Tag: umashree

  • ‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಹೆಸರಾಂತ ನಟಿ, ಕನಸಿನ ರಾಣಿ ಮಾಲಾಶ್ರೀ ಕುರಿತಾಗಿ ಬಿಸಿಬಿಸಿ ಚರ್ಚೆಯಾಗಿದೆ. ವಿಧಾನ ಪರಿಷತ್ (Vidhana Parishad) ನಲ್ಲಿ ಈ ಚರ್ಚೆ ನಡೆದಿದ್ದು, ಉಮಾಶ್ರೀ (Umashree) ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಅಷ್ಟಕ್ಕೂ ಮಾಲಾಶ್ರೀಯನ್ನು ನೆನಪಿಸಿಕೊಂಡಿದ್ದು ಬಿಜೆಪಿಯ ಸದಸ್ಯ ವಿಶ್ವನಾಥ್ (Vishwanath) ಎನ್ನುವುದು ವಿಶೇಷ.

    ವಿಧೇಯಕದ ಮೇಲಿನ ಚರ್ಚೆ ವೇಳೆ ಉಮಾಶ್ರೀ ಹೆಸರಿನ ಬದಲಾಗಿ, ಬಾಯ್ತಪ್ಪಿ ಮಾಲಾಶ್ರೀ (Malashree) ಅವರ ಹೆಸರು ಹೇಳಿದರು ವಿಶ್ವನಾಥ್. ಮಾಲಾಶ್ರೀ ಹೆಸರು ಕೇಳಿ ಸಭಾಪತಿಗಳಿಗೆ ಒಂದು ರೀತಿಯಲ್ಲಿ ಅಚ್ಚರಿ ಆಯಿತು. ಹಾಗಾಗಿ ಮಾಲಾಶ್ರೀ ಅವರನ್ನು ಈಗೇಕೆ ನೆನಪಿಸಿಕೊಂಡಿರಿ ಎಂದು ತಮಾಷೆಯಾಗಿಯೇ ವಿಶ್ವನಾಥ್ ಅವರನ್ನು ಕೇಳಿದರು.  ಈ ವೇಳೆ ಮಧ್ಯ ಪ್ರವೇಶ ಮಾಡಿದ ತೇಜಸ್ವಿನಿ ಗೌಡ, ಭಾರತದಲ್ಲಿ ಹೇಮಾಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ರೊ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ರು ಎಂದರು. ಮಾತು ಮುಂದುವರೆಸಿದ ತೇಜಸ್ವಿನಿಗೌಡ  ನಾಯಕಿಯಾಗಲು ಸೌಂದರ್ಯದ ಮಾನದಂಡ ಬದಲು ನಟನೆಯ ಮಾನದಂಡ ಆಗಿದ್ದರೆ, ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರದಲ್ಲಿ ನಟಿಸಬಹುದಿತ್ತು ಎಂದರು.

    ಈ ವೇಳೆ ಎದ್ದು ನಿಂತ ಉಮಾಶ್ರೀ, ನನ್ನ ನಟನೆಯ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದ. ನಾನು ರಂಗಭೂಮಿಯಿಂದ ಬಂದವಳು. ರಂಗಭೂಮಿಯಲ್ಲಿ ನಾಯಕಿ ಪಾತ್ರ ಮಾಡಿದ್ದೇನೆ. ಆದರೆ ಸಿನಿಮಾದಲ್ಲಿ ಹಲವು ವಿಭಾಗ ಇದೆ. ನಾಯಕಿ, ಸಹ ನಟಿ, ಹಾಸ್ಯ ನಟಿ, ಪೋಷಕ ನಟಿ ಅಂತ. ನನಗೆ ನಾಯಕಿ ಆಗಿಲ್ಲ ಅನ್ನೋ ನೋವು ಇತ್ತು. ಆದರೆ ಗಿರೀಶ್ ಕಾಸರವಳ್ಳಿಯವರು ನನಗೆ ಗುಲಾಬಿ ಟಾಕೀಸ್ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದ್ರು. ಗುಲಾಬಿ ಟಾಕೀಸ್ ಚಿತ್ರದಿಂದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನಾಯಕಿ ಪ್ರಶಸ್ತಿ ಬಂತು. ನನಗೆ ಬೆಂಬಲ ನೀಡಿದ ಕರ್ನಾಟಕ ಜನತೆ, ಕರ್ನಾಟಕ ಚಿತ್ರ ರಂಗಕ್ಕೆ ಧನ್ಯವಾದ ಎಂದು ಹೇಳಿದರು ಉಮಾಶ್ರೀ.

    ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಚಿವ ಎಚ್ ಕೆ ಪಾಟೀಲ್, ನಟಿ ಉಮಾಶ್ರೀಯವರ ಒಡಲಾಳ ನಾಟಕ ನೋಡಿದ್ರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ನಮ್ಮ ಭಾಗದಲ್ಲಿ ಉಮಾಶ್ರೀ ಈ ಪಾತ್ರದ ಮೂಲಕ ನಾಯಕರಾಗಿಯೇ ಇದ್ದರು. ನಮ್ಮ ನಾಯಕಿ ಸೋನಿಯಾಗಾಂಧಿಯವರಿಗೆ ಒಡಲಾಳ ನಾಟಕವನ್ನ ತೋರಿಸಿದ್ವಿ. ಆ ನಂತರ ಉಮಾಶ್ರಿಯವರನ್ನ ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದ್ರು ಎಂದರು.

    ಹೀಗೆ ಮಾಲಾಶ್ರೀ ಬಿಟ್ಟು ಉಮಾಶ್ರೀ ನಟನೆಯ ಬಗ್ಗೆ ಪರಿಷತ್ ನಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಲಾಯಿತು. ಮತ್ತೆ ಹಾಸ್ಯ ಮಾಡಿದ ಸಭಾಪತಿ, ಈಗ ಯಾಕೆ ಮಾಲಾಶ್ರೀ ನೆನಪು ‌ಎಂದು ಮತ್ತೆ ಕೇಳಿದರು. ಕಲಾಸಕ್ತಿ ಹುಣಸೆಕಾಯಿ ಇದ್ದ ಹಾಗೆ ಎಂದು ಹಾಸ್ಯ ಮಾಡಿದರು ವಿಶ್ವನಾಥ್. ಹೀಗೆ ಹಾಸ್ಯ ರೂಪದಲ್ಲಿ ವಿಧೇಯಕದ ವೇಳೆ ಚರ್ಚೆಯಾಗಿ ಮಾಲಾಶ್ರೀ ಮತ್ತು  ಉಮಾಶ್ರೀ ಹೆಸರು ಪ್ರಸ್ತಾಪವಾಯಿತು.

  • ಲೀಲಾವತಿಯಂತಹ ನಟಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಲ್ಲ: ಉಮಾಶ್ರೀ

    ಲೀಲಾವತಿಯಂತಹ ನಟಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಲ್ಲ: ಉಮಾಶ್ರೀ

    ಬೆಂಗಳೂರು: ಹಿರಿಯ ನಟಿ ಲೀಲಾವತಿಯವರ (Leelavathi) ನಿಧನಕ್ಕೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು. ಕಲಾಪ ಪ್ರಾರಂಭವಾದ ತಕ್ಷಣ ಉಪಸಭಾಪತಿಗಳು ಸಂತಾಪ ಸೂಚನೆ ಓದಿದರು. ಇದಕ್ಕೆ ಸಭಾ ನಾಯಕರ ಬೋಸರಾಜು, ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರು ಸಹ ದನಿಗೂಡಿಸಿದರು.

    ಸಂತಾಪ ಸೂಚನೆ ವೇಳೆ ಮಾತನಾಡಿದ ನಟಿ ಹಾಗೂ ಪರಿಷತ್ ಸದಸ್ಯೆ ಉಮಾಶ್ರೀ (Umashree), ಲೀಲಾವತಿಯವರು ಬಾಲ್ಯದಿಂದ ಸಾವಿನವರೆಗೂ ಸಂಘರ್ಷದ ಜೀವನ ಮಾಡಿಕೊಂಡು ಬಂದವರು. ಇಷ್ಟು ಸಂಘರ್ಷಗಳನ್ನು ಜಯಿಸಿಕೊಂಡು ಬಂದಿದ್ದರು. ಲೀಲಾವತಿ ಮಾಡದ ಪಾತ್ರಗಳೇ ಇಲ್ಲ. ನಾವು ನಟರಾಗಿದ್ದರು ಅವರ ನಟನೆಗೆ ಸಾಟಿ ಅಲ್ಲ. ಪಾತ್ರಕ್ಕೆ ತಕ್ಕ ನ್ಯಾಯ ಹಾಗೂ ಪೋಷಣೆಯನ್ನು ಅವರು ಒದಗಿಸುತ್ತಿದ್ದರು ಎಂದು ಲೀಲಾವತಿಯವರ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಲೀಲಾವತಿ 3ನೇ ದಿನದ ಕಾರ್ಯ- ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸಿದ ವಿನೋದ್ ರಾಜ್

    ಸೋಲದೇವನಹಳ್ಳಿಯಲ್ಲಿ ಅವರು ಮಾಡಿದ ಸೇವೆ ಅಲ್ಲಿನ ಜನರು ಹೇಳುತ್ತಾರೆ. ಅಂತಹ ತಾಯಿಯ ಸೇವೆಯನ್ನು ಪುತ್ರ ವಿನೋದ್ ರಾಜ್  (Vinod Raj) ಮಾಡಿದ್ದಾರೆ. ವಿನೋದ್, ತಾಯಿಗೆ ತಕ್ಕ ಮಗ, ಲೀಲಾವತಿಯವರೂ ಸಹ ಮಗನಿಗೆ ತಕ್ಕ ತಾಯಿ ಎಂದು ಅವರು ಹೇಳಿದ್ದಾರೆ.

    ಲೀಲಾವತಿಯವರು ನಾಯಕಿ ಪಾತ್ರ ಮಾಡಿದ್ದರೂ ಸಹ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ನಾನು ಅವರ ಜೊತೆ ಗೋಲ್ಮಾಲ್ ರಾಧಾಕೃಷ್ಣ ಚಲನಚಿತ್ರ ಮಾಡಿದ್ದೇನೆ. ಅಂತಹ ಮಹಾತಾಯಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಿ ಬರುವುದಿಲ್ಲ. ವಿನೋದ್ ರಾಜ್ ಒಂಟಿಯಲ್ಲ, ಆತನಿಗೂ ಭಗವಂತ ಶಕ್ತಿ ಕೊಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಬಣ್ಣದ ಬದುಕಿನ ನಟಿಯ ಜೀವನ ವರ್ಣರಂಜಿತವಾಗಿರಲಿಲ್ಲ: ಶೋಭಾ ಕರಂದ್ಲಾಜೆ

  • ಸನ್ಮಾನ, ಅವಮಾನ ಎರಡೂ ಕಂಡವರು ಲೀಲಾವತಿ : ನಟಿ ಉಮಾಶ್ರೀ

    ಸನ್ಮಾನ, ಅವಮಾನ ಎರಡೂ ಕಂಡವರು ಲೀಲಾವತಿ : ನಟಿ ಉಮಾಶ್ರೀ

    ಲೀಲಾವತಿ (Leelavati) ಅವರು ಬಹಳಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ನಿರ್ಮಾಪಕಿಯಾಗಿ, ನಟಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಸಿನಿಮಾಗೆ ಬಂದವರು ಲೀಲಾವತಿ ಅವರು. ಆನಂತರ ದೊಡ್ಡ ರೀತಿಯಲ್ಲಿ ನಾಯಕಿ ನಟಿಯಾಗಿ ಬೆಳೆದರು. ಸಾಕಷ್ಟು ಸಿನಿಮಾಗಳನ್ನು ಕೊಟ್ಟವರು. ಅಂತಹ ಕಲಾವಿದರು ನಮ್ಮೊಂದಿಗೆ ಇದ್ದರು ಎನ್ನೋದೇ ಹೆಮ್ಮೆ ಅನಿಸುತ್ತಿದೆ ಎನ್ನುವುದು ನಟಿ ಉಮಾಶ್ರೀ (Umashree) ಮಾತು.

    ಲೀಲಾವತಿ ಅವರದ್ದು ಮಾದರಿ ಜೀವನ. ಆ ತಾಯಿ ಸಾಕಷ್ಟು ಕಷ್ಟ ಪಟ್ಟಿದ್ಧಾರೆ. ಸನ್ಮಾನ, ಅವಮಾನ ಎರಡನ್ನೂ ಪಡೆದಿದ್ದಾರೆ. ತಾಯಿ ಮತ್ತು ಮಗನ ಬಾಂಧವ್ಯಕ್ಕೆ ಮಾದರಿ ಆದಂತಹ ಜೀವವದು. ಈಗ ತಾಯಿ ಮಗ ದೂರವಾಗಿದ್ದು ನೋವು ತಂದಿದೆ. ಅವರು ಇಲ್ಲ ಅನ್ನೋದು ನಂಬೋಕೆ ಆಗ್ತಿಲ್ಲ. ಮಹಿಳೆಯಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಲೀಲಮ್ಮ. ಅವರ ಹಾಕಿಟ್ಟ ದಾರಿ ನಮಗೆಲ್ಲ ಮಾದರಿಯಾಗಬೇಕು ಎಂದಿದ್ದಾರೆ ನಟಿ, ಮಾಜಿ ಸಚಿವೆ ಉಮಾಶ್ರೀ.

    ಲೀಲಾವತಿ ಸಂಕ್ಷಿಪ್ತ ಪಯಣ

    ಲೀಲಾವತಿ ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಅವರು. ನಟನೆಯ ಮೇಲಿನ ಆಸಕ್ತಿಯಿಂದಾಗಿ ಚಿಕ್ಕವಯಸ್ಸಿನಲ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ಮೈಸೂರಿನಿಂದ ವೃತ್ತಿ ಆರಂಭಿಸಿ, ಮದ್ರಾಸ್, ಬೆಂಗಳೂರು ಹೀಗೆ ಹಲವು ಕಡೆ ಪ್ರಯಾಣ ಮಾಡಿದ್ದಾರೆ. ಯಶಸ್ವಿ ನಟಿಯಾಗಿ ಬೆಳೆದಿದ್ದಾರೆ.

    ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೀಲಾವತಿ (Leelavati) ಅವರು, ಆನಂತರ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ನಟಿಸಿದವರು. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 1949ರಲ್ಲಿ ತೆರೆ ಕಂಡ ಶಂಕರ್ ಸಿಂಗ್ ಅವರ ನಾಗಕನ್ನಿಕ ಇವರ ಮೊದಲ ಚಿತ್ರ. ಇದಕ್ಕೂ ಮೊದಲು ಲೀಲಾವತಿ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

     

    ಕಯಾದುವಿನ ಸಖಿ, ಭಕ್ತ ಪ್ರಹ್ಲಾದ ಸೇರಿದಂತೆ ಸಾಕಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಸಿನಿಮಾ ರಂಗಕ್ಕೆ ಬಂದ ನಂತರ, ಭಕ್ತ ಕುಂಬಾರ ಮನೆ ಮೆಚ್ಚಿದ ಸೊಸೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕಚಿಕ್ಕ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದ ಲೀಲಾವತಿ ಅವರು, ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಮಾಂಗಲ್ಯ ಯೋಗ. ನಂತರ ಡಾ.ರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ರಣಧೀರ ಕಂಠೀರವ ಸಿನಿಮಾದಲ್ಲಿ ನಟಿಸಿದರು.

  • ಪರಿಷತ್ ನೂತನ ಸದಸ್ಯರಾಗಿ ಮೂವರು ನಾಯಕರಿಂದ ಪ್ರಮಾಣ ವಚನ ಸ್ವೀಕಾರ

    ಪರಿಷತ್ ನೂತನ ಸದಸ್ಯರಾಗಿ ಮೂವರು ನಾಯಕರಿಂದ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ (Vidhaan Parishad Members) ನಾಮ ನಿರ್ದೇಶನ ಗೊಂಡಿರುವ ಮಾಜಿ ಸಚಿವರಾದ ಎಂ.ಆರ್ ಸೀತಾರಾಂ, ಉಮಾಶ್ರೀ ಹಾಗೂ ಮುಖಂಡ ಹೆಚ್.ಪಿ ಸುದಾಮ್ ದಾಸ್ ಅವರಿಂದು ಪ್ರಮಾಣವಚನ ಸ್ವೀಕರಿಸಿದರು.

    ವಿಧಾನಸೌಧ (Vidhaan Soudha) ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಬಿಎಲ್ ಸಂತೋಷ್ ಟಾನಿಕ್ – ವಲಸಿಗರ ಪರ ಬ್ಯಾಟಿಂಗ್

    ಈ ಸಂದರ್ಭದಲ್ಲಿ ಸಭಾಪತಿ ಹೊರಟ್ಟಿ ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಇದನ್ನೂ ಓದಿ: BJP ಸ್ಥಿರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ – ತೇಜಸ್ವಿ ಸೂರ್ಯ

    ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು, ಹಲವು ಶಾಸಕರು ಭಾಗವಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಮಾಶ್ರೀ ಸೇರಿದಂತೆ ಮೂವರು ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

    ಉಮಾಶ್ರೀ ಸೇರಿದಂತೆ ಮೂವರು ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

    ಬೆಂಗಳೂರು: ನಟಿ, ಮಾಜಿ ಸಚಿವೆ ಉಮಾಶ್ರೀ (Umashree) ಸೇರಿದಂತೆ ಮೂವರು ವಿಧಾನಪರಿಷತ್ (Vidhanaparishad) ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ.

    ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ (MR Seetharam) ಹಾಗೂ ಸುಧಾಮ್‍ದಾಸ್ (Sudhamdas) ಪರಿಷತ್ ಅವರನ್ನು ಕಾಂಗ್ರೆಸ್ (Congress) ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಿದೆ. ಈ ಕುರಿತು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಮೂಲಕ ಕಾಂಗ್ರೆಸ್‍ನಿಂದ ಮೂವರು ಮೇಲ್ಮನೆಗೆ ಪ್ರವೇಶ ಪಡೆದಿದ್ದಾರೆ.

    ಮೂವರ ನಾಮನಿರ್ದೇಶನದ ಬೆನ್ನಲ್ಲೇ ಅಸಮಾಧಾನದ ಹೊಗೆ ಎದ್ದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತ ಸುಧಾಮ್ ದಾಸ್ ನೇಮಕಕ್ಕೆ ಹಿರಿಯ ಸಚಿವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನಕ್ಕೆ ಆಕ್ಷೇಪಿಸಿ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ದೂರು ನೀಡಿದ್ದರು. ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು. ಈ ಎಲ್ಲದರ ನಡುವೆ ಇಂದು ರಾಜ್ಯಪಾಲರು ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಟಿ ಲೀಲಾವತಿ ಮನೆಗೆ ಉಮಾಶ್ರೀ- ಪದ್ಮಾವಾಸಂತಿ ಭೇಟಿ

    ಹಿರಿಯ ನಟಿ ಲೀಲಾವತಿ ಮನೆಗೆ ಉಮಾಶ್ರೀ- ಪದ್ಮಾವಾಸಂತಿ ಭೇಟಿ

    ನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರ(Leelavathi) ಆರೋಗ್ಯವನ್ನು (Health) ವಿಚಾರಿಸಿಕೊಳ್ಳುವ ಸಲುವಾಗಿ ನಟಿ ಉಮಾಶ್ರೀ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸೊಲದೇವನಹಳ್ಳಿಯಲ್ಲಿ ವಾಸವಾಗಿರುವ ನಟಿ ಲೀಲಾವತಿ, ವಿನೋದ್ ರಾಜ್ (Vinod Raj) ಅವರ ತೋಟದ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

    ಅನೇಕ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಮರೆತು ಬೇರೆ ಇದ್ದು, ತಮ್ಮ ಜೀವನವನ್ನು ನೋಡಿ ಕೊಳ್ಳುತ್ತಾರೆ. ಆದರೆ ನಟ ವಿನೋದ್ ರಾಜ್ ತಮ್ಮ ತಾಯಿ, ಹಿರಿಯ ನಟಿ ಎಂ.ಲೀಲಾವತಿಯವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಕಳೆದ ವಾರ ವ್ಯಾಯಾಮಕ್ಕೆ ಹಾಡಿನ ಜೊತೆಯಲ್ಲಿ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿತ್ತು. ಇದಾದ ಬಳಿಕ, ಲೀಲಾವತಿ ಅವರ ಮನೆಗೆ ಪೂಜಾ ಗಾಂಧಿ ಸೇರಿದಂತೆ ಹಲವು ಕಲಾವಿದರು ಭೇಟಿ ನೀಡಿ, ಲೀಲಾವತಿ ಆರೋಗ್ಯ ವಿಚಾರಿಸಿದ್ದರು. ಈಗ ನಟಿ ಉಮಾಶ್ರೀ(Umashree), ಪದ್ಮಾ ವಾಸಂತಿ (Padmavasanthi) ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದಾರೆ.

    ಲೀಲಾವತಿಯವರು ಕೆಲ ಕಾಲ ಉಮಾಶ್ರೀ ಹಾಗೂ ನಟಿ ಪದ್ಮವಾಸಂತಿಯವರ ಜೊತೆಗೆ ಹಿಂದಿನ ಚಿತ್ರರಂಗ ಹೇಗಿತ್ತು, ಮತ್ತು ಆಗಿನ ಊಟ ಉಪಚಾರಗಳು ಎಷ್ಟು ದೇಹಕ್ಕೆ ಚೈತನ್ಯ ನೀಡುತ್ತಿದ್ದವು ಹಾಗು ಇನ್ನೂ ಹಲವು ಹಳೆಯ ವಿಚಾರಗಳನ್ನು ನಟಿಯರು ಮೆಲುಕು ಹಾಕಿದ್ದಾರೆ. ನಂತರ ನಟಿಯರು, ಹಿರಿಯ ನಟಿ ಜೊತೆ ಆಟವಾಡಿ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್

    ನಟ ವಿನೋದ್ ರಾಜ್-ಲೀಲಾವತಿ (Leelavathi) ಅವರ ಯೋಗಕ್ಷೇಮ ವಿಚಾರಿಸಿ, ಉಮಾಶ್ರೀ- ಪದ್ಮವಾಸಂತಿ ಅವರು ಒಳ್ಳೆಯ ಸಮಯ ಕಳೆದಿದ್ದಾರೆ. ಅವರ ಭೇಟಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

    ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್‌ ತನ್ನ 3ನೇ ಪಟ್ಟಿಯನ್ನು (Congress Candidates List) ಶನಿವಾರ ಬಿಡುಗಡೆ ಮಾಡಿದೆ.

    ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದ್ದ ಕಾಂಗ್ರೆಸ್‌, 2ನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸಿತ್ತು. ಶನಿವಾರ 3ನೇ ಪಟ್ಟಿ ಪ್ರಕಟಿಸಿದ್ದು, 43 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದೆ.

    ಕೋಲಾರದಿಂದ (Kolara Constituency) ಸಿದ್ಧರಾಮಯ್ಯಗೆ (Siddaramaiah) ಟಿಕೆಟ್‌ ನಿರಾಕರಿಸಲಾಗಿದ್ದು ವರುಣಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಲಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿದ ಲಕ್ಷ್ಮಣ ಸವದಿಗೆ ಟಿಕೆಟ್‌ ನೀಡಲಾಗಿದೆ. ತೇರದಾಳ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷಿಸಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ತೆರದಾಳದಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್‌ ಸಿಕ್ಕಿದೆ.

    ಮದ್ದೂರಿನಲ್ಲಿ ಕೆ.ಎಂ ಉದಯ್‌ ಅವರಿಗೆ ನೀಡಲಾಗಿದೆ. ತರಿಕೇರೆಯಲ್ಲಿ ಜಿ.ಎಚ್‌ ಶ್ರೀನಿವಾಸ್‌ಗೆ ಟಿಕೆಟ್‌ ನೀಡಲಾಗಿದೆ. ಭಾರೀ ಬಂಡಾಯದ ನಡುವೆಯೂ ಮಾಜಿ ರಾಜ್ಯಪಾಲರಾದ ಮಾರ್ಗೆರೇಟ್‌ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾಗೆ ಕುಮಟಾದಿಂದ ಟಿಕೆಟ್‌ ನೀಡಿದೆ. ಬೊಮ್ಮನಹಳ್ಳಿ ಕ್ಷೇತ್ರದಿಂದ ನಿರ್ಮಾಪಕ ಶ್ರೀನಿವಾಸ್‌ ಗೌಡಗೆ ಟಿಕೆಟ್‌ ನೀಡಲಾಗಿದೆ.

    ದೇವರಹಿಪ್ಪರಗಿಯಲ್ಲಿ ಶರಣಪ್ಪ ಸುಣಗಾರ್‌ಗೆ, ಸಿಂಧನೂರಿನಲ್ಲಿ ಹಂಪನಗೌಡ ಬಾರ್ದಲಿ ಹಾಗೂ ಬಳ್ಳಾರಿಯಲ್ಲಿ ನಾರಾ ಭರತ್‌ ರೆಡ್ಡಿಗೆ ಟಿಕೆಟ್‌ ನೀಡಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಬೆಂಬಲಿಗ ಆಂಜನೇಯಲುಗೆ ಟಿಕೆಟ್‌ ಕೊಡಿಸುವಲ್ಲಿ ಡಿ.ಕೆ ಶಿವಕುಮಾರ್‌ ವಿಫಲರಾಗಿದ್ದಾರೆ.

    ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಇರಿಸಿಕೊಂಡಿದೆ.

  • ನೇಕಾರರ ನಾಡಲ್ಲಿ ಯಾರಿಗೆ ಟಿಕೆಟ್- ಎರಡೂ ಪಕ್ಷದಲ್ಲೂ ಎದ್ದಿದೆ ಅಸಮಾಧಾನದ ಬಿರುಗಾಳಿ

    ನೇಕಾರರ ನಾಡಲ್ಲಿ ಯಾರಿಗೆ ಟಿಕೆಟ್- ಎರಡೂ ಪಕ್ಷದಲ್ಲೂ ಎದ್ದಿದೆ ಅಸಮಾಧಾನದ ಬಿರುಗಾಳಿ

    ಬಾಗಲಕೋಟೆ: ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಸದ್ಯಕ್ಕೆ ಬಾದಾಮಿ (Badami) ಹೈವೋಲ್ಟೇಜ್ ಕ್ಷೇತ್ರವಾಗಿದ್ದರೂ, ತೇರದಾಳ ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗುತ್ತಿದೆ. ತೇರದಾಳ ಕ್ಷೇತ್ರಕ್ಕೆ ಬಹಳ ಹಳೆಯ ರಾಜಕೀಯ ಇತಿಹಾಸವಿಲ್ಲ. ಈ ಕ್ಷೇತ್ರ ಉಗಮವಾಗಿದ್ದೇ 2008ರಲ್ಲಿ.

    2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಉದಯವಾದ ವಿಧಾನಸಭಾ ಕ್ಷೇತ್ರ ತೇರದಾಳ. ವಿಂಗಡಣೆಗೂ ಮೊದಲು ಜಮಖಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರ ಮೊದಲ ಚುನಾವಣೆಯಲ್ಲಿ ಕ್ಷೇತ್ರ ಇಡೀ ರಾಜ್ಯದ ಗಮನವನ್ನು ಸೆಳೆದಿತ್ತು. ಇದನ್ನೂ ಓದಿ: ಹಿಡಿದು ಮಾರಿಬಿಡಬಹುದೆಂಬ ಭಯಕ್ಕೆ ಹುಲಿ ಗುಹೆಯಲ್ಲಿ ಅಡಗಿರಬಹುದು: ಮೋದಿ ಸಫಾರಿಗೆ ಸಿದ್ದು ವ್ಯಂಗ್ಯ

    ತೇರದಾಳ ಕ್ಷೇತ್ರದ ಜನರಿಗೆ ಮೊದಲ ಬಾರಿ ಚುನಾವಣೆ (Election) ಆಗಿದ್ದರಿಂದ ಬಾರಿ ಕುತೂಹಲವನ್ನು ಕೆರಳಿಸಿತ್ತು. ಇನ್ನು 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಇಷ್ಟು ಕುತೂಹಲಕಾರಿ ಹಾಗೂ ಹೈವೋಲ್ಟೇಜ್ ಕ್ಷೇತ್ರ ಆಗಲೂ ಪ್ರಮುಖ ಕಾರಣ ಚಿತ್ರನಟಿ ಹಿರಿಯ ಕಲಾವಿದೆ ಉಮಾಶ್ರಿಯವರ ಸ್ಪರ್ಧೆ.

    ಚಿತ್ರನಟಿಯಾಗಿ ತನ್ನದೇ ಗುರುತು ಮೂಡಿಸಿದ್ದ ಉಮಾಶ್ರಿ ನೇಕಾರ ಸಮುದಾಯದವರೇ ಆಗಿದ್ದರು. ಈ ಕ್ಷೇತ್ರದಲ್ಲಿ ನೇಕಾರರ 40 ಸಾವಿರ ಮತಗಳಿವೆ. ನೇಕಾರರ ಪ್ರಭಾವ ಹೆಚ್ಚಾಗಿರುವ ತೇರದಾಳ (Terdal) ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಅವರು ಮುಂದಾಗಿದ್ದರು.

    ಇನ್ನೂ ಮಹಿಳೆ ಎಂಬ ಅನುಕಂಪದೊಂದಿದೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಟಿಕೆಟ್ ಪಡೆದು ಅಖಾಡಕ್ಕೆ ಇಳಿದಿದ್ದರು. ಮೊದಲ ಬಾರಿ ಇಷ್ಟೆಲ್ಲ ಪ್ರಭಾವ ಬಿಜೆಪಿ (BJP) ವಿರೋಧಿ ಅಲೆ ಇದ್ದರೂ ಸಹ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದು ಸವದಿ ವಿರುದ್ಧ ಸೋತಿದ್ದರು. ಭಾರತೀಯ ಸೇನೆಯಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿ ಬಂದು ರಾಜಕೀಯ ಅಖಾಡಕ್ಕೆ ಇಳಿದು ನೆಲೆ ಕಂಡುಕೊಂಡಿರುವ ಸಿದ್ದು ಸವದಿ. 2008ರ ಮೊದಲು ಜಮಖಂಡಿ ಶಾಸಕರಾಗಿದ್ದರು. ತೇರದಾಳ ಜಮಖಂಡಿ ಕ್ಷೇತ್ರದ ವ್ಯಾಪ್ತಿಯಲ್ಲೇ ಇದ್ದಿದ್ದರಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು.

    ಉಮಾಶ್ರಿ (Umashree) ಅವರಿಗೆ ಕಲೆ, ಮಹಿಳಾ ಅನುಕಂಪ, ಕಾಂಗ್ರೆಸ್ ಕೃಪಾಶೀರ್ವಾದ ವರ್ಚಸ್ಸು ಇದ್ದಾಗಲೂ ಸಿದ್ದು ಸವದಿ (Siddu Savadi) 62,595 ಮತ ಪಡೆದರೆ, ಉಮಾಶ್ರಿ 50,351 ಮತ ಪಡೆದಿದ್ದರು. ಉಮಾಶ್ರಿ ವಿರುದ್ಧ 12,244 ಮತಗಳ ಅಂತರದಿಂದ ಸಿದ್ದು ಸವದಿ ಗೆದ್ದು ಬೀಗಿದ್ದರು.

    ಇನ್ನು 2013ರ ಚುನಾವಣೆಯಲ್ಲಿ ಪುನಃ ಸಿದ್ದು ಸವದಿ ಹಾಗೂ ಉಮಾಶ್ರಿ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಆಗ ಬಿಜೆಪಿ ಸರ್ಕಾರದಲ್ಲಿ ನಡೆದ ಏರುಪೇರುಗಳು, ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದು, ಶ್ರೀರಾಮುಲು ಬಿಎಸ್‍ಆರ್ ಪಕ್ಷದ ಪರಿಣಾಮದಿಂದ ಉಮಾಶ್ರಿ, ಸಿದ್ದು ಸವದಿ ವಿರುದ್ಧ ಜಯ ಸಾಧಿಸಿದ್ದರು.

    ಉಮಾಶ್ರಿ 70,189 ಮತ ಪಡೆದರೆ ಸಿದ್ದು ಸವದಿ 67,590 ಮತ ಪಡೆದಿದ್ದರು. ಕೇವಲ 2599 ಮತಗಳ ಅಂತರದಿಂದ ಉಮಾಶ್ರಿ ಜಯ ಸಾಧಿಸಿದ್ದರು. ನಂತರ 2018ರಲ್ಲಿ ಪ್ರಧಾನಿ ಮೋದಿ ಹವಾ, ಯಡಿಯೂರಪ್ಪ ಪುನಃ ಬಿಜೆಪಿಗೆ ಬಂದಿದ್ದು, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಕಾರಣದಿಂದ 2018ರಲ್ಲಿ ತೇರದಾಳ ಕ್ಷೇತ್ರದಲ್ಲಿ ಮತ್ತೆ ಎದುರಾಳಿಯಾಗಿದ್ದ ಉಮಾಶ್ರಿ ಸಿದ್ದು ಸವದಿ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಆಗ ಸಿದ್ದು ಸವದಿ 87,583 ಮತ ಪಡೆದರೆ, ಉಮಾಶ್ರಿ 66,470 ಮತ ಪಡೆದಿದ್ದರು. 21,113 ಮತಗಳ ಅಂತರದಿಂದ ಸಿದ್ದು ಸವದಿ ಜಯ ಗಳಿಸಿದ್ದರು.

    ತೇರದಾಳ ಕ್ಷೇತ್ರದಲ್ಲಿ ನೇಕಾರರು, ಲಿಂಗಾಯತ ಮತದಾರರು ಹೆಚ್ಚಾಗಿದ್ದು ನೇಕಾರರೇ ಇಲ್ಲಿ ಪ್ರಮುಖ ನಿರ್ಣಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನೇಕಾರ ಹಾಗೂ ಲಿಂಗಾಯತರ ಸಮುದಾಯದವರೇ ಶಾಸಕರಾಗಿದ್ದಾರೆ. ಎರಡು ಬಾರಿ ಲಿಂಗಾಯತ ಪಂಚಮಾಲಿ ಸಮುದಾಯದ ಸಿದ್ದು ಸವದಿ ಶಾಸಕರಾದರೆ. ಒಂದು ಬಾರಿ ನೇಕಾರ ಸಮಾಜದ ಉಮಾಶ್ರಿ ಶಾಸಕಿಯಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಉಮಾಶ್ರಿ ಸಚಿವೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಇಂತಹ ಕ್ಷೇತ್ರದಲ್ಲಿ 2023ರ ಚುನಾವಣೆ ಬಾರಿ ಕುತೂಹಲ ಕೆರಳಿಸಿದೆ.

