Tag: umashree

  • ಈ ಚುನಾವಣೆಯಲ್ಲಿ ಮಹಿಳೆಯರಿಗೇ ಹೆಚ್ಚು ಟಿಕೆಟ್ ಕೊಡ್ಬೇಕು – ಕಾಂಗ್ರೆಸ್ ಹೈಕಮಾಂಡ್‌ಗೆ ಉಮಾಶ್ರೀ ಮನವಿ

    ಈ ಚುನಾವಣೆಯಲ್ಲಿ ಮಹಿಳೆಯರಿಗೇ ಹೆಚ್ಚು ಟಿಕೆಟ್ ಕೊಡ್ಬೇಕು – ಕಾಂಗ್ರೆಸ್ ಹೈಕಮಾಂಡ್‌ಗೆ ಉಮಾಶ್ರೀ ಮನವಿ

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಅತಿಹೆಚ್ಚು ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ (Umashree) ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರಲ್ಲಿ ಮನವಿ ಮಾಡಿದ್ದಾರೆ.

    ಕಾಂಗ್ರೆಸ್ ಮಹಿಳಾ ಘಟಕದಿಂದ (Karnataka Pradesh Mahila Congress) ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ `ನಾ ನಾಯಕಿ’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ಬೆಂಗಳೂರು ಅರಮನೆ ಮೈದಾನದಲ್ಲಿ (Bengaluru Palace Ground) ಜನವರಿ 16ರಂದು `ನಾ ನಾಯಕಿ’ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲದೇ ಕಾಂಗ್ರೆಸ್‌ನ ಮಾಜಿ ಮಹಿಳಾ ಶಾಸಕರು, ಹಾಲಿ ನಾಯಕಿರೂ ಸೇರಿದಂತೆ ಎಲ್ಲರೂ ಬರಲಿದ್ದಾರೆ. ಇದೇ ವೇಳೆ ಮಹಿಳಾ ಘಟಕದ ಹಲವು ಬೇಡಿಕೆಗಳನ್ನ ಮುಂದಿಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಾಲಿಗೂ ಬೇಗ ಮದುವೆ ಆಗೋಕೆ ಹೇಳಿದ್ದೇನೆ: ವಸಿಷ್ಠ ಸಿಂಹ

    ಈ ಬಾರಿ ವಿಧಾನಸಭೆ ಚುನಾವಣೆಗೆ 109 ಮಹಿಳೆಯರು ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ್ದಾರೆ. ಈ ಬಾರಿ ಕಾಂಗ್ರೆಸ್ ನಿಂದ ಹೆಚ್ಚು ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಬೇಕು. ಈ ಬಗ್ಗೆ `ನಾ ನಾಯಕಿ’ ಪ್ರಿಯಾಂಕಾ ಗಾಂಧಿ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಮಹಿಳಾ ಘಟಕದ (Karnataka Pradesh Mahila Congress) ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amarnath) ಮಾತನಾಡಿ, ಮಹಿಳೆಯರಿಗಾಗಿ ವಿಶೇಷ ಹಾಗೂ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಲ್ಲಾಜಮ್ಮ ಸೇರಿದಂತೆ ಇತರ ಮಹಿಳಾ ನಾಯಕಿಯರು ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

    ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

    ಹಾಸನ: ಭಾನುವಾರ ವಿಶ್ವ ತಾಯಂದಿರ ದಿನಾಚರಣೆ ನಡೆಯಿತು. ಈ ದಿನವನ್ನು ಹಾಸನದ ಅರಕಲಗೂಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಿನಿಮಾ ನಟ-ನಟಿಯರು ಭಾಗವಹಿಸಿದ್ರು. ಆದ್ರೆ ಕಾರ್ಯಕ್ರಮದಲ್ಲಿ ಆದ ಸಣ್ಣ ಎಡವಟ್ಟಿನಿಂದ ತಾಯಿ, ಮಗು ಕಣ್ಣೀರಿಡುವಂತಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.

    ಸುತ್ತಲೂ ಸಾವಿರಾರು ಜನ. ಸಾವಿರಾರು ಜನರ ನೂಕುನುಗ್ಗಲಲ್ಲಿ ನಿಂತ ತಾಯಿಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ಎತ್ತಿಹಿಡಿದು ಕೂಗಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಶ್ರೀಧರ್‌ಗೌಡ ಭಾನುವಾರ ವಿಶ್ವ ತಾಯಂದಿರ ದಿನ ಕಾರ್ಯಕ್ರಮ ಆಯೋಜನೆ ಮಾಡಿದ್ರು.

    ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವೆ ಉಮಾಶ್ರೀ, ಚಲನಚಿತ್ರ ನಟಿಯರಾದ ಸಾನ್ವಿ ಶ್ರೀವಾತ್ಸವ್, ಮಿಲನನಾಗರಾಜ್, ಸಾಧುಕೋಕಿಲ ಸೇರಿದಂತೆ ಹಲವರು ಭಾಗವಹಿಸಿದ್ರು. ಈ ಕಾರಣದಿಂದ ಸಹಜವಾಗಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ತಾಯಂದಿರು ಭಾಗವಹಿಸಿದ್ರು. ಅವರಿಗೆ ಸೀರೆ ಹಂಚಿಕೆ ಮಾಡಲು ಮುಂದಾದಾಗ ಜನಸಂದಣಿಯಲ್ಲಿ ಸಿಲುಕಿಕೊಂಡ ತಾಯಿ-ಮಗು ನರಳಾಡಿದರು. ಇದನ್ನೂ ಓದಿ:  ಕಾಂಗ್ರೆಸ್ ಕಾವೇರಿ, ಮೇಕೆದಾಟು ವಿಚಾರ ತಂದು ತಮಿಳುನಾಡು, ಕರ್ನಾಟಕ ನಡುವೆ ಬಿರುಕು ಮೂಡಿಸಿದೆ: ಅಣ್ಣಾಮಲೈ 

    ಸೀರೆ ಹಂಚಲು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಸೀರೆ ಹಂಚಿಕೆ ವಿಷ್ಯ ತಿಳಿದು ಒಮ್ಮೆಲೆ ಸಾವಿರಾರು ಮಹಿಳೆಯರು ಮುಗಿಬಿದ್ದ ಪರಿಣಾಮ, ಮಧ್ಯದಲ್ಲಿ ಸಿಲುಕಿದ ತಾಯಿ ಹಾಗೂ ಅಲ್ಲೇ ಇದ್ದ ಮಗು ಹೊರಬರಲಾರದೆ ಕಂಗಾಲಾಗಿ ಹೋದ್ರು. ಮಗುವನ್ನು ಹಿಡಿದಿದ್ದವರು ಕೈಮೇಲೆತ್ತಿ ಮಗು ರಕ್ಷಣೆಗೆ ಮುಂದಾದ್ರು. ಈ ಸನ್ನಿವೇಶ ಒಂದು ಕ್ಷಣ ಭಯದ ವಾತಾವರಣವನ್ನೇ ಮೂಡಿಸಿತ್ತು.

    ಅಂತಿಮವಾಗಿ ಗುಂಪಿನಲ್ಲಿ ಸಿಲುಕಿದ್ದವರು ಸೇಫಾಗಿ ಹೊರ ಬಂದಿದ್ದಾರೆ. ಆದರೆ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿದಾಗ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾರ್ಯಕ್ರದಲ್ಲಿ ಇಂತಹ ಅವಾಂತರ ತಪ್ಪಿದ್ದಲ್ಲ ಅಂತಾನೆ ಹೇಳಬಹುದು. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್

  • ಉಮಾಶ್ರೀಗೆ ಯಾವ ಸಮಯದಲ್ಲಿ ಯಾವ ಪಾತ್ರ ಮಾಡ್ಬೇಕು ಅನ್ನೋದು ಗೊತ್ತಿದೆ: ಸಿದ್ದು ಸವದಿ

    ಉಮಾಶ್ರೀಗೆ ಯಾವ ಸಮಯದಲ್ಲಿ ಯಾವ ಪಾತ್ರ ಮಾಡ್ಬೇಕು ಅನ್ನೋದು ಗೊತ್ತಿದೆ: ಸಿದ್ದು ಸವದಿ

    – ಪರಸಭೆ ಸದಸ್ಯೆ ನೂಕಾಟ- ತಳ್ಳಾಟ ಪ್ರಕರಣ
    – ಶಾಸಕ ಸೇರಿ 31 ಮಂದಿ ವಿರುದ್ಧ ಕೇಸ್ ದಾಖಲು

    ಬಾಗಲಕೋಟೆ: ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ-ನೂಕಾಟ ರಾಜಕೀಯ ದುರುದ್ದೇಶದಿಂದ ನಮ್ಮ ಹೆಸರು ಕೆಡಿಸಲು ನಡೆಸಿದ ಉಮಾಶ್ರೀ ಕುತಂತ್ರವಿದು. ಉಮಾಶ್ರೀಗೆ ಡ್ರಾಮಾ ಬರುತ್ತೆ ಆದರೆ ನನಗೆ ಬರುವುದಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಶಾಸಕ ಸಿದ್ದು ಸವದಿ ವ್ಯಂಗ್ಯವಾಡಿದ್ದಾರೆ.

    ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ ನೂಕಾಟ ಪ್ರಕರಣವಾಗಿ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ, ರಾಜಕೀಯ ದುರುದ್ದೇಶದಿಂದ ನಮ್ಮ ಹೆಸರು ಕೆಡಿಸಲು ಉಮಾಶ್ರೀ ಕುತಂತ್ರ ಇದಾಗಿದೆ. ಅವರ ನಿರ್ದೆಶನದ ನಾಟಕ ಇದಾಗಿದೆ. ಉಮಾಶ್ರೀಗೆ ಡ್ರಾಮಾ ಬರುತ್ತೆ ಆದರೆ ನನಗೆ ಬರುವುದಿಲ್ಲ. ಯಾವಾಗ ಯಾವ ಪಾತ್ರ ಮಾಡ ಬೇಕೆನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಪಾತ್ರವನ್ನು ಈಗ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಮಹಾಲಿಂಗಪೂರ ಪ್ರಕರಣಕ್ಕೂ ನಮಗೂ ಎಳ್ಳು ಕಾಳಿನಷ್ಟು ಸಂಬಂಧವಿಲ್ಲ. ಕಾಂಗ್ರೆಸ್ಸಿನವರಿಗೆ ದುಡ್ಡು ಹೆಚ್ಚಾಗಿದೆ. ಉಮಾಶ್ರೀ & ನಾಡಗೌಡ ಮಾಡುತ್ತಿರೋ ಕುತಂತ್ರ ಇದಾಗಿದೆ. ನೇರವಾಗಿ ಆಯ್ಕೆಯಾಗಿ ಬರುವಷ್ಟು ಶಕ್ತಿ ಇಲ್ಲ. ಹಿಂಬಾಗಿಲಿನಿಂದ ಅಧಿಕಾರ ಪಡೆಯೋಕೆ ಮುಂದಾಗಿದ್ದರು ಎಂದು ಹೇಳಿದ್ದಾರೆ.

    ಪುರಸಭಾ ಸದಸ್ಯೆಗೆ ಗರ್ಭಪಾತ ಆಗಿದೆ ಅನ್ನೋದೆಲ್ಲಾ ಬೋಗಸ್. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನಾವು ಸಹ ಪ್ರಕರಣ ಸಂಬಂಧ 35 ಜನರ ವಿರುದ್ಧ ಕೇಸ್ ದಾಖಲಿಸ್ತೇವೆ. ಜಾತಿ ನಿಂದನೆ ಸೇರಿದಂತೆ ಅವರಂತೆ ನಾವು ಸಹ ಕೇಸ್ ಹಾಕ್ತೇವೆ. ಈ ಗೊಂದಲ ಸೃಷ್ಟಿ ಆಗಿದ್ದು ನಮ್ಮಿಂದಲ್ಲ, ಕಾಂಗ್ರೆಸ್ ನವರಿಂದಾಗಿದೆ. ನಾನು ವಿಪ್ ಕೊಡಲು ನಿಂತಾಗ ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ. ಉದ್ದೇಶಪೂರ್ವಕವಾಗಿ ಅಲ್ಲ ಎಂದಿದ್ದಾರೆ.

    ನೂಕು ನುಗ್ಗಲಿನಲ್ಲಿ ಹೆಣ್ಮಕ್ಕಳು, ಗಂಡು ಮಕ್ಕಳು ಅನ್ನೋದೇ ಬರೋಲ್ಲ. ಆ ಘಟನೆಯಲ್ಲಿ ಎಳೆದುಕೊಂಡು ಬಂದಿದ್ದೇ ಕಾಂಗ್ರೆಸ್‍ನವರಾಗಿದ್ದಾರೆ. ಆದರೆ ಯಾವುದೇ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಮಾಡಿದ ಘಟನೆ ಆಗಿರಲಿಲ್ಲ ಎಂದು ಸಿದ್ದು ಸವದಿ ತಿಳಿಸಿದ್ದಾರೆ.

  • ಪುರಸಭೆ ಸದಸ್ಯೆಗೆ ಗರ್ಭಪಾತ – ಸಿಎಂಗೆ ಕಣ್ಣು, ಬಾಯಿ ಇಲ್ಲ ಅಂದ್ರು ಉಮಾಶ್ರೀ

    ಪುರಸಭೆ ಸದಸ್ಯೆಗೆ ಗರ್ಭಪಾತ – ಸಿಎಂಗೆ ಕಣ್ಣು, ಬಾಯಿ ಇಲ್ಲ ಅಂದ್ರು ಉಮಾಶ್ರೀ

    – ಗರ್ಭಪಾತ, ಕೊಲೆಗೆ ಸಮಾನ

    ಬಾಗಲಕೋಟೆ: ಮಹಲಿಂಗಪುರ ಸದಸ್ಯೆ ತಳ್ಳಾಟ ನೂಕಾಟದಿಂದ ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯ ಪರಿಣಾಮ ಅವರಿಗೆ ಗರ್ಭಪಾತವಾಗಿದೆ. ಸಿಎಂಗೆ ಕಿವಿ, ಕಣ್ಣೂ, ಬಾಯಿಯೂ ಇಲ್ಲದಂತಾಗಿದೆ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿ ಶಾಸಕ ಮತ್ತು ಬೆಂಬಲಿಗರ ತಳ್ಳಾಟದಿಂದಾಗಿ ಪುರಸಭೆ ಸದಸ್ಯೆಗೆ ಗರ್ಭಪಾತ ವಿಚಾರವಾಗಿ ಮಾತನಾಡಿದ ಉಮಾಶ್ರೀ, ಗರ್ಭಪಾತ ಆಗಿರೋದು ಕೊಲೆಗೆ ಸಮಾನವಾಗಿದೆ. ಆದರೆ ಸರ್ಕಾರ ಮಾತ್ರ ಏನು ಕ್ರಮ ಕೈ ಗೊಳ್ಳುತ್ತಿಲ್ಲ. ಈ ಘಟನೆಯಲ್ಲಿ ಇದ್ದ ನೀಚ ಶಾಸಕರನ್ನು ಸರ್ಕಾರ ಪಕ್ಷದಿಂದ ಹೊರಗಿಡಬೇಕು. ಸರ್ಕಾರ ಅಪರಾಧಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಏನಿದು ಪ್ರಕರಣ?:
    ಚಾಂದಿನಿ ನಾಯಕ್ ಗರ್ಭಪಾತವಾದ ಪುರಸಭೆ ಸದಸ್ಯೆ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಆಗಿದೆ. ನವೆಂಬರ್ 9 ರಂದು ನಡೆದಿದ್ದ ಶಾಸಕರು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ ನೂಕಾಟದಿಂದ ಕೆಳಕ್ಕೆ ಬಿದ್ದಿದ್ದ ಚಾಂದಿನಿ ನಾಯಕ್ ಅವರ ಹೊಟ್ಟೆಗೆ ಏಟು ಬಿದ್ದಿತ್ತು. ಆಗ ಚಾಂದಿನಿ ಅವರು ಮೂರು ತಿಂಗಳು ಗರ್ಭಿಣಿಯಾಗಿದ್ದರು. ಇದೀಗ ಅವರಿಗೆ ಗರ್ಭಪಾತವಾಗಿದೆ

    ನಡೆದಿದ್ದೇನು?:
    ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿತ್ತು. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೋಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

    ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ ನಡೆಯುವ ಮುನ್ನವೇ ನಮಗೆ ರಕ್ಷಣೆ ನೀಡುವಂತೆ ಪೋಲೀಸರಿಗೆ ಮನವಿ ಮಾಡಿದ್ದೆವು. ಆದರೆ ಅವರು ಯಾವುದೇ ರಕ್ಷಣೆ ನೀಡಲು ಮುಂದಾಗಲಿಲ್ಲ. ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮನ್ನು ಹಿಡಿದು ಎಳೆದಾಡಿ, ಮೆಟ್ಟಿಲು ಮೇಲಿನಿಂದ ತಳ್ಳಿ ತುಳಿದಾಡಿದ್ದರು. ಘಟನೆಯಿಂದ ಮಾಸಿಕವಾಗಿ, ದೈಹಿಕವಾಗಿ ನೋವಾಗಿದ್ದು, ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ ಎಂದು ಅಲವತ್ತುಕೊಂಡಿದ್ದರು.

  • ನಟಿ ಉಮಾಶ್ರೀ ಕಾರು ಅಪಘಾತ ಪ್ರಕರಣ – ಚಿಕಿತ್ಸೆ ಫಲಿಸದೆ ವೈದ್ಯೆ ಸಾವು

    ನಟಿ ಉಮಾಶ್ರೀ ಕಾರು ಅಪಘಾತ ಪ್ರಕರಣ – ಚಿಕಿತ್ಸೆ ಫಲಿಸದೆ ವೈದ್ಯೆ ಸಾವು

    ಹುಬ್ಬಳ್ಳಿ: ನವಂಬರ್ 20ರಂದು ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ಉಮಾಶ್ರೀ ಮಾಲೀಕತ್ವದ ಇನ್ನೋವಾ ಮತ್ತು ಬಲೆನೋ ಕಾರಿನ ನಡುವೆ ಡಿಕ್ಕಿಯಾಗಿರುವ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವಲಗುಂದ ತಾಲೂಕಿನ ಬೆಳಹಾರ ಹೆಲ್ತ್ ಆಫೀಸರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಕಳೆದ ವಾರ ಗದಗದಿಂದ ಬರುತ್ತಿದ್ದ ಬಲೆನೋ ಕಾರಿಗೆ ಉಮಾಶ್ರೀ ಮಾಲೀಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿ, ಇನ್ನಿಬ್ಬರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಡಾ. ಸ್ಮಿತಾ ಕಟ್ಟಿ ಚಿಕಿತ್ಸೆ ಫಲಿಸದೇ ಇಂದು ಸಾವಿನ್ನಪ್ಪಿದ್ದಾರೆ. ಈ ಮೂಲಕ ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿನಲ್ಲಿದ್ದ ಮೂವರು ಸಾವಿಗೀಡಾದಂತಾಗಿದೆ.

    ಅಪಘಾತದಲ್ಲಿ ಡಾ.ಸ್ಮಿತಾ ಕಟ್ಟಿ ಅವರ ತಾಯಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ ವಿಭೂತಿಮಠ ಸಾವಿಗೀಡಾಗಿದ್ದರು. ಉಮಾಶ್ರೀಯವರ ಇನ್ನೋವಾ ಚಾಲಕ ಶಿವುಕುಮಾರ್ ಬಿಡನಾಳಗೆ ಸಣ್ಣಪುಟ್ಟ ಗಾಯಗಳು ಆಗಿದ್ದವು. ಆದರೆ ಈ ಘಟನೆಯಲ್ಲಿ ಡಾ.ಸ್ಮಿತಾ ಕಟ್ಟಿ ತೀವ್ರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಡಾ. ಸ್ಮಿತಾ ಸಾವನ್ನಪ್ಪಿದ್ದಾರೆ.

    ಈ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಅಪಘಾತದ ನಂತರ ಸ್ವತಃ ನಟಿ ಉಮಾಶ್ರೀ ಗಾಯಾಳುಗಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

  • ಕಾರು ಅಪಘಾತ – ಗಾಯಾಳುಗಳ ಆರೋಗ್ಯ ವಿಚಾರಿಸಿದ ಉಮಾಶ್ರೀ

    ಕಾರು ಅಪಘಾತ – ಗಾಯಾಳುಗಳ ಆರೋಗ್ಯ ವಿಚಾರಿಸಿದ ಉಮಾಶ್ರೀ

    ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ನನ್ನ ವಾಹನ ಜಖಂಗೊಂಡಿರುವುದಕ್ಕೆ ಬೇಸರವಿಲ್ಲ. ಈ ಅಪಘಾತದಲ್ಲಿ ಇಬ್ಬರ ಪ್ರಾಣ ಹೋಗಿರುವುದು ತುಂಬಾ ನೋವಾಗುತ್ತಿದೆ ಎಂದು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ತಮ್ಮ ಕಾರು ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

    ನಿನ್ನೆ ರಾತ್ರಿ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದ ಕಾರುಗಳ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದರು. ರಸ್ತೆ ಅಪಘಾತದಲ್ಲಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ್ ವಿಭೂತಿಮಠ ಸಾವಿಗೀಡಾಗಿದ್ದಾರೆ. ಜೊತೆಗೆ ಡಾಕ್ಟರ್ ಸ್ಮಿತಾ ಕಟ್ಟಿ, ಉಮಾಶ್ರೀಯವರ ಕಾರು ಚಾಲಕ ಶಿವಕುಮಾರ್ ಬಿಡನಾಳ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಪಘಾತವಾದ ವಿಷಯ ತಿಳಿಯುತ್ತಿದ್ದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಉಮಾಶ್ರೀ, ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಮಾತನಾಡಿದ ಉಮಾಶ್ರೀ, ಕೊಪ್ಪಳ ಮೂಲದ ಚಾಲಕ ಇಲ್ಲಿಗೆ ಬಂದಿದ್ದು ಯಾಕೆ ಎಂಬುದು ಗೊತ್ತಿಲ್ಲ. ಆತನನ್ನ ನನ್ನ ಬಳಿ ಕೆಲಸ ಮಾಡಲು ಈ ಹಿಂದೆ ಕೊಪ್ಪಳದ ಕಾರ್ಯಕರ್ತರೇ ಪರಿಚಯಿಸಿ ಕಳಿಸಿದ್ದರು. ಈ ಘಟನೆಯಿಂದ ನಾನು ನೊಂದಿದ್ದೇನೆ ಎಂದರು.

    ಅಪಘಾತದ ಬಗ್ಗೆ ಗ್ರಾಮೀಣ ಠಾಣೆಯ ಇನ್ಸ್ ಪೆಕ್ಟರ್ ರಮೇಶ್ ಗೋಕಾಕ್ ಅವರಿಂದ ಮಾಹಿತಿ ಪಡೆದಿರುವ ಉಮಾಶ್ರೀ ಗಾಯಾಳುಗಳ ಆರೋಗ್ಯ ವಿಚಾರಿಸಿ ಅಪಘಾತದ ಬಗ್ಗೆ ನೋವು ವ್ಯಕ್ತಪಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  • ಮಾಜಿ ಸಚಿವೆ ಉಮಾಶ್ರೀಗೆ ಸೇರಿದ ಕಾರು ಅಪಘಾತ – ಇಬ್ಬರ ದಾರುಣ ಸಾವು

    ಮಾಜಿ ಸಚಿವೆ ಉಮಾಶ್ರೀಗೆ ಸೇರಿದ ಕಾರು ಅಪಘಾತ – ಇಬ್ಬರ ದಾರುಣ ಸಾವು

    ಹುಬ್ಬಳ್ಳಿ: ಮಾಜಿ ಸಚಿವೆ  ಉಮಾಶ್ರೀ ಅವರಿಗೆ ಸೇರಿದ ಕಾರು ಹಾಗೂ ಇನ್ನೊಂದು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಬಳಿ ನಡೆದಿದೆ.

    ಮೃತಪಟ್ಟವರಲ್ಲಿ ಓರ್ವನನ್ನು ಧಾರವಾಡ ಮೂಲದ ಸ್ಮಿತಾ ಕಟ್ಟಿ ಹಾಗೂ ಇನ್ನೊಬ್ಬನ ಗುರುತು ಪತ್ತೆ ಆಗಿಲ್ಲ. ಇನ್ನೋವಾ ಮತ್ತು ಬಲೆನೋ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಿಂದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಬಲೆನೋ ಕಾರಿನಲ್ಲಿದ್ದವರಾಗಿದ್ದಾರೆ.

    ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಬಲೆನೋ ಕಾರು, ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಇನ್ನೋವಾ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಉಮಾಶ್ರೀ ಮನೆಯಲ್ಲಿ ಕಳ್ಳತನ- ಭಾರೀ ಪ್ರಮಾಣದ ಚಿನ್ನಾಭರಣ, ವಸ್ತುಗಳ ಹೊತ್ತೊಯ್ದಿರುವ ಶಂಕೆ

    ಉಮಾಶ್ರೀ ಮನೆಯಲ್ಲಿ ಕಳ್ಳತನ- ಭಾರೀ ಪ್ರಮಾಣದ ಚಿನ್ನಾಭರಣ, ವಸ್ತುಗಳ ಹೊತ್ತೊಯ್ದಿರುವ ಶಂಕೆ

    ಬಾಗಲಕೋಟೆ: ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ವಸ್ತುಗಳು ಕಳ್ಳತನವಾಗಿವೆ ಎನ್ನಲಾಗಿದೆ.

    ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆ ಕಳ್ಳತನ ನಡೆದಿದ್ದು, ಮನೆಯ ಬಾಗಿಲು ಮುರಿದು, ಅಪಾರ ಪ್ರಮಾಣದ ವಸ್ತು ಮತ್ತು ಹಣ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆಯುತ್ತಿದ್ದಂತೆ ಬನಹಟ್ಟಿ ಸಿಪಿಐ ಕರುಣೇಶಗೌಡ ಹಾಗೂ ತೇರದಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

    ರಾತ್ರಿ 2 ಗಂಟೆ ನಂತರ ಕಳ್ಳತನ ನಡೆದಿದ್ದು, ಒಬ್ಬನೇ ಬಂದಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಚಿನ್ನಾಭರಣ, ವಸ್ತುಗಳು ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

  • ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು: ಉಮಾಶ್ರೀ

    ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು: ಉಮಾಶ್ರೀ

    ಕೊಪ್ಪಳ: ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು ಎಂದು ಮಾಜಿ ಸಚಿವೆ ಉಮಾಶ್ರೀ ವ್ಯಂಗ್ಯ ಮಾಡಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲ. ಬೆಂಗಳೂರಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಆಸ್ಪತ್ರೆಯವರು ರೋಗಿಗಳನ್ನು ಮುಟ್ಟುವದಿಲ್ಲ. ರಸ್ತೆಯ ಮೇಲೆ ಹೆಣಗಳು ಬೀಳೂತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬಿಜೆಪಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ ಎಂದು ಕಿಡಿಕಾರಿದರು.

    ಕೋವಿಡ್ ಉಪಕರಣಗಳಲ್ಲಿ ದೊಡ್ಡ ಹಗರಣ ನಡೆದಿದ್ದು, ಈ ಸಂಬಂಧ ತನಿಖೆ ಆಗಬೇಕಿದೆ. ತನಿಖೆಗೆ ಒಳಪಡಿಸದಿದ್ರೆ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ. ಅಧಿವೇಶನದ ಸಂದರ್ಭದಲ್ಲಿ ಇವರ ಮುಖವಾಡವನ್ನು ಕಳಚುತ್ತೇವೆ ಎಂದು ಕಿಡಿಕಾರಿದರು.

  • ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಮರುಕ ವ್ಯಕ್ತಪಡಿಸಿದ ಉಮಾಶ್ರೀ

    ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಮರುಕ ವ್ಯಕ್ತಪಡಿಸಿದ ಉಮಾಶ್ರೀ

    – ನಮ್ಮಂತವರೆಲ್ಲ ಹೋದರೂ ನಡೆಯುತ್ತೆ

    ಬೆಂಗಳೂರು: ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿರುವ ನಟಿ ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಹಿರಿಯ ನಟಿ ಉಮಾ ಶ್ರೀ ಮರುಕ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮಾಶ್ರೀ, ಚಿರು- ಮೇಘನಾ ಇಬ್ಬರೂ ಪ್ರೀತಿ ಮಾಡಿ ಮದುವೆಯಾದರು. ಇಂದು ಆ ಹುಡುಗಿಗೆ ಜೀವನಾ ಇಷ್ಟೆನಾ, ಮುಗಿದೇ ಹೋಯ್ತಾ ನನ್ನ ಜೀವನ ಅನ್ನೋವಂತದ್ದು ದುಃಖಕರವಾದ ಸಂಗತಿ. ನಿಜವಾಗಲೂ ಬಹಳ ದುಃಖವಾಗುತ್ತಿದೆ ಎಂದು ಕಣ್ಣೀರು ಹಾಕಿದರು.

    ನಟ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ನನಗೆ ಬಹಳ ಶಾಕ್ ಆಗಿತ್ತು. ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿರುವುದು ನನ್ನನ್ನು ಬಹಳ ಗಾಬರಿಗೆ ಒಳಪಡಿಸಿದೆ. ದೇವರು ಯಾಕೆ ಇಂತಹ ಒಳ್ಳೆಯ ಟ್ಯಾಲೆಂಟ್ ಇರೋವವರನ್ನು ಕರೆದುಕೊಳ್ಳುತ್ತಾನೆಂದು ಬೇಸರವಾಗತ್ತಿದೆ ಎಂದು ಹೇಳಿದರು.

    ನನ್ನ ಮಗು ಮೇಘಾನಾಗೆ ಇದು ದೊಡ್ಡ ಶಾಕ್, ಅವಳು ಹೇಗೆ ತಡೆದುಕೊಳ್ಳುತ್ತಾಳೆ ಪಾಪ. ಪ್ರೀತಿಸಿ ಮದುವೆಯಾದವರು ಚಿರು ಇಲ್ಲದೆ ಅವರು ಹೇಗೆ ಬದುಕೋದು. ಪ್ರೀತಿ ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಚೆನ್ನಾಗಿ ಬದುಕಿ ಬಾಳಬೇಕಾದವರನ್ನು ಭಗವಂತ ಬೇಗನೇ ಕರೆಸಿಕೊಳ್ಳುತ್ತಾನೆ. ನಮ್ಮಂತವರೆಲ್ಲ ಹೋದರೂ ನಡೆಯುತ್ತೆ. ಆದರೆ ಇವರೆಲ್ಲ ಉಳಿಯಬೇಕು. ಇವರೆಲ್ಲ ನಮ್ಮ ಮಕ್ಕಳಿಗೆ ಸಮಾನರಾದವರು ಎಂದು ಕಣ್ಣೀರು ಹಾಕಿದ ಅವರು, ದೇವರು ಈ ರೀತಿಯ ಅನ್ಯಾಯ ಮಾಡಬಾರದು ಹಿಡಿಶಾಪ ಹಾಕಿದರು.

    ಸರ್ಜಾ ಅವರ ಕುಟುಂಬದಲ್ಲಿ ಒಳ್ಳೋಳ್ಳೆಯ ಟ್ಯಾಲೆಂಟ್ ಗಳಿವೆ. ಧೃವ, ಚಿರು ಮತ್ತು ಅರ್ಜುನ್ ಉತ್ತಮ ಕಲಾವಿದರಾಗಿದ್ದಾರೆ. ಅಲ್ಲದೆ ಕನ್ನಡ ಚಿತ್ರಂಗಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಿದ್ದಾರೆ. ಅವರು ಫಿಟ್ನೆಸ್ ಗೋಸ್ಕರ ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನೂ ಬಿಟ್ಟು ಹೋದರು. ತುಂಬಾನೆ ಬೇಸರವಾಗುತ್ತದೆ ಎಂದು ತಿಳಿಸಿದರು.

    ಸದ್ಯ ಬಾಗಲಕೋಟೆ ಜಿಲ್ಲೆಯ ನನ್ನ ಕ್ಷೇತ್ರದಲ್ಲಿದ್ದು, ನನಗೆ ಏನೂ ಮಾಡಲಾಗಿದೆ ಪರಿಸ್ಥಿತಿಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಉಮಾಶ್ರೀ ದುಃಖಿತರಾದರು.