Tag: uncle

  • ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ಕೋಲ್ಕತ್ತಾ: 22 ವರ್ಷದ ಮಹಿಳೆಯೊಬ್ಬಳು 56 ವರ್ಷದ ತಂದೆಯನ್ನು ಊಟಕ್ಕೆಂದು ಕರೆದೊಯ್ದು ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಮಹಿಳೆ ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್ ನಿವಾಸಿಯಾಗಿದ್ದು, ಭಾನುವಾರ ರಾತ್ರಿ ತನ್ನ ತಂದೆಯೊಂದಿಗೆ ರೆಸ್ಟೋರೆಂಟ್‍ಗೆ ತೆರಳಿ ಮದ್ಯ ಕುಡಿಸಿದ್ದಾಳೆ. ಬಳಿಕ ಇಬ್ಬರು ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ತಂದೆ ನಿದ್ರೆಗೆ ಜಾರಿದ ನಂತರ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತಂತೆ ವಿಚಾರಣೆ ವೇಳೆ ಮಹಿಳೆ, ತಾನು ಚಿಕ್ಕವಳಿದ್ದಾಗಲೆ ತಾಯಿ ತೀರಿಕೊಂಡಿದ್ದು, ನಂತರ ತಂದೆ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ಭಾವನಾತ್ಮಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.

    ಮಹಿಳೆ ಮದುವೆ ನಂತರ ಹಿಂಸೆ ನೀಡುವುದನ್ನು ನಿಲ್ಲಿಸಿದ್ದ ತಂದೆ, ಮದುವೆ ಮುರಿದು ಮಹಿಳೆ ಮನೆಗೆ ಹಿಂದಿರುಗಿದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು ಎಂದು ತಿಳಿಸಿದ್ದಾಳೆ. ಸದ್ಯ ಮಹಿಳೆಯ ಚಿಕ್ಕಪ್ಪ ಘಟನೆ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಮಹಿಳೆ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಉಣಬಡಿಸಿದ ರಾಕ್ಷಸ

    ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಉಣಬಡಿಸಿದ ರಾಕ್ಷಸ

    ವಾಷಿಂಗ್ಟನ್: ತ್ರಿವಳಿ ಕೊಲೆ ಮಾಡಿದ ವ್ಯಕ್ತಿ ಮೃತಪಟ್ಟ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕಾದ ಒಕ್ಲಹೋಮದಲ್ಲಿ ನಡೆದಿದೆ.

    ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದ್ದು, ಆರೋಪಿ ನೆರೆಮನೆಯವಳನ್ನು ಕೊಂದು ಆಕೆಯ ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ಆರೋಪಿ ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಆಲೂಗಡ್ಡೆಯೊಂದಿಗೆ ಬೇಯಿಸಿ, ತನ್ನ ಕೈಯಾರೆ ಚಿಕ್ಕಪ್ಪ ಮತ್ತು ಅವರ ಪತ್ನಿಗೆ ಉಣಬಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ಆರೋಪಿ ತನ್ನ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಪುತ್ರಿಯನ್ನು ಮನೆಯಲ್ಲಿ ಕೊಂದಿದ್ದಾನೆ. ಅಲ್ಲದೆ ತನ್ನ ಚಿಕ್ಕಮ್ಮನ ಮೇಲೆ ಕೂಡ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ.

    ಸುಮಾರು 20 ವರ್ಷದಿಂದ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಆರೋಪಿಯನ್ನು ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್, ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದರು. ಆರೋಪಿ ಬಿಡುಗಡೆ ನಂತರ ಈ ಘಟನೆ ಸಂಭವಿಸಿದೆ.

  • ನಿರ್ಮಾಣ ಹಂತದ ಕಟ್ಟಡಕ್ಕೆ ಬಲವಂತವಾಗಿ ಬಾಲಕಿಯ ಕರೆದೊಯ್ದು ರೇಪ್ ಮಾಡಿದ ಚಿಕ್ಕಪ್ಪ!

    ನಿರ್ಮಾಣ ಹಂತದ ಕಟ್ಟಡಕ್ಕೆ ಬಲವಂತವಾಗಿ ಬಾಲಕಿಯ ಕರೆದೊಯ್ದು ರೇಪ್ ಮಾಡಿದ ಚಿಕ್ಕಪ್ಪ!

