Tag: umesh jadhav

  • ಕಮಲ ಹಿಡಿಯಲು ತುದಿಗಾಲಲ್ಲಿ ನಿಂತ ‘ಕೈ’ ಶಾಸಕ

    ಕಮಲ ಹಿಡಿಯಲು ತುದಿಗಾಲಲ್ಲಿ ನಿಂತ ‘ಕೈ’ ಶಾಸಕ

    ಕಲಬುರಗಿ: ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಯಾಕೋ ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಬಿಜೆಪಿಯ ಸಂಕ್ರಾಂತಿಯ ಮಾಹಾಕ್ರಾಂತಿ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಮೂರು ಹಂತಗಳಲ್ಲಿ ಆಪರೇಷನ್ ಮಾಡಲು ಬಿಜೆಪಿ ಮುಂದಾಗಿತ್ತು. ಪಕ್ಷೇತರ ಶಾಸಕರಿಬ್ಬರು ಮೈತ್ರಿಗೆ ನೀಡಿದ ಬೆಂಬಲ ಹಿಂಪಡೆದುಕೊಳ್ಳುವಂತೆ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು. ಆದ್ರೆ ಎರಡನೇ ಹಂತದಲ್ಲಿ ಬಿಜೆಪಿ ವಿಫಲವಾಗಿತ್ತು. ಕಾರಣ ಕಾಂಗ್ರೆಸ್ ನ ಎಲ್ಲ ನಾಯಕರು ಅಖಾಡಕ್ಕೆ ಇಳಿದು ತಮ್ಮ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಮತ್ತೊಮ್ಮೆ ಬಂಡಾಯದ ಬಾವುಟ ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್ ಮುಂಬೈ ರೆಸಾರ್ಟ್ ಸೇರಿಕೊಂಡಿದ್ದರು. ಶಾಸಕಾಂಗ ಸಭೆಗೆ ಗೈರಾಗುವ ಮೊದಲ ಬಾರಿಗೆ ಮೂಲಕ ಬಹಿರಂಗವಾಗಿ ಮೈತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ರೆಸಾರ್ಟಿನಲ್ಲಿ ಇರಿಸಿತ್ತು. ಸಂಕ್ರಾಂತಿ ಬಳಿಕ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡಿದ್ದ ಶಾಸಕ ಉಮೇಶ್ ಜಾಧವ್ ಇದೇ ತಿಂಗಳು 24ರಂದು ಸ್ವಕ್ಷೇತ್ರದಲ್ಲಿ ಕಾಣಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಜಾಧವ್, ಕಾಂಗ್ರೆಸ್ಸಿನಲ್ಲಿ ವಾತಾವರಣ ಕೆಡುತ್ತಿದೆ. ಯಾರ ಯಾರ ಕ್ಷೇತ್ರಕ್ಕೆ ಮಂತ್ರಿಗಳು ಎಷ್ಟು ಜನ ಬಂದಿದ್ದಾರೆ ಅಂತಾ ನಿಮಗೆ ಗೊತ್ತು. ನನ್ನ ಕ್ಷೇತ್ರದ ಮತದಾರರ ಬಳಿ ಚರ್ಚೆ ಮಾಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಸದ್ಯ ನನಗೆ ಬೇಸರ ಆಗಿದ್ದ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಮಹಾರಾಜರ ಬಳಿ ಹೋಗಿದ್ದೆ. ನಾನು ಏನು ನಿರ್ಣಯ ತೆಗೆದುಕೊಂಡರೂ ಜನ ನನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಬಿಜೆಪಿಗೆ ಹೋಗುವುದರ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದರು.

    ಇದೀಗ ಸ್ವಕ್ಷೇತ್ರದ ಜನರು ಮತ್ತು ಬೆಂಬಲಿಗರು ಕಾಂಗ್ರೆಸ್ ಬಿಡಲು ಗ್ರೀನ್ ಸಿಗ್ನಲ್ ನೀಡಿದ್ದರಿಂದ ಬಿಜೆಪಿ ಸೇರಲು ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿದ್ದಾರಂತೆ. ಈಗಾಗಲೇ ಉಮೇಶ್ ಜಾಧವ್, ಕಾಂಗ್ರೆಸ್ ಅತೃಪ್ತ ಬಣದ ಮೂವರು ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ಉಮೇಶ್ ಜಾಧವ್ ಕಮಲ ಹಿಡಿದ್ರೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತ. ಈ ಮೂಲಕ ಬಿಜೆಪಿ ಕ್ಷೇತ್ರದ ಬಂಜಾರಾ ಸಮುದಾಯದ ಮತಗಳನ್ನು ಸೆಳೆಯಲು ಯಶಸ್ವಿಯಾದಂತೆ ಆಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನನ್ನು ಖರೀದಿಸಲು ಯಾರಿಂದ ಸಾಧ್ಯವಿಲ್ಲ ಎಂದು ಹೇಳಿ ಕೈ ನಾಯಕರ ವಿರುದ್ಧ ಸಿಡಿದ ಜಾಧವ್

    ನನ್ನನ್ನು ಖರೀದಿಸಲು ಯಾರಿಂದ ಸಾಧ್ಯವಿಲ್ಲ ಎಂದು ಹೇಳಿ ಕೈ ನಾಯಕರ ವಿರುದ್ಧ ಸಿಡಿದ ಜಾಧವ್

    ಕಲಬುರಗಿ: ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂದು ಚಿಂಚೋಳಿಯ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.

