Tag: uncle

  • ಮಗು ಆಟವಾಡ್ತಿದ್ದನ್ನು ನೋಡದೆ ಕಾರ್ ಹರಿಸಿದ ಚಾಲಕ- ಅಚ್ಚರಿಯ ರೀತಿಯಲ್ಲಿ ಬಾಲಕ ಪಾರಾದ ವಿಡಿಯೋ ನೋಡಿ

    ಮಗು ಆಟವಾಡ್ತಿದ್ದನ್ನು ನೋಡದೆ ಕಾರ್ ಹರಿಸಿದ ಚಾಲಕ- ಅಚ್ಚರಿಯ ರೀತಿಯಲ್ಲಿ ಬಾಲಕ ಪಾರಾದ ವಿಡಿಯೋ ನೋಡಿ

    ಬ್ರೆಸಿಲಿಯಾ: ಆಡವಾಟ್ತಿದ್ದ ಪುಟ್ಟ ಬಾಲಕನ ಮೇಲೆ ಆತನ ಅಂಕಲ್ ಕಾರ್ ಹರಿಸಿದ್ದು, ಅಚ್ಚರಿಯ ರೀತಿಯಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

     

     

     

    ಬ್ರೆಜಿಲ್‍ನ ಸಾಂತಾ ಕ್ಯಾಟರೀನಾದ ಪಾಲ್‍ಹೋಕಾದಲ್ಲಿ ಈ ಘಟನೆ ನಡೆದಿದೆ. ಕಾರ್ ಹರಿದ ಕೆಲವೇ ಸಮಯದಲ್ಲಿ ಬಾಲಕ ಮೇಲೆದ್ದು ಓಡಿಹೋಗೋದನ್ನ ವಿಡಿಯೋದಲ್ಲಿ ಕಾಣಬಹುದು.

    ಬಾಲಕನ ಸಂಬಂಧಿ ಪಾರ್ಕ್ ಮಾಡಲಾಗಿದ್ದ ವೋಕ್ಸ್ ವೇಗನ್ ಕಾರಿನ ಬಳಿ ಬಂದಿದ್ದಾರೆ. ಅವರ ಹಿಂದೆಯೇ ಒಬ್ಬ ಹುಡುಗ ಹಾಗು ಮಗು ಕಲೀಬ್ ಬರೋದನ್ನ ಕಾಣಬಹುದು. ವ್ಯಕ್ತಿ ಹಾಗೂ ಆ ಹುಡುಗ ಕಾರಿನ ಡಿಕ್ಕಿಯಲ್ಲಿ ಏನನ್ನೋ ಹುಡುಕುತ್ತಾ ನಿಂತಿದ್ದಾರೆ. ಈ ವೇಳೆ ಮಗು ಕಲೀಬ್ ಕಾರಿನ ಮುಂದೆ ಹೋಗಿ ತನ್ನ ಪಾಡಿಗೆ ಆಟವಾಡೋದ್ರಲ್ಲಿ ಮಗ್ನವಾಗಿತ್ತು.

     

    ಅತ್ತ ಕಲೀಬ್ ತಂದೆ ಕೂಡ ಕಾರಿನ ಡಿಕ್ಕಿಯ ಬಳಿ ಬಂದಿದ್ದು, ಎಲ್ಲರೂ ಕೆಲ ಕಾಲ ಅಲ್ಲೇ ನಿಂತು ಮಾತನಾಡಿದ್ದಾರೆ. ಕೊನೆಗೆ ಹುಡುಗ ಏನನ್ನೋ ಹಿಡಿದು ಒಳಗೆ ಹೋಗಿದ್ದಾನೆ. ಮೂವರೂ ಮಾತಿನಲ್ಲಿ ಮಗ್ನರಾಗಿ, ಮಗು ಕಾರಿನ ಮುಂದೆ ಬಂದಿರೋದನ್ನ ನೋಡಿಯೇ ಇರಲಿಲ್ಲ.

    ಕೊನೆಗೆ ಕಲೀಬ್ ನ ಅಂಕಲ್ ಡಿಕ್ಕಿಯನ್ನ ಮುಚ್ಚಿ ಕಾರನ್ನ ಏರಿದ್ದಾರೆ. ಕಾರಿನ ಮುಂದೆ ಕಲೀಬ್ ಆಟವಾಡ್ತಿರೋದನ್ನ ಗಮನಿಸದೇ ಆತನ ಮೇಲೆಯೇ ಕಾರ್ ಹರಿಸಿಕೊಂಡು ಹೋಗಿದ್ದಾರೆ. ಕಾರ್ ಹೋದ ತಕ್ಷಣ ಕಲೀಬ್ ಮೇಲೆದ್ದು ಅಲ್ಲೇ ನಿಂತಿದ್ದ ತನ್ನ ತಂದೆಯ ಕಡೆಗೆ ಓಡಿದ್ದಾನೆ.

    ಮನೆಯ ಮುಂದಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಲೀಬ್ ನ ಅಂಕಲ್ ಆತನ ಮೇಲೆ ಕಾರ್ ಹರಿಸಿರುವುದು ಗೊತ್ತಾಯಿತು. ಆದ್ರೆ ನನ್ನ ಮಗನಿಗೆ ಯಾವುದೇ ಗಾಯಗಳಾಗಿರಲಿಲ್ಲ ಎಂದು ಮಗುವಿನ ತಾಯಿ ಇಲ್ಲಿನ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

  • ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರಗೈದು, ಕ್ಯಾಂಡಲ್ ನಿಂದ ಸುಟ್ಟ ಕ್ರೂರಿ ಚಿಕ್ಕಪ್ಪ

    ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರಗೈದು, ಕ್ಯಾಂಡಲ್ ನಿಂದ ಸುಟ್ಟ ಕ್ರೂರಿ ಚಿಕ್ಕಪ್ಪ

    ಮುಂಬೈ: 16 ವರ್ಷದ ಬಾಲಕಿಗೆ ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರ ಮಾಡುತ್ತಿದ್ದ ಸ್ವಂತ ಚಿಕ್ಕಪ್ಪನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಕಳೆದ ಆರು ವರ್ಷಗಳಿಂದ 45 ವರ್ಷದ ಕ್ರೂರಿ ಚಿಕ್ಕಪ್ಪನೊಬ್ಬ ಮಗಳ ಮೇಲೆ ಅತ್ಯಾಚಾರ ಎಸೆಗಿ ಕೊನೆಗೆ ಪೋಷಕರಿಗೆ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದನು. ಸೆಕ್ಸ್ ವಿಡಿಯೋಗಳನ್ನು ತೋರಿಸಿ ನಿರಂತರವಾಗಿ ಲೈಂಗಿಕವಾಗಿ ಕಿರುಕುಳ ನೀಡಿ, ಯಾರಿಗೂ ಹೇಳದಂತೆ ಕ್ಯಾಂಡಲ್ ನಿಂದ ಸುಡುವ ಮೂಲಕ ಕಿರುಕುಳ ಕೊಡುತ್ತಿದ್ದ ಎಂದು ಬಾಲಕಿ ನಗರದ ಮಾಹಿಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಆರೋಪಿ ಚಿಕ್ಕಪ್ಪ ಡಬಲ್-ಮರ್ಡರ್ ಅಪರಾಧದಲ್ಲಿ ಶಿಕ್ಷೆಗೆ ಗುರಿಯಾಗಿದ್ದು, ಪೆರೋಲ್ ಮೇಲೆ ಹೊರಗಡೆ ಬಂದಾಗ ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದನು. ಬಾಲಕಿಯ ದೂರಿನ ಅನ್ವಯ ಪೊಲೀಸರು ಆರೋಪಿ ಮತ್ತು ಆತನ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಗೆ ವಿಷಯ ತಿಳಿದಿದ್ದರೂ ಬಾಲಕಿಯ ಪೋಷಕರಿಗೆ ವಿಷಯ ತಿಳಿಸುವಲ್ಲಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಸಹ ಬಂಧಿಸಲಾಗಿದೆ.

    ಮಾಹಿಮ್ ಪೊಲೀಸರು ಆರೋಪಿ ಹಾಗೂ ಆತನ ಪತ್ನಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಆರೋಪಿ ನಗರದ ಪ್ರತಿಷ್ಟಿತ ಎಸ್‍ಆರ್‍ಎ ಕೊ-ಆಪರೇಟಿವ್ ಸೊಸೈಟಿಯ ಚೇರ್‍ಮ್ಯಾನ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿ ಮತ್ತು ಆತನ ಪತ್ನಿಯನ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 2000ನೇ ಇಸವಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಆರೋಪಿ 2012ರಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದಾನೆ. 10 ವರ್ಷದ ಅವಧಿಯಲ್ಲಿ ಪೆರೋಲ್ ಮೇಲೆ ಬರುತ್ತಿದ್ದಾಗ ಈತ 2010ರಿಂದಲೇ ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ.

  • ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

    ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

    ಲಕ್ನೋ: ಕ್ರೂರಿ ಚಿಕ್ಕಪ್ಪನೊಬ್ಬ ಮೂವರು ಹೆಣ್ಣು ಮಕ್ಕಳನ್ನು ಚಲಿಸುತ್ತಿರುವ ರೈಲಿನಿಂದ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

    ಇಕ್ಬಾಲ್ ಎಂಬಾತನೇ ಮೂವರು ಮಕ್ಕಳನ್ನು ಚಲಿಸುವ ರೈಲಿನಿಂದ ದೂಡಿದ ಕ್ರೂರಿ ಚಿಕ್ಕಪ್ಪ. ಮೂವರು ಮಕ್ಕಳಲ್ಲಿ ಒಬ್ಬ ಬಾಲಕಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಲ್‍ಬುಲ್ (12) ಮತ್ತು ಸಲೀಮಾ ಖಾತೂನ್ (4) ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನಡೆದಿದ್ದೇನು?: ಈ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮೂವರು ಹೆಣ್ಣು ಮಕ್ಕಳ ಜೊತೆಯಲ್ಲಿ ತಂದೆ ಇದ್ದು ಮತ್ತು ಚಿಕ್ಕಪ್ಪ ಇಕ್ಬಾಲ್ ಅಮೃತಸರ್-ಸಹರ್‍ಸಾ ಜನ್‍ಸೇವಾ ಎಕ್ಸ್ ಪ್ರೆಸ್ ನಲ್ಲಿ ಬಿಹಾರ್‍ಗೆ ಪ್ರಯಾಣ ಬೆಳಸುತ್ತಿದ್ದರು. ಈ ವೇಳೆ ಸೀತಾಪುರ ಜಿಲ್ಲೆಯಲ್ಲಿ ಮಕ್ಕಳನ್ನು ಚಿಕ್ಕಪ್ಪ ಇಕ್ಬಾಲ್ ಹೊರಗೆ ಎಸೆದಿದ್ದಾನೆ.

    ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ರೈಲಿನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇಬ್ಬರ ನಡುವೆ ಜಗಳ ಸಹ ನಡೆಯಿತು. ಈ ವೇಳೆ ಚಿಕ್ಕಪ್ಪ ನನ್ನ ಸೋದರಿಯನ್ನು ರೈಲಿನಿಂದ ಎಸೆದ ಎಂದು ಗಾಯಗೊಂಡಿರುವ ಅಲ್‍ಬುಲ್ ತಿಳಿಸಿದ್ದಾಳೆ ಎಂದು ಸೀತಾಪುರನ ಆರ್‍ಪಿಎಫ್ ಪೊಲೀಸ್ ಅಧಿಕಾರಿ ಧನಂಜಯ್ ಸಿಂಗ್ ಹೇಳಿದ್ದಾರೆ.

    ಮುನ್ನಿಯ ಶವ ಬಿಸ್ವಾನ್ ಪಟ್ಟಣದ 11 ಕಿ.ಮೀ ದೂರದ ರಾಮಯ್ಯಪುರ ಹಾಲ್ಟ್ ರೈಲ್ವೆ ನಿಲ್ದಾಣದ ಬಳಿ ದೊರತಿದೆ. ಅಲ್‍ಬುಲ್ ಮತ್ತು ಸಲೀಮಾ ಇಬ್ಬರೂ ತೀವ್ರವಾಗಿ ಗಾಯಗೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದ್ದಾರೆ.

    ಮಕ್ಕಳ ತಂದೆ ಇದ್ದು ಮತ್ತು ಇಕ್ಬಾಲ್ ಇಬ್ಬರೂ ಬಿಹಾರದ ಮೋತಿಹಾರಿ ಜಿಲ್ಲೆಯ ನಿವಾಸಿಗಳಾಗಿದ್ದು, ಪಂಜಾಬ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಘಟನೆ ಬಳಿಕ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಅಪ್ರಾಪ್ತೆ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ

    ಅಪ್ರಾಪ್ತೆ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ

    ಧಾರವಾಡ: 17 ವರ್ಷದ ಅಪ್ರಾಪ್ತೆ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪ್ತಾಪ್ತೆ ಚಿಕ್ಕಪ್ಪ ಮಹದೇವ ಗಂಜಿಗಟ್ಟಿ (45) ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪ ಮಾಡಿದ್ದಾಳೆ.

    15 ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಹೋಗುವಾಗ, ಡ್ರಾಪ್ ಕೊಡುವುದಾಗಿ ಬಾಲಕಿಯ ಚಿಕ್ಕಪ್ಪ ಆಕೆಯನ್ನ ಟಾಟಾ ಏಸ್ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಅಪ್ರಾಪ್ತೆ ಆರೋಪ ಮಾಡಿದ್ದಾಳೆ.

    ಸದ್ಯ ಬಾಲಕಿ ಸಾಧನಾ ಎಂಬ ಸಂಸ್ಥೆಯಲ್ಲಿದ್ದು, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.