Tag: Umapathy

  • ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ

    ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ

    – ನನ್ನ ಗಂಡ ಸಾಚಾ ಅಲ್ಲ
    – ನಾನು ಕಳ್ಳತನ ಮಾಡಿದ್ದೀನಾ?

    ಬೆಂಗಳೂರು: 25 ಕೋಟಿ ದೋಖಾ ಡೀಲ್ ಗೆ  ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು,  ಉಮಾಪತಿಯವರು ಮಾಡಿದ್ದು ತಪ್ಪು. ನನ್ನನ್ನು ಬದುಕಲು ಬಿಡಿ ಎಂದು ಅರುಣಾ ಕುಮಾರಿ ಅವರು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಇದು ಜನರಲ್ ಟಾಕ್ ಅಷ್ಟೇ. ಮಾರ್ಚ್ 30ರಿಂದ ನನಗೆ ಉಮಾಪತಿಯವರ ಜೊತೆ ಕಾಂಟ್ಯಾಕ್ಟ್ ಇದೆ. ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ ಎಂದರು.

    ಅರುಣಾ ಹೇಳಿದ್ದು ಏನು?
    ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಮಾಡ್ತಿದ್ದೀರಿ? ಹರ್ಷ ಏನೋ ಮಾಡುತ್ತಿದ್ದಾನೆ ಎನ್ನುವುದನ್ನು ಉಮಾಪತಿ ಹೇಳಬಹುದಿತ್ತು. ನನ್ನನ್ನು ಏಕೆ ಬಳಸಿಕೊಂಡಿರಿ?

    ಉಮಾಪತಿ ತಪ್ಪು ಅಂತಾ ಹೇಳುತ್ತಿಲ್ಲ. ದರ್ಶನ್ ತಪ್ಪು ಅಂತಾ ಹೇಳುತ್ತಿಲ್ಲ. ನೀವೇ ಹೋಗಿ ಹರ್ಷ ಬಳಿ ಮಾತನಾಡಬಹುದಿತ್ತು. ಈ ಪ್ರಕರಣದಿಂದ ನನ್ನ ಕುಟುಂಬ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ. ಇದನ್ನೂ ಓದಿ : ಮೂರು ವಿಷಯ ಹೇಳಬೇಡಿ ಅಂದಿದ್ದಾರೆ ದರ್ಶನ್ ಸರ್: ಉಮಾಪತಿ

    ಲೋನ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಇದು ತಪ್ಪು ವರದಿ. ಲೋನ್ ಅಪ್ರೋಚ್ ಮಾಡಿದ್ದಾರೆ ಎಂದಾಗಬೇಕು. ನಾನು ದರ್ಶನ್ ಮನೆಗೆ ಹೋಗಿದ್ದೇನೆ. ಫಾರಂ ಹೌಸಿಗೆ ಹೋಗಿದ್ದೇನೆ. ನಾನು ಕಳ್ಳತನ ಮಾಡಿದ್ದೀನಾ? ಯಾರಿಂದ ಯಾರಿಗೂ ಮೋಸ ಆಗಿಲ್ಲ. ನನಗೆ ದರ್ಶನ್ ಖಾತೆಯಿಂದ ಯಾವುದೇ ದುಡ್ಡು ಬಂದಿಲ್ಲ. ಈ ಪ್ರಕರಣದಿಂದ ನನ್ನಿಂದ ನನ್ನ ತಂದೆ, ತಾಯಿ ಮಗು ಎಲ್ಲರೂ ಬೀದಿಗೆ ಬರುವಂತಾಗಿದೆ. ತುಂಬಾ ನೋವಿನಲ್ಲಿ ಮಾತನಾಡುತ್ತಿದ್ದೇನೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಯಾಕೆ ಮಾಡುತ್ತಿದ್ದೀರಿ.


    ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನು? ನನ್ನನ್ನು ಉಪಯೋಗಿಸಿದ್ದು ತಪ್ಪು. ತೇಜೋವಧೆ ಮಾಡಿದ್ದು ಯಾಕೆ? ಹಾರ್ಟ್ ಸಿಂಬಲ್ ಕಳುಹಿಸಿದ್ದೇನೆ. ಅಪ್ಪ ಮಕ್ಕಳಿಗೆ ಕಳುಹಿಸಲ್ವಾ? ಅಣ್ಣ ತಂಗಿಗೆ ಕಳುಹಿಸಲ್ವಾ?

    ನನ್ನ ಗಂಡ ನೀಡಿದ ಫೋಟೋಗಳು ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ನನ್ನ ಪತಿ ಸಾಚಾ ಅಲ್ಲ. ನನಗೆ ಆತನನ್ನು ಗಂಡ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ. ಈಗ ಬಂದಿರುವುದು ಎಲ್ಲ ಸತ್ಯವಲ್ಲ. ಪೊಲೀಸರ ತನಿಖೆಯಲ್ಲಿ ಎಲ್ಲದ್ದಕ್ಕೂ ಉತ್ತರ ಸಿಗಲಿದೆ. ದಯವಿಟ್ಟು ಸ್ವಲ್ಪ ಸಮಯ ಕಾದು ನೋಡಿ.

  • ನಾನು ತಪ್ಪು ಮಾಡಿಲ್ಲ, ಇನ್ನೊಬ್ಬರ ಭಿಕ್ಷೆಯಲ್ಲಿ ಬದುಕಬೇಕಿಲ್ಲ: ಉಮಾಪತಿ

    ನಾನು ತಪ್ಪು ಮಾಡಿಲ್ಲ, ಇನ್ನೊಬ್ಬರ ಭಿಕ್ಷೆಯಲ್ಲಿ ಬದುಕಬೇಕಿಲ್ಲ: ಉಮಾಪತಿ

    ಮೈಸೂರು: ನಾನು ತಪ್ಪು ಮಾಡಿಲ್ಲ, 2 ದಿನ ಟೈಮ್ ಬೇಕು ಅಂತಾ ಹೇಳಿದ್ದೇನೆ. ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

    25 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹರ್ಷ ನನಗೆ ಗೊತ್ತಿರುವ ಸ್ನೇಹಿತರಲ್ಲ. ನನಗೆ ದರ್ಶನ್ ಸರ್‍ರಿಂದ ಪರಿಚಯವಾಗಿದ್ದಾರೆ. ಶ್ಯೂರಿಟಿ ವಿಚಾರವಾಗಿ ನಾನು ದರ್ಶನ್ ಅವರು ಮಾತನಾಡಿಕೊಂಡು ದಾಖಲೆ ಪರಿಶೀಲನೆ ಮಾಡಲು ಮಹಿಳೆಯನ್ನು ಕರೆದಾಗ ಇದು ನಕಲಿ ಎನ್ನುವುದು ಗೊತ್ತಾಯಿತು. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ನಿನ್ನೆ ಕೆಲವು ಮಾಹಿತಿಗಳನ್ನು ಕೊಟ್ಟು ಬಂದಿದ್ದೇನೆ ಎಂದು ಉಮಾಪತಿ ತಿಳಿಸಿದರು. ಇದನ್ನೂ ಓದಿ:  ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

    ನಾನು ತಪ್ಪು ಮಾಡಿಲ್ಲ, ನನಗೆ ಯಾರು ಟೈಮ್ ಕೊಡಬೇಕಿಲ್ಲ, 2 ದಿನ ಟೈಮ್ ಬೇಕು ಅಂತಾ ಹೇಳಿದ್ದೇನೆ. ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಜನ ಸಾವಿರ ಹೇಳುತ್ತಾರೆ. ಆದರೆ ಪೊಲೀಸ್ ಇಲಾಖೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

    ವಾಟ್ಸಾಪ್ ಚಾಟ್ ಅನ್ನು ನಾನು 17 ರಂದೇ ನಾನು ದರ್ಶನ್ ಸರ್‍ಗೆ ಕಳುಹಿಸಿದ್ದೇನೆ. ಹಾಗಾಗಿ ನಾನು ಕದ್ದು ಮುಚ್ಚಿ ಮಾಡೋದು ಏನಿದೆ? ನನಗೆ ಏನು ಗುಂಡಿಟ್ಟು ಸಾಯಿಸುತ್ತಾರಾ? ನಾನೇನು ಮಾಡಿದ್ದೇನೆ? ಕಾನೂನು ಇದೆ, ಭಗವಂತ ಇದ್ದಾನೆ. 24 ಗಂಟೆಯಲ್ಲಿ ಈವರೆಗೆ ಬಂದಿದೆ ಇನ್ನು ಉಳಿದದ್ದು ತನಿಖೆ ಮೂಲಕ ಬರುತ್ತದೆ ಎಂದು ತಿಳಿಸಿದರು.

    ದರ್ಶನ್ ಸರ್ ನನ್ನ ಸ್ನೇಹ ಹಾಗೆ ಇದೆ. ನಿನ್ನೆಯಿಂದ ನಾವು ಸಂಪರ್ಕದಲ್ಲೇ ಇದ್ದೇವೆ. ಅವರು ನೇರವಾಗಿ ಮಾತನಾಡುತ್ತಾರೆ. ನನಗೆ ದೇವರು ಎಲ್ಲಾ ಕೊಟ್ಟಿದ್ದಾನೆ. ನಾನೇ ಕಾನೂನು ಮೂಲಕ ಹೋರಾಟ ಮಾಡಬೇಕು. ಇನ್ನೊಬ್ಬರ ಭಿಕ್ಷೆಯಲ್ಲಿ ನಾನು ಬದುಕಬೇಕಿಲ್ಲ. ನನಗೆ ಕುಡಿಯೋದು, ಪಬ್ ಚಟ ಇಲ್ಲ. ಈ ಪ್ರಕರಣದಲ್ಲಿ ನನ್ನ ಸಿಕ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ. ನನ್ನದೇನು ತಪ್ಪಿಲ್ಲ. ನಾವು ದೂರು ಕೊಟ್ಟಿದ್ದೇವೆ, ತನಿಖೆಯಲ್ಲಿ ಎಲ್ಲಾ ಬಯಲಾಗುತ್ತದೆ ಎಂದು ಹೇಳಿದ್ದಾರೆ.

    ಸ್ಟೇಷನ್‍ಗೆ ಹೋದಾಗ ಮಹಿಳೆ ಕೂತಿದ್ದರು. ದರ್ಶನ್ ಸರ್ ಮುಂದೆ ಉಮಾಪತಿ ಮಾಡಿಸಿದ್ದು, ಅಂತಾ ಅರುಣಾ ಕುಮಾರಿ ಹೇಳಿದ್ದಾರೆ. ಆದರೆ ಇದನ್ನು ದರ್ಶನ್ ಸರ್ ನಂಬಿಲ್ಲ, ಇದನ್ನ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡೋಣ ಎಂದು ದರ್ಶನ್ ಸರ್ ಹೇಳಿರುವುದಾಗಿ ತಿಳಿಸಿದರು.