Tag: Ullal

  • ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಮಂಗಳೂರು: ದೀಪಕ್ ಹತ್ಯೆಯ ಬೆನ್ನಲ್ಲೇ ಆಹಾರ ಸಚಿವ ಯುಟಿ ಖಾದರ್ ಜೊತೆಗೆ ಇರುವ ಆರೋಪಿ ಇಲ್ಯಾಸ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತನ್ನ ಜೊತೆ ಊಟ ಮಾಡುತ್ತಿರುವ ಫೋಟೋದ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, ನಾನು ಎಲ್ಲಿಯಾದರೂ ಹೋದಾಗ ಪಕ್ಕ ಬಂದು ಹಲವು ಮಂದಿ ಊಟ ಮಾಡುತ್ತಾರೆ. ಇದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲ. ಒಂದು ಫೇಸ್ ಬುಕ್ ಅಲ್ಲ 100 ಫೇಸ್ ಬುಕ್ ಗಳಲ್ಲಿ ಫೋಟೋ ಬಂದರೂ ಏನು ಮಾಡಲಾಗುವುದಿಲ್ಲ. ಖಾದರ್ ಏನು ಅಂತ ಅಲ್ಲಿನ ಜನಕ್ಕೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬಿಜೆಪಿಯವರು ಹತ್ಯೆಗಾಗಿ ಅಲ್ಲಿ ಕಾದುಕೊಂಡು ಕುಳಿತಿದ್ದು, ಎರಡು ದಿನ ಮುಗಿದ ಬಳಿಕ ಅವರ ಮನೆ ಕಡೆ ಕೂಡ ಬಿಜೆಪಿ ತಲೆ ಹಾಕಿ ಮಲಗುವುದಿಲ್ಲ. ಚುನಾವಣೆಯಲ್ಲಿ ಸೋಲ್ತಾರೆ ಎನ್ನುವ ಭಯದಲ್ಲಿ ರಾಜಕೀಯಕ್ಕೆ ಬಿಜೆಪಿಯವರು ಮಾಡುತ್ತಿರುವ ಕೆಲಸ ಇದು ಎಂದು ಹೇಳಿದ್ದಾರೆ. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

    ಯಾರು ಈ ಇಲ್ಯಾಸ್?
    ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನಾಯಕ ಇಲ್ಯಾಸ್ ನನ್ನು 2017ರ ನವೆಂಬರ್ ನಲ್ಲಿ ಬಂಧಿಸಿದ್ದರು. ಈತನ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

    ಇಲ್ಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ. ಗಂಭೀರ ಆರೋಪಗಳಿದ್ದರೂ ಇಲ್ಯಾಸ್ ನನ್ನು ಯು.ಟಿ. ಖಾದರ್ ಉಳ್ಳಾಲ ಬ್ಲಾಕ್ ನ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದು ಹೇಗೆ ಎಂದು ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಮುಕ್ಕಚ್ಚೇರಿಯಲ್ಲಿ ನಡೆದ ಝುಬೈರ್ ಎಂಬವರ ಕೊಲೆಯಲ್ಲೂ ಟಾರ್ಗೆಟ್ ಹೆಸರು ತಳುಕು ಹಾಕಿದಾಗ ಇಲ್ಯಾಸ್ ನನ್ನು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು.  ಇದನ್ನು ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    ಯುವತಿಯರ ಮೂಲಕ ಶ್ರೀಮಂತರನ್ನು ಖೆಡ್ಡಾಕ್ಕೆ ಬೀಳಿಸಿ, ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರುಪಾಯಿಯನ್ನು ದೋಚುವ ಕೆಲಸವನ್ನು ಈ ಟಾರ್ಗೆಟ್ ಗ್ರೂಪ್ ಮಾಡಿದೆ ಎನ್ನುವ ಆರೋಪವಿದೆ. ಅಷ್ಟೇ ಅಲ್ಲದೇ ಈ ಗ್ರೂಪಿನ ಸದಸ್ಯರು ಉಳ್ಳಾಲ ಬೀಚ್ ಗೆ ಬಂದವರನ್ನು ದೋಚಿ ಹಲ್ಲೆ ನಡೆಸುತ್ತಿದ್ದರು. ಒಂದು ವೇಳೆ ದೂರು ನೀಡಿದ್ರೆ ಖಾದರ್ ಅವರ ಜನ ಎಂದು ಪೊಲೀಸರೂ ಸಮ್ಮನಾಗುತ್ತಿದ್ದರು ಎನ್ನುವ ಆರೋಪವನ್ನು ಜನ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಟಿಪಳ್ಳದ ಸಫ್ವಾನ್ ಎಂಬ ಯುವಕನನ್ನು ಇದೇ ಟಾರ್ಗೆಟ್ ತಂಡ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಕೊನೆಗೆ ಕೊಲೆ ಮಾಡಿ ಚಾರ್ಮಾಡಿ ಘಾಟಿ ಯಿಂದ ಕೆಳಗೆ ಎಸೆದಿತ್ತು.

    ಈ ಫೋಟೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಅಶ್ರಫ್ ಕೊಲೆ ಕೇಸ್ ಆರೋಪಿ ಭರತ್ ಕುಂಡೆಲ್ ಕುಳಿತಿರುವ ಫೋಟೋ ವೈರಲ್ ಆಗಿದೆ. ಬಿಸಿ ರೋಡ್‍ನಲ್ಲಿ ಟಿಪ್ಪು ಜಯಂತಿಯಂದು ಅಶ್ರಫ್ ಕೊಲೆ ನಡೆದಿತ್ತು. ಇದನ್ನು ಓದಿ: Exclusive: ಪೊಲೀಸ್ ಇಲಾಖೆಯಲ್ಲಿನ ‘ಹಸ್ತ’ಕ್ಷೇಪವೇ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ!

  • ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣ- ಐವರ ಬಂಧನ

    ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣ- ಐವರ ಬಂಧನ

    ಮಂಗಳೂರು: ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಮಂಗಳೂರಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸುಹೈಲ್, ನಿಜಾಮುದ್ದೀನ್, ಮಹಮ್ಮದ್ ಮುಸ್ತಫಾ, ತಾಜುದ್ದೀನ್ ಮತ್ತು ಆಸಿಫ್ ಬಂಧಿತ ಆರೋಪಿಗಳು. ಆರೋಪಿಗಳು ಹಳೇ ದ್ವೇಷದಿಂದ ಕೊಲೆ ಕೃತ್ಯ ನಡೆಸಿದ್ದರು ಎಂದು ತಿಳಿದು ಬಂದಿದೆ. ಕೊಲೆಗೆ ಸಂಚು ರೂಪಿಸಿದ್ದ ಇನ್ನೂ ಮೂವರು ಆರೋಪಿಗಳಿಗೆ ಶೋಧ ನಡೆಯುತ್ತಿದೆ.

    ಮಂಗಳೂರಲ್ಲಿ ರೌಡಿಸಂ ಹೆಚ್ಚಿದ್ದು ಮಟ್ಟ ಹಾಕಲು ಎರಡು ತಂಡ ರಚಿಸಿದ್ದೇವೆ. ಸಿಸಿಬಿ ಸೇರಿದಂತೆ ಮತ್ತೊಂದು ತಂಡಕ್ಕೂ ಹೊಣೆ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ಹೇಳಿದ್ದಾರೆ.

    ಇದನ್ನೂ ಓದಿ: ಸಚಿವ ಖಾದರ್ ಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ

    ಅಕ್ಟೋಬರ್ 4ರ ಸಂಜೆ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಬಳಿ ಜುಬೇರ್ ಮತ್ತು ಇಲಿಯಾಸ್ ಎಂಬ ಇಬ್ಬರು ನಿಂತಿದ್ದಾಗ ನಾಲ್ವರ ತಂಡ ಮಚ್ಚು ಲಾಂಗ್ ಗಳಿಂದ ದಾಳಿ ನಡೆಸಿತ್ತು. ತೀವ್ರವಾಗಿ ಗಾಯಗೊಂಡ ಜುಬೇರ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು.

    https://www.youtube.com/watch?v=BNS87HmXv7o

     

  • ಮುಳುಗುವ ಭೀತಿಯಲ್ಲಿ ಬಾರ್ಜ್-ಅಪಾಯದಲ್ಲಿ 33 ನೌಕರರು

    ಮುಳುಗುವ ಭೀತಿಯಲ್ಲಿ ಬಾರ್ಜ್-ಅಪಾಯದಲ್ಲಿ 33 ನೌಕರರು

    ಮಂಗಳೂರು: ಬ್ರೇಕ್ ವಾಟರ್ ಕಾಮಗಾರಿಯ ಬಾರ್ಜ್ ಸಮುದ್ರದ ನಡುವಿನ ಬಂಡೆಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ನಡೆದಿದೆ.

    ಉಳ್ಳಾಲದ ಮೊಗವೀರಪಟ್ಣದಲ್ಲಿ ಈ ಘಟನೆ ನಡೆದಿದೆ. ಬಾರ್ಜ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಭಾಗಶಃ ಹಾನಿಯಾಗಿದ್ದು, ಮುಳುಗಡೆ ಭೀತಿಯಲ್ಲಿದೆ. ಬಾರ್ಜ ನಲ್ಲಿ ಕೆಲಸ ಮಾಡುತ್ತಿದ್ದ 33 ನೌಕರರು ಅಪಾಯದಂಚಿನಲ್ಲಿದ್ದಾರೆ. ಇತ್ತ ಬಾರ್ಜ್ ನಲ್ಲಿರುವ ಜನರು ಸಿಡಿಮದ್ದು ಸಿಡಿಸಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.

    ಬ್ರೇಕ್ ವಾಟರ್ ಕಾಮಗಾರಿಗೆ ಆಗಮಿಸಿದ್ದ ಬಾಜ್ ಈಗಾಗಲೇ ಮೊದಲ ಹಂತದ ಕಾಮಾಗರಿಯನ್ನು ಪೂರ್ಣಗೊಳಿಸಿತ್ತು. ಬಾರ್ಜ್ ರವಿವಾರ ಮುಂಬೈನತ್ತ ಪ್ರಯಾಣ ಬೆಳಸಬೇಕಿತ್ತು. ಬಾರ್ಜ್ ನಿಲುಗಡೆಗೆ ಹಾಕಿದ್ದ ಲಂಗರು ಸಮುದ್ರದ ಅಲೆಗಳ ಹೊಡೆತಕ್ಕೆ ಶನಿವಾರ ಮಧ್ಯಾಹ್ನ ತುಂಡಾಗಿದೆ. ಇನ್ನು ಸ್ಥಳಕ್ಕೆ ಕೋಸ್ಟಲ್  ಗಾರ್ಡ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

     

  • ಉಳ್ಳಾಲದಲ್ಲಿ ಲಾಂಗ್ ಬೀಸಿ ಯುವಕನ ಹತ್ಯೆಗೆ ಯತ್ನ

    ಉಳ್ಳಾಲದಲ್ಲಿ ಲಾಂಗ್ ಬೀಸಿ ಯುವಕನ ಹತ್ಯೆಗೆ ಯತ್ನ

    ಮಂಗಳೂರು: ನಗರದ ಹೊರವಲಯದ ಉಳ್ಳಾಲದಲ್ಲಿ ಮತ್ತೆ ತಲ್ವಾರ್ ಝಳಪಿಸಿದ್ದು, ಸೋಮವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಲಾಂಗ್ ಬೀಸಿ ಹತ್ಯೆಗೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

    ಹಲ್ಲೆಗೊಳಗಾದ ಯುವಕನನ್ನು ನೌಷದ್(22) ಎಂದು ಗುರುತಿಸಲಾಗಿದೆ. ಈತನ ಮೇಲೆ ಉಳ್ಳಾಲದ ರಹಮಾನಿಯಾ ಮಸೀದಿ ಬಳಿ ರಮಿತ್ ಮತ್ತು ನಾಲ್ವರಿಂದ ತಲ್ವಾರ್ ದಾಳಿ ನಡೆದಿದ್ದು, ಪರಿಣಾಮ ನೌಷದ್ ಕೈಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಬಂದ ನೌಷದ್ ನನ್ನು ಉಳ್ಳಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

    ಸ್ಥಳಕ್ಕೆ ಡಿಸಿಪಿ ಶಾಂತ್ ರಾಜ್, ಎಸಿಪಿ ಶೃತಿ, ಎಸ್‍ಐ ಗೋಪಿಕೃಷ್ಣ ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಘಟನೆ ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಸರಗೋಡಿನ ನಟೋರಿಯಸ್ ರೌಡಿಯನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

    ಕಾಸರಗೋಡಿನ ನಟೋರಿಯಸ್ ರೌಡಿಯನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

    ಮಂಗಳೂರು: ಕಾಸರಗೋಡಿನ ನಟೋರಿಯಸ್ ರೌಡಿ ಕಾಲಿಯಾ ರಫೀಕ್‍ನ್ನು ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಮಂಗಳೂರಿನ ಹೊರವಲಯದ ಉಳ್ಳಾಲದ ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.

    ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ 45 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕಾಲಿಯಾ ರಫೀಕ್ ಆರೋಪಿಯಾಗಿದ್ದು, ಮೂಲತಃ ಕೇರಳದ ಕಾಸರಗೋಡಿನ ಉಪ್ಪಳ ಗ್ರಾಮದ ನಿವಾಸಿ.

    ತಡರಾತ್ರಿ ಸ್ನೇಹಿತರ ಜೊತೆ ಕಾರಿನಲ್ಲಿ ಮಂಗಳೂರಿಗೆ ಬರುತ್ತಿದ್ದ ವೇಳೆ ರಫೀಕ್ ಕಾರಿಗೆ ಟಿಪ್ಪರ್‍ನಲ್ಲಿ ಡಿಕ್ಕಿ ಹೊಡೆದು, ಬಳಿಕ ತಲ್ವಾರ್‍ಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ರಫೀಕ್ ಮೇಲೆ ಫೈರಿಂಗ್ ಮಾಡಿದ್ದಾರೆ.

    ರಫೀಕ್ ಜೊತೆಯಿದ್ದ ಸ್ನೇಹಿತರ ಮೇಲೆಯೂ ತಲ್ವಾರಗಳಿಂದ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಹಲ್ಲೆಗೊಳಗಾದ ರಫೀಕ್ ಸ್ನೇಹಿತರು ಬೆರಳಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಸ್ನೇಹಿತರು ಪರಾರಿಯಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಉಪ್ಪಳದ ನೂರ್ ಅಲಿ ಹಾಗೂ ಐವರ ತಂಡ ಕೃತ್ಯ ನಡೆಸಿದೆ ಎನ್ನಲಾಗುತ್ತಿದೆ.

    ಸ್ಥಳಕ್ಕೆ ಎಸಿಪಿ ಶೃತಿ, ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ, ಮಂಗಳೂರು ಸಿಸಿಬಿ ಪೊಲೀಸ್, ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.