Tag: Ukraine

  • ಉಕ್ರೇನ್ ಯುದ್ಧದಲ್ಲಿ ಮಡಿದ ಮಗನ ಹೆಸರಲ್ಲಿ ಮನೆ ನಿರ್ಮಿಸಿದ ತಂದೆ-ತಾಯಿ

    ಉಕ್ರೇನ್ ಯುದ್ಧದಲ್ಲಿ ಮಡಿದ ಮಗನ ಹೆಸರಲ್ಲಿ ಮನೆ ನಿರ್ಮಿಸಿದ ತಂದೆ-ತಾಯಿ

    ಹಾವೇರಿ: ರಷ್ಯಾ (Russia) ಮತ್ತು ಉಕ್ರೇನ್ (Ukraine) ಯುದ್ಧದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಕನ್ನಡಿಗ ನವೀನ್ (Naveen) ಬಲಿಯಾಗಿದ್ದ. ಈ ಘಟನೆಯಿಂದ ನಮ್ಮ ದೇಶ ಹಾಗೂ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಈಗ ನವೀನ್ ಕಂಡ ಒಂದು ಕನಸನ್ನ ತಂದೆ-ತಾಯಿ ನನಸು ಮಾಡಿದ್ದಾರೆ. ಆತನ ಹೆಸರಿನಲ್ಲಿ ನೂತನ ಮನೆ ನಿರ್ಮಿಸಿದ್ದು, ಮಗನ ಹೆಸರನ್ನ ನಾಮಕರಣ ಮಾಡಿದ್ದಾರೆ.

    2022ರ ಮಾರ್ಚ್ 1 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿದ್ದ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ನವೀನ್ ನಿಧನಕ್ಕೆ ಪ್ರಧಾನಿ ಮೋದಿ‌ (Narendra Modi), ರಾಜ್ಯಪಾಲರು, ಸಿಎಂ ಬೊಮ್ಮಾಯಿ (Basavaraj Bommai), ಬಿಎಸ್‍ವೈ (B S Yediyurappa), ವಿಪಕ್ಷ ನಾಯಕರು ಸೇರಿದಂತೆ ಎಲ್ಲರೂ ಸಾಂತ್ವನ ಹೇಳಿದರು. ನವೀನ್ ಅಗಲಿ 1 ವರ್ಷ ಆಗ್ತಿದ್ದು, ಮಗನ ಕನಸನ್ನು ಇದೀಗ ಹೆತ್ತವರು ಸಾಕಾರಗೊಳಿಸಿದ್ದಾರೆ. ತಾನು ವೈದ್ಯನಾದ ಬಳಿಕ ಮನೆ ಕಟ್ಟಬೇಕು. ಈಗ ಇರುವ ಮನೆಯಲ್ಲಿ ಕ್ಲಿನಿಕ್ ನಡೆಸಬೇಕೆಂಬ ನವೀನ್ ಆಸೆಯನ್ನು ತಂದೆ-ತಾಯಿ ಪೂರೈಸಿದ್ದಾರೆ. ನೂತನ ಮನೆ (New Home) ಯನ್ನು ಕಟ್ಟಿಸಿದ್ದು, ಅದಕ್ಕೆ ಮಗನ ಹೆಸರನ್ನೇ ಇಟ್ಟಿದ್ದಾರೆ.

    ಸುಮಾರು 27 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯನ್ನ ಕಟ್ಟಿಸಿದ್ದಾರೆ. ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ ಅವರು ನವೀನ್ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivasa) ಎಂದು ನಾಮಕರಣ ಮಾಡಿದ್ದು, ಮನೆಯ ಮುಂಭಾಗದಲ್ಲಿಯೇ ನವೀನ್ ಭಾವಚಿತ್ರವನ್ನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಇಂದು ಗೃಹಪ್ರವೇಶ ಮಾಡಲಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ನವೀನ್ ತಂದೆ-ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‍ಗೆ ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನವೀನ್ ಬಲಿ ಪಡೆದುಕೊಂಡಿತ್ತು. ಆ ಕುಟುಂಬದ ಕನಸು ಕಮರುವಂತೆ ಮಾಡಿತ್ತು. ಈಗ ಮಗನ ಕನಸು ನನಸು ಮಾಡಿ ಮಗನ ನೆರಳಿನಲ್ಲಿ ತಂದೆ-ತಾಯಿ ಜೀವನ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Missile Traceː ರಷ್ಯಾದ 6 ಬಲೂನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ

    Missile Traceː ರಷ್ಯಾದ 6 ಬಲೂನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ

    ಕೀವ್: ಉಕ್ರೇನ್ (Ukraine) ರಾಜಧಾನಿಯ ವಾಯುನೆಲೆಯ ಮೇಲೆ ಹಾರಾಟ ನಡೆಸುತ್ತಿದ್ದ ರಷ್ಯಾದ (Russia) 6 ಸ್ಪೈ ಬಲೂನ್‌ಗಳನ್ನು (Balloons) ಉಕ್ರೇನ್ ಸೇನೆ ಹೊಡೆದುರುಳಿಸಿದೆ.

