Tag: Ulajh film

  • ಜಾನ್ವಿ ಕಪೂರ್‌ಗೆ ಮತ್ತೆ ಸೋಲು- ಬಾಕ್ಸಾಫೀಸ್‌ನಲ್ಲಿ ‘ಉಲಾಜ್’ ಕಳಪೆ ಕಲೆಕ್ಷನ್

    ಜಾನ್ವಿ ಕಪೂರ್‌ಗೆ ಮತ್ತೆ ಸೋಲು- ಬಾಕ್ಸಾಫೀಸ್‌ನಲ್ಲಿ ‘ಉಲಾಜ್’ ಕಳಪೆ ಕಲೆಕ್ಷನ್

    ಬಾಲಿವುಡ್ ನಟಿ ಜಾನ್ವಿ ಕಪೂರ್‌ಗೆ (Janhvi Kapoor) ಸಿನಿಮಾ ಅವಕಾಶ ಸಿಕ್ಕಿದ್ರೂ ಯಶಸ್ಸು ಕೈ ಹಿಡಿಯುತ್ತಿಲ್ಲ. ಬಹುನಿರೀಕ್ಷಿತ ‘ಉಲಾಜ್’ (Ulajh Film) ಸಿನಿಮಾ ಇದೀಗ ಚಿತ್ರಮಂದಿರಲ್ಲಿ ಮಕಾಡೆ ಮಲಗಿದೆ. ಮತ್ತೆ ನಟಿ ಸೋಲಿನ ರುಚಿ ಕಂಡಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ವಿಜಯಲಕ್ಷ್ಮಿ ಟೆಂಪಲ್ ರನ್

    ‌ಜಾನ್ವಿ ಕಪೂರ್‌ ನಟನೆಯ ‘ಉಲಾಜ್’ ಸಿನಿಮಾದ ಟ್ರೈಲರ್‌ನಿಂದ ಭಾರೀ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಆ.2ರಂದು ಉಲಾಜ್ ರಿಲೀಸ್ ನಂತರ ಅಭಿಮಾನಿಗಳಿಗೆ ಸಿನಿಮಾ ನೋಡಿ ನಿರಾಸೆ ಆಗಿದೆ. ಹಾಕಿದ ಬಂಡವಾಳಕ್ಕೆ ಅರ್ಧದಷ್ಟು ಗಳಿಕೆ ಮಾಡಿದಕ್ಕೂ ಉಲಾಜ್ ಚಿತ್ರ ಒದ್ದಾಡುತ್ತಿದೆ. 50 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

    ಇನ್ನೂ ‘ಧಡಕ್’ (Dhadak Film) ಸಿನಿಮಾ ಮೂಲಕ ಜಾನ್ವಿ ಕಪೂರ್ ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟರು. ಈ ಚಿತ್ರ ಸಕ್ಸಸ್ ಕಂಡಿತ್ತು. ಆ ನಂತರ ಜಾನ್ವಿ ನಟಿಸಿದ  ರೂಹಿ, ಗುಡ್ ಲಕ್ ಜೆರ್ರಿ, ಮಿಲಿ, ಮಿಸ್ಟರ್ & ಮಿಸಸ್ ಮಾಹಿ ಸಿನಿಮಾಗಳು ಫ್ಲಾಪ್ ಆಗಿದೆ.

    ಹಾಗಂತ ಸ್ಟಾರ್ ಕಿಡ್ ಜಾನ್ವಿ ಕಪೂರ್‌ಗೆ ಅವಕಾಶಗಳ ಕೊರತೆ ಇಲ್ಲ. ಸದ್ಯ ಅವರು ಜ್ಯೂ.ಎನ್‌ಟಿಆರ್ ಜೊತೆಗಿನ ‘ದೇವರ’ (Devara) ಸಿನಿಮಾ ಮತ್ತು ರಾಮ್ ಚರಣ್ (Ram Charan) ಜೊತೆ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಸೌತ್ ಸಿನಿಮಾಗಳ ಸಕ್ಸಸ್‌ಗಾಗಿ ನಟಿ ಎದುರು ನೋಡ್ತಿದ್ದಾರೆ.

  • ‘ಉಲಾಜ್’ ಟೀಸರ್ ನೋಡಿ ಜಾನ್ವಿ ಕಪೂರ್‌ಗೆ ಭೇಷ್ ಎಂದ ಸಮಂತಾ

    ‘ಉಲಾಜ್’ ಟೀಸರ್ ನೋಡಿ ಜಾನ್ವಿ ಕಪೂರ್‌ಗೆ ಭೇಷ್ ಎಂದ ಸಮಂತಾ

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದ್ಯ ‘ಉಲಾಜ್’ (Ulajh Teaser) ಸಿನಿಮಾದ ಟೀಸರ್‌ನಿಂದ ಸಿಕ್ಕಾಪಟ್ಟೆ ಹವಾ ಕ್ರಿಯೆಟ್ ಮಾಡಿದ್ದಾರೆ. ಜಾನ್ವಿ ನಟನೆಯ ಝಲಕ್ ನೋಡಿ ಅನೇಕರು ಬೆರಗಾಗಿದ್ದಾರೆ. ಇದೀಗ ಸೌತ್ ಬ್ಯೂಟಿ ಸಮಂತಾ (Samantha) ಕೂಡ ‘ಉಲಾಜ್’ ಟೀಸರ್ ನೋಡಿ ಅದ್ಭುತವಾಗಿದೆ ಎಂದಿದ್ದಾರೆ. ನಟನೆ ನೋಡಿ ಜಾನ್ವಿಗೆ ಸ್ಯಾಮ್ ಭೇಷ್ ಎಂದಿದ್ದಾರೆ.

    ವಿದೇಶ ನೆಲದಲ್ಲಿ ದೇಶಭಕ್ತಿ ಮೆರೆಯುವ ಪಾತ್ರದಲ್ಲಿ ನಟಿಸಿದ್ದಾರೆ. ‘ಉಲಾಜ್’ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ವಿದೇಶಾಂಗ ಸೇವೆಗಳ ರೋಚಕ ಜಗತ್ತಿನ ಬಗ್ಗೆ ತೋರಿಸಲಾಗಿದೆ. ದೇಶಭಕ್ತರ ಕುಟುಂಬದಿಂದ ಬಂದ ಸುಹಾನಾ ಪಾತ್ರದಲ್ಲಿ ಜಾನ್ವಿ ನಟಿಸಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    ನಾಯಕಿ ಸುಹಾನಾ ವಿದೇಶದಲ್ಲಿ ಕೆಲಸ ಮಾಡುವಾಗ ಜೀವ ಬೆದರಿಕೆಗೆ ಒಳಗಾಗುತ್ತಾರೆ. ತನ್ನ ರಾಷ್ಟ್ರವನ್ನು ರಕ್ಷಿಸಲು ಮೋಸದ ಜಾಲವನ್ನು ಭೇದಿಸುವ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಗುವ ಅಪಾಯ ಮತ್ತು ಸವಾಲುಗಳ ತುಣುಕನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ರಾಜತಾಂತ್ರಿಕ ಪಾತ್ರಕ್ಕೆ ಜಾನ್ವಿ ಜೀವ ತುಂಬಿದ್ದಾರೆ. ಈ ಚಿತ್ರವನ್ನು ಸುಧಾಂಶು ಸರಿಯಾ ನಿರ್ದೇಶನ ಮಾಡಿದ್ದಾರೆ. ಇದೇ ಜುಲೈ 5ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಮಾಲಿವುಡ್ ನಟ ಮೋಹನ್‌ಲಾಲ್‌ರನ್ನು ಭೇಟಿಯಾದ ರಿಷಬ್ ಶೆಟ್ಟಿ

    ಬಾಲಿವುಡ್ (Bollywood) ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿರುವ ಜಾನ್ವಿ ಕಪೂರ್ ಇದೀಗ ‘ಉಲಾಜ್’ ಟೀಸರ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ನೀವು ಕೂಡ ನಿಮ್ಮ ಅಮ್ಮನ ಹಾಗೆ ಎತ್ತರಕ್ಕೆ ಬೆಳೆಯುತ್ತೀರಾ ಎಂದು ಶುಭಹಾರೈಸುತ್ತಿದ್ದಾರೆ ಫ್ಯಾನ್ಸ್.

  • Ulajh Teaser: ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    Ulajh Teaser: ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದಾ ಸಿಂಪಲ್ ಅಥವಾ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಜಾನ್ವಿ ಸೈ ಎನಿಸಿಕೊಂಡಿದ್ದಾರೆ. ಇದೀಗ ‘ಉಲಾಜ್’ (Ulajh Film) ಚಿತ್ರದ ಟೀಸರ್‌ನಿಂದ ಶ್ರೀದೇವಿ ಪುತ್ರಿ ಗಮನ ಸೆಳೆದಿದ್ದಾರೆ.

    ವಿದೇಶ ನೆಲದಲ್ಲಿ ದೇಶಭಕ್ತಿ ಮೆರೆಯುವ ಪಾತ್ರದಲ್ಲಿ ನಟಿಸಿದ್ದಾರೆ. ಉಲಾಜ್ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ವಿದೇಶಾಂಗ ಸೇವೆಗಳ ರೋಚಕ ಜಗತ್ತಿನ ಬಗ್ಗೆ ತೋರಿಸಲಾಗಿದೆ. ದೇಶಭಕ್ತರ ಕುಟುಂಬದಿಂದ ಬಂದ ಸುಹಾನಾ ಪಾತ್ರದಲ್ಲಿ ಜಾನ್ವಿ ನಟಿಸಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ‘ಇಂಡಿಯನ್‌ 2’ ಸಿನಿಮಾದಲ್ಲಿ ಸಿದ್ಧಾರ್ಥ್

     

    View this post on Instagram

     

    A post shared by Janhvi Kapoor (@janhvikapoor)


    ನಾಯಕಿ ಸುಹಾನಾ ವಿದೇಶದಲ್ಲಿ ಕೆಲಸ ಮಾಡುವಾಗ ಜೀವ ಬೆದರಿಕೆಗೆ ಒಳಗಾಗುತ್ತಾರೆ. ತನ್ನ ರಾಷ್ಟ್ರವನ್ನು ರಕ್ಷಿಸಲು ಮೋಸದ ಜಾಲವನ್ನು ಭೇದಿಸುವ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಗುವ ಅಪಾಯ ಮತ್ತು ಸವಾಲುಗಳ ತುಣುಕನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ರಾಜತಾಂತ್ರಿಕ ಪಾತ್ರಕ್ಕೆ ಜಾನ್ವಿ ಜೀವ ತುಂಬಿದ್ದಾರೆ. ಈ ಚಿತ್ರವನ್ನು ಸುಧಾಂಶು ಸರಿಯಾ ನಿರ್ದೇಶನ ಮಾಡಿದ್ದಾರೆ. ಇದೇ ಜುಲೈ 5ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

    ಬಾಲಿವುಡ್ ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿರುವ ಜಾನ್ವಿ ಕಪೂರ್ (Janhavi Kapoor) ಇದೀಗ ‘ಉಲಾಜ್’ ಟೀಸರ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ನೀವು ಕೂಡ ನಿಮ್ಮ ಅಮ್ಮನ ಹಾಗೆ ಎತ್ತರಕ್ಕೆ ಬೆಳೆಯುತ್ತೀರಾ ಎಂದು ಶುಭಹಾರೈಸುತ್ತಿದ್ದಾರೆ ಫ್ಯಾನ್ಸ್.