Tag: Under-19 World Cup

  • U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್‌ ಎದುರಾಳಿ – ಫೆ.11ರಂದು ಫೈನಲ್‌

    U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್‌ ಎದುರಾಳಿ – ಫೆ.11ರಂದು ಫೈನಲ್‌

    – ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 1 ವಿಕೆಟ್‌ ಜಯ, ಪಾಕ್‌ಗೆ ವಿರೋಚಿತ ಸೋಲು

    ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್‌ ಫೈನಲ್‌(World Cup 2023) ರೋಚಕ ಹಣಾ-ಹಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಅಂಡರ್‌-19 ವಿಶ್ವಕಪ್‌ (Under-19 World Cup )ಟೂರ್ನಿಯಲ್ಲೂ ಮತ್ತೆ ಭಾರತಕ್ಕೆ ಆಸೀಸ್‌ ಎದುರಾಳಿಯಾಗಿದ್ದು, ವಿಶ್ವಕಪ್‌ ಕ್ಷಣಗಳನ್ನು ನೆನಪಿಸುವಂತೆ ಮಾಡಿದೆ.

    ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia Under 19s) ತಂಡ ಒಂದು ವಿಕೆಟ್‌ಗಳಿಂದ ಪಾಕ್ ತಂಡವನ್ನು ಸೋಲಿಸಿ, ಫೈನಲ್‌ ಪ್ರವೇಶಿಸಿದೆ. ಭಾನುವಾರ (ಫೆ.11)‌ ಮಧ್ಯಾಹ್ನ 1:30ರ ವೇಳೆಗೆ ಆಸ್ಟ್ರೇಲಿಯಾ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಭಾರತ – ಆಸೀಸ್‌ ಯುವಕರ ತಂಡ ಸೆಣಸಲಿವೆ. ಇದನ್ನೂ ಓದಿ: India vs England 2nd Test: 255 ಕ್ಕೆ ಭಾರತ ಆಲೌಟ್‌, ಇಂಗ್ಲೆಂಡ್‌ಗೆ 399 ರನ್‌ ಗುರಿ

    ಆಸೀಸ್‌ ವಿರುದ್ಧ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ತಂಡ 48.5 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿತು. 180 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 49.1 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 181 ರನ್‌ ಗಳಿಸಿ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ಪರ ಅಜಾನ್ ಅವೈಸ್ 91 ಎಸೆತಗಳಲ್ಲಿ 52 ರನ್‌, ಅರಾಫತ್ ಮಿನ್ಹಾಸ್ 61 ಎಸೆತಗಳಲ್ಲಿ 51 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲರಾದ ಕಾರಣ ಪಾಕ್‌ ಅಲ್ಪಮೊತ್ತಕ್ಕೆ ಔಟಾಗಿ ಸೋಲನುಭವಿಸಿತು. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್‌‌ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ

    ಟಾಮ್ ಸ್ಟ್ರಾಕರ್‌ಗೆ 6 ವಿಕೆಟ್‌:
    ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಆಸೀಸ್‌ ಆರಂಭದಿಂದಲೇ ಪಾಕ್‌ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆಸೀಸ್‌ ಪರ 9.5 ಓವರ್‌ಗಳಲ್ಲಿ ಕೇವಲ 24 ರನ್‌ ಬಿಟ್ಟುಕೊಟ್ಟ ಟಾಮ್ ಸ್ಟ್ರಾಕರ್ 6 ವಿಕೆಟ್‌ ಪಡೆದು ಮಿಂಚಿದರು. ಇನ್ನುಳಿದಂತೆ ಮಾಹ್ಲಿ ಬಿಯರ್ಡ್‌ಮನ್, ಕ್ಯಾಲಮ್ ವಿಡ್ಲರ್, ರಾಫ್ ಮ್ಯಾಕ್‌ಮಿಲನ್, ಟಾಮ್ ಕ್ಯಾಂಪ್‌ಬೆಲ್ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇನ್ನೂ ಪಾಕಿಸ್ತಾನ ಪರ ಬೌಲಿಂಗ್‌ನಲ್ಲಿ ಅಲಿ ರಾಝಾ 10 ಓವರ್‌ಗಳಲ್ಲಿ 34 ರನ್‌ ಬಿಟ್ಟುಕೊಟ್ಟು ನಾಲ್ಕು ವಿಕೆಟ್‌ ಪಡೆದು ಆಸೀಸ್‌ ಪಡೆಯನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಮೊಹಮ್ಮದ್ ಜೀಶಾನ್ ಅವರ ದುಬಾರಿ ಓವರ್‌ನಿಂದಾಗಿ ಪಾಕ್‌ ವಿರೋಚಿತ ಸೋಲಿಗೆ ತುತ್ತಾಯಿತು. ಪಾಕ್‌ ಪರ ಅರಾಫತ್ ಮಿನ್ಹಾಸ್ 2 ವಿಕೆಟ್‌ ಕಿತ್ತರೆ, ಉಬೈದ್ ಶಾ, ನವೀದ್ ಅಹ್ಮದ್ ಖಾನ್ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಡಿಕ್ಸನ್‌ ಜವಾಬ್ದಾರಿಯುತ ಅರ್ಧಶತಕ :
    180 ರನ್‌ಗಳ ಗುರಿ ಬೆನ್ನತಿದ್ದ ಆಸೀಸ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಶುರು ಮಾಡಿತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಹ್ಯಾರಿ ಡಿಕ್ಸನ್ 75 ಎಸೆತಗಳಲ್ಲಿ ಜವಾಬ್ದಾರಿಯುತ ಅರ್ಧಶತಕ ಗಳಿಸಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಆಲಿವರ್ ಪೀಕ್ 49 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: 

  • ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    ಮುಂಬೈ: ಅಂಡರ್-19 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರ ದಿನೇಶ್ ಬಣ ಸಿಡಿಸಿದ ಫಿನಿಶಿಂಗ್ ಶಾಟ್, 2011ರ ವಿಶ್ವಕಪ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಸಿಕ್ಸರ್ ನೆನಪಿಸಿದೆ.

    2011ರ ಏಕದಿನ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ನುವಾನ್ ಕುಲಶೇಖರ ಎಸೆದ 48ನೇ ಓವರ್‌ನ ಎಸೆತವನ್ನು ಧೋನಿ ಸಿಕ್ಸರ್‌ಗಟ್ಟಿ ಭಾರತಕ್ಕೆ  2ನೇ ಬಾರಿ ಏಕದಿನ ವಿಶ್ವಕಪ್ ಜಯಸಿಕೊಟ್ಟಿದ್ದರು. ಆ ಸುಂದರ ಕ್ಷಣವನ್ನು ನಿನ್ನೆ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ಮತ್ತೊಮ್ಮೆ ನೆನಪಿಸಿದೆ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    ಟೀಂ ಇಂಡಿಯಾ ವಿಶ್ವಕಪ್ ಗೆದ್ದು 11 ವರ್ಷಗಳ ಬಳಿಕ ನಿನ್ನೆ ಬಾಣ ಸಿಡಿಸಿದ ಫಿನಿಶಿಂಗ್ ಶಾಟ್ ಧೋನಿಯ ಐಕಾನಿಕ್ ಶಾಟ್‍ನಂತೆ ಕಂಡು ಬರಲು ಕಾರಣವಿದೆ. ಇಂಗ್ಲೆಂಡ್ ನೀಡಿದ 190 ರನ್‍ಗಳ ಗುರಿ ಬೆನ್ನಟ್ಟಲು ಹೊರಟ ಟೀಂ ಇಂಡಿಯಾ 176 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ದಿನೇಶ್ ಬಾಣ ಕೇವಲ 5 ಎಸೆತದಲ್ಲಿ 2 ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಟೀಂ ಇಂಡಿಯಾವನ್ನು 4 ವಿಕೆಟ್ ಮತ್ತು 14 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದ್ದರು. ಈ ಮೂಲಕ ಟೀಂ ಇಂಡಿಯಾಗೆ 5ನೇ ಅಂಡರ್-19 ವಿಶ್ವಕಪ್ ಮುತ್ತಿಕ್ಕುವ ಅವಕಾಶ ಮಾಡಿಕೊಟ್ಟರು. ಅಷ್ಟೇ ಅಲ್ಲದೆ ಧೋನಿ ಮತ್ತು ದಿನೇಶ್‌ ಬಣ ಇಬ್ಬರೂ ಕೂಡ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮ್ಯಾನ್‌ಗಳು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇದನ್ನೂ ಓದಿ: ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ

     

    View this post on Instagram

     

    A post shared by ICC (@icc)

    ಬಣ ಸಿಡಿಸಿದ ಅಂತಿಮ ಸಿಕ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧೋನಿ 2011 ವಿಶ್ವಕಪ್ ಹೀರೋ ಆದರೆ, 2022ರ ಅಂಡರ್-19 ಹೀರೋ ಆಗಿ ದಿನೇಶ್ ಬಣ ಕಾಣಿಸಿಕೊಂಡಿದ್ದಾರೆ. ಈ ಎರಡು ಐಕಾನಿಕ್ ಶಾಟ್‍ಗಳು ಅಜಾರಮರ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

  • 5ನೇ ಬಾರಿ ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

    5ನೇ ಬಾರಿ ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

    ಆಂಟಿಗುವಾ: 2022ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು 4 ವಿಕೆಟ್‍ಗಳಿಂದ ಬಗ್ಗು ಬಡಿದು ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

    ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಟೀಂ ಇಂಡಿಯಾದ ಯುವ ಆಟಗಾರರಾದ ರಾಜ್ ಬಾವಾ ಮತ್ತು ರವಿ ಕುಮಾರ್ ದಾಳಿಗೆ ಪತರುಗಟ್ಟಿ 44.5 ಓವರ್‌ಗಳಲ್ಲಿ 189 ರನ್‍ಗಳಿಗೆ ಆಲೌಟ್ ಆಯಿತು.

    ಭಾರತದ ಪರ ಬೌಲಿಂಗ್ ವಿಭಾಗದಲ್ಲಿ ರವಿ ಕುಮಾರ್ 34 ರನ್‍ಗಳನ್ನು ನೀಡಿ 4 ವಿಕೆಟ್ ಹಾಗೂ ರಾಜ್ ಬಾವ 31 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಇಬ್ಬರೂ ಬೌಲರ್‍ಗಳು ತಲಾ 1 ಮೆಡಿನ್ ಓವರ್ ಮಾಡಿದರು.

    ಇಂಗ್ಲೆಂಡ್‍ನ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಆಂಗ್ಕ್ರಿಶ್ ರಘುವಂಶಿ ಎರಡು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ವಿಕೆಟ್ ನೀಡಿದ್ದು ಆರಂಭಿಕ ಆಘಾತವಾಯಿತು. ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಸಹ 46 ಎಸೆತಗಳನ್ನು ಎದುರಿಸಿ 21 ರನ್‍ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದ್ದು, 2ನೇ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹೆಚ್ಚಿಸಿತ್ತು. ನಂತರ 84 ಎಸೆತಗಳನ್ನು ಎದುರಿಸಿ 50 ರನ್ ಗಳಿಸುವ ಮೂಲಕ ಶೇಖ್ ರಶೀದ್ ತಂಡಕ್ಕೆ ಚೇತರಿಕೆ ನೀಡಿದರಾದರೂ ಯಶ್ ಧುಲ್ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ.

    ನಿಶಾಂತ್ ಸಿಂಧು 54 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಸಿದರು. ರಾಜ್ ಬಾವ 54 ಎಸೆತಗಳಲ್ಲಿ 34 ರನ್ ಗಳಿಸಿದರೆ, ನಿಶಾಂತ್ ಸಿಂಧು ಹಾಗೂ ದಿನೇಶ್ ಬನಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ:  ರಾಜ್ ಭಾವ, ರವಿ ದಾಳಿಗೆ ಬೆವರಿದ ಇಂಗ್ಲೆಂಡ್ – ಭಾರತಕ್ಕೆ 190 ರನ್ ಗುರಿ

    ಭಾರತ ಇಂಗ್ಲೆಂಡ್ ತಂಡದ ವಿರುದ್ಧ 4 ವಿಕೆಟ್‍ಗಳ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‍ನ್ನು ಮುಡಿಗೇರಿಸಿಕೊಂಡಿತು. ಈ ವಿಶ್ವಕಪ್ ಗೆಲುವಿನ ಮೂಲಕ ಭಾರತ 5ನೇ ಅಂಡರ್-19 ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಇದನ್ನೂ ಓದಿ: ಆಸ್ಟ್ರೇಲಿಯಾ ತಂಡವನ್ನು ಯಶಸ್ಸಿನ ಮಟ್ಟಿಲೇರಿಸಿದ ಕೋಚ್ ಜಸ್ಟಿನ್ ಲ್ಯಾಂಗರ್ ರಾಜೀನಾಮೆ

    ಅಂಡರ್-19 ಇತಿಹಾಸದಲ್ಲಿ ಟೀಂ ಇಂಡಿಯಾ 7 ಬಾರಿ ಫೈನಲ್ ತಲುಪಿದೆ. ಭಾರತ 2000ದಲ್ಲಿ ಮೊಹಮ್ಮದ್ ಕೈಫ್, 2008ರಲ್ಲಿ ವಿರಾಟ್ ಕೊಹ್ಲಿ, 2012ರಲ್ಲಿ ಉನ್ಮುಕ್ ಚಾಂದ್ ಮತ್ತು 2018ರಲ್ಲಿ ಪೃಥ್ವಿ ಶಾ ಮತ್ತು 2022ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದು ಬೀಗಿದೆ.

  • ಅಂಡರ್-19 ವಿಶ್ವಕಪ್ ಹೀರೋಗಳಿಗೆ ತೆರೆಯುವುದೇ ಐಪಿಎಲ್ ಬಾಗಿಲು?

    ಅಂಡರ್-19 ವಿಶ್ವಕಪ್ ಹೀರೋಗಳಿಗೆ ತೆರೆಯುವುದೇ ಐಪಿಎಲ್ ಬಾಗಿಲು?