    ಲಕ್ನೋ: 15 ವರ್ಷದ ಬಾಲಕಿ ಮೇಲೆ ಚಿಕ್ಕಪ್ಪನೇ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ದಾನ್ ಪಟ್ಟಣದ ಗ್ರಾಮವೊಂದರಲ್ಲಿ ಗುರುವಾರ ನಡೆದಿದೆ.

    ಈ ಘಟನೆಯು ಬಾಲಕಿಯೊಬ್ಬಳೇ ಮನೆಯಲ್ಲಿರುವುದನ್ನು ತಿಳಿದು ಆಕೆಯ ಚಿಕ್ಕಪ್ಪ ಮನೆಗೆ ಬಂದಿದ್ದಾನೆ. ಅಲ್ಲದೆ ಆಕೆಯನ್ನು ನಿರ್ಮಾಣವಾಗುತ್ತಿದ್ದ ಕಟ್ಟಡದ ಬಳಿ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರವನ್ನು ನಿರಾಕರಿಸಿದ್ದರಿಂದ ಬಾಲಕಿಗೆ ಗನ್‍ನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಜೊತೆಗೆ ಈ ವಿಚಾರವನ್ನು ಎಲ್ಲಾದರೂ ಹೇಳಿಕೊಂಡರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ.

    ಆದರೂ ಘಟನೆ ವೇಳೆ ಬಾಲಕಿ ತನ್ನನ್ನು ರಕ್ಷಿಸುವಂತೆ ಜೋರಾಗಿ ಕಿರುಚಿದ್ದಾಳೆ. ಹಾಗಾಗಿ ಬಾಲಕಿಯ ದನಿ ಕೇಳಿಸಿಕೊಂಡ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಬಾಲಕಿಯ ಪೋಷಕರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆರೋಪಿ ಹೆಸರಿನಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಪೊಲೀಸರು ಅತ್ಯಾಚಾರ, ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ ಮತ್ತು ಪೋಕ್ಸೋ ಕಾಯಿದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೈದ ಚಿಕ್ಕಪ್ಪ

    ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೈದ ಚಿಕ್ಕಪ್ಪ

    ಧಾರವಾಡ: ಕುಟುಂಬದೊಳಗಿನ ಜಗಳದ ಮಧ್ಯೆ ಯುವಕನೋರ್ವನನ್ನು ಆತನ ಚಿಕ್ಕಪ್ಪನೇ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

    26 ವರ್ಷದ ಆಕಾಶ್ ಕೋಟೂರ ಎಂಬಾತನೇ ಚಿಕ್ಕಪ್ಪನಿಂದ ಕೊಲೆಯಾದ ದುರ್ದೈವಿ. ಕೊಲೆ ಮಾಡಿರುವ ಆರೋಪಿಯನ್ನು ಪ್ರಕಾಶ್ ಕೋಟೂರ ಎಂದು ಗುರುತಿಸಲಾಗಿದೆ. ಆಕಾಶ್ ಆಗಾಗ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮನೆಯೊಳಗೆ ಇಂದು ಜಗಳ ನಡೆದಿದೆ. ನಂತರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಪ್ರಕಾಶ್ ಕಬ್ಬಿಣದ ಸಲಾಕೆಯಿಂದ ಆಕಾಶ್ ನ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಆಕಾಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

     

    ಕೊಲೆಯ ಸುದ್ದಿ ತಿಳಿಯುತಿದ್ದಂತೆ ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಕಾಶ್‍ನನ್ನು ಆತನ ಚಿಕ್ಕಪ್ಪ ಪ್ರಕಾಶ್ ಕೊಲೆ ಮಾಡಿದ್ದು, ಈ ಕೊಲೆಗೆ ಕುಟುಂಬದೊಳಗಿನ ಜಗಳವೇ ಕಾರಣವಾಗಿದೆ, ಆಕಾಶ್ ಅಗಾಗ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪ್ರಕಾಶ್ ಹಾಗೂ ಆಕಾಶ್ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಹಿಂದೆ ಬೇರೆ ಏನಾದರೂ ಬಲವಾದ ಕಾರಣ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸಿ ಪತ್ತೆ ಮಾಡಲಾಗುವುದು. ಸದ್ಯ ಕೊಲೆ ಮಾಡಿರುವ ಪ್ರಕಾಶ್ ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

