ಪಝಲ್ ಆಟದಂತೆ ಕಲಾವಿದರು ಎಲ್ಲವನ್ನು ಜೋಡಿಸಿದಾಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾವಚಿತ್ರ ಮೂಡಿಬಂತು. ನಂತರ ಅದನ್ನು ತಿರುಗಿಸಿದಾಗ ‘ದಂಡತೀರ್ಥ’ (Dandatirtha) ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು. ವೈಕುಂಠ ಏಕಾದಶಿ ಶುಭದಿನದಂದು ಸದರಿ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಸುಮಾರು 78 ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಹರಿಪ್ರಾಣ (Hariprana) ಮೊದಲ ಅನುಭವ ಎನ್ನುವಂತೆ ಪ್ರಾಣ ಪ್ರೊಡಕ್ಷನ್ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರ ಸಲುವಾಗಿ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ಶ್ರಮಕ್ಕೆ ಉಮೇಶ್ ಬಂಡವಾಳ ಹೂಡುತ್ತಿದ್ದಾರೆ.
ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ನಿರ್ದೇಶಕರು ದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಮತ್ತೋಂದು ಹೆಸರು ಇದೇ ಆಗಿರುತ್ತದೆ. ಮೊದಲರ್ಧ ನೈಜ ಘಟನೆಯಲ್ಲಿ ಕಾಮಿಡಿ, ಉಳಿದದ್ದು ಕಾಲ್ಪನಿಕವಾಗಿ ರಿವೆಂಜ್ ಸ್ಟೋರಿಯಲ್ಲಿ ಸಾಗುತ್ತದೆ. ಮಾಧ್ಯಮದವರು ಸ್ಟಿಂಗ್ ಆಪರೇಶನ್ ನಡೆಸುವಂತೆ, ಸಿನಿಮಾದಲ್ಲೂ ಇದೇ ರೀತಿಯ ಹೋಲಿಕೆ ಇರುತ್ತದೆ. ನಾಲ್ಕು ಹಾಸ್ಯ ನಟರಿಗೆ ಗಂಭೀರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣವನ್ನು ನೂತನ ವರ್ಷದಿಂದ ಹೊಸತನದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ.
ಅಲ್ಲದೆ ಪ್ರಾಣ ಆಡಿಯೋ ಮುಂದಿನ ದಿನಗಳಲ್ಲಿ ಶುರು ಮಾಡಲಾಗುತ್ತಿದೆ. ಹಾಗೂ ಪ್ರಾಣ ಎಂಟರ್ಟೈನ್ಮೆಂಟ್ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರುಗಳಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಷೋ ನಡೆಸಲಾಗುವುದು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರುಗಳ ಹೆಸರುಗಳನ್ನು ಶಿಪಾರಸ್ಸು ಮಾಡಲಾಗುತ್ತದೆ ಎಂಬುದರ ಮಾಹಿತಿ ನೀಡಿದರು.
ತಾರಾಗಣದಲ್ಲಿ ಅವಿನಾಶ್ (ಜ್ಯೂ.ದರ್ಶನ್), ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವುಸಕಲೇಶಪುರ, ಖಳನಾಗಿ ಪುನೀತ್ ಮತ್ತು ಶರಣ್, ಬೇಬಿ ಶಾನ್ವಿ ನಾಯಕಿಯರುಗಳಾಗಿ ಮಾನಸಗೌಡ, ಪೂಜರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಜಿ.ರಂಗಸ್ವಾಮಿ, ನೃತ್ಯ ಜಿ.ಪಿ.ಆರಾಧ್ಯ, ಕಾರ್ಯಕಾರಿ ನಿರ್ಮಾಪಕ ವಿಜಯ್, ವಸ್ತ್ರ ವಿನ್ಯಾಸ ಲೇಖನ ಅವರದಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ವಾರಕ್ಕೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ ಹೊಸಬರ ಹೊಸ ಸಿನಿಮಾಗಳೂ ಇವೆ. ಇದೀಗ ಮತ್ತೊಂದು ಹೊಸಬರ ಸಿನಿಮಾ ರಿಲೀಸ್ ರೆಡಿಯಾಗಿದೆ. ಹೌದು, ‘ಬನ್ ಟೀ’ (Bun Tee) ಎನ್ನುವ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ರಿಲೀಸ್‌ಗೂ ಮೊದಲೇ ಸಿನಿಮಾತಂಡ ಟ್ರೈಲರ್ ಮೂಲಕ ಮಾಧ್ಯಮದ ಮುಂದೆ ಹಾಜರಾಗಿತ್ತು. ‘ಬನ್ ಟೀ’ ಅಂದಾಕ್ಷಣ ಇದು ಬನ್ ಮತ್ತು ಟೀ ಬಗ್ಗೆ ಇರುವ ಸಿನಿಮಾ ಅಂತ ಅಂದ್ಕೋಬೇಡಿ, ಇದು ಶಿಕ್ಷಣದ ಬಗ್ಗೆ ಇರುವ ಚಿತ್ರ.