    ಮುಂಬೈ: ಅದೆಷ್ಟೋ ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಮಿಂಚಿ, ಬಳಿಕ ಐಪಿಎಲ್‍ನಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಇದೀಗ 2022 ಐಪಿಎಲ್ ಹರಾಜಿಗೂ ಮುನ್ನ ಭಾರತ ಅಂಡರ್-19 ತಂಡದಲ್ಲಿ ಮಿಂಚುತ್ತಿರುವ ಐವರು ಆಟಗಾರರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

    ಈ ಹಿಂದೆ ಭಾರತ ತಂಡದ ಮಾಜಿ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಆಲ್‍ರೌಂಡರ್ ರವೀಂದ್ರ ಜಡೇಜಾ, ವಿಕೆಟ್ ಕೀಪರ್ ರಿಷಭ್ ಪಂತ್ ಸಹಿತ ಹಲವಾರು ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿ, ಐಪಿಎಲ್‍ನಲ್ಲಿ ಮಿಂಚು ಹರಿಸಿ ಭಾರತ ತಂಡದಲ್ಲಿ ಕಾಣಿಸಿಕೊಂಡ ಉದಾಹಣೆಗಳಿವೆ. ಇದನ್ನೂ ಓದಿ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

    ಪ್ರತಿ ಬಾರಿ ಐಪಿಎಲ್ ಹರಾಜಿಗೂ ಮುನ್ನ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಐಪಿಎಲ್ ಫ್ರಾಂಚೈಸ್‍ಗಳು ಮಾಡಿಕೊಂಡು ಬಂದಿದೆ. ಇದೀಗ 2022ರ ಐಪಿಎಲ್ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಅತ್ತ ಅಂಡರ್-19 ವಿಶ್ವಕಪ್‍ನಲ್ಲಿ ಭಾರತದ ಯುವ ಆಟಗಾರರು ಘರ್ಜಿಸುತ್ತಿದ್ದಾರೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್

    ಅದರಲ್ಲೂ 2022ರ ಅಂಡರ್-19 ತಂಡದ ನಾಯಕ ಯಶ್ ಧುಲ್, ಬ್ಯಾಟ್ಸ್‌ಮ್ಯಾನ್‌ಗಳಾದ ಆಂಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲ್‍ರೌಂಡರ್ ಆಗಿ ರಾಜ್ ಬಾವಾ ಜಬರ್ದಸ್ತ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಕ್ಕಿ ಓಸ್ವಾಲ್ ಸೂಪರ್ ಸ್ಪೆಲ್ ಮಾಡುತ್ತಿದ್ದಾರೆ. ಈ ಐವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಉತ್ತಮ ಪ್ರದರ್ಶನ ತೋರಿ ಮುನ್ನಗುತ್ತಿದೆ. ಇದೀಗ ಈ ಐವರು ಆಟಗಾರರ ಪ್ರದರ್ಶನವನ್ನು ಗಮನಿಸಿ ಐಪಿಎಲ್ ಫ್ರಾಂಚೈಸ್‍ಗಳು ಹರಾಜಿನಲ್ಲಿ ಖರೀದಿಗೆ ಮುಂದಾಗುವರೇ ಎಂಬ ಕುತೂಹಲವಿದೆ. ಈ ಎಲ್ಲದಕ್ಕೂ ಫೆ.12ರ ವರೆಗೆ ಕಾಯಲೇಬೇಕಾಗಿದೆ.

  • ಬಾಂಗ್ಲಾ ಕ್ರಿಕೆಟ್ ತಂಡದಿಂದ 2 ದಿನದಲ್ಲಿ ಎರಡು ಬಾರಿ ಅನುಚಿತ ವರ್ತನೆ

    ಬಾಂಗ್ಲಾ ಕ್ರಿಕೆಟ್ ತಂಡದಿಂದ 2 ದಿನದಲ್ಲಿ ಎರಡು ಬಾರಿ ಅನುಚಿತ ವರ್ತನೆ

    – ಈವರೆಗೆ 9 ಬಾರಿ ಮುಜುಗುರಕ್ಕೀಡಾದ ಬಾಂಗ್ಲಾ ಕ್ರಿಕೆಟ್ ತಂಡ
    – ಬಾಂಗ್ಲಾ ಕ್ರಿಕೆಟ್ ತಂಡದ ಹಿರಿಯರ ಮಾರ್ಗದಲ್ಲಿ ಕಿರಿಯರು

    ಪೋಷೆಫ್‍ಸ್ಟ್ರೋಮ್: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಟಗಾರರು ಎರಡು ದಿನಗಳಲ್ಲಿ ತಮ್ಮ ಕೆಟ್ಟ ವರ್ತನೆಯಿಂದ ದೇಶವನ್ನು ಮುಜುಗರಕ್ಕೀಡು ಮಾಡಿದ್ದಾರೆ.

    ದಕ್ಷಿಣ ಆಫ್ರಿಕಾದ ಪೋಷಫ್‍ಸ್ಟ್ರೋಮ್‍ನಲ್ಲಿ ಭಾನುವಾರ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ಬಾಂಗ್ಲಾ ಗೆದ್ದುಕೊಂಡಿದೆ. ಆದರೆ ಗೆಲುವಿನ ಸಂಭ್ರಮದ ವೇಳೆ ಭಾರತದ ಅಂಡರ್ 19 ಕ್ರಿಕೆಟ್ ತಂಡದ ಆಟಗಾರರೊಂದಿಗೆ ಕೆಟ್ಟದಾಗಿ ವರ್ತಿಸಿತು. ಇದಕ್ಕೂ ಮುನ್ನ ಶನಿವಾರ ಬಾಂಗ್ಲಾದೇಶದ ಹಿರಿಯರ ಕ್ರಿಕೆಟ್ ತಂಡದ ವೇಗದ ಬೌಲರ್ ಅಬು ಜಾಯೆದ್ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿಯನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿ ಸಂಭ್ರಮ ತೋರಿದರು. ಇದನ್ನೂ ಓದಿ: ಸಕ್ಸೇನಾ ತಲೆಗೆ ಬಾಲ್ ಎಸೆದ ಬಾಂಗ್ಲಾ ಬೌಲರ್- ಕ್ಷಮೆಯಾಚಿಸಲು ನಕಾರ

    ಅಬು ಜಾಯೆದ್ ವರ್ತನೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಜಾಯೆದ್ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂದು ಪಾಕಿಸ್ತಾನ ಇನ್ನಿಂಗ್ಸ್ ಮತ್ತು 44 ರನ್‍ಗಳಿಂದ ಜಯಗಳಿಸಿದೆ.

    ಡಿಮೆರಿಟ್ ಪಾಯಿಂಟ್ ಅಂದ್ರೇನು?:
    ಯಾವುದೇ ಆಟಗಾರ ಐಸಿಸಿ ನಿಯಮವಾಳಿ ದಾಟಿ ಎದುರಾಳಿ ತಂಡ ಹಾಗೂ ಆಟಗಾರರ ವಿರುದ್ಧ ಅಸಭ್ಯವಾಗಿ ವರ್ತನೆ, ನಿಂದನೆ ಮಾಡಿದರೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಒಬ್ಬ ಆಟಗಾರ 24 ತಿಂಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‍ಗಳನ್ನು ಹೊಂದಿದ್ದರೆ ಆ ಆಟಗಾರ ಕ್ರಿಕೆಟ್ ನಿಬರ್ಂಧನಕ್ಕೆ ತುತ್ತಾಗುತ್ತಾನೆ. ಅಷ್ಟೇ ಅಲ್ಲದೆ ಎರಡು ಡಿಮೆರಿಟ್ ಪಾಯಿಂಟ್ ಪಡೆದರೆ ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯ ಅಥವಾ ಎರಡು ಟಿ20 ಪಂದ್ಯಗಳಿಗೆ ನಿಷೇಧಕ್ಕೆ ಒಳಗಾಗುತ್ತಾನೆ.