    ಬಲೂನ್‌ನಿಂದ ವಿಚಕ್ಷಣ ಸಾಧನಗಳು ಹೊರಬರುತ್ತಿದ್ದವು. ಇದರಿಂದ ಉಕ್ರೇನ್ ಸೇನೆ (Ukraine Military) ಎಚ್ಚರಿಕೆ ನೀಡಿದ ಹೊರತಾಗಿಯೂ ಬಲೂನ್‌ಗಳು ರಾಜಧಾನಿಯ ಮೇಲೆ ಹಾರಾಟ ನಡೆಸುತ್ತಿದ್ದವು. ಹಾಗಾಗಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    ಉಕ್ರೇನ್ ವಾಯುನೆಲೆಯ ಮೇಲೆ ದಾಳಿ ಮಾಡುವುದು ಈ ಬಲೂನ್ ಹಾರಾಟದ ಹಿಂದಿನ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    ರಷ್ಯಾ ತನ್ನ ಡ್ರೋನ್‌ಗಳ (Drone) ದಾಸ್ತಾನನ್ನು ರಕ್ಷಿಸುವ ಸಲುವಾಗಿ ಮುಂದಿನ ದಾಳಿಯಲ್ಲಿ ಬಲೂನ್‌ಗಳನ್ನು ಬಳಸಬಹುದು ಎಂದು ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಈ ಹಿಂದೆಯೇ ಹೇಳಿದ್ದರು. ಅದರಂತೆ ರಷ್ಯಾ ಒರ್ಲಾನ್-10 (Orlan-10 Drone) ನಂತಹ ಡ್ರೋನ್‌ಗಳನ್ನು ಈಗ ಮಿತವಾಗಿ ಬಳಸುತ್ತಿದೆ ಎಂದು ಹೇಳಲಾಗಿದೆ.

    ಇತ್ತೀಚೆಗಷ್ಟೇ ಅಮೆರಿಕದ ವಾಯುನೆಲೆಯ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್‌ವೊಂದನ್ನು ಅಮೆರಿಕ ಫೈಟರ್ ಜೆಟ್‌ಗಳು ಹೊಡೆದುರುಳಿಸಿದ್ದವು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

    ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

    ಲಂಡನ್: ಉಕ್ರೇನ್‌ಗೆ (Ukraine) ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ ಎಂದು ಬ್ರಿಟನ್ (UK) ರಕ್ಷಣಾ ಸಚಿವಾಲಯ ಹೇಳಿದೆ.

    ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಬೆನ್ ವ್ಯಾಲೆಸ್ ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ. ಯುದ್ಧ ವಿಮಾಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ನಾವು ಸ್ಪಷ್ಟವಾಗಿದ್ದೇವೆ. `ಯಾವುದನ್ನೂ ಆಳಬೇಡಿ, ಯಾವುದನ್ನೂ ತಳ್ಳಿಹಾಕಬೇಡಿ’ ಅನ್ನೋದು ಕಳೆದ ವರ್ಷದಲ್ಲಿ ನಾನು ಕಲಿತ ಒಂದು ವಿಷಯ. ರಷ್ಯಾದ ಆಕ್ರಮಣ ಹಿಮ್ಮೆಟ್ಟಿಸಲು ಸಹಾಯ ಮಾಡುವಂತೆ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳ ಸಹಾಯ ಕೋರಿದೆ.

    ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ

    ಈ ನಡುವೆ ಅಮೆರಿಕ (US) ಉಕ್ರೇನ್‌ಗೆ ಎಫ್-16 ಯುದ್ಧವಿಮಾನಗಳ (F16 Fighter Jets) ವಿತರಣೆಯನ್ನು ತಳ್ಳಿಹಾಕಿದೆ. ಆದ್ರೆ ಪೋಲೆಂಡ್ ಸೇರಿದಂತೆ ಇತರ ಮಿತ್ರ ರಾಷ್ಟ್ರಗಳು ಉಕ್ರೇನ್‌ಗೆ ನೆರವು ನೀಡಲು ಮುಕ್ತವಾಗಿವೆ. ಇದರೊಂದಿಗೆ ಕೇವಲ ಜೆಟ್‌ಗಳಷ್ಟೇ ಅಲ್ಲ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಪರೀಕ್ಷಿಸಲು ನಾನು ತುಂಬಾ ಮುಕ್ತವಾಗಿದ್ದೇನೆ ಎಂದು ವ್ಯಾಲೆಸ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಯುಕೆಯ ಟೈಫೂನ್ ಮತ್ತು F-35 ಫೈಟರ್ ಜೆಟ್‌ಗಳು (F-35 Fighter Jet) ಅತ್ಯಾಧುನಿಕವಾಗಿವೆ. ಆದರೆ ಅದನ್ನು ಹೇಗೆ ಹಾರಾಟ ನಡೆಸಬೇಕು ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಅವುಗಳನ್ನು ಸದ್ಯದಲ್ಲೇ ಉಕ್ರೇನ್‌ಗೆ ಕಳುಹಿಸುವುದು ಪ್ರಾಯೋಗಿಕವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಹೆಲಿಕಾಪ್ಟರ್‌ ಪತನ - ಉಕ್ರೇನ್‌ ಸಚಿವ ಸೇರಿ 16 ಮಂದಿ ಬಲಿ

    ಕಳೆದ ವರ್ಷ ಹಿಂದಿನ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಉಕ್ರೇನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಯುದ್ಧಪೀಡಿತ ಉಕ್ರೇನ್‌ಗೆ ಬ್ರಿಟನ್ ಹೊಸದಾಗಿ 1.3 ಶತಕೋಟಿ ಪೌಂಡ್ (12 ಸಾವಿರ ಕೋಟಿ ರೂ.) ಮಿಲಿಟರಿ ಸಹಾಯ ನೀಡುವುದಾಗಿ ನೀಡಿದ್ದರು. ರಿಷಿ ಸುನಾಕ್ (Rishi Sunak) ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಉಕ್ರೇನ್‌ಗೆ ಭೇಟಿ ನೀಡಿ ರಕ್ಷಣಾ ನೆರವು ನೀಡುವ ಬಗ್ಗೆ ಮಾತುಕತೆ ನಡೆಸಿದ್ದರು. ಈ ವೇಳೆ ಅಮೆರಿಕ ನಿರ್ಮಿತ F-16 ಯುದ್ಧವಿಮಾನ ಸೇರಿದಂತೆ ಇತರ ಯುದ್ಧ ಸಾಮಗ್ರಿಗಳ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

    ಬ್ರಿಟನ್ ಸರ್ಕಾರ 2023ರ ಜನವರಿಯಲ್ಲೂ ಸಹ ಉಕ್ರೇನ್‌ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಮಾರ್ಚ್ ಅಂತ್ಯದ ವೇಳೆಗೆ 14 ಚಾಲೆಂಜರ್-2 ಟ್ಯಾಂಕರ್‌ಗಳನ್ನು ಕಳುಹಿಸುವ ಗುರಿ ಹೊಂದಿದೆ. ಉಕ್ರೇನ್ ರಷ್ಯಾದ ಪಡೆಗಳನ್ನು ಹಿಮೆಟ್ಟಿಸಲು ತಕ್ಷಣವೇ ಶಸ್ತ್ರಾಸ್ತ್ರಗಳ ಅಗತ್ಯವಿದ್ದು, ಈ ಟ್ಯಾಂಕರ್‌ಗಳು ಸುಲಭವಾಗಿ ಶಸ್ತ್ರಾಸ್ತ್ರ ಒಯ್ಯಲಿವೆ ಎಂದು ಅಭಯ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಲಂಡನ್: ಬ್ರಿಟನ್ (Britain) ಅನ್ನು ಹೊಡೆದುರುಳಿಸಲು ಕ್ಷಿಪಣಿಯನ್ನು ಕಳುಹಿಸಬಲ್ಲೆ ಎಂದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ಬಾರಿ ಹೇಳಿಕೆ ನೀಡಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಹೇಳಿಕೊಂಡಿದ್ದಾರೆ.

