Tag: undergarments

  • ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ- ಜಾರ್ಖಂಡ್ ಸಿಎಂ ಸಹೋದರನ ವಿವಾದಾತ್ಮಕ ಹೇಳಿಕೆ

    ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ- ಜಾರ್ಖಂಡ್ ಸಿಎಂ ಸಹೋದರನ ವಿವಾದಾತ್ಮಕ ಹೇಳಿಕೆ

    ರಾಂಚಿ: ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಸಹೋದರ, ಶಾಸಕ ಬಸಂತ್ ಸೊರೆನ್ (Basant Soren) ಅವರು ನೀಡಿದ ಹೇಳಿಕೆಯೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಜಾರ್ಖಂಡ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ನೀವು ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬಸಂತ್ ನೀಡಿರುವ ಉತ್ತರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪತ್ರಕರ್ತನ ಪ್ರಶ್ನೆಗೆ ಬಸಂತ್ ಉತ್ತರ ಹೀಗಿತ್ತು. ನನ್ನ ಒಳಉಡುಪುಗಳು ಖಾಲಿಯಾಗಿದ್ದವು. ಹೀಗಾಗಿ ಒಳ ಉಡುಪುಗಳನ್ನು ಖರೀದಿ ಮಾಡಲೆಂದೇ ದೆಹಲಿಗೆ ಹೋಗಿದ್ದೇನೆ ಎಂದು ತಿಳಿಸಿದ್ದರು. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾ (Social Media) ದಲ್ಲಿ ಭಾರೀ ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗುತ್ತಿದೆ.

    ದೆಹಲಿ ಪ್ರವಾಸದಿಂದ ಹಿಂದಿರುಗಿದ್ದ ಬಳಿಕ ಶಾಸಕ ಬಸಂತ್ ಸೊರೆನ್ ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಯುವತಿಯರ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಬಸಂತ್ ಈ ಮಾತುಗಳನ್ನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ

    ಇದೇ ವೇಳೆ ಜಾರ್ಖಂಡ್ ನಲ್ಲಿ ಉಂಟಾಗಿದ್ದ ರಾಜಕೀಯ ಅಶಾಂತಿಯ ಬಗ್ಗೆ ಸಹ ಸುದ್ದಿಗಾರರು ಅವರನ್ನು ಪ್ರಶ್ನಿಸಿದರು. ಆಗ ಬಸಂತ್, ರಾಜಕೀಯ ಅಶಾಂತಿ ಉಂಟಾಗಿದ್ದು ಹೌದು. ಆದರೆ ಇದೀಗ ಎಲ್ಲ ಶಾಂತಿಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಧಿಪತಿಯಾಗಿದ್ರೂ ಬಿಪಿಎಲ್ ಕಾರ್ಡ್‌ – ಜೆಡಿಎಸ್‌ ನಾಯಕನ ನಗರ ಸಭೆ ಸದಸ್ಯತ್ವ ರದ್ದು

    ಇತ್ತೀಚೆಗೆ ಜಾರ್ಖಂಡ್‍ನಲ್ಲಿ ನಡೆದ ಭಾರೀ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ್ದಾರೆ. 81 ಶಾಸಕರ ಪೈಕಿ ವಿಧಾನಸಭೆಯಲ್ಲಿ 48 ಶಾಸಕರು ಮುಖ್ಯಮಂತ್ರಿ ಪರ ಮತ ಚಲಾಯಿಸಿದ್ದಾರೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (AOO) ನೇತೃತ್ವದ ಒಕ್ಕೂಟವು ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಈ ವಿಶ್ವಾಸಮತ ಯಾಚನೆ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರ ಒಳ ಉಡುಪು ಕದಿಯುವುದೇ ಇವರ ಖಯಾಲಿ