    ಉಮಾಶ್ರಿ ವಿರುದ್ಧ ಪರಕೀಯರು ಎಂಬ ವಿರೋಧಿ ಅಲೆ
    ಈ ಬಾರಿ ತೇರದಾಳ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಎರಡು ಪಕ್ಷದಲ್ಲಿ ಹೆಚ್ಚಾಗಿದೆ. ಉಮಾಶ್ರಿ ಈ ಭಾಗದವರಾಗದ ಕಾರಣ ಈ ಬಾರಿ ಕಾಂಗ್ರೆಸ್‍ನಲ್ಲಿ ಎಲ್ಲಾ ಮುಖಂಡರು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. 16 ಜನರು ತೇರದಾಳ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದು, ಟಿಕೆಟ್‍ಗಾಗಿ ಇನ್ನಿಲ್ಲದ ಪ್ರಯತ್ನ ಶುರು ಮಾಡಿದ್ದಾರೆ. ಉಮಾಶ್ರಿ ಬಿಟ್ಟು ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕಾಂಗ್ರೆಸ್ ಬೆಂಬಲಿಸೋದಾಗಿ ಕಾರ್ಯಕರ್ತರು ನಿಂತಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಮುಖವಾಗಿ ವೈದ್ಯರೇ ಆಕಾಂಕ್ಷಿಗಳಾಗಿದ್ದಾರೆ. ಕಣ್ಣಿನ ವೈದ್ಯ ಡಾ.ಪದ್ಮಜಿತ್ ನಾಡಗೌಡ, ಜೈನ ಸಮುದಾಯಕ್ಕೆ ಸೇರಿದವರು. ಪಂಚಮಸಾಲಿ ಸಮುದಾಯಕ್ಕೆ ಸೇರಿದ ಡಾ.ಎ.ಆರ್ ಬೆಳಗಲಿ, ನೇಕಾರ ಸಮುದಾಯಕ್ಕೆ ಸೇರಿರುವ ಎಮ್.ಎಸ್ ದಡ್ಡೆನವರ ಸೇರಿದಂತೆ 16 ಜನರು ಆಕಾಂಕ್ಷಿಗಳಿದ್ದಾರೆ. ಆದರೆ ಮುಖ್ಯ ರೇಸ್ ನಲ್ಲಿ ಉಮಾಶ್ರಿ, ಪದ್ಮಜಿತ್ ನಾಡಗೌಡ. ಡಾ.ಎ.ಆರ್ ಬೆಳಗಲಿ ಇದ್ದಾರೆ.

    ಬಿಜೆಪಿಯಲ್ಲೂ ಕೂಡ ಟಿಕೆಟ್ ಅಸಮಾಧಾನ
    ಬಿಜೆಪಿಯಿಂದ 6-7 ಜನರು ಆಕಾಂಕ್ಷಿಗಳಿದ್ದು ಈ ಬಾರಿ ಟಿಕೆಟ್ ಸಿದ್ದು ಸವದಿಗೆ ನೀಡಬಾರದು ಎಂಬ ಕೂಗು ಕೇಳಿ ಬಂದಿದೆ. ಜೊತೆಗೆ ನೇಕಾರ ಸಮುದಾಯಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಡ ಬರುತ್ತಿದೆ. ಆದರೆ ಯಡಿಯೂರಪ್ಪ ಬನಹಟ್ಟಿ ವಿಜಯಸಂಕಲ್ಪ ಯಾತ್ರೆಗೆ ಬಂದಾಗ ಸಿದ್ದು ಸವದಿಯನ್ನು ಆರಿಸಿ ಕಳಿಸಿ ಎಂದಿದ್ದರು. ಮರುದಿನ ಬಾಯಿ ತಪ್ಪಿ ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.

    ಕ್ಷೇತ್ರದಲ್ಲಿ ನೇಕಾರರು ಹೆಚ್ಚಿನ ಪ್ರಭಾವ ಹೊಂದಿದ ಕಾರಣ ನೇಕಾರರಿಗೆ ಸಾಲ ಸೌಲಭ್ಯ, ನೇಕಾರರ ಅಭಿವೃದ್ಧಿ, ನೇಕಾರರ ಸಾಲ ಮನ್ನಾ, ಮಗ್ಗಗಳಿಗೆ ವಿದ್ಯುತ್ ಎಲ್ಲವೂ ಚುನಾವಣೆಯ ಪ್ರಮುಖ ಅಸ್ತ್ರಗಳಾಗಿರುತ್ತವೆ. ನೇಕಾರ ಕ್ಷೇತ್ರದಲ್ಲಿ ಈ ಬಾರಿ ಆಕಾಂಕ್ಷಿಗಳ ಪಟ್ಟಿ ಎರಡು ಪಕ್ಷದಲ್ಲಿ ಹೆಚ್ಚಾಗಿದೆ. ಇದು ಚುನಾವಣೆಯ ಕುತೂಹಲದ ಕಾವನ್ನು ಹೆಚ್ಚಿಸಿದೆ. ಇದನ್ನೂ ಓದಿ: ಈ ಬಾರಿ 20ಕ್ಕೂ ಹೆಚ್ಚು ಹಾಲಿ ಬಿಜೆಪಿ ಶಾಸಕರಿಗೆ ಕೊಕ್‌?

  • ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ

    ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ

    ಮಂಡ್ಯ: ವಿಧವೆಯರಿಗೆ ಪೆನ್ಷನ್ ಮಾಡಿದ್ದು ಇಂದಿರಾಗಾಂಧಿ, ರೇಷನ್ ಕಾರ್ಡ್ (Ration Card) ತಂದಿದ್ದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government). ರೇಷನ್ ಕಾರ್ಡ್ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ನಿಂದ ಅಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ (Umashree) ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎಂದ್ರು. ಅವರು ಇಂದು ನಮ್ಮ ಜೊತೆ ಇಲ್ಲ. ಬಡವರನ್ನ ಎಬ್ಬಿಸಿದ ಆ ತಾಯಿಯನ್ನ ನಾವು ನೆನೆಯಬೇಕು. ಮಹಾತ್ಮಗಾಂಧಿಗೆ ಗುಂಡೇಟು ಹೊಡೆದ ಜನರೇ ಇಂದಿರಾಗಾಂಧಿ ಕೊಂದರು. ಆ ತಾಯಿಗೆ 18 ಗುಂಡುಗಳನ್ನ ಹೊಡೆದ್ರು. ಇಡೀ ದೇಶದ ಜನರಿಂದ ಕಣ್ಣೀರ ಕೋಡಿ ಹರಿಯಿತು. ಅಂತಹ ನಾಯಕಿಯನ್ನ ನಾವು ಇಂದು ನೆನಪಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ದರ್ಗಾ ಹೋಲುವ ಕಟ್ಟಡ – ತೆರವಿಗೆ ಸಂಸದ ಪತ್ರ

    ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು. ಕೋಮುವಾದ ಸೃಷ್ಟಿಮಾಡುವ ಬಿಜೆಪಿ ಇಡೀ ದೇಶವನ್ನ ಛಿದ್ರ ಮಾಡಿಬಿಟ್ಟರು. ಬಿಜೆಪಿ ಪಕ್ಷದವರು ಜಾತಿ-ಜಾತಿ, ಧರ್ಮ ಧರ್ಮಗಳ ನಡುವೆ ನಂಜುಕಾರುವ ಆಗೆ ಮಾಡಿದ್ದಾರೆ. ಬಿಜೆಪಿ ಇರುವವರೆಗೂ ಬಡವರು, ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವನ್ನ ಹಿಟ್ಲರ್ ಆಡಳಿತಕ್ಕೆ ಉಮಾಶ್ರೀ ಹೋಲಿಸಿದರು.

    ಧರ್ಮ, ಸುಳ್ಳುಗಳ ಮೇಲೆ ಬಿಜೆಪಿ ಆಡಳಿತ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಕಥೆ. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಕಥೆ ಕಟ್ತಾರೆ. ಇನ್ನೊಂದು ಕಡೆ ಹಿಜಬ್ ತರ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಬಿಜೆಪಿಗೆ ಉರಿ. ಆದ್ದರಿಂದ ಜನರ ಮನಸ್ಸನಲ್ಲಿ ಕಥೆ ಕಟ್ಟಿ ಬೇರೆ ಕಡೆ ತಿರುಗಿಸುತ್ತಾರೆ ಎಂದು ಹೇಳಿದರು.

    ಗೌಡರು ಬೇಡ, ಲಿಂಗಾಯರು ಬೇಕಾಗಿಲ್ಲ. ಎಲ್ಲ ಜಾತಿಗಳನ್ನ ಛಿದ್ರಮಾಡಬೇಕು, ಮತವಿಭಜನೆ ಮಾಡಬೇಕೆಂಬುದೆ ಬಿಜೆಪಿ (BJP) ತಂತ್ರ. ಬಂಡವಾಳ ಶಾಹಿಗಳನ್ನ ಮೇಲೆ ತರಲು ಈ ರೀತಿ ವಿಷಯ ತರುತ್ತಿದ್ದಾರೆ. ತೇಜಸ್ವಿ ಸೂರ್ಯ ರೈತರ ಸಾಲ ಮಾಡಿದ್ರೆ ದೇಶಕ್ಕೆ ಕಂಟಕ ಅಂತಾರೆ. ಅಯ್ಯೋ ಪುಣ್ಯಾತ್ಮ ನಿನಗೆ ಏನು ಗೊತ್ತಪ್ಪ ಎಂದು ಉಮಾಶ್ರೀ ಪ್ರಶ್ನಿಸಿದರು.

  • ಒಟಿಟಿಯಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಹೊಸ ರೆಕಾರ್ಡ್

    ಒಟಿಟಿಯಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಹೊಸ ರೆಕಾರ್ಡ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ShivrajKumar) ಅಭಿನಯದ 125ನೇ ಸಿನಿಮಾ ‘ವೇದ’ (Veda) ಚಿತ್ರಮಂದಿರದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದು ಗೊತ್ತೇ ಇದೆ. ಚಿತ್ರಮಂದಿರದಲ್ಲಿ ಸೂಪರ್ ಸಕ್ಸಸ್ ಕಂಡ ಸಿನಿಮಾ ಫೆಬ್ರವರಿ 10ರಂದು ZEE5ನಲ್ಲಿ ಬಿಡುಗಡೆಗೊಂಡು ಇಲ್ಲಿಯೂ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಕೆಲವೇ ದಿನದಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡು ರೆಕಾರ್ಡ್ (Record) ಕ್ರಿಯೇಟ್ ಮಾಡಿದೆ. ಇದೇ ಖುಷಿಯಲ್ಲಿ ZEE5 ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮ ಆಚರಿಸಿದೆ.

    ಸಂತೋಷ್ ಚಿತ್ರಮಂದಿರದಲ್ಲಿ ‘ವೇದ’ ಚಿತ್ರದ ಶಿವಣ್ಣ ಕಟೌಟ್ ನಿಲ್ಲಿಸಿ ZEE5 ಸಂಭ್ರಮ ಆಚರಣೆ ಮಾಡಿದೆ. ಈ ಸಂಭ್ರಮಾಚರಣೆಯಲ್ಲಿ ದೊಡ್ಮನೆ ಅಭಿಮಾನಿಗಳು ಭಾಗಿಯಾಗಿ ಸಂತಸ ಪಟ್ಟಿದ್ದಾರೆ. ಒಟಿಟಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡಿದ್ದು ZEE5 ನಲ್ಲಿ ದಾಖಲೆ ಬರೆದಿದೆ. ಈ ಮೂಲಕ ಚಿತ್ರಮಂದಿರದ ಜೊತೆಗೆ ZEE5 ಒಟಿಟಿಯಲ್ಲೂ ಸಿನಿಮಾ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಬಿಡುಗಡೆಗೊಂಡಿತ್ತು. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಾಗಿರುವ ಈ ಚಿತ್ರ ಶಿವಣ್ಣ ಅಭಿನಯದ 125ನೇ ಸಿನಿಮಾ ಅನ್ನೋದು ಚಿತ್ರದ ವಿಶೇಷ.

    ಚಿತ್ರದಲ್ಲಿ ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.