    ಈ ವಿಚಾರ ಬಿಬಿಸಿಯ ‘ಪುಟಿನ್ ವಿ ದಿ ವೆಸ್ಟ್’ ಹೆಸರಿನ 3 ಭಾಗಗಳ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ರಷ್ಯಾ-ಉಕ್ರೇನ್ (Russia-Ukraine) ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಜಾನ್ಸನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಾಗ, ಬ್ರಿಟನ್ ಅನ್ನು ಹೊಡೆದುರುಳಿಸಲು ಒಂದೇ ನಿಮಿಷ ಸಾಕು. ನಾವು ಕ್ಷಿಪಣಿ ಕಳುಹಿಸಬಲ್ಲೆವು ಎಂದು ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಖಲಿಸ್ತಾನಿಯರ ಅಟ್ಟಹಾಸ – ತ್ರಿವರ್ಣಧ್ವಜ ಹಿಡಿದ ಭಾರತೀಯರ ಮೇಲೆ ದಾಳಿ

    ಜಾನ್ಸನ್ ಪುಟಿನ್ ಅವರ ಹೇಳಿಕೆಯನ್ನು ಬೆದರಿಕೆ ಎಂದು ಪರಿಗಣಿಸದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಬೆಂಬಲಿಸಿದ್ದಾರೆ. ಪುಟಿನ್ ಒಂದು ಬಾರಿ ನನಗೆ ಬೆದರಿಕೆ ಹಾಕಿದ್ದರು. ಬೋರಿಸ್, ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಕ್ಷಿಪಣಿ ದಾಳಿ ಮಾಡಿದರೆ ಕೇವಲ 1 ನಿಮಿಷ ಸಾಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

    ಪುಟಿನ್ ಅತ್ಯಂತ ಶಾಂತ ಸ್ವರದಿಂದಲೇ ಈ ಹೇಳಿಕೆಯನ್ನು ನೀಡಿದ್ದರು ಎಂದು ಜಾನ್ಸನ್ ಹೇಳಿದ್ದಾರೆ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಲಿಕಾಪ್ಟರ್‌ ಪತನ – ಉಕ್ರೇನ್‌ ಸಚಿವ ಸೇರಿ 16 ಮಂದಿ ಬಲಿ

    ಹೆಲಿಕಾಪ್ಟರ್‌ ಪತನ – ಉಕ್ರೇನ್‌ ಸಚಿವ ಸೇರಿ 16 ಮಂದಿ ಬಲಿ

    ಕೀವ್‌: ಉಕ್ರೇನ್‌ (Ukraine) ರಾಜಧಾನಿ ಕಿವ್‌ ಹೊರವಲಯದಲ್ಲಿರುವ ಶಿಶುವಿಹಾರದ ಬಳಿ ಹೆಲಿಕಾಪ್ಟರ್ ಪತನಗೊಂಡು (Helicopter Crash) ಆಂತರಿಕ ಸಚಿವ ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ.

    ಹೆಲಿಕಾಪ್ಟರ್‌ ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪತನಗೊಂಡ ಹೆಲಿಕಾಪ್ಟರ್‌ ಶಿಶುವಿಹಾರ ಕೇಂದ್ರದ ಮೇಲೆ ಬಿದ್ದಿದ್ದು ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

    https://twitter.com/AZgeopolitics/status/1615609958594220033

    ಉಕ್ರೇನ್‌ ಸಚಿವರ ಜೊತೆ ಹಲವು ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.

    https://twitter.com/AZgeopolitics/status/1615620708226461696

    ಕಟ್ಟಡದ ಮೇಲೆ ಹೆಲಿಕಾಪ್ಟರ್‌ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ಮಕ್ಕನ್ನು ಆಸಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 10 ಮಕ್ಕಳು ಸೇರಿದಂತೆ 22 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಕೀವ್/ಮಾಸ್ಕೋ: ಇನ್ಮುಂದೆ ಉಕ್ರೇನ್ ವಿರುದ್ಧ ಯುದ್ಧ (Russia Ukraine War)) ಮಾಡುವುದಿಲ್ಲ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರವೂ ರಷ್ಯಾ ಅಟ್ಟಹಾಸ ಮುಂದುವರಿದಿದೆ.

    ಉಕ್ರೇನಿನ ಡ್ನಿಪ್ರೊ ನಗರದ 9 ಅಂತಸ್ತಿನ ಕಟ್ಟಡದ ಮೇಲೆ ಮತ್ತೆ ಭೀಕರ ಕ್ಷಿಪಣಿ ದಾಳಿ (Missile Strike) ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸತತ ದಾಳಿಯಿಂದ ರಷ್ಯಾ, ಉಕ್ರೇನಿನ ಮೂಲ ಸೌಕರ್ಯಗಳನ್ನ (Ukraine Infrastructure) ನಾಶಪಡಿಸಿದೆ. ಇದೀಗ ದಾಳಿಯ ಹೊಸ ಅಲೆ ಮುಂದುವರಿಸಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಡ್ನಿಪ್ರೊ ನಗರ ಹೊರತುಪಡಿಸಿ, ಕೀವ್ ಹಾಗೂ ಇತರ ಸ್ಥಳಗಳಲ್ಲಿ ನಿರ್ಣಾಯಕ ಮೂಲ ಸೌಕರ್ಯಗಳನ್ನು ದಮನ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಉಕ್ರೇನ್‌ನಲ್ಲಿ ವಿದ್ಯುತ್, ನೀರು ಹಾಗೂ ಮೂಲ ಸೌಕರ್ಯಗಳ ಕೊರತೆ ಎದುರಾಗಲಿದೆ ಎಂದು ಉಕ್ರೇನಿನ ಇಂಧನ ಸಚಿವರು ಎಚ್ಚರಿಸಿದ್ದಾರೆ.