    ಅಂಡರ್-19 ವಿಶ್ವಕಪ್ ಗೆದ್ದ ನಂತರ ಬಾಂಗ್ಲಾದೇಶದ ಆಟಗಾರರು ಪಿಚ್ ಬಳಿ ತಲುಪಿ ಭಾರತೀಯ ಆಟಗಾರರ ಮಧ್ಯ ಪ್ರವೇಶಿಸುವ ಮೂಲಕ ಸಂಭ್ರಮಿಸಲು ಪ್ರಾರಂಭಿಸಿದರು. ಈ ಪೈಕಿ ಓರ್ವ ಆಟಗಾರ ಭಾರತೀಯ ಕ್ರಿಕೆಟಿಗರ ಮುಂದೆ ನಿಂತು ನಿಂದನೆ ಮಾಡಲು ಪ್ರಾರಂಭಿಸಿದನು. ಇದರಿಂದಾಗಿ ಕೋಪಗೊಂಡ ಭಾರತೀಯ ಆಟಗಾರರೊಬ್ಬರು ಆತನಿಗೆ ಥಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್ ಗಳು ಆಟಗಾರರನ್ನು ಪರಸ್ಪರ ದೂರವಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಆಟಗಾರರ ಅಸಭ್ಯ ವರ್ತನೆ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿದೆ.

    7 ಬಾರಿ ಮುಜುಗರಕ್ಕೊಳಗಾದ ಬಾಂಗ್ಲಾ ತಂಡ:
    ಅಂಡರ್ 19 ವಿಶ್ವಕಪ್ ಹಾಗೂ ಪಾಕಿಸ್ತಾನ ವಿರುದ್ಧದ ಈಗಿನ ಟೆಸ್ಟ್ ಪಂದ್ಯ ಹೊರತಾಗಿ ಬಾಂಗ್ಲಾದೇಶದ ಕ್ರಿಕೆಟ್ ತಂಡವು ಈ ಹಿಂದೆ ಒಟ್ಟು 9 ಬಾರಿ ಮುಜುಗುರಕ್ಕೆ ಈಡಾಗಿದೆ. ಹಿರಿಯರ ಮಾರ್ಗದಲ್ಲಿಯೇ ಕಿರಿಯರು ಕೂಡ ನಡೆಯುತ್ತಿದ್ದಾರೆ, ಅವರಂತೆಯೇ ಅನೂಚಿತ ವರ್ತನೆ ತೋರುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.

    2019ರಲ್ಲಿ ಭಾರತ ಪ್ರವಾಸಕ್ಕೂ ಮುನ್ನ ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್-ಹಸನ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2 ವರ್ಷಗಳ ಕಾಲ ನಿಷೇಧಿಸಿತ್ತು. ಐಪಿಎಲ್ ಸೇರಿದಂತೆ ಬುಕ್ಕಿಯಿಂದ ಅವರಿಗೆ ಮೂರು ಬಾರಿ ಆಫರ್ ನೀಡಲಾಗಿತ್ತು. ಆದರೆ ಈ ಮಾಹಿತಿಯನ್ನು ಶಕೀಬ್ ಐಸಿಸಿ ಗಮನಕ್ಕೆ ತರದೆ ಇದ್ದಿದ್ದರಿಂದ ತಪ್ಪಿತಸ್ಥನೆಂದು ಹೇಳಲಾಗಿತ್ತು.

    2018ರ ಜನವರಿಯಲ್ಲಿ ಶಬ್ಬೀರ್ ರಹಮಾನ್ ತವರು ಪಂದ್ಯವೊಂದರಲ್ಲಿ ಕ್ರಿಕೆಟ್ ಅಭಿಮಾನಿಯನ್ನು ತೀವ್ರವಾಗಿ ನಿಂದಿಸಿದ್ದರು. ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಶಬ್ಬೀರ್ ಅಂಪೈರ್ ಅನುಮತಿ ಪಡೆದು ಮೈದಾನದಿಂದ ಹೊರ ಬಂದಿದ್ದರು. ನಂತರ ಅಭಿಮಾನಿಯನ್ನು ಎಳೆದೊಯ್ದು ಹೊಡೆದಿದ್ದರು. ಇದರಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶಬ್ಬೀರ್ ಅವರನ್ನು ಅಮಾನತುಗೊಳಿಸಿತ್ತು.

    2018ರಲ್ಲಿ ನಡೆದ ನಿಡಾಹಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಶ್ರೀಲಂಕಾ ಸೋತಿತ್ತು. ವಿಜಯದ ನಂತರ ಬಾಂಗ್ಲಾದೇಶದ ಆಟಗಾರರು ಮೈದಾನದಲ್ಲಿ ನಾಗಿಣಿ ನೃತ್ಯವನ್ನು ಪ್ರದರ್ಶಿಸಿದ್ದರು. ಇದರ ನಂತರ ತಮೀಮ್ ಇಕ್ಬಾಲ್ ಅವರು ಮೈದಾನದಿಂದ ಹೊರಬರುವಾಗ ಕುಸಾಲ್ ಮೆಂಡಿಸ್ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಬಾಂಗ್ಲಾದೇಶದ ಆಟಗಾರರು ಸಹ ಕಿತ್ತಾಡಿಕೊಂಡಿದ್ದರು.

    2016ರಲ್ಲಿ ನಡೆದ ಏಷ್ಯಾಕಪ್ ಸಮಯದಲ್ಲಿ ಬಾಂಗ್ಲಾದೇಶದ ಅಭಿಮಾನಿಯೊಬ್ಬರು ನಾಚಿಕೆಗೇಡಿನ ಕೃತ್ಯ ಎಸಗಿದ್ದರು. ಅವರು ಮಹೇಂದ್ರ ಸಿಂಗ್ ಧೋನಿ ಅವರ ತಲೆಯನ್ನು ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಕೈಯಲ್ಲಿ ಹಿಡಿದಿದ್ದ ಹಾಗೆ ಫೋಟೋವನ್ನು ಬಿಂಬಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

    2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಪೆವಿಲಿಯನ್‍ನ ಮುಂದೆ ತೊಡೆ ತಟ್ಟಿದ್ದರು. ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಶಿಸ್ತು ಕ್ರಮ ಕೈಗೊಂಡು ಶಕೀಬ್‍ಗೆ 3 ಏಕದಿನ ನಿಷೇಧ ಮತ್ತು 3 ಲಕ್ಷ ದಂಡ ವಿಧಿಸಿತ್ತು.

