Tag: umesh jadhav

  • ತೀವ್ರ ಬಿಸಿಲಿನಿಂದ ರಸ್ತೆಯಲ್ಲೇ ಕುಸಿದು ಬಿದ್ದ ಸಂಸದ ಡಾ.ಉಮೇಶ್ ಜಾಧವ್

    ತೀವ್ರ ಬಿಸಿಲಿನಿಂದ ರಸ್ತೆಯಲ್ಲೇ ಕುಸಿದು ಬಿದ್ದ ಸಂಸದ ಡಾ.ಉಮೇಶ್ ಜಾಧವ್

    ಕಲಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಇಂದು ಬಿಸಿಲಿನ ತಾಪಕ್ಕೆ ಸಂಸದ ಡಾ.ಉಮೇಶ್ ಜಾಧವ್ (Dr. Umesh Jadhav) ಬಿದ್ದಿದ್ದಾರೆ.

    ಕಲಬುರಗಿಯಲ್ಲಿ ವಿರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿತ್ತು. ಇಲ್ಲಿಗೆ ಜಾಧವ್‌ ಭೇಟಿ ನೀಡಿದ್ದರು. ಈ ವೇಳೆ ಬಿಸಿಲಿನ ತಾಪಕ್ಕೆ ತಲೆಸುತ್ತು ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    ಇದಕ್ಕೂ ಮುನ್ನ ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾಧವ್‌, ಕಲಬುರಗಿಯಲ್ಲಿ ಲಾ ಆಂಡ್ ಸಂಪೂರ್ಣವಾಗಿ ಸತ್ತು ಹೋಗಿದೆ. ರಾಮ ಮಂದಿರ ಉದ್ಘಾಟನೆ ಮರುದಿನ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಆಗಿತ್ತು. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ನಿನ್ನೆ ಜಾಮೀನು ಮಂಜೂರು ಆಗಿದೆ. ಜಾಮೀನಿನ ಮೇಲೆ ಹೊರ ಬಂದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ ಎಂದಿದ್ದರು.

    ಜನವರಿ 23 ರಂದು ಕಲಬುರಗಿ ಬಂದ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ರು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆದರೆ ಅಂದು ಗಲಾಟೆ ಮಾಡಿದ ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಪ್ರಿಯಾಂಕ್ ಖರ್ಗೆ ಡಿಕ್ಟೇರ್ ಶಿಪ್ ಮಾಡ್ತಿದ್ದಾರೆ. ಡಿಎನ್ ಎ ಟೆಸ್ಟ್ ಮಾಡಿಸ್ತಾರಂತೆ , ಮೊದಲು ನಿಮ್ಮದು ಡಿಎನ್ ಎ ಟೆಸ್ಟ್ ಮಾಡಿಸಬೇಕು. ನಾವು ಒಬ್ಬ ಸಾಮಾನ್ಯ ದಲಿತ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾಗಿತ್ತು ಅಂತಾ ನಾವು ಹೇಳಿದ್ದೀವಿ. ಒಂದು ಸುಳ್ಳನ್ನ ನೂರು ಸಲ ಹೇಳಿ ಪ್ರಿಯಾಂಕ್ ಖರ್ಗೆ ಸತ್ಯ ಮಾಡೋದಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದರು.

  • ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ

    ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ

    ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಕೊಲೆ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ಉಮೇಶ್ ಜಾಧವ್ (Umesh Jadhav) ವಾಗ್ದಾಳಿ ನಡೆಸಿದ್ದು, ಇದು ಯರಾದ್ರೂ ನಂಬುವ ಮಾತಾ ಎಂದು ಪ್ರಶ್ನಿಸಿದ್ದಾರೆ.

    ಕಲಬುರಗಿಯ ಜೇವರ್ಗಿ ಕಾರ್ಯಕರ್ತರ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಅವರು, 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. 8 ದಿನಗಳ ಹಿಂದೆ ದೂರು ನೀಡಿದ್ದೇನೆ ಎನ್ನುತ್ತಾರೆ. ಇನ್ನೂ 8 ದಿನ ನೀವೇನು ಮಲಗಿದ್ದಿರಾ? 24 ಗಂಟೆಯಲ್ಲೇ ಫೇಕ್ ಲೆಟರ್ ಬರೆದವರನ್ನು ಬಂಧಿಸಿ ಒದ್ದು ಒಳಗೆ ಹಾಕಬೇಕು. ನಿಮಗೆ ಅಧಿಕಾರ, ಪವರ್ ಇಲ್ವಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗೆ ಬಂತು ಬರೋಬ್ಬರಿ 46 ಕೋಟಿ ಮೊತ್ತದ ಟ್ಯಾಕ್ಸ್‌ ನೋಟಿಸ್‌ – ವಿದ್ಯಾರ್ಥಿಗೆ ಶಾಕ್‌!