    ರಷ್ಯಾದ ದಾಳಿಯಲ್ಲಿ ಉಕ್ಕಿನ ತಯಾರಿಕಾ ನಗರವಾದ ಕ್ರಿವಿ ರಿಹ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿದ್ದರು. ಅಲ್ಲದೇ ಝಲೆನ್ಸ್ಕಿ (Volodymyr Zelenskyy) ತವರು ನಗರದಲ್ಲಿ 6 ಮನೆಗಳು ಹಾನಿಗೊಳಗಾದವು.

    ಇದೀಗ ಡ್ನಿಪ್ರೊ ಅಪಾರ್ಟ್ಮೆಂಟ್ ದಾಳಿಯಲ್ಲಿ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅದಕ್ಕಾಗಿ ಉಕ್ರೇನ್ ತನ್ನ ನಾಗರಿಕರ ಮೇಲಿನ ದಾಳಿ ಕೊನೆಗೊಳಿಸಲು ಹೆಚ್ಚಿನ ಶಸ್ತ್ರಾಸ್ತ್ರಗಳಿಗಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದೆ. ಇದನ್ನೂ ಓದಿ: Exclusive- ‘ಮೇರುನಟ’ ವಿಷ್ಣುವರ್ಧನ್ ಸಮಾಧಿ ನೆಲಸಮ ಆಗತ್ತಾ? ಆತಂಕ ಹೊರಹಾಕಿದ ಅಭಿಮಾನಿ

    ಇತ್ತೀಚೆಗೆ “ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಲ್‌ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ” ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದರು. ಆದರೆ ಉಕ್ರೇನ್ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ಹೇಳಿ ಆರೋಪ ತಳ್ಳಿಹಾಕಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್ ಮೇಲೆ ಡೆಡ್ಲಿ ಅಟ್ಯಾಕ್ 600 ಸೈನಿಕರ ಹತ್ಯೆ – ರಷ್ಯಾ ಸುಳ್ಳು ಹೇಳುತ್ತಿದೆ ಎಂದ ಅಧಿಕಾರಿಗಳು

    ಉಕ್ರೇನ್ ಮೇಲೆ ಡೆಡ್ಲಿ ಅಟ್ಯಾಕ್ 600 ಸೈನಿಕರ ಹತ್ಯೆ – ರಷ್ಯಾ ಸುಳ್ಳು ಹೇಳುತ್ತಿದೆ ಎಂದ ಅಧಿಕಾರಿಗಳು

    ಕೀವ್: ಉಕ್ರೇನ್ (Ukraine)  ಮೇಲೆ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಸೈನಿಕರ (Troops) ಹತ್ಯೆ ನಡೆದಿದೆ ಎಂದು ರಷ್ಯಾ (Russia) ಸೈನ್ಯ ಹೇಳಿಕೊಂಡಿದೆ. ಆದರೆ ಉಕ್ರೇನ್ ಇದು ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಹೇಳಿರುವ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಕ್‍ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಉಕ್ರೇನ್ ಸೈನ್ಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಗನಿಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ರೇವಣ್ಣ ಆಪ್ತರು ಬಂಡಾಯ

    ಕೆಲ ದಿನಗಳ ಹಿಂದೆ ಉಕ್ರೇನ್ ಸೈನ್ಯ ರಷ್ಯಾದ ಸೈನಿಕರ ಬ್ಯಾರಕ್ ಮೇಲೆ ದಾಳಿ ನಡೆಸಿ 89 ಸೈನಿಕರ ಸಾವಿಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ಸೈನ್ಯ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಉಕ್ರೇನ್ ಸೈನ್ಯದ ಅಧಿಕಾರಿಗಳು ರಷ್ಯಾ ದಾಳಿ ನಡೆಸಿರುವುದು ನಿಜ ಆದರೆ ನಮ್ಮ ಕಟ್ಟಡ ಸಹಿತ ಕೆಲ ಪ್ರದೇಶಗಳಿಗೆ ಹಾನಿಯಾಗಿದೆ. ಆದರೆ ನಮ್ಮ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!

