Tag: umashree

  • ನೆರೆ ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ, ನೀವಲ್ಲ: ಸರ್ಕಾರದ ವಿರುದ್ಧ ಉಮಾಶ್ರೀ ಕಿಡಿ

    ನೆರೆ ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ, ನೀವಲ್ಲ: ಸರ್ಕಾರದ ವಿರುದ್ಧ ಉಮಾಶ್ರೀ ಕಿಡಿ

    ಬಾಗಲಕೋಟೆ: ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಬನಹಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಗಾಂಧಿ ವೃತ್ತದಲ್ಲಿ ಟೈರ್ ದಹಿಸಿ ಆಕ್ರೋಶ ಹೊರ ಹಾಕಿದರು.

    ಈ ವೇಳೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ಸಂತ್ರಸ್ತರಿಗೆ ರಾಜ್ಯದ ಜನ ಅನೇಕ ಅವಶ್ಯಕ ವಸ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಬಟ್ಟೆ, ಊಟ ಉಪಹಾರ ಹಾಸಿಗೆ ಹೊದಿಕೆ ಕೂಡ ಇವೆ. ಆದರೆ ರಾಜ್ಯ, ಕೇಂದ್ರ ಸರ್ಕಾರ ಏನೂ ಮಾಡಲಿಲ್ಲ. ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ ನೀವಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

  • ನಮ್ಮ ನಾಯಕರು ಬಳೆ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ: ಕರಂದ್ಲಾಜೆಗೆ ಉಮಾಶ್ರೀ ಪ್ರಶ್ನೆ

    ನಮ್ಮ ನಾಯಕರು ಬಳೆ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ: ಕರಂದ್ಲಾಜೆಗೆ ಉಮಾಶ್ರೀ ಪ್ರಶ್ನೆ

    – ಟಗರಿನ ವಿಷಯಕ್ಕೆ ಬಂದ್ರೆ ಗುದ್ದಲಿದೆ

    ಹುಬ್ಬಳ್ಳಿ: ನಮ್ಮ ನಾಯಕರು ಬಳೆ ಹಾಕಿಕೊಂಡರೆ, ನಿಮ್ಮ ನಾಯಕರು ಸೀರೆ ಉಡುತ್ತಾರಾ ಎಂದು ಮಾಜಿ ಸಚಿವೆ ಉಮಾಶ್ರೀ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದ್ದಾರೆ.

    ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವೆ, ಶೋಭಾ ಕರಂದ್ಲಾಜೆ ಅವರನ್ನು ಏನು ಮಾಡಬೇಕು? ಅಂತವರಿಗೆ ಮತ ಹಾಕಬೇಕಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದ ಅವರು, ಅವಳಿಗೆ ನಾಚಿಕೆ ಆಗಬೇಕು. ಒಂದು ಹೆಣ್ಣು ಮಗಳು ಹೇಗೆ ಇರಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

    ನಮ್ಮ ಸಾಧನೆ, ಯೋಜನೆಗಳನ್ನು ನಿಮ್ಮ ಮುಂದಿಟ್ಟು ಮತ ಕೇಳುತ್ತೇವೆ. ಇದು ಸರಿಯಾದ ದಾರಿ. ಆದರೆ ಧರ್ಮದಲ್ಲಿ ಬೆಂಕಿ ಹಚ್ಚಿ ನಾವು ಮತ ಕೇಳಿಲ್ಲ. ಸರ್ವಾಧಿಕಾರಿ ಧೋರಣೆ ಮೂಲಕ ಮತ ಕೇಳಿ ಪಡೆಯುವುದು ಬಿಜೆಪಿಯವರ ಕೆಲಸ. ಸೈನಿಕರ ಸಾವಿನ ಮೇಲೆ ಮತ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ, ಮುಂದೆ ಕೂಡ ಮಾಡುವುದಿಲ್ಲ. ಅವರ ಬಾಯಿಂದ ಹೊಲಸು ಪದಗಳೇ ಬರುತ್ತವೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರ ಬಾಯಲ್ಲಿ ಹೂಗಳೇ ಉದುರುತ್ತವೆ. ಆನೆ ಹೋಗುತ್ತಾ ಇರುತ್ತೆ, ಶ್ವಾನ ಬೋಗಳುತ್ತಾ ಇರುತ್ತೆ ಎಂದು ಉಮಾಶ್ರೀ ಅವರು ಬಿಜೆಪಿಯವರನ್ನು ನಾಯಿಗೆ ಹೋಲಿಸಿದರು.

