ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್‍ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy case) ಬಳಿಕ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ವಿಚಾರದಲ್ಲಿ ಇದೀಗ ಪಬ್ಲಿಕ್ ಟಿವಿ ವರದಿ ನಿಜವಾಗಿದೆ.
ದರ್ಶನ್ (Challenging Star Darshan) ಅರೆಸ್ಟ್ ಸುದ್ದಿ ಪ್ರಸಾರ ಮಾಡಿದ್ದ ಮಾಧ್ಯಮಗಳ ಮೇಲೆ ಬೆದರಿಕೆ ಹಾಕಲಾಗಿತ್ತು. ಅಲ್ಲದೇ ದರ್ಶನ್ ವಿರುದ್ಧ ಮಾತನಾಡಿದ್ದ ಉಮಾಪತಿ ಗೌಡ ಹಾಗೂ ಪ್ರಥಮ್ ಗೆ ಅಂದಾಭಿಮಾನಿಗಳು ಬೆದರಿಕೆ ಹಾಕಿದ್ದರು. ಇದೀಗ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಅಶ್ಲೀಲ ಕಮೆಂಟ್, ಬೆದರಿಕೆ ಹಾಕ್ತಿರೋರಿಗೆ ಕಾದಿದೆ ಸಂಕಷ್ಟ ಎಂಬುದಾಗಿ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್!
ಇದೀಗ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರಿನಿಂದ ದರ್ಶನ್ ಅಂದಾಭಿಮಾನಿ ಚೇತನ್ ನನ್ನು ಪೊಲೀಸರು ಎಳೆದು ತಂದಿದ್ದಾರೆ. ಜೊತೆಗೆ ಮತ್ತೊಬ್ಬ ಅಭಿಮಾನಿ ನಾಗೇಶ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆದರಿಕೆ ಹಾಕಿದ ಅಭಿಮಾನಿಗಳ ಮೇಲೆ ಪಿ ಸಿ ಆರ್ ದಾಖಲು ಮಾಡಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಕೋರ್ಟ್ ಸೂಚನೆಯಂತೆ ಎಫ್‍ಐಆರ್ ದಾಖಲು ಮಾಡಲಾಗಿದೆ.
ಅರೆಸ್ಟ್ ಆಗ್ತಿದ್ದಂತೆ ಉಮಾಪತಿ ಗೌಡ ಹಾಗೂ ಪ್ರಥಮ್ ಗೆ ಚೇತನ್ ಕ್ಷಮೆ ಕೇಳಿದ್ದಾನೆ. ಕಾನೂನು ಬದ್ಧವಾಗಿ ನಡೆದುಕೊಳ್ತೀನಿ ಕ್ಷಮಿಸಿ ಅಂತಾ ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.
ಸ್ಯಾಂಡಲ್ವುಡ್ ನಟ ದರ್ಶನ್ (Darshan) ಮತ್ತು ನಿರ್ಮಾಪಕ ಉಮಾಪತಿ ಇಬ್ಬರ ‘ಕಾಟೇರ’ (Kaatera) ಟೈಟಲ್ ಕದನದ ಬೆನ್ನಲ್ಲೇ ರಾಬರ್ಟ್ ನಿರ್ಮಾಪಕನಿಗೆ ಠಕ್ಕರ್ ಕೊಡಲು ಡಿಬಾಸ್ ಫ್ಯಾನ್ಸ್ ಮುಂದಾಗಿದ್ದಾರೆ. ಫೆ.26ರಂದು `ಡಿ ಬಾಸ್ ಜಿಂದಾಬಾದ್’ ಹೆಸರಲ್ಲಿ ದರ್ಶನ್ ಅಭಿಮಾನಿಗಳಿಂದ ಬೃಹತ್ ಬೈಕ್ ರ‍್ಯಾಲಿ ನಡೆಯಲಿದೆ.
ದರ್ಶನ್- ಉಮಾಪತಿ ಸಮರ ನಿಲ್ಲುತ್ತಿಲ್ಲ. ಉಮಾಪತಿಗೆ (Umapathy) ಪಾಠ ಕಲಿಸಲೆಂದೇ ‘ಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸುತ್ತಿದ್ದಾರೆ. ಡಿಬಾಸ್ ಫ್ಯಾನ್ಸ್ ಟೀಮ್‌ಗೆ ಒಂಟಿ ಸಲಗ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಿರ್ಮಾಪಕ ಕುಮಾರ್ ಶಹಾನಿ ನಿಧನ
ರ‍್ಯಾಲಿ ಮಾಡ್ತಿರೋ ಜಾಗವೇ ಗಮನಾರ್ಹವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಬೃಹತ್ ರ‍್ಯಾಲಿಯಲ್ಲಿ ದರ್ಶನ್ ಸಾವಿರಾರು ಅಭಿಮಾನಿಗಳು ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಬೊಮ್ಮನಹಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಹೆಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ರ‍್ಯಾಲಿ ನಡೆಯಲಿದೆ. ಉಮಾಪತಿಗೆ ಠಕ್ಕರ್ ಕೊಡಲು ಅವರದ್ದೇ ಕ್ಷೇತ್ರದಲ್ಲಿ ಫೆ.26ರಂದು ಸಂಜೆ 6 ಗಂಟೆಗೆ ಡಿಬಾಸ್ ಫ್ಯಾನ್ಸ್ ರ‍್ಯಾಲಿ ಮಾಡಲಿದ್ದಾರೆ.
