Tag: umashree

  • ವಿಡಿಯೋ: ಅಮ್ಮನನ್ನು ನೆನೆದು ಗಳಗಳನೆ ಅತ್ತ ಸಚಿವೆ ಉಮಾಶ್ರೀ

    ವಿಡಿಯೋ: ಅಮ್ಮನನ್ನು ನೆನೆದು ಗಳಗಳನೆ ಅತ್ತ ಸಚಿವೆ ಉಮಾಶ್ರೀ

    ಬಾಗಲಕೋಟೆ: ನಟಿ ಹಾಗು ಸಚಿವೆಯಾಗಿರುವ ಶ್ರೀಮತಿ ಉಮಾಶ್ರೀ ಅವರು ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನೆದು ದುಃಖ ತಡೆಯಲಾರದೇ ಗಳಗಳನೇ ಕಣ್ಣೀರು ಹಾಕಿದ್ದಾರೆ.

    ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಉಮಾಶ್ರೀ ಅವರು, ಪಾರ್ವತಮ್ಮ ಅವರು ನನಗೆ ತಾಯಿಯಾಗಿ, ಅಕ್ಕಳಾಗಿ ಇದ್ದರು. ನಾನು ಶಾಸಕಿ, ಮಂತ್ರಿಯಾದಗಲು ಅವರನ್ನ ಭೇಟಿಯಾಗುತ್ತಿದ್ದೆ, ಆರ್ಶಿವಾದ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

    ತಾಯಿ ಇಲ್ಲದೇ ನೋವು ಅನುಭವಿಸಿದ ಸಂದರ್ಭದಲ್ಲಿ ಪಾರ್ವತಮ್ಮ ಅವರನ್ನು ತಾಯಿಯಂತೆ ಕಂಡಿದ್ದೇ. ಅವರು ಕೂಡಾ ನನ್ನನ್ನು ಮಗಳಂತೆ ಕಂಡಿದ್ದರು. ನನ್ನಂತಹ ಅನೇಕ ಕಲಾವಿದರಿಗೆ ಆಶ್ರಯ ನೀಡಿದ ಮಹಾತಾಯಿ ಅಮ್ಮ ಎಂದು ಪಾರ್ವತಮ್ಮ ರಾಜಕುಮಾರ್ ಅವರೊಂದಿಗಿನ ಒಡನಾಟವನ್ನು ಸಚಿವೆ ಉಮಾಶ್ರೀ ಸ್ಮರಿಸಿಕೊಂಡರು.

     

  • ಸಚಿವೆ ಉಮಾಶ್ರೀ, ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್- ಹಂಪಿ ವಿವಿ ಅಧೀಕ್ಷಕ ಪೊಲೀಸರ ವಶಕ್ಕೆ

    ಸಚಿವೆ ಉಮಾಶ್ರೀ, ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್- ಹಂಪಿ ವಿವಿ ಅಧೀಕ್ಷಕ ಪೊಲೀಸರ ವಶಕ್ಕೆ

    ಬಳ್ಳಾರಿ: ಫೇಸ್‍ಬುಕ್ ಹಾಗು ವಾಟ್ಸಪ್‍ನಲ್ಲಿ ಮಹಿಳೆಯರ ಬಗ್ಗೆ ಅವಹೇಳಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಅಧೀಕ್ಷಕ ಎಚ್.ಎಂ.ಸೋಮನಾಥ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಫೇಸ್‍ಬುಕ್ ಅಕೌಂಟ್‍ನಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಮತ್ತು ಸಚಿವೆ ಉಮಾಶ್ರೀ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಸಚಿವೆ ಉಮಾಶ್ರೀ ಅವರಿಗೆ ಉಪಮಾಶ್ರೀ, ಕಿತ್ತೂರ ಚೆನ್ನಮ್ಮರಿಗೆ ಕಿರಾಣಿ ಚೆನ್ನಮ್ಮ ಎಂದು ಹಾಗೂ ಶರಣೆ ಅಕ್ಕಮಹಾದೇವಿ ಅವರನ್ನು ಅಕ್ರಮದೇವಿ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿದ್ದರು.

    ಇತ್ತೀಚಿಗೆ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹದೇವಿ ಪ್ರಶಸ್ತಿಯನ್ನು ಸಚಿವೆ ಉಮಾಶ್ರೀ ಅವರು ಪ್ರಧಾನ ಮಾಡಿದ್ದರು. ಹೀಗಾಗಿ ಮಲ್ಲಿಕಾ ಘಂಟಿಯವರಿಗೆ ಪ್ರಶಸ್ತಿ ಸ್ವೀಕರಿಸುವ ನೈತಿಕತೆಯಿಲ್ಲ ಎನ್ನುವ ರೀತಿಯಲ್ಲಿ ಸೋಮನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಬರೆದುಕೊಂಡಿದ್ದರು.

    ಈ ಫೇಸ್‍ಬುಕ್ ಪೋಸ್ಟ್ ನೋಡಿದ್ದ ಕಮಲಾಪುರ ಠಾಣಾ ಪೊಲೀಸರು ಯಾವ ದೂರು ದಾಖಲಾಗದಿದ್ದರೂ ಸೋಮನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಇಂದು ಸಿದ್ದಗಂಗಾ ಶ್ರೀಗಳಿಗೆ `ಭಗವಾನ್ ಮಹಾವೀರ ಶಾಂತಿ’ ಪ್ರಶಸ್ತಿ ಪ್ರದಾನ

    ಇಂದು ಸಿದ್ದಗಂಗಾ ಶ್ರೀಗಳಿಗೆ `ಭಗವಾನ್ ಮಹಾವೀರ ಶಾಂತಿ’ ಪ್ರಶಸ್ತಿ ಪ್ರದಾನ

    ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಸಿದ್ದಗಂಗಾ ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ಸಂಜೆ ಮಠದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಅವರಿಗೆ ಮುಖ್ಯಮಂತ್ರಿಯವರು `ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುತ್ತಿರುವ ಪ್ರಶಸ್ತಿ ಇದಾಗಿದ್ದು, ಈ ವೇಳೆ ಸಚಿವೆ ಉಮಾಶ್ರೀ ಸಿಎಂ ಜೊತೆಗಿರಲಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್, ಜಯಚಂದ್ರ ಸೇರಿದಂತೆ ಹಲವು ಶಾಸಕರು ಭಾಗಿಯಾಗಲಿದ್ದಾರೆ.

  • ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಇಂದು ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದ ವೇದಿಕೆಯಲ್ಲಿ ಅಸ್ವಸ್ಥರಾಗಿ ಸುಸ್ತಾದಂತೆ ಕಂಡುಬಂದರು.

    ಇಂದು ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಖಂಡಿಸಿ, ಹುನಗುಂದ ತಾಲೂಕು ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಉಮಾಶ್ರೀ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಉಮಾಶ್ರೀ ಅಸ್ವಸ್ಥರಾಗುತ್ತಿದ್ದಂತೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಕಾಂಗ್ರೆಸ್ ಮುಖಂಡರು ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರು.

    ಉಮಾಶ್ರೀ ಅವರಿಗೆ ಯಾವುದೇ ತೊಂದರೆಯಿಲ್ಲ, ವಿಶ್ರಾಂತಿ ಅಗತ್ಯವಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಕುಸುಮಾ ಮಾಗಿ ಹೇಳಿದ್ದಾರೆ.