Tag: ukriane soldier

  • ಸ್ಮಾರ್ಟ್‌ಫೋನ್‌ನಿಂದ ಉಳಿಯಿತು ಉಕ್ರೇನ್‌ ಸೈನಿಕನ ಜೀವ

    ಸ್ಮಾರ್ಟ್‌ಫೋನ್‌ನಿಂದ ಉಳಿಯಿತು ಉಕ್ರೇನ್‌ ಸೈನಿಕನ ಜೀವ

    ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ದೇಶಕ್ಕಾಗಿ ಹೋರಾಡುತ್ತಿದ್ದ ಸೈನಿಕನನ್ನು ಸ್ಮಾರ್ಟ್‌ಫೋನ್‌ ರಕ್ಷಿಸಿರುವ ಪ್ರಸಂಗ ನಡೆದಿದೆ.

    ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವಾಗ ಎರಡೂ ಕಡೆಯಿಂದ ವ್ಯಕ್ತವಾಗುತ್ತಿರುವ ಶೌರ್ಯ ಮತ್ತು ಧೈರ್ಯದ ಹಲವಾರು ನಿದರ್ಶನಗಳಲ್ಲಿ ಈ ವೈರಲ್ ವೀಡಿಯೋ ಕೂಡ ಸೇರಿದೆ. ಇದನ್ನೂ ಓದಿ: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

    ರಷ್ಯಾದ ಪಡೆ ಉಕ್ರೇನ್‌ ಸೈನಿಕನ ಮೇಲೆ ಗುಂಡು ಹಾರಿಸಿತು. ಸೈನಿಕನನ್ನು ಗುರಿಯಾಗಿಸಿದ್ದ 7.62 ಎಂಎಂ ಬುಲೆಟ್‌, ಸೈನಿಕನ ಮೊಬೈಲ್‌ ಫೋನ್‌ಗೆ ತಾಗಿದೆ. ಫೋನ್‌ಗೆ ಹಾನಿಯಾಗಿ ಬುಲೆಟ್‌ ಅದರಲ್ಲೇ ಸಿಲುಕಿಕೊಂಡಿದೆ. ಪರಿಣಾಮವಾಗಿ ಉಕ್ರೇನ್‌ ಸೈನಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉಕ್ರೇನಿಯನ್ ಸೈನಿಕ ತನ್ನ ವೀಡಿಯೋದಲ್ಲಿ, ಬುಲೆಟ್‌ ಸಿಲುಕಿಕೊಂಡು ಹಾನಿಯಾಗಿರುವ ತನ್ನ ಫೋನ್‌ ತೋರಿಸಿದ್ದಾರೆ. ʼಈ ಸ್ಮಾರ್ಟ್‌ಫೋನ್‌ ನನ್ನ ಜೀವ ಉಳಿಸಿದೆʼ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್

    ವೈರಲ್ ವೀಡಿಯೋದಲ್ಲಿ, ಸೈನಿಕ ತನ್ನ ಸಹ ಯೋಧರೊಂದಿಗೆ ಮಾತನಾಡುತ್ತಿದ್ದಾರೆ. ಹರ್ಷಚಿತ್ತದಿಂದ ತನ್ನ ಮೊಬೈಲ್ ಫೋನ್ ತೋರಿಸುತ್ತಿದ್ದಾರೆ.

    ಫೆಬ್ರವರಿ 24 ರಂದು ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಮಿಲಿಟರಿ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಉಕ್ರೇನ್‌ ಸೇನಾಪಡೆಯನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.