ಬನ್ ಟೀ ಚಿತ್ರಕ್ಕೆ ಉದಯ್ ಕುಮಾರ್ (Uday Kumar) ನಿರ್ದೇಶಕರು. ಉದಯ್ ಕುಮಾರ್ ತನ್ನ ಸ್ನೇಹಿತನ ಜೀವನದಲ್ಲಿ ನಡೆದ ಕಥೆಯನ್ನೇ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಎನ್ನುವ ಕಾನ್ಸೆಪ್ಟ್ ಇರದೆ ಸಂಪೂರ್ಣ ಕಂಟೆಂಟ್ ಮೇಲೆ ಇರುವ ಚಿತ್ರವಾಗಿದೆ. ಬನ್ ಟೀ ಪ್ರಮುಖ ಪಾತ್ರದಲ್ಲಿ ಉಮೇಶ್ (Umesh) ಮತ್ತು ಶ್ರೀದೇವಿ (Sridevi), ಗುಂಡಣ್ಣ ಚಿಕ್ಕಮಗಳೂರು ಸೇರಿದಂತೆ ಅನೇಕರು ನಟಿಸಿದ್ದಾರೆ. ನಟ ಉಮೇಶ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈ ಸಿನಿಮಾದ ಕಾನ್ಸೆಪ್ಟ್ ಇಷ್ಟ ಆಗಿ ನಟಿಸಿದ್ದಾರೆ. ನಟಿ ಶ್ರೀದೇವಿ ಅವರಿಗೂ ಇದು ಮೊದಲ ಸಿನಿಮಾವಾಗಿದೆ. ಇದನ್ನೂ ಓದಿ:ಕಾಗೆ ಮೇಲಿನ ಕಥೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ದಿಲೀಪ್
ಬನ್ ಟೀ ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಇಬ್ಬರು ಬಾಲ ಕಲಾವಿದರು ನಟಿಸಿದ್ದಾರೆ. ಬನ್ ಟೀ ಪಾತ್ರದಲ್ಲಿ ಮೌರ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಯಾವುದೇ ಸೆಟ್ ಬಳಸದೆ ಶೂಟಿಂಗ್ ಮಾಡಿದ್ದಾರೆ. ಸ್ಲಮ್, ಮಾರ್ಕೆಟ್ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಿದ್ದಾರೆ. ಹದಗೆಟ್ಟಿರುವ ಶಿಕ್ಷಣದ ವ್ಯವಸ್ಥೆ, ಸಂಪೂರ್ಣವಾಗಿ ಕಮರ್ಷಿಯಲ್ ಆಗಿರುವ ಶಿಕ್ಷಣದ ಸುತ್ತ ಬನ್ ಟೀ ಸಿನಿಮಾದ ಕತೆ ಸುತ್ತುತ್ತದೆ.
ಬನ್ ಟೀ ಚಿತ್ರಕ್ಕೆ ಕೇಶವ್ ಆರ್ ನಿರ್ಮಾಣ ಮಾಡಿದ್ದಾರೆ. ಪ್ರದ್ಯೋತ್ತನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ಇರದಿದ್ದರೂ ಬ್ಯಾಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿ ಬಂದಿದೆ ಎನ್ನುವುದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತಿದೆ. ರಾಜ ರಾವ್ ಕ್ಯಾಮರಾ ವರ್ಕ್ ಸಿನಿಮಾಗಿದೆ. ಸದ್ಯ ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ.
ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಅಡಿಯಿಟ್ಟರು. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಕಥಾಸಂಗಮದ ‘ಮುನಿತಾಯಿ’ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮುತ್ತಿಟ್ಟಿರುವ ಉಮೇಶ್ ಕಲಾ ಪಯಣಕ್ಕೆ 62ರ ಸಂಭ್ರಮ.
ಉಮೇಶ್ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿನಂದನ ಸಲ್ಲಿಸಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದಲ್ಲಿ ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಚಿತ್ರರಂಗದ ಮತ್ತೊಬ್ಬ ಹಿರಿಯ ಕಲಾವಿದರಾದ ಬೆಂಗಳೂರು ನಾಗೇಶ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 60 ವರ್ಷ ಪೂರೈಸಿದ ಹಿನ್ನೆಲೆ ಅವರನ್ನು ಕೂಡ ಸನ್ಮಾನಿಸಲಾಯಿತು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಟ್ರೈಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ
ಉಮೇಶ್ ಮಾತನಾಡಿ, ಇದು ನನ್ನ ಸುದಿನ ಅಂತ ಭಾವಿಸ್ತೀನಿ. ಚಿತ್ರರಂಗ ನನ್ನನ್ನ ಮನೆ ಮಗನಂತೆ ನೋಡಿದೆ. ಅಭಿಮಾನಿ ಅನ್ನದಾತರಿಂದ ಇಲ್ಲಿದ್ದೇನೆ. ಕಲಾಸೇವೆ ಮಾಡೋ ಅವಕಾಶ ಸಿಕ್ಕಿದ್ದು ಪುಣ್ಯ. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಭಾ.ಮಾ.ಹರೀಶ್ ಮಾತನಾಡಿ, ಹಿರಿಯ ಕಲಾವಿದ ಉಮೇಶ್ ಅವರು ಸನ್ಮಾನ ಸ್ವೀಕರಿಸಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ಕನ್ನಡ ಇಂಡಸ್ಟ್ರೀ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ಇರಲಿ. ಹೊಸ ನಿರ್ದೇಶಕರು, ನಿರ್ಮಾಪಕರನ್ನು ಕರೆಸಿ ಪೋಷಕ ಕಲಾವಿದರ ಸಂಘದ ಮೂಲಕ ನೆನಪಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ಸಕ್ರಿಯರಾಗಿರುವ ಉಮೇಶ್, ‘ಗೋಲ್ ಮಾಲ್ ರಾಧಾಕೃಷ್ಣ’ ಸಿನಿಮಾದಲ್ಲಿ ಅವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. “ಅಯ್ಯೋ ತಪ್ಪಾಯ್ತು ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ. ವರನಟ ಡಾ.ರಾಜ್ ಕುಮಾರ್ ಜೊತೆ ‘ಶೃತಿ ಸೇರಿದಾಗ’ ಚಿತ್ರದಲ್ಲಿನ “ಇದು ಬೊಂಬೆಯಾಟವಯ್ಯಾ” ಹಾಡಿನಲ್ಲಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಹಾಲು ಜೇನು, ಶ್ರಾವಣ ಬಂತು, ಗುರುಶಿಷ್ಯರು, ಮಲಯಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಚೈತ್ರದ ಪ್ರೇಮಾಂಜಲಿ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಉಮೇಶ್ ಅಮೋಘವಾಗಿ ನಟಿಸಿದ್ದಾರೆ. ಎಲ್ಲರಂತಲ್ಲ ನನ್ನ ಗಂಡ, ಜೇನುಗೂಡು, ಚನ್ನ ಸಿನಿಮಾ ಚಿತ್ರಗಳನ್ನು ಉಮೇಶ್ ನಿರ್ದೇಶನ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಟಾರ್ ಸುವರ್ಣದ ಜೇನುಗೂಡು ಧಾರಾವಾಹಿಯಲ್ಲಿ ಈಗ ಮದುವೆ ಸಂಭ್ರಮ. ಕಿರುತೆರೆಯಲ್ಲಿ ಹಿಂದೆಂದೂ ಕಂಡಿರದ ರೀತಿಯ ಉತ್ತರ ಕರ್ನಾಟಕ ಶೈಲಿಯ ಮದುವೆ ಸಂಭ್ರಮ ಮತ್ತು ಸಂಪ್ರದಾಯಗಳು ಜೇನುಗೂಡು ಧಾರಾವಾಹಿಯಲ್ಲಿ ಕಾಣಸಿಗಲಿದೆ. ಇದೆಲ್ಲಕ್ಕೂ ಮೊದಲು ಧಾರಾವಾಹಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲಾಗಿದೆ.
ಧಾರಾವಾಹಿಯೊಂದರಲ್ಲಿ ಮದುವೆಗಾಗಿ ಫೋಟೋಶೂಟ್ ಮಾಡಿರುವುದು ಇದೇ ಮೊದಲು. ಶಶಾಂಕ್ ಮತ್ತು ದಿಯ ಮದುವೆಗೂ ಮುನ್ನ ಉತ್ತರ ಕರ್ನಾಟಕ ಶೈಲಿಯ ಪೇಟ, ಸೀರೆ ತೊಟ್ಟು ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಸೂಟ್ ಮತ್ತು ಗೌನ್ ಹಾಕಿ ಮಾಡರ್ನ್ ಲುಕ್‍ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ನಟಿ ಸಾಯಿ ಪಲ್ಲವಿ ಬಂಧಿಸಿ : ಬಿಜೆಪಿ ಶಾಸಕ ರಾಜಾ ಸಿಂಗ್ ಆಗ್ರಹ
ಈ ವಾರದ ಜೇನುಗೂಡು ಧಾರಾವಾಹಿಯ ಮತ್ತೊಂದು ಆಕರ್ಷಣೆ ಹಿರಿಯ ನಟ ಉಮೇಶ್. ನಡುಕೋಟೆ ಮನೆಗೆ ಜವಳಿ ಮಾರಲು ವಿಶೇಷ ಪಾತ್ರದಲ್ಲಿ ಬಂದಿದ್ದಾರೆ. ವಿನಾಯಕ್ ದಾದಾ ಮದುವೆ ಜವಳಿಗಾಗಿ ಎಷ್ಟು ಹಣ ಖರ್ಚು ಮಾಡ್ತಾರೆ, ಮನೆಮಂದಿಗೆಲ್ಲಾ ಉಮೇಶ್ ಅವರು ಯಾವ ಜವಳಿ ಕೊಡಲಿದ್ದಾರೆ ಅಂತ ತಿಳಿದುಕೊಳ್ಳಲು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೇನುಗೂಡು ಧಾರಾವಾಹಿಯನ್ನು ಮಿಸ್ ಮಾಡದೇ ನೋಡಿ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತ ಉಮೇಶ್ ಸೇರಿದಂತೆ ನೀರಾವರಿ, ಪಿಡಬ್ಲ್ಯೂಡಿ ಇಲಾಖೆಯ ಕ್ಲಾಸ್ 1 ಕಂಟ್ರಾಕ್ಟರ್ ಗಳಾದ ಉಪ್ಪಾರ, ಅರವಿಂದ್, ಸೋಮಶೇಖರ್ ಮೇಲೆ ಈ ತಿಂಗಳ ಆರಂಭದಲ್ಲಿ ಐಟಿ ನಡೆಸಿದ್ದ ರೇಡ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಐಟಿ ರೇಡ್ ವೇಳೆ ಸಿಕ್ಕಿದ್ದ 750 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನಲ್ಲಿ 150 ಕೋಟಿಯಷ್ಟೇ ಸಕ್ರಮ. ಉಳಿದ 600 ಕೋಟಿ ಬೇನಾಮಿ ಅನ್ನೋದು ಖಚಿತವಾಗಿದೆ. ದಾಳಿ ವೇಳೆ ಪತ್ತೆಯಾಗಿದ್ದ 750 ಕೋಟಿ ಅಕ್ರಮ ಆಸ್ತಿ ಕುರಿತು ತನಿಖೆಯ ವೇಳೆ 30ಕ್ಕೂ ಹೆಚ್ಚು ಗುತ್ತಿಗೆದಾರರನ್ನು ಕರೆಸಿ ಐಟಿ ಇಲಾಖೆ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ
ವಿಚಾರಣೆ ವೇಳೆ 600 ಕೋಟಿಗೆ ಲೆಕ್ಕ ತೋರಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಕೇವಲ 150 ಕೋಟಿಗೆ ದಾಖಲೆ ಒದಗಿಸುವಲ್ಲಿ ಗುತ್ತಿಗೆದಾರರು ಸಫಲರಾಗಿದ್ದಾರೆ. ಶೀಘ್ರವೇ ಆಸ್ತಿ ಅಸೆಸ್ಮೆಂಟ್ ಟೀಂಗೆ ತನಿಖಾ ತಂಡದ ವರದಿ ಸಲ್ಲಿಕೆ ಮಾಡಿದ್ದು, ಮತ್ತೊಮ್ಮೆ ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಲಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಈ 600 ಕೋಟಿ ಅಕ್ರಮ ಸಂಪತ್ತು ಯಾರದು ಅಂತ ತನಿಖೆ ಚುರುಕುಗೊಳಿಸಲು ಮುಂದಾಗಿದೆ. ಈ ಮಧ್ಯೆ ಯಡಿಯೂರಪ್ಪ ಮಾತ್ರ ಉಮೇಶ್ ಮೇಲಿನ ಐಟಿ ರೇಡ್‍ಗೂ ನನಗೂ ಸಂಬಂಧ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ
– ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ – ಸರ್ಕಾರದ ಕಾರು ವಾಪಸ್
ಬೆಂಗಳೂರು: ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ಕಟ್ಟಿಸಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಪಿಎ ಉಮೇಶ್ ಮನೆ ಮೇಲೆ ನಡೆದ ಐಟಿ ದಾಳಿ ತಡರಾತ್ರಿ ಅಂತ್ಯಗೊಂಡಿದೆ.
ಉಮೇಶ್ ನ ಸ್ವಾರಸ್ಯಕರ ಸಂಗತಿಯೆಂದರೆ ಹೊಸ ಮನೆ ಕಟ್ಟಿಸಿದ್ದರು ಕೂಡ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆಗಿದ್ದ. ಇದರ ಹಿಂದೆ ರೋಚಕ ಕಹಾನಿ ಇದ್ದು, ಮನೆಯ ಈಶಾನ್ಯ ಭಾಗದಲ್ಲಿ ಸ್ಟೇರ್ ಕೇಸ್ ಹೊಂದಿರುವುದು ಅದೃಷ್ಟ ತರುವುದೆಂದು ಈ ಮನೆಯಲ್ಲಿ ವಾಸವಿದ್ದ. ಇದೇ ಮನೆಯ ಕೆಳಭಾಗದಲ್ಲಿ ಈ ಹಿಂದೆ ರಿಯಲ್ ಎಸ್ಟೇಟ್ ಕಚೇರಿ ಇತ್ತು. 90ರ ದಶಕದಲ್ಲಿ ಕಾಮದೇನು ಎಂಟರ್ ಪ್ರೈಸಸ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಕೃಷ್ಣಯ್ಯ ಶೆಟ್ಟಿ ಮತ್ತು ಸೋದರ ಪ್ರಭಾಕರ್ ಶೆಟ್ಟಿ ಇದೇ ಮನೆಯಲ್ಲಿ ವಾಸಿವದ್ದರು. ಅವರಿಗೆ ಅದೃಷ್ಟ ತಂದಿದ್ದ ಮನೆಯಲ್ಲಿ ಉಮೇಶ್ ವಾಸವಿದ್ದ. ಇದನ್ನೂ ಓದಿ: ಐಟಿ ದಾಳಿ ಬೆನ್ನಲ್ಲೇ ಸಿಎಂ ಕಚೇರಿಯಿಂದ ಉಮೇಶ್‍ಗೆ ಗೇಟ್‍ಪಾಸ್
ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟ ತಂದೊಡ್ಡಿತಾ ಮನೆ
ಕರ್ನಾಟಕ ರಾಜ್ಯ ಗೃಹ ಮಂಡಳಿ ಅವ್ಯವಹಾರದಲ್ಲಿ ಜೈಲು ಸೇರಿದ್ದ ಕೃಷ್ಣಯ್ಯ ಶೆಟ್ಟಿಗೆ ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟಕ್ಕೂ ಈ ಮನೆ ಕಾರಣವಾಗಿತ್ತು. ಕಾಕತಾಳಿಯವೋ, ಅದೃಷ್ಟದ ಲೆಕ್ಕಚಾರವೋ ಇದೀಗ ಬಿಎಸ್‍ವೈ ಪಿಎ ಉಮೇಶ್‍ಗೂ ಇದೇ ಸಂಕಷ್ಟ ಎದುರಾಗಿದೆ. ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್, ಬಿಎಸ್‍ವೈ ಪಿಎ ಆದ ಬಳಿಕ ಕೋಟ್ಯಂತರ ಮೌಲ್ಯದ ಆಸ್ತಿ, ಪಾಸ್ತಿಗಳಿಸಿದ್ದಾನೆ. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ
ಉಮೇಶ್ ಮನೆ ಮೇಲೆ ನಡೆದ ಐಟಿ ದಾಳಿಯನ್ನು ತಡ ರಾತ್ರಿ ಐಟಿ ಅಧಿಕಾರಿಗಳು ಅಂತ್ಯಗೊಳಿಸಿದರು. 7 ಮಂದಿ ಐಟಿ ಅಧಿಕಾರಿಗಳಿಂದ ತಡರಾತ್ರಿವರೆಗೂ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಬಳಿಕ ಉಮೇಶ್‍ಗೆ ಸೇರಿದ ಬ್ಯಾಂಕ್ ಖಾತೆಗಳ ವಿವರ, ಲ್ಯಾಪ್‍ಟಾಪ್, ಪೆನ್ ಡ್ರೈವ್, ನೀರಾವರಿ ಇಲಾಖೆಗೆ ಸಂಬಂಧಪಟ್ಟ ದಾಖಲಾತಿ ಸೇರಿದಂತೆ ಮಹತ್ವದ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಉಮೇಶ್‍ಗೆ ಇಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ
ಇದೀಗ ಐಟಿ ರೇಡ್ ಬೆನ್ನಲ್ಲೇ ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದಲೂ ಸಹ ಉಮೇಶ್‍ನನ್ನು ಬಿಡುಗಡೆಗೊಳಿಸಲಾಗಿದೆ. ಸರ್ಕಾರದಿಂದ ಇನ್ನೋವಾ ಕಾರನ್ನು ಉಮೇಶ್‍ಗೆ ನೀಡಲಾಗಿತ್ತು. ಈ ಕಾರನ್ನು ರಾತ್ರೋರಾತ್ರಿ ಅಧಿಕಾರಿಗಳು ಕುಮಾರಕೃಪಗೆ ವಾಪಸ್ ತೆಗೆದುಕೊಂಡು ಬಂದಿದ್ದಾರೆ.
2007-08ರಲ್ಲಿ ಬಿಎಂಟಿಸಿ ಉದ್ಯೋಗಿಯಾದ ಉಮೇಶ್, ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಉದ್ಯೋಗ ಬೇಡ ಎನ್ನಿಸಿತ್ತು. ಇದೇ ವೇಳೆ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದರು. ಈ ವೇಳೆ ಉಮೇಶ್ ಎರವಲು ಸೇವೆ ಅರ್ಜಿ ಸಲ್ಲಿಸಿದ್ದ. 2008ರಲ್ಲಿ ಎರವಲು ಸೇವೆಯಡಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದ. ಎರವಲು ಸೇವೆಗೆ ನಿಯೋಜನೆಯಾಗುವ ಮುನ್ನ ಉಮೇಶ್ ತಿಂಗಳಿಗೆ 3,500ರೂ. ಸಂಬಳ ಪಡೆಯುತ್ತಿದ್ದ. ಒಂದೇ ವರ್ಷಕ್ಕೆ ಟ್ರೈನಿಯಿಂದ ಪ್ರೊಬೆಷನರಿಯಾಗಿ ಬಡ್ತಿ ಪಡೆದು ತಿಂಗಳಿಗೆ 18 ಸಾವಿರ ರೂ.ವೇತನ ಪಡೆಯುತ್ತಿದ್ದ.
ಇದೀಗ ಉಮೇಶ್ ವೇತನ ತಿಂಗಳಿಗೆ 30ರಿಂದ 32 ಸಾವಿರ ರೂ. ಇದೆ. ಎರವಲು ಸೇವೆಗೆ ನಿಯೋಜನೆಯಾದರೆ ಎರಡು ವರ್ಷದ ಬಳಿಕ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿ, ಡೆಪ್ಟೇಷನ್ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರಿಯುತ್ತಿರುವುದು ವಿಶೇಷ. ಸದ್ಯ ಎರಡನೇ ದಿನವೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ
ಶಿವಮೊಗ್ಗ: ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ, ಐಟಿ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ನಾಳೆ ಎಲ್ಲ ಮಾಹಿತಿ ತಿಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅಪ್ತ ಮನೆಯ ಮೇಲೆ ಐಟಿ ದಾಳಿ ಬಗ್ಗೆ ಶಿಕಾರಿಪುರದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಆಪ್ತನ ಮನೆ ಮೇಲೆ ಐಟಿ ದಾಳಿಯಾಗಿರುವುದು ಮಾಧ್ಯಮದಿಂದ ಗೊತ್ತಾಗಿದೆ. ಉಮೇಶ್ ಅವರು ನನ್ನ ಜೊತೆ ಕೆಲಸ ಮಾಡುತ್ತಿದ್ದರು, ಬೊಮ್ಮಾಯಿಯವರ ಜೊತೆ ಕೆಲಸ ಮಾಡುತ್ತಿಲ್ಲ. ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಐಟಿ ದಾಳಿಯ ಕುರಿತು ನಾಳೆ ಮಾಹಿತಿ ನೀಡಲಿದ್ದಾರೆ. ಈ ಮಾಹಿತಿ ಬಳಿಕ ನಾನು ಉತ್ತರ ನೀಡುತ್ತೇನೆ. ಯಾರೇ ತಪ್ಪು ಮಾಡಿದರು ಐಟಿ ಅಧಿಕಾರಿಗಳು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ
ಐಟಿ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇದೊಂದು ರಾಜಕೀಯ ಪ್ರೇರಿತ ಐಟಿ ದಾಳಿ ಅಲ್ಲ, ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಬಿಎಂಟಿಸಿ ನಿರ್ವಾಹಕನಾಗಿ ತಿಂಗಳಿಗೆ ಸಾವಿರದಲ್ಲಿ ಸಂಬಳ ಪಡೆಯುತ್ತಿದ್ದ ಉಮೇಶ್ 10 ವರ್ಷದಲ್ಲಿ ಕೋಟಿ ಕುಳವಾಗಿ ಬೆಳೆದ ಕಥೆಯೇ ರೋಚಕ.