    ಕಳೆದ 15 ದಿನಗಳಿಂದ ಕಾಂಗ್ರೆಸ್ಸಿನಿಂದ ದೂರವಾಗಿ ಮುಂಬೈಯಲ್ಲಿ ಕುಳಿತಿದ್ದ ಉಮೇಶ್ ಜಾಧವ್ ಯಾರ ಕೈಗೆ ಸಿಕ್ಕಿರಲಿಲ್ಲ. ಸ್ವಗ್ರಾಮ ಬೆಡಸೂರಿನಲ್ಲಿ ಜಾಧವ್ ತಂದೆ ಗೋಪಾಲ್ ಜಾಧವ್ ಅವರ ಪುಣ್ಯತಿಥಿ ಕಾರ್ಯಕ್ರಮ ಗುರುವಾರ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಬೈನಿಂದ ಬುಧವಾರ ರಾತ್ರಿ ಮರಳಿದ್ದಾರೆ.

    ಉಮೇಶ್ ಜಾಧವ್ ತಂದೆಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಗೂ ಗೈರಾಗಿ ಕುತೂಹಲ ಮೂಡಿಸಿರುವ ಜಾಧವ್ ನಡೆ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.

    ಪುಣ್ಯತಿಥಿಯಲ್ಲಿ ಭಾಗಿಯಾಗುವುದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಮಾರಾಟವಾಗಿದ್ದೇನೆ ಎಂದು ಹೇಳಿ ಕಾಂಗ್ರೆಸ್ ನನ್ನ ಚಾರಿತ್ರ್ಯವಧೆ ಮಾಡುತ್ತಿದೆ. ಕಾಂಗ್ರೆಸ್ಸಿನವರಿಗೆ ಬೇರೆ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಲು ಧಮ್ ಇಲ್ಲ. ರಮೇಶ್ ಜಾರಕಿಹೋಳಿ ಸೇರಿದಂತೆ ಅನೇಕ ಶಾಸಕರ ಮನೆ ಮುಂದೆ ಇವರು ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು.

    ಕಾಂಗ್ರೆಸ್ಸಿನಲ್ಲಿ ನನ್ನಂತವರು ಇರುವುದು ಬಹಳ ಕಡಿಮೆ. ಈಗ ನನಗೆ ಮಂತ್ರಿ ಸ್ಥಾನ ನೀಡಿದರೂ ನನಗೆ ಬೇಕಾಗಿಲ್ಲ. ನನಗೆ ಅಭಿವೃದ್ಧಿ ಕೆಲಸಗಳು ಆಗಬೇಕು. ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಎಂದು ನೇರವಾಗಿ ಹೇಳಿದರು.

    ಪ್ರಿಯಾಂಕ್ ವಿರುದ್ಧ ಕಿಡಿ: ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ನನ್ನ ಕ್ಷೇತ್ರದಿಂದ ಬಹಳ ಜನರನ್ನು ಕರೆದುಕೊಂಡು ಹೋಗಿದ್ದೇನೆ. ನಾನು ದುಡ್ಡು ಮಾಡುವ ಹಾಗಿದ್ದರೆ ವೈದ್ಯ ವೃತ್ತಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಇರುತ್ತಿದ್ದೆ. ಈವಾಗ ಐದು ಲಕ್ಷ ರೂ. ಸಂಬಳ ಇರುತಿತ್ತು. ಶಾಸಕಾಂಗ ಸಭೆ ಕರೆಯಲು ಅಷ್ಟು ತುರ್ತು ಏನಿತ್ತು? ಶಾಸಕಾಂಗ ಸಭೆಯ ಅಜೆಂಡಾಗಳು ಏನು ಇರಲಿಲ್ಲ. ಒಂದು ವಾರ ಟೈಮ್ ಕೊಡಬೇಕಿತ್ತು ಹಾಜರಾಗುತ್ತಿದ್ದೆ. ಏಕಾಏಕಿ ಕರೆದರೆ ಬರುವುದಕ್ಕೆ ನಾನು 700 ಕಿ.ಮೀ ದೂರದಲ್ಲಿ ಇದ್ದೆ. ಕಾಂಗ್ರೆಸ್ ಪಕ್ಷದವರೇ ನನ್ನನ್ನು ಹೊರ ಹಾಕಲು ಮುಂದಾಗಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಉಸ್ತುವಾರಿ ಸಚಿವ ಸ್ಥಾನ ಕೊಟ್ಟು ನೋಡಲಿ. ಹೇಗೆ ಕೆಲಸ ಮಾಡುತ್ತೇನೆ ಎನ್ನುವುದನ್ನು ನಾನು ತೋರಿಸುತ್ತೇನೆ. ಆರು ತಿಂಗಳು ಕಳೆದರೂ ಕೂಡ ಉಸ್ತುವಾರಿ ಸಚಿವರು ಏನು ಮಾಡಿಲ್ಲ. ನನಗೆ ಅಭಿವೃದ್ಧಿ ಕೆಲಸಗಳು ಆಗಬೇಕು ಅಷ್ಟೇ ಎಂದರು.