  • ಸಕ್ಸೇನಾ ತಲೆಗೆ ಬಾಲ್ ಎಸೆದ ಬಾಂಗ್ಲಾ ಬೌಲರ್- ಕ್ಷಮೆಯಾಚಿಸಲು ನಕಾರ

    ಸಕ್ಸೇನಾ ತಲೆಗೆ ಬಾಲ್ ಎಸೆದ ಬಾಂಗ್ಲಾ ಬೌಲರ್- ಕ್ಷಮೆಯಾಚಿಸಲು ನಕಾರ

    ಪೋಷೆಫ್‍ಸ್ಟ್ರೋಮ್: ಭಾರತ ಕಿರಿಯರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ದಿವ್ಯಾಂಶ್ ಸಕ್ಸೇನಾ ಅವರ ತಲೆಗೆ ಬಾಂಗ್ಲಾದೇಶ ಅಂಡರ್ 19 ತಂಡದ ವೇಗದ ಬೌಲರ್ ತಂಜೀಮ್ ಹಸನ್ ಶಕೀಬ್ ಬಾಲ್ ಎಸೆದರು. ಅಷ್ಟೇ ಅಲ್ಲದೆ ಕ್ಷಮೆಯಾಚಿಸಲು ನಿರಾಕರಿಸಿದರು.

    2020ರ ಅಂಡರ್-19 ವಿಶ್ವಕಪ್ ಫೈನಲ್‍ನ ಎರಡನೇ ಓವರಿನಲ್ಲಿ ದಿವ್ಯಾಂಶ್ ಸಕ್ಸೇನಾ ಬೌಲರ್ ತಂಜೀಮ್ ಹಸನ್ ಶಕೀಬ್‍ಗೆ ಫಾರ್ವರ್ಡ್ ಡಿಫೆನ್ಸಿವ್ ಶಾಟ್ ಹೊಡೆದರು. ತಕ್ಷಣವೇ ಬಾಲ್ ಹಿಡಿದ ಶಕೀಬ್ ಚೆಂಡನ್ನು ವಿಕೆಟ್‍ಗಳ ಕಡೆಗೆ ಎಸೆಯದೇ ಬ್ಯಾಟ್ಸ್‌ಮನ್ ಸಕ್ಸೇನಾ ತಲೆಗೆ ಎಸೆದರು. ಅದೃಷ್ಟವಶಾತ್ ಬಾಲ್‍ನಿಂದ ಸಕ್ಸೇನಾ ತಪ್ಪಿಸಿಕೊಂಡರು. ಇದರಿಂದಾಗಿ ಸಕ್ಸೇನಾ ಬೌಲರ್ ಶಕೀಬ್ ವಿರುದ್ಧ ಗರಂ ಆದರು. ಆಗ ಮಧ್ಯ ಪ್ರವೇಶಿಸಿದ ಅಂಪೈರ್ ಇಬ್ಬರನ್ನೂ ಸಮಾಧಾನ ಪಡೆಸಿದರು. ಇದನ್ನೂ ಓದಿ:  33 ಇತರೇ ರನ್- ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು

    https://twitter.com/DeepPhuyal/status/1226431298748719106

    ಆದರೆ, ಶಕೀಬ್ ಸಕ್ಸೇನಾಗೆ ಕ್ಷಮೆಯಾಚಿಸದೆ ಬೌಲಿಂಗ್ ಮಾಡಲು ನಡೆದರು. ಈ ದೃಶ್ಯದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಾಂಗ್ಲಾ ಬೌಲರ್ ಶಕೀಬ್ ವರ್ತನೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶುಭಮನ್ ಗಿಲ್ ಹಿಂದಿಕ್ಕಿ ಯಶಸ್ವಿ ಜೈಸ್ವಾಲ್ ವಿಶೇಷ ಸಾಧನೆ

    ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 59 ರನ್ ಸಿಡಿಸಿದ್ದ ದಿವ್ಯಾಂಶ್ ಸಕ್ಸೇನಾ ಫೈನಲ್ ಪಂದ್ಯದಲ್ಲಿ 17 ಎಸೆತಗಳಲ್ಲಿ 2 ರನ್ ಗಳಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಯಶಸ್ವಿ ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ್), ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಹಾಗೂ ಧ್ರುವ ಜುರೇಲ್ 22 ರನ್ (38 ಎಸೆತ, 1 ಬೌಂಡರಿ) ಸೇರಿ 10 ವಿಕೆಟ್‍ಗೆ 177 ರನ್ ಗಳಿಸಿತ್ತು.

    https://twitter.com/DeepPhuyal/status/1226472822198824960

  • ಐದನೇ ವಿಶ್ವಕಪ್ ಮೇಲೆ ಚೋಟಾ ಬ್ಲೂ ಬಾಯ್ಸ್ ಕಣ್ಣು

    ಐದನೇ ವಿಶ್ವಕಪ್ ಮೇಲೆ ಚೋಟಾ ಬ್ಲೂ ಬಾಯ್ಸ್ ಕಣ್ಣು

    – ವಿಶ್ವದಾಖಲೆ ಬರೆಯೋಕೆ ಕಿರಿಯರ ತಂಡದಲ್ಲಿ ರಣೋತ್ಸಾಹ

    ಪೊಷೆಫ್‍ಸ್ಟ್ರೂಮ್: ದಕ್ಷಿಣ ಆಫ್ರಿಕಾದಲ್ಲಿ ಅಜೇಯ ನಾಗಾಲೋಟದೊಂದಿ ವಿಜಯದ ರಥದಲ್ಲಿ ಸಾಗುತ್ತಿರುವ ಭಾರತ ಕಿರಿಯರ ತಂಡಕ್ಕೆ ವಿಶ್ವ ದಾಖಲೆ ನಿರ್ಮಿಸಲು ಇನ್ನೊದೇ ಹೆಜ್ಜೆ ಬಾಕಿ. ಬದ್ಧ ಕಟುವೈರಿ ಪಾಕಿಸ್ತಾನ ವನ್ನ 10 ವಿಕೆಟ್‍ಗಳಿಂದ ಸದೆಬಡಿದ ಭಾರತದ ಕಿರಿಯರ ತಂಡವು ಫೈನಲ್ ಗೆಲ್ಲೋ ಉತ್ಸಾಹದಲ್ಲಿದೆ.

    ಸೂಪರ್ ಸಂಡೇ ದಕ್ಷಿಣ ಆಫ್ರಿಕಾದ ಸೆನ್‍ವೇಸ್ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಫೈನಲ್ ಮಹಾಯುದ್ಧ ನಡೆಯಲಿದೆ. ಬಾಂಗ್ಲಾದೇಶ ವಿರುದ್ಧ ರಣಕಹಳೆ ಊದಲು ಕಣಕ್ಕಿಳಿಲಿರುವ ಬ್ಲೂಬಾಯ್ಸ್ ಐದನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಡಿಫೆಂಡಿಂಗ್ ಚಾಂಪಿಯನ್ ಆಗಿರುವ ಕ್ಯಾಪ್ಟನ್ ಪ್ರಿಯಾಮ್ ಗಾರ್ಗ್ ನೇತೃತ್ವದ ಯುವಪಡೆ ಬಾಂಗ್ಲಾ ಆಟಗಾರರನ್ನು ಹೆಡೆಮುರಿ ಕಟ್ಟಿ ವಿಶ್ವದಾಖಲೆ ಬರೆಯೋಕೆ ರಣೋತ್ಸಾಹದಲ್ಲಿದ್ದಾರೆ.

