Tag: under construction

  • ತೆಲಂಗಾಣ | ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಿಲುಕಿರುವ ಶಂಕೆ

    ತೆಲಂಗಾಣ | ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಿಲುಕಿರುವ ಶಂಕೆ

    ಹೈದರಾಬಾದ್‌: ತೆಲಂಗಾಣದ ಭದ್ರಾದ್ರಿ ಕೊಥಗುಡೆಂ (Bhadrachalam of Bhadradri) ಜಿಲ್ಲೆಯ ಭದ್ರಾಚಲಂನಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದಿದ್ದು (Building Collapses), ಅವಶೇಷಗಳ ಅಡಿಯಲ್ಲಿ ಇಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಭದ್ರಾಚಲಂ ಎಎಸ್‌ಪಿ ವಿಕ್ರಾಂತ್ ಕುಮಾರ್ ಸಿಂಗ್, ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಅಂತ ಹೇಳ್ಕೊಂಡು ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ

    ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿದಿದ್ದು, ಇಬ್ಬರು ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಶಂಕೆಯಿದೆ. ನಮಗೆ ಮಾಹಿತಿ ಬಂದ ತಕ್ಷಣ ನಾವು ತಕ್ಷಣ ಸ್ಥಳಕ್ಕೆ ಧಾವಿಸಿದ್ದೇವೆ. ಕೂಡಲೇ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಇತರ ತಂಡಗಳನ್ನು ಸಂಪರ್ಕಿಸಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ಕಾರ್ಯಾಚರಣೆ ಸಂರ್ಭದಲ್ಲಿ ಇಬ್ಬರು ಸಿಕ್ಕಿದ್ದಾರೆ. ಮತ್ತೊಬ್ಬರು ಹೆಣ್ಣಿನ ಧ್ವನಿ ಕೇಳುತ್ತಿದೆ. ಶೀಘ್ರದಲ್ಲೇ ಆಕೆಯನ್ನೂ ರಕ್ಷಿಸುತ್ತೇವೆ. ಅಲ್ಲಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ ಎಂದು ಎಎಸ್ಪಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ

  • ಸದ್ಯದಲ್ಲೇ ಅನಾವರಣಗೊಳ್ಳಲಿದೆ ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆ

    ಸದ್ಯದಲ್ಲೇ ಅನಾವರಣಗೊಳ್ಳಲಿದೆ ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆ

    ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

    ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರತಿಮೆಗೆ ‘ಸ್ಟ್ಯಾಚ್ಯೂ ಆಫ್ ಬಿಲೀಫ್’ ಎಂದು ಹೆಸರಿಡಲಾಗಿದೆ.

    ಆಗಸ್ಟ್ ತಿಂಗಳ ಒಳಗೆ ಪೂರ್ಣವಾಗುವ ನಿರೀಕ್ಷೆ ಇದೆ. ಈ ಪ್ರತಿಮೆಯನ್ನು ಬರೋಬ್ಬರಿ 2,500 ಟನ್ ರಿಫೈಂಡ್ ಸ್ಟೀಲ್ ಬಳಸಿ ನಿರ್ಮಿಸಲಾಗುತ್ತಿದೆ. ಶಿವನ ಪ್ರತಿಮೆಯನ್ನು ಮಿರ್ಜಾ ಗ್ರೂಪ್ ಕಂಪನಿ ನಿರ್ಮಾಣ ಮಾಡುತ್ತಿದೆ. ಸ್ಟೀಲ್ ಮಾತ್ರವಲ್ಲದೆ ಪ್ರತಿಮೆಗೆ ಉತ್ತಮ ಗುಣಮಟ್ಟದ ತಾಮ್ರ ಹಾಗೂ ಸತು ಅನ್ನು ಬಳಸಲಾಗುತ್ತಿದೆ.

    ಶಿವನ ಪ್ರತಿಮೆಯು 351 ಅಡಿ ಎತ್ತರವಿದ್ದು, 20 ಅಡಿ ಎತ್ತರದಲ್ಲಿ ಮೂರು ವೀಕ್ಷಣಾ ಗ್ಯಾಲರಿ ಇದೆ. ಅಲ್ಲದೆ ಪ್ರತಿಮೆಯ 110 ಅಡಿ ಹಾಗೂ 270 ಅಡಿಗಳ ಎತ್ತರಕ್ಕೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಸ್ಟ್ಯಾಚ್ಯೂ ಆಫ್ ಯುನಿಟಿ, ಸ್ಪ್ರಿಂಗ್ ಟೆಂಪಲ್ ಬುದ್ಧ ಮತ್ತು ಲೇಕ್ಯುನ್ ಸೆಟ್‍ಕ್ಯಾರ್ ಬಳಿಕದ ಜಗತ್ತಿನ ಅತಿ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ. ಹಾಗೆಯೇ ಜಗತ್ತಿನ 4ನೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    2013ರ ಏ.17ರಂದು ಈ ಪ್ರತಿಮೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಅಂದಿನ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

    ಶಿವನ ಪ್ರತಿಮೆಯ ಫೋಟೋ ಟ್ವಿಟ್ಟರ್ ನಲ್ಲಿ ಶೇರ್ ಆಗಿದ್ದು, ಅದರಲ್ಲಿ ಶಿವನ ಮುಖದ ಭಾಗವು ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ. ಹಾಗೆಯೇ ಪ್ರತಿಮೆ ನಿರ್ಮಾಣ ಕೆಲಸ ನಡೆಯುತ್ತಿರುವ ಚಿತ್ರಣವನ್ನು ನಾವು ಗಮನಿಸಬಹುದಾಗಿದೆ. ಶಿವನ ಪ್ರತಿಮೆ ಮುಂದೆ ಸುಮಾರು 25 ಅಡಿ ಎತ್ತರ ಹಾಗೂ 37 ಅಡಿ ಅಗಲದ ನಂದಿ ಪ್ರತಿಮೆ ಕೂಡ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.