Tag: Umesh Pal

  • ಉಮೇಶ್ ಪಾಲ್ ಹತ್ಯೆ ಪ್ರಕರಣ- ಬಾಂಬ್ ಎಸೆದವನ ಮನೆ ಜಪ್ತಿ

    ಉಮೇಶ್ ಪಾಲ್ ಹತ್ಯೆ ಪ್ರಕರಣ- ಬಾಂಬ್ ಎಸೆದವನ ಮನೆ ಜಪ್ತಿ

    ಲಕ್ನೋ: ಬಹುಜನ ಸಮಾಜ ಪಕ್ಷದ (BSP) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್‍ನ (Atiq Ahmed) ಸಹಾಯಕ ಗುಡ್ಡು ಮುಸ್ಲಿಂನ ಚಕಿಯಾ ಪ್ರದೇಶದಲ್ಲಿರುವ ಮನೆಯನ್ನು ಪೊಲೀಸರು (Police) ಜಪ್ತಿ ಮಾಡಿದ್ದಾರೆ.

    ಬಿಎಸ್‍ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಫೆ.25ರಂದು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದಾಳಿಯ ವೇಳೆ ಗುಡ್ಡು ಮುಸ್ಲಿಂ ಬಾಂಬ್ ಎಸೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆಯ ಬಳಿಕ ಗುಡ್ಡು ಮುಸ್ಲಿಂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ

    ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ಅವರ ದೂರಿನ ಮೇರೆಗೆ ಧುಮನಗಂಜ್ ಪೊಲೀಸ್ ಠಾಣೆಯಲ್ಲಿ ಮಾಫಿಯಾ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಶೈಸ್ತಾ ಪರ್ವೀನ್, ಅತೀಕ್‍ನ ಇಬ್ಬರು ಪುತ್ರರು, ಗುಡ್ಡು ಮುಸ್ಲಿಂ, ಗುಲಾಮ್ ಮತ್ತು ಇತರ ಒಂಬತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು.

    ಉಮೇಶ್ ಪಾಲ್ ಕೊಲೆ ಪ್ರಕರಣ ಸೇರಿದಂತೆ 100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಭಾಗಿಯಾಗಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ಇಬ್ಬರನ್ನು ಪೊಲೀಸರು ಕರೆದೊಯ್ಯುವ ವೇಳೆ ಏ.15 ರಂದು ಪ್ರಯಾಗರಾಜ್‍ನ ಕ್ಯಾಲ್ವಿನ್ ಆಸ್ಪತ್ರೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

    ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್‍ನ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅಶ್ರಫ್‍ನ ಪತ್ನಿ ಜೈನಾಬ್ ಸಹ ತಲೆಮರೆಸಿಕೊಂಡಿದ್ದು ಶೀಘ್ರವೇ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ

  • ಅತಿಕ್ ಅಹ್ಮದ್ ಸಹಚರ ಗುಡ್ಡು ಮುಸ್ಲಿಂ ಲೊಕೇಶನ್ ಕರ್ನಾಟಕದಲ್ಲಿ ಪತ್ತೆ

    ಅತಿಕ್ ಅಹ್ಮದ್ ಸಹಚರ ಗುಡ್ಡು ಮುಸ್ಲಿಂ ಲೊಕೇಶನ್ ಕರ್ನಾಟಕದಲ್ಲಿ ಪತ್ತೆ

    ಲಕ್ನೋ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್‌ನ (Atiq Ahmed) ಸಹಚರ ಹಾಗೂ ಉಮೇಶ್ ಪಾಲ್ (Umesh Pal) ಹತ್ಯೆ ಪ್ರಕರಣದಲ್ಲಿ ಬದುಕುಳಿದಿರುವ ಆರೋಪಿ ಗುಡ್ಡು ಮುಸ್ಲಿಂನ (Guddu Muslim) ಟವರ್ ಲೊಕೇಶನ್ ಕೊನೆಯದಾಗಿ ಕರ್ನಾಟಕದಲ್ಲಿ (Karnataka) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ (Raju Pal) ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಕೂಡಾ ಒಬ್ಬನಾಗಿದ್ದ. ಆತ ಉಮೇಶ್ ಪಾಲ್ ಹತ್ಯೆಯಾದ ದಿನ ಫೆಬ್ರವರಿ 24 ರಂದು ತಲೆಮರೆಸಿಕೊಂಡಿದ್ದಾನೆ.