    ಟೂರ್ನಿಯುದ್ದಕ್ಕೂ ಅತ್ಯಮೋಘ ಪ್ರದರ್ಶನ ನೀಡುತ್ತಾ ಬಂದಿರುವ ಕಿರಿಯರ ತಂಡದಲ್ಲಿ ಮ್ಯಾಚ್ ವಿನ್ನರ್ಸ್ ದಂಡೇ ಇದೆ. ಓಪನಿಂಗ್ ಆರ್ಡರ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಬಲಿಷ್ಠವಾಗಿದ್ದರೆ, ಕ್ಯಾಪ್ಟನ್ ಪ್ರಿಯಾಮ್ ಗಾರ್ಗ್, ತಿಲಕ್ ವರ್ಮಾ, ಸಿದ್ದೇಶ್ ವೀರ್ ತಂಡದಲ್ಲಿರುವ ಬ್ಯಾಟಿಂಗ್ ಆನೆ ಬಲ.

    ಜ್ಯೂನಿಯರ್ ಟೀಂ ಇಂಡಿಯಾ ಬೌಲಿಂಗ್ ಅಸ್ತ್ರಗಳು ಬಲಾಢ್ಯವಾಗಿದೆ. ಕಿರಿಯರ ತಂಡ ಫೈನಲ್ ತಲುಪಲು ಬೌಲರ್‌ಗಳ ಪಾತ್ರವೂ ದೊಡ್ಡದು. ಎದುರಾಳಿಗಳನ್ನ ಸಲೀಸಾಗಿ ತಮ್ಮ ಖೆಡ್ಡಾಗೆ ಕೆಡವೂ ಬೌಲಿಂಗ್ ಸಾಮರ್ಥ್ಯ ತಂಡದಲ್ಲಿದೆ. ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ರವಿ ಬಿಷ್ಣೋಯಿ, ಎ.ವಿ. ಅಂಕೊಲೇಕರ್ ವಿಕೆಟ್ ಕೀಳೋದನ್ನ ಕರಗತ ಮಾಡಿಕೊಂಡ ಬೌಲಿಂಗ್ ಬ್ರಹ್ಮಸ್ತ್ರಗಳು.

    ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿ ಮೊದಲ ಬಾರಿಗೆ ಕಿರಿಯರ ವಿಶ್ವಕಪ್‍ನಲ್ಲಿ ಬಾಂಗ್ಲಾದೇಶ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಬಾಂಗ್ಲಾ ತಂಡದಲ್ಲೂ ಭಾರತಕ್ಕೆ ಸವಾಲೊಡ್ಡುವ ಆಟಗಾರರಿದ್ದಾರೆ. ಫೈನಲ್ ತಲುಪಲು ಸಾಕ್ಷಿಯಾದ ಮೊಹಮದ್ದುಲ್ಲಾ ಹಸನ್ ಜಾಯ್, ಶಹದಾತ್ ಹುಸೈನ್, ತೌಹಿದ್ ಹಿರಿದೋಯ್ ಬ್ಯಾಟಿಂಗ್ ಫಾರ್ಮ್ ನಲ್ಲಿದ್ದಾರೆ. ಶೋರಿಫುಲ್ ಇಸ್ಲಾಂ, ಹಸಮ್ ಮುರಾದ್, ಶಮಿಮ್ ಹುಸೈನ್ ಭಾರತ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ರೆಡಿಯಾಗಿದ್ದಾರೆ. ಇದರೊಂದಿಗೆ ಚೊಚ್ಚಲ ವಿಶ್ವಕಪ್ ಗೆಲ್ಲುವ ವಿಶ್ವಾದಲ್ಲಿದ್ದಾರೆ. ಹರಿಣಗಳ ನಾಡಲ್ಲಿ ಟೀಂ ಇಂಡಿಯಾ ಕಿರಿಯರ ತಂಡ ಗೆಲ್ಲುವ ಫೇವರೆಟ್ ತಂಡವಾಗಿದೆ. ಇಲ್ಲಿ ನಡೆಯಲಿರುವ ಮೆಘಾ ಫೈಟ್ ಸಾಕಷ್ಟು ರೋಚಕ, ಕುತೂಹಲಗಳಿಗೆ ಸಾಕ್ಷಿ ಆಗಿಲಿದೆ.

    ಭಾರತ ಕಿರಿಯರ ತಂಡ ಫೈನಲ್ ಹಾದಿ:
    * ಲೀಗ್ ಮ್ಯಾಚ್- ಶ್ರೀಲಂಕಾ ವಿರುದ್ಧ 90 ರನ್‍ಗಳ ಜಯ
    * ಲೀಗ್ ಮ್ಯಾಚ್- ಜಪಾನ್ ವಿರುದ್ಧ 10 ವಿಕೆಟ್‍ಗಳ ಗೆಲುವು
    * ಲೀಗ್ ಮ್ಯಾಚ್- ನ್ಯೂಜಿಲೆಂಡ್ ವಿರುದ್ಧ 44 ರನ್‍ಗಳ ಜಯ (ಡಿಎಲ್‍ಎಸ್)
    * ಕ್ಯಾಟರ್ ಫೈನಲ್ ಮ್ಯಾಚ್- ಆಸ್ಟ್ರೇಲಿಯಾ ವಿರುದ್ಧ 74 ರನ್‍ಗಳ ಜಯ
    * ಸೆಮಿಫೈನಲ್ ಮ್ಯಾಚ್- ಪಾಕಿಸ್ತಾನ ವಿರುದ್ಧ 10 ವಿಕೆಟ್‍ಗಳ ಗೆಲುವು

    ಬಾಂಗ್ಲಾ ಕಿರಿಯರ ತಂಡ ಫೈನಲ್ ಹಾದಿ:
    * ಲೀಗ್ ಮ್ಯಾಚ್- ಜಿಂಬಾಬ್ವೆ ವಿರುದ್ಧ 9 ವಿಕೆಟ್‍ಗಳ ಜಯ (ಡಿಎಲ್‍ಎಸ್)
    * ಲೀಗ್ ಮ್ಯಾಚ್- ಸ್ಕಾಟ್‍ಲೆಂಡ್ ವಿರುದ್ಧ 7 ವಿಕೆಟ್‍ಗಳ ಗೆಲುವು
    * ಲೀಗ್ ಮ್ಯಾಚ್- ಪಾಲಿಸ್ತಾನ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ-ಫಲಿತಾಂಶ ಇಲ್ಲ
    * ಕ್ಯಾಟರ್ ಫೈನಲ್ ಮ್ಯಾಚ್- ದಕ್ಷಿಣ ಆಫ್ರಿಕಾ ವಿರುದ್ಧ 104 ರನ್‍ಗಳ ಜಯ
    * ಸೆಮಿಫೈನಲ್ ಮ್ಯಾಚ್- ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್‍ಗಳ ಗೆಲುವು

  • ಬದ್ಧ ವೈರಿಗಳ ಬಗ್ಗುಬಡಿದು ಇತಿಹಾಸ ಸೃಷ್ಟಿಸಲು ಬ್ಲೂ ಬಾಯ್ಸ್ ರೆಡಿ

    ಬದ್ಧ ವೈರಿಗಳ ಬಗ್ಗುಬಡಿದು ಇತಿಹಾಸ ಸೃಷ್ಟಿಸಲು ಬ್ಲೂ ಬಾಯ್ಸ್ ರೆಡಿ

    ಕೇಪ್ ಟೌನ್: ಹರಿಣಗಳ ನಾಡು ಇಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಅಂಡರ್-19 ವಿಶ್ವಕಪ್ ಸೆಮಿಫೈನಲ್ ತಲುಪಿರುವ ಭಾರತ-ಪಾಕಿಸ್ತಾನ ಸೆನ್ವೆಸ್‍ಪಾರ್ಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ರಶಸ್ತಿ ಸುತ್ತಿಗೆ ಎಂಟ್ರಿ ಪಡೆಯಬೇಕಾದರೆ ಇಂದಿನ ಪಂದ್ಯ ನಿರ್ಣಾಯಕವಾಗಿದ್ದು ಭಾರೀ ಕುತೂಹಲ ಗರಿಗೆದರಿದೆ.

    ಲೀಗ್ ಪಂದ್ಯದಲ್ಲಿ ಸೋಲನ್ನೇ ಕಾಣದ ಭಾರತದ ಯುವಪಡೆ ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗಿ ಸಾಗಿಬಂದಿದೆ. ನಾಯಕ ಪ್ರಿಯಾಂ ಗಾರ್ಗ್ ಸಾರಥ್ಯದಲ್ಲಿ ಟೀಂ ಇಂಡಿಯಾ ಹುಡುಗರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಮಿಂಚುವ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಪಾಕ್ ತಂಡವೂ ಸಹ ಕಳಪೆ ಮಾಡುವಂತಿಲ್ಲ. ನಾಜೀರ್ ನಾಯಕತ್ವದಲ್ಲಿ ಪಾಕ್ ಪಡೆ ಉತ್ತಮ ಪ್ರದರ್ಶನ ತೋರಿದ್ದು, ಇಂದು ಬಿಗ್ ಫೈಟ್ ಮ್ಯಾಚ್‍ನ್ನೇ ನಿರೀಕ್ಷಿಸಬಹುದಾಗಿದೆ.

    ಉಭಯ ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದೆ. ಯಾವ ತಂಡ ಗೆಲವು ಸಾಧಿಸುತ್ತೋ, ಆ ತಂಡ ಫೈನಲ್‍ಗೆ ಲಗ್ಗೆ ಇಡಲಿದೆ. ಹಾಗಾಗಿ ಇಂದಿನ ಪಂದ್ಯ ಎಲ್ಲರ ಗಮನ ಸೆಳೆದಿದೆ.

    ಅಂಡರ್-19 ವಿಶ್ವಕಪ್‍ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಈವರೆಗೆ 9 ಬಾರಿ ಎದುರಾಗಿವೆ. ಇದರಲ್ಲಿ ಪಾಕ್ ತಂಡದ್ದೇ ಮೇಲುಗೈ. ಪಾಕಿಸ್ತಾನ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತದ 4 ಪಂದ್ಯಗಳಲ್ಲಿ ಜಯಿಸಿದೆ. ಆದರೆ 2012ರಿಂದ ಈವರೆಗೆ ಪಾಕ್ ವಿರುದ್ಧ ಭಾರತ ಸೋಲುಂಡಿಲ್ಲ. 2012, 2014, 2018 ರ ವಿಶ್ವಕಪ್‍ನಲ್ಲಿ ಭಾರತ ಜಯಭೇರಿ ಬಾರಿಸಿದೆ.

    ಮುಖಾಮುಖಿ ಮಾಹಿತಿ:
    ಅಂಡರ್ 19 ವಿಶ್ವಕಪ್ 1988 – ಪಾಕಿಸ್ತಾನಕ್ಕೆ 68 ರನ್‍ಗಳ ಜಯ
    ಅಂಡರ್ 19 ವಿಶ್ವಕಪ್ 1998 – ಭಾರತಕ್ಕೆ 5 ವಿಕೆಟ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2002 – ಪಾಕಿಸ್ತಾನಕ್ಕೆ 2 ವಿಕೆಟ್‍ಗಳ ಜಯ
    ಅಂಡರ್ 19 ವಿಶ್ವಕಪ್ 2004 – ಪಾಕಿಸ್ತಾನಕ್ಕೆ 5 ವಿಕೆಟ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2006 – ಪಾಕಿಸ್ತಾನಕ್ಕೆ 38 ರನ್‍ಗಳ ಜಯ
    ಅಂಡರ್ 19 ವಿಶ್ವಕಪ್ 2010 – ಪಾಕಿಸ್ತಾನಕ್ಕೆ 2 ವಿಕೆಟ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2012 – ಭಾರತಕ್ಕೆ 1 ವಿಕೆಟ್ ಜಯ
    ಅಂಡರ್ 19 ವಿಶ್ವಕಪ್ 2014 – ಭಾರತಕ್ಕೆ 40 ರನ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2018 – ಭಾರತಕ್ಕೆ 203 ರನ್‍ಗಳ ಜಯ

  • ನ್ಯೂಜಿಲೆಂಡ್ ತಂಡವನ್ನು ಹಾಡಿ ಹೊಗಳಿದ ಹಿಟ್‍ಮ್ಯಾನ್

    ನ್ಯೂಜಿಲೆಂಡ್ ತಂಡವನ್ನು ಹಾಡಿ ಹೊಗಳಿದ ಹಿಟ್‍ಮ್ಯಾನ್

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದ ಸೂಪರ್ ಓವರಿನಲ್ಲಿ ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಈಗ ಅವರು ನ್ಯೂಜಿಲೆಂಡ್ ಯುವ ಕ್ರಿಕೆಟ್ ತಂಡದ ಕ್ರೀಡಾ ಸ್ಫೂರ್ತಿಯನ್ನು ಹಾಡಿ ಹೊಗಳಿದ್ದಾರೆ.

    ರೋಹಿತ್ ಶರ್ಮಾ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿ, ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಎರಡನೇ ಕ್ವಾರ್ಟರ್ ಫೈನಲ್‍ನಲ್ಲಿ ತೋರಿಸಿದ ಹೃದಯಸ್ಪರ್ಶಿ ಸನ್ನಿವೇಶವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಗುವಿನಂತೆ ಹಾರಿ ರೋಹಿತ್‍ರನ್ನು ಬಿಗಿದಪ್ಪಿ ಅಭಿನಂದಿಸಿದ ಕೊಹ್ಲಿ – ವಿಡಿಯೋ ವೈರಲ್

    ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 239 ರನ್ ಪೇರಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಇನ್ನಿಂಗ್ಸ್ 43ನೇ ಓವರಿನ ಕೊನೆಯಲ್ಲಿ ಕಾಲು ನೋವು ಕಾಣಿಸಿಕೊಂಡಿದ್ದರಿಂದ ವಿಂಡೀಸ್‍ನ ಬ್ಯಾಟ್ಸ್‌ಮನ್‌ ಕಿರ್ಕ್ ಮೆಕೆಂಜಿ ನಿವೃತ್ತರಾದರು. ಆದರೆ ಇನ್ನಿಂಗ್ಸ್ ನ 48ನೇ ಓವರಿನಲ್ಲಿ ವಿಂಡೀಸ್ ಒಂಬತ್ತು ವಿಕೆಟ್ ಕಳೆದುಕೊಂಡಿದ್ದರಿಂದ ಕಿರ್ಕ್ ಮೆಕೆಂಜಿ ಮತ್ತೆ ಬ್ಯಾಟಿಂಗ್‍ಗೆ ಬಂದರು. ಬಳಿಕ ಕ್ರಿಸ್ಟಿಯನ್ ಕ್ಲಾರ್ಕ್ ಅವರ ಮುಂದಿನ ಎಸೆತದಲ್ಲಿ ಕಿರ್ಕ್ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಕೊನೆಯಲ್ಲಿ ಶಮಿ ಬೌಲಿಂಗ್, ರೋಹಿತ್ ಸಿಕ್ಸರ್ ಮ್ಯಾಜಿಕ್ – ಸೂಪರ್ ಓವರ್‌ನಲ್ಲಿ ಭಾರತಕ್ಕೆ ಜಯ

    ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಗುತ್ತಿದ್ದಂತೆ ಮೆಕೆಂಜಿ ಮೈದಾನದಿಂದ ಹೊರನಡೆಯಲು ಹೆಣಗಾಡಿದರು. ಈ ವೇಳೆ ಇಬ್ಬರು ನ್ಯೂಜಿಲೆಂಡ್ ಆಟಗಾರರು ಮೆಕೆಂಜಿಯವರ ರಕ್ಷಣೆಗೆ ಬಂದು ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು.