    ಕೆಲ್ಸ ಆಗ್ತಿಲ್ಲ: ನಾನು ದಿನ 20 ಗಂಟೆ ಕೆಲಸ ಮಾಡುವುದು ನಿಮಗೆ ಗೊತ್ತಿದೆ. ನನ್ನ ಇತಿಹಾಸದಲ್ಲೇ ಇದೂವರೆಗೂ ನಾನು ಕ್ಷೇತ್ರ ಬಿಟ್ಟಿಲ್ಲ. ದೊಡ್ಡ ಕನಸು ಇಟ್ಟುಕೊಂಡು ಮತದಾರರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ನನ್ನ ವೈದ್ಯ ವೃತ್ತಿ ಬಿಡಿಸಿದವರು ಮಾಜಿ ಸಿಎಂ ಧರ್ಮಸಿಂಗ್. ವೈದ್ಯ ವೃತ್ತಿ ಬಿಡಿಸಿ ನೀನು ರಾಜಕೀಯಕ್ಕೆ ಬರಬೇಕು. ಜೀವನದಲ್ಲಿ ರಿಸ್ಕ್ ತಗೋಬೇಕು ನೀನು ಅಂತಾ ಹೇಳಿ ಕರೆದು ಟಿಕೆಟ್ ನೀಡಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬಾರಿ ಇನ್ನು ಹೆಚ್ಚಿನ ನೀರಿಕ್ಷೆಯನ್ನು ಇಟ್ಟಿದ್ದ ಜನ ಕಲಬುರಗಿಯಲ್ಲಿ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿದ್ದಾರೆ. ಈಗ ಕೆಲಸ ಮಾಡುವ ವಯಸ್ಸು. ಮುನಗೋಳಿ ಅವರ ಹಾಗೆ ವಯಸ್ಸಾದ ಮೇಲೆ ಸಚಿವನಾದ್ರೆ ಏನು ಪ್ರಯೋಜನವಿಲ್ಲ. ಚಿಂಚೋಳಿಯಲ್ಲಿ ಶುಗರ್ ಫ್ಯಾಕ್ಟರಿ ನಿರ್ಮಿಸುವ ಯೋಜನೆ ಇತ್ತು. ಆದರೆ ವಿಧಾನಸೌಧದಲ್ಲಿ ದೇಶಪಾಂಡೆ ಬಿಟ್ಟರೆ ಬೇರೆ ಯಾರೂ ಕೈಗೆ ಸಿಗುವುದಿಲ್ಲ. ಸಮ್ಮಿಶ್ರ ಸರ್ಕಾರದ ಕೆಲಸ ನನಗೆ ಇಷ್ಟವಾಗ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಮಯ ಬಂದಾಗ ಎಲ್ಲವನ್ನು ಬಿಡಿಸಿ ಹೇಳುತ್ತೇನೆ ಎಂದು ತಿಳಿಸಿದರು.

    ಚರ್ಚಿಸಿ ನಿರ್ಧಾರ: ಕಾಂಗ್ರೆಸ್ಸಿನಲ್ಲಿ ವಾತಾವರಣ ಕೆಡುತ್ತಿದೆ. ಯಾರ ಯಾರ ಕ್ಷೇತ್ರಕ್ಕೆ ಮಂತ್ರಿಗಳು ಎಷ್ಟು ಜನ ಬಂದಿದ್ದಾರೆ ಅಂತಾ ನಿಮಗೆ ಗೊತ್ತು. ನನ್ನ ಕ್ಷೇತ್ರದ ಮತದಾರರ ಬಳಿ ಚರ್ಚೆ ಮಾಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಸದ್ಯ ನನಗೆ ಬೇಸರ ಆಗಿದ್ದ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಮಹಾರಾಜರ ಬಳಿ ಹೋಗಿದ್ದೆ. ನಾನು ಏನು ನಿರ್ಣಯ ತೆಗೆದುಕೊಂಡರು ಜನರು ಕೂಡ ಬೆಂಬಲಿಸುವುದಾಗಿ ಹೇಳಿದ್ದಾರೆ. ಬಿಜೆಪಿಗೆ ಹೋಗುವುದರ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    ಜಾಧವ್ ಬಿಜೆಪಿಗೆ ಹೊದ್ರೆ ಹೋಗಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಹೇಳಿಕೆಗಳಿಂದ 544 ಸೀಟುಗಳಿಂದ 44 ಸೀಟುಗಳಿಗೆ ತಲುಪಿದ್ದಾರೆ. ನಮಗೆ ಹೋಗಲಿ ಅಂತಾ ಬಿಟ್ಟು ಬಿಟ್ಟಿದ್ದರೆ ನಾನು ಹೋಗುತ್ತೇನೆ. ಎಲ್ಲಾ ಸಮಾಜದವರ ಜೊತೆಗೆ ಕರೆದುಕೊಂಡು ಹೋಗಬೇಕು. ಒಂದು ವೇಳೆ ಖರ್ಗೆಯವರ ಇದೆ ಧೋರಣೆ ಮುಂದುವರಿದಿದ್ದರೆ ಕಲಬುರಗಿ ಲೋಕಸಭೆಯನ್ನು ಕಳೆದುಕೊಳ್ಳಬೇಕಿತ್ತು. ಪ್ರಿಯಾಂಕ್ ಖರ್ಗೆ ಕಲಬುರಗಿ ಉಸ್ತುವಾರಿ ಸಚಿವ ಆದ ಮೇಲೆ ಕೈಗೆ ಸಿಗ್ತಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದರು.