    ಉಮೇಶ್ ಪಾಲ್ ಹತ್ಯೆಯಾದ ಒಂದು ದಿನದ ನಂತರ ಫೆಬ್ರವರಿ 25 ರಂದು ಪ್ರಯಾಗರಾಜ್‌ನ ಧೂಮ್‌ಗಂಜ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 10 ಜನ ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಸೇರಿದ್ದಾನೆ. ಉಮೇಶ್ ಪಾಲ್ ಹತ್ಯೆಯ ವೇಳೆ ಅವರ ನಿವಾಸದ ಹೊರಗಿನಿಂದ ಗುಡ್ಡು ಮುಸ್ಲಿಂ ಸ್ಫೋಟಕ ವಸ್ತುವನ್ನು ಎಸೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ತಲೆಗೆ 1, ದೇಹಕ್ಕೆ 8 ಗುಂಡೇಟು

    ಉಮೇಶ್ ಪಾಲ್ ಹತ್ಯೆಯ ಬಳಿಕ 2 ತಿಂಗಳೊಳಗೆ ಅತಿಕ್ ಅಹ್ಮದ್ ಸೇರಿದಂತೆ ಒಟ್ಟು 6 ಆರೋಪಿಗಳನ್ನು ಕೊಲ್ಲಲಾಗಿದೆ. 10 ಆರೋಪಿಗಳ ಪೈಕಿ ಹತ್ಯೆಯಾಗಿರುವ 6 ಜನರೆಂದರೆ, ಅತಿಕ್ ಅಹ್ಮದ್, ಆತನ ಪುತ್ರ ಅಸದ್, ಸಹೋದರ ಅಶ್ರಫ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಹಾಗೂ ಗುಲಾಮ್ ಹಸನ್. ಇದೀಗ ಬದುಕುಳಿದಿರುವ ಆರೋಪಿಗಳಾದ ಗುಡ್ಡು ಮುಸ್ಲಿಂ, ಅರ್ಮಾನ್ ಹಾಗೂ ಸಬೀರ್ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ – ಇಸ್ಲಾಮಿಕ್ ಮತೀಯವಾದ ಬೆಳೆಸಿಕೊಂಡಿದ್ದ ಆರೋಪಿ

  • ಹಿರಿಯ ಅಧಿಕಾರಿಯಿಂದ ಬೆದರಿಕೆ, 2 ವಾರದೊಳಗೆ ನನ್ನ ಕೊಲ್ಬೋದು – ಅತೀಕ್ ಸಹೋದರ ಅಶ್ರಫ್

    ಹಿರಿಯ ಅಧಿಕಾರಿಯಿಂದ ಬೆದರಿಕೆ, 2 ವಾರದೊಳಗೆ ನನ್ನ ಕೊಲ್ಬೋದು – ಅತೀಕ್ ಸಹೋದರ ಅಶ್ರಫ್

    ಲಕ್ನೋ: ನನಗೆ ಹಿರಿಯ ಅಧಿಕಾರಿಯಿಂದ ಜೀವ ಬೆದರಿಕೆಯಿದೆ ಎಂದು ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ (Atiq Ahmed) ಸಹೋದರ ಅಶ್ರಫ್ ಅಹ್ಮದ್ (Ashraf Ahmed) ಹೇಳಿಕೆ ನೀಡಿದ್ದಾನೆ.

    2006ರಲ್ಲಿ ಉಮೇಶ್ ಪಾಲ್ (Umesh Pal) ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ 7 ಜನರಲ್ಲಿ ಅಶ್ರಫ್ ಅಹ್ಮದ್ ಕೂಡಾ ಒಬ್ಬ. ತನಗೆ ಜೀವಬೆದರಿಕೆಯಿದ್ದು, 2 ವಾರದೊಳಗೆ ನನ್ನನ್ನು ಕೊಲೆ ಮಾಡಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದಾನೆ.