    ಮಹಿಳೆಯರ ಒಳ ಉಡುಪು ಕದಿಯುವುದೇ ಇವರ ಖಯಾಲಿ

    ಲಕ್ನೋ: ಮಹಿಳೆಯರ ಒಳ ಉಡುಪು ಕದ್ದು ವಿಕೃತಿ ಮೆರೆಯುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಮಹಿಳೆಯರು ತೊಳೆದು ಹೊರಗಡೆ ಒಣ ಹಾಕಿದ್ದ ಒಳ ಉಡುಪುಗಳನ್ನು ಈ ಖದೀಮರು ಕದ್ದು ಪರಾರಿಯಾಗುತ್ತಿದ್ದರು. ಈ ಘಟನೆಯನ್ನು ವ್ಯಕ್ತಿ ರೆಕಾರ್ಡ್ ಮಾಡಿದ್ದರಿ ಅಲ್ಲದೆ ಸಿಸಿಟಿವಿ ಕ್ಯಾಮೆರಾದಲ್ಲಿ ಸಹ ಸೆರೆಯಾಗಿತ್ತು. ಹೊರಗಡೆ ಒಣ ಹಾಕಿದ ವೇಳೆ ಇಬ್ಬರು ಖದೀಮರು ಕದ್ದು, ಬೈಕ್ ಹತ್ತಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸದರ್ ಪೊಲೀಸರು ಮೊಹ್ದ್ ರೋಮಿನ್ ಹಾಗೂ ಮೊಹದ್ ಅಬ್ದುಲ್ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಜಸ್ಟ್ ಫನ್‍ಗಾಗಿ ಮಹಿಳೆಯರ ಒಳ ಉಡುಪು ಕದ್ದಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ರೋಮಿನ್ ಹಾಗೂ ಅಬ್ದುಲ್ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ) ಹಾಗೂ 509(ಮಹಿಳೆಯರ ಗೌರವಕ್ಕೆ ಧಕ್ಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.

    ಸಂಜಯ್ ಚೌಧರಿ ಅವರು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಾ.14ರಂದು ಈ ಬಗ್ಗೆ ದೂರು ನೀಡಿದ್ದು, ನನ್ನ ಅಪ್ರಾಪ್ತ ಮಗಳ ಒಳ ಉಡುಪುಗಳನ್ನು ಒಣ ಹಾಕಿದಾಗ ಈ ಇಬ್ಬರು ಕದಿಯುತ್ತಿರುವುದನ್ನು ವೀಡಿಯೋ ರೆಕಾರ್ಡ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಅಪನಂಬಿಕೆ, ಹಲವು ಅತೀಂದ್ರಿಯ ಅಭ್ಯಾಸವು ಮಹಿಳೆಯ ಒಳ ಉಡುಪುಗಳನ್ನು ಕದಿಯುವ ಹಿಂದಿನ ಉದೇಶವಾಗಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಪ್ಯಾಂಟಿ ಚೋರ್ ಅಬ್ದುಲ್ ಹ್ಯಾಷ್ ಟ್ಯಾಗ್‍ನೊಂದಿಗೆ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಹಲವು ರೀತಿಯ ಮೀಮ್ಸ್ ಹಾಗೂ ಜಿಫ್‍ಗಳೊಂದಿಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಸಿದ್ದಾರೆ.