    ಫೋಟೋಗೆ ಸ್ಪಷ್ಟನೆ: ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಅವರ ಜೊತೆ ಇರುವ ಫೋಟೋಗೆ ಸಂಬಂಧಿಸಿದ ಪ್ರತಿಕ್ರಿಯಿಸಿದ ಅವರು, ಅದು ಮುಂಬೈ ರೆಸಾರ್ಟಿನಲ್ಲಿರುವ ಫೋಟೋ ಅಲ್ಲ. ಡಾಕ್ಟರ್ ಗಳ ಜೊತೆ ಇದ್ದಾಗ ತೆಗೆದ ಫೋಟೋ ಇದು. ಕಳೆದ ಆರು ತಿಂಗಳಿನಿಂದ ಬಿಜೆಪಿಗೆ ಹೋಗುವ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಆಗ ಯಾರು ನನ್ನ ಬಳಿ ಬಂದು ಜಾಧವ್ ಸಮಸ್ಯೆ ಏನು ಅಂತಾ ಕೇಳಿಲ್ಲ. ಪಕ್ಷದ ನಾಯಕರ ಮೇಲೆ ಸಿಟ್ಟಾಗಿ ಹೋಗಿದ್ದೆ. ಹೋಗುವ ಸಮಯದಲ್ಲಿ ನಾನು ಮೊಬೈಲ್ ಜೊತೆಗೆ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

    https://www.youtube.com/watch?v=_-Zst6VoNRY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ಮುಂಬೈ ಹೋಟೆಲಿನಿಂದ ಹೊರ ಬಿದ್ದ ಕೈ ಶಾಸಕ ಜಾಧವ್!

    ಕೊನೆಗೂ ಮುಂಬೈ ಹೋಟೆಲಿನಿಂದ ಹೊರ ಬಿದ್ದ ಕೈ ಶಾಸಕ ಜಾಧವ್!

    ಕಲಬುರಗಿ: ಮುಂಬೈ ಹೋಟೆಲ್‍ನಿಂದ ಕೊನೆಗೂ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೊರ ಬಿದ್ದಿದ್ದಾರೆ. ಮುಂಬೈನಿಂದ ರಾತೋರಾತ್ರಿ ಬಂದಿಳಿದ ಚಿಂಚೋಳಿ ಶಾಸಕ ಜಾಧವ್ ಸ್ವಗ್ರಾಮ ಬೆಡಸೂರಿಗೆ ಆಗಮಿಸಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ಸಿನಿಂದ ದೂರವಾಗಿ ಮುಂಬೈಯಲ್ಲಿ ಕುಳಿತಿದ್ದ ಉಮೇಶ್ ಜಾಧವ್ ಯಾರ ಕೈಗೆ ಸಿಕ್ಕಿರಲಿಲ್ಲ. ಸ್ವಗ್ರಾಮ ಬೆಡಸೂರಿನಲ್ಲಿ ಜಾಧವ್ ತಂದೆ ಗೋಪಾಲ್ ಜಾಧವ್ ಅವರ ಪುಣ್ಯತಿಥಿ ಕಾರ್ಯಕ್ರಮ ಇಂದು ನಡೆಯಲಿರುವ ಹಿನ್ನೆಲೆಯಲ್ಲಿ ಮುಂಬೈನಿಂದ ಮರಳಿದ್ದಾರೆ.

    ಉಮೇಶ್ ಜಾಧವ್ ತಂದೆಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಗೂ ಗೈರಾಗಿ ಕುತೂಹಲ ಮೂಡಿಸಿರುವ ಜಾಧವ್ ನಡೆ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.

    ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದ ಮುಂಬೈ ಸೇರಿರುವ ಕಾಂಗ್ರೆಸ್ ಶಾಸಕರು ಸದ್ಯ ಗೊಂದಲದಲ್ಲಿದ್ದು, ಮುಂದೆ ಏನು ಮಾಡಬೇಕು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ಆಪರೇಷನ್ ಕಮಲ ಸದ್ಯ ಬಹುತೇಕ ವಿಫಲವಾಗಿದೆ. ಶಾಸಕಾಂಗ ಸಭೆಗೂ ಗೈರಾಗಿರುವ ಅತೃಪ್ತ ನಾಲ್ವರಿಗೆ ಪಕ್ಷ ನೋಟಿಸ್ ಜಾರಿ ಮಾಡಿದೆ. ಮುಂಬೈನಲ್ಲಿ ಉಳಿದುಕೊಂಡಿರುವ ಶಾಸಕರು ನೋಟಿಸ್ ಗೆ ಉತ್ತರ ನೀಡಲೇಬೇಕಿದೆ.

    ಪಕ್ಷೇತರ ಶಾಸಕರಿಬ್ಬರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಬಿಜೆಪಿಯ ಸಂಖ್ಯಾಬಲ 104 ರಿಂದ 106ಕ್ಕೆ ಏರಿಕೆಯಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ಅವರ ಮುಂದಿನ ನಡೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಮುಂಬೈ ಬಿಡುವಂತಿಲ್ಲ. ಇತ್ತ ಬೆಂಗಳೂರಿಗೂ ಬರುವಂತಿಲ್ಲ. ಮತ್ತೊಂದೆಡೆ ಬಿಜೆಪಿಗೆ ಹೋಗುವಂತಿಲ್ಲ ಹಾಗೂ ಕಾಂಗ್ರೆಸ್ ಕಡೆ ನೋಡುವ ಸ್ಥಿತಿಯಲ್ಲಿ ಅತೃಪ್ತ ಶಾಸಕರಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಕಾಂಗ್ರೆಸ್‍ನ ವಿಕೆಟ್ ಬೀಳೋದು ಬಹುತೇಕ ಫಿಕ್ಸ್!

