Tag: Umapati Srinivas Gowda

  • ರ‍್ಯಾಲಿಗೆ ಅನುಮತಿ ನಿರಾಕರಣೆ:  ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್

    ರ‍್ಯಾಲಿಗೆ ಅನುಮತಿ ನಿರಾಕರಣೆ: ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್

    ಇಂದು ಬೊಮ್ಮನಹಳ್ಳಿಯಲ್ಲಿ ನಡೆಯಬೇಕಿದ್ದ ಬೈಕ್ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ರದ್ದು ಮಾಡಲಾಗಿದೆ. ಆದರೆ, ಈ ರ‍್ಯಾಲಿ ನಡೆಯದೇ ಬಿಡಲಿಲ್ಲ. ಮುಂದಿನ ದಿನಾಂಕವನ್ನು ತಿಳಿಸುವುದಾಗಿ ದರ್ಶನ್ ಫ್ಯಾನ್ಸ್ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಯಾರಿಗೆ ಠಕ್ಕರ್ ಕೊಡಬೇಕು ಎಂದುಕೊಂಡಿದ್ದರೋ ಕೊಟ್ಟೇ ಕೊಡುತ್ತೇವೆ ಎಂದು ಮತ್ತೊಮ್ಮೆ ಸಂದೇಶ ರವಾನಿಸಿದ್ದಾರೆ.

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ಠಕ್ಕರ್ ಕೊಡುವುದಕ್ಕಾಗಿ ನಟ ದರ್ಶನ್ (Darshan) ಅಭಿಮಾನಿಗಳು (Fans) ಇಂದು ಬೈಕ್ ರ‍್ಯಾಲಿ (Bike rally) ಏರ್ಪಡಿಸಿದ್ದರು. ಈ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹಾಗಾಗಿ ಇಂದು ಬೈಕ್ ರ‍್ಯಾಲಿ ನಡೆದಿಲ್ಲ.

    ಇಂದು (ಫೆ.26) `ಡಿ ಬಾಸ್ ಜಿಂದಾಬಾದ್’ ಹೆಸರಲ್ಲಿ ದರ್ಶನ್ ಅಭಿಮಾನಿಗಳಿಂದ ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಿದ್ದರು. ಹಾಗಾಗಿ ದರ್ಶನ್- ಉಮಾಪತಿ ಸಮರ ನಿಲ್ಲುತ್ತಿಲ್ಲ. ಉಮಾಪತಿಗೆ (Umapathy) ಪಾಠ ಕಲಿಸಲೆಂದೇ ‘ಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸಿದ್ದರು. ಡಿಬಾಸ್ ಫ್ಯಾನ್ಸ್ ಟೀಮ್‌ಗೆ ಒಂಟಿ ಸಲಗ ಎಂದು ಹೆಸರಿಟ್ಟಿದ್ದರು.

    ರ‍್ಯಾಲಿ ಮಾಡ್ತಿರೋ ಜಾಗವೇ ಗಮನಾರ್ಹವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಬೃಹತ್ ರ‍್ಯಾಲಿಯಲ್ಲಿ ದರ್ಶನ್ ಸಾವಿರಾರು ಅಭಿಮಾನಿಗಳು ಒಗ್ಗಟ್ಟು ಪ್ರದರ್ಶಿಸಲಿದ್ದರು. ಬೊಮ್ಮನಹಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಹೆಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ರ‍್ಯಾಲಿ ನಡೆಯಬೇಕಿತ್ತು. ಉಮಾಪತಿಗೆ ಠಕ್ಕರ್ ಕೊಡಲು ಅವರದ್ದೇ ಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಗೆ ಡಿಬಾಸ್ ಫ್ಯಾನ್ಸ್ ರ‍್ಯಾಲಿ ಮಾಡಲು ಹೊರಟಿದ್ದರು.

    ಇತ್ತೀಚೆಗೆ ಉಮಾಪತಿ ಅವರು ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದೇ ನಾನು ಎಂದು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಕಾಟೇರ ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಪ್ರತಿಕ್ರಿಯೆ ನೀಡಿದ್ದರು. ಹೇ ತಗಡು ಚಿತ್ರಕ್ಕೆ ‘ಕಾಟೇರ’ ಎಂದು ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಉಮಾಪತಿಗೆ ತಿರುಗೇಟು ನೀಡಿದ್ದರು.

