Tag: uncle

  • ಸಿಗರೇಟಿಗೆ ಬೆಂಕಿ ಹಚ್ಚಿಕೊಡದ 15 ವರ್ಷದ ಅಳಿಯನಿಗೆ ಚಾಕು ಇರಿದ

    ಸಿಗರೇಟಿಗೆ ಬೆಂಕಿ ಹಚ್ಚಿಕೊಡದ 15 ವರ್ಷದ ಅಳಿಯನಿಗೆ ಚಾಕು ಇರಿದ

    ಚೆನ್ನೈ: ವ್ಯಕ್ತಿಯೊಬ್ಬ ಸಿಗರೇಟ್ ಹೊತ್ತಿಸಿಕೊಡಲು ನಿರಾಕರಿಸಿದ ಸೋದರಳಿಯನಿಗೆ ಚಾಕುವಿನಿಂದ ಇರಿದ ಘಟನೆ ಶನಿವಾರ ರಾತ್ರಿ ರಾಮನಾಥಪುರಂನ ಬಜನೈಕೋವಿಲ್ ರಸ್ತೆಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಅಳಿಯನನ್ನು ಯೋಗೇಶ್(15) ಎಂದು ಗುರುತಿಸಲಾಗಿದೆ. ಯೋಗೇಶ್, ಮಣಿಕಂದನ್ ಅಕ್ಕನ ಮಗ. 43 ವರ್ಷದ ಆರೋಪಿ ಮಣಿಕಂದನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು.

    ಯೋಗೇಶ್ ತಾಯಿಯ ಹೆಸರು ಕೃಷ್ಣಮಣಿ ಎಂದಾಗಿದ್ದು, ಇವರು ಇರುಗೂರ್ ಮಾರ್ಕೆಟ್ ರಸ್ತೆಯಲ್ಲಿ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಯೊಗೇಶ್ ತನ್ನ ಅಂಕಲ್ ಮಣಿಕಂದನ್ ಮನೆಗೆ ಬಂದಿದ್ದನು.

    ಶನಿವಾರ ಯೋಗೇಶ್ ಬಳಿ ಮಣಿಕಂದನ್ ಸಿಗರೇಟ್ ಗೆ ಬೆಂಕಿ ಹಚ್ಚಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಯೋಗೇಶ್ ಇದನ್ನು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಣಿಕಂದನ್, ಹೇಳಿದ ಕೆಲಸ ಮಾಡುವಂತೆ ಮತ್ತೊಮ್ಮೆ ಬಾಲಕನ ಗದರಿಸಿದ್ದಾನೆ. ಆದರೆ ಬಾಲಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಣಿಕಂದನ್, ಬಾಲಕನ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ.

    ಕೂಡಲೇ ಆತನನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಬಾಲಕನ ಆರೋಗ್ಯ ಸುಧಾರಿಸುತ್ತಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನಂತೆ ಪೊಲೀಸರು ಮಣಿಕಂದನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆಸ್ತಿ ಆಸೆಗೆ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ

    ಆಸ್ತಿ ಆಸೆಗೆ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ

    ಚಿತ್ರದುರ್ಗ: ಆಸ್ತಿ ಆಸೆಗಾಗಿ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಹಳ್ಳಕೆ ಎಸೆದಿರುವ ಘಟನೆ ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

    ರಂಗಸ್ವಾಮಿಯವರ ಪುತ್ರ ಏಳು ವರ್ಷದ ಗೋವಿಂದ್ ತನ್ನ ಚಿಕ್ಕಪ್ಪನಿಂದಲೇ ಹತ್ಯೆಯಾದ ದುರ್ದೈವಿ. ರಂಗಸ್ವಾಮಿ ಸಹೋದರ ಚಿರಂಜೀವಿ ಬಾಲಕನಿಗೆ ಪಾರಿವಾಳದ ಆಸೆ ತೋರಿಸಿ ಕರೆದೊಯ್ದು, ನೀರಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ಮೃತ ದೇಹವನ್ನು ಕಟ್ಟಿ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಎಸೆದಿದ್ದಾನೆ.

    ಚಿರಂಜೀವಿ ಹಾಗೂ ರಂಗಸ್ವಾಮಿಯ ತಂದೆ ಕೋಪದಲ್ಲಿ ನಿಮಗೆ ಆಸ್ತಿ ಕೊಡುವುದಿಲ್ಲ, ನನ್ನ ಮೊಮ್ಮಗ ಗೋವಿಂದನ ಹೆಸರಿಗೆ ಬರೆಯುತ್ತೇನೆ ಎಂದಿದ್ದರು. ಹೀಗಾಗಿ ಆಸ್ತಿ ಕೈ ತಪ್ಪುತ್ತದೆ ಎಂಬ ಆತಂಕದಿಂದ ಅಣ್ಣನ ಮಗ ಗೋವಿಂದನನ್ನು ಈತ ಕೊಲೆ ಮಾಡಿದ್ದಾನೆ ಎಂದು ಗೋವಿಂದ್ ತಂದೆ ರಂಗಸ್ವಾಮಿ ಆರೋಪಿಸಿದ್ದಾರೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನಾಯಕನಹಟ್ಟಿ ಠಾಣೆ ಪೊಲೀಸರು, ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

  • ನಶೆಯಲ್ಲಿ ಚಿಕ್ಕಪ್ಪನನ್ನ ಕೊಲೆಗೈದ ಮಗ

    ನಶೆಯಲ್ಲಿ ಚಿಕ್ಕಪ್ಪನನ್ನ ಕೊಲೆಗೈದ ಮಗ

    ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸ್ವಂತ ಚಿಕ್ಕಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು 50 ವರ್ಷದ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ಮೃತ ನಾರಾಯಣಸ್ವಾಮಿ ಅಣ್ಣನ ಮಗ ಮುನಿರಾಜು ಕೊಲೆಗೈದ ಆರೋಪಿ.

    ರಾತ್ರಿ ಕ್ಷುಲ್ಲಕ ಕಾರಣಕ್ಕೆ ನಾರಾಯಣಸ್ವಾಮಿ ಮತ್ತು ಮುನಿರಾಜು ಕುಟುಂಬದ ನಡುವೆ ಜಗಳವಾಗಿದೆ. ಈ ವೇಳೆ ಕುಡಿದು ಬಂದಿದ್ದ ಮುನಿರಾಜು ದೊಣ್ಣೆಯಿಂದ ಅವರ ಚಿಕ್ಕಪ್ಪ ನಾರಾಯಣಸ್ವಾಮಿಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುನಿರಾಜುನನ್ನು ಪೊಲೀಸರು ಬಂಧಿಸಿದ್ದಾರೆ.

  • ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಹಾವೇರಿ: ತನಗೆ ಮೂವರು ಮಕ್ಕಳಿದ್ದರೂ ಅಣ್ಣನ ಮಗನನ್ನು ತನ್ನ ಸ್ವಂತ ಮಗ ಅನ್ನೋದಕ್ಕಿಂತಲೂ ಹೆಚ್ಚಾಗಿ ಬೆಳೆಸಿದ್ದ. ಆದರೆ ಆ ಅಣ್ಣನ ಮಗ ಚಿಕ್ಕಮ್ಮನಿಗಾಗಿ ಚಿಕ್ಕಪ್ಪನನ್ನೇ ಕೊಲೆ ಮಾಡಿ ಅರೆಸ್ಟ್ ಆಗಿದ್ದಾನೆ.

    ಹತ್ಯೆಯಾದ ವ್ಯಕ್ತಿಯನ್ನು ನಾಗೇಂದ್ರಮಟ್ಟಿಯ ನಿವಾಸಿಯಾದ 40 ವರ್ಷ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಈತ ಮೂರು ಮಕ್ಕಳು ಮಡದಿ ಜೊತೆ ಆಟೋರಿಕ್ಷಾ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಮತ್ತು ಅನಾಥ ಎಂದು ತನ್ನ ಅಣ್ಣನ ಮಗ ಮಂಜುನಾಥ್(20) ಜೊತೆಯಲ್ಲೇ ಬೆಳೆಸುತ್ತಿದ್ದ.

    ಚಿಕ್ಕಮ್ಮ ಉಷಾಳ ಜೊತೆ ಮಂಜುನಾಥ್ ಕದ್ದುಮುಚ್ಚಿ ಲವ್ವಿಡವ್ವಿ ಶುರುವಿಟ್ಟಕೊಂಡಿದ್ದ. ಇದು ಯಲ್ಲಪ್ಪನಿಗೆ ಗೊತ್ತಾದ ನಂತರ ಇಬ್ಬರು ಸೇರಿ ಯಲ್ಲಪ್ಪ ಕೊಲೆ ಮಾಡಿ ಹಾವೇರಿಯ ಹೆಗ್ಗೇರಿ ಕೆರೆಯ ಬಳಿ ಐದು ಲೀಟರ್ ಪೆಟ್ರೋಲ್ ಹಾಕಿ ಸುಟ್ಟು, ಮೃತ ದೇಹವನ್ನು ಬಾವಿಯಲ್ಲಿ ಹಾಕಿ ಬಂದಿದ್ದಾರೆ.

    ಡಿಸೆಂಬರ್ 10 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಯಲ್ಲಪ್ಪನನ್ನು ಮಂಜುನಾಥ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅದಕ್ಕೆ ಯಲ್ಲಪ್ಪನ ಪತ್ನಿ ಚಿಕ್ಕಮ್ಮ ಉಷಾ ಸಹ ಸಾಥ್ ನೀಡಿದ್ದಾಳೆ. ನಂತರ ಕಳೆದ ಆರು-ಏಳು ತಿಂಗಳಿನಿಂದ ಗಂಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಗ್ರಾಮಸ್ಥರ ಬಳಿ ಹೇಳಿದ್ದಳು.

    6 ತಿಂಗಳ ನಂತರ ಸ್ಥಳೀಯರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈಗ ಚಿಕ್ಕಮ್ಮ ಉಷಾ ಹಾಗೂ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

  • ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನ -ಪಕ್ಕದ್ಮನೆ ಆಂಟಿಗೆ ಅಂಕಲ್ ಪ್ಲೈನ್ ಕಿಸ್

    ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನ -ಪಕ್ಕದ್ಮನೆ ಆಂಟಿಗೆ ಅಂಕಲ್ ಪ್ಲೈನ್ ಕಿಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಓರ್ವ ಕಾಮುಕ ಅಂಕಲ್ ಇದ್ದು, ಪಕ್ಕದ ಮನೆ ಮಹಿಳೆಗೆ ಪ್ಲೈನ್ ಕಿಸ್ ಕೊಟ್ಟು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ.

    ಆರೋಪಿಯನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಕೆಟ್ಟದಾಗಿ ಸನ್ನೆ ಮಾಡಿ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆ ಆರೋಪಿ ಸೋಮಶೇಖರ್ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಪಕ್ಕದ ಮನೆಯ ನಿವಾಸಿ ಸೋಮಶೇಖರ್ ಸುಮಾರು ಆರು ತಿಂಗಳಿನಿಂದ ನನಗೆ ಕೆಟ್ಟದಾಗಿ ಸನ್ನೆ ಮಾಡಿ, ಬಟ್ಟೆಯಿಲ್ಲದ ತನ್ನ ಬೆತ್ತಲೆ ದೇಹವನ್ನು ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಇತ್ತೀಚೆಗೆ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದಾಗ ಆರೋಪಿ ಕೆಟ್ಟದಾಗಿ ಸನ್ನೆ ಮಾಡಿ ಪ್ಲೈನ್ ಕಿಸ್ ನೀಡಿ ಕಿರುಕುಳ ನೀಡಿದ್ದನು. ಆದ್ದರಿಂದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯಕ್ಕೆ ಆರೋಪಿ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಆಗ್ರಾ: 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಸಂಬಂಧಿಕನೇ ಮದುವೆ ಸಮಾರಂಭದಲ್ಲಿ ಅತ್ಯಾಚಾರ ಮಾಡಿದ್ದಾನೆ. ಮಗುವನ್ನು ಯಾರಿಗೂ ತಿಳಿಯದಂತೆ ಪೊದೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೋಹಿಯಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೆಲ ದಿನಗಳ ಹಿಂದೆ ಪೋಹಿಯಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಮದುವೆಗೆ ಬಂದಿದ್ದ ಮಗುವನ್ನು ಸಂಬಂಧಿಕನೊಬ್ಬ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಿಂದ ಯಾರಿಗೂ ತಿಳಿಯದಂತೆ ಎತ್ತುಕೊಂಡು ಹೋಗಿ, ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ತುಸು ದೂರದಲ್ಲಿದ್ದ ಪೊದೆಯೊಂದರಲ್ಲಿ ರಕ್ತಸಿಕ್ತವಾಗಿದ್ದ ಮಗುವನ್ನು ಎಸೆದು ಹೋಗಿದ್ದಾನೆ.

    ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಮಗು ಕಾಣದಿದ್ದಾಗ, ತಾಯಿ ಹಾಗೂ ಕೆಲವರು ಮಗುವನ್ನು ಸುತ್ತಮುತ್ತ ಹುಡುಕಿದ್ದಾರೆ. ಆಗ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಸುಮಾರು 400 ಮೀ. ದೂರದಲ್ಲಿದ್ದ ಪೊದೆಯೊಂದರ ನಡುವೆ ಮಗು ಜ್ಞಾನ ತಪ್ಪಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಈ ವೇಳೆ ನಡೆದಿರುವ ವಿಷಯದ ಬಗ್ಗೆ ತಾಯಿ ಬಹಿರಂಗಪಡಿಸಲು ಮುಂದಾದಾಗ ಆಕೆಯ ಸಂಬಂಧಿಕರು ಯಾರಿಗೂ ತಿಳಿಸಿದಂತೆ ಹೇಳಿ ತಾಯಿ ಮಗುವನ್ನು ಸ್ಥಳದಿಂದ ಕಳುಹಿಸಿದ್ದಾರೆ.

    ಬಳಿಕ ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ. ಅಲ್ಲದೆ ಮಗುವಿನ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • 17ರ ಬಾಲೆಯನ್ನ ಅತ್ಯಾಚಾರಗೈದ ಅಂಕಲ್ – ಅಪ್ರಾಪ್ತೆಯ ಮಡಿಲಲ್ಲಿ ಕಂದಮ್ಮ

    17ರ ಬಾಲೆಯನ್ನ ಅತ್ಯಾಚಾರಗೈದ ಅಂಕಲ್ – ಅಪ್ರಾಪ್ತೆಯ ಮಡಿಲಲ್ಲಿ ಕಂದಮ್ಮ

    ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಅಂಕಲ್ ನಿರಂತರವಾಗಿ 7 ತಿಂಗಳ ಕಾಲ ಅತ್ಯಾಚಾರ ಎಸಗಿದ್ದು, ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪಿಂಪ್ರಿ ಚಿಂಚವಾಡ್‍ದಲ್ಲಿ ಘಟನೆ ನಡೆದಿದ್ದು, ಇಂದು ಹೊಟ್ಟೆನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷ ಬಾಲಕಿ ಅವಧಿಗೂ ಮುನ್ನ (Premature Baby) ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಆರೋಪಿಯ ವಿರುದ್ಧ ಬಾಲಕಿಯ ಪೋಷಕರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಬಾಲಕಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿ ಹಾಗೂ ಆರೋಪಿ ಅಂಕಲ್ ಒಂದೇ ಮನೆಯಲ್ಲಿ ವಾಸವಾಗಿದ್ದು, ಇದೇ ವರ್ಷ ಮೇ ತಿಂಗಳು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ಆರೋಪಿಗೆ ಮದುವೆಯಾಗಿದ್ದು, ಕೆಲ ದಿನಗಳ ಹಿಂದೆ ಆತನ ಪತ್ನಿ ಬಿಟ್ಟು ಹೋಗಿದ್ದಾಳೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 (ಬಲವಂತ ಸಂಭೋಗಕ್ಕೆ ದಂಡನೆ), 506 (ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಡಿಸೆಂಬರ್ 25ರಿಂದ ನಾಪತ್ತೆಯಾಗಿದ್ದು, ನಮ್ಮ ಜೊತೆಗೆ ಬಾಲಕಿಯ ಪೋಷಕರು ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚಿಕ್ಕಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಗ

    ಚಿಕ್ಕಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಗ

    ತುಮಕೂರು: ರೈಲ್ವೆ ಇಲಾಖೆಯಿಂದ ಪರಿಹಾರ ತೆಗೆದುಕೊಳ್ಳಲು ಸಹಿ ಹಾಕದ ಹಿನ್ನೆಲೆ ಚಿಕ್ಕಪ್ಪನ ಮೇಲೆ ಅಣ್ಣನ ಮಗನೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೇಶಪುರ ಗ್ರಾಮದಲ್ಲಿ ನಡೆದಿದೆ.

    ವೀರಭದ್ರಯ್ಯ (50) ಹಲ್ಲೆಗೊಳಗಾದ ವ್ಯಕ್ತಿ. ವೀರಭದ್ರಯ್ಯನ ಅಣ್ಣನ ಮಗ ಮಹೇಶ್ ಹಾಗೂ ಆತನ 6 ಜನ ಸಹಚರು ಹಲ್ಲೆ ನಡೆಸಿರುವ ಆರೋಪಿಗಳು. ಶುಕ್ರವಾರ ರಾತ್ರಿ ವೀರಭದ್ರಯ್ಯ ಡೈರಿಗೆ ಹಾಲು ಹಾಕಿ ಬರುವ ವೇಳೆ ಮಹೇಶ್ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ತುಮಕೂರು-ರಾಯದುರ್ಗ ರೈಲ್ವೇ ಯೋಜನೆ ನಡೆಯುತ್ತಿದ್ದ ವೇಳೆ ವೀರಭದ್ರಯ್ಯ ಹಾಗೂ ಅವರ ಅಣ್ಣನಿಗೆ ಸೇರಿದ ಎರಡು ಎಕರೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಮೀನು ವಿಚಾರವಾಗಿ ಪರಿಹಾರ ತೆಗೆದುಕೊಳ್ಳಲು ಕೋರ್ಟ್‍ಗೆ ಅರ್ಜಿ ಹಾಕಲು ಸಹಿ ಹಾಕುವಂತೆ ಒತ್ತಾಯಿಸಿ ವೀರಭದ್ರಯ್ಯನ ಮೇಲೆ ಮಹೇಶ್ ಹಲ್ಲೆ ಮಾಡಿದ್ದಾನೆ.

    ಸದ್ಯ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವೀರಭದ್ರಯ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ವೀರಭದ್ರಯ್ಯರ ಪತ್ನಿ ಶೈಲಜಾ ದೂರು ದಾಖಲಿಸಿದ್ದು, ಆರೋಪಿ ಮಹೇಶ್ ಹಾಗೂ ಆತನ 6 ಮಂದಿ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 8ನೇ ಕ್ಲಾಸ್ ಓದಿರೋ ಅಂಕಲ್‍ನಿಂದ 6 ಮಹಿಳೆಯರ ಫೇಸ್‍ಬುಕ್ ಖಾತೆ ಹ್ಯಾಕ್

    8ನೇ ಕ್ಲಾಸ್ ಓದಿರೋ ಅಂಕಲ್‍ನಿಂದ 6 ಮಹಿಳೆಯರ ಫೇಸ್‍ಬುಕ್ ಖಾತೆ ಹ್ಯಾಕ್

    -ಮೆಸೇಜ್ ಕಳಿಸಿ ಸೆಕ್ಸ್ ಗೆ ಬೇಡಿಕೆ

    ಇಂದೋರ್: 6 ಮಹಿಳೆಯರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ 8 ನೇ ಕ್ಲಾಸ್ ಓದಿರೋ ಅಂಕಲ್ ನನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.

    ಜಾಗೃತಿ ನಗರದ ನಿವಾಸಿ 36 ವರ್ಷದ ದಿಲೀಪ್ ಬಂಧಿತ ವ್ಯಕ್ತಿ. ದಿಲೀಪ್ ತಾನು ಹ್ಯಾಕ್ ಮಾಡಿದ ಎಫ್‍ಬಿ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದನು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ 6 ದೂರುಗಳು ದಾಖಲಾಗಿದ್ದವು. ಪ್ರಕರಣ ಕೈಗೆತ್ತಿಕೊಂಡ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ತನ್ನದೇನು ತಪ್ಪಿಲ್ಲ ಎಂದು ಬಲವಾಗಿ ವಾದಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ತೋರಿಸುತ್ತಿದ್ದಂತೆ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದಿಲೀಪ್ ಫೇಸ್‍ಬುಕ್ ಖಾತೆ ಹ್ಯಾಕ್ ಮಾಡಲು ಕೆಲವು ವಿಐಪಿ ಅಥವಾ ಫ್ಯಾನ್ಸಿ ಮೊಬೈಲ್ ನಂಬರ್‍ಗಳನ್ನು ಬಳಕೆ ಮಾಡುತ್ತಿದ್ದನು. ಹೀಗೆ ಪದೇ ಪದೇ ನಂಬರ್ ಗಳನ್ನು ಹಾಕುವ ಮೂಲಕ ಫೇಸ್‍ಬುಕ್ ಖಾತೆಗಳನ್ನ ಹ್ಯಾಕ್ ಮಾಡುತ್ತಿದ್ದನು. ಖಾತೆ ಹ್ಯಾಕ್ ಬಳಿಕ ಮಹಿಳೆಯರಿಗೆ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಬೇಡಿಕೆ ಇಡುತ್ತಿದ್ದನು. ಒಂದು ವೇಳೆ ಮಹಿಳೆ ಒಪ್ಪದೇ ಇದ್ದಲ್ಲಿ ಅವರ ಫೇಸ್‍ಬುಕ್ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಕಳೆದ ಮೂರು ತಿಂಗಳನಿಂದ ಆರೋಪಿ ಎಫ್‍ಬಿ ಅಕೌಂಟ್ ಹ್ಯಾಕ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಹೇಗೆ ಹ್ಯಾಕ್ ಮಾಡ್ತಿದ್ದ..?
    ಒಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಫೇಸ್‍ಬುಕ್ ನಲ್ಲಿ ಕೆಲವು ಮೊಬೈಲ್ ನಂಬರ್ ಹಾಕಿ ಖಾತೆ ತೆರೆಯುವ ಪ್ರಯತ್ನ ಮಾಡಲಾರಂಭಿಸಿದ್ದಾನೆ. ಹೀಗೆ ಒಂದೆರೆಡು ಖಾತೆ ಓಪನ್ ಆಗುತ್ತಲೇ ಇದನ್ನೇ ಕೆಲಸ ಮಾಡಿಕೊಂಡಿದ್ದಾನೆ. ಮುಂದೆ ಫಾನ್ಸಿ ಅಥವಾ ಮೊಬೈಲ್ ನಂಬರ್ ಬಳಸಿ, ಅಂದಾಜಿನ ಮೇಲೆಯೇ ಕಾಮನ್ ಪಾಸ್ ವರ್ಡ್ ಬಳಸಿ ಕೆಲ ಮಹಿಳೆಯರ ಎಫ್‍ಬಿ ಖಾತೆಗಳು ಓಪನ್ ಆಗಿವೆ. ಆದ್ರೆ ದಿಲೀಪ್ ಖಾತೆ ತೆರೆದ ಮಹಿಳೆಯರ ಪರಿಚಯ ಮೊದಲು ಇರಲಿಲ್ಲ. ಖಾತೆಗಳು ಓಪನ್ ಆಗುತ್ತಿದ್ದಂತೆ ಮೆಸೇಜ್ ಕಳಿಸಿ ಸೆಕ್ಸ್ ಗೆ ಬೇಡಿಕೆ ಇಡುತ್ತಿದ್ದನು.

    ಆರೋಪಿ ದಿಲೀಪ್ 8ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಿದ್ದು, ಜಾಗೃತ ನಗರದ ಸಿಂಧಿ ಕಾಲೋನಿಯ ನಿವಾಸಿಯಾಗಿದ್ದಾನೆ. ಪಟ್ಟಣದಲ್ಲಿ ತನ್ನದೇ ಸ್ವಂತ ಫೂಟ್‍ವೇರ್ ಅಂಗಡಿಯನ್ನು ಹೊಂದಿದ್ದಾನೆ. ಇದೇ ರೀತಿಯಾಗಿ ಯಾರಾದ್ರೂ ಮಹಿಳೆಯರು ತೊಂದರೆ ಅನುಭವಿಸಿದ್ದರೆ, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ನಿಮಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುವ ವ್ಯಕ್ತಿಯಿಂದ ದೂರ ಇರಬೇಕು ಎಂದು ಕ್ರೈಂ ಬ್ರ್ಯಾಂಚ್ ಎಎಸ್‍ಪಿ ಅಮರೇಂದ್ರ ಸಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೊಡ್ಡಪ್ಪನಿಂದ ಲೈಂಗಿಕ ಕಿರುಕುಳ- ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಎಫ್‍ಐಆರ್ ದಾಖಲು

    ದೊಡ್ಡಪ್ಪನಿಂದ ಲೈಂಗಿಕ ಕಿರುಕುಳ- ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಎಫ್‍ಐಆರ್ ದಾಖಲು

    ದಾವಣಗೆರೆ: ದೊಡ್ಡಪ್ಪನೇ ಯುವತಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಚಿಕ್ಕ ವಯಸ್ಸಿನಲ್ಲೇ ತಂದೆ- ತಾಯಿಯನ್ನು ಕಳೆದುಕೊಂಡ ಯುವತಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಸ್ವಂತ ದೊಡ್ಡಪ್ಪನೇ ಯುವತಿ ಮೇಲೆ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದರು.

    ದೊಡ್ಡಪ್ಪನ ವರ್ತನೆಯಿಂದ ಬೇಸತ್ತು ಯುವತಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಮುಂದಾಗಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದರು. ಯುವತಿಯ ದೊಡ್ಡಪ್ಪ ಸಿ.ವಿ ಪ್ರಭಾಕರ್ ಬೀಜ ನಿಗಮದ ಅಧಿಕಾರಿಯಾಗಿ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಸಿ.ವಿ ಪ್ರಭಾಕರ್ ಪ್ರತಿನಿತ್ಯ ಯುವತಿಗೆ ಕಿರುಕುಳ ನೀಡುತ್ತಿದ್ದು, ನೊಂದ ಯುವತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಸಿ.ವಿ ಪ್ರಭಾಕರ್ ವಿರುದ್ಧ ಐಪಿಸಿ ಸೆಕ್ಷನ್ 376ರ ಅನ್ವಯ ಕೇಸ್ ದಾಖಲಾಗಿದೆ.

    ಸದ್ಯ ಆರೋಪಿ ಪ್ರಭಾಕರ್ ಬಂಧನದ ಭೀತಿಯಲ್ಲಿದ್ದು, ಯುವತಿ ಸರ್ಕಾರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದಾರೆ. ಯುವತಿಗೆ ಬೆಂಬಲಕ್ಕೆ ಸ್ಥಳೀಯರು ನಿಂತಿದ್ದಾರೆ.