  • 4ರ ಕಂದಮ್ಮನ ಮೇಲೆ 15ರ ಹುಡುಗನಿಂದ ರೇಪ್

    4ರ ಕಂದಮ್ಮನ ಮೇಲೆ 15ರ ಹುಡುಗನಿಂದ ರೇಪ್

    – ಹುಡುಗನನ್ನ ಚಿಕ್ಕಪ್ಪ ಅಂತಿದ್ದ ಬಾಲಕಿ

    ಜೈಪುರ: 15 ವರ್ಷದ ಹುಡುಗ ತನ್ನನ್ನ ಚಿಕಪ್ಪ ಎಂದು ಕರೆಯುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ಥಾಣಾಗಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಬಾಲಕಿಯನ್ನ ದಾಖಲಿಸಿರುವ ಆಸ್ಪತ್ರೆಗೆ ತೆರಳಿದ ಎಸ್.ಪಿ.ತೇಜಸ್ವಿನಿ ಗೌತಮ್ ಮಾಹಿತಿ ಪಡೆದುಕೊಂಡಿದ್ದಾರೆ. ಬಾಲಕಿ ತನ್ನ ಮೇಲಾದ ದೌರ್ಜನ್ಯ ಹೇಳಿ ಭಯದಿಂದ ಕಣ್ಣೀರು ಹಾಕಿದ್ದಾಳೆ ಎಂದು ವರದಿಯಾಗಿದೆ.

    ಆರೋಪಿ ಅಪ್ತಾಪ್ತ ಬಾಲಕಿಯನ್ನ ಆಟಕ್ಕೆ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕಂದಮ್ಮ ಮನೆಗೆ ಅಳುತ್ತಾ ಬಂದು ಚಿಕಪ್ಪನ ಬಗ್ಗೆ ದೂರು ಹೇಳಿದ್ದಾಳೆ. ಪೋಷಕರು ಮಗುವನ್ನ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರೋದು ಬೆಳಕಿಗೆ ಬಂದಿದೆ.

    ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಮಗುವನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಕುಟುಂಬಸ್ಥರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಥಾಣಾಗಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಹ ಅದೇ ಗ್ರಾಮದ ನಿವಾಸಿಯಾಗಿದ್ದಾನೆ. ಬಾಲಕಿಯ ಪಕ್ಕದ ಮನೆಯಲ್ಲಿ ಆರೋಪಿ ವಾಸವಾಗಿದ್ದು, 9ನೇ ಕ್ಲಾಸ್ ಓದುತ್ತಿದ್ದಾನೆ ಎಂದು ಡಿಎಸ್ ಪಿ ಬಲರಾಮ್ ಮೀಣಾ ಹೇಳಿದ್ದಾರೆ.

  • ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

    ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

    – 2 ತಿಂಗಳು ಅತ್ಯಾಚಾರಗೈದ ಕಾಮುಕ
    – ವೀಡಿಯೋ ಮಾಡಿ ಬೆದರಿಕೆ

    ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶದಲ್ಲಿಯೇ ಲಾಕ್‍ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಆಂಟಿ ಮನೆಯಲ್ಲಿ ಹೋಗಿ ಸಿಲುಕಿಕೊಂಡ 17 ವರ್ಷದ ಹುಡುಗಿಯ ಮೇಲೆ ಆಕೆಯ ಅಂಕಲ್ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.