    ಉಮೇಶ್ ಜಾದವ್ ಸಮಜಾಯಿಷಿ ಹೇಳಬೇಕು ಎಂದು ಖರ್ಗೆ ಹೇಳುತ್ತಾರೆ. ನೀವು ಎಐಸಿಸಿ ಅಧ್ಯಕ್ಷರ ಪುತ್ರರಾಗಿದ್ದೀರಿ. ನಿಮ್ಮ ಅಧಿಕಾರ ಬಳಸಿ. ನಾನು ಓರ್ವ ಸ್ವಾತಂತ್ರ‍್ಯ ಹೋರಾಟಗಾರರ ಮಗನಾಗಿದ್ದೇನೆ. ನಾನು ಯಾಕೆ ಸಮಜಾಯಿಷಿ ಹೇಳಬೇಕು? ನೀವೇನು ಮಂತ್ರಿ ಅಲ್ವಾ? ನಿಮ್ಮ ಅಧಿಕಾರ ಉಪಯೋಗಿಸಿ. ಕೊಲೆ ಬೆದರಿಕೆ ಪತ್ರ ಸಚಿವರಿಗೆ ಬಂದಿದೆ ಅಂದರೆ ಯಾರಾದ್ರು ನಂಬುತ್ತೀರಾ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

  • ಕಣ್ಣಿಗೆ ಖಾರದ ಪುಡಿ ಎರಚಿ ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

    ಕಣ್ಣಿಗೆ ಖಾರದ ಪುಡಿ ಎರಚಿ ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

    ಕಲಬುರಗಿ: ಹಿರಿಯ ಬಿಜೆಪಿ ಮುಖಂಡ (BJP Leader) ಮಹಾಂತಪ್ಪಾ ಆಲೂರೆ ಅವರ ಬರ್ಬರ ಹತ್ಯೆಯ ಬೆನ್ನಲ್ಲೇ ಇದೀಗ ಮತ್ತೊಂದು ಜಿಲ್ಲೆಯಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಸಂಸದ ಡಾ.ಉಮೇಶ್ ಜಾಧವ್ (Dr. Umesh Jadhav) ಬಲಗೈ ಬಂಟನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಗಿರೀಶ್ ಚಕ್ರ (Girish Chakra) ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ಕಲಬುರಗಿ ಬಿ.ಎಸ್ ಎನ್ ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಜಾಧವ್ ಆಯ್ಕೆ ಮಾಡಿದ್ದರು. ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಸಿ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ರಾಡ್, ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೆ ಬಿಜೆಪಿ ಮುಖಂಡ ಸಾವು

    ಕೊಲೆಗೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಹತ್ಯೆಗೈಯಲಾಗಿದೆ. ಸಾಗನೂರ ಗ್ರಾಮದ ಸಚಿನ್& ಗ್ಯಾಂಗ್ ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

    ಗಾಣಗಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್

    ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್

    ಕಲಬುರಗಿ: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶಿವಮೊಗ್ಗ (Shivamogga) ಗಲಾಟೆ ಕುರಿತು ಕಲಬುರಗಿಯಲ್ಲಿ ಸಂಸದ ಡಾ. ಉಮೇಶ್ ಜಾಧವ್ (Umesh Jadhav) ಪ್ರತಿಕ್ರಿಯೆ ನೀಡಿದ್ದಾರೆ.

    ಸರ್ಕಾರ ಮುಂಜಾಗೃತ ಕ್ರಮ ಕೈಗೊಂಡಿದ್ದರೆ ಶಿವಮೊಗ್ಗ ಘಟನೆ ನಡೆಯುತ್ತಿರಲಿಲ್ಲ. ಈದ್ ಮಿಲಾದ್ ಎಂದರೆ ಸೌಹಾರ್ದಯುತ ಹಬ್ಬವಾಗಿರುತ್ತದೆ. ಆದರೆ ಕೆಲ ಕಿಡಿಗೇಡಿಗಳು ಅದೇ ದಿನ ಕಲ್ಲು ತೂರಾಟ ನಡೆಸಿ ಶಾಂತಿ ಭಂಗ ಮಾಡುವ ಯತ್ನ ಮಾಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

    ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸರಿಯಾದ ಸ್ಥಾನಮಾನದ ಬಗ್ಗೆ ಶಾಮನೂರು ಶಿವಶಂಕರಪ್ಪ ಸರಿಯಾಗಿ ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಹಿರಿಯರು. ಅವರು ಹೇಳಿದ ಮಾತು ಸತ್ಯಾವಗಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಮತ್ತೊಂದು ಬಿಹಾರ ಆಗ್ತಿದೆ ಅನಿಸುತ್ತಿದೆ: ಆರ್. ಅಶೋಕ್