ಇತ್ತೀಚೆಗೆ ಉಮಾಪತಿ ಅವರು ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದೇ ನಾನು ಎಂದು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಕಾಟೇರ ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಪ್ರತಿಕ್ರಿಯೆ ನೀಡಿದ್ದರು. ಹೇ ತಗಡು ಚಿತ್ರಕ್ಕೆ ‘ಕಾಟೇರ’ ಎಂದು ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಉಮಾಪತಿಗೆ ತಿರುಗೇಟು ನೀಡಿದ್ದರು.
ಬೆಂಗಳೂರು: 25 ಕೋಟಿ ರೂ. ಡೀಲ್ ವಿಚಾರದ ಬಳಿಕ ಸ್ಯಾಂಡಲ್‍ವುಡ್ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಶೀತಲ ಸಮರ ಮುಂದುವರಿದ್ದು, ಇದೀಗ ದರ್ಶನ್ ವಿರುದ್ಧ ಉಮಾಪತಿಯವರು ಸಮರಕ್ಕೆ ಮುಂದಾಗಿದ್ದಾರೆ.
ಲೋನ್ ಲಡಾಯಿಗೆ ಕಾನೂನಾತ್ಮಕವಾಗಿ ಉತ್ತರ ನೀಡಲು ಉಮಾಪತಿ ಮುಂದಾಗಿದ್ದಾರೆ. ಈಗಾಗಲೇ ತಮ್ಮ ಪರವಾಗಿ ಹೆಸರಾಂತ ಇಬ್ಬರು ವಕೀಲರನ್ನು ನೇಮಿಸಿದ್ದಾರೆ. ಹನುಮಂತರಾಯಪ್ಪ ಮತ್ತು ಶ್ಯಾಂಸುಂದರ್ ಅವರನ್ನು ತಮ್ಮ ವಕೀಲರನ್ನಾಗಿ ನೇಮಿಸಿಕೊಂಡು ಉಮಾಪತಿ ಅವರು ದರ್ಶನ್ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದಾರೆ. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ನಡುವೆ ಉಮಾಪತಿ ತಾನು ನಂಬುವ ದೇವರುಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ. ತಿರುಪತಿಯಿಂದ ಬರ್ತಾ ಇದ್ದಂತೆ ನಿರ್ಮಾಪಕ ಲೀಗಲ್ ಫೈಟ್ ಗೆ ಮುಂದಾಗಿದ್ದಾರೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಉತ್ತರಿಸೋದಾಗಿ ಉಮಾಪತಿ ಹೇಳಿದ್ದಾರೆ. ಇದನ್ನೂ ಓದಿ:ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು
ಬೆಂಗಳೂರು: ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ನಡುವೆ ಉಮಾಪತಿ ತಾನು ನಂಬುವ ದೇವರುಗಳ ಮೊರೆ ಹೋಗುತ್ತಿದ್ದಾರೆ. ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ.
ದರ್ಶನ್ ಹಾಗೂ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಆರಂಭವಾದ ದಿನದಿಂದ ಪ್ರಾರಂಭವಾದ ತಿಕ್ಕಾಟ ದಿನ ಕಳೆದಂತೆ ಬೇರೆ ಬೇರೆ ಮಜಲುಗಳನ್ನು ಪಡೆದುಕೊಂಡು ಹೋಗುತ್ತಿದೆ. ಇತ್ತ ನಿರ್ಮಾಪಕ ಉಮಾಪತಿ ಮಾತ್ರ ಒಂದಲ್ಲಾ ಒಂದು ದೇವರಗಳ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಬನಶಂಕರಿ ದೇವಿಯ ಮೊರೆಹೋದ ನಿರ್ಮಾಪಕ ಉಮಾಪತಿ
ಮೊದಲನೇದಾಗಿ ಉಮಾಪತಿ ಬನಶಂಕರಿಯಲ್ಲಿರುವ ಬನಶಂಕರಿ ತಾಯಿಯ ಮೊರೆ ಹೋಗಿ, ಬಶಂಕರಿ ತಾಯಿ ಬಳಿ ನನಗೆ ಬಂದಿರುವ ಕಷ್ಟಗಳನ್ನು ನಿವಾರಣೆ ಮಾಡುವಂತೆ ಬೇಡಿಕೊಂಡು ಬಂದಿದ್ದರು. ನಿನ್ನೆ ದಿಢೀರ್ ಎಂದು ಕುಟುಂಬದೊಂದಿಗೆ ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಾರೆ.