    ಈ ದಾಳಿ ಕುರಿತಾಗಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy), ಜಗತ್ತಿನ ಮುಂದೆ ರಷ್ಯಾ ಸುಳ್ಳು ಹೇಳಿಕೆ ನೀಡುವ ಮೂಲಕ ಮತ್ತೆ ತನ್ನತ್ತ ಸೆಳೆಯಲು ನೋಡುತ್ತಿದೆ. ರಷ್ಯಾ ಈ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೇಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ವಿಯೆನ್ನಾ: ಗಡಿಯಾಚೆ ದಶಕಗಳಿಂದಲೂ ಪಾಕಿಸ್ತಾನ(Pakistan) ನಡೆಸುತ್ತಿರುವ ಭಯೋತ್ಪಾದನೆಯನ್ನು ಯಾಕೆ ಇಲ್ಲಿಯವರೆಗೆ ಯುರೋಪ್‌ ದೇಶಗಳು ಖಂಡಿಸಿಲ್ಲ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌(S Jaishankar) ಪ್ರಶ್ನಿಸಿದ್ದಾರೆ.

    ಉಕ್ರೇನ್‌(Ukraine) ಮೇಲಿನ ಯುದ್ಧದ ವಿಚಾರದಲ್ಲಿ ಭಾರತದ (India)ನಿರ್ಧಾರವನ್ನು ಯುರೋಪ್‌ ರಾಷ್ಟ್ರಗಳು(European Nations) ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್‌ ಮೊದಲ ಬಾರಿಗೆ ಪಾಕಿಸ್ತಾನದ ವಿಚಾರವನ್ನು ಪ್ರಸ್ತಾಪಿಸಿ ಯುರೋಪ್‌ ರಾಷ್ಟ್ರಗಳ ಧೋರಣೆಯನ್ನು ಪ್ರಶ್ನಿಸಿ ಖಡಕ್‌ ತಿರುಗೇಟು ನೀಡಿದ್ದಾರೆ.

    ಆಸ್ಟ್ರಿಯಾದ(Austria) ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಬಣ್ಣಿಸಿದರು. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ಕೆಲವು ವರ್ಷಗಳ ಹಿಂದೆ ಭಾರತದ ಸಂಸತ್ತಿನ ಮೇಲೆ ಈ ದೇಶ ದಾಳಿ ಮಾಡಿತ್ತು. ವಿದೇಶಿಯರಿದ್ದ ಮುಂಬೈ ಹೋಟೆಲ್‌ ಮೇಲೆ ದಾಳಿ ನಡೆಸಿತ್ತು. ಪ್ರತಿದಿನ ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುತ್ತದೆ ಎಂದು ವಿದೇಶಾಂಗ ಸಚಿವರು ಪಾಕಿಸ್ತಾನವನ್ನು ದೂರಿದರು.

    ಚೀನಾ ಭಾರತದ(China India Border Dispute) ನಡುವಿನ ಗಡಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿ, 1962 ಯುದ್ಧದ ಬಳಿಕ ಚೀನಾದ ಧೋರಣೆಯಿಂದಾಗಿ ಈಗ ಗಡಿಯಲ್ಲಿ ಶಾಂತಿ ಕದಡುತ್ತಿದೆ. ಉಪಗ್ರಹ ಚಿತ್ರದ ಮೂಲಕ ಗಡಿ ಭಾಗಕ್ಕೆ ಯಾರು ಮೊದಲು ಬಂದಿದ್ದಾರೆ ಎನ್ನುವುದು ದೃಢವಾಗುತ್ತದೆ. ಗಡಿಯಲ್ಲಿ ಸೇನೆಯನ್ನು ನಿಯೋಜಿಸಬಾರದು ಎಂದು ನಮ್ಮಿಬ್ಬರ ಮಧ್ಯೆ ಒಪ್ಪಂದ ಇದೆ. ಆದರೆ ಚೀನಾ ಆ ಒಪ್ಪಂದವನ್ನು ಪಾಲನೆ ಮಾಡದ ಕಾರಣ ಈಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    ಜೈಶಂಕರ್‌ ಭಾರತದ ನಡೆಯನ್ನು ವಿಶ್ವ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಸರಿಯಾಗಿ ಸಮರ್ಥಿಸಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತ ಮಾತ್ರ ತೈಲ ಖರೀದಿ ಮಾಡುತ್ತಿಲ್ಲ. ಯುರೋಪ್‌ ಈಗಲೂ ಗ್ಯಾಸ್‌ ಖರೀದಿ ಮಾಡುತ್ತಿದೆ. ಹೀಗಿದ್ದರೂ ಭಾರತ ಮಾತ್ರ ಟಾರ್ಗೆಟ್‌ ಯಾಕೆ ಎಂದು ಪ್ರಶ್ನಿಸಿದ್ದರು.