    ಕಾಂಗ್ರೆಸ್‍ನ ವಿಕೆಟ್ ಬೀಳೋದು ಬಹುತೇಕ ಫಿಕ್ಸ್!

    ಬೆಂಗಳೂರು: ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಸಲ್ಲಿಸೋದು ಬಹುತೇಕ ಖಚಿತವಾಗಿದೆ. ಸೋಮವಾರ ಬೆಂಗಳೂರಿಗೆ ಆಗಮಿಸಲಿರುವ ಉಮೇಶ್ ಜಾಧವ್ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ರಾಜೀನಾಮೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರಂತೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಗುರುತಿಸಲ್ಪಡುವ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಉಮೇಶ್ ಜಾಧವ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಈ ಮೂಲಕ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಚುನಾವಣಾ ರಣತಂತ್ರಗಳನ್ನು ರೂಪಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

    ಒಂದು ವಾರದ ಹಿಂದೆಯೇ ಉಮೇಶ್ ಜಾಧವ್ ಬಿಜೆಪಿ ಸೇರಲಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಠಕ್ಕರ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಕಾಣಿಸಿಕೊಂಡಿರುವ ಉಮೇಶ್ ಜಾಧವ್ ಶುಕ್ರವಾರ ನಡೆದ ಶಾಸಕಾಂಗ ಸಭೆಗೆ ಗೈರಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗುತ್ತಿಲ್ಲ ಎಂಬ ಪತ್ರವನ್ನು ರವಾನೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

    ಸಭೆಗೆ ಗೈರಾಗಿರುವ ಶಾಸಕರಿಗೆ ಕಾಂಗ್ರೆಸ್ ನೋಟಿಸ್ ಕಳುಹಿಸಿದೆ. ಅತೃಪ್ತ ಶಾಸಕರು ಗೊಂದಲದಲ್ಲಿ ಸಿಲುಕಿದ್ದು, ರಾಜೀನಾಮೆ ನೀಡಬೇಕಾ? ಮತ್ತೆ ಮಾತೃ ಪಕ್ಷಕ್ಕೆ ಶರಣಾಗಾಬೇಕಾ? ಎಂಬ ವಿಷಮ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಉಮೇಶ್ ಜಾಧವ್‍ರನ್ನು ನೋಡಿಕೊಳ್ಳಲು ಬಂದಿದ್ದ ಬಿಜೆಪಿ ನಾಯಕ ಬಾಬುರಾವ್ ಚಿಂಚನಸೂರ್ ಬಿಪಿ ಜಾಸ್ತಿಯಾಗಿ ಅಸ್ವಸ್ಥಗೊಂಡಿದ್ದಾರೆ. ಪವಾಯ್ ಹೋಟೆಲ್‍ನಲ್ಲಿ ತಂಗಿದ್ದ ಉಮೇಶ್ ಜಾಧವ್ ಕಾವಲಿಗೆ ಬಿಜೆಪಿ ಚಿಂಚನ್‍ಸೂರ್ ರನ್ನು ನೇಮಿಸಿತ್ತು. ಆದ್ರೀಗ ಚಿಂಚನಸೂರ್ ಅವರೇ ಜಾಧವ್‍ರಿಂದಲೇ ಚಿಕಿತ್ಸೆ ಪಡೆಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ‘ಕೈ’ ಕೊಟ್ಟು ಮುಂಬೈ ಸೇರಿದ ಶಾಸಕರು!

    ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ‘ಕೈ’ ಕೊಟ್ಟು ಮುಂಬೈ ಸೇರಿದ ಶಾಸಕರು!

    ಬೆಂಗಳೂರು: ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದ ಮುಂಬೈ ಸೇರಿರುವ ಕಾಂಗ್ರೆಸ್ ಶಾಸಕರು ಸದ್ಯ ಗೊಂದಲದಲ್ಲಿದ್ದು, ಮುಂದೆ ಏನು ಮಾಡಬೇಕು ಅನ್ನುವ ಚಿಂತೆಯಲ್ಲು ಮುಳುಗಿದ್ದಾರಂತೆ. ಆಪರೇಷನ್ ಕಮಲ ಸದ್ಯ ಬಹುತೇಕ ವಿಫಲವಾಗಿದ್ದು, ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿದ್ದಾರೆ. ಶಾಸಕಾಂಗ ಸಭೆಗೂ ಗೈರಾಗಿರುವ ಅತೃಪ್ತ ನಾಲ್ವರಿಗೆ ಪಕ್ಷ ನೋಟಿಸ್ ಜಾರಿ ಮಾಡಿದೆ. ಮುಂಬೈನಲ್ಲಿ ಉಳಿದುಕೊಂಡಿರುವ ಶಾಸಕರು ನೋಟಿಸ್ ಗೆ ಉತ್ತರ ನೀಡಲೇಬೇಕಿದೆ.

    ಪಕ್ಷೇತರ ಶಾಸಕರಿಬ್ಬರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಬಿಜೆಪಿಯ ಸಂಖ್ಯಾಬಲ 104 ರಿಂದ 106ಕ್ಕೆ ಏರಿಕೆಯಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ಅವರ ಮುಂದಿನ ನಡೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಮುಂಬೈ ಬಿಡುವಂತಿಲ್ಲ. ಇತ್ತ ಬೆಂಗಳೂರಿಗೂ ಬರುವಂತಿಲ್ಲ. ಮತ್ತೊಂದೆಡೆ ಬಿಜೆಪಿಗೆ ಹೋಗುವಂತಿಲ್ಲ ಹಾಗು ಕಾಂಗ್ರೆಸ್ ಕಡೆ ನೋಡುವ ಸ್ಥಿತಿಯಲ್ಲಿ ಅತೃಪ್ತ ಶಾಸಕರಿಲ್ಲ.