    ಇದಕ್ಕೆ ಯಡಿಯೂರಪ್ಪ ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿಯಲ್ಲಿ ಸಹ ಪಾಲಿಕೆಯ ಲಿಂಗಾಯತ ಮುಖಂಡನ ಮೇಲೆ ಹಲ್ಲೆ ಮಾಡಿದ್ರು ಸಹ ಇಲ್ಲಿಯವರೆಗೆ ಆರೋಪಿಗಳನ್ನು ಈ ಸರ್ಕಾರ ಬಂಧಿಸಿಲ್ಲ. ಹೀಗಾಗಿ ಈ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಬೆಲೆ ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಡಾ. ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೋಮು ಸಂಘರ್ಷ – ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಕಿಡಿ ರಾಜ್ಯಕ್ಕೆ ಹಬ್ಬಬಹುದು: ವಿಜಯೇಂದ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೇನೆಂದು ಯಾರೂ ಹೇಳಿಲ್ಲ: ಉಮೇಶ್ ಜಾಧವ್

    ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೇನೆಂದು ಯಾರೂ ಹೇಳಿಲ್ಲ: ಉಮೇಶ್ ಜಾಧವ್

    ಕಲಬುರಗಿ: ಬಿಜೆಪಿ (BJP) ಮತ್ತು ಕಾಂಗ್ರೆಸ್‌ನಲ್ಲಿ (Congress) ಘರ್ ವಾಪ್ಸಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅಧಿಕೃತವಾಗಿ ಯಾರು ಕೂಡಾ ಪಾರ್ಟಿ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ. ನನಗೂ ಯಾವುದೇ ಕರೆ ಬಂದಿಲ್ಲ ಎಂದು ಸಂಸದ ಉಮೇಶ್ ಜಾಧವ್ (Umesh Jadhav) ಹೇಳಿದ್ದಾರೆ.

    ಎಸ್‌ಟಿ ಸೋಮಶೇಖರ್ (ST Somashekhar) ಬಿಜೆಪಿಯಲ್ಲಿ ಅಸಮಾಧಾನ ವಿಚಾರವಾಗಿ ಕಲಬುರಗಿಯಲ್ಲಿ (Kalaburagi) ಮಾತನಾಡಿದ ಉಮೇಶ್ ಜಾಧವ್, ರಾಜಕೀಯ ಪಕ್ಷದಲ್ಲಿ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿ ಸೇರಿದಾಗ ಹಳೆ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತದೆ. ಅದೆಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಎಸ್‌ಟಿ ಸೋಮಶೇಖರ್‌ಗೆ ಯಡಿಯೂರಪ್ಪ, ಬೊಮ್ಮಾಯಿ ಕರೆದು ಮಾತನಾಡಿ ಸಮಜಾಷಿ ಹೇಳಿದ್ದಾರೆ ಎಂದು ತಿಳಿಸಿದರು.

    ನಾನು ಮುಂಬೈ ಟೀಮ್‌ನಲ್ಲಿ ಮೊದಲಿನಿಂದಲು ಇಲ್ಲ. ನಾವು ಮುಂಬೈ ಟೀಮ್ ಎಂದು ಯೂನಿಟಿ ಮಾಡಿಲ್ಲ. ನಾವು ಯಡಿಯೂರಪ್ಪ ಟೀಮ್‌ನಲ್ಲಿ ಇದ್ದೀವಿ. ಮುಂಬೈ ಟೀಮ್‌ನಲ್ಲಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಅಂದ್ರೆ ನಮಗೆ ಭಯ – ಸತೀಶ್ ಜಾರಕಿಹೊಳಿ

    ಪಾರ್ಟಿಯಿಂದ ಲೀಡರ್ ಹೊರ ಹೋದರೂ ಮತದಾರರು ಹೋಗೋದಿಲ್ಲ. ಬಿಜೆಪಿ ಮತ್ತೊಮ್ಮೆ 25 ಸೀಟ್ ಗೆಲ್ಲುವ ವಿಶ್ವಾಸ ಇದೆ. ಚುನಾವಣೆ ಬಂದಾಗ ಎಲ್ಲಾ ಪಾರ್ಟಿಯವರು ಬೇರೆ ಬೇರೆ ಲೀಡರ್‌ಗಳನ್ನು ಕರೆತರುವ ಪ್ರಯತ್ನ ನಡೆಯುತ್ತದೆ. ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ ರಿವರ್ಸ್ ಘರ್ ವಾಪ್ಸಿ ನಮ್ಮ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನಿಖಿಲ್‌ಗೆ ಬದುಕಲು ಹಲವು ಮಾರ್ಗಗಳಿವೆ; ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ: ಹೆಚ್‌ಡಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋವಾ – ಕಲಬುರಗಿ ವಯಾ ಹೈದ್ರಾಬಾದ್ ವಿಮಾನಕ್ಕೆ ಚಾಲನೆ ನೀಡಿದ ಉಮೇಶ್ ಜಾಧವ್