  • ದರ್ಶನ್, ಉಮಾಪತಿ ವಿವಾದ: ಚಿತ್ರರಂಗಕ್ಕೆ ಒಳ್ಳೆಯದಲ್ಲ ಎಂದ ನಿರ್ದೇಶಕ ಇಂದ್ರಜಿತ್

    ದರ್ಶನ್, ಉಮಾಪತಿ ವಿವಾದ: ಚಿತ್ರರಂಗಕ್ಕೆ ಒಳ್ಳೆಯದಲ್ಲ ಎಂದ ನಿರ್ದೇಶಕ ಇಂದ್ರಜಿತ್

    ಟ ದರ್ಶನ್ (Darshan) ಮತ್ತು ಉಮಾಪತಿ (Umapati Srinivas Gowda) `ಕಾಟೇರ’ ಟೈಟಲ್ ಕದನ ಕಳೆದ 5 ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಈ ಬೆಳವಣಿಕೆಯ ಬಗ್ಗೆ ಇಂದ್ರಜಿತ್ (Indrajit Lankesh) ರಿಯಾಕ್ಟ್ ಮಾಡಿದ್ದಾರೆ. ಇಬ್ಬರ ಜಗಳ ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಿರ್ದೇಶಕ ಇಂದ್ರಜಿತ್ ಮಾತನಾಡಿದ್ದಾರೆ.

    ಕಾಟೇರ ಸಿನಿಮಾ ಯಶಸ್ವಿಯಾಗಿದೆ. ಬಹಳಷ್ಟು ವರ್ಷಗಳ ಬಳಿಕ ದರ್ಶನ್‌ಗೆ ಒಂದು ಸಕ್ಸಸ್ ಸಿಕ್ಕಿದೆ. `ಕಾಟೇರ’ ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಈ ಟೈಮ್‌ನಲ್ಲಿ ಈ ರೀತಿ ಮಾಡಿಕೊಳ್ಳಬಾರದಿತ್ತು ಎಂದು ಇಂದ್ರಜಿತ್ ಹೇಳಿದ್ದಾರೆ.

    ನನ್ನ ಪ್ರೀತಿಯ ರಾಮು, `ಸಂಗೊಳ್ಳಿ ರಾಯಣ್ಣ’ ಬಳಿಕ ದರ್ಶನ್ ಕಾಟೇರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಹಿಟ್ ಆಗಿದೆ. ಇಂತಹ ಸಮಯದಲ್ಲಿ ಅವರುಗಳೇ ಕುಳಿತು ಇದನ್ನು ಸರಿಮಾಡಿಕೊಳ್ಳಬೇಕು. ಇದು ಇಂಡ್ರಸ್ಟಿçಗೆ ಶೋಭೆ ತರುವಂತಹ ವಿಚಾರವಲ್ಲ. ಈ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಅದು ಕೆಟ್ಟ ಬೆಳವಣಿಗೆ ಆಗುತ್ತೆ.

    ಸೋಷಿಯಲ್ ಮೀಡಿಯಾ ಒಂದು ಅದ್ಬುತ ಜಗತ್ತು. ಆದರೆ ಕೆಲವು ಕಿಡಿಗೇಡಿಗಳು ದುರುಪಯೋಗ ಮಾಡಿಕೊಳ್ತಿದ್ದಾರೆ. ಒಬ್ಬರನ್ನು ತುಳಿಯೋದ್ದಕ್ಕೆ ಬಳಕೆ ಮಾಡ್ತಿದ್ದಾರೆ. ಇದು ಕನ್ನಡ ಇಂಡಸ್ಟಿçಯ ಮೇಲೆ ಕೆಟ್ಟ ಪರಿಣಾಮ ಬಿರುತ್ತೆ. ಮತ್ತೆ ಸಿನಿಮಾಗಳು ಗಡಿ ದಾಟಿ ರೀಚ್ ಆಗಿರೋದ್ದಕ್ಕೆ ಕಾರಣ ಸೋಷಿಯಲ್ ಮೀಡಿಯಾ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳೋಣ ಎಂದು ಇಂದ್ರಜಿತ್ ಮಾತನಾಡಿದ್ದಾರೆ.