    ಇದಕ್ಕೂ ಮುನ್ನ ಕುಂದಗೋಳ ತಾಲೂಕಿನ ಹೀರೆಗುಂಜಳ ಗ್ರಾಮದಲ್ಲಿ ಮಾತನಾಡಿದ ಉಮಾಶ್ರೀ ಅವರು, ಟಗರಿನ ವಿಷಯಕ್ಕೆ ಬಂದರೆ ಟಗರು ಗುದ್ದಲಿದೆ. ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಕೈಗೆ ಬಂಗಾರದ ಬಳೆ ತೊಡಿಸಬೇಕು. ಕಬ್ಬಿಣದ ಬಳೆ ಹಾಕಿಕೊಂಡು ಹೋಗುವುದು ಜೈಲಿಗೆ ಎಂದು ಹೇಳಿದರು.

    ಶೋಭಾ ಕರಂದ್ಲಾಜೆ ಹೇಳಿದ್ದೇನು?:
    ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಹೇಳಿದ್ದರು.

    ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನು ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನು ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಕೈಲಾಗದವರು ಮೈ ಪರಚಿಕೊಂಡರು ಎನ್ನುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಅವರ ಪಕ್ಷದ ಸಾಧನೆ ಬಗ್ಗೆ ಹೇಳಲಿ, ಅದನ್ನು ಬಿಟ್ಟು ಬಾಯಿ ಬಿಟ್ಟರೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಾರೆ ಎಂದು ಹರಿಹಾಯ್ದಿದ್ದರು.

  • ಬಡವರಿಗೆ ದೊಡ್ಡ ಆಸ್ತಿಯನ್ನ ಕಳೆದುಕೊಂಡತಾಗಿದೆ: ಉಮಾಶ್ರೀ

    ಬಡವರಿಗೆ ದೊಡ್ಡ ಆಸ್ತಿಯನ್ನ ಕಳೆದುಕೊಂಡತಾಗಿದೆ: ಉಮಾಶ್ರೀ

    ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ಅಗಲಿಕೆಯಿಂದ ಬಡವರಿಗೆ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಸಂತಾಪ ಸೂಚಿಸಿದ್ದಾರೆ.

    ಶಿವಳ್ಳಿ ಅವರ ಪಾರ್ಥಿವ ಶರೀರದ ದರ್ಶನ ಪಡೆ ಬಳಿಕ ಮಾಧ್ಯಮಗಳ ಜೊತೆ ಮಾಡನಾಡಿದ ಉಮಾಶ್ರೀ, ಪೌರಾಡಳಿತ ಸಚಿವ ಶಿವಳ್ಳಿ ಅವರು ಬಹುದೊಡ್ಡ ಸಾಧನೆಯನ್ನು ಮಾಡಿ ಇಂತಹ ದೊಡ್ಡ ಪದವಿಯನ್ನು ಹೊಂದಿದ್ದರು. ಶಿವಳ್ಳಿ ಅವರು ಗ್ರಾಮೀಣ ಭಾಗದಿಂದ ಬಂದ ಅಪ್ಪಟ ಗ್ರಾಮೀಣ ಸೊಗಡಾಗಿದ್ದರು. ಇವರು ಕಲೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಜನಪದ ಸೊಗಡು ಮತ್ತು ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಿದ್ದರು ಎಂದು ಹೇಳಿದರು.

    ಶಿವಳ್ಳಿ ಅವರು ತುಂಬಾ ಕಷ್ಟ ಮತ್ತು ಬಡತನದಿಂದ ಬಂದಂತಹ ಬಹುದೊಡ್ಡ ಪ್ರತಿಭೆ. ನನ್ನ ಬಗ್ಗೆಯೂ ಅವರು ತುಂಬಾ ಪ್ರೀತಿ ಮತ್ತು ಗೌರವವನ್ನು ಇಟ್ಟುಕೊಂಡಿದ್ದರು. ಅವರು ನನ್ನನ್ನು ಅಕ್ಕಾ ಎಂದು ಕರೆಯುತ್ತಿದ್ದರು. ಇವತ್ತು ಶಿವಳ್ಳಿ ಅವರನ್ನು ಕಳೆದುಕೊಂಡಿದ್ದು, ಬಡವರಿಗೆ ದೊಡ್ಡ ಆಸ್ತಿಯನ್ನ ಕಳೆದುಕೊಂಡತೆ ಆಗಿದೆ ಎಂದು ಹೇಳುತ್ತಾ ಭಾವುಕರಾದರು.

    ಶಿವಳ್ಳಿ ಅವರು ಬಡವರ ಮೇಲೆ ತುಂಬಾ ಗೌರವ ಇಟ್ಟುಕೊಂಡಂತವರು. ಅವರನ್ನು ಕಳೆದುಕೊಂಡಿದ್ದರಿಂದ ನಮ್ಮ ಪಕ್ಷಕ್ಕೆ ತುಂಬಾ ಹಾನಿಯಾಗಿದೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಜೊತೆಗೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಉಮಾಶ್ರೀ ಹೇಳಿದರು.

  • ಕನ್ನಡ ಸಂಘಟನೆಗಳಿಗೆ ಹಣ ಬಿಡುಗಡೆ – ಸಿದ್ದರಾಮಯ್ಯ, ಉಮಾಶ್ರೀ ವಿರುದ್ಧ ಎಸಿಬಿಗೆ ದೂರು

    ಕನ್ನಡ ಸಂಘಟನೆಗಳಿಗೆ ಹಣ ಬಿಡುಗಡೆ – ಸಿದ್ದರಾಮಯ್ಯ, ಉಮಾಶ್ರೀ ವಿರುದ್ಧ ಎಸಿಬಿಗೆ ದೂರು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಅಧಿಕಾರ ದುರುಪಯೋಗ ಆರೋಪದಡಿಯಲ್ಲಿ ಎಸಿಬಿಗೆ ದೂರು ಸಲ್ಲಿಕೆಯಾಗಿದೆ.

    ಸಿದ್ದರಾಮಯ್ಯ ಮತ್ತು ಉಮಾಶ್ರೀ ಯಾವುದೇ ದಾಖಲೆಗಳನ್ನ ಪಡೆಯದೇ ಎರಡು ಕನ್ನಡ ಸಂಘಟನೆಗಳಿಗೆ ಹಣ ಬಿಡುಗಡೆಗೆ ಶಿಫಾರಸ್ಸು ಮಾಡಿದ್ದನ್ನು ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಆರೋಪಿಸಿ ಇವರ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

    ನಾರಾಯಣ ಗೌಡ ನೇತೃತ್ವದ ಕರವೇ ವಿಶ್ವ ಕನ್ನಡ ಜಾಗೃತಿ ಸಮಾವೇಶಕ್ಕೆ ಹಾಗೂ ವಾಟಾಳ್ ನಾಗರಾಜ್ ಅವರ ಕರ್ನಾಟಕ ರಾಜೋತ್ಸವ ಸಮಿತಿಗೆ ಹಣ ನೀಡಿದ್ದಾರೆ. ವಿಶ್ವ ಜಾಗೃತಿ ಸಮಾವೇಶಕ್ಕೆ 2016-17ರಲ್ಲಿ 50 ಲಕ್ಷ ರೂ., 2017-18ರಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಸಮಿತಿಗೆ 2016-17 ರಲ್ಲಿ 50 ಲಕ್ಷ ರೂ. 2017-18 ರಲ್ಲಿ 60 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ನಾಗೇಶ್ ಆರೋಪ ಮಾಡಿದ್ದಾರೆ.

    ಹಣ ಬಿಡುಗಡೆಗೆ ಮುನ್ನ ಹಾಗೂ ನಂತರ ಯಾವುದೇ ದಾಖಲೆ ಪಡೆಯಲಿಲ್ಲ. ಕೇವಲ ಸಿಎಂ ಶಿಫಾರಸ್ಸಿನ ಆಧಾರದ ಮೇಲೆ ಹಣ ಬಿಡುಗಡೆಯಾಗಿದೆ. ಕನ್ನಡಪರ ಹೋರಾಟ ಮಾಡುವ ಸಂಘಟನೆಗಳು ತುಂಬಾ ಇವೆ. ಅವುಗಳಿಗೂ ಹಣ ಬಿಡುಗಡೆ ಮಾಡಬೇಕು. ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಹಣವು ದುರುಪಯೋಗವಾಗಿದ್ದು, ಅವರವರ ವೈಯಕ್ತಿಕ ವಿಚಾರಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ನಾಗೇಶ್ ಆರೋಪಿಸಿದ್ದಾರೆ.

    ಯಾವ ಉದ್ದೇಶಕ್ಕೆಂದು ಧನ ಸಹಾಯ ಪಡೆದಿದ್ದಾರೋ ಅದಕ್ಕೆ ಬಳಕೆ ಮಾಡಿರುವ ಬಗ್ಗೆ ಯಾವುದೇ ಸೂಕ್ತ ದಾಖಲೆಗಳನ್ನ ಒದಗಿಸಿಲ್ಲ. ಅಷ್ಟೇ ಅಲ್ಲದೇ ಅದಕ್ಕೆ ಸರಿಯಾದ ಲೆಕ್ಕವನ್ನು ಸಹ ಕೊಡಲಿಲ್ಲ. ಆದ್ದರಿಂದ ಈ ಬಗ್ಗೆ ಸರಿಯಾದ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಾಗೇಶ್ ಅವರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿ ಮೋದಿ ಭಾಷಣಕ್ಕೆ ಸಚಿವೆ ಉಮಾಶ್ರೀ ಆಕ್ಷೇಪ !

    ಪ್ರಧಾನಿ ಮೋದಿ ಭಾಷಣಕ್ಕೆ ಸಚಿವೆ ಉಮಾಶ್ರೀ ಆಕ್ಷೇಪ !

    ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಪ್ರಧಾನಿ ಮೋದಿ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ವಿರೋಧ ಪಕ್ಷದವರು. ಅವರು ನಮ್ಮನ್ನು ಹೊಗಳಲಿ ಎಂದು ನಾವು ಬಯಸುವುದಿಲ್ಲ. ಆದರೆ ಶೇ.10 ಸರ್ಕಾರ ಎಂದು ಯಾವುದೇ ದಾಖಲೆಗಳು ಇಲ್ಲದ ಮಾತನಾಡಿದ್ದಾರೆ. ಇದು ಪ್ರಧಾನಿ ಆದವರಿಗೆ ಶೋಭೆಯಲ್ಲ. ನಮ್ಮ ಸರ್ಕಾರವನ್ನು ನಂಗನಾಚ್ ಸರ್ಕಾರ ಎನ್ನುವ ಮೂಲಕ ಕಳಪೆ ಪದ ಬಳಕೆ ಮಾಡಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ಹೇಳಿದ್ರು.

    ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ತೇರದಾಳ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧೆ. ಕ್ಷೇತ್ರ ಬದಲಾವಣೆಗೆ ಕಾರಣಗಳಿಲ್ಲ ಎಂದು ಉಮಾಶ್ರೀ ಪ್ರತಿಕ್ರಿಯೆ ನೀಡಿದ್ರು.

    ನಾಟಕ ಅಕಾಡೆಮಿ ಲೋಗೋ ಬದಲಾವಣೆ ಮಾಡುವುದಿಲ್ಲ. ಪ್ರಶಸ್ತಿ ಫಲಕದಲ್ಲಿ ಮಾತ್ರ ಬದಲಾವಣೆ ಆಗಿದೆ ಎಂದು ಸಚಿವೆ ತಿಳಿಸಿದ್ರು.

  • 62ನೇ ರಾಜ್ಯೋತ್ಸವ ಪ್ರಶಸ್ತಿಗೆ 1200 ಅರ್ಜಿ ಸಲ್ಲಿಕೆ

    62ನೇ ರಾಜ್ಯೋತ್ಸವ ಪ್ರಶಸ್ತಿಗೆ 1200 ಅರ್ಜಿ ಸಲ್ಲಿಕೆ

    ಬೆಂಗಳೂರು: 62ನೇ ರಾಜ್ಯೋತ್ಸವ ಪ್ರಶಸ್ತಿಗೆ ಸುಮಾರು 1200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

    ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಹಲವಾರು ಸಾಧಕರಿಂದ ಸುಮಾರು 1200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

    ನವೆಂಬರ್ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಾರಿ 62 ನೇ ವರ್ಷದ ರಾಜ್ಯೋತ್ಸವ ಆಚರಣೆ ಇರುವುದರಿಂದ 62 ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತೀರ್ಮಾನಿಸಿದೆ.

    ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲು ಸಚಿವೆ ಉಮಾಶ್ರೀ ಅವರ ಅಧ್ಯಕ್ಷತೆಯಲ್ಲಿ 13 ತಜ್ಞರ ಸಮಿತಿ ನೇಮಕ ಮಾಡಲಾಗಿದೆ. ಸಮಿತಿಯ ಮುಂದೆ ಪ್ರಶಸ್ತಿಗಾಗಿ 1200 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಅರ್ಜಿಗಳನ್ನ ನೋಡಿ ಪ್ರಶಸ್ತಿ ಆಯ್ಕೆ ಸಮಿತಿಯವರು ಸುಸ್ತಾಗಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳು ಈ ಪ್ರಶಸ್ತಿಯನ್ನು ನೀಡುತ್ತಾರೆ. ರ್ಯಾಜೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ 20 ಗ್ರಾಂ ಚಿನ್ನದ ಪದಕದ ಜೊತೆಗೆ 1 ಲಕ್ಷ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

    ಸಮಿತಿಯ ಸದಸ್ಯರು: 2017ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಗಣ್ಯರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ. ಈ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಧ್ಯಕ್ಷರು, ಡಾ.ಲೀಲಾ ಅಪ್ಪಾಜಿ, ಡಾ.ಎಲ್.ಹನುಮಂತಯ್ಯ, ಪ.ಸ.ಕುಮಾರ್, ಪ್ರೋ. ಸಿಕೆ ನಾವಲಗಿ, ಕೆ.ಮುನಿಯಪ್ಪ, ಕೆ.ರಾಮಮೂರ್ತಿರಾವ್, ಶ್ರೀಮತಿ ಸುಭದ್ರಮ್ಮ ಮನ್ಸೂರ್, ಪ್ರೋ.ಕೆ.ಇ.ರಾಧಾಕೃಷ್ಣ, ಪ್ರೋ.ಜಿಕೆ.ವೀರೇಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು, ಶ್ರೀ ನರಸಿಂಹಲು ವಡಿವಟ್ಟಿ, ಶ್ರೀ ಮುರುಳಿ ಕಡೇಕರ್ ಹಾಗೂ ಶ್ರೀ ಬೋಳುವಾರು ಮಹಮ್ಮದ್ ಕುಂಞ ಇವರುಗಳನ್ನೊಳಗೊಂಡು ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

  • ಬಿಜೆಪಿಯಿಂದ ತೇರದಾಳದಲ್ಲಿ ಅ.6ಕ್ಕೆ ಬೃಹತ್ ನೇಕಾರ ಸಮಾವೇಶ

    ಬಿಜೆಪಿಯಿಂದ ತೇರದಾಳದಲ್ಲಿ ಅ.6ಕ್ಕೆ ಬೃಹತ್ ನೇಕಾರ ಸಮಾವೇಶ

    ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆಂಬ ಕೂಗು ಕೇಳಿ ಬಂದಿರುವ ಬೆನ್ನಲ್ಲೇ ಶುಕ್ರವಾರ ಬನಹಟ್ಟಿಯಲ್ಲಿ ಬೃಹತ್ ನೇಕಾರ ಸಮಾವೇಶ ನಡೆಯಲಿದೆ.

    ತೇರದಾಳ ಮತಕ್ಷೇತ್ರದ ಬನಹಟ್ಟಿಯಲ್ಲಿ ಬಿಜೆಪಿ ಪಕ್ಷ ನೇಕಾರರ ಸಮಾವೇಶವನ್ನು ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಬನಹಟ್ಟಿ ನಗರದ ಎಸ್.ಆರ್.ಎ ಕಾಲೇಜು ಮೈದಾನದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ನೇಕಾರ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ.

    ಯಡಿಯೂರಪ್ಪ ತೇರದಾಳದಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ನೇಕಾರ ಸಮಾವೇಶ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ನೇಕಾರರ ಬೆಂಬಲ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ.

    ಈ ಸಮಾವೇಶದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಸೇರಿದಂತೆ ವಿವಿಧ ಜಿಲ್ಲೆಗಳ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.

    ಇನ್ನೂ, ನೇಕಾರ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಸಚಿವೆ ಉಮಾಶ್ರೀ ತವರು ನೆಲದಲ್ಲೇ ಬಿಜೆಪಿ, ನೇಕಾರರ ಮತ ಸೆಳೆಯಲು ಬೃಹತ್ ನೇಕಾರರ ಸಮಾವೇಶಕ್ಕೆ ಮುಂದಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಇತ್ತ ನೇಕಾರರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಬಿಜೆಪಿ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಬೀಸಲಿದೆ ಎಂದು ಮಾಜಿ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.

  • ಕಾಂಗ್ರೆಸ್ ಅಂಜೋದಕ್ಕೆ ಅಮಿತ್ ಶಾ ದೆವ್ವನೋ, ಭೂತನೋ?: ಉಮಾಶ್ರೀ

    ಕಾಂಗ್ರೆಸ್ ಅಂಜೋದಕ್ಕೆ ಅಮಿತ್ ಶಾ ದೆವ್ವನೋ, ಭೂತನೋ?: ಉಮಾಶ್ರೀ

    ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೆವ್ವನೋ ಅಥವಾ ಭೂತನೋ? ಅವ್ರಿಗೆ ಕಾಂಗ್ರೆಸ್ ಪಕ್ಷ ಅಂಜುವ ಅಗತ್ಯವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

    ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 71ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇತಿಹಾಸವುಳ್ಳ ಬಹುದೊಡ್ಡ ಹಾಗೂ ದೊಡ್ಡ ಆಯುಷ್ಯವುಳ್ಳಂತಹ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಇದ್ದಾಗ ಬಿಜೆಪಿ ಪಕ್ಷ ಇರಲಿಲ್ಲ. ಹೀಗಾಗಿ ಬಿಜೆಪಿ ಪಕ್ಷದ ಅಮಿತ್ ಶಾ ಅವರಿಗೆ ಇಂತಹ ಒಂದು ದೊಡ್ಡ ಪಕ್ಷ ಅಂಜೋದು ಅಂದ್ರೆ ಅದೊಂದು ಹಾಸ್ಯಾಸ್ಪದ ಹೇಳಿಕೆಯಾಗುತ್ತದೆ.

    ಅಮಿತ್ ಶಾ ಅವರಿಗೆ ಅಂಜೋದಕ್ಕೆ ಅವರೇನು ದೆವ್ವನೋ ಅಥವಾ ಭೂತವೋ? ಅವರು ಒಬ್ಬ ಮನುಷ್ಯನೇ. ರಾಜಕೀಯದಲ್ಲಿ ಅವರೊಬ್ಬ ನಾಯಕ ಅಷ್ಟೇ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ನಾಯಕರಿದ್ದಾರೆ. ನಮ್ಮ ಪರವಾಗಿ ಜನ ಇದ್ದಾರೆ. ಹೀಗಾಗಿ ಅಮತ್ ಶಾ ರಂತಹ ನೂರು, ಸಾವಿರ ಅಥವಾ ಲಕ್ಷ ಜನ ಬಂದ್ರೂ ಕಾಂಗ್ರೆಸ್ ಪಕ್ಷ ಅಂಜುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ರು.

    ಅಮಿತ್ ಶಾ ಅವರು ಬರೋದಿಕ್ಕಿಂತ ಮೊದಲೇ ರಾಹುಲ್ ಗಾಂಧಿ ಕಾರ್ಯಕ್ರಮ ಕರ್ನಾಟಕದಲ್ಲಿ ಫಿಕ್ಸ್ ಆಗಿತ್ತು. ಧರಂ ಸಿಂಗ್ ಅವರು ತೀರಿಕೊಂಡ ಕಾರಣ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಅಲ್ಲದೇ ಆಗಸ್ಟ್ ತಿಂಗಳಿನಲ್ಲೇ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡುತ್ತೇವೆ ಅಂತ ಮಾತು ಕೊಟ್ಟಿದ್ದೆವು. ಹೀಗಾಗಿ ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಸಂಬಂಧವೇ ಇಲ್ಲ ಅಂದ್ರು.

    ಇದೇ ವೇಳೆ ನಟ ಉಪೇಂದ್ರ ರಾಜಕೀಯ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಬೇಕಾದ್ರೂ ರಾಜಕೀಯ ಪ್ರವೇಶ ಮಾಡಬಹುದು. ಆದ್ರೆ ಉಪೇಂದ್ರ ಅವ್ರ ರಾಜಕೀಯ ಎಂಟ್ರಿ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಸಿನಿಮಾದವರಾದ ಉಪೇಂದ್ರ ಎಕ್ಸ್ ಕ್ಲೂಸಿವ್ ಆಗಿ ರಾಜಕೀಯ ಪ್ರವೇಶ ಮಾಡ್ತಿದ್ದಾರೆ. ಅವ್ರ ಸಾಧಕ-ಬಾಧಕ ಮುಂದಿನ ದಿನಗಳಲ್ಲಿ ತಿಳಿಯುತ್ತೆ ಅಂತ ಹೇಳಿದ್ರು.

  • ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್- ಸಚಿವೆ ಉಮಾಶ್ರೀ ಆಪ್ತನಿಂದ ಕೃತ್ಯ

    ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್- ಸಚಿವೆ ಉಮಾಶ್ರೀ ಆಪ್ತನಿಂದ ಕೃತ್ಯ

    ಬಾಗಲಕೋಟೆ: ಆಸ್ತಿ ವಿಚಾರವಾಗಿ ನಡೆದ ಕಲಹದ ಹಿನ್ನೆಲೆಯಲ್ಲಿ ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.

    ಶಂಕರ್ ಉರ್ಫ್ ರಾಜಶೇಕರ್ ಸೋರಗಾವಿ ಸಹೋದರನ ಕುಟುಂಬಸ್ಥರನ್ನ ಕಿಡ್ನ್ಯಾಪ್ ಮಾಡಿಸಿರುವ ವ್ಯಕ್ತಿ. ಮೂಲತಃ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಶಂಕರ್ ಸೋರಗಾವಿ, ಸಚಿವೆ ಉಮಾಶ್ರೀ ಆಪ್ತ ಸಹ ಆಗಿದ್ದಾನೆ.

    ಈ ಹಿಂದೆ ಆಸ್ತಿ ವಿಚಾರವಾಗಿ ಅಣ್ಣ ಶಂಕರ್ ಹಾಗೂ ತಮ್ಮ ಯಶವಂತ್ ಸೋರಗಾವಿ ಮಧ್ಯೆ ಕಲಹವಾಗಿತ್ತು. ಅಲ್ಲದೆ ಶಂಕರ್ ಯಶವಂತ ಹಾಗೂ ಮನೆಯವರ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಈ ಬಗ್ಗೆ ಕಳೆದ ವರ್ಷ ಆಕ್ಟೋಬರ್ 14ರಂದು ಹಲ್ಲೆಗೊಳಗಾದ ಯಶವಂತ್ ಕುಟುಂಬದವರು ಆಗಿನ ಪೊಲೀಸ್ ವರೀಷ್ಠಾಧಿಕಾರಿ ಎಂಎನ್ ನಾಗರಾಜ್ ಬಳಿ ದುಗುಡ ಹೇಳಿಕೊಂಡು ದೂರು ದಾಖಲಿಸಿದ್ದರು.

    ಆದ್ರೆ ಕಳೆದ ತಡರಾತ್ರಿ ಯಶವಂತ ಅವರ ಮನೆಗೆ ನುಗ್ಗಿದ್ದ ಅಪಹರಣಕಾರರು ಯಶವಂತ್ ಸೋರಗಾವಿ, ಪತ್ನಿ ಮಂಜುಳಾ, ಮಕ್ಕಳಾದ ವಿಶಾಲ್ ಪ್ರಶಾಂತ್ ಹಾಗೂ ವಿದ್ಯಾಶ್ರೀ ಅವರ ಮೇಲೆ ಹಲ್ಲೆ ನಡೆಸಿ, ಕ್ರೂಸರ್ ವಾಹನದಲ್ಲಿ ಅವ್ರನ್ನೆಲ್ಲ ಹೊತ್ತೊಯ್ದಿದ್ದಾರೆ. ಈ ಎಲ್ಲ ಕೃತ್ಯಕ್ಕೆ ಯಶವಂತ ಅಣ್ಣ ಶಂಕರ್ ಸೋರಗಾವಿ ಕಾರಣ ಎಂದು ಸ್ವತಃ ಯಶವಂತ್ ತಾಯಿ ಗೌರಮ್ಮ ಹೇಳಿದ್ದಾರೆ.

    ಸದ್ಯ ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗೌರಮ್ಮ ಅವರು ಪ್ರಕರಣ ದಾಖಲಿಸಿದ್ದು, ಕಿಡ್ನ್ಯಾಪ್ ಆದ ಯಶವಂತ್ ಮನೆಯವರ ಹುಡುಕಾಟ ನಡೆಸಿದ್ದಾರೆ.

  • ಮಾಂಗಲ್ಯದ ಹವಳಗಳನ್ನು ಒಡೆಯುವ ಕಾರ್ಯಕ್ಕೆ ಕಿವಿಗೊಡಬೇಡಿ: ಸಚಿವೆ ಉಮಾಶ್ರೀ

    ಮಾಂಗಲ್ಯದ ಹವಳಗಳನ್ನು ಒಡೆಯುವ ಕಾರ್ಯಕ್ಕೆ ಕಿವಿಗೊಡಬೇಡಿ: ಸಚಿವೆ ಉಮಾಶ್ರೀ

    ಬೆಂಗಳೂರು: ಮಾಂಗಲ್ಯ ಸರದಲ್ಲಿನ ಹವಳವನ್ನ ಒಡೆಯುವ ಕಾರ್ಯಕ್ಕೆ ಮಹಿಳೆಯರು ಯಾರು ಕಿವಿಗೊಡಬೇಡಿ. ಇದನ್ನ ಯಾರೋ ದುರುದ್ದೇಶದಿಂದ ಅಪಪ್ರಚಾರ ಮಾಡ್ತಿದ್ದಾರೆ. ಇದರ ಹಿಂದೆ ಹುನ್ನಾರಗಳಿರಬಹುದು ಎಂದು ಕನ್ನಡ ಸಂಸೃತಿ ಇಲಾಖೆಯ ಸಚಿವೆ ಉಮಾಶ್ರೀ ಹೇಳಿದ್ದಾರೆ.

    ಆಷಾಡ ಮಾಸ ದೋಷ ಇದ್ದಿದ್ದೆ ಆಗಿದ್ರೆ, ಹವಳವನ್ನ ತೆಗೆದಿಡಿ, ಆಷಾಡ ಮಾಸ ಮುಗಿದ ಬಳಿಕ ಮತ್ತೆ ಹಾಕಿಕೊಳ್ಳಿ ಅಂತಾ ಹೇಳಬಹುದಿತ್ತು. ಹವಳವನ್ನ ಒಡೆದು ಹಾಕಿ ಅಂತಾ ಸುದ್ದಿ ಹರಿಬಿಡ್ತಿರುವ ಹಿನ್ನೆಲೆ ನೋಡಿದ್ರೆ ಇದನ್ನ ಬೇಕಂತಲೇ ಮಾಡ್ತಿದ್ದಾರೆ ಎಂದು ಸಚಿವೆ ಉಮಾಶ್ರೀ ಶಂಕೆ ವ್ಯಕ್ತಪಡಿಸಿದರು.

    ಈಗ ಮುಂದೆ ಯಾರೆಲ್ಲಾ ಮಾಂಗಲ್ಯ ಒಡೆದು ಹಾಕಬೇಕೆಂದಿದ್ದರೋ, ಅವರೆಲ್ಲ ಮಾಂಗಲ್ಯ ಹಾಕಿಕೊಳ್ಳಿ. ಏನೂ ಆಗೋಲ್ಲ. ನಾನು ಈಗಾಗಲೇ ಕೊಪ್ಪಳ, ಬಳ್ಳಾರಿ, ಚಿತ್ರದುರ್ಗದಲ್ಲಿ ಡಿಸಿಗಳ ಜೊತೆ ಮಾತನಾಡಿದ್ದೇನೆ. ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅಧಿಕಾರಿಗಳು ಕಾನುನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ರು.