    ಲಾಕ್‍ಡೌನ್ ಮುಖ್ತವಾದ ಬಳಿಕ ಅವಳು ತನ್ನ ಮನೆಗೆ ತೆರಳಿದ ವೇಳೆ ಅಂಕಲ್ ಕಥೆ ಬಯಲಾಗಿದೆ. ಆರೋಪಿ ಅಂಕಲ್ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಧುಲೆ ನಿವಾಸಿಯಾಗಿರುವ ಹುಡುಗಿ, ಲಾಕ್‍ಡೌನ್ ಸಮಯದಲ್ಲಿ ಪ್ಯಾರೆಲ್‍ನಲ್ಲಿರುವ ತನ್ನ ಚಿಕ್ಕಮ್ಮನ ಸ್ಥಳಕ್ಕೆ ಬಂದಿದ್ದಾಳೆ. ಇದೇ ಸಮಯವನ್ನು ಹುಡುಗಿಯ ಚಿಕ್ಕಪ್ಪನಾಗಿರುವ ಆರೋಪಿ ಸದುಪಯೋಗಪಡಿಸಿಕೊಂಡಿದ್ದಾನೆ. ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ. ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಆರೋಪಿ ಹುಡುಗಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಇತ್ತೀಚೆಗೆ ಹುಡುಗಿ ತನ್ನ ಮನೆಗೆ ಮರಳಿದ್ದಳು. ಈ ವೇಳೆ ಅವಳು ಹೊಟ್ಟೆನೋವಿನಿಂದ ಬಳಲಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆಯ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿದೆ. ಇತ್ತ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಧುಲೇನಲ್ಲಿರುವ ಸ್ಥಳೀಯ ಪೊಲೀಸರನ್ನು ಎಚ್ಚರಿಸಿದ್ದು, ಅಂಕಲ್ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿ ಭೋವಾಡಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

    ಅಂಕಲ್ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದ ವೇಳೆ ಅದರ ವೀಡಿಯೋ ಮಾಡಿದ್ದಾನೆ. ಅಲ್ಲದೆ ಈ ವಿಚಾರ ಯಾರಿಗಾದರೂ ಹೇಳಿದರೆ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಆಕೆಯ ಹೇಳಿಕೆಯ ಸಂಬಂಧ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

  • ಗಾಂಜಾ ಅಮಲಿನಲ್ಲಿ ಚಿಕ್ಕಪ್ಪನನ್ನೇ ಕೊಂದ ಅಪ್ರಾಪ್ತ ಬಾಲಕ

    ಗಾಂಜಾ ಅಮಲಿನಲ್ಲಿ ಚಿಕ್ಕಪ್ಪನನ್ನೇ ಕೊಂದ ಅಪ್ರಾಪ್ತ ಬಾಲಕ

    – ತಿಂಗಳ ಹಿಂದೆಷ್ಟೇ ತಂದೆ ಕಳೆದುಕೊಂಡಿದ್ದ ಅರೋಪಿ

    ಕೋಲಾರ: ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕ ಚಾಕುವಿನಿಂದ ತನ್ನ ಚಿಕ್ಕಪ್ಪನನ್ನೇ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ತಮಿಳುನಾಡು ಗಡಿಯಲ್ಲಿ ಹೆಚ್ಚು ಸಿಗುವ ಗಾಂಜಾವನ್ನ ಅಪ್ಪ-ಮಗ ಹೊಡೆದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದು, ಕುಡಿದ ಅಮಲಿನಲ್ಲಿ ಅಪ್ರಾಪ್ತ ಚಿಕ್ಕಪ್ಪ ವಿಜಯ್ ಕುಮಾರ್ ನನ್ನೇ ಕೊಲೆ ಮಾಡಿದ್ದಾನೆ.

    ಕಳೆದ ರಾತ್ರಿ ಕೊಲೆಯಾದ ವಿಜಯ್ ಕುಮಾರ್ ಹಾಗೂ ಆರೋಪಿ ಇಬ್ಬರು ಒಟ್ಟಿಗೆ ಗಾಂಜಾ ಹೊಡೆದು ಕ್ಷುಲ್ಲಕ ಕಾರಣಕ್ಕೆ ತಮ್ಮ ಮನೆ ಬಳಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೈಕೈ ಮಿಲಾಯಿಸಿದ್ದಾರೆ. ನಶೆಯಲ್ಲಿದ್ದ ಚಿಕ್ಕಪ್ಪ ಮನೆಯ ಮುಂದೆ ಮಲಗಿದ್ದ ವೇಳೆ ದಾಳಿ ಮಾಡಿರುವ ಆರೋಪಿ, ಚಾಕುವಿನಿಂದ ಕುತ್ತಿಗೆಗೆ ಚುಚ್ಚಿದ್ದಾನೆ. ತೀವ್ರ ರಕ್ತ ಸ್ರಾವವಾಗಿ ತಂದೆ ಸಮಾನದ ವಿಜಯ್ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನ ಗಮನಿಸಿದ ಗ್ರಾಮಸ್ಥರು ಆರೋಪಿಯನ್ನ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿ, ಮಾಲೂರು ಪೊಲಿಸರಿಗೆ ಒಪ್ಪಿಸಿದ್ದಾರೆ.