    ತೈಲವನ್ನು(Crude Oil) ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ(Russia) ಯುದ್ಧಕ್ಕೆ ನಿಧಿ ನೀಡಿದಂತಾಗುತ್ತದೆ ಎಂಬ ಪ್ರಶ್ನೆಗೆ, ಭಾರತ ತೈಲ ಖರೀದಿಸಿ ರಷ್ಯಾಗೆ ಸಹಾಯ ಮಾಡುತ್ತದೆ ಎಂದಾದರೆ ರಷ್ಯಾದಿಂದ ಗ್ಯಾಸ್‌ ಖರೀದಿಸುತ್ತಿರುವ ಯುರೋಪ್‌ ದೇಶಗಳು ಯುದ್ಧಕ್ಕೆ ನಿಧಿ ನೀಡಿದಂತೆ ಆಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಮೇಲೆ ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ

    ಉಕ್ರೇನ್ ಮೇಲೆ ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ

    ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ (Russia) ತನ್ನ ದಾಳಿ ಮುಂದುವರಿಸಿದೆ. ಇಂದು ಏಕಕಾಲದಲ್ಲಿ 120 ಕ್ಷಿಪಣಿಗಳಿಂದ (Missiles) ಉಕ್ರೇನ್‍ನ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿದೆ.

    ದಾಳಿಯಲ್ಲಿ ಹದಿಹರೆಯದ ಮೂವರು ಮಕ್ಕಳಿಗೆ ಗಾಯಗಳಾಗಿದೆ. ಕೀವ್ ಮತ್ತು ಖಾರ್ಕಿವ್ ಪಟ್ಟಣಗಳ ಮೇಲೆ ದಾಳಿ ನಡೆಸಿರುವ ಕ್ಷಿಪಣಿಗಳು ಹಲವು ಕಟ್ಟಡಗಳ ಮೇಲೆ ಬಿದ್ದಿದೆ. ಪರಿಣಾಮ ಪಶ್ಚಿಮ ವಲಯದ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‌ನ್ಯೂಸ್- ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಸಾಧ್ಯತೆ

     

    ರಷ್ಯಾ ವಾಯು ಮತ್ತು ಜಲ ಮಾರ್ಗಗಳ ಮೂಲಕ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಉಕ್ರೇನ್ ಸೈನ್ಯ ಎಚ್ಚರಿಸಿದೆ. ಈಗಾಗಲೇ ದಾಳಿ ಇನ್ನಷ್ಟು ನಡೆಯುವ ಸಾಧ್ಯತೆ ಇರುವುದರಿಂದಾಗಿ ವಿದ್ಯುತ್ ಕಡಿತಗೊಳಿಸಲಾಗಿದೆ. ಜನ ತಮಗೆ ಬೇಕಾದಷ್ಟು ನೀರನ್ನು ತುಂಬಿಟ್ಟುಕೊಳ್ಳಿ ಎಂದು ಸೂಚಿಸಿದೆ. ಈಗಾಗಲೇ ಸೈನ್ಯ ದಾಳಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಸುತ್ತಿದೆ. ಯಾರು ಕೂಡ ಮನೆಯಿಂದ ಹೊರಬರಬೇಡಿ ಮನೆಯಲ್ಲೇ ಇರಿ ಎಂದು ಸೂಚಿಸಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಭೀಕರ ಹತ್ಯೆ – ಶಿರಚ್ಛೇದಿಸಿ, ಚರ್ಮ ಸುಲಿದ್ರು