ಮೈಸೂರು: ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರವಾಗಿ ತಮ್ಮ ಮಧ್ಯೆ ಇರುವ ಮುನಿಸು ಹೊರ ಹಾಕಿದ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಯಾವುದೇ ಕಾರಣಕ್ಕೂ ದೊಡ್ಮನೆ ಹಾಗೂ ನಮಗೂ ಹೋಲಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮರ್ಡರ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು. ನಾನು ಯಾರ ಪರ ವಿರೋಧ ಮಾತನಾಡಿಲ್ಲ. ನಾನು ಕಷ್ಟಪಟ್ಟು ಮಾಡಿರುವ ಆಸ್ತಿ ಇದು. ಇದರ ಬಗ್ಗೆ ಯಾರದರೂ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಇಂದ್ರಜಿತ್ ಅವರು ಮೊದಲು ಆರೋಪಗಳನ್ನು ಸಾಬೀತುಪಡಿಸಲಿ ಮತ್ತೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ
ಇಂಡಸ್ಟ್ರೀ ಯಾರ ಅಪ್ಪನ ಸೊತ್ತು ಅಲ್ಲ. ಕಲೆಗೆ ಬೆಲೆ ಇದ್ದರಷ್ಟೇ ಇಲ್ಲಿ ಇರಬಹುದು ಅಷ್ಟೆ. ತಪ್ಪು ನಾನು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಇಲ್ಲದಿದ್ದರೆ ನಾನ್ಯಾಕೆ ಕೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್
ಯಾವುದೇ ಕರಣಕ್ಕೂ ನಮಗೂ ದೊಡ್ಮನೆಗೂ ಹೋಲಿಕೆ ಮಾಡಬೇಡಿ. ಅವರ ವಿಚಾರವಾಗಿ ನನ್ನ ಹೆಸರನ್ನು ತೆಗೆಯಬೇಡಿ. ಈ ವಿಷಯ ದೊಡ್ಮನೆ ಕಡೆ ಹೋಗಿದ್ದಕ್ಕೆ ನಾನು ಮಾತನಾಡಿದ್ದು. ಇನ್ನೂ ಈ ವಿಷಯ ಬೇರೆ ಕಡೆ ಹೋಗುವ ಮುಂಚೆ ನಾನು ಮಾತನಾಡಲು ಬಂದಿದ್ದೇನೆ. 2006ರಲ್ಲಿ ನನ್ನ ಇಮೇಜ್ ಕೆಟ್ಟು ಹೋಗಿತ್ತು. ನಾವು ಸರಿಯಾಗಿದ್ದರೆ ಯಾರು ಕೂಡ ಯಾರ ಇಮೇಜ್ ಕೂಡ ಕೆಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್
ಮೊದಲು 25 ಕೋಟಿ ಪ್ರಾಪರ್ಟಿ ವಿಷಯ ಮುಗಿಯಲಿ. ಇನ್ನು ಹೋಟೆಲಿನಲ್ಲಿ ನಾನು ಯಾರಿಗೆ ಹೊಡೆದೆ ಎಂಬ ಆರೋಪ ಇದೆ, ಮೊದಲು ಅವನು ಬಂದು ಮೇಡಿಕಲ್ ಸರ್ಟಿಫಿಕೆಟ್ ತೋರಿಸಲಿ. ಆರ್ಡರ್ ಕೊಟ್ಟಿದ್ದು ಲೇಟ್ ಆಗಿತ್ತು, ಅದಕ್ಕೆ ಸಣ್ಣ ವಿಚಾರವಾಗಿ ಗಲಾಟೆ ನಡೆದಿದೆ. ಆದರೆ ಅವರು ಆರೋಪ ಮಾಡಿರುವಂತೆ ಏನೋ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್
150 ಸಂಪಾದನೆ ಮಾಡಿ ಇಲ್ಲಿವರೆಗು ಬಂದಿದ್ದೇನೆ ನನ್ನ ಆಸ್ತಿಯನ್ನು ನೋಡಿಕೊಳ್ಳುವುದು ನನಗೆ ಮುಖ್ಯ. ನಾನು ನನ್ನ ಅಭಿಮಾನಿಗಳಿಗೆ ಗೊತ್ತಾಗಬೇಕೆಂದು ಇಷ್ಟು ಮಾತನಾಡಿದ್ದೇನೆ. ಕಲಾವಿದರು ಒಬ್ಬರು ಕೂಡ ನಮ್ಮ ವಿಚಾರವಾಗಿ ಮಾತನಾಡಿಲ್ಲ ಅವರು ಮಾತನಾಡಲ್ಲ ಎಂದು ದರ್ಶನ್ ಕಿಡಿಕಾರಿದರು.
ಮೈಸೂರು: 25 ಕೋಟಿ ಆಸ್ತಿ ವಿಚಾರ ಇದೀಗ ಬೇರೆ ಯಾವುದೋ ವಿಚಾರವಾಗಿ ದಾರಿ ಹಿಡಿದಿದೆ. ಯಾರ್ ಯಾರೋ ಎಲ್ಲೆಲ್ಲಿಂದನೊ ಬಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇಂದೇ ಸ್ಟಿಂಗ್ ಆಪರೇಶನ್ ಮಾಡಿದ್ರು ನಾನು ಹೆದರಲ್ಲ ಎಂದು ದರ್ಶನ್ ಸವಾಲು ಹಾಕಿದ್ದಾರೆ.
ತಮ್ಮ ಫಾರ್ಮ್‍ಹೌಸ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್, ಆಸ್ತಿ ವಿಚಾರ ಇದೀಗ ಬೇರೆ ಎಲ್ಲೆಲ್ಲೋ ಹೋಗುತ್ತಿದೆ. ಆಸ್ತಿ ವಿಚಾರ ದೊಡ್ಮನೆ ಕಡೆಗೆ ತಿರುಗಿದ್ದು ಬೇಸರವಾಗಿದೆ. ನಮ್ಮ ಅಪ್ಪ ದೊಡ್ಮನೆಯಲ್ಲಿ ಅನ್ನ ತಿಂದಿದ್ದಾರೆ. ನಾನು ಕೂಡ ಅಲ್ಲಿಂದ ಅನ್ನ ತಿಂದು ಬೆಳೆದುಬಂದವನು. ಆಸ್ತಿ ವಿಷಯ ಅಲ್ಲಿವರೆಗೆ ಹೋಗಿರುವುದರಿಂದ ನಾನು ಮಾತನಡಲೇಬೇಕು ಎಂದು ಬಂದಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ
ದೊಡ್ಮನೆ ಆಸ್ತಿ ತೆಗೆಯುವಷ್ಟು ದೊಡ್ಡವರಲ್ಲ ನಾವು. ಈ ಊಹಾಪೋಹಗಳು ಬರುತ್ತಿದೆ. ಇಂದ್ರಜಿತ್ ಗಾಂಡುಗಿರಿ ಎಂದು ಹೇಳಿದ್ದಾರಲ್ವ, ಹಾಗಿದ್ರೆ ಅವರು ನಾನು ಮಾತನಾಡಿರುವ ಒಂದು ಆಡಿಯೋ ಇದೆ ಅದನ್ನು ತೆಗೆದು ಇಡ್ಲಿ. ಆಗ ಅವನು ನಿಜವಾಗಲೂ ಲಂಕೇಶ್‍ಗೆ ಹುಟ್ಟುದವರು ಇಲ್ಲದಿದ್ದರೆ ಗಾಂಡುಗಿರಿ ಯಾರು ಅಂತ ನೋಡೋಣ ಎಂದು ಸವಾಲೆಸೆದಿದ್ದಾರೆ.
ಉಮಾಪತಿ ಹೇಳಿದ್ದೇನು..?
ನಟ ದರ್ಶನ್, ಅರುಣಾ ಕುಮಾರಿ ಮತ್ತು ನಿರ್ಮಾಪಕ ಉಮಾಪತಿ ಲೋನ್ ಕದನಕ್ಕೆ ದರ್ಶನ್ ಮತ್ತು ಉಮಾಪತಿ ನಡುವಿನ ಆಸ್ತಿ ಜಗಳ ಕಾರಣನಾ ಅನ್ನೋ ಪ್ರಶ್ನೆಯೊಂದು ಮುನ್ನಲೆ ಬಂದಿತ್ತು. ಇಂದು ಉಮಾಪತಿ ಅವರೇ, ನನ್ನ ಬಳಿಯಲ್ಲಿರುವ ಪ್ರಾಪರ್ಟಿ ದರ್ಶನ್ ಕೇಳಿದ್ದು ನಿಜ, ನಾನು ಕೊಡಲ್ಲ ಅಂತ ಹೇಳಿರೋದು ಸಹ ನಿಜ ಅಂತ ಒಪ್ಪಿಕೊಂಡಿದ್ದರು. ನಾನು ಪ್ರಾಪರ್ಟಿ ಕೊಡಲ್ಲ ಅಂತ ಹೇಳಿದ್ಮೇಲೆ ದರ್ಶನ್ ಸುಮ್ಮನಾಗಿದ್ದರು. ಆದ್ರೆ ಈ ವಿಚಾರ ಮಾಧ್ಯಮಗಳಲ್ಲಿ ಬಂದಿದ್ದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ಅದು ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸೇರಿದ ಆಸ್ತಿ. ಸದ್ಯದ ಅದು ನನ್ನ ಬಳಿಯಲ್ಲಿದ್ದರಿಂದ ದರ್ಶನ್ ಕೇಳಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡೋದು ಉತ್ತಮ. ಅದು ದೊಡ್ಮನೆಯ ಆಸ್ತಿ ಎಂದರು. ಈ ವಿಷಯವಾಗಿ ದರ್ಶನ್ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಆ ಆಸ್ತಿಯನ್ನ ದರ್ಶನ್ ಅವರಿಗೆ ನೀಡಿದ್ರೆ ಅದು ಬೇರೆ ಆಯಾಮ ಪಡೆದುಕೊಳ್ಳುತ್ತೆ ಅಂತ ನೀಡಲಿಲ್ಲ ಎಂದು ಉಮಾಪತಿ ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ:ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು
ಜೂನ್ 18ರಂದು ದರ್ಶನ್ ಮನೆಯಲ್ಲಿ ಸಭೆ ಸೇರಿದ್ದಾಗ ನನ್ನನ್ನೂ ಕರೆದಿದ್ರೆ ಇದು ಸಣ್ಣ ಮಟ್ಟದಲ್ಲಿಯೇ ಮುಗಿತಿತ್ತು. ಆದ್ರೆ ಅವರೆಲ್ಲ ಏನೋ ಮಾಡೋಕೆ ಹೊರಟಂತಿದೆ. ಹಾಗಾಗಿ ನಾನು ಕಾನೂನು ಮೂಲಕವಾಗಿಯೇ ಹೋರಾಟ ನಡೆಸುತ್ತೇನೆ. ಮಾಧ್ಯಮಗಳ ಮುಂದೆ ನಾನು ಒಬ್ಬನೇ ಬಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡೋಕೆ ಕಾರಣ ಸತ್ಯ. ಇಂದ್ರಜಿತ್ ಲಂಕೇಶ್ ಬಳಿ ಸಹಾಯ ಪಡೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಇಲ್ಲಿಯರೆಗೂ ಒಬ್ಬನೇ ಹೋರಾಟ ನಡೆಯುತ್ತಿದ್ದು, ಮುಂದುವರಿಯಲಿದೆ. ಬ್ಲ್ಯಾಕ್‍ಮೇಲ್ ಮಾಡಿಸಿಕೊಳ್ಳುವಂತೆ ವ್ಯಕ್ತಿ ಅಲ್ಲ. ನನ್ನ ಮೇಲೆ ಆರೋಪ ಮಾಡಿರೋ ಸಾಚಾಗಳಾ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ
ಬೆಂಗಳೂರು: ನಟ ದರ್ಶನ್ ಹೋಟೆಲ್‍ನಲ್ಲಿ ಹೊಡೆದಿರುವುದು ನಿಜ. ದರ್ಶನ್ ಜೊತೆಗಿರುವವರೆಲ್ಲರು ಪೋಲಿಗಳು. ಉಮಾಪತಿಗೆ ದರ್ಶನ್ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ ಎಂದು ಸಂದೇಶ್ ಧ್ವನಿಯನ್ನು ಹೋಲುವ ಆಡಿಯೋ ಈಗ ಬಹಿರಂಗವಾಗಿದೆ.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಮತ್ತು ನಿರ್ದೇಶನ ಇಂದ್ರಜಿತ್ ಲಂಕೇಶ್ ಧ್ವನಿಯನ್ನೇ ಹೋಲುವ ಆಡಿಯೋ ಈಗ ರಿವೀಲ್ ಆಗಿದೆ. ಈ ಆಡಿಯೋದಲ್ಲಿ ದರ್ಶನ್ ಹೊಡೆದಿರುವುದು ನಿಜ ಎಂದು ಸಂದೇಶ್ ಹೇಳಿದ್ದಾರೆ.
ಆಡಿಯೋದಲ್ಲಿ ಏನಿದೆ?
ಕುತ್ಕೊಂಡು ಅವನೇ ಹೊಡೆದಿರೋದು ಬೇರೆ ಕಸ್ಟಮರ್ ಗೆ. **** ಮತ್ತೆ ದರ್ಶನ್ ಒಂದು ರೂಮ್. ಇನ್ನೂ ಅವರಿಗೇನೆ ಊಟ ಹಾಕಿರೋದು ಇವ್ನು. ಈ ಬೃಹಸ್ಪತಿಗಳು ಇವರೇ 15 ಜನ. ನಾನು ಬಂದು ಬೈದಿದ್ದು ಅವರಿಗೇನೆ. ಅಲ್ಲರೀ 15 ಜನ ಒಬ್ಬನನ್ನು ಹೊಡೀತಿದ್ರೆ ನೀನು ನೋಡ್ಕೊಂಡು ನಿಂತಿದ್ಯಲ್ಲಾ ಹರ್ಷ ಅಂತ ಕೇಳ್ದೆ. ಅವನು ಅಣ್ಣ ಅಣ್ಣ ಅಂತ ಕಾಲು ಕಟ್ಬಿಟ್ಟ.
ನಿನ್ನ ಜೊತೆ ಇರೋರು ಯಾರೂ ಒಳ್ಳೇಯವರಲ್ಲ ಅಂತ ನಿನ್ನೆ ಹೇಳ್ದೆ. ಅಲ್ಲ ತಲೆ ಕಡೀತಿನಿ. ಬಡೀತಿನಿ ಅಂತ ಹೋದ್ನಲ್ಲ ಪ್ರೆಸ್‍ಗೆ. ಇದೆಲ್ಲಾ ಶಾಶ್ವತ ಅಲ್ಲ ದರ್ಶನ್. ತಪ್ಪು ನೀನು ಹೇಳಿರೋದು. ಅವರೂ ಒಳ್ಳೆಯವರಲ್ಲ ನಿನ್ ಜೊತೆ ಇರೋರು.
ಉಮಾಪತಿ ಬಗ್ಗೆನೂ ನಿಂಗೆ ಗೊತ್ತು. ನಾನು ಬೇರೆ ಪ್ರೊಡ್ಯೂಸರ್ ಬಗ್ಗೆ ಮಾತಾಡ್ಬಾರ್ದು. ಪೊಲೀಸ್ ತನಿಖೆಯಲ್ಲಿ ನೀನೂ ತಗ್ಲಾಕ್ಕೊತೀಯ. ನನಗೆ ಬೇರೆ ಮಾಹಿತಿನೇ ಬಂದಿದೆ. ಪೊಲೀಸರು ನೋಡಿ ಸರ್. ಅವರು ಸೆಲೆಬ್ರಿಟಿಗಳು ನಾವೇನು ಮಾಡಲು ಆಗಲ್ಲ. ನಿಮ್ಮ ಫ್ರೆಂಡ್ ಕೂಡ ಬರಬೇಕಾಗುತ್ತೆ ಅಂದ್ರು. ಇದನ್ನೂ ಓದಿ: ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್
ದರ್ಶನ್‍ಗೆ ಇದನ್ನೇ ಹೇಳ್ದೆ. ನೀನು ತೋಟಕ್ಕೆ ಬಾ. ತೋಟಕ್ಕೆ ಬಾ ಅಂದ. ನಾವ್ ಸೀನ್‍ಗೂ ಇಲ್ಲ. ಬರೋದೂ ಇಲ್ಲ ಅಂದೆ. ಅವ್ನು ಫೋನ್ ಮಾಡಿದ್ದ. ಅಂದ್ರೆ ಅಪ್ಪ ಕೆಂಡಾಮಂಡಲರಾಗ್ಬಿಟ್ರು. ಏಯ್. ಬಂದ್‍ಗಿಂದ್ ಬಿಟ್ಟೋನು ತಿರ್ಗಾ. ದಯವಿಟ್ಟು ಬೇಡಪ್ಪ.. ಅವ್ನು ತಪ್ಪು ಮಾಡಿರೋದು ಅವ್ನಿಗೆ ಗಿಲ್ಟಿ ಇರಲಿ. ಮತ್ತೆ ನೀನೇನಾದ್ರೂ ಕರ್ಕೊಂಡೆ ಸ್ಟಾಪ್ ಬಳಿಯೂ ಬೆಲೆ ಇರಲ್ಲ. ಗಾಂಧಿನಗರದಲ್ಲೂ ಬೆಲೆ ಇರಲ್ಲ.
ಅವನದ್ದು ಸಾವಿರ ಇದೆ. ನಿಮಿಷಕ್ಕೆ ಒಂದು ಹೊರ ಬರ್ತಾವೆ. ಆ ಹುಡುಗಿಗೂ ಅವಮಾನ. ನಿಮ್ಮಿಬ್ರದ್ದು ಏನಾಗಿದೆ ಅಂತಾನೆ ಗೊತ್ತಿಲ್ಲ. ಅವನ ಮನೆ ಹಾಳಾದ್ರೆ ಸುಮ್ಮನಿರ್ತಾನಾ? ಅವನು ನಿಂದನ್ನೂ ಬಿಡ್ತಾನೆ. ತಲೆ ಕತ್ತರಿಸುತ್ತೇನೆ ಅಂತೀಯಾ ಅದು ನಿನಗೆ ಬೇಕಾ? ನಮ್ಮ ಹೋಟೆಲಿನಲ್ಲಿ ಜಗಳ ಆದಾಗ ಹರ್ಷ ರಾಕೇಶ್ ಪಾಪಣ್ಣ ಎಲ್ಲರೂ ನೋಡ್ತಾ ಇದ್ರು.
ಬೆಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ಲೋನ್ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಹೆಸರು ಕೇಳಿಬಂದಿತ್ತು. ಇದೀಗ ಪ್ರಕರಣ ಸುಖಾಂತ್ಯ ಕಂಡಿದ್ದು, ಇಂದು ಉಮಾಪತಿ ಅವರು ಬನಶಂಕರಿ ದೇವಿಯ ಮೊರೆ ಹೋಗಿದ್ದಾರೆ.
ಬನಶಂಕರಿಯಲ್ಲಿರೋ ಬನಶಂಕರಿ ದೇವಾಲಯಕ್ಕೆ ಬಂದಿರುವ ಉಮಾಪತಿ ದಂಪತಿ ಶಾಕಾಂಬರಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣದ ಸಂಬಂಧ ತಪ್ಪು-ಒಪ್ಪುಗಳನ್ನ ತಾಯಿ ಬನಶಂಕರಿ ನೋಡಿಕೊಳ್ಳುತ್ತಾಳೆ ಎಂದು ಉಮಾಪತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಅಂತ್ಯ ಹಾಡಿದ ಬಳಿಕ ಇಂದು ದಂಪತಿ ಬನಶಂಕರಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾದ ದರ್ಶನ್, ಉಮಾಪತಿ
ಇತ್ತ ಪ್ರಕರಣ ಸಂಬಂಧ ದರ್ಶನ್ ಹಾಗೂ ಉಮಾಪತಿ ಜಂಟಿಯಾಗಿ ನಗರ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆ. ಎರಡು ಮೂರು ದಿನದಲ್ಲಿ ಪ್ರಕರಣ ಸಂಬಂಧ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಅರುಣಾ ಕುಮಾರಿ ಏನೇ ರಿಯಾಕ್ಷನ್ ಕೊಟ್ರು ನಾನ್ ಆಗಲಿ ದರ್ಶನ್ ಸಾರ್ ಆಗಲಿ ಮಾತನಾಡಲ್ಲ. ದರ್ಶನ್ ಸಾರ್ ನಿನ್ನೆ ಪ್ರಕರಣಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ನಾನು ರಿಯಾಕ್ಷನ್ ಕೊಡಲ್ಲ. ದಾಖಲೆಗಳು ಕೈಗೆ ಸಿಗುತ್ತಿದ್ದಂತೆ ಜಂಟಿ ಸುದ್ದಿಗೋಷ್ಠಿ ಮಾಡಿ ತಿಳಿಸಲಾಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್
ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. 15 ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು 25 ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕ ಉಮಾಪತಿ, ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿತ್ತು. ಈ ಕುರಿತಾಗಿ ದರ್ಶನ್ ದೂರು ದಾಖಲಿಸಿದ್ದರು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಪ್ರಕರಣ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಅರುಣಾ ಕುಮಾರಿ ಅವರು ಮನೆ ಖಾಲಿ ಮಾಡಿ ಹೋಗಿದ್ದಾರೆ.
ಹೌದು. ಈ ಸಂಬಂಧ ಅರುಣಾ ಕುಮಾರಿ ಮನೆ ಮಾಲೀಕ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಅರುಣಾ ಕುಮಾರಿ ಮತ್ತು ಕುಟುಂಬ ಮೂರು ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಹೋಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಮೂರು ವಿಷಯ ಹೇಳಬೇಡಿ ಅಂದಿದ್ದಾರೆ ದರ್ಶನ್ ಸರ್: ಉಮಾಪತಿ
ಕಳೆದ ಒಂದೂವರೆ ವರ್ಷದಿಂದ ಅರುಣಾ ಕುಮಾರಿಯವರು ಬೆಂಗಳೂರಿನ ಜಂಬೂ ಸವಾರಿ ದಿಣ್ಣೆ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ತಂದೆ-ತಾಯಿ ಜೊತೆ ವಾಸವಿದ್ದ ಇದೀಗ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೀಗ ಹಾಕಿ ಹೋಗಿದ್ದಾರೆ. ಇದನ್ನೂ ಓದಿ: ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ
ಇತ್ತ ಪ್ರಕರಣ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಅರುಣಾ ಕುಮಾರಿ, ಉಮಾಪತಿಯವರು ಮಾಡಿದ್ದು ತಪ್ಪು. ನನ್ನನ್ನು ಬದುಕಲು ಬಿಡಿ ಎಂದು ಮನವಿ ಮಾಡಿದ್ದಾರೆ. ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಇದು ಜನರಲ್ ಟಾಕ್ ಅಷ್ಟೇ. ಮಾರ್ಚ್ 30ರಿಂದ ನನಗೆ ಉಮಾಪತಿಯವರ ಜೊತೆ ಕಾಂಟ್ಯಾಕ್ಟ್ ಇದೆ. ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಮಾಡ್ತಿದ್ದೀರಿ? ಹರ್ಷ ಏನೋ ಮಾಡುತ್ತಿದ್ದಾನೆ ಎನ್ನುವುದನ್ನು ಉಮಾಪತಿ ಹೇಳಬಹುದಿತ್ತು. ನನ್ನನ್ನು ಏಕೆ ಬಳಸಿಕೊಂಡಿರಿ?. ಉಮಾಪತಿ ತಪ್ಪು ಅಂತಾ ಹೇಳುತ್ತಿಲ್ಲ. ದರ್ಶನ್ ತಪ್ಪು ಅಂತಾ ಹೇಳುತ್ತಿಲ್ಲ. ನೀವೇ ಹೋಗಿ ಹರ್ಷ ಬಳಿ ಮಾತನಾಡಬಹುದಿತ್ತು. ಈ ಪ್ರಕರಣದಿಂದ ನನ್ನ ಕುಟುಂಬ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ ಅಂತ ಅಲವತ್ತುಕೊಂಡಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ವಂಚನೆ ಯತ್ನ ಕೇಸ್ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.
ಆ ಮೂರು ವಿಷಯ ಹೇಳಬೇಡಿ ಎಂದು ದರ್ಶನ್ ಸರ್ ಹೇಳಿದ್ದಾರೆ. ದರ್ಶನ್ ಸರ್ ನನ್ನ ಮೇಲೆ ನಂಬಿಕೆ ಇಟ್ಟು ಆ ಮೂರು ವಿಷಯ ಹೇಳಿದ್ದಾರೆ. ಹೀಗಾಗಿ ಆ ಮೂರು ವಿಚಾರ ಹೊರಗೆ ಹೇಳಲ್ಲ. ಆ ಮೂರು ವಿಷಯ ಹೇಳಿದ್ರೆ ಅಲ್ಲೋಲ-ಕಲ್ಲೋಲ ಆಗುತ್ತೆ ಎಂದು ಇಂದು ಪಬ್ಲಿಕ್ ಟಿವಿ ಜೊತೆ ನಿರ್ಮಾಪಕ ಉಮಾಪತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹರ್ಷ ಮೇಲಾಂಟನೇ ಯಾಕೆ ಮಾಡಿರಬಾರದು..? ರಾಕೇಶ್ ಪಾಪಣ್ಣನೇ ಯಾಕೆ ಮಾಡಿರಬಾರದು ಎಂದು ಪ್ರಶ್ನಿಸಿರುವ ಉಮಾಪತಿ, ರಾಕೇಶ್ ಪಾಪಣ್ಣ ಹೇಳ್ತಾನೇ ಬೆಂಗಳೂರು ಪೊಲೀಸ್ ಮೇಲೆ ನಂಬಿಕೆ ಇಲ್ಲ. ಮೈಸೂರಲ್ಲೇ ತನಿಖೆ ಮಾಡಿ ಅಂತ. ಎಫ್‍ಐಆರ್‍ನಲ್ಲಿ ಹರ್ಷ ಮೆಲಾಂಟ ಸುಳ್ಳು ನಂಬರ್ ಯಾಕೆ ಕೊಟ್ಟ? ಬೆಂಗಳೂರಲ್ಲಿ ತನಿಖೆ ಮಾಡೋದು ಬೇಡ ಅಂತ ಯಾಕೆ ಹೇಳ್ತಿದ್ದಾರೆ ಎಂದು ಉಮಾಪತಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಅಲ್ಲದೆ ದರ್ಶನ್ ಸರ್ ಮೇಲಿನ ಪ್ರೀತಿಗೆ ಕಳಂಕ ಹೊತ್ತುಕೊಂಡಿದ್ದೇನೆ. ದರ್ಶನ್ ಸರ್ ಶ್ಯೂರಿಟಿ ಹಾಕ್ತೀವಿ ಅಂದಿದ್ದಕ್ಕೆ ನಾನು ಭಾಗಿಯಾದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.
25 ಕೋಟಿ ವಂಚನೆ:
ಏಪ್ರಿಲ್ 9ರಂದು ನಿರ್ಮಾಪಕ ಉಮಾಪತಿ ಕರೆ ಮಾಡಿ, ಹರ್ಷ ಮೇಲಂಟಾ ಬ್ಯಾಂಕ್ ಲೋನ್‍ಗೆ ಅಪ್ಲೈ ಮಾಡಿದ್ದಾರೆ. ನಿಮ್ಮ ಆಸ್ತಿ ದಾಖಲೆಗಳ ಶ್ಯೂರಿಟಿ ಕೊಟ್ಟಿದ್ದಾರೆ ಅಂತ ತಿಳಿಸಿದ್ರು. ಒಂದಲ್ಲ, ಎರಡಲ್ಲ 25 ಕೋಟಿ ರೂ. ವ್ಯವಹಾರ ಅನ್ನುತ್ತಿದ್ದಂತೆಯೇ ನಾನು ಅಲರ್ಟ್ ಆದೆ. ನಾವೆಲ್ಲರೂ ಸ್ನೇಹಿತರು. ಯಾರ ಮೇಲೆ ಅನುಮಾನ ಪಡಬೇಕು ಅಂತಾನೇ ಗೊತ್ತಾಗುತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದಕ್ಕೂ ನಿರ್ಮಾಪಕ ಉಮಾಪತಿ ನಡೆಯ ಬಗ್ಗೆ ದರ್ಶನ್ ಅನುಮಾನ ವ್ಯಕ್ತಪಡಿಸಿದ್ರು. ಅದಕ್ಕೆ ಪೂರಕವಾದ ಒಂದಷ್ಟು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್, ಹರ್ಷ ಮೆಲಂಟಾ ಅವರೊಂದಿಗೆ ಅರುಣಾ ಕುಮಾರಿ ಮಾತನಾಡಿರುವ ಫೋನ್ ಕಾಲ್ ಆಡಿಯೋ, ಅರುಣಾಕುಮಾರಿ ಕಳುಹಿಸಿರುವ ತಮಗೆ ಕಳುಹಿಸಿದ ವಾಯ್ಸ್ ಮೆಸೇಜ್ ಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ರು. ಇದನ್ನೂ ಓದಿ: ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!
ವಾಟ್ಸಪ್ ಚಾಟ್, ಆಡಿಯೋ ವೈರಲ್:
ವಂಚನೆ ಯತ್ನ ಕಥೆಯೊಳಗಿನ ಮತ್ತೊಂದು ಉಪಕತೆಯನ್ನೂ ದರ್ಶನ್ ಜಗಜ್ಜಾಹೀರು ಮಾಡಿದ್ರು. ಆರೋಪಿ ಅರುಣಾಕುಮಾರಿ ತನ್ನ ಪುತ್ರನೊಂದಿಗೆ ಈಗ ಬೆಂಗಳೂರಿನಲ್ಲಿದ್ದಾಳೆ. ಗಂಡನಿಂದ ದೂರವಾಗಿ ಆರೇಳು ವರ್ಷಗಳಾಗಿವೆ. ಇನ್ನು ಅಚ್ಚರಿಯ ವಿಚಾರ ಏನಂದ್ರೆ, ಆಕೆಯ ಗಂಡ ಕುಮಾರ್ ಪ್ರಕರಣದ ದೂರುದಾರ ಹರ್ಷ ಮೇಲಂಟಾ ಮಾಲೀಕತ್ವದ ಹೋಟೆಲ್‍ನಲ್ಲೇ ಕೆಲಸ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ಮಧ್ಯ ಮಾತನಾಡಿದ ಕುಮಾರ್, ನನ್ನ ಹೆಂಡತಿಯಾಗಿದ್ದ ಅರುಣಕುಮಾರಿ ಓದಿರೋದೇ ಪಿಯುಸಿ. ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆದ್ಲೋ ಗೊತ್ತಿಲ್ಲ ಅಂತ ಮುಗ್ಧತೆ ತೋರಿಸಿದರು. ಇದೆಲ್ಲದರ ನಡುವೆ ಉಮಾಪತಿ ಮಹಿಳೆಯೊಂದಿಗೆ ಮಾಡಿರುವ ವಾಟ್ಸಪ್ ಚಾಟ್, ಆಡಿಯೋ, ಅರುಣಾ ಕುಮಾರಿ ದರ್ಶನ್ ತೋಟಕ್ಕೆ ಹೋದ ದೃಶ್ಯ ಎಲ್ಲವು ವೈರಲ್ ಆಗಿದೆ.
ಉಮಾಪತಿ ಸುತ್ತ ಅನುಮಾನದ ಹುತ್ತ:
ಒಟ್ಟಾರೆ, ಇಡೀ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನಡೆಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಈಗ ಚಂಡು ಉಮಾಪತಿ ಅಂಗಳದಲ್ಲಿದ್ದು, ಉಮಾಪತಿ ಇನ್ನೆರಡು ದಿನಗಳಲ್ಲಿ ಸಾಬೀತುಪಡಿಸುತ್ತೇನೆ ಎಂದಿದ್ದಾರೆ. ಸದ್ಯ ಪೊಲೀಸ್ ತನಿಖೆಗೆ ಅಷ್ಟೇನೂ ಸವಾಲು ಅನ್ನಿಸದೇ ಇರುವ ಈ ಪ್ರಕರಣದಲ್ಲಿ, ದರ್ಶನ್ ತೋರುತ್ತಿರುವ ಆಸಕ್ತಿ ಹಾಗೂ ಉಮಾಪತಿಯ ಹೇಳಿಕೆ ಎಲ್ಲವು ಸಾಕಷ್ಟು ಗೊಂದಲ ಉಂಟುಮಾಡುತ್ತಿರೋದಂತು ಸುಳ್ಳಲ್ಲ.