Tag: umpires

  • ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

    ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

    ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಟಿ20 ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ವಾಗ್ವಾದ ನಡೆಸಿದ ಘಟನೆ ಬಗ್ಗೆ ಹಲವು ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಗುರುವಾರ ನಡೆದ ಪಂದ್ಯದ ಅಂತಿಮ ಓವರಿನಲ್ಲಿ ಅಂಪೈರ್ ನೋಬಾಲ್ ನೀಡಿ ಬಳಿಕ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಕುಳಿತಿದ್ದ ಧೋನಿ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದ ಜಡೇಜಾ ಕೂಡ ಅಂಪೈರ್ ರೊಂದಿಗೆ ಮಾತುಕತೆ ನಡೆಸಿದ್ದರು. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಇರುತ್ತಿದ್ದ ಧೋನಿ ಮಾತ್ರ ಐಪಿಎಲ್ ನಿಯಮಗಳನ್ನು ಮೀರಿ ಮೈದಾನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    ಧೋನಿ ಅವರ ನಡೆಗೆ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.50 ಮೊತ್ತವನ್ನ ದಂಡವಾಗಿ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ತಂಡದ ಅನುಭವಿ ನಾಯಕರಾಗಿ ಧೋನಿ ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಮಾರ್ಕ್ ವೋ ಹೇಳಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರರದ ಆಕಾಶ್ ಚೋಪ್ರಾ, ಹೇಮಂಗ್ ಬದನಿ ಸೇರಿದಂತೆ ಹಲವು ಆಟಗಾರರು ಧೋನಿ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಇತ್ತ ಟೂರ್ನಿಯಲ್ಲಿ ಅಂಪೈರ್ ಗಳ ಪ್ರದರ್ಶನವೂ ಕೆಟ್ಟದಾಗಿದೆ ಎಂದು ತಿಳಿಸಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮಿಚೆಲ್ ಸ್ಯಾಂಟ್ನರ್ ಸಿಎಸ್‍ಕೆ ಗೆ ಗೆಲುವು ತಂದರು. ಈ ಪಂದ್ಯದಲ್ಲಿ ಚೆನ್ನೈ ತಂಡದ ಮೂಲಕ ಐಪಿಎಲ್ ಟೂರ್ನಿಯಲ್ಲಿ 100 ಗೆಲುವುಗಳಲ್ಲಿ ಜಯಗಳಿಸಿದ ಮೊದಲ ತಂಡದ ನಾಯಕ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ. ಅಂತಿಮ ಓವರಿನ 6 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿ ಇದ್ದ ವೇಳೆ ಓವರಿನ ಎಸೆತ ಎದುರಿಸಿದ ಜಡೇಜಾ ಸಿಕ್ಸರ್ ಸಿಡಿಸಿದ್ದರು. ಆದರೆ ಈ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದರು. ಇತ್ತ ಬೌಲರ್ ಕೂಡ ಆಯತಪ್ಪಿ ಕೆಳಕ್ಕೆ ಬಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಐಪಿಎಲ್ 2019: ಅಂಪೈರ್ ಮತ್ತೊಂದು ಎಡವಟ್ಟು!

    ಐಪಿಎಲ್ 2019: ಅಂಪೈರ್ ಮತ್ತೊಂದು ಎಡವಟ್ಟು!

    ಮೊಹಾಲಿ: 2019ರ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಗಳು ಮಾಡುವ ತಪ್ಪುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಗುರುವಾರ ಮುಂಬೈ ಇಂಡಿಯನ್ಸ್, ಆರ್ ಸಿಬಿ ಪಂದ್ಯದ ಅಂತಿಮ ಓವರಿನ ಕೊನೆ ಎಸೆತವನ್ನು ಅಂಪೈರ್ ನೋಬಾಲ್ ಎಂದು ಗುರುತಿಸಲು ವಿಫಲರಾಗಿದ್ದ ಘಟನೆ ಮಾಸುವ ಮುನ್ನವೇ ಅಂಪೈರ್ ಮತ್ತೊಂದು ಎಡವಟ್ಟು ಮಾಡಿರುವ ಘಟನೆ ನಡೆದಿದೆ.