    ಈ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ, ಇದು ಅತ್ಯಂತ ಉತ್ತಮ ಕ್ರೀಡಾ ಸ್ಫೂರ್ತಿ. ಇದನ್ನು ನೋಡಲು ಅತ್ಯುತ್ತಮವಾಗಿದೆ ಎಂದು ನ್ಯೂಜಿಲೆಂಡ್ ತಂಡವನ್ನು ಹೊಗಳಿದ್ದಾರೆ. ಪಂದ್ಯದಲ್ಲಿ ಪರ ಕಿರ್ಕ್ ಮೆಕೆಂಜಿ 104 ಎಸೆತಗಳಲ್ಲಿ 99 ರನ್ ಗಳಿಸಿದ್ದರು.

  • 8 ಓವರ್‌ಗೆ 5 ರನ್ ನೀಡಿ, 4 ವಿಕೆಟ್ ಕಿತ್ತ ಬಿಷ್ಣೋಯ್- ಜಪಾನ್ ವಿರುದ್ಧ ಯುವ ಭಾರತಕ್ಕೆ 10 ವಿಕೆಟ್ ಗೆಲುವು

    8 ಓವರ್‌ಗೆ 5 ರನ್ ನೀಡಿ, 4 ವಿಕೆಟ್ ಕಿತ್ತ ಬಿಷ್ಣೋಯ್- ಜಪಾನ್ ವಿರುದ್ಧ ಯುವ ಭಾರತಕ್ಕೆ 10 ವಿಕೆಟ್ ಗೆಲುವು

    – 41 ರನ್‍ಗೆ ಜಪಾನ್ ಆಲೌಟ್
    – ಕೆಟ್ಟ ಇತಿಹಾಸ ಬರೆದ ಜಪಾನ್

    ಬ್ಲೂಮ್‍ಫಾಂಟೈನ್: ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್‍ನಿಂದ ಜಪಾನ್ ವಿರುದ್ಧ ಯುವ ಭಾರತ ತಂಡವು 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

    ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬ್ಲೂಮ್‍ಫಾಂಟೈನ್‍ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಜಪಾನ್ ತಂಡವನ್ನು 22.5 ಓವರ್‌ಗೆ ಆಲೌಟ್ ಮಾಡಿತು. ಜಪಾನ್ ನೀಡಿದ್ದ 41 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ 4.5 ಓವರ್‌ನಲ್ಲೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಯುವ ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಧೋನಿಯಂತೆ ರಾಹುಲ್‍ಗೆ ಹೆಚ್ಚು ಅವಕಾಶ ಸಿಗಲಿ- ಕನ್ನಡಿಗನ ಬೆಂಬಲಕ್ಕೆ ನಿಂತ ವೀರು

    ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಜಪಾನ್‍ನ ಇಡೀ ತಂಡವು ಕೇವಲ 41 ರನ್‍ಗಳಿಗೆ ಆಲೌಟ್ ಆಗಿತ್ತು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ. ಜಪಾನ್ ತಂಡದ ಶು ನಾಗೋಚಿ, ಕೆಕೆ ದೊಬೆಲ್ ತಲಾ 7 ರನ್ ಹಾಗೂ ಎಂ.ಕ್ಲೆಮೆಂಟ್ಸ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಮೂರು ಆಟಗಾರರು ತಲಾ ಒಂದು ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, 5 ಜನ ಆಟಗಾರರು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್‍ಗೆ ಪರೇಡ್ ನಡೆಸಿದರು. ಇದನ್ನೂ ಓದಿ:  ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಬಿಷ್ಣೋಯ್, ಕಾರ್ತಿಕ್ ಕಮಾಲ್:
    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ಕಳಪೆ ಆರಂಭವನ್ನು ತೋರಿತು. 20 ರನ್‍ಗಳ ಒಳಗೆ ಅವರ ಐದು ವಿಕೆಟ್‍ಗಳು ಕಳೆದುಕೊಂಡಿತು. ಯುವ ಭಾರತ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ 8 ಓವರ್ ಬೌಲಿಂಗ್ ಮಾಡಿ, ಕೇವಲ 5 ರನ್ ನೀಡಿ 4 ವಿಕೆಟ್ ಪಡೆದರು. ಈ ಮೂಲಕ ಪಂದ್ಯಶ್ರೇಷ್ಠಕ್ಕೆ ಭಾಜನರಾದರು. ಇತ್ತ ವೇಗದ ಬೌಲರ್ ಗಳಾದ ಕಾರ್ತಿಕ್ ತ್ಯಾಗಿ ಮೂರು ವಿಕೆಟ್ ಮತ್ತು ಆಕಾಶ್ ಸಿಂಗ್ ಎರಡು ವಿಕೆಟ್ ಪಡೆದರು.

    ಯುವ ಭಾರತದ ಬೌಲರ್ ಗಳ ದಾಳಿ ಎದುರು ಜಪಾನ್ ತಂಡದ ಐದು ಬ್ಯಾಟ್ಸ್‍ಮನ್‍ಗಳಿಗೆ ಖಾತೆ ತೆರೆಯಲು ವಿಫಲರಾದರು. ಅಷ್ಟೇ ಅಲ್ಲದೆ ಒಬ್ಬ ಬ್ಯಾಟ್ಸ್‍ಮನ್ ಹತ್ತು ರನ್ ದಾಟಲು ಸಾಧ್ಯವಾಗಲಿಲ್ಲ.

    ಜಪಾನ್ ತಂಡ ನೀಡಿದ್ದ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ 4.5 ಓವರ್ ನಲ್ಲಿ 42 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 29 ರನ್ (18 ಎಸೆತ, 5 ಬೌಂಡರಿ, ಸಿಕ್ಸ್) ಮತ್ತು ಕುಮಾರ್ ಕುಶಾಗ್ರಾ 13 ರನ್ (11 ಎಸೆತ, ಎರಡು ಬೌಂಡರಿ) ಗಳಿಸಿದರು.

    ಈ ಹಿಂದಿನ ಪಂದ್ಯದಲ್ಲಿ ಯುವ ಭಾರತವು ಶ್ರೀಲಂಕಾವನ್ನು 90 ರನ್‍ಗಳಿಂದ ಸೋಲಿಸಿತ್ತು. ಭಾರತದ ಮೂರನೇ ಲೀಗ್ ಪಂದ್ಯ ಜನವರಿ 24ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.