    ಮಂಗಳವಾರ ಅಶ್ರಫ್‌ನನ್ನು ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಅತೀಕ್‌ನನ್ನು ಗುಜರಾತ್‌ನ ಸಾಬರಮತಿ ಜೈಲಿಗೆ ಕರೆತರಲಾಗುತ್ತಿದೆ. ಅಶ್ರಫ್‌ನನ್ನು ಬರೇಲಿ ಜೈಲಿಗೆ ಸ್ಥಳಾಂತರಿಸುವಾಗ ನನ್ನನ್ನು ಜೈಲಿನಿಂದ ಹೊರಗೆ ಕರೆದೊಯ್ಯುವ ಸಂದರ್ಭದಲ್ಲಿ 2 ವಾರಗಳ ಒಳಗಾಗಿ ಕೊಲ್ಲುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    ಈ ಹಿಂದೆ ಅಶ್ರಫ್ ತನ್ನನ್ನು ದಯವಿಟ್ಟು ಜೈಲಿನಿಂದ ಹೊಗೆ ಕರೆದುಕೊಂಡು ಹೋಗಬೇಡಿ. ಜೈಲಿನಿಂದ ಆಚೆ ಕರೆದುಕೊಂಡು ಹೋಗುವ ವೇಳೆ ನನ್ನನ್ನು ಕೊಲೆ ಮಾಡುವ ಸಾಧ್ಯತೆಯಿದೆ ಎಂದು ಭೀತಿ ವ್ಯಕ್ತಪಡಿಸಿದ್ದ. ಇದೀಗ ಅಶ್ರಫ್ ನನ್ನನ್ನು ಜೈಲಿನಿಂದ ಆಚೆ ಕರೆದುಕೊಂಡು ಹೋಗುವ ವೇಳೆ 2 ವಾರಗಳಲ್ಲಿ ಕೊಲ್ಲುವುದಾಗಿ ಅಧಿಕಾರಿಯೊಬ್ಬರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

    ಬೆದರಿಕೆಯ ಕುರಿತು ಮಾತನಾಡಿದ ಅಶ್ರಫ್, ತನಗೆ ಬೆದರಿಕೆಯನ್ನು ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ. ಅವರ ಹೆಸರನ್ನು ಮುಖ್ಯಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅಲಹಾಬಾದ್ ಮುಖ್ಯ ನ್ಯಾಯಮೂರ್ತಿಗೆ ಬಹಿರಂಗಪಡಿಸುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು?- ರೈಲ್ವೆ ಎಚ್ಚರಿಕೆ

  • ಉಮೇಶ್‌ ಪಾಲ್‌ ಕಿಡ್ನ್ಯಾಪ್‌, ಕೊಲೆ ಪ್ರಕರಣ – ಮಾಜಿ ಸಂಸದ, ಪಾತಕಿ ಅತೀಕ್‌ ಅಹ್ಮದ್‌ಗೆ ಜೀವಾವಧಿ ಶಿಕ್ಷೆ

    ಉಮೇಶ್‌ ಪಾಲ್‌ ಕಿಡ್ನ್ಯಾಪ್‌, ಕೊಲೆ ಪ್ರಕರಣ – ಮಾಜಿ ಸಂಸದ, ಪಾತಕಿ ಅತೀಕ್‌ ಅಹ್ಮದ್‌ಗೆ ಜೀವಾವಧಿ ಶಿಕ್ಷೆ

    ಲಕ್ನೋ: 2006 ರ ಉಮೇಶ್ ಪಾಲ್ (Umesh Pal) ಅಪಹರಣ ಪ್ರಕರಣದಲ್ಲಿ ಪ್ರಯಾಗ್‌ರಾಜ್‌ನ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿ ಗ್ಯಾಂಗ್‌ಸ್ಟರ್ ಸಮಾಜವಾದಿ ಪಕ್ಷದ ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್ (Atiq Ahmed) ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

    ಈ ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಇದನ್ನೂ ಓದಿ: ಕರೆಂಟ್ ಕಟ್ ಮಾಡಿದ್ದಕ್ಕೆ ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಹಾಕಿದ ಭೂಪ

    ಕೊಲೆ ಮತ್ತು ಅಪಹರಣ ಸೇರಿದಂತೆ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಾಜಿ ಸಂಸದ ಮತ್ತು ಶಾಸಕ ಅಹ್ಮದ್ ಅವರನ್ನು ಸೋಮವಾರ ಉತ್ತರ ಪ್ರದೇಶ ಪೊಲೀಸರು ಗುಜರಾತ್ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತಂದರು.

    ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ (2005) ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್ ಅವರಿಗೆ ಶಿಕ್ಷೆಯಾಗಿದೆ. ಇದನ್ನೂ ಓದಿ: ಧನ್ಯವಾದ, ಮನೆ ಖಾಲಿ ಮಾಡುವೆ – ಲೋಕಸಭೆಯ ವಸತಿ ಸಮಿತಿ ಪತ್ರಕ್ಕೆ ರಾಗಾ ಉತ್ತರ

    ಈ ವರ್ಷ ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹಿಂಬದಿಯಿಂದ ಹೊರಬರುತ್ತಿದ್ದಾಗ ಉಮೇಶ್ ಪಾಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು.

  • ಉಮೇಶ್‌ ಪಾಲ್‌ ಕಿಡ್ನ್ಯಾಪ್‌, ಕೊಲೆ ಪ್ರಕರಣ – ಮಾಜಿ ಸಂಸದ, ಪಾತಕಿ ಅತೀಕ್‌ ಅಹ್ಮದ್‌ಗೆ ಜೀವಾವಧಿ ಶಿಕ್ಷೆ

    ಉಮೇಶ್‌ ಪಾಲ್‌ ಕಿಡ್ನ್ಯಾಪ್‌, ಕೊಲೆ ಪ್ರಕರಣ – ಮಾಜಿ ಸಂಸದ, ಪಾತಕಿ ಅತೀಕ್‌ ಅಹ್ಮದ್‌ಗೆ ಜೀವಾವಧಿ ಶಿಕ್ಷೆ

    ಲಕ್ನೋ: 2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಪ್ರಯಾಗ್‌ರಾಜ್‌ನ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿ ಗ್ಯಾಂಗ್‌ಸ್ಟರ್ ಸಮಾಜವಾದಿ ಪಕ್ಷದ ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

    ಈ ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

     

    ಕೊಲೆ ಮತ್ತು ಅಪಹರಣ ಸೇರಿದಂತೆ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಾಜಿ ಸಂಸದ ಮತ್ತು ಶಾಸಕ ಅಹ್ಮದ್ ಅವರನ್ನು ಸೋಮವಾರ ಉತ್ತರ ಪ್ರದೇಶ ಪೊಲೀಸರು ಗುಜರಾತ್ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತಂದರು.

    ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ (2005) ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್ ಅವರಿಗೆ ಶಿಕ್ಷೆಯಾಗಿದೆ.

    ಈ ವರ್ಷ ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹಿಂಬದಿಯಿಂದ ಹೊರಬರುತ್ತಿದ್ದಾಗ ಉಮೇಶ್ ಪಾಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು.

  • ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

    ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

    ಗಾಂಧಿನಗರ: ಉತ್ತರ ಪ್ರದೇಶದ (Uttar Pradesh) ಪೊಲೀಸರು ನನ್ನನ್ನು ಕೋಲ್ಲಲು ಯೋಜಿಸಿದ್ದಾರೆ ಎಂದು ಗ್ಯಾಂಗ್‍ಸ್ಟರ್‌ನಿಂದ  ಬದಲಾಗಿದ್ದ ರಾಜಕಾರಣಿ ಹಾಗೂ ಸಮಾಜವಾದ ಪಾರ್ಟಿಯ (Samajwadi Party) ಮಾಜಿ ಸಂಸದ ಅತಿಕ್ ಅಹಮ್ಮದ್ (Atiq Ahmed) ಆರೋಪಿಸಿದ್ದಾನೆ.

    ಭಾನುವಾರ ಅವರನ್ನು ಗುಜರಾತಿನ ಸಬರಮತಿ (Sabarmati) ಜೈಲಿನಿಂದ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ಗೆ (Prayagraj) ಕರೆದೊಯ್ಯುವ ವೇಳೆ ಪತ್ರಕರ್ತರು, ನಿಮಗೆ ಜೀವ ಭಯವಿದೆಯೇ ಎಂದು ಕೇಳಿದ್ದಾರೆ. ಆದಕ್ಕೆ ಅತಿಕ್, ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೊಲೀಸರು ನನ್ನನ್ನು ಕೊಲ್ಲಲು ಇರುವ ನೆಪವಾಗಿದೆ ಎಂದಿದ್ದಾನೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

    ಮಾ.28 ರಂದು ಅಪಹರಣ ಪ್ರಕರಣದ ಆದೇಶ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಯಾಗ್‍ರಾಜ್‍ಗೆ ಕರೆದೊಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2019ರ ಏಪ್ರಿಲ್‍ನಲ್ಲಿ ಸುಪ್ರೀಂ ಕೊರ್ಟ್ ಅತೀಕ್‍ನನ್ನು ಉತ್ತರ ಪ್ರದೇಶದಿಂದ ಗುಜರಾತ್‍ಗೆ (Gujarat)  ಸ್ಥಳಾಂತರಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಜೂ.2019ರಲ್ಲಿ ಸಬರಮತಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.

    ಇತ್ತೀಚಿನ ಉಮೇಶ್ ಪಾಲ್ ಹತ್ಯೆಯನ್ನೂ ಸೇರಿದಂತೆ ಆತನ ಮೇಲೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    2005ರ ಬಹುಜನ ಸಮಾಜ ಪಾರ್ಟಿಯ (Bahujan Samaj Party) ಶಾಸಕ ರಾಜುಪಾಲ್ (Raju Pal) ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಅವರನ್ನು ಫೆ.24 ರಂದು ಅತಿಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು.

    ಇದೇ ತಿಂಗಳ ಆರಂಭದಲ್ಲಿ ಅತೀಕ್, ಉಮೇಶ್ ಪಾಲ್ ಹತ್ಯೆಯಲ್ಲಿ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಪೊಲೀಸರಿಂದ ನಕಲಿ ಎನ್‍ಕೌಂಟರ್ ಆಗುವ ಭಯವಿದೆ ಎಂದು ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಸಾವರ್ಕರ್‌ಗೆ ಅವಮಾನ ಮಾಡಿದ್ರೆ ಮೈತ್ರಿಯಲ್ಲಿ ಬಿರುಕು – ರಾಹುಲ್‍ಗೆ ಉದ್ಧವ್ ನೇರ ಎಚ್ಚರಿಕೆ

  • ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು

    ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು

    ಲಕ್ನೋ: ಬಿಎಸ್‌ಪಿ ನಾಯಕ ರಾಜು ಪಾಲ್ (Raju Pla) ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾರದ ಹಿಂದೆ ಉತ್ತರ ಪ್ರದೇಶದ ಪೊಲೀಸರು (Uttar Pradesh Police) ಆರೋಪಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದರು. ಇದೀಗ ಪೊಲೀಸರು ಮತ್ತೆ ಎನ್‌ಕೌಂಟರ್ (Encounter) ನಡೆಸಿದ್ದು, ಘಟನೆಯಲ್ಲಿ ಮತ್ತೊಬ್ಬ ಆರೋಪಿ ಸಾವನ್ನಪ್ಪಿದ್ದಾನೆ.

    ಉಮೇಶ್ ಪಾಲ್ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದ ಅತೀಕ್ ಅಹ್ಮದ್ ಗ್ಯಾಂಗ್‌ನ ಶೂಟರ್ ವಿಜಯ್ ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿ ಮೇಲೆ ಉತ್ತರ ಪ್ರದೇಶದ ಪೊಲೀಸರು ಭಾನುವಾರ ಪ್ರಯಾಗ್‌ರಾಜ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಆರೋಪಿ ಸಾವನ್ನಪ್ಪಿದ್ದಾನೆ.

    ವರದಿಗಳ ಪ್ರಕಾರ, ಆರೋಪಿ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ನಗರದ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆತ ಅಲ್ಲಿ ಸಾವನ್ನಪ್ಪಿದ್ದಾನೆ.

    ಘಟನೆಯೇನು?: 2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಕಳೆದ ತಿಂಗಳು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದನ್ನೂ ಓದಿ: ಡೆಲಿವರಿಯಾದ ತಕ್ಷಣ ಹೆಣ್ಣು ಶಿಶುವನ್ನು ಕೊಂದ 15ರ ಬಾಲಕಿ

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.

    ಕಳೆದ ವಾರ ಉತ್ತರ ಪ್ರದೇಶದ ಪೊಲೀಸರು ಪ್ರಕರಣದ ಒಬ್ಬ ಆರೋಪಿಯನ್ನು ಗುಂಡಿಕ್ಕಿ ಕೊಂದ ಬಳಿಕ ತನ್ನ ಮೇಲೂ ಎನ್‌ಕೌಂಟರ್ ನಡೆಸಬಹುದು ಎಂದು ಭೀತಿ ವ್ಯಕ್ತಪಡಿಸಿದ್ದ ಅಶ್ರಫ್ ಜೈಲಿನಲ್ಲಿದ್ದುಕೊಂಡೇ ತನ್ನನ್ನು ದಯವಿಟ್ಟು ಜೈಲಿನಿಂದ ಹೊರಗೆ ಕಳುಹಿಸಬೇಡಿ ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದ. ಇದನ್ನೂ ಓದಿ: ದೇವಸ್ಥಾನ ಪ್ರವೇಶ ವಿಚಾರಕ್ಕೆ ಹಲ್ಲೆ- ಕಲ್ಲು ತೂರಾಟ, ಬೈಕ್ ಜಖಂ, 30 ಮಂದಿ ವಿರುದ್ಧ ದೂರು

  • ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ಲಕ್ನೋ: ಯೋಗಿ ಆದಿತ್ಯನಾಥ್ (Yogi Adityanath) ಅವರ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಜೈಲಿನಲ್ಲಿರುವ (Jail) ಮಾಜಿ ಶಾಸಕನೊಬ್ಬ ತನ್ನ ಮೇಲೆ ಎನ್‌ಕೌಂಟರ್ (Encounter) ಆಗುವ ಭೀತಿಯಿಂದ ಜೈಲಿನಿಂದ ದಯವಿಟ್ಟು ಹೊರಗೆ ಕಳುಹಿಸಬೇಡಿ ಎಂದು ಕೋರ್ಟ್‌ಗೆ (Court) ಮನವಿ ಮಾಡಿದ್ದಾನೆ.

    ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಸಹೋದರ ಅಶ್ರಫ್ (Ashraf) ಉತ್ತರ ಪ್ರದೇಶದ ಬರೇಲಿಯಲ್ಲಿರುವ ಜೈಲಿನಲ್ಲಿದ್ದು, ತನ್ನನ್ನು ಜೈಲಿನಿಂದ ಹೊರಗೆ ವರ್ಗಾಯಿಸುವುದರಿಂದ ಎನ್‌ಕೌಂಟರ್ ಆಗುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾನೆ. ಕಳೆದ ವಾರ ಪ್ರಯಾಗ್‌ರಾಜ್‌ನಲ್ಲಿ ಉಮೇಶ್ ಪಾಲ್ (Umesh Pal) ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದರು. ಈ ಹಿನ್ನೆಲೆ ಇದೀಗ ಅಶ್ರಫ್ ತನ್ನ ಮೇಲೂ ದಾಳಿ ನಡೆಯುವ ಭೀತಿಯನ್ನು ವ್ಯಕ್ತಪಡಿಸಿದ್ದಾನೆ.

    ಬಿಎಸ್‌ಪಿ ಶಾಸಕರಾಗಿದ್ದ ರಾಜು ಪಾಲ್ (Raju Pal) ಅವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಅಲಹಾಬಾದ್‌ನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಕಾಲಿದ್ ಅಜೀಂ ಅವರನ್ನು ಸೋಲಿಸಿ ರಾಜು ಪಾಲ್ ಗೆದ್ದಿದ್ದರು. ಇದಾದ ತಿಂಗಳ ಬಳಿಕ ಅವರ ಹತ್ಯೆ ನಡೆಸಲಾಗಿತ್ತು. ಇದನ್ನೂ ಓದಿ: UP ಉಮೇಶ್ ಪಾಲ್ ಕೊಲೆ ಕೇಸ್ – ಎನ್‍ಕೌಂಟರ್‌ಗೆ ಆರೋಪಿ ಬಲಿ

    ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್, ಆತನ ಸಹೋದರ ಹಾಗೂ ಮಾಜಿ ಶಾಸಕ ಅಶ್ರಫ್ ಪ್ರಮುಖ ಆರೋಪಿಗಳಾಗಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಅಶ್ರಫ್ ಬರೇಲಿ ಜೈಲಿನಲ್ಲಿದ್ದರೆ, ಅತೀಕ್ ಅಹ್ಮದ್ ಸಬರಮತಿ ಜೈಲಿನಲ್ಲಿದ್ದಾನೆ.

    ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನನ್ನು ಫೆಬ್ರವರಿ 24 ರಂದು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿತ್ತು. ಇದಾದ ಮರುದಿನವೇ ಅಶ್ರಫ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ನ್ಯಾಯಾಲಯದ ವಿಚಾರಣೆಗೆ ಅಥವಾ ಜೈಲಿನಿಂದ ವರ್ಗಾವಣೆಯಾಗುವ ಸಂದರ್ಭ ಜೈಲಿನ ಆವರಣದಿಂದ ಹೊರಗೆ ಹೋಗುವಾಗ ದಾರಿಯಲ್ಲಿ ತನ್ನ ಮೇಲೆ ದಾಳಿ ನಡೆಸಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಬುಧವಾರದಿಂದ ಸರ್ಕಾರಿ ನೌಕರರ ಮುಷ್ಕರ: ಯಾವ ಕಚೇರಿಗಳು ಬಂದ್‌ ಆಗಲಿವೆ?