    ಸದ್ಯ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ತಂಡ ನಡುವೆ ಪಂದ್ಯ ನಡೆಯುತ್ತಿದ್ದು, ಅಶ್ವಿನ್ ತಮ್ಮ ಮೊದಲ ಓವರಿನಲ್ಲಿ 7 ಬೌಲ್ ಮಾಡಿದ್ದಾರೆ. ಹೌದು, ಅಶ್ವಿನ್ ತಮ್ಮ ಮೊದಲ ಓವರಿನ 6 ಎಸೆತಗಳಲ್ಲಿ ಕೇವಲ ಮೂರು ರನ್ ಗಳನ್ನು ಮಾತ್ರ ನೀಡಿದ್ದರು. ಆದರೆ ನಾನ್ ಸ್ಟ್ರೈಕರ್ ಬದಿಯಲ್ಲಿದ್ದ ಅಂಪೈರ್ ಅಶ್ವಿನ್ 6 ಎಸೆತಗಳು ಪೂರ್ಣಗೊಂಡಿದೆ ಎಂಬುವುದನ್ನು ಮರೆತ ಪರಿಣಾಮ 7ನೇ ಎಸೆತ ಬೌಲ್ ಮಾಡಿದರು. ಈ ಎಸೆತದಲ್ಲಿ ಡಿಕಾಕ್ ಬೌಂಡರಿ ಸಿಡಿಸಿದರು. ಪರಿಣಾಮ 7 ಎಸೆತಗಳ ಓವರಿನಲ್ಲಿ 7 ರನ್ ಮುಂಬೈ ತಂಡ ಗಳಿಸಿತು. ಪಂದ್ಯ ಪ್ರಗತಿಯಲ್ಲಿ ಇರುವ ಪರಿಣಾಮ ಅಂಪೈರ್ ಎಡವಟ್ಟು ಪಂಜಾಬ್ ತಂಡದ ಮೇಲೆ ಹೇಗೆ ಪರಿಣಾಮ ಉಂಟು ಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕರಾಗಿರುವ ಆರ್ ಅಶ್ವಿನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಕಡ್ ರನೌಟ್ ಮಾಡಿ ಸುದ್ದಿಯಾಗಿದ್ದರು. 2ನೇ ಪಂದ್ಯದಲ್ಲಿ ಫೀಲ್ಡಿಂಗ್ ಎಡವಟ್ಟು ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದು, ಸದ್ಯ ಓವರಿನಲ್ಲಿ 7  ಎಸೆತ ಎಸೆದಿದ್ದಾರೆ.

    https://twitter.com/paapabutterfly/status/1111962267610832898

  • ಆನ್​ಫೀಲ್ಡ್​ನಲ್ಲೇ ಕೊಹ್ಲಿ ಗರಂ – ವಿಡಿಯೋ

    ಆನ್​ಫೀಲ್ಡ್​ನಲ್ಲೇ ಕೊಹ್ಲಿ ಗರಂ – ವಿಡಿಯೋ

    ಮೆಲ್ಬೋರ್ನ್: ಮಳೆಯಿಂದ ರದ್ದಾದ ಆಸೀಸ್ ವಿರುದ್ಧ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

    ಮೆಲ್ಬೋರ್ನ್ ಪಂದ್ಯದ 19 ಓವರ್ ವೇಳೆ ಮಳೆಯಾಗಿ ಬಾಲ್ ಒದ್ದೆಯಾದ ಪರಿಣಾಮ ಟೀಂ ಇಂಡಿಯಾ ಬೌಲರ್ ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಸಮಸ್ಯೆ ಎದುರಿಸಿದ್ದರು. ಈ ವೇಳೆ ಅಂಪೈರ್ ಬಳಿ ತೆರಳಿದ ಕೊಹ್ಲಿ ಆಟಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೊಹ್ಲಿ ಮನವಿ ತಿರಸ್ಕರಿಸಿದ ಅಂಪೈರ್ ಆಟ ಮುಂದುವರೆಸಿದರು.

    ಬುಮ್ರಾ ಓವರ್ ಮುಕ್ತಾಯದ ವೇಳೆಗೆ ಮಳೆ ಪ್ರಮಾಣ ಹೆಚ್ಚಾದರಿಂದ ಅಂಪೈರ್ ಆಟಕ್ಕೆ ತಡೆ ನೀಡಿದರು. ಈ ವೇಳೆಯೂ ಅಂಪೈರ್ ಬಳಿ ತೆರಳಿದ ವಿರಾಟ್ ಕೊಹ್ಲಿ ಸಾಕಷ್ಟು ಸಮಯ ಸಮಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ತಾಳ್ಮೆ ಕಳೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದರು.

    ಆಸೀಸ್ ವಿರುದ್ಧ ಗಾಬ್ಬಾದಲ್ಲಿ ನಡೆದ ಮೊದಲ ಪಂದ್ಯದಲ್ಲೂ ಟೀಂ ಇಂಡಿಯಾ ಮಳೆಯ ಸಮಸ್ಯೆ ಎದುರಿಸಿ ಸೋಲಲು ಕಾರಣವಾಗಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್‍ನ 17 ಓವರ್ ಗಳಲ್ಲಿ ಆಸೀಸ್ 158 ರನ್ ಗಳಿಸಿತ್ತು. ಆದರೆ ಡಕ್ ವರ್ಥ್ ಲೂಯಿಸ್ ನಿಯಮದ ಅನ್ವಯ ಟೀಂ ಇಂಡಿಯಾ ಗೆಲ್ಲಲು 174 ರನ್ ಗುರಿ ನಿಗದಿಯಾಗಿತ್ತು. 2ನೇ ಪಂದ್ಯದಲ್ಲೂ ಮಳೆಯಿಂದ ಪಂದ್ಯದ ಅವಧಿಯನ್ನು ಕಡಿಮೆ ಗೊಳಿಸಿ ವೇಳೆ ಟೀಂ ಇಂಡಿಯಾ 11 ಓವರ್ ಗಳಲ್ಲಿ 90 ರನ್ ಗುರಿ ನೀಡಲಾಗಿತ್ತು. ಆದರೆ ಮಳೆ ನಿರಂತರವಾಗಿ ಸುರಿದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.

    https://twitter.com/183_264/status/1065900279445495808?

    ವಿರಾಟ್ ಕೊಹ್ಲಿ ಪಂದ್ಯದ ವೇಳೆ ತಾಳ್ಮೆ ಕಳೆದುಕೊಳ್ಳಲು ಪ್ರಮುಖ ಕಾರಣವಿದ್ದು, ಮಳೆಯಿಂದ ಒದ್ದೆಯಾದ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗಿತ್ತು. ಇದರ ಲಾಭವನ್ನು ಪಡೆದುಕೊಂಡು ಆಸೀಸ್ ಆಟಗಾರರು ರನ್ ಪಡೆಯುವ ಅವಕಾಶವಿತ್ತು. ಅಲ್ಲದೇ ಮಳೆಯಿಂದ ಪಿಚ್ ಒದ್ದೆಯಾದರೆ ಬಳಿಕ ಬ್ಯಾಟಿಂಗ್ ನಡೆಸುವ ತಂಡಕ್ಕೆ ರನ್ ಗಳಿಸುವುದು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಂಪೈರ್‌ಗಳಿಂದ ಬಾಲನ್ನು ಪಡೆದಿದ್ದು ಯಾಕೆ: ಅಭಿಮಾನಿಗಳಿಗೆ ಧೋನಿ ಸ್ಪಷ್ಟೀಕರಣ

    ಅಂಪೈರ್‌ಗಳಿಂದ ಬಾಲನ್ನು ಪಡೆದಿದ್ದು ಯಾಕೆ: ಅಭಿಮಾನಿಗಳಿಗೆ ಧೋನಿ ಸ್ಪಷ್ಟೀಕರಣ

    ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಅಂಪೈರ್‌ಗಳಿಂದ ನಾನು ಬಾಲನ್ನು ಪಡೆದಿದ್ದು ಯಾಕೆ ಎನ್ನುವುದಕ್ಕೆ ಮಾಜಿ ನಾಯಕ ಧೋನಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ಚೆಂಡನ್ನು ಪಡೆದಿದ್ದರು. ಆ ಕುರಿತಾದ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಧೋನಿ ಏಕದಿನ ಕ್ರಿಕೆಟ್‍ನಿಂದ ನಿವೃತ್ತಿಯ ತೆಗೆದುಕೊಳ್ಳುತ್ತಿದ್ದಾರಾ ಎನ್ನುವ ಚರ್ಚೆಯಾಗಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿದ ಧೋನಿ, ಆಟದ ವೇಳೆ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿರಲಿಲ್ಲ. ಹೀಗಾಗಿ ಯಾಕೆ ಆಗುತ್ತಿಲ್ಲ ಎಂದು ಪರಿಶೀಲಿಸಲು ಬಾಲ್ ಪಡೆದೆ. ಮುಂದಿನ ವರ್ಷ ಇಂಗ್ಲೆಂಡ್ ನೆಲದಲ್ಲಿಯೇ ವಿಶ್ವಕಪ್ ಟೂರ್ನಿ ನಡೆಯುತ್ತದೆ. ಆಗ ಎದುರಾಳಿ ತಂಡವನ್ನು ರಿವರ್ಸ್ ಸ್ವಿಂಗ್ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

    ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳು ಚೆನ್ನಾಗಿ ರಿವರ್ಸ್ ಸ್ವಿಂಗ್ ಮಾಡಿದರು. ಆದರೆ ನಮ್ಮ ತಂಡದಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಗೊಂದಲ ಉಂಟಾಗಿತ್ತು. ಹೀಗಾಗಿ ಸೂಕ್ತ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಬಾಲ್ ಪಡೆದು ನಮ್ಮ ತಂಡದ ಬೌಲಿಂಗ್ ಕೋಚ್‍ಗೆ ನೀಡಿ, ಚರ್ಚೆ ನಡೆಲು ಬಾಲನ್ನು ಪಡೆದೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಐಸಿಸಿ ನಿಯಮದ ಪ್ರಕಾರ 50 ಓವರ್ ಗಳ ಬಳಿಕ ಚೆಂಡು ಅನುಪಯುಕ್ತ. ಪಂದ್ಯದ ಪಳಿಕ ಚೆಂಡು ಪಡೆದು ಚರ್ಚೆ ಮಾಡುವ ಉದ್ದೇಶ ಇತ್ತು. 40 ಓವರ್ ಬಳಿಕ ರಿಸರ್ವ್ ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾದರೆ, ಬೌಲರ್ ಗಳಿಗೆ ಯಾರ್ಕರ್ ಹಾಕಲು ಸಹ ಸುಲಭವಾಗಲಿದೆ. ಕೊನೆಯ 10 ಓವರ್‍ಗಳಲ್ಲಿ ಸಾಧ್ಯವಾದಷ್ಟು ರನ್ ನಿಯಂತ್ರಿಸಬೇಕು. ರಿವರ್ಸ್ ಸ್ವಿಂಗ್ ಗೆಲುವಿನ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಹೀಗಾಗಿ ಅಂಪೈರ್ ಬಳಿ ಬೌಲಿಂಗ್ ಕೋಚ್ ಗೆ ನೀಡಲು ಈ ಬಾಲನ್ನು ನೀಡುತ್ತೀರಾ ಎಂದು ಕೇಳಿದೆ ಎಂದು ಧೋನಿ ತಿಳಿಸಿದರು.

    ಕೊಹ್ಲಿಯನ್ನು ಹೊಗಳಿದ ಧೋನಿ:
    ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಮೈಲುಗಳನ್ನು ನಿರ್ಮಿಸಿದ್ದಾರೆ. ವಿವಿಧ ದೇಶಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ. ಕ್ರಿಕೆಟ್ ದಂತಕಥೆಯ ಸಮೀಪಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ತಂಡವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನಾಯಕ ಕೊಹ್ಲಿ ಜವಾಬ್ದಾರಿಯುತವಾಗಿ ಆಟವಾಡುತ್ತಿದ್ದಾರೆ. ಜೊತೆಗೆ ತಂಡದ ಸದಸ್ಯರನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾಯಕನಿಗೆ ಇಂತಹ ಗುಣಗಳು ಅಗತ್ಯ. ಕೊಹ್ಲಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಧೋನಿ ಹಾರೈಸಿದರು.

  • 2012ರ ನಂತ್ರ ಏರಿಕೆ: ಅಂಪೈರ್, ಸ್ಕೋರರ್, ಕೂರೇಟರ್ ಸಂಬಳ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

    2012ರ ನಂತ್ರ ಏರಿಕೆ: ಅಂಪೈರ್, ಸ್ಕೋರರ್, ಕೂರೇಟರ್ ಸಂಬಳ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂಪೈರ್, ಕ್ಯೂರೇಟರ್ ಹಾಗೂ ಕ್ರಿಕೆಟ್ ವಿಶ್ಲೇಷಕರ ಸಂಭಾವನೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

    ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸದ್ಯ ಬಿಸಿಸಿಐ ಕಾರ್ಯದರ್ಶಿ ಆಗಿರುವ ಸಬಾ ಕರೀಂ ಅವರು ಏಪ್ರಿಲ್ 12 ರ ಸಭೆಯಲ್ಲಿ ನೀಡಿದ ಸಲಹೆ ಮೇರೆಗೆ ಈ ಕುರಿತು ಚಿಂತನೆ ನಡೆಸಿದೆ. ಅಲ್ಲದೇ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಭಾವನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

    100% ಹೆಚ್ಚಳ: ಸದ್ಯ 2012 ರಿಂದಲೂ ಬಿಸಿಸಿಐ ನಲ್ಲಿ ಕಾರ್ಯನಿರ್ವಹಿಸುತ್ತಿರುವ 105 ಅಂಪೈರ್ ಗಳು ಸಂಭಾವನೆ 100% ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 2002 ರಲ್ಲಿ ಅಂಪೈರ್ ಗಳ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಬಿಸಿಸಿಐ ಸಂಭಾವನೆ ಹೆಚ್ಚಳದ ಚಿಂತನೆ ನಡೆಸಿದೆ. ಸದ್ಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಟಾಪ್ 20 ಅಂಪೈರ್ ಗಳು ಮೂರುದಿನ ಅಥವಾ 50 ಓವರ್ ಗಳ ಪಂದ್ಯಕ್ಕೆ ಒಂದು ದಿನಕ್ಕೆ 20 ಸಾವಿರ ರೂ. ದಿನ ಪಡೆಯುತ್ತಿದ್ದಾರೆ. ಸದ್ಯ ಬಿಸಿಸಿಐ ನಿರ್ಧಾರದ ಬಳಿಕ ಅವರು 40 ಸಾವಿರ ರೂ. ಪಡೆಯಲಿದ್ದಾರೆ. ಉಳಿದ 85 ಅಂಪೈರ್ ಗಳು ದಿನ ಒಂದಕ್ಕೆ 30 ಸಾವಿರ ರೂ. ಪಡೆಯುತ್ತಾರೆ.

    ಟಿ20 ಮಾದರಿಯನ್ನು ಗಮನಿಸಿದರೆ ಟಾಪ್ 20 ಅಂಪೈರ್ ಗಳು 20 ಸಾವಿರ ರೂ. ಹಾಗೂ ಉಳಿದ 85 ಅಂಪೈರ್ ಗಳು 15 ಸಾವಿರ ರೂ. ಪಡೆಯಲಿದ್ದಾರೆ. ವಿದೇಶಿ ಅಂಪೈರ್ ಗಳ ದಿನ ಭತ್ಯೆ 750 ರೂ. ನಿಂದ 1,500 ರೂ.ಗೆ ಏರಿಕೆಯಾಗಿದೆ. ಇತರೇ ಅಂಪೈರ್ ಗಳ ದಿನ ಭತ್ಯೆ 500 ರೂ. ನಿಂದ 1 ಸಾವಿರ ರೂ.ಗೆ ಏರಿಕೆಯಾಗಿದೆ.

    ಪಿಚ್ ಕ್ಯೂರೇಟರ್ ಗಳ ಸಂಭಾವನೆಯೂ 2012ರ ಬಳಿಕ ಮೊದಲ ಬಾರಿಗೆ ಹೆಚ್ಚಳವಾಗುತ್ತಿದೆ. ಪ್ರಮುಖ ಐದು ವಲಯ ಮತ್ತು ಸಹಾಯಕ ಕ್ಯೂರೇಟರ್ ಗಳು ಈ ಹಿಂದೆ ವಾರ್ಷಿಕವಾಗಿ 6 ಲಕ್ಷ ರೂ. ಮತ್ತು 4.2 ಲಕ್ಷ ರೂ.ಗಳನ್ನು ಪಡೆಯುತ್ತಿದ್ದರು. ಈಗ ಈ ಮೊತ್ತ 12 ಲಕ್ಷ ರೂ. ಮತ್ತು 8.4 ಲಕ್ಷ ರೂ.ಗೆ ಏರಿಕೆಯಾಗಿದೆ.

    ಪಂದ್ಯದ ಸ್ಕೋರ್ ಮಾಹಿತಿಯನ್ನು ದಾಖಲಿಸುವ ಸಿಬ್ಬಂದಿಯೂ ಸಹ ಸಂಭಾವನೆಯ ಹೆಚ್ಚಳ ಪಡೆಯಲಿದ್ದಾರೆ. ಸದ್ಯ ಬಿಸಿಸಿಐಯಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಮಂದಿ ಈ ಲಾಭ ಪಡೆಯಲಿದ್ದಾರೆ. ಸದ್ಯ ಪ್ರಥಮ ದರ್ಜೆ ಮೂರು ದಿನ ಅಥವಾ 50 ಓವರ್ ಪಂದ್ಯಕ್ಕೆ 10 ಸಾವಿರ ರೂ. ಸಂಭಾವನೆ ಹಾಗೂ ಸಿಮೀತ ಓವರ್ ಪಂದ್ಯಕ್ಕೆ 5 ಸಾವಿರ ರೂ. ಗಳು ಸಂಭಾವನೆ ಪಡೆಯಲಿದ್ದಾರೆ. ಅಲ್ಲದೇ ಪ್ರತಿ ದಿನದ ಭತ್ಯೆ ಹೆಚ್ಚಳವಾಗಿದ್ದು, ಔಟ್ ಸ್ಟೇಷನ್ ಸ್ಕೋರರ್ ಗಳಿಗೆ 1,500 ರೂ. ಹಾಗೂ ಉಳಿದವರಿಗೆ 1 ಸಾವಿರ ರೂ. ಸಿಗಲಿದೆ.

    ಸದ್ಯ ಬಿಸಿಸಿಐ ಚಿಂತನೆಗೆ ಸುಪ್ರೀಂ ನಿಂದ ನಿಯೋಜನೆ ಮಾಡಲಾಗಿರುವ ಬಿಸಿಸಿಐ ಆಡಳಿತಾತ್ಮಕ ಸಂಸ್ಥೆ(ಸಿಒಎ) ಸಹ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಇದರೊಂದಿಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಭಾವನೆ ಸಹ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಬಿಸಿಸಿಐ ಅಧ್ಯಕ್ಷರು ಸದ್ಯ ವಾರ್ಷಿಕ 80 ಲಕ್ಷ ರೂ. ಹಾಗೂ ಸಮಿತಿಯ ಸದಸ್ಯರು 60 ಲಕ್ಷ ರೂ. ಪಡೆಯುತ್ತಿದ್ದಾರೆ. ಬಿಸಿಸಿಐ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರೆ ಕ್ರಮವಾಗಿ 1 ಕೋಟಿ ರೂ. ಹಾಗೂ 75 ರಿಂದ 80 ಲಕ್ಷ ರೂ. ಗೆ ಸಂಭಾವನೆ ಹೆಚ್ಚಳವಾಗುವ ಸಾಧ್ಯತೆ ಇದೆ.