ಐಟಿ ರೇಡ್ ಆಗಿರುವ ಬಿಎಂಟಿಸಿ ಸಿಬ್ಬಂದಿ ಉಮೇಶ್ ಡಿಪೋ ನಂಬರ್ 11ರಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಉಮೇಶ್ ಬಿಎಂಟಿಸಿಯಿಂದ ಪಡೆಯುತ್ತಿದ್ದ ತಿಂಗಳ ಸಂಬಳ 32 ಸಾವಿರ ರೂಪಾಯಿ. ಕೈಗೆ ಸಿಗುತ್ತಿದ್ದಿದ್ದು 28 ಸಾವಿರ ರೂಪಾಯಿ.
2007-08ರಲ್ಲಿ ಬಿಎಂಟಿಸಿ ಉದ್ಯೋಗಿಯಾದ ಉಮೇಶ್, ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಉದ್ಯೋಗ ಬೇಡ ಎನ್ನಿಸಿತ್ತು. ಇದೇ ವೇಳೆ ಬಿ.ಎಸ್.ಯಡಿಯೂರಪ್ಪ ಮೊದಲಬಾರಿಗೆ ಸಿಎಂ ಆಗಿದ್ದರು. ಈ ವೇಳೆ ಉಮೇಶ್ ಎರವಲು ಸೇವೆ ಅರ್ಜಿ ಸಲ್ಲಿಸಿದ್ದ. 2008ರಲ್ಲಿ ಎರವಲು ಸೇವೆಯಡಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದ. ಎರವಲು ಸೇವೆಗೆ ನಿಯೋಜನೆಯಾಗುವ ಮುನ್ನ ಉಮೇಶ್ ತಿಂಗಳಿಗೆ 3,500ರೂ. ಸಂಬಳ ಪಡೆಯುತ್ತಿದ್ದ. ಒಂದೇ ವರ್ಷಕ್ಕೆ ಟ್ರೇನಿಯಿಂದ ಪ್ರೊಬೆಷನರಿಯಾಗಿ ಬಡ್ತಿ ಪಡೆದು ತಿಂಗಳಿಗೆ 18 ಸಾವಿರ ರೂ.ವೇತನ ಪಡೆಯುತ್ತಿದ್ದ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್
ಇದೀಗ ಉಮೇಶ್ ವೇತನ ತಿಂಗಳೀಗೆ 30ರಿಂದ 32 ಸಾವಿರ ರೂ. ಇದೆ. ಎರವಲು ಸೇವೆಗೆ ನಿಯೋಜನೆಯಾದರೆ ಎರಡು ವರ್ಷದ ಬಳಿಕ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿ, ಡೆಪ್ಟೇಷನ್ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರಿಯುತ್ತಿರುವುದು ವಿಶೇಷ.
ಇಷ್ಟು ಕಡಿಮೆ ವೇತನವಿದ್ದರೂ ಉಮೇಶ್ ಕೋಟ್ಯಧಿಪತಿ ಆಗಿದ್ದಾನೆ. ಸದ್ಯ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆ ಇದ್ದು, ಸಹಕಾರ ನಗರದಲ್ಲಿ ಕೋಟ್ಯಂತರ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದಾನೆ. ಬಗಲಗುಂಟೆಯಲ್ಲಿ ಸೈಟ್‍ಗಳಿವೆ. ನೆಲಮಂಗಲದಲ್ಲಿ ಜಮೀನು, ಬಿಡಿಎನಲ್ಲಿ ಅನೇಕ ಸೈಟ್‍ಗಳು ಮಂಜೂರಾಗಿವೆ. ಅಲ್ಲದೆ ತನ್ನ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾನೆ. ಇತ್ತೀಚೆಗೆ ಎಲೆಕ್ಷನ್‍ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಹೋದರನನ್ನೂ ಗೆಲ್ಲಿಸಿಕೊಂಡಿದ್ದಾನೆ.
ಬಿಎಸ್‍ವೈ ಸಂಪರ್ಕ ಹೇಗೆ?
ಮೂಲತಃ ಶಿವಮೊಗ್ಗ ಜಿಲ್ಲೆಯ ಆಯನೂರಿನವನಾದ ಉಮೇಶ್, ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. 2008ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಆಪ್ತ ಶಾಖೆಯಲ್ಲಿ ಕೆಲಸ ಕೆಲಸ ಮಾಡಿದ್ದ. ಅಧಿಕಾರ ಕಳೆದುಕೊಂಡರೂ ಬಿಎಸ್‍ವೈ ನಂಟು ಬಿಟ್ಟಿರಲಿಲ್ಲ. ಬಿಎಸ್‍ವೈ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 2019ರಲ್ಲಿ ಮತ್ತೆ ಬಿಎಸ್‍ವೈ ಸಿಎಂ ಆದಾಗ ಸಹ ಆಪ್ತ ಸಹಾಯಕನಾಗಿ ಮುಂದುವರಿದಿದ್ದ. ಯಡಿಯೂರಪ್ಪನವರ ಎಲ್ಲ ಖಾಸಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಇದೀಗ ಬಿಎಸ್‍ವೈ ರಾಜೀನಾಮೆ ಬಳಿಕ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿಯವರ ಕಚೇರಿಯಲ್ಲಿ ಸಹಾಯಕನಾಗಿ ಸೇರ್ಪಡೆಯಾಗಿದ್ದ. ಸಿಎಂ ಆಪ್ತ ಸಹಾಯಕನಾದರೂ ಬಿಎಸ್‍ವೈ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಉಮೇಶ್ ಮೊದಲು ಆಯನೂರು ಮಂಜುನಾಥ್ ಅವರಿಗೆ ಪಿಎ ಆಗಿದ್ದ. ಆಯನೂರು ಎಂಪಿ ಆದ ಮೇಲೆ ಬಿಎಸ್‍ವೈ ಜೊತೆ ಇರಲು ಬಿಟ್ಟರು. ಆಗಿನಿಂದ ಯಡಿಯೂರಪ್ಪನವರ ಕುಟುಂಬದ ಜತೆ ಆಪ್ತತೆ ಬೆಳೆಯಿತು. ಯಡಿಯೂರಪ್ಪನವರು ವಿಧಾನಸಭೆ ವಿಪಕ್ಷ ನಾಯಕರಾದಾಗಿಂದ ಉಮೇಶ್ ಜೊತೆಗಿದ್ದಾನೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ
ವರ್ಗಾವಣೆ, ಟೆಂಡರ್ ಡೀಲ್‍ಗಳಲ್ಲಿ ಶಾಮೀಲು
ಇದೀಗ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ರೂ. ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ಉಮೇಶ್ ವಿಜಯನಗರದಲ್ಲಿ ಒಂದು ಭವ್ಯ ಮನೆಯ ನಿರ್ಮಾಣ ಮಾಡುತ್ತಿದ್ದಾನೆ. 60*120 ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಹಲವು ವರ್ಗಾವಣೆಗಳು, ಟೆಂಡರ್ ಡೀಲ್ ಗಳಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ.
ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರಗೆ ಉಮೇಶ್ ಪಿಎ ಆಗಿದ್ದ. ತನ್ನೊಂದಿಗೂ ಅರವಿಂದ್ ಎಂಬುವವನನ್ನು ಪಿಎಯಾಗಿ ಇಟ್ಟುಕೊಂಡಿದ್ದ. ಶಿವಮೊಗ್ಗದ ಡೀಲ್ ಗಳನ್ನು ಅರವಿಂದ್ ನೋಡಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಅರವಿಂದ್ ಹಾಗೂ ಇನ್ನೂ ಇಬ್ಬರ ಜೊತೆ ಸೇರಿ ಡೀಲ್ ವ್ಯವಹಾರ ಮಾಡುತ್ತಿದ್ದಾನೆ ಎನ್ನುವುದು ಈಗ ಬಂದಿರುವ ಆರೋಪ. ಇದನ್ನೂ ಓದಿ: 2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ
ಆ ಇಬ್ಬರ ಪೈಕಿ ಒಬ್ಬ ಬಿ.ಎಸ್.ಯಡಿಯೂರಪ್ಪನವರಿಗೆ ಗನ್ ಮ್ಯಾನ್ ಆಗಿದ್ದವ. ಮತ್ತೊಬ್ಬ ವಿಧಾನಸೌಧದಲ್ಲಿ ಈಗ ಗುತ್ತಿಗೆ ನೌಕರ. ವರ್ಗಾವಣೆ, ಟೆಂಡರ್ ಡೀಲ್ ಗೆ ಇಳಿದ ಮೇಲೆ ರಹಸ್ಯ ನಡೆ ಅನುಸರಿಸುತ್ತಿದ್ದ. ತನ್ನ ಗುಪ್ತ ವ್ಯವಹಾರಗಳ ಬಗ್ಗೆ ಉಮೇಶ್ ರಹಸ್ಯ ಕಾಪಾಡುತ್ತಿದ್ದ. ಉಮೇಶ್ ಬಿ.ಎಸ್.ಯಡಿಯೂರಪ್ಪನವರಿಗೆ ಪಿಎ ಆಗಿದ್ದಾಗ ಸರ್ಕಾರಿ ಕಾರಲ್ಲೇ ಓಡಾಡುತ್ತಿದ್ದ, ಡೀಲ್ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು: ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗುತ್ತಿಗೆದಾರರ ನಡುವಿನ ಜಗಳವೇ ಬಿಎಸ್‌ವೈ ಪಿಎ ಮನೆ ಮೇಲೆ ಐಟಿ ದಾಳಿಗೆ ಮೂಲ ಕಾರಣ ಎಂಬ ವಿಚಾರ ಈಗ ತಿಳಿದು ಬಂದಿದೆ.
ಆರೋಪ ಏನು?
ನೀರಾವರಿ ಟೆಂಡರ್‌ಗಳನ್ನು ಬೇಕಾದವರಿಗೆ ಮಾಡಿಕೊಡುತ್ತಿದ್ದ ಉಮೇಶ್ ಬಳಿಕ ಕಮಿಷನ್ ರೂಪದಲ್ಲಿ ಕೋಟಿ ಕೋಟಿ ರೂ. ದುಡ್ಡು ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಉಮೇಶ್ ಮೇಲೆ ಶಿವಮೊಗ್ಗ, ಬೆಂಗಳೂರಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪವಿದೆ.
`ಎ’ ಗ್ರೇಡ್ ಟೆಂಡರ್‌ಗಳನ್ನು ಆಂಧ್ರ ಮೂಲದವರಿಗೆ ಸಿಗುವಂತೆ ಕೆಲಸ ಮಾಡುತ್ತಿದ್ದ ಉಮೇಶ್ ಕರ್ನಾಟಕದ ಗುತ್ತಿಗೆದಾರರಿಗೆ ಗುತ್ತಿಗೆ ತಪ್ಪಿಸುತ್ತಿದ್ದ. ಈ ವಿಚಾರದ ಬಗ್ಗೆ ಎರಡೂ ರಾಜ್ಯದ ಗುತ್ತಿಗೆದಾರ ಮಧ್ಯೆ ಗಲಾಟೆ ನಡೆಯುತ್ತಿತ್ತು. ತಿಕ್ಕಾಟ ಜೋರಾದ ಬಳಿಕ ರಾಜ್ಯದ 8 ಮಂದಿ ಗುತ್ತಿಗೆದಾರರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಐಟಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಸಮಯ ನೋಡಿ ಈಗ ದಾಳಿ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕಾವೇರಿ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲನಿಗಮದ ಟೆಂಡರ್‌ನಲ್ಲಿ ಗೋಲ್ಮಾಲ್ ಮಾಡಿದ್ದು, ಬಿಡುಗಡೆಯಾದ ಹಣಕ್ಕೂ, ಕಾಮಗಾರಿಯ ಹಣಕ್ಕೂ ಭಾರೀ ವ್ಯತ್ಯಾಸ ಕಂಡು ಬಂದಿದೆ. ಗುತ್ತಿಗೆದಾರರಿಗೆ ಕೊಟ್ಟಿರುವ ಹಣದ ಅಂಕಿ-ಅಂಶದಲ್ಲೂ ಏರುಪೇರು ಕಾಣಿಸಿದ್ದು, ಎರಡೂವರೆ ವರ್ಷದಲ್ಲಿ ಸಾವಿರಾರು ಕೋಟಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ವಿಜಯೇಂದ್ರ ಮಾಡಿದ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್. ವಿಶ್ವನಾಥ್
ಆರೋಪ ನಿಜ?
ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಪರಿಷತ್ ಸದಸ್ಯ ವಿಶ್ವನಾಥ್ ಅವರ ಆರೋಪ ನಿಜವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಈ ಹಿಂದೆ ವಿಶ್ವನಾಥ್ ಅವರು ಬಿಎಸ್‍ವೈ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ನಾನು ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಇದು ಟಾರ್ಗೆಟ್ ಕರೆಪ್ಶನ್. ಬಿಎಸ್‍ವೈ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ ಅಕ್ರಮ ನಡೆದಿದೆ. 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಬೆಳಗಾವಿ ಮನೆ ಗೋಡೆ ಕುಸಿದು 7 ಮಂದಿ ಸಾವು- 2 ಲಕ್ಷ ರೂ. ಪರಿಹಾರ ಘೋಷಿಸಿದ ಮೋದಿ
ಆರ್ಥಿಕ ಇಲಾಖೆ ಮತ್ತು ನೀರಾವರಿ ನಿಗಮಗಳ ಒಪ್ಪಿಗೆ ಪಡೆಯದೇ ತರಾತುರಿಯಲ್ಲಿ ಟೆಂಡರ್ ಹಂಚಿಕೆ ಮಾಡಲಾಗಿದೆ. ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಲೇಬೇಕು. ನಾಯಕತ್ವ ಬದಲಾವಣೆಗೆ ಕಾರಣ ಕೊಟ್ಟಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದರು.
ನೀರಾವರಿ ಇಲಾಖೆಯಲ್ಲಿ ಡೀಲ್?
ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದಾಗ ಡೀಲ್ ಆರೋಪ ಕೇಳಿ ಬಂದಿತ್ತು. ಉಮೇಶನ ಡೀಲ್‍ನಿಂದ ರೋಸಿ ಹೋಗಿದ್ದ ರಮೇಶ್ ಜಾರಕಿಹೊಳಿ ಬಿಎಸ್‍ವೈ, ವಿಜಯೇಂದ್ರ ಬಳಿಯೂ ಚರ್ಚಿಸಿದ್ದರು ಎಂದು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.