Tag: Umesh Sword

  • ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ

    ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ

    ಹುಬ್ಬಳ್ಳಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

    ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಮಟ್ಟದ ಶಿಕ್ಷಕರ ಸಭೆ ಕರೆದಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಿದ್ದೇನೆ. ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು. ಕರ್ನಾಟಕ ಏಕೀಕರಣದಲ್ಲಿ ನಡೆದ ಹೋರಾಟ ನೆನಪಿಸಿಕೊಳ್ಳಲಿ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಡಿಜೆ ಹಳ್ಳಿಯ ದರ್ಗಾದಲ್ಲಿ ಬೆಂಕಿ ಅವಘಡ

    ಬಿಜೆಪಿಯಲ್ಲಿ ಯಾರು ಖಂಡಿಸುತ್ತಾರೋ, ಇಲ್ವೋ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ. ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ. ಏಕೀಕರಣ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ. ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗ್ತಾನೆ ಅಂತ ಹೇಳಿದ್ದರು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸರ್ಕಾರಕ್ಕೆ ಕೇಳೋಣ, ಅನ್ಯಾಯ ಸರಿಪಡಿಸಲು ಕೇಳೋಣ ಎಂದರು.

    ಪಠ್ಯಪುಸ್ತಕ ಪೂರೈಕೆ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ಉಂಟಾಗಿ ವಿಳಂಬವಾಗಿದೆ. ಈ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುವೆ. ಪಠ್ಯ ವಿಚಾರದಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಪಠ್ಯಪುಸ್ತಕ ಪರಿಷ್ಕರಣ ವಿಚಾರ ಸಮಿತಿಗೆ ಬಿಡಬೇಕು. ಅದರಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಭಾಗವಹಿಸುವುದು ಸರಿಯಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾನಿಯಾಗಬಾರದು. ಆ ದೃಷ್ಠಿಯಿಂದ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    Live Tv 

  • ಬಿಜೆಪಿಯವರಿಂದಲೇ ಹೆಚ್ಚು ಕೊರೊನಾ ನಿಯಮ ಉಲ್ಲಂಘನೆ : ಸಿದ್ದು

    ಬಿಜೆಪಿಯವರಿಂದಲೇ ಹೆಚ್ಚು ಕೊರೊನಾ ನಿಯಮ ಉಲ್ಲಂಘನೆ : ಸಿದ್ದು

    – ಪದೇ ಪದೇ ವೀಕೆಂಡ್ ಲಾಕ್‍ಡೌನ್ ಮಾಡುವುದು ಸರಿಯಲ್ಲ

    ಮಂಡ್ಯ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾ ನಿಯಮಗಳು ಅತೀ ಹೆಚ್ಚು ಉಲ್ಲಂಘನೆ ಆಗಿದ್ದರೆ ಅದು ಬಿಜೆಪಿ ಅವರಿಂದನೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

    ಮಂಡ್ಯದ ಗೌಡಹಳ್ಳಿ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ಅತೀ ಹೆಚ್ಚು ಉಲ್ಲಂಘನೆ ಮಾಡುತ್ತಿರುವುದು ಬಿಜೆಪಿ ಅವರು. ಬಿಜೆಪಿ ಅವರದ್ದು, ಡಬಲ್ ಸ್ಟ್ಯಾಂಡ್.  ಹೇಳುವುದೇ ಒಂದು ಮಾಡುವುದು ಇನ್ನೊಂದು ಎಂದು ಹೇಳಿದರು. ಇದನ್ನೂ ಓದಿ:  ಮಹಿಳಾ ಉದ್ದೇಶಿತ ಆಯವ್ಯಯದಡಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ವೃತ್ತಿಪರ ತರಬೇತಿಗಾಗಿ ಅರ್ಜಿ ಆಹ್ವಾನ

    ಉಮೇಶ್ ಕತ್ತಿ ವಿಚಾರವಾಗಿ ಮಾತನಾಡಿದ ಅವರು, ಅವನ್ಯಾರೋ ಕತ್ತಿ ಇದಾನಲ್ಲಾ ಅವನು ಮಾಸ್ಕ್ ಹಾಕೋದೇ ಇಲ್ಲ. ಕೇಳಿದ್ರೆ ಅದು ಅವರವರ ಇಷ್ಟ ಅಂತಾನೇ. ಮಂತ್ರಿಯಾದವನು ಹೀಗೆ ಹೇಳ್ತಾನೆ ಅಂದ್ರೆ, ಆತ ಮಂತ್ರಿ ಆಗಲು ಲಾಯಕ್ಕಾ? ಬೇರೆಯವರು ಮಾಸ್ಕ್ ಹಾಕದೇ ಇದ್ದರೆ ಫೈನ್ ಹಾಕ್ತಾರೆ, ಮಂತ್ರಿಗೆ ಯಾಕ್ ಫೈನ್ ಹಾಕಿಲ್ಲ ಎಂದು ಕಿಡಿಕಾರಿದರು.

    ವೀಕೆಂಡ್ ಲಾಕ್‍ಡೌನ್ ಕುರಿತು ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯಲು ಅಸಾಧ್ಯ. ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನ್ ಮಾಡಲಿ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅವುಗಳು ಸರಿಯಾಗಿ ಪಾಲನೆಯಾಗುವಂತೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಹೀಗೆ ವೀಕೆಂಡ್ ಲಾಕ್‍ಡೌನ್ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!

  • ಬಿಪಿಎಲ್ ಕಾರ್ಡ್ ಹೊಂದಲು ಇರಬೇಕಾದ ಅರ್ಹತೆ ಏನು? ಯಾರಿಗೆ ಸಿಗಲ್ಲ? – ಇಲ್ಲಿದೆ ಪೂರ್ಣ ಮಾಹಿತಿ

    ಬಿಪಿಎಲ್ ಕಾರ್ಡ್ ಹೊಂದಲು ಇರಬೇಕಾದ ಅರ್ಹತೆ ಏನು? ಯಾರಿಗೆ ಸಿಗಲ್ಲ? – ಇಲ್ಲಿದೆ ಪೂರ್ಣ ಮಾಹಿತಿ

    ಬೆಂಗಳೂರು: ಮನೆಯಲ್ಲಿ ಬೈಕು, ಫ್ರಿಡ್ಜ್, ಟಿವಿ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ಹೇಳಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಈಗ ಯೂಟರ್ನ್ ಹೊಡೆದಿದ್ದು ಯಾವುದೇ ಹೊಸ ನಿಯಮವನ್ನು ಹೇರುವುದಿಲ್ಲ ಎಂದು ಹೇಳಿದ್ದಾರೆ. ಹೊಸ ನಿಯಯ ಹೇರದ ಕಾರಣ ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಹೊಸ ನಿಯಮ ಇರದಿದ್ದರೂ ಬಿಪಿಎಲ್ ಕಾರ್ಡ್‍ನಲ್ಲಿ ಪಡಿತರ ಪಡೆಯಲು ಹಳೆ ನಿಯಮ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಹೀಗಾಗಿ ಇಲ್ಲಿ ಬಿಪಿಎಲ್ ಕಾರ್ಡ್ ಹೊಂದಲು ಬೇಕಾಗಿರುವ ಅರ್ಹತೆಯ ವಿವರವನ್ನು ನೀಡಲಾಗಿದೆ.

    ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಜನವರಿ 2014 ರಿಂದ ಜಾರಿಗೆ ಬಂದ ನಂತರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಪಡಿತರ ಚೀಟಿಗಳನ್ನು ಆದ್ಯತಾ ಹಾಗೂ ಆದ್ಯತೇತರ ಪಡಿತರ ಚೀಟಿಗಳೆಂದು ವರ್ಗೀಕರಿಸಲಾಗಿತ್ತದೆ. ಇದಲ್ಲದೇ ಎಎವೈ ವರ್ಗೀಕರಣದ ಪಡಿತರ ಚೀಟಿಗಳು ಸಹ ಮುಂದುವರೆದಿರುತ್ತದೆ. ಆದ್ಯತಾ ಹಾಗೂ ಎಎವೈ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳನ್ನು ಒಟ್ಟಾಗಿ ಅರ್ಹತಾ ಕುಟುಂಬಗಳೆಂದು ಕರೆಯಲಾಗುತ್ತದೆ.

    ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಜಾರಿಗೆ ಬಂದ ನಂತರ ಈ ಕಾಯ್ದೆಯ ಸೆಕ್ಷನ್ 10ರನ್ವಯ, ಮೇಲೆ ತಿಳಿಸಿದಂತೆ 14 ಹೊರಗಿಡುವ ಮಾನದಂಡಗಳನ್ನೇ ಅನುಸರಿಸಿ, ಈ ಹಿಂದೆ ಇದ್ದ ಬಿಪಿಎಲ್ ಅಥವಾ ಆರ್ಥಿಕವಾಗಿ ಸದೃಢವಲ್ಲದ ಕುಟುಂಬಗಳಿಗೆ ಹೆಚ್ಚಿನ ಆದ್ಯತಾ ಕುಟುಂಬಗಳೆಂದು ಪರಿಗಣಿಸಲಾಗುತ್ತಿದೆ.

    ಸಾರ್ವಜನಿಕರಲ್ಲಿ ಮಾನದಂಡಗಳನ್ನು ಹೆಚ್ಚು ನೈಜ ಹಾಗೂ ವಸ್ತುನಿಷ್ಠ ಸ್ವರೂಪನ್ನಾಗಿಸುವ ಸಲುವಾಗಿ ಈ ಸೆಕ್ಷನ್10(1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ, ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗ ಸೂಚಿಗಳು/ಹೊರಗಿಡುವ ಮಾನದಂಡಗಳನ್ನು ರಾಜ್ಯ ಸರ್ಕಾರವು ಸರಳಿಕರಿಸಿದೆ.

    ಯಾರು ಬಿಪಿಎಲ್ ಕಾರ್ಡ್‍ಗೆ ಅರ್ಹರಲ್ಲ?
    1) ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆ, ಮಂಡಳಿ, ನಿಗಮ, ಸ್ವಾಯುತ್ತ ಸಂಸ್ಥೆಗಳು ಇತ್ಯಾದಿ: ಒಳಗೊಂಡಂತೆ ಆದಾಯ ತೆರಿಗೆ / ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

    2) ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

    3) ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

    4) ಪ್ರತಿ ತಿಂಗಳು 150 ಯುನಿಟ್‍ಗಳಿಗಿಂತಲೂ ಹೆಚ್ಚಿನ ವಿದ್ಯುತ್‍ಚ್ಛಕ್ತಿಯನ್ನು ಬಳಕೆ ಮಡುವ ಕುಟುಂಬಗಳು.

    ಈ ಮೇಲೆ ತಿಳಿಸಿದ ಆದ್ಯತೇತರ ಕುಟುಂಬಗಳನ್ನು ಹೊರತುಪಡಿಸಿ, ಉಳಿದ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆಯಲು ಅರ್ಹ ಕುಟುಂಬವೆಂದು ಪರಿಗಣಿಸಲಾಗುತ್ತದೆ.

  • ನಾವು ಬಂಡಾಯ ಶಾಸಕರಲ್ಲ, ಸರ್ಕಾರವನ್ನು ಬೀಳಿಸುವುದಿಲ್ಲ: ಯತ್ನಾಳ್

    ನಾವು ಬಂಡಾಯ ಶಾಸಕರಲ್ಲ, ಸರ್ಕಾರವನ್ನು ಬೀಳಿಸುವುದಿಲ್ಲ: ಯತ್ನಾಳ್

    – ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ವಿ

    ಬೆಂಗಳೂರು: ನಾವು ಬಂಡಾಯ ಶಾಸಕರು ಅಲ್ಲ. ನಾವು ನಮ್ಮ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದ ವಿರುದ್ಧ ಬಂಡಾಯ ಎದ್ದು, ಸಭೆ ಮಾಡಲು ಹೋಗಿರಲಿಲ್ಲ. ಲಾಕ್‍ಡೌನ್‍ನಿಂದ ಹೋಟೆಲ್ ಬಂದ್ ಆಗಿ ರೊಟ್ಟಿ ತಿನ್ನಲು ಆಗಿರಲ್ಲಿಲ್ಲ. ಆದ್ದರಿಂದ ಉಮೇಶ್ ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು. ಅಲ್ಲಿ ಮಾವಿನ ಹಣ್ಣು ತಿಂದು ಲೋಕಾಭಿರಾಮವಾಗಿ ಮಾತಾಡಿದ್ದೇವೆ ಎಂದು ಹೇಳಿದ್ದಾರೆ.

    ನಮಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ಆ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಮನೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಬಗ್ಗೆಯೂ ಚರ್ಚೆ ಆಗಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ. ಸರ್ಕಾರ ಕೆಡುವುವ ಕೆಲಸ ಯತ್ನಾಳ್ ಮಾಡುವುದಿಲ್ಲ. ಇನ್ನೂ ಉಳಿದ ವರ್ಷ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ನಾವು ಬಂಡಾಯ ಮಾಡಿಲ್ಲ, ಬಂಡಾಯದ ಸೂಚನೆಯೂ ಇಲ್ಲ. ನಮಗೆ ಮಾತನಾಡಲು ಮುಕ್ತವಾದ ಸ್ವಾತಂತ್ರ ಇದೆ ಎಂದು ಯತ್ನಾಳ್ ತಿಳಿಸಿದ್ದಾರೆ.

    ನಾನು ಯಾವುದೇ ವಿಚಾರವಾಗಿ ಮಾತನಾಡಲು ಭಯಪಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಬಿಎಸ್‍ವೈ ಇಳಿಸುವ ಕೆಲಸ ನಾವು ಮಾಡಿಲ್ಲ. ಈ ಸಭೆ ನಾಯಕತ್ವದ ವಿರುದ್ಧದ ಸಭೆ ಅಲ್ಲ. ಈ ಸಭೆಯಲ್ಲಿ ಅಭಿವೃದ್ಧಿ ವಿಚಾರ ಚರ್ಚೆ ಆಗಿದೆ. ಕ್ಷೇತ್ರದ ವಿಚಾರ ಚರ್ಚೆ ಆಗಿದೆ. ಕೊರೊನಾದಲ್ಲಿ ಬಿಜೆಪಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಸಣ್ಣ ಪುಟ್ಟ ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದೇವೆ ಎಂದರು.

    ಇದೇ ವೇಳೆ ಉಮೇಶ್ ಕತ್ತಿ ಅವರ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದು, ಈ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದರ ಬಗ್ಗೆ ನಾವು ಮಾತನಾಡಲ್ಲ ಎಂದು ಯತ್ನಾಳ್ ಹೇಳಿದ್ದಾರೆ.