  • ರಾತ್ರಿ ಒಣಹಾಕಿದ್ದ ಹೆಣ್ಮಕ್ಕಳ ಒಳಉಡುಪು ಬೆಳಗ್ಗೆ ಮಾಯ- ಆತಂಕದಲ್ಲಿ ನಿವಾಸಿಗಳು

    ರಾತ್ರಿ ಒಣಹಾಕಿದ್ದ ಹೆಣ್ಮಕ್ಕಳ ಒಳಉಡುಪು ಬೆಳಗ್ಗೆ ಮಾಯ- ಆತಂಕದಲ್ಲಿ ನಿವಾಸಿಗಳು

    ಬೆಂಗಳೂರು: ರಾತ್ರಿ ಒಣಹಾಕಿದ ಬಟ್ಟೆ ಕಾಣೆಯಾಗುತ್ತದೆ. ಗಂಡಸರ ಬಟ್ಟೆ ಮಾತ್ರ ಇದ್ದ ಜಾಗದಲ್ಲೇ ಇರುತ್ತದೆ. ಆದರೆ ಹೆಣ್ಣು ಮಕ್ಕಳ ಬಟ್ಟೆ ಮಾತ್ರ ಮಾಯವಾಗಿರುತ್ತದೆ. ಏನ್ ಆಗುತ್ತಿದೆ, ಯಾರಾದರೂ ತೆಗೆದುಕೊಂಡು ಹೋಗುತ್ತಿದ್ದಾರಾ ಎಂದು ಗೊತ್ತಾಗದೆ ಇಷ್ಟು ದಿನ ತಲೆ ಕೆಡಿಸಿಕೊಳ್ಳುತ್ತಿದ್ದ ನಿವಾಸಿಗಳಿಗೆ ಒಳ ಉಡುಪು ಎಲ್ಲಿ ಹೋಗ್ತಿದೆ ಅನ್ನೊದು ತಿಳಿದು ಬಂದಿದೆ.

    ಹಲಸೂರು ಲೇಕ್ ಬಳಿಯ ಕಲ್ಲಹಳ್ಳಿ ಸೆಕೆಂಡ್ ಫೇಸ್ ಬಿಡಿಎಯ 400 ಮನೆಗಳಿರುವ ಅಪಾರ್ಟ್ ಮೆಂಟ್ ಮೇಲೆ ಬಟ್ಟೆ ಒಣ ಹಾಕಿದರೆ ಬೆಳಗಾಗೋದರೊಳಗೆ ಅವು ಮಾಯವಾಗಿ ಬಿಡುತ್ತವೆ. ಇದು ಯಾವುದೋ ಶಕ್ತಿಯ ಕೃತ್ಯ ಅಲ್ಲ. ಇಲ್ಲೊಬ್ಬ ಸೈಕೋ ಅಪಾರ್ಟ್ ಮೆಂಟ್ ಮೇಲೆ ಒಣಗಾಕಿರೋ ಹೆಣ್ಣುಮಕ್ಕಳ ಒಳ ಉಡುಪುಗಳನ್ನ ಮಾತ್ರ ಕದಿಯುತ್ತಿದ್ದಾನೆ. ಮೊದಲೆಲ್ಲ ಒಂದೋ ಎರಡೋ ಬಟ್ಟೆಗಳು ಮಿಸ್ ಆಗುತ್ತಿತ್ತು. ಅಕ್ಕಪಕ್ಕದ ಮನೆಯವರ ಬಟ್ಟೆಗಳಲ್ಲಿ ಮಿಕ್ಸ್ ಆಗಿರಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಒಂದು ವಾರದಿಂದ ಸತತವಾಗಿ ಎರಡು ದಿನ ಸಂಪೂರ್ಣ ಹೆಣ್ಣು ಮಕ್ಕಳ ಒಳ ಉಡುಪನ್ನ ಕದಿಯುತ್ತಿದ್ದರಿಂದ ಅವನ್ಯಾರೋ ಸೈಕೋ ಎಂದು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಸೆಕ್ಯೂರಿಟಿ ಕೊಟ್ಟಿಲ್ಲ. ಪ್ರತಿಕ್ಷಣ ಭಯದಲ್ಲಿ ಬದುಕುತ್ತಿದ್ದೇವೆ. ಪುರುಷರು ಕೆಲಸಕ್ಕೆ ತೆರಳಿದ ಬಳಿಕ ನಾವು ಮನೆಗಳಲ್ಲಿ ಇರೋಕೆ ಭಯ ಆಗುತ್ತದೆ. ಸಣ್ಣ ಸಣ್ಣ ಮಕ್ಕಳಿದ್ದಾರೆ. ಏನಾದ್ರೂ ತೊಂದರೆಯಾದರೆ ಏನ್ ಮಾಡೋದು. ಅವನ್ಯಾರೋ ಡ್ರಗ್ಗಿಸ್ಟ್ ಅನ್ನಿಸುತ್ತದೆ. ಹೆಣ್ಣುಮಕ್ಕಳ ಒಳಉಡುಪು ಒಂದೂ ಬಿಡದೇ ಕದ್ದೊಯ್ಯುತ್ತಿದ್ದಾನೆ. ಪದೇ ಪದೇ ಈ ರೀತಿ ಆಗುತ್ತಿದೆ. ದಯವಿಟ್ಟು ಸಂಬಂಧಪಟ್ಟವರು ನಮಗೆ ರಕ್ಷಣೆ ನೀಡಬೇಕಿದೆ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಮನವಿ ಮಾಡುತ್ತಿದ್ದಾರೆ.

  • ಅಜ್ಜಿ ಧರಿಸಿದ್ದ ಒಳಉಡುಪಿನಿಂದ ಹಣ ದೋಚಿದ್ದ ಮೊಮ್ಮಗ ಅರೆಸ್ಟ್

    ಅಜ್ಜಿ ಧರಿಸಿದ್ದ ಒಳಉಡುಪಿನಿಂದ ಹಣ ದೋಚಿದ್ದ ಮೊಮ್ಮಗ ಅರೆಸ್ಟ್

    ವಾಷಿಂಗ್ಟನ್: ಅಜ್ಜಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಒಳಉಡುಪಿನಿಂದ 10 ಡಾಲರ್(710.69 ರೂ.) ದೋಚಿದ್ದ ಮೊಮ್ಮಗನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

    ಟೆನ್ನೆಸ್ಸೀ ನಿವಾಸಿ ಜ್ಯಾರೀಡ್ ಒಟ್ಟೆ(19) ಕೃತ್ಯವೆಸೆಗಿದ ಆರೋಪಿ. ಜ್ಯಾರೀಡ್ ಸೆಪ್ಟೆಂಬರ್ ನಲ್ಲಿ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದನು. ಏಕಾಏಕಿ ಅಜ್ಜಿ ಮನೆಗೆ ನುಗ್ಗಿದ ಆರೋಪಿ ಆಕೆಯ ಬಳಿ ಮೊದಲು ಹಣ ಕೇಳಿದ್ದ. ಆದರೆ ಅಜ್ಜಿ ಹಣ ಕೊಡಲು ನಿರಾಕರಿದಾಗ ಹಲ್ಲೆ ನಡೆಸಿ, ಅಜ್ಜಿಯನ್ನು ದೂಡಿ ಹಾಸಿಗೆಯ ಮೇಲೆ ಬೀಳಿಸಿ, ಅಜ್ಜಿ ಧರಿಸಿದ್ದ ಒಳಉಡುಪಿನಲ್ಲಿ ಇಟ್ಟಿದ್ದ 10 ಡಾಲರ್(710.69 ರೂ.) ಹಣವನ್ನು ಕಿತ್ತುಕೊಂಡು ಹೋಗಿದ್ದನು. ಹಲ್ಲೆಯಿಂದ ಅಜ್ಜಿಯ ಮೈಮೇಲೆ ಗಾಯಗಳು ಕೂಡ ಆಗಿದ್ದವು.

    ಮೊಮ್ಮಗನ ಅಟ್ಟಹಾಸವನ್ನು ಸಹಿಸದ ಅಜ್ಜಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಮೇಲೆ ಜ್ಯಾರೀಡ್ ಹಲ್ಲೆ ನಡೆಸಿದ್ದಾನೆ. ಜೊತೆಗೆ ನನ್ನ ಬಳಿ ಇದ್ದ 10 ಡಾಲರ್ ಹಾಣವನ್ನು ದೋಚಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಮಂಗಳವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.