    ಗೋವಾ – ಕಲಬುರಗಿ ವಯಾ ಹೈದ್ರಾಬಾದ್ ವಿಮಾನಕ್ಕೆ ಚಾಲನೆ ನೀಡಿದ ಉಮೇಶ್ ಜಾಧವ್

    ಕಲಬುರಗಿ: ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಿಂದ ಹಲವು ಲೋಹದ ಹಕ್ಕಿಗಳು ಬೇರೆ-ಬೇರೆ ರಾಜ್ಯಗಳಿಗೆ ಹಾರಾಡುವಂತೆ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ ಹೇಳಿದರು.

    ಸೋಮವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗೋವಾ-ಕಲಬುರಗಿ ವಯಾ ಹೈದ್ರಾಬಾದ್ ವಿಮಾನ ಹಾರಾಟವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಕಲಬುರಗಿ ಜಿಲ್ಲೆಯ ವೃದ್ಧರು, ರೋಗಿಗಳು ತುರ್ತು ಚಿಕಿತ್ಸೆಗಾಗಿ ಹೈದ್ರಾಬಾದಿಗೆ ಹಾಗೂ ಹೈದ್ರಾಬಾದ್‍ನಿಂದ ಬೆಂಗಳೂರಿಗೆ ತೆರಳಲು ಈ ವಿಮಾನ ಅನುಕೂಲಕರವಾಗಿದೆ ಎಂದು ವಿವರಿಸಿದರು.  ಇದನ್ನೂ ಓದಿ:  ಕಸದ ಲಾರಿಗೆ ಮತ್ತೊಂದು ಬಲಿ – 39 ವರ್ಷದ ಮಹಿಳೆ ಸಾವು

    ಹೈದ್ರಾಬಾದ್‍ನಿಂದ ಪವಿತ್ರ ಸ್ಥಳಗಳಾದ ಹಜ್, ಕಾಶಿ, ಅಯೋಧ್ಯಾ, ಅಮರನಾಥ್, ವೈಷ್ಣೋದೇವಿ ಹಾಗೂ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳಲು ಅನುಕೂಲಕರವಾಗಿದೆ. ನಮ್ಮ ಕಲಬುರಗಿ ಹಾಗೂ ವಿಭಾಗದ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸರ್ಕಾರದ ಕೊರೊನಾ ನಿಯಮಗಳನ್ನು ಪಾಲಿಸಿ ವಿಮಾನದಲ್ಲಿ ಬಿಡಲು ತಿಳಿಸಿದರು. ವೃದ್ಧರಿಗೆ ಹಾಗೂ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿ ಸಿಬ್ಬಂದಿಗಳಿಗೆ ಸೂಚಿಸಬೇಕೆಂದು ಅವರು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಉಮೇಶ್ ಜಾಧವ ಅವರು ತಮ್ಮ ಮಗಳಾದ ಶ್ರದ್ದಾ ಜಾಧವ ಹಾಗೂ ಪ್ರಯಾಣಿಕರ ಜೊತೆ ಹೈದ್ರಾಬಾದಿಗೆ ಸದರಿ ವಿಮಾನದಲ್ಲಿ ಪ್ರಯಾಣ ಮಾಡಿದರು.

    ಈ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ಯಶವಂತ್, ವಿ.ಗುರುಕರ್, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಂದ್ರರಾವ್ ಹಾಗೂ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ 

  • ಪಿಡಿಓ ಹೆದರಿಸಿ ಉಮೇಶ್ ಜಾಧವ್ ಬಿಲ್ ಮಾಡಿಸಿಕೊಂಡಿದ್ದಾರೆ: ಪ್ರಿಯಾಂಕ್ ಖರ್ಗೆ ಆರೋಪ

    ಪಿಡಿಓ ಹೆದರಿಸಿ ಉಮೇಶ್ ಜಾಧವ್ ಬಿಲ್ ಮಾಡಿಸಿಕೊಂಡಿದ್ದಾರೆ: ಪ್ರಿಯಾಂಕ್ ಖರ್ಗೆ ಆರೋಪ

    ಕಲಬುರಗಿ: ಸಂಸದ ಉಮೇಶ್ ಜಾಧವ್ ಅವರು ಪಿಡಿಓರನ್ನು ಹೆದರಿಸಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘ 40% ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ವಸೂಲಿ 40% ಅನ್ನೂ ದಾಟಿ ಹೋಗಿದೆ. ಗ್ರಾಪಂ ಸದಸ್ಯರು ಉದ್ಯೋಗ ಖಾತ್ರಿಯಲ್ಲಿ ಆಗದ ಕೆಲಸಕ್ಕೆ ಸಂಸದರ ಮುಖಾಂತರ ಬಿಲ್ ಮಾಡಿಸಿಕೊಂಡಿದ್ದಾರೆ. ಬಿಲ್ ಹಾಕಿಸಿಕೊಳ್ಳುವುದಕ್ಕಾಗಿ ಚಿತ್ತಾಪುರ ತಾಲೂಕಿನ ಬಿಳಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆ ಹಾಕಿರುವ ವೀಡಿಯೋ ಇದೆ. ಆದರೆ ಅದು ನನ್ನ ಕ್ಷೇತ್ರದ್ದು ಎನ್ನುವ ಕಾರಣಕ್ಕೆ ವೀಡಿಯೋವನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.

    ಸಂಸದ ಉಮೇಶ್ ಜಾಧವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಿಯಾಂಕ್ ಖರ್ಗೆ ಹಿಂದೆ ದೊಡ್ಡ ಬ್ಯಾನರ್ ಇದೆ. ಮಲ್ಲಿಕಾರ್ಜುನ್ ಖರ್ಗೆಯವರ ಮಗ ಎನ್ನುತ್ತಾರೆ. ಖರ್ಗೆಯವರ ಮನೆಯಲ್ಲಿ ಹುಟ್ಟಬೇಕು ಎಂದು ನಾನು ಅರ್ಜಿ ಹಾಕಿದ್ದೇನಾ ಎಂದು ಪ್ರಶ್ನಿಸಿದ ಅವರು, ಹಾಗಾದರೆ ಅವಿನಾಶ್ ಜಾಧವ್ ಅವರು ಉಮೇಶ್ ಜಾಧವ್ ಮನೆಯಲ್ಲಿ ಅರ್ಜಿ ಹಾಕಿ ಹುಟ್ಟಿದ್ದಾರೆ ಎಂದಾಯ್ತು. ಅವಿನಾಶ್ ಜಾಧವ್ ಕೂಡ ಜಾಧವ್ ಬ್ಯಾನರ್‌ನಲ್ಲೆ ಬಂದಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ:  ಬೇಡಿಕೆ ಈಡೇರಿಸುವಂತೆ ಪ್ರತಿಭಟಸಿದ 100ಕ್ಕೂ ಹೆಚ್ಚು ಆದಿವಾಸಿಗಳು ಪೊಲೀಸರ ವಶಕ್ಕೆ

    ನಾನು ಖರ್ಗೆ ಬ್ಯಾನರ್‌ನಲ್ಲಿ ಬರುವುದಕ್ಕೂ ಮುಂಚೆ ಸಂಘಟನೆಯಿಂದ ಬಂದಿದ್ದೇನೆ. ಅದಾದ ಮೇಲೆ ಖರ್ಗೆಯವರ ಬ್ಯಾನರ್‌ನಲ್ಲಿ ಬಂದ ಮೇಲೂ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೆ. ಉಮೇಶ್ ಜಾಧವ್ ಅವರು ಯಾರ ಬ್ಯಾನರ್‌ನಲ್ಲಿ ಬಂದಿದ್ದಾರೆ ಎಂದು ನೆನಪಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಭಾರತದ ಭದ್ರ ಬುನಾದಿ ದುರ್ಬಲಗೊಳಿಸಲಾಗುತ್ತಿದೆ, ದೇಶದ ಪರಂಪರೆಯನ್ನು ನಾಶ ಮಾಡಲು ಬಿಡುವುದಿಲ್ಲ: ಸೋನಿಯಾಗಾಂಧಿ

  • ಶಹಬಾದ್ ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಉಮೇಶ್ ಜಾಧವ್ ಮನವಿ

    ಶಹಬಾದ್ ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಉಮೇಶ್ ಜಾಧವ್ ಮನವಿ

    ನವದೆಹಲಿ: ಶಹಬಾದ್ ನಿಲ್ದಾಣದಲ್ಲಿ ಪ್ರಮುಖ ರೈಲುಗಳು ನಿಲುಗಡೆಗೆ ಅನುಮತಿ ನೀಡಬೇಕೆಂದು ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್‍ಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಮನವಿ ಮಾಡಿದ್ದಾರೆ.

    ಇಂದು ದೆಹಲಿಯ ರೈಲು ಭವನದಲ್ಲಿ ಭೇಟಿಯಾದ ಅವರು, ಶಹಬಾದ್ ರೈಲ್ವೇ ನಿಲ್ದಾಣದಲ್ಲಿ ಹಲವು ರೈಲುಗಳು ನಿಲ್ಲಿಸದಿರುವುದರ ಬಗ್ಗೆ ಸಚಿವರ ಗಮನಕ್ಕೆ ತಂದರು.

