕೆಟಿಗ ರಾಹುಲ್ ಒಳ ಉಡುಪು ಕಂಡು ಹೆಸರಾಂತ ನಟಿ ಕಸ್ತೂರಿ ಕಾಮೆಂಟ್ : ಹೌದು ಹುಲಿಯಾ ಎಂದ ರಾಹುಲ್ ಅಭಿಮಾನಿಗಳು

    ಕ್ರಿಕೆಟಿಗ ರಾಹುಲ್ ಒಳ ಉಡುಪು ಕಂಡು ಹೆಸರಾಂತ ನಟಿ ಕಸ್ತೂರಿ ಕಾಮೆಂಟ್ : ಹೌದು ಹುಲಿಯಾ ಎಂದ ರಾಹುಲ್ ಅಭಿಮಾನಿಗಳು

    ನ್ನಡದ ತುತ್ತಾಮುತ್ತಾ, ಜಾಣ, ಹಬ್ಬ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಕಸ್ತೂರಿ ನಾನಾ ಕಾರಣಗಳಿಂದಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಭಾಷಾ ವಿಚಾರವಾಗಿ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಟ್ವಿಟ್ ವಾರ್ ನಲ್ಲೂ ಕಸ್ತೂರಿ ಕಾಣಿಸಿಕೊಂಡಿದ್ದರು. ಕಿಚ್ಚನ ಪರವಾಗಿ ಬ್ಯಾಟ್ ಬೀಸಿ ಸುದ್ದಿಯಾಗಿದ್ದರು. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಕಸ್ತೂರಿ ಅವರು ಎಂಬತ್ತರ ದಶಕದ ಬಹುಬೇಡಿಕೆಯ ನಟಿ. ಈಗಲೂ ಆ ಬೇಡಿಕೆ ಹಾಗೆಯೇ ಇದೆ. ಸದ್ಯ ಹತ್ತಾರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಇಂತಹ ನಟಿ ಇದೀಗ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರ ಒಳ ಉಡುಪಿನ ಬಗ್ಗೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ಟೀಮ್ ಇಂಡಿಯಾ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ಇದೀಗ ಒಳ ಉಡುಪೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಸ್ತೂರಿ, ಅದಕ್ಕಷ್ಟು ಚಂದದ ಸಾಲುಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರ ಚಿಪ್ಸ್, ಕೂಲ್ ಡ್ರಿಂಕ್ಸ್, ಆನ್ ಲೈನ್ ಗೇಮ್ ರೀತಿಯ ಜಾಹೀರಾತಿನಲ್ಲಿ ನಟಿಸಿದ್ದನ್ನು ನೋಡಿದ್ದೆ. ರಾಹುಲ್ ಅವರಿಗಿಂತ ಭಿನ್ನ ಹಾದಿ ಹಿಡಿದಿದ್ದಾರೆ. ಅವರು ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಲುಕ್ ಚೆನ್ನಾಗಿದೆ. ಕಪಾಟಿನಲ್ಲಿರುವ ಹುಡುಗರ ಒಳ ಉಡುಪುಗಳು ಈಗ ಹೊರ ಬರುವ ಭರವಸೆ ಮೂಡಿಸಿದ್ದಾರೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ಕಸ್ತೂರಿ ರಂಗ ಕೇವಲ ನಟಿಯಾಗಿರದೇ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದಾರೆ. ಅಲ್ಲದೇ, ರಾಜಕೀಯ ಮತ್ತು ಧಾರ್ಮಿಕ ವಿಷಯಗಳ ಬಗ್ಗೆಯೂ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ. ಹೀಗಾಗಿ ಪುರುಷರ ಒಳ  ಉಡುಪಿನ ಬಗ್ಗೆ ಅವರು ಮಾಡಿರುವ ಕಾಮೆಂಟ್ ಸದ್ಯ ವೈರಲ್ ಆಗಿದೆ.