    ಸದ್ಯ ಇಂದ್ರಜಿತ್ ಲಂಕೇಶ್ ನಿರ್ದೇಶನದ `ಗೌರಿ’ ಸಿನಿಮಾದಲ್ಲಿ ಪುತ್ರ ಸಮರ್ಜಿತ್, ಸಾನ್ಯ ಅಯ್ಯರ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 90%ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ. ಸದುದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

  • ನಿರ್ಮಾಪಕನಿಲ್ಲದೇ ನಡೆಯದು ನಾಟಕ: ಉಮಾಪತಿ ಶ್ರೀನಿವಾಸ್ ಫೋಟೋ ಬಳಸಿದ್ದೇಕೆ?

    ನಿರ್ಮಾಪಕನಿಲ್ಲದೇ ನಡೆಯದು ನಾಟಕ: ಉಮಾಪತಿ ಶ್ರೀನಿವಾಸ್ ಫೋಟೋ ಬಳಸಿದ್ದೇಕೆ?

    ನಿನ್ನೆಯಷ್ಟೇ ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ ಹೆಸರಿನಲ್ಲಿ ಹಾಡೊಂದು ಬಿಡುಗಡೆ ಆಗಿದೆ. ಮಂಜು ಕವಿ (Manju Kavi) ಎನ್ನುವವರು ಸಾಹಿತ್ಯ ಬರೆದು, ಈ ಗೀತೆಯನ್ನು ತಮ್ಮದೇ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಉಮಾಪತಿ (Umapati Srinivas Gowda) ಮತ್ತು ದರ್ಶನ್ (Darshan) ನಡುವಿನ ಗಲಾಟೆಯ ಕಾವಿನಲ್ಲೇ ಈ ಹಾಡಿ ರಿಲೀಸ್ ಆಗಿದ್ದರಿಂದ ಅದಕ್ಕೆ ನಾನಾ ಅರ್ಥಗಳನ್ನೂ ಕಲ್ಪಿಸಲಾಗುತ್ತಿದೆ.

    ನಿರ್ಮಾಪಕ ಉಮಾಪತಿ ಅವರಿಗೆ ‘ತಗಡು’ ಎಂದು ದರ್ಶನ್ ಹೇಳಿದ್ದರಿಂದ ಮತ್ತು ಉಮಾಪತಿ ಅವರು ಡಾ.ರಾಜ್ ಕುಮಾರ್ ಅವರ ವಿಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿ ದರ್ಶನ್ ಗೆ ಟಾಂಗ್ ನೀಡಿದ್ದರಿಂದ ಈ ಹಾಡು ಮಹತ್ವ ಪಡೆದುಕೊಂಡಿದೆ. ಜೊತೆಗೆ ಹಾಡಿನಲ್ಲಿ ಮುಖ್ಯವಾಗಿ ಉಮಾಪತಿ ಅವರ ಫೋಟೋ ಬಳಸಲಾಗಿದೆ.

    ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಮಂಜು ಕವಿ, ಇದು ಈಗ ಮಾಡಿರುವಂಥ ಹಾಡಲ್ಲ. ಮೂರು ತಿಂಗಳ ಹಿಂದೆಯೇ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉಮಾಪತಿ ಅವರು ಆಗಲೇ ಈ ಹಾಡನ್ನು ಮೆಚ್ಚಿಕೊಂಡಿದ್ದರಿಂದ ಮತ್ತು ಅವರ ಸಹಾಯದಲ್ಲಿ ಇದು ಮೂಡಿ ಬಂದಿದ್ದರಿಂದ ಅವರ ಫೋಟೋ ಬಳಕೆ ಮಾಡಲಾಗಿದೆ ಎಂದಿದ್ದಾರೆ.

     

    ದರ್ಶನ್ ಹಾಗೂ ಉಮಾಪತಿ ಗಲಾಟೆಗಾಗಿ ಈ ಹಾಡು ರಚಿತವಾಗಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ, ಅನೇಕ ನಿರ್ಮಾಪಕರ ಫೋಟೋವನ್ನು ಬಳಸಲಾಗಿದೆ. ಹೀಗಾಗಿ ನಿರ್ಮಾಪಕರು ಇದಕ್ಕೆ ಏನು ಹೇಳುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

  • ನಟ ದರ್ಶನ್ ಹೇಳಿಕೆ ಖಂಡಿಸಿ ದೂರು: ಕ್ಷಮೆ ಕೇಳಲು ಆಗ್ರಹ

    ನಟ ದರ್ಶನ್ ಹೇಳಿಕೆ ಖಂಡಿಸಿ ದೂರು: ಕ್ಷಮೆ ಕೇಳಲು ಆಗ್ರಹ

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ (Darshan) ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು.

    ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

     

    ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  • ‘ಸಿಂಧೂರ ಲಕ್ಷ್ಮಣ’ನಿಗೆ ನಿರ್ಮಾಪಕ ಯಾರು?: ದರ್ಶನ್ ಚಿತ್ರದ ಬಗ್ಗೆ ಚರ್ಚೆ

    ‘ಸಿಂಧೂರ ಲಕ್ಷ್ಮಣ’ನಿಗೆ ನಿರ್ಮಾಪಕ ಯಾರು?: ದರ್ಶನ್ ಚಿತ್ರದ ಬಗ್ಗೆ ಚರ್ಚೆ

    ರ್ಶನ್ ಹುಟ್ಟು ಹಬ್ಬದ ದಿನದಂದು ವೀರ ಸಿಂಧೂರ ಲಕ್ಷ್ಮಣ ಸಿನಿಮಾದ ಅನೌನ್ಸ್‍ ಮೆಂಟ್ ಆಗಿದೆ. ಈ ಸಿನಿಮಾವನ್ನು ಮೀಡಿಯಾ ಹೌಸ್ ನಿರ್ಮಾಣ ಸಂಸ್ಥೆ ಮಾಡಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಈ ವಿಷಯ ಆಚೆ ಬರುತ್ತಿದ್ದಂತೆಯೇ ಈ ಹಿಂದೆ ಇದೇ ಸಿನಿಮಾಗೆ ಪೂಜೆ ಸಲ್ಲಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ (Umapati Srinivas Gowda) ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಜೊತೆಗೆ ರಾಧಾ ಕೃಷ್ಣ ಪಲ್ಲಕ್ಕಿ ಎನ್ನುವವರು ಕೂಡ ಇದೇ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದರು.

    ಮೂರು ವರ್ಷಗಳ ಹಿಂದೆಯೇ ವೀರ ಸಿಂಧೂರ ಲಕ್ಷ್ಮಣ ಸಿನಿಮಾ ಕುರಿತಂತೆ ಸುದ್ದಿ ಹೊರ ಬಿದ್ದಿತ್ತು. ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗಿತ್ತು. ಸ್ಕ್ರಿಪ್ಟ್ ಪೂಜೆ ಕೂಡ ಮಾಡಲಾಗಿತ್ತು. ಆದರೆ, ಕಾಲ ಉರುಳಿದಂತೆ ಈ ಸಿನಿಮಾದ ಅಪ್ ಡೇಟ್ ಕೂಡ ಸಿಗಲಿಲ್ಲ. ಮೂರು ವರ್ಷಗಳ ನಂತರ ಮತ್ತೆ ಈ ಸಿನಿಮಾ ಸುದ್ದಿಗೆ ಸಿಕ್ಕಿದೆ. ಹಾಗಾಗಿ ಈ ಸಿನಿಮಾ ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

    ಶೈಲಜಾ ನಾಗ್, ದರ್ಶನ್, ತರುಣ್ ಕಾಂಬಿನೇಷನ್ ಪಕ್ಕಾ

    ಈಗಾಗಲೇ ಯಜಮಾನ ಮತ್ತು ಕ್ರಾಂತಿ ಸಿನಿಮಾದಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ದರ್ಶನ್ (Darshan) ಅವರಿಗೆ ನೀಡಿರುವ ಮೀಡಿಯಾ ಹೌಸ್ ನ ಶೈಲಜಾ ನಾಗ್ (Shailaja Nag) ಮತ್ತು ಬಿ.ಸುರೇಶ ಮತ್ತೊಂದು ಕ್ರಾಂತಿಕಾರಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ವೀರಯೋಧ ಸಿಂಧೂರ ಲಕ್ಷ್ಮಣ (Veera Sindhoora Laxman) ಅವರ ಜೀವನವನ್ನು ಆಧರಿಸಿದ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

    ಕನ್ನಡ ಸಿನಿಮಾ ರಂಗಕ್ಕೆ ಯಜಮಾನ ಮತ್ತು ಕ್ರಾಂತಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ಶೈಲಜಾ ನಾಗ್ ಮತ್ತು ಬಿ. ಸುರೇಶ. ಇದೇ ಮೊದಲ ಬಾರಿಗೆ ಅವರು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಕಿಡಿ ವೀರ ಸಿಂಧೂರ ಲಕ್ಷ್ಮಣನಂಥ ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕಾಟೇರ ಖ್ಯಾತಿಯ ತರುಣ್ ಸುಧೀರ್ (Tarun Sudhir) ನಿರ್ದೇಶನ ಮಾಡುತ್ತಿದ್ದಾರೆ.

    ವೀರ ಸಿಂಧೂರ ಲಕ್ಷ್ಮಣ ಅಂದಾಕ್ಷಣ ಥಟ್ಟನೆ ನೆನಪಾಗೋದು ಹಿರಿಯ ನಟ ಸುಧೀರ್. ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ ಮಹಾನ್ ಕಲಾವಿದ ಸುಧೀರ್. ತಮ್ಮ ತಂದೆಯ ಅಭಿನಯದ ಅಪರೂಪದ ಪಾತ್ರವನ್ನು ತೆರೆಗೆ ತರಲು ರೆಡಿಯಾಗುತ್ತಿದ್ದಾರೆ ತರುಣ್ ಸುಧೀರ್. ಕ್ರಾಂತಿ ಪುರುಷ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ.

     

    ಕಿರುತೆರೆ ಮತ್ತು ಹಿರಿತೆರೆಗೆ ಸಾಕಷ್ಟು ಕೊಡುಗೆ ನೀಡಿದ ಮೀಡಿಯಾ ಹೌಸ್ ಸ್ಟುಡಿಯೋ, ಈಗಾಗಲೇ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳನ್ನು ತಯಾರಿಸಿದೆ. ಜೊತೆಗೆ ಭಾರೀ ಬಜೆಟ್  ಸಿನಿಮಾಗಳನ್ನೂ ನಿರ್ಮಾಣ ಮಾಡಿದೆ. ಇದೀಗ ಮತ್ತೊಂದು ಅದ್ಧೂರಿ ಬಜೆಟ್ ಚಿತ್ರಕ್ಕೆ ಕೈ ಹಾಕಿದೆ.

  • ಸಿಂಧೂರ ಲಕ್ಷ್ಮಣ ಸಿನಿಮಾ ಆಗುತ್ತಾ? ಅಂದುಕೊಂಡಿದ್ದು ನಡೆಯೋದು ಅನುಮಾನ?

    ಸಿಂಧೂರ ಲಕ್ಷ್ಮಣ ಸಿನಿಮಾ ಆಗುತ್ತಾ? ಅಂದುಕೊಂಡಿದ್ದು ನಡೆಯೋದು ಅನುಮಾನ?

