Tag: Uma Singh

  • ಪರ್ವತ ಹತ್ತಿ ಸಾಧನೆಗೈದು, ಸೋನು ಸೂದ್‍ಗೆ ಅರ್ಪಣೆ

    ಪರ್ವತ ಹತ್ತಿ ಸಾಧನೆಗೈದು, ಸೋನು ಸೂದ್‍ಗೆ ಅರ್ಪಣೆ

    ಲಕ್ನೋ: ಉತ್ತರಪ್ರದೇಶದ ಮೌಂಟೆನರ್ ಹಾಗೂ ಸೈಕ್ಲಿಸ್ಟ್ ಯೋರ್ವ ಆಫ್ರಿಕಾದ ಟಾಂಜಾನಿಯಾದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಹತ್ತುವ ಮೂಲಕ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ತಮ್ಮ ಈ ಸಾಧನೆಯನ್ನು ಬಾಲಿವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್‍ಗೆ ಅರ್ಪಿಸಿದ್ದಾರೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಜನರಿಗೆ ಸಹಾಯ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ಸೋನು ಸೂದ್‍ರವರಿಗೆ ಮೌಂಟೆನರ್ ಉಮಾ ಸಿಂಗ್(25) ಪರ್ವತ ಹತ್ತುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಮೊದಲಿಗೆ ಉಮಾಸಿಂಗ್‍ರವರು ಕಿಲಿಮಂಜಾರೋ ಬೇಸ್ ಪಾಯಿಂಟ್‍ವರೆಗೂ ಸೈಕ್ಲಿಂಗ್ ಮಾಡಿ ನಂತರ ಮೇಲಕ್ಕೆ ನಡೆದುಕೊಂಡು ಹೋಗಿದ್ದಾರೆ. ಬಳಿಕ ಪರ್ವತವನ್ನು ತಲುಪಿದ ಅವರು ಭಾರತದ ನಿಜವಾದ ಹೀರೋ ಎಂದು ಬರೆದಿರುವ ಸೋನು ಸೂದ್ ಪೋಸ್ಟರ್‌ವೊಂದನ್ನು ಹಿಡಿದು ವೀಡಿಯೋ ಮಾಡಿದ್ದಾರೆ. ಇದನ್ನೂ ಓದಿ:ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಉಮಾಸಿಂಗ್ ತಮ್ಮ ಸಾಧನೆಯನ್ನು ಸೋನು ಸೂದ್‍ರವರಿಗೆ ಅರ್ಪಿಸುತ್ತಾ, ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ನಿಜವಾದ ನಾಯಕನನ್ನು ಭೇಟಿ ಮಾಡಿದೆ ಮತ್ತು ಅವರಿಗಾಗಿ ಏನಾದರೂ ಮಾಡಲು ಬಯಸಿದೆ. ಅವರು ತಮ್ಮ ಜೀವನಕ್ಕಂಟಾಗುವ ಅಪಾಯವನ್ನು ಮರೆತು ಕಷ್ಟದ ಸಮಯದಲ್ಲಿ ನಮ್ಮ ದೇಶದ ಪರವಾಗಿ ನಿಂತರು. ನೀವು ನಮ್ಮ ದೇಶದ ನಿಜವಾದ ಹೀರೋ ಮತ್ತು ಭಾರತದಲ್ಲಿರುವವರಿಗೆಲ್ಲಾ ನೀವು ಹಿರಿಯ ಅಣ್ಣ ಎಂದು ತಿಳಿಸಿದ್ದಾರೆ.

    ಸದ್ಯ ಸೋನು ಸೂದ್ ಪೋಸ್ಟರ್‌ನನ್ನು ಪರ್ವತದ ಮೇಲೆ ತಮ್ಮ ಕೈನಲ್ಲಿ ಹಿಡಿದುಕೊಂಡಿರುವ ವೀಡಿಯೋವನ್ನು ಉಮಾಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ರಿಲೀಸ್ – ಸೋನು ಸೂದ್‍ಗೆ ಮೊದಲ ಸ್ಥಾನ