  • ಅಂಡರ್‌ವೇರ್‌ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ

    ಅಂಡರ್‌ವೇರ್‌ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ

    ಕ್ಯಾನ್‍ಬೆರಾ: ಆಸ್ಟ್ರೇಲಿಯಾದ ಚುನಾವಣೆ ಹಲವಾರು ಕಾರಣಗಳಿಂದಾಗಿ ಸಾಕಷ್ಟು ಮಾಧ್ಯಮಗಳ ಗಮನವನ್ನು ಸೆಳೆಯುತ್ತಿದೆ. ಅದರಲ್ಲಿಯೂ ಅಂಡರ್‌ವೇರ್‌ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ ಎಂಬ ವಿಲಕ್ಷಣ ಸುದ್ದಿ ಕೇಳಿ ಎಲ್ಲರು ಆಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯನಾ ಎಂದು ಪ್ರಶ್ನೆ ಕೇಳುತ್ತಿದ್ರೆ, ಹೌದು. ಇದು ನಿಜವಾಗಿ ಆಸ್ಟ್ರೇಲಿಯಾದ ಚುನಾವಣೆಯಲ್ಲಿ ನಡೆದಿದೆ.

    ಆಸ್ಟ್ರೇಲಿಯಾದ ಸಾರ್ವತ್ರಿಕ ಚುನಾವಣೆಗಳು ಇದೇ 21ರಂದು ಮುಗಿದಿದೆ. ಲಿಬರಲ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಜಾಗದಲ್ಲಿ ಕಾರ್ಮಿಕ ನಾಯಕ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗುತ್ತಿದ್ದಾರೆ. ಆದರೆ ಈ ಚುನಾವಣೆಯ ಮತದಾನವು ಭಿನ್ನ ಮತ್ತು ವಿಚಿತ್ರವಾಗಿ ನಡೆಯಿತು. ಇದನ್ನೂ ಓದಿ: ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್ 

     

    View this post on Instagram

     

    A post shared by Budgy Smuggler™ (@budgysmuggler)

    ಇನ್‍ಸ್ಟಾಗ್ರಾಮ್‍ನಲ್ಲಿ ಬಝೀಸ್ಮಗ್ಲರ್ ಎಂಬ ಅಂಡರ್‌ವೇರ್‌ ಕಂಪನಿ, ಚುನಾವಣೆ ಬಿಸಿಯು ಬರುತ್ತಿದೆ. ನೀವು ಯಾರಿಗೆ ಮತ ಹಾಕುತ್ತೀರಾ ಎಂಬುದಕ್ಕೆ ನಮಗೆ ಅಭ್ಯಂತರವಿಲ್ಲ. ಆದರೆ ನೀವು ಪ್ಯಾಂಟ್ ಇಲ್ಲದೆ ಮತದಾನ ಮಾಡುವ ನಿಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಒಂದು ವೇಳೆ ನೀವು ಈ ರೀತಿ ಮಾಡಿ ಫೋಟೋ ಶೇರ್ ಮಾಡಿಕೊಂಡರೆ ಅವರಿಗೆ ಒಳ ಉಡುಪನ್ನು ಉಚಿತವಾಗಿ ಕೊಡುತ್ತೇವೆ ಎಂದು ಪೋಸ್ಟ್ ಮಾಡಲಾಗಿತ್ತು.

     

    View this post on Instagram

     

    A post shared by Budgy Smuggler™ (@budgysmuggler)

    ಈ ಸವಾಲನ್ನು ಸ್ವೀಕರಿಸಿದ ಹಲವು ಜನರು ಅಂಡರ್‌ವೇರ್‌ ಮತ್ತು ಸ್ವೀಮ್‍ವೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಈ ಫೋಟೋ ಶೇರ್ ಮಾಡಿದ ಮತದಾರರು, ಬಝೀಸ್ಮಗ್ಲರ್‌ನಲ್ಲಿ ಇದು ದುಬಾರಿ ಚುನಾವಣಾ ದಿನವಾಗಿರುತ್ತದೆ. ಎಲ್ಲರಿಗೂ ಫ್ರೀಯಾಗಿ ಒಳ ಉಡುಪುಕೊಂಡಲು ಸಿದ್ಧರಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕ- ಕ್ರಮಕ್ಕೆ ಯುವ ಬಿಜೆಪಿ ಆಗ್ರಹ

    ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಮತದಾರರು ತಮ್ಮ ಫೋಟೋವನ್ನು #SmugglersDecide ಎಂಬ ಹ್ಯಾಶ್‍ಟ್ಯಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ ತಕ್ಷಣ ಬಝೀಸ್ಮಗ್ಲರ್ ಕಂಪನಿಯು ಅವರಿಗೆ ಉಚಿತವಾಗಿ ಅಂಡರ್‌ವೇರ್‌ ಕಳಿಸಿದೆ. ಅಲ್ಲದೇ ಈ ಬ್ರ್ಯಾಂಡ್ ಅಂಡರ್‌ವೇರ್‌ ಆಸ್ಟ್ರೇಲಿಯಾದಲ್ಲಿ ದುಬಾರಿ ಬೆಲೆಯನ್ನು ಹೊಂದಿದೆ.

  • ಪೊಲೀಸ್ ಠಾಣೆಯಲ್ಲೇ ಅರೆನಗ್ನವಾಗಿ ಓಡಾಡಿದ ಹೆಡ್‍ಕಾನ್‍ಸ್ಟೇಬಲ್

    ಪೊಲೀಸ್ ಠಾಣೆಯಲ್ಲೇ ಅರೆನಗ್ನವಾಗಿ ಓಡಾಡಿದ ಹೆಡ್‍ಕಾನ್‍ಸ್ಟೇಬಲ್

    ಲಕ್ನೋ: ಉತ್ತರ ಪ್ರದೇಶದ ಪೋಲಿಸ್ ಠಾಣೆಯೊಂದರಲ್ಲಿ ಹೆಡ್‍ಕಾನ್‍ಸ್ಟೇಬಲ್ ಒಬ್ಬ ಒಳಉಡುಪಿನಲ್ಲಿಯೇ ತಿರುಗಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಠಾಣೆಯ ಎಸ್‍ಪಿ ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ವೈರಲ್ ಆದ ವೀಡಿಯೋ ನೌತನ್ವಾ ಪೊಲೀಸ್ ಠಾಣೆಯದ್ದಾಗಿದ್ದು, ಹೆಡ್‍ಕಾನ್‍ಸ್ಟೇಬಲ್ ಗಂಗೋತ್ರಿ ಯಾದವ್ ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಭಾನುವಾರ ಸಂಜೆ ಇದ್ದಕ್ಕಿದ್ದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತು. ವೀಡಿಯೋದಲ್ಲಿ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಒಳಉಡುಪು ಧರಿಸಿ ಆವರಣದಲ್ಲಿ ಓಡಾಡುತ್ತಿದ್ದನು. ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ. ಇದಲ್ಲದೇ ಮಹಿಳಾ ದೂರುದಾರರೂ ಅಲ್ಲಿಗೆ ಬರುತ್ತಿರುತ್ತಾರೆ. ಹೀಗಿರುವಾಗ ಆತ ಈ ರೀತಿ ಅರೆ ನಗ್ನವಾಗಿ ಓಡಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ವೀಡಿಯೋದಲ್ಲಿ, ಆತ ಪೊಲೀಸ್ ಠಾಣೆಯ ಕಚೇರಿಯ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಸಮಯದ ನಂತರ ಅವನು ಕಚೇರಿಯಿಂದ ಹೊರನಡೆದಿದ್ದಾನೆ. ವಿಷಯ ತಿಳಿದ ಎಸ್‍ಪಿ ಡಾ.ಕೌಸ್ತುಭ್ ಅವರು, ತಕ್ಷಣವೇ ಪೇದೆ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    ಈ ಕುರಿತು ಎಸ್‍ಪಿ ಅವರು, ಎಲ್ಲ ಪೊಲೀಸರಿಗೂ ಸಮವಸ್ತ್ರ ಧರಿಸಿ ಶಿಸ್ತಿನಿಂದ ಇರುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿ ಒಳ ಉಡುಪು ಧರಿಸುವುದು ಸಲ್ಲದು. ಅಲ್ಲಿಗೆ ಮಹಿಳೆಯರೂ ದೂರುಗಳೊಂದಿಗೆ ಬರುತ್ತಲೇ ಇರುತ್ತಾರೆ. ವೀಡಿಯೋ ಆಧಾರದ ಮೇಲೆ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

     

  • ಒಳಉಡುಪು ಕದ್ದು ಧರಿಸಿದ್ದಕ್ಕೆ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ!

    ಒಳಉಡುಪು ಕದ್ದು ಧರಿಸಿದ್ದಕ್ಕೆ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ!

    ಲಕ್ನೋ: ಒಳಉಡುಪು ಕದ್ದಿದ್ದಕ್ಕೆ ಕೊಲೆಯೊಂದು ನಡೆದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ವಿವೇಕ್ ಎಂದು ಗುರುತಿಸಲಾಗಿದೆ. ಈತನನ್ನು ಸಹೋದ್ಯೋಗಿ ಅಜಯ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವ ವಿವೇಕ್ ಹಾಗೂ ಅಜಯ್ ಗುರುವಾರ ಒಂದೇ ರೂಂನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ವಿವೇಕ್ ಧರಿಸಿದ್ದ ಅಂಡರ್ ವೇರ್ ಅನ್ನು ಅಜಯ್ ಗಮನಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

    ಸರ್ಕಲ್ ಆಫೀಸರ್ ಅಕ್ಬರ್ ಪುರ್ ಸಿಂಗ್ ಮಾತನಾಡಿ, ಒಳ ಉಡುಪು ವಿಚಾರವಾಗಿ ಅಜಯ್ ಹಾಗೂ ವಿವೇಕ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಜಯ್ ಅಲ್ಲೇ ಇದ್ದ ತರಕಾರಿ ಕಟ್ ಮಾಡುವ ಚಾಕು ತೆಗೆದುಕೊಂಡು ವಿವೇಕ್ ಗೆ ಇರಿದಿದ್ದಾನೆ. ಘಟನೆಯಿಂದ ವಿವೇಕ್ ಗಂಭೀರ ಗಾಯಗೊಳ್ಳುತ್ತಿದ್ದಂತೆಯೇ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿಸಿದ್ದಾರೆ.

    ಇತ್ತ ಘಟನೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕ್ ನನ್ನು ಇನ್ನೊಬ್ಬ ಸಹೋದ್ಯೋಗಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ವಿವೇಕ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

    ಘಟನೆ ಸಂಬಂಧಿಸಿದಂತೆ ಆರೋಪಿ ಅಯ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಫ್ಯಾಕ್ಟರಿ ಮಾಲೀಕ ಹಾಗೂ ಕೆಲಸ ಸಹೋದ್ಯೋಗಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

    ಕೇಪ್‍ಟೌನ್: ಮಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದ್ದು, ಇದರಿಂದ ಅನೇಕ ರೀತಿಯ ತಮಾಷೆಯ ಘಟನೆಗಳು ನಡೆದಿವೆ. ಕೆಲವರಂತೂ ಮಾಸ್ಕ್ ಹಾಕೋದನ್ನೇ ಮರೆತು ಬಿಡುತ್ತಾರೆ. ಅಂತೆಯೇ ಇದೀಗ ಯುವತಿಯೊಬ್ಬಳು ಸೂಪರ್ ಮಾರ್ಕೆಟ್ ನಲ್ಲಿ ತನ್ನ ಒಳಉಡುಪನ್ನೇ ಮಾಸ್ಕ್ ಆಗಿ ಮಾಡಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ಹೌದು. ಯುವತಿಯೊಬ್ಬಳು ನಗರದ ಸೂಪರ್ ಮಾರ್ಕೆಟ್ ಗೆ ಮಾಸ್ಕ್ ಮರೆತು ಬಂದಿದ್ದಳು. ಈಕೆಯನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಕೇಳಿದ್ದಾರೆ. ಇದರಿಂದ ಗಲಿಬಿಲಿಗೊಂಡ ಯುವತಿ ಕೂಡಲೇ ತನ್ನ ಅಂಡರ್‍ವೇರ್ ಕಳಚಿ ಅದನ್ನೇ ಮಾಸ್ಕ್ ನಂತೆ ಬಳಸಿಕೊಂಡಿದ್ದಾಳೆ. ಸದ್ಯ ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ವೀಡಿಯೋದಲ್ಲಿ ಸೂಪರ್ ಮಾರ್ಕೆಟ್ ಸೆಕ್ಯೂರಿಟಿ ಗಾರ್ಡ್ ಯುವತಿ ಬಳಿ ಬಂದು ಮಾಸ್ಕ್ ಧರಿಸದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೇ ಅಂಗಡಿ ಒಳಕ್ಕೆ ಬರಲು ಬಿಡುವುದಿಲ್ಲ. ನೀವು ಹೇಗೆ ಒಳಗೆ ಬಂದ್ರಿ ಎಂದು ಗದರಿಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬೈಗುಳದಿಂದ ಆತಂಕಗೊಂಡ ಯುವತಿ ಎಲ್ಲರ ಮುಂದೆಯೇ ಕೂಡಲೇ ತನ್ನ ಅಂಡರ್ ವೇರ್ ಕಳಚಿದ್ದಾಳೆ. ಅಲ್ಲದೆ ನಂತರ ಅದನ್ನೇ ಮಾಸ್ಕ್ ಆಗಿ ಮುಖಕ್ಕೆ ಕಟ್ಟಿಕೊಂಡಿದ್ದನ್ನು ಕಾಣಬಹುದಾಗಿದೆ.

    ಈ ವೈರಲ್ ವೀಡಿಯೋ ನೋಡಿದ ನೆಟ್ಟಿಗರು ಏನಿದು..? ಇಲ್ಲಿ ಏನು ನಡೀತಾ ಇದೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಘಟನೆಗೆ ಸಾಕ್ಷಿಯಾದ ಮಹಿಳೆಯೊಬ್ಬರು ಯುವತಿಯ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಒಳ ಉಡುಪಿಗಿಂದ ಹೆಚ್ಚು ಬ್ಯಾಕ್ಟೀರಿಯಾ ನಾವು ಧರಿಸುವ ಮಾಸ್ಕ್ ಮೇಲೆಯೇ ಇರುತ್ತದೆ. ಹೀಗಾಗಿ ಯುವತಿ ಉತ್ತಮ ಕೆಲಸವನ್ನೇ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

    https://twitter.com/YB_JLN/status/1364253718904979462

  • ಪಾಕಿಗೆ ಅಂಡರ್‌ವೇರ್‌ನಿಂದ ತಯಾರಿಸಿದ ಮಾಸ್ಕ್ ಕಳುಹಿಸಿದ ಚೀನಾ

    ಪಾಕಿಗೆ ಅಂಡರ್‌ವೇರ್‌ನಿಂದ ತಯಾರಿಸಿದ ಮಾಸ್ಕ್ ಕಳುಹಿಸಿದ ಚೀನಾ

    ಇಸ್ಲಾಮಾಬಾದ್: ಸಮಸ್ಯೆ ಬಂದಾಗ ಪಾಕಿಸ್ತಾನವನ್ನು ವಿಶ್ವದ ಪ್ರಮುಖ ವೇದಿಕೆಗಳಲ್ಲಿ ಪಾರು ಮಾಡುವ ಚೀನಾ ಈಗ ಅಂಡರ್‌ವೇರ್‌ನಿಂದ ತಯಾರಾದ ಮಾಸ್ಕ್ ಕಳುಹಿಸಿ ನಗೆಪಾಟಲಿಗೆ ಗುರಿಯಾಗಿದೆ.

    ವೇಗವಾಗಿ ಹಬ್ಬುತ್ತಿರುವ ಕೊರೊನಾ ನಿಯಂತ್ರಿಸಲು ಪಾಕಿಸ್ತಾನ ಗುಣಮಟ್ಟದ ಎನ್95 ಮಾಸ್ಕ್ ಗಳಿಗೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ಪುರಸ್ಕರಿಸಿದ ಚೀನಾ ಮಾಸ್ಕ್ ಗಳನ್ನು ಕಳುಹಿಸಿಕೊಟ್ಟಿದೆ.

    ತನ್ನ ಆಪ್ತ ದೇಶವಾಗಿರುವ ಚೀನಾ ಕಳುಹಿಹಿಸಿದ ಮಾಸ್ಕ್ ಗಳನ್ನು ಸರ್ಕಾರ ಪರಿಶೀಲಿಸದೇ ನೇರವಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದೆ. ಆಸ್ಪತ್ರೆಯ ಸಿಬ್ಬಂದಿ ಪ್ಯಾಕ್ ತೆರೆದು ನೋಡಿದಾಗ ಅಂಡರ್‍ವೇರ್ ನಿಂದ ತಯಾರಾದ ಮಾಸ್ಕ್ ನೋಡಿ ಶಾಕ್ ಆಗಿದ್ದಾರೆ.

    ಈ ವಿಚಾರ ಪಾಕಿಸ್ತಾನದ ಟಿವಿ ಮಧ್ಯಮಗಳಲ್ಲಿ ಪ್ರಸಾರವಾದ ಬಳಿಕ ವಿಡಿಯೋ ವೈರಲ್ ಆಗಿದೆ.

    ಪಾಕಿಸ್ತಾನ ಸರ್ಕಾರ ಚೀನಾ ಬಳಿ 2 ಲಕ್ಷ ಫೇಸ್ ಮಾಸ್ಕ್, 2 ಸಾವಿರ ಎನ್ 95 ಮಾಸ್ಕ್, 5 ವೆಂಟಿಲೇಟರ್, 2 ಸಾವಿರ ಟೆಸ್ಟಿಂಗ್ ಕಿಟ್ಸ್, 2 ಸಾವಿರ ಮೆಡಿಕಲ್ ರಕ್ಷಣಾ ವಸ್ತ್ರಗಳನ್ನು ಕಳಹಿಸಬೇಕು ಎಂದು ಮನವಿ ಮಾಡಿತ್ತು.

    ಕೊರೊನಾ ವೈರಸ್ ಭೀತಿಯಿಂದ ಪಾಕಿಸ್ತಾನ ಚೀನಾ ಜೊತೆಗಿನ ಗಡಿಯನ್ನು ಮುಚ್ಚಿದೆ. ಆದರೆ ಚೀನಾ ಮೆಡಿಕಲ್ ವಸ್ತುಗಳನ್ನು ಸಾಗಿಸಲು ಗಡಿಯನ್ನು ತೆರೆಯಬೇಕೆಂದು ಕೇಳಿಕೊಂಡಿತ್ತು.

  • ವಿಮಾನದಲ್ಲಿ ಪ್ರಯಾಣಿಕರ ಎದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಮಹಿಳೆಯ ವಿಡಿಯೋ ವೈರಲ್!

    ವಿಮಾನದಲ್ಲಿ ಪ್ರಯಾಣಿಕರ ಎದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಮಹಿಳೆಯ ವಿಡಿಯೋ ವೈರಲ್!

    ಅಂಕಾರಾ: ವಿಮಾನದಲ್ಲಿ ಮಹಿಳೆಯೊಬ್ಬರು ಪ್ರಯಾಣಿಕರೆದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

    ಈ ಘಟನೆ ಫೆಬ್ರವರಿ 14 ರಂದು ಟರ್ಕಿಯ ಅಂಟಾಲ್ಯಾ ದಿಂದ ಮಾಸ್ಕೋ ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದಿದೆ. ಮಹಿಳೆ ಒಳಉಡುಪು ಒಣಗಿಸುತ್ತಿರುವ ದೃಶ್ಯವನ್ನು ಹಿಂಬದಿ ಕುಳಿತ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಮಹಿಳೆ ಒಳಉಡುಪನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಎಸಿ ಕೆಳಗಡೆ ಒಣಗಿಸುತ್ತಿರುವುದನ್ನು ಕಾಣಬಹುದು. ಆದ್ರೆ ಮಹಿಳೆ ವಿಮಾನದಲ್ಲಿ ಈ ರೀತಿ ನಡೆದುಕೊಂಡಾಗ ಉಳಿದ ಪ್ರಯಾಣಿಕರಿಗೆ ಅಚ್ಚರಿಯೆನಿಸಿದ್ರೂ, ಮಹಿಳೆಯನ್ನ ಪ್ರಶ್ನಿಸದೇ ಸುಮ್ಮನೆ ಕುಳಿತಿದ್ದರು ಎಂದು ವರದಿಯಾಗಿದೆ.

    ಮಹಿಳೆ ಯಾವುದೇ ಮುಜುಗರವಿಲ್ಲದೇ ಪ್ರಯಾಣಿಕರ ಎದುರೇ ಸುಮಾರು 20 ನಿಮಿಷಗಳ ಕಾಲ ಒಳಉಡುಪು ಕೈಯಲ್ಲಿ ಹಿಡಿದುಕೊಂಡೇ ಎಸಿ ಕೆಳಗಡೆ ಒಣಗಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು, ಮಹಿಳೆಯ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

    https://www.youtube.com/watch?v=xBhL8fc451U

  • ಜಿಪಿಎಸ್ ರೇಪ್ ಪ್ರೂಫ್ ಒಳಉಡುಪು ತಯಾರಿಸಿದ ಯುವತಿ

    ಜಿಪಿಎಸ್ ರೇಪ್ ಪ್ರೂಫ್ ಒಳಉಡುಪು ತಯಾರಿಸಿದ ಯುವತಿ

    ಲಕ್ನೋ: ಇತ್ತೀಚೆಗೆ ಪ್ರತಿನಿತ್ಯ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳದ ಪ್ರಕರಣಗಳು ನಡೆಯುತ್ತಿವೆ. ಆದ್ರೆ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರಿಗೆ ಸೂಕ್ತ ಕಾಲದಲ್ಲಿ ಸಹಾಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಯುವತಿಯರ ರಕ್ಷಣೆಗಾಗಿ ಉತ್ತರ ಪ್ರದೇಶ ರಾಜ್ಯದ ಫಾರುಖಾಬಾದ್‍ನ ಯುವತಿ ಜಿಪಿಎಸ್ ಉಳ್ಳ ಒಳಉಡುಪನ್ನು ತಯಾರಿಸಿದ್ದಾರೆ.

    ಸೀನು ಕುಮಾರಿ ಎಂಬವರು ಈ ವಿಶೇಷ ಒಳ ಉಡುಪನ್ನು ತಯಾರಿಸಿದ್ದಾರೆ. ಈ ಒಳ ಉಡುಪಿನಲ್ಲಿ ಚಿಕ್ಕದಾದ ಲಾಕ್ ಅಳವಡಿಸಲಾಗಿದ್ದು, ಅದಕ್ಕೆ ಪಾಸ್‍ವರ್ಡ್ ನೀಡಲಾಗುತ್ತದೆ. ಪಾಸ್‍ವರ್ಡ್ ನೀಡುವರೆಗೂ ಅದು ತೆರೆಯುವದಿಲ್ಲ. ಹಾಗೆಯೇ ಬಟ್ಟೆಯಲ್ಲಿ ಜಿಪಿಎಸ್ ಯಂತ್ರವನ್ನು ಜೋಡಣೆ ಮಾಡಲಾಗಿದೆ. ಜಿಪಿಎಸ್ ನೀವಿರುವ ಸ್ಥಳದ ಮಾಹಿತಿಯನ್ನು ನಿಮ್ಮ ಪೋಷಕರಿಗೆ ನೀಡುತ್ತದೆ. ಉಡುಪಿನ ಮಧ್ಯಭಾಗದಲ್ಲಿ ಲಾಕ್ ಜೋಡಿಸಲಾಗಿದ್ದು, ಕೊನೆಗೆ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೀನು ಕುಮಾರಿ ಈ ವಿಶಿಷ್ಟ ತಂತ್ರಜ್ಞಾನವುಳ್ಳ ಒಳಉಡುಪನ್ನು ತಯಾರಿಸಲು 4300 ರೂ.ಗಳನ್ನು ಖರ್ಚು ಮಾಡಿದ್ದಾರೆ.

    ಒಂದು ವೇಳೆ ಯಾವುದೇ ಕಾಮುಕರು ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ರೆ, ಜಿಪಿಎಸ್ ಮೂಲಕ ನಾವು ಫೀಡ್ ಮಾಡಿರುವ ಮೆಸೇಜ್ ಕಳುಹಿಸಿಬಹುದು. ಈ ವೇಳೆ ದುಷ್ಕರ್ಮಿಗಳ ಮುಖವನ್ನು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸೀನುಕುಮಾರಿ ತಾವು ತಯಾರಿಸಿರುವ ಒಳ ಉಡುಪಿನ ಮಾದರಿಯನ್ನು ಅಲಹಬಾದ್ ನ್ಯಾಷನಲ್ ಇನೋವೆಷನ್ ಫೌಂಡೇಶನ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ.

    https://www.youtube.com/watch?time_continue=181&v=2tPXShZjzbA

  • ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಮುಂಬೈ: ತಮ್ಮ ಒಳ ಉಡುಪಿನಲ್ಲಿ 4 ಕೆ.ಜಿ ಯಷ್ಟು ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಭಾರತೀಯ ಮೂಲದ ಮಹಿಳೆಯರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಮಲೇಷಿಯಾದ ಸಂತಾಲೆತ್ಮಿ ಸುಮಮಾನಂ(41) ಹಾಗೂ ಸಿಂಗಾಪುರದ ಮ್ಯಾಗಿಸ್ವೇರಿ ಜೈರಾಮ್ನ(59) ಬಂಧಿತ ಮಹಿಳೆಯರು.

    ಶನಿವಾರ ಈ ಮಹಿಳೆಯರಿಬ್ಬರು ಜೆಟ್ ಏರ್ ವೇಸ್ ಫ್ಲೈಟ್ 9ಢ 009 ಮೂಲಕ 3 ಗಂಟೆ ಸುಮಾರಿಗೆ ಮುಂಬೈ ಏರ್‍ಪೋರ್ಟ್ ಗೆ ಬಂದಿಳಿದಿದ್ದಾರೆ. ಈ ವೇಳೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಮಹಿಳೆಯರು ತಮ್ಮ ಸೊಂಟ, ಕೈ ಅಡಿ ಹಾಗೂ ಒಳ ಉಡುಪಿನಲ್ಲಿ ಸುಮಾರು 1.2 ಕೋಟಿ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಓರ್ವ ಮಹಿಳೆ ತಾನು ಶಾಪಿಂಗ್ ಮುಗಿಸಿ ಬಂದಿದ್ದು, ನಾಳೆ ಸಿಂಗಾಪುರಕ್ಕೆ ತೆರಳಲಿದ್ದೇನೆ ಅಂತ ಅಧಿಕಾರಿಗಳ ಜೊತೆ ಹೇಳಿದ್ದಾಳೆ. ಆದ್ರೆ ಆಕೆಯ ಹೇಳಿಕೆಯಿಂದ ಅಧಿಕಾರಿಗಳಲ್ಲಿ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಇಬ್ಬರು ಮಹಿಳೆಯರಿಂದ ಅಧಿಕಾರಿಗಳು ತಲಾ 2 ಕೆಜಿ ಚಿನ್ನದ ಸರವನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಚಿನ್ನವನ್ನು ಸ್ವೀಕರಿಸಲು ವ್ಯಕ್ತಿಯೊಬ್ಬರು ಹೊರಗಡೆ ನಿಂತಿರುವುದಾಗಿ ಮಹಿಳೆಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಈ ವಿಚಾರ ತಿಳಿದು ಅಧಿಕಾರಿಗಳು ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವೇಳೆ `ತಾನು ಸಿಂಗಾಪುರ ಮೂಲದ ವ್ಯಕ್ತಿಯಿಂದ ನಾನು ಚಿನ್ನ ಖರೀದಿಸುತ್ತಿದ್ದೆ. ಆದ್ರೆ ಆತ ಯಾರ ಬಳಿ ಕಳುಹಿಸುತ್ತಿದ್ದಾನೆ ಅಂತ ನನಗೆ ಗೊತ್ತಿಲ್ಲ. ಆತ ಚಿನ್ನ ಕಳುಹಿಸುತ್ತಿರೋ ವ್ಯಕ್ತಿಯ ಫೋಟೋಗಳನ್ನು ನನಗೆ ಮೊಬೈಲ್ ನಲ್ಲಿ ಕಳುಹಿಸುತ್ತಿದ್ದ. ಹೀಗಾಗಿ ನಾನು ಅವರ ಕೈಯಿಂದ ತೆಗೆದುಕೊಳ್ಳಲೆಂದು ಬಂದಿದ್ದೆ. ಆದ್ರೆ ಇದರಲ್ಲಿ ನನ್ನ ತಪ್ಪಿಲ್ಲ ಅಂತ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

    ಬಂಧಿತ ಇಬ್ಬರು ಮಹಿಳೆಯರು ಬಹಳ ಬುದ್ಧಿವಂತಿಕೆಯಿಂದ ಚಿನ್ನದ ಸರ ಹಾಗೂ ಕಡಗಗಳನ್ನು ಸಾಗಾಟ ಮಾಡುತ್ತಿದ್ದರು. ಸದ್ಯ ಈ ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತ ಕಸ್ಟಮ್ಸ್ ಉಪ ಕಮಿಷನರ್ ಎಐಯು ಪ್ರದ್ನ್ಯಾ ಶೀಲ್ ಜುಮ್ಮೆ ಹೇಳಿದ್ದಾರೆ.

    ಇನ್ನು ಚಿನ್ನವನ್ನು ಕಳುಹಿಸಿದ ವ್ಯಕ್ತಿ ಈ ಇಬ್ಬರು ಮಹಿಳೆಯರಿಗೆ ಉಳಿದುಕೊಳ್ಳಲೆಂದು ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಹೊಟೇಲಿನಲ್ಲಿ ರೂಮ್ ಕೂಡ ಬುಕ್ ಮಾಡಿದ್ದನು ಎನ್ನಲಾಗಿದೆ.