    ಶಾಸಕಾಂಗ ಸಭೆಗೆ ಗೈರಾದ್ರೂ ಮಾತೃ ಪಕ್ಷ ಮಾತ್ರ ಮೃದು ಧೋರಣೆಯನ್ನು ತೋರುತ್ತಿದೆ. ಎಲ್ಲಿಯೂ ಪಕ್ಷದ ಮುಖಂಡರು ಶಾಸಕರನ್ನು ಅನರ್ಹಗೊಳಿಸುವ ಕುರಿತು ಮಾತನಾಡುತ್ತಿಲ್ಲ. ಸಭೆಗೆ ಗೈರಾಗಿದ್ದೇಕೆ ಎಂಬುವುದಕ್ಕೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ. ಬಿಜೆಪಿ ನಂಬಿ ಬಂದ ಶಾಸಕರಿಗೆ ಕಮಲ ನಾಯಕರು ತಮ್ಮ ಸ್ಪಷ್ಟ ನಿಲುವನ್ನು ತಿಳಿಸುತ್ತಿಲ್ಲವಂತೆ. ರೆಸಾರ್ಟ್ ಸೇರಿಕೊಂಡಿದ್ದ ಬಿಜೆಪಿ ಶಾಸಕರು ತವರು ಸೇರಿಕೊಂಡಿದ್ದಾರೆ. ಇಂದು ಮಧ್ಯಾಹ್ನ ಅಥವಾ ಸಂಜೆ ಕೈ ಶಾಸಕರು ತಮ್ಮ ಸ್ವಕ್ಷೇತ್ರಗಳಿಗೆ ಮರಳಲಿದ್ದಾರೆ.

    ಎಲ್ಲರು ಅವರವರ ಕ್ಷೇತ್ರಗಳಿಗೆ ತೆರಳಿದ್ರೆ ನಮ್ಮ ಸ್ಥಿತಿ ಏನು ಎಂಬ ಗೊಂದಲದಲ್ಲಿ ಅತೃಪ್ತ ಶಾಸಕರು ಮುಳುಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ನಂಬಿ ಕಾಂಗ್ರೆಸ್ ಗೆ ಕೈ ಎತ್ತಿದ ಶಾಸಕರಿಗೆ ಮಾತ್ರ ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬ ಸ್ಥಿತಿಯಾಗಿದ್ದು, ಕಾಂಗ್ರೆಸ್ ನೀಡುವ ನೋಟಿಸ್ ಗೆ ಉತ್ತರ ನೀಡಬೇಕಾದ ಸಂಕಷ್ಟ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಮೇಶ್ ಜಾಧವ್ ಮೊಬೈಲ್‍ಗೆ ಬಂದ್ವು ನೂರಾರು ಕಾಲ್!

    ಉಮೇಶ್ ಜಾಧವ್ ಮೊಬೈಲ್‍ಗೆ ಬಂದ್ವು ನೂರಾರು ಕಾಲ್!

    – ಶಾಸಕರನ್ನು ಸಂಪರ್ಕಿಸಲು ಕೈ ನಾಯಕರು ಹೈರಾಣು!

    ಕಲಬುರಗಿ: ಕಾಂಗ್ರೆಸ್‍ನ ಅತೃಪ್ತ ಶಾಸಕರ ಪಟ್ಟಿಯಲ್ಲಿರುವ ಉಮೇಶ್ ಜಾಧವ್ ಅವರಿಗೆ ಪಕ್ಷ ಬಿಡದಂತೆ ಕೈ ನಾಯಕರು ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಶಾಸಕರ ಸಹೋದರ ಬಳಿ ಇದಿದ್ದರಿಂದ ಸಂಪರ್ಕ ಸಾಧ್ಯವಾಗಿಲ್ಲ.

    ಮಾಜಿ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಗೃಹ ಸಚಿವ ಎಂ.ಬಿಪಾಟೀಲ್ ಅವರು ಶಾಸಕ ಉಮೇಶ್ ಜಾಧವ್ ಸಂಪರ್ಕಕ್ಕೆ ಯತ್ನಿಸಿ ಹೈರಾಣ ಆಗಿದ್ದಾರೆ.

    ಈ ಮೂಲಕ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಸೇರಿದಂತೆ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಗೋಕಾಕ್ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕಮಟಳ್ಳಿ ಸಿಎಲ್‍ಪಿ ಸಭೆಗೆ ಗೈರು ಆಗಿದ್ದಾರೆ. ಇತ್ತ ಸಭೆಗೆ ಹಾಜರಾಗಿದ್ದ ಶಾಸಕರನ್ನು ಕೈ ನಾಯಕರು ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ.

    ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯರಿಗೆ ಪತ್ರವೊಂದನ್ನು ರವಾನಿಸಿರುವ ಉಮೇಶ್ ಜಾಧವ್, ಅನಾರೋಗ್ಯ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸಿದ್ದಾರೆ. ಪತ್ರವನ್ನು ಮಾಧ್ಯಮಗಳಿಗೆ ತೋರಿಸಿದ ಸಿದ್ದರಾಮಯ್ಯನವರು ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಉಳಿದಂತೆ ಗೈರಾದವರಿಗೆ ನೋಟಿಸ್ ಕಳುಹಿಸಲಾಗುತ್ತದೆ. ಮುನ್ನೆಚ್ಚರಿಕೆಯಾಗಿ ಎಲ್ಲರನ್ನು ಕರೆದುಕೊಂಡು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ತೆರಳಿ ಸಭೆ ನಡೆಸಲಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುತೂಹಲ ಮೂಡಿಸಿದ ನಡೆ – ಸಿಎಲ್‍ಪಿ ಸಭೆಗೆ `ಕೈ’ ಕೊಡಲಿದ್ದಾರಾ ಜಾಧವ್?

    ಕುತೂಹಲ ಮೂಡಿಸಿದ ನಡೆ – ಸಿಎಲ್‍ಪಿ ಸಭೆಗೆ `ಕೈ’ ಕೊಡಲಿದ್ದಾರಾ ಜಾಧವ್?

    ಕಲಬುರಗಿ: ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಗೈರಾಗುವ ಸಾಧ್ಯತೆ ಇದೆ.

    ರಮೇಶ್ ಜಾರಕಿಹೊಳಿ ಅವರು ಹೋಟೆಲ್ ನಿಂದ ಬೆಂಗಳೂರಿನತ್ತ ತೆರಳಿದರೆ, ಉಮೇಶ್ ಜಾಧವ್ ಇನ್ನೂ ಮುಂಬೈನಲ್ಲಿಯೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಸಿಎಲ್‍ಪಿ ಸಭೆಗೆ ಎಲ್ಲ ಶಾಸಕರು ಹಾಜರಾಗಬೇಕು. ಇಲ್ಲದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರೂ ಈ ಸಭೆಗೆ ಜಾಧವ್ ಹೋಗುವುದು ಅನುಮಾನ ಎನ್ನಲಾಗಿದೆ.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಕರೆ ಮಾಡಿ ಸಭೆಯ ಮಾಹಿತಿ ನೀಡಿದ್ದರು. ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸುವಂತೆ ದಿನೇಶ್ ಗುಂಡೂರಾವ್ ಕಟ್ಟಪ್ಪಣೆ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷರ ಕಟ್ಟಪ್ಪಣೆ ನಡುವೆಯೂ ಇಂದಿನ ಶಾಸಕಾಂಗ ಸಭೆಗೆ ಉಮೇಶ್ ಜಾಧವ್ ಗೈರು ಹಾಜರಿ ಹಾಕುವ ಸಾಧ್ಯತೆ ಇದೆ. ಮಧ್ಯಾಹ್ನ 3.30ಕ್ಕೆ ಸಿಎಲ್‍ಪಿ ಸಭೆ ನಡೆಯಲಿದ್ದು, ಮುಂದಿನ ಕೆಲ ಗಂಟೆಯಲ್ಲಿ ಬೆಂಗಳೂರಿಗೆ ಬರುತ್ತಾರಾ? ಇಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

    ಯಾಕೆ ಬೇಸರ?
    ಕಳೆದ ಎರಡು ದಿನದಿಂದ ಕಾಂಗ್ರೆಸ್ ನಾಯಕರು ಉಮೇಶ್ ಜಾಧವ್ ಸಂಬಂಧಿಕರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ಉಮೇಶ್ ಜಾಧವ್ ಮನೆಯ ಮುಂದೆ ಪ್ರತಿಭಟನೆ ಮಾಡಿದಾಗ ಅವರ ಸಂಬಂಧಿಕರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಹೀಗಾಗಿ ಜಿಲ್ಲಾ ಕಾಂಗ್ರೆಸ್ ನಾಯಕರೇ ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷವನ್ನು ಬಿಡುವಂತೆ ಪ್ರಚೋದನೆ ನೀಡಿದ್ದಾರೆ. ಈ ಎಲ್ಲ ಘಟನೆಯಿಂದ ಉಮೇಶ್ ಜಾಧವ್ ತೀವ್ರ ನೊಂದಿದ್ದು, ಈಗ ಲೋಕಸಭಾ ಚುನಾವಣೆಗಾಗಿ ರಾಜಿನಾಮೆ ನೀಡುವುದಾಗಿ ಹೇಳಿದ್ದರು ಅಂತ ಅವರ ಸಹೋದರ ರಾಮಚಂದ್ರ ಜಾಧವ್ ತಿಳಿಸಿದ್ದರು.

    ಶಾಸಕ ಉಮೇಶ ಜಾಧವ್‍ಗೆ ನಿಗಮ ಮಂಡಳಿಯ ಸ್ಥಾನವನ್ನು ನೀಡಲಾಗಿತ್ತು. ಆದರೂ ಕೂಡ ಇವರು ಅಸಮಾಧಾನಗೊಂಡು ಆಪರೇಷನ್ ಕಮಲಕ್ಕೆ ಒಳಗಾಗಿ ಅಶ್ವಥ್ ನಾರಾಯಣ ಅವರ ಜೊತೆ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖರ್ಗೆ ವಿರುದ್ಧ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಕಣಕ್ಕೆ?

    ಖರ್ಗೆ ವಿರುದ್ಧ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಕಣಕ್ಕೆ?