    ಕಲಬುರಗಿ ಮತ್ತು ವಾಡಿ ಜಂಕ್ಷನ್ ನಡುವೆ ಶಹಬಾದ್ ರೈಲು ನಿಲ್ದಾಣವಿದ್ದು ನಿತ್ಯ ನೂರಾರು ರೈಲುಗಳು ಸಂಚರಿಸುತ್ತಿದ್ದು ಬೆರೆಳೆಣಿಕೆಯ ರೈಲುಗಳು ಮಾತ್ರ ನಿಲುಗಡೆಗೊಳ್ಳುತ್ತಿವೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದ್ದು ಪ್ರಮುಖ ರೈಲುಗಳ ನಿಲ್ದಾಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಇಂಥಾ ನೋವು ಯಾರಿಗೂ ಬರಬಾರದು: ಶಿವ ರಾಜ್‌ಕುಮಾರ್

    ಇದಕ್ಕೆ ಸ್ಪಂದಿಸಿರುವ ಸಚಿವ ಅಶ್ವಿನಿ ವೈಷ್ಣವ್, ಕೂಡಲೇ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.  ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

  • ಕಲಬುರಗಿಯಲ್ಲಿರೋ ಕೇಂದ್ರ ಸರ್ಕಾರದ ಸಿಸಿಐ ಸಿಮೆಂಟ್ ಕಾರ್ಖಾನೆ ಅದಾನಿ ಪಾಲು

    ಕಲಬುರಗಿಯಲ್ಲಿರೋ ಕೇಂದ್ರ ಸರ್ಕಾರದ ಸಿಸಿಐ ಸಿಮೆಂಟ್ ಕಾರ್ಖಾನೆ ಅದಾನಿ ಪಾಲು

    ಕಲಬುರಗಿ: ತೊಗರಿ ಕಣಜವಾಗಿರುವ ಕಲಬುರಗಿ ಜಿಲ್ಲೆ ಸಿಮೆಂಟ್ ಹಬ್ ಅಂತಾನೆ ಇಡೀ ದೇಶದಲ್ಲಿ ತನ್ನ ಹೆಸರನ್ನು ಪಡೆದುಕೊಂಡಿದೆ. ಹೀಗಾಗಿಯೇ ಇಲ್ಲಿ 10ಕ್ಕೂ ಹೆಚ್ಚು ಪ್ರತಿಷ್ಠಿತ ಸಿಮೆಂಟ್ ಕಾರ್ಖಾನೆಗಳು ಜಿಲ್ಲೆಯಲ್ಲಿ ತಲೆ ಎತ್ತಿವೆ.

    ಕಲಬುರಗಿ ಜಿಲ್ಲೆ ಸೇಡಂ ತಾಕೂಕಿನ ಕುರಕುಂಟಾ ಗ್ರಾಮದಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಸಿಸಿಐ ಸಿಮೆಂಟ್ ಕಾರ್ಖಾನೆ ಸಿಮೆಂಟ್ ಕಂಪನಿ ಆಫ್ ಇಂಡಿಯಾ(ಸಿಸಿಐ) ಕಾರ್ಖಾನೆ ಉದ್ಯಮಿ ಗೌತಮ ಅದಾನಿ ಮಾಲೀಕತ್ವದ ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (ಎಸಿಐಎಲ್) ಅಭಿವೃದ್ಧಿಪಡಿಸಲು ಮುಂದಾಗಿದೆ.

    ಮೊದಲ ಬಾರಿಗೆ ಅದಾನಿ ಸಿಮೆಂಟ್ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದು, ಹೇರಳವಾಗಿ ಕಚ್ಚಾ ವಸ್ತು ಸಿಗುವ ಸಿಮೆಂಟ್ ನಾಡು ಕಲಬುರಗಿಗೆ ಇದರ ಲಾಭವಾಗಲಿದೆ. ಮುಚ್ಚಿರುವ ಸಿಸಿಐಗೆ ಮರು ಜೀವ ಸಿಗಲಿದೆ. ಉದ್ಯೋಗ ಅವಕಾಶಗಳು ಮತ್ತು ಉದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಬೂಸ್ಟ್ ಸಿಗಲಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

    ಕಲಬುರಗಿಯ ಮೊದಲ ಸಿಮೆಂಟ್ ಕಾರ್ಖಾನೆಯಾಗಿರುವ ಕುರಕುಂಟಾ ಸಿಸಿಐ ಅನ್ನು ಅದಾನಿ ಗ್ರೂಪ್‍ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಗತ್ಯ ಪ್ರಕ್ರಿಯೆ ನಡೆದಿದೆ. ಕಾರ್ಖಾನೆ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರವೇ ಆರಂಭವಾಗಲಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ದೃಢಪಡಿಸಿದ್ದಾರೆ.

    ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾದಲ್ಲಿ 1972ರ ಅಕ್ಟೋಬರ್‍ನಲ್ಲಿ ಆರಂಭವಾದ ಈ ಸಿಸಿಐ ವಾರ್ಷಿಕ 2 ಲಕ್ಷ ಟನ್ ಸಿಮೆಂಟ್ ಉದ್ಪಾದನೆ ಮಾಡುತ್ತಿತ್ತು. ಈ ಪ್ರದೇಶದಲ್ಲಿಖಾಸಗಿ ಸ್ವಾಮ್ಯದ ಹಲವು ಸಿಮೆಂಟ್ ಕಾರ್ಖಾನೆಗಳು ಬಂದಿದ್ದರಿಂದ ಇದನ್ನು 1998ರಲ್ಲಿಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗಿತ್ತು. ಸುಮಾರು 430ಕ್ಕೂ ಹೆಚ್ಚು ಕಾರ್ಮಿಕರು ಇದರಲ್ಲಿಕೆಲಸ ಮಾಡುತ್ತಿದ್ದರು ಎಂದು ಕಾರ್ಮಿಕ ಮುಖಂಡರು ಹೇಳುತ್ತಾರೆ.

    ಸಿಸಿಐ ಕಾರ್ಖಾನೆ ವ್ಯಾಪ್ತಿಯಲ್ಲಿ 932 ಎಕರೆ ಜಮೀನಿದೆ. ಸಿಮೆಂಟ್ ಉತ್ಪಾದನೆಗಾಗಿ ಇನ್ನೂ 132. 67 ಮಿಲಿಯನ್ ಟನ್ ಸುಣ್ಣದ ಕಲ್ಲುಮೀಸಲಿಡಲಾಗಿದೆ. ಶೇ 110ರಷ್ಟು ಸಿಮೆಂಟ್ ಉತ್ಪಾದಿಸಿದ್ದರಿಂದ ಈ ಕಾರ್ಖಾನೆಗೆ 1989ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಇದನ್ನೂ ಓದಿ: ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

    ಕಲಬುರಗಿ ಸಿಮೆಂಟ್ ವಲಯ ಅಧಿಕೃತ ಮೂಲಗಳ ಪ್ರಕಾರ ಕಲಬುರಗಿಯಲ್ಲಿ ಪ್ರತಿ ವರ್ಷ 30ಲಕ್ಷ ಟನ್ ಸಿಮೆಂಟ್ ಉತ್ಪಾದನೆ ಮಾಡಲಾಗುತ್ತಿದೆ. ಸಿಮೆಂಟ್ ಕಾರ್ಖಾನೆಗೆ ಬೇಕಿರುವ ಸುಣ್ಣದ ಕಲ್ಲುಹೇರಳವಾಗಿದೆ. 6,445 ಮಿಲಿಯನ್ ಟನ್ ಸುಣ್ಣದ ಕಲ್ಲುಸಿಮೆಂಟ್ ಉದ್ಯಮಕ್ಕಾಗಿ ಕಾದಿರಿಸಲಾಗಿದೆ.

    ಅದಾನಿ ಸಿಮೆಂಟ್ಸ್‍ನಿಂದ ಏನು ಅನುಕೂಲ?:
    2009-14ರವರೆಗೆ ಜಾರಿಯಲ್ಲಿದ್ದ ಕೈಗಾರಿಕಾ ನೀತಿಯಲ್ಲಿ ಕಲಬುರಗಿ ವಿಭಾಗವನ್ನು ಸಿಮೆಂಟ್ ವಲಯವನ್ನಾಗಿ ರಾಜ್ಯ ಸರಕಾರ ಘೋಷಿಸಿತ್ತು. ಅದಾನಿ ಗ್ರೂಪ್ ಸಿಸಿಐ ಕಾರ್ಖಾನೆ ಪಡೆದು ಅಭಿವೃದ್ಧಿಪಡಿಸಿದರೆ, 5 ಸಾವಿರ ಜನರಿಗೆ ಪ್ರತ್ಯಕ್ಷ ಮತ್ತು 20 ಸಾವಿರಕ್ಕೂ ಹೆಚ್ಚು ಪರೋಕ್ಷ ನೌಕರಿ ಸಿಗಲಿದೆ. ಇದರ ಜತೆಗೆ ಸಾರಿಗೆ, ಇಂಧನ, ಸಿಮೆಂಟ್ ಚೀಲ ಉತ್ಪಾದನೆ ಸೇರಿದಂತೆ ಇತರ ಕ್ಷೇತ್ರಗಳೂ ಅಭಿವೃದ್ಧಿಯಾಗಲಿವೆ ಎನ್ನುತ್ತಾರೆ ಆರ್ಥಿಕ ತಜ್ಞರು.

    ಯಾಕೆ ಸಿಮೆಂಟ್ ಉದ್ಯಮಕ್ಕೆ ಕಲಬುರಗಿ ಫೇವರೇಟ್..?
    ಕಲಬುರಗಿಯಲ್ಲಿ ಸಿಮೆಂಟ್ ಉದ್ಯಮ ಹುಲುಸಾಗಿ ಬೆಳೆದಿದ್ದು, ಎಸಿಸಿ, ಒರಿಯಂಟ್, ರಾಜಶ್ರೀ, ಆದಿತ್ಯ ಬಿರ್ಲಾ, ಶ್ರೀ ಸಿಮೆಂಟ್, ಅಲ್ಟ್ರಾಟೆಕ್, ಚಟ್ಟಿನಾಡ್ ಸೇರಿದಂತೆ ಪ್ರಮುಖ ಸಿಮೆಂಟ್ ಕಂಪನಿಗಳು ಇಲ್ಲಿವೆ. ಅದಾನಿ ಸಿಮೆಂಟ್ಸ್‍ಗೆ ಅವಕಾಶಗಳು ಹೆಚ್ಚಿವೆ. ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಸಂಪರ್ಕಿಸುವ ರೈಲು ಸೌಲಭ್ಯವಿದೆ. ಇತ್ತೀಚೆಗೆ ವಿಮಾನ ಸಂಪರ್ಕದಿಂದ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಪ್ರಶಸ್ತವಾಗಿದೆ.

  • ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

    ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

    ಕಲಬುರಗಿ: ಮೃತರು ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿಲ್ಲ. ಅಫಜಲಪುರ ತಾಲೂಕಾಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಸಂಸದ ಉಮೇಶ್ ಜಾಧವ್ ಸಮರ್ಥನೆಗೆ ಮುಂದಾಗಿದ್ದಾರೆ.

    ಆಕ್ಸಿಜನ್ ದುರಂತಕ್ಕೆ ತೇಪೆ ಹಚ್ಚೋಕೆ ಮುಂದಾಗಿರುವ ಮಾನ್ಯ ಸಂಸದರು, ಆಸ್ಪತ್ರೆಯಲ್ಲಿ ಆಮ್ಲಜನಕ, ರೆಮ್‍ಡಿಸಿವರ್ ಇಂಜೆಕ್ಷನ್ ಇದೆ. ಬೇಕಿದ್ರೆ ನನ್ನ ಜೊತೆ ಬನ್ನಿ, ನಾನು ತೋರಿಸುತ್ತೇನೆ ಎಂದು ಹೇಳಿದ್ದಾರೆ. ಮೃತರ ಕುಟುಂಬಸ್ಥರೇ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ಹೇಳುತ್ತಿದ್ರೆ ಸರ್ಕಾರ ಮಾತ್ರ ನುಣಚಿಕೊಳ್ಳೋಕೆ ಪ್ರಯತ್ನಕ್ಕೆ ಮುಂದಾಗಿದೆ.

    ಇತ್ತ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಅಫಜಲಪುರ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿರೋ ಆಕ್ಸಿಜನ್ ಪ್ಲಾಂಟ್ ಗಳು ದಂಧೆಗೆ ಇಳಿದಿದ್ದು, ನೆರೆಯ ಮಹಾರಾಷ್ಟ್ರಕ್ಕೆ ಪ್ರಾಣವಾಯು ಸರಬರಾಜು ಮಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇದನ್ನೂ ಓದಿ: ಮೂರು ಗಂಟೆ ಆಕ್ಸಿಜನ್ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟ ನಾಲ್ವರು

    ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದ್ರೂ ಆರೋಗ್ಯ ಸಚಿವರು ಆಕ್ಸಿಜನ್ ಇಲ್ಲದೇ ಮೂವರು ಮೃತರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಡೆತ್ ರಿಪೋರ್ಟ್ ನಲ್ಲಿ 24 ಜನರು ಕೋವಿಡ್ ನಿಂದಲೇ ಸಾವನ್ನಪ್ಪಿದ್ದಾರೆ ಹೊರತು ಆಕ್ಸಿಜನ್ ಕೊರತೆಯಿಂದಲ್ಲ ಅಂತ ತನಿಖೆಗೂ ಅವಕಾಶ ನೀಡದೇ ತಮಗೆ ತಾವೇ ಕ್ಲೀನ್ ಚಿಟ್ ಪಡೆದುಕೊಂಡಿದೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