    ಕೊಲೆಯಾದ ವಿಜಯ್ ಕುಮಾರ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಹೆಂಡತಿಯೂ ಸಹ ಈತನ ಕುಡಿತದ ಕಾಟ ತಾಳದೆ ತನ್ನ ತವರು ಮನೆ ಸೇರಿದ್ದಾಳೆ. ಕೆಲ ದಿನಗಳ ನಂತರ ಹೆಂಡತಿಯ ತವರೂರಿಲ್ಲಿಯೇ ಬಿಡಾರ ಹೂಡಿದ್ದ ಈತ ವಾರಕ್ಕೊಮ್ಮೆ ಬೆನ್ನಘಟ್ಟ ಗ್ರಾಮಕ್ಕೆ ಬರುತ್ತಿದ್ದ. ಆದರೆ ನಶೆಯಲ್ಲಿದ್ದ ಅಣ್ಣನ ಮಗನೊಂದಿಗೆ ಜಗಳ ಮಾಡುತ್ತಿದ್ದ ಗ್ರಾಮಸ್ಥರು, ಇವರಿಬ್ಬರದು ಮಾಮೂಲಿ ಎಂದುಕೊಂಡಿದ್ದರು. ಓದು ಬಿಟ್ಟು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅಣ್ಣನ ಮಗ ಗಾಂಜಾಗೆ ದಾಸನಾಗಿದ್ದ, ಕಳೆದ ಒಂದು ತಿಂಗಳ ಹಿಂದಷ್ಟೆ ತನ್ನ ತಂದೆಯನ್ನ ಕಳೆದುಕೊಂಡಿದ್ದ. ಬಳಿಕ ತಂದೆ ಸಮಾನರಾಗಿದ್ದ ಚಿಕ್ಕಪ್ಪನೊಂದಿಗೆ ಹಗಲಿನಲ್ಲಿ ಸ್ನೇಹಿತರಂತೆ ಇರುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ದಾಯಾದಿಗಳಾಗಿ ಕಿತ್ತಾಡಿಕೊಳ್ಳುತ್ತಿದ್ದರು.

    ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಗಾಂಜಾ ಅಮಲು ಜೋರಾಗಿದ್ದು, ಆರೋಪಿ ಗಾಂಜಾ ವ್ಯಸನಿಯಾಗಿದ್ದ ಎನ್ನಲಾಗಿದೆ. ಇದೆಲ್ಲ ಕಾರಣಗಳಿಂದ ಅಪ್ರಾಪ್ತನೊರ್ವ ಗಾಂಜಾಗೆ ದಾಸನಾಗಿ ಕೊಲೆ ಹಂತಕ್ಕೆ ತಲುಪಿದ್ದು, ಈ ಸಂಬಂಧ ಮಾಲೂರು ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

  • ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರಗೈದು ಕೊಲೆ – ಚಿಕ್ಕಪ್ಪ ಅರೆಸ್ಟ್

    ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರಗೈದು ಕೊಲೆ – ಚಿಕ್ಕಪ್ಪ ಅರೆಸ್ಟ್

    – ಮೂರು ಬಾರಿ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಪ್ಪನೇ ಮಗಳಿಗೆ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

    ನೆರೆಯ ಆಂಧ್ರಪ್ರದೇಶದದ ತಿರುಪತಿ ಬಳಿಯ ವಿಜಿಪುರ ಗ್ರಾಮದ 30 ವರ್ಷದ ಮಹಿಳೆ ಕೊಲೆಯಾಗಿದ್ದಾಳೆ ಹಾಗೂ ಈಕೆಯ ಚಿಕ್ಕಪ್ಪ 50 ವರ್ಷದ ಬಾಬಾ ಫಕ್ರುದ್ದೀನ್ ಕೊಲೆ ಮಾಡಿದ್ದಾನೆ. ಮೂಲತಃ ವಿಜೀಪುರ ಗ್ರಾಮದ ಮಹಿಳೆ ಮನೆ ಕೆಲಸ ಮಾಡಿಕೊಂಡು ಕುವೈತ್‍ನಲ್ಲಿದ್ದಳು. ಕೊರೊನಾ ಆತಂಕದಿಂದ ಕಳೆದ 5 ತಿಂಗಳ ಹಿಂದೆ ಕುವೈತ್‍ನಿಂದ ವಾಪಾಸ್ಸಾಗಿ ತವರನಲ್ಲಿದ್ದಳು.

    ಈ ವೇಳೆ ಮತ್ತೆ ಕುವೈತ್‍ಗೆ ಹೋಗಲು ಪಾಸ್‍ಪೋರ್ಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಬೇಕು ಅಂತ ಚಿಕ್ಕಪ್ಪ ಬಾಬಾ ಫಕ್ರುದ್ದೀನ್ ಬಳಿ 5 ಸಾವಿರ ರೂಪಾಯಿ ಹಣ ಕೇಳಿದ್ದಳು. ಬಾಬಾ ಫಕ್ರುದ್ದೀನ್ ಟೊಮೇಟೋ ವ್ಯಾಪಾರಿಯಾಗಿದ್ದು ತಿರುಪತಿಯಲ್ಲಿ ವಾಸವಾಗಿದ್ದ. ಈತನಿಗೆ ಇಬ್ಬರು ಹೆಂಡತಿಯರಿದ್ದು, ಸ್ವತಃ ವಿಜೀಪುರ ಗ್ರಾಮದ ಮಹಿಳೆಯ ಚಿಕ್ಕಮ್ಮಳನ್ನೇ ಈತ ಮದುವೆಯಾಗಿದ್ದ. ಆಗಾಗ್ಗೆ ವಿಜೀಪುರಕ್ಕೆ ಹೋಗಿ ಬರುತ್ತಿದ್ದ ಬಾಬಾ ಫಕ್ರುದ್ದೀನ್ ಕುವೈತ್‍ನಿಂದ ವಾಪಾಸ್ಸಾಗಿದ್ದ ಸುಂದರಿಯಾಗಿದ್ದ ಮಹಿಳೆಯ ಮೇಲೆ ಕಣ್ಣು ಹಾಕಿದ್ದ.

     

    ಮಹಿಳೆ 5 ಸಾವಿರ ರೂ. ಹಣ ಕೇಳಿದ ಕೂಡಲೇ ಕೊಡುತ್ತೇನೆ ಬಾ ಅಂತ ಆಕ್ಟೋಬರ್ 4ರಂದು ತಿರುಪತಿಗೆ ಕರೆಸಿಕೊಂಡಿದ್ದ. ಅಲ್ಲಿ ನನ್ನ ಬಳಿ ಹಣ ಇಲ್ಲ ಟೊಮೇಟೋ ಮಾರಿದ ಹಣ ನನ್ನ ಸ್ನೇಹಿತ ಪೆನುಗೊಂಡದಲ್ಲಿ ಕೊಡುತ್ತಾನೆ ಬಾ ತಗೊಂಡು ಬರೋಣ ಅಂತ ಹೇಳಿ ಬಸ್ ಮೂಲಕ ಪೆನುಗೊಂಡಾಗೆ ಕರೆದುಕೊಂಡು ಹೋಗಿದ್ದ. ಆದರೆ ಅಲ್ಲಿಗೆ ಹೋದ ಮೇಲೆ ಸ್ನೇಹಿತ ಬರಲಿಲ್ಲ ನಾಳೆ ಸಿಗುತ್ತಾನೆ ಎಂದು ಹೇಳಿ ದರ್ಗಾಗೆ ಹೋಗಿ ಬಂದು ಇವತ್ತು ಇಲ್ಲಿ ಲಾಡ್ಜ್ ಲ್ಲಿ ಉಳಿಯೋಣ ಅಂತ ರೂಮಿನಲ್ಲಿ ತಂಗಿದ್ದಾರೆ. ಈ ವೇಳೆ ರಾತ್ರಿ ಮಗಳ ಸಮಾನಳಾದ ಮಹಿಳೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

    ಈ ವಿಚಾರವಾಗಿ ಮಹಿಳೆ ನಾನು ನಿನ್ನ ಮಗಳ ಸಮಾನ ಈ ರೀತಿ ಮಾಡ್ತೀಯಾ ನಾನು ಮನೆಯಲ್ಲಿ ಎಲ್ಲರಿಗೆ ಹೇಳುತ್ತೇನೆ ಎಂದು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾಳೆ. ತದನಂತರ ಮರುದಿನ ಸ್ನೇಹಿತ ಹಿಂದೂಪುರದಲ್ಲಿ ಪಾವಗಡದಲ್ಲಿ ಇದ್ದಾನೆ ಅಂತ ಹೇಳಿ ಅಲ್ಲಿಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಕೊನೆಗೆ ಆಕ್ಟೋಬರ್ 6 ರಂದು ಬಾಗೇಪಲ್ಲಿಯ ಕಾರಕೂರು ಬಳಿ ಬಂದು ನಿರ್ಮಾಣ ಹಂತದ ಲೇಔಟ್‍ನಲ್ಲಿ ಮತ್ತೆ ಅದೇ ರೀತಿ ಮದ್ಯ ಕುಡಿಸಿ ಅಕೆಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಆಕ್ಟೋಬರ್ 7ರಂದು ಬಾಗೇಪಲ್ಲಿ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಮಹಿಳೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಿದ್ದ ಮಹಿಳೆಯ ಸಂಬಂಧಿಯೊಬ್ಬರು ಮೃತಳ ಹೆಸರು ವಿಳಾಸ ತಿಳಿಸಿದ್ದರು.

    ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆಕೆಯ ಮೊಬೈಲ್ ಕರೆಗಳ ಮಾಹಿತಿ, ಸಂಬಂಧಿಕರ ಮಾಹಿತಿ ಮೇರೆಗೆ ಮೃತಳ ಊರಲ್ಲೇ ಎದುರು ಮನೆಯಲ್ಲಿದ್ದ ಬಾಬಾ ಫಕ್ರುದ್ದೀನ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಡೆದ ತನ್ನ ಕೃತ್ಯದ ಬಗ್ಗೆ ಚಿಕ್ಕಪ್ಪ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಬಾಬಾ ಫಕ್ರುದ್ದೀನ್ ನನ್ನ ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನ ಕೊಂದ ಮಕ್ಕಳು

    ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನ ಕೊಂದ ಮಕ್ಕಳು

    -ಬ್ಯಾಟ್, ಸ್ಟಂಪ್ ಗಳಿಂದ ಹಲ್ಲೆ
    -ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಅಂಕಲ್

    ಲಕ್ನೋ: ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನು ಮಕ್ಕಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯ ಸಿಕರೌಲಿ ಗ್ರಾಮದಲ್ಲಿ ನಡೆದಿದೆ. ಸೆಪ್ಟೆಂಬರ್ 18ರಂದು ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಗಾಯಾಳು ಮೃತಪಟ್ಟಿದ್ದಾರೆ.

    30 ವರ್ಷದ ತುಷಾರ್ ಕಾಂತ್ ಉರ್ಫ್ ಸೋನು ಸೋದರರ ಮಕ್ಕಳಿಂದಲೇ ಕೊಲೆಯಾದ ವ್ಯಕ್ತಿ. ನಾಲ್ವರು ಸೋದರರಲ್ಲಿ ತುಷಾರ್ ಕೊನೆಯವರು. ಸೆಪ್ಟೆಂಬರ್ 18ರಂದು ಮೀನಿನ ಖಾದ್ಯ ತಂದಿದ್ದ ತುಷಾರ್, ಹಿರಿಯ ಸೋದರನ ಜೊತೆ ಮನೆಯ ಮೇಲೆ ಕುಳಿತಿ ತಿನ್ನುತ್ತಿದ್ದರು. ನಮಗೆ ಊಟಕ್ಕೆ ಕರೆದಿಲ್ಲ ಎಂದು ಇನ್ನಿಬ್ಬರ ಸೋದರನ ಮಕ್ಕಳು ಬ್ಯಾಟ್, ಸ್ಟಂಪ್ ಗಳಿಂದ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ತುಷಾರ್ ಹಿರಿಯ ಸೋದರ ಪೊಲೀಸರಿಗೆ ಮಾಹಿತಿ ನೀಡಿ, ತಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ತುಷಾರ್ ಆರೋಗ್ಯ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬಿಹೆಚ್‍ಯು ಟ್ರಾಮ್ ಸೆಂಟರ್ ನಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ತುಷಾರ್ ಭಾನುವಾರ ನಿಧನರಾಗಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಅತ್ಯಾಚಾರಕ್ಕೆ ವಿರೋಧಿಸಿದ 7 ವರ್ಷದ ಬಾಲಕಿಯನ್ನು ಕೊಲೆಗೈದ ಅಂಕಲ್

    ಅತ್ಯಾಚಾರಕ್ಕೆ ವಿರೋಧಿಸಿದ 7 ವರ್ಷದ ಬಾಲಕಿಯನ್ನು ಕೊಲೆಗೈದ ಅಂಕಲ್

    – ನಾಯಿ ಕಚ್ಚಿದ ರೀತಿಯಲ್ಲಿ ಶವ ಪತ್ತೆ

    ಅಹಮ್ಮದಾಬಾದ್: ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿರುವ ಆರೋಪದ ಮೇಲೆ 46 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಅಪ್ರಾಪ್ತೆ ಶನಿವಾರ ನಾಪತ್ತೆಯಾಗಿದ್ದು, ಮಂಗಳವಾರ ರಾತ್ರಿ ಒಗ್ನಾಜ್ ಟೋಲ್ ಪ್ಲಾಜಾ ಬಳಿಯ ಹೊಲದಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ, ಮೈಮೇಲೆ ಬಟ್ಟೆ ಇಲ್ಲದೆ ಹಾಗೂ ನಾಯಿ ಕಚ್ಚಿದ ಗುರುತುಗಳೊಂದಿಗೆ ಪತ್ತೆಯಾಗಿತ್ತು.

    ಬಂಧಿತ ವ್ಯಕ್ತಿಯನ್ನು ಬಿಖಾ ಮಿಸ್ತ್ರಿ ಎಂದು ಗುರುತಿಸಲಾಗಿದ್ದು, ಈತ ಮೆಹ್ಶಾನಾ ನಿವಾಸಿ. ಅಹಮ್ಮದಾಬಾದ್ ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅವಿವಾಹಿತನಾಗಿರುವ ಮಿಸ್ತ್ರಿ ಅಪ್ರಾಪ್ತೆಯ ಮನೆಯ ಪಕ್ಕದಲ್ಲೇ ಇರುವ ತನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದಾನೆ.

    ಸೆಪ್ಟೆಂಬರ್ 12ರಂದು 7 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಬಾಲಕಿಯ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿತ್ತು. ಈ ಮಧ್ಯೆ ಮಂಗಳವಾರ ರಾತ್ರಿಯೇ ಬಾಲಕಿಯ ಶವ ಪತ್ತೆಯಾಗಿದೆ ಎಂದು ಅಹಮ್ಮದಾಬಾದ್ ಡಿಟೆಕ್ಷನ್ ಆಫ್ ಕ್ರೈಂ ಬ್ರಾಂಚ್(ಡಿಸಿಬಿ) ಅಧಿಕಾರಿ ತಿಳಿಸಿದ್ದಾರೆ.

    ತನಿಖೆಯ ವೇಳೆ ಆರೋಪಿ ಬಾಲಕಿಯ ಚಿಕ್ಕಪ್ಪನಾಗಿದ್ದು, ಆಕೆಗೆ ಆಮಿಷವೊಡ್ಡಿ ಅಪಹರಿಸಿದ್ದಾನೆ. ಸೆಪ್ಟೆಂಬರ್ 12ರಂದು ರಾತ್ರಿ ಆಟೋರಿಕ್ಷಾದಲ್ಲಿ ಕೃಷಿಭೂಮಿಯೋಂದರ ಬಳಿ ಕರೆದೊಯ್ದಿದ್ದಾನೆ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

    ಆರೋಪಿ ಪೊಲೀಸರ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೃಷಿಭೂಮಿಗೆ ಕರೆದೊಯ್ದ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ. ತನ್ನ ಕೃತ್ಯವನ್ನು ಬಾಲಕಿ ವಿರೋಧಿಸಿದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಪೊದೆಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಅಧಿಕಾರಿ ವಿವರಿಸಿದ್ದಾರೆ.

    ಘಟನೆ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ (302) ಹಾಗೂ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.