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹಾಗಾಗಿ ಅವರ ಹಳೆಯ ಕನಸೊಂದು ಮತ್ತೆ ಚಿಗುರೊಡೆದ ಬಗ್ಗೆ ಮಾತನಾಡಿದ್ದಾರೆ. ನಿನ್ನೆಯಷ್ಟೇ ಹಾಸ್ಯನಟ ಚಿಕ್ಕಣ್ಣಗಾಗಿ ಸಿನಿಮಾ ಶುರು ಮಾಡಿರುವ ಅವರು, ಈಗಾಗಲೇ ಹೇಳಿಕೊಂಡಂತೆ ‘ವೀರ ಸಿಂಧೂರ ಲಕ್ಷ್ಮಣ’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ಕಳೆದೊಂದು ವರ್ಷದಿಂದ ಸುಮ್ಮನೆ ಇದ್ದವರು, ಇದೀಗ ಏಕಾಏಕಿಯಾಗಿ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಇಷ್ಟೊತ್ತಿಗೆ ಶೂಟಿಂಗ್ ಶುರುವಾಗಿ, ಕೊನೆಯ ಹಂತದ ಚಿತ್ರೀಕರಣದಲ್ಲಿ ಇರಬೇಕಿತ್ತು. ಕನ್ನಡದ ಸ್ಟಾರ್ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಅವರೇ ಲಕ್ಷ್ಮಣನ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಆ ನಟನಿಗೂ ಮತ್ತು ನಿರ್ಮಾಪಕರಿಗೆ ಮನಸ್ತಾಪದ ಕಾರಣದಿಂದಾಗಿ ಪ್ರಾಜೆಕ್ಟ್ ತಣ್ಣಗಾಯಿತು. ಇದೀಗ ಮತ್ತೆ ಆ ಸಿನಿಮಾವನ್ನು ಮಾಡುವುದಾಗಿ ಉಮಾಪತಿ ನಿನ್ನೆಯಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಈ ಸಿನಿಮಾ ನಿರ್ದೇಶನ ಮಾಡಬೇಕಾಗಿದ್ದು ತರುಣ್ ಸುಧೀರ್. ತರುಣ್ ಅವರ ತಂದೆ ನಟ ಸುಧೀರ್ ಅವರು ಸಿಂಧೂರ ಲಕ್ಷ್ಮಣ ಪಾತ್ರದ ಮೂಲಕ ರಂಗಭೂಮಿಯಲ್ಲಿ ಫೇಮಸ್ ಆದವರು. ಹಾಗಾಗಿ ಈ ಪಾತ್ರವನ್ನು ಯಾರು ಚೆನ್ನಾಗಿ ನಿಭಾಯಿಸಬಲ್ಲರು ಎಂದು ಅವರಿಗೆ ಅಂದಾಜಿತ್ತು. ಹಾಗಾಗಿ ಸ್ಟಾರ್ ನಟನನ್ನೇ ಆಯ್ಕೆ ಮಾಡಿಕೊಂಡರು. ಆಮೇಲೆ ಅದೇನಾಯಿತೋ? ಈ ಸಿನಿಮಾವನ್ನು ಬಿಟ್ಟು, ಅದೇ ನಟರಿಗೆ ಮತ್ತೊಂದು ಕಥೆ ಬರೆದುಕೊಂಡರು ತರುಣ್. ಹಾಗಾಗಿ ಸಿಂಧೂರ ಲಕ್ಷ್ಮಣ ಸದ್ಯಕ್ಕಂತೂ ಅನುಮಾನ.

    ಈ ಸಿನಿಮಾ ಮೂಡಿ ಬಂದರೆ, ಒಂದೊಳ್ಳೆ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಗೊಂದಲ. ಈ ಗೊಂದಲ ನಿವಾರಣೆ ಆಗುವುದು ತೀರಾಕಷ್ಟ. ಯಾಕೆಂದರೆ, ಸಂಬಂಧಗಳು ಅಷ್ಟೊಂದು ಸರಿ ಹೋಗಿಲ್ಲ. ಹಾಗಾಗಿ ಉಮಾಪತಿ ಬೇರೆ ನಟರಿಗೆ ಈ ಸಿನಿಮಾ ಮಾಡುತ್ತಾರಾ? ಅಥವಾ ಆಗಿರುವ ಗೊಂದಲಗಳನ್ನು ಸರಿ ಮಾಡಿಕೊಂಡು ಆ ಸ್ಟಾರ್ ನಟನ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv