Tag: UmeshJadhav

  • ಗೋಯಲ್ ಟ್ವೀಟಿಗೆ ಪ್ರಿಯಾಂಕ್ ಖರ್ಗೆ ಟಾಂಗ್

    ಗೋಯಲ್ ಟ್ವೀಟಿಗೆ ಪ್ರಿಯಾಂಕ್ ಖರ್ಗೆ ಟಾಂಗ್

    ಕಲಬುರಗಿ: ಇತ್ತೀಚಿಗೆ ನಗರದಲ್ಲಿ ನಡೆದ ಪೌರತ್ವ ಕಾಯ್ದೆ ಪರ ನಡೆದ ರ್ಯಾಲಿ ಕುರಿತು “ಕಲಬುರಗಿಯಲ್ಲಿ ಪೌರತ್ವದ ಪರ ಜನರ ಸುನಾಮಿ” ಎಂದು ವರ್ಣಿಸಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದರು. ಕೇಂದ್ರ ಸಚಿವರ ಈ ಟ್ವೀಟ್ ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

    ಪಿಯೂಷ್ ಗೋಯಲ್ ಟ್ವೀಟ್: ಕಲಬುರಗಿಯಲ್ಲಿ ಪೌರತ್ವ ಕಾಯ್ದೆ ಪರ ಜನರ ಸುನಾಮಿ. ಮೋದಿ ಸರ್ಕಾರದ ತೀರ್ಮಾನವನ್ನು ಭಾರತದ ಜನ ಒಪ್ಪಿಕೊಂಡಿದ್ದಾರೆ. ಈ ಕಾಯ್ದೆ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಹೊಸ ಜೀವನವನ್ನು ನೀಡುತ್ತದೆ ಎಂದು ಬರೆದು ರ್ಯಾಲಿಯ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

    ಖರ್ಗೆ ತಿರುಗೇಟು: ಪಿಯೂಷ್ ಅವರೇ ಈಗ ಕಲಬುರಗಿ ನಿಮ್ಮ ಗಮನ ಸೆಳೆಯಿತು. ಹಾಗೆಯೇ ಯುಪಿಎ ಅವಧಿಯಲ್ಲಿ ಮಂಜೂರಾದ ಕಲಬುರಗಿ ರೈಲ್ವೇ ವಲಯ ಹಾಗೂ ನಿಮ್ಜ್ ಯೋಜನೆಯ ಸದ್ಯದ ಸ್ಥಿತಿಗತಿಯ ಬಗ್ಗೆಯೂ ಸ್ವಲ್ಪ ಹೇಳುತ್ತೀರಾ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ಪಿಯೂಷ್ ಗೋಯಲ್ ಅವರಲ್ಲದೇ ಕಲಬುರಗಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರಿಗೂ ಟಾಂಗ್ ನೀಡಿರುವ ಶಾಸಕರು, ಈ ಯೋಜನೆಗಳ ಬಗ್ಗೆ ಈಗಿನ ಕಲಬುರಗಿ ಎಂಪಿ ಅವರಿಗೂ ಮಾಹಿತಿ ಇಲ್ಲವೆಂದು ಕಾಣುತ್ತದೆ ಎಂದು ಕಿಚಾಯಿಸಿದ್ದಾರೆ.