    https://twitter.com/Ali_Salyar/status/1608405537070419968

    2022ರ ಫೆಬ್ರವರಿ 24ರಂದು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರಿತ್ತು. 10 ತಿಂಗಳುಗಳಿಂದ ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಆದರೆ ಯುದ್ಧ ಆರಂಭಗೊಂಡಾಗ ಇದ್ದಂತಹ ತೀವ್ರತೆ ಇದೀಗ ಇಳಿಕೆ ಕಂಡಿದ್ದು, ಈಗಾಗಲೇ ಸಾಕಷ್ಟು ಸಾವು-ನೋವುಗಳಾಗಿವೆ. ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ಮತ್ತಷ್ಟು ತೀವ್ರಗೊಳಿಸಿದೆ. ಈ ನಡುವೆ  ರಷ್ಯಾ ಯದ್ಧ ಕೊನೆಗೊಳಿಸಲು ಮಾತುಕತೆಗೆ ಬರುವುದಾಗಿ ಉಕ್ರೇನ್‍ಗೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮೋಕ್ಷಕ್ಕಾಗಿ ಕಾಶಿಯಲ್ಲಿ ಜೀವಬಿಟ್ಟ ಉಕ್ರೇನ್ ಪ್ರಜೆ!

    ಮೋಕ್ಷಕ್ಕಾಗಿ ಕಾಶಿಯಲ್ಲಿ ಜೀವಬಿಟ್ಟ ಉಕ್ರೇನ್ ಪ್ರಜೆ!

    ಲಕ್ನೋ: ರಷ್ಯಾ- ಉಕ್ರೇನ್ (Ukraine Russia) ಯುದ್ಧದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ಉಕ್ರೇನ್ ಪ್ರಜೆಯೊಬ್ಬ ವಾರಾಣಾಸಿಯ (Varanasi) ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರದ್ ಘಾಟ್ ಪ್ರದೇಶದ ಅತಿಥಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಉಕ್ರೇನ್ ಪ್ರಜೆ ಕೋಸ್ಟಿಯಾಟಿನ್ ಬೆಲಿಯಾಯೆವ್ (50) ಮೃತ ವ್ಯಕ್ತಿ. ಸ್ಥಳೀಯರ ಮಾಹಿತಿ ಪ್ರಕಾರ, ಉಕ್ರೇನ್ ಪ್ರಜೆ ಕೋಸ್ಟಿಯಾಟಿನ್ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅನೇಕ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೋಸ್ಟಿಯಾಟಿನ್ ಖಿನ್ನತೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೇ ಅವರು ಮರಣಾನಂತರದ ಕಾಶಿಯಲ್ಲಿ (Kashi)  ಮೋಕ್ಷ ಸಿಗುತ್ತದೆ ಎನ್ನುವುದರ ಬಗ್ಗೆ ಮಾತನಾಡಿದ್ದರು ಎಂದು ತಿಳಿಸಿದರು.

    ಕೋಸ್ಟಿಯಾಟಿನ್ ನ. 29ರಿಂದ ನಾರದ್ ಘಾಟ್‍ನಲ್ಲಿರುವ ಮುನ್ನಾ ಗೆಸ್ಟ್‌ಹೌಸ್‍ನಲ್ಲಿ ತಂಗಿದ್ದರು. ಆದರೆ ಭಾನುವಾರ ಸಸಾರಾಮ್ (ಬಿಹಾರ)ಗೆ ಹೋಗಬೇಕಿತ್ತು. ಆದರೆ ಅವರು ಹೋಗಿರಲಿಲ್ಲ. ಇದರಿಂದ ಪ್ರಶ್ನಿಸಲು ಕೋಸ್ಟಿಯಾಟಿನ್ ಕೊಣೆಗೆ ಹೋಗಿದ್ದಾರೆ. ಆದರೆ ಒಳಗಡೆಯಿಂದ ಲಾಕ್‌ ಆಗಿತ್ತು. ಎಷ್ಟೇ ಪ್ರಯತ್ನಿಸಿದರೂ ಒಳಗಡೆಯಿಂದ ಪ್ರತಿಕ್ರಿಯೆ ಬಾರದ್ದನ್ನು ಗಮನಿಸಿದ ಹೊಟೆಲ್ ಸಿಬ್ಬಂದಿ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಸೀಲಿಂಗ್ ರಾಡ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆ- ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಲೆ ಎಷ್ಟು?

    crime

    ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಉಕ್ರೇನ್ ಪ್ರಜೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಶವ ಪತ್ತೆಯಾದ ಕೋಣೆಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಪ್ರಕಾರ, ಅವರು ತಮ್ಮ ರಷ್ಯಾದ ಗೆಳತಿಯೊಂದಿಗೆ ವಾರಣಾಸಿಯಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ನಿದ್ದೆಯಿಲ್ಲ, ಆರೋಗ್ಯದಲ್ಲಿ ಸಮಸ್ಯೆ ಇದೆ: ಹೆಚ್‌ಡಿಕೆ

    Live Tv
    [brid partner=56869869 player=32851 video=960834 autoplay=true]