    – `ಕೈ’ ಕೊಟ್ಟು ಬಿಜೆಪಿ ಸೇರಲು ಶಾಸಕ ಉಮೇಶ್ ಜಾಧವ್ ರೆಡಿ

    ಕಲಬುರಗಿ: ಲೋಕಸಭಾ ಚುನಾವಣೆಯ ವೇಳೆ ಸಂಸದ ಮಲ್ಲಿಕಾರ್ಜುನ ಖರ್ಗೆ ಎದುರು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಣಕ್ಕಿಳಿಯೋದು ಬಹುತೇಕ ಅಂತಿಮವಾಗಿದ್ದು, ಸಂಕ್ರಾತಿ ಬಳಿಕ ಕೈ ಶಾಸಕ ಉಮೇಶ್ ಜಾಧವ್ ತಮ್ಮ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.

    ಈ ಕುರಿತು ಖುದ್ದು ಶಾಸಕರ ಸಹೋದರ ರಾಮಚಂದ್ರ ಜಾಧವ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆಯಾಗಿದ್ದು, ಅವರು ಬಿಜೆಪಿ ಸೇರಿದ್ರೆ ಚಿಂಚೋಳಿಗೆ ಅವರು ಹೇಳಿದ ಅಭ್ಯರ್ಥಿಯನ್ನೆ ವಿಧಾನಸಭೆ ಚುನಾವಣೆಗೆ ನಿಲ್ಲಿಸಲಾಗುವುದು ಎಂಬ ಭರವಸೆ ಸಹ ನೀಡಲಾಗಿದೆ.

    ಬಂಜಾರಾ ಸಮುದಾಯದ ನಡೆದಾಡುವ (ಆಂಧ್ರ ಪ್ರದೇಶದ ಪೌರಾಗಡ ಮಹಾರಾಜ್) ದೇವರು ರಾಮ ರಾಮ ಮಹಾರಾಜ್ ಸಹ ಅವಕಾಶ ಇದ್ರೆ ಬಿಜೆಪಿ ಹೋಗಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯ ಸರ್ಕಾರದಲ್ಲಿ ನಮ್ಮ ಸಮುದಾಯದ ಜನರಿಗೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇನ್ನು ಖರ್ಗೆಯವರು ಮನಸ್ಸು ಮಾಡಿದ್ರೆ ಶಾಸಕ ಜಾಧವ್ ಅವರನ್ನು ಸಚಿವರನ್ನಾಗಿ ಮಾಡಬಹುದಿತ್ತು. ಮಾಜಿ ಸಿಎಂ ಧರ್ಮಸಿಂಗ್ ಸಾವಿನ ನಂತರ ನಾವು ಅನಾಥರಾದ್ದಂತಾಗಿದೆ. ಹೀಗಾಗಿ ಉಮೇಶ್ ಜಾಧವ್ ಅವರು ಬಿಜೆಪಿಗೆ ಹೋಗುವ ಕುರಿತು ಚರ್ಚೆ ನಡೆಸಿದ್ದು, ಕೆಲ ಕಾಂಗ್ರೆಸ್ ನಾಯಕರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

    ಎಲ್ಲವೂ ಅಂದುಕೊಂಡಂತೆ ನಡೆದ್ರೆ ಉಮೇಶ್ ಜಾಧವ್ ಅವರು ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಸಭೆಯಲ್ಲಿ ರೆಡಿಯಾಗಲಿದ್ದಾರೆ. ಈ ಕುರಿತು ಶಾಸಕ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಅವರು ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

    ಆಡಿಯೋದಲ್ಲೇನಿದೆ..?
    ಪಬ್ಲಿಕ್ ಟಿವಿ – ಅದೇ ಸರ್ ಬಿಜೆಪಿಗೆ ಜಾಧವ್ ಬಿಜೆಪಿಗೆ ಸೇರುತ್ತಾರಾ…?
    ರಾಮಚಂದ್ರ ಜಾಧವ್-ಇಲ್ಲ…ಇಲ್ಲ ಸರ್…ಇನ್ನೂ ಏನು ಇಲ್ಲ..? ಅವರು ಬನ್ನಿ ಎಂದು ಒತ್ತಡ ಹಾಕುತ್ತಿದ್ದಾರೆ.
    ಪಬ್ಲಿಕ್ ಟಿವಿ -ರಾಮ್…ರಾಮ್…ಮಹಾರಾಜ್ ಹತ್ತಿರ ಹೋಗಿದರಂತೆ ಆಂಧ್ರಕ್ಕೆ..? ಈ ಬಗ್ಗೆ ಚರ್ಚೆ ಮಾಡಿದ್ದರಂತೆ
    ರಾಮಚಂದ್ರ ಜಾಧವ್ – ಈ ಬಗ್ಗೆ ಅಲ್ಲ ಎಲ್ಲವೂ ಒಳ್ಳೆದಾಗಲಿಯೆಂದು ಆರ್ಶೀವಾದ ಪಡೆದುಕೊಂಡು ಬಂದಿದ್ದಾರೆ.
    ಪಬ್ಲಿಕ್ ಟಿವಿ -ಬಿಜೆಪಿ ಸೇರು ಸಂಬಂಧ ಯಾರು-ಯಾರು ಮಾತನಾಡಿದ್ದಾರೆ ಸರ್..
    ರಾಮಚಂದ್ರ ಜಾಧವ್-ಯಾರು ಅಂತಾ ನನಗೂ ಅಷ್ಟ ಐಡಿಯಿಲ್ಲ…ರಾಷ್ಟ್ರ ರಾಜ್ಯ ನಾಯಕರು ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv