Tag: Ukraine

  • ಕಾಳಿ ದೇವಿಗೆ ಅವಮಾನ – ಭಾರೀ ಆಕ್ರೋಶದ ಬಳಿಕ ಕ್ಷಮೆ ಕೇಳಿದ ಉಕ್ರೇನ್

    ಕಾಳಿ ದೇವಿಗೆ ಅವಮಾನ – ಭಾರೀ ಆಕ್ರೋಶದ ಬಳಿಕ ಕ್ಷಮೆ ಕೇಳಿದ ಉಕ್ರೇನ್

    ಕೀವ್: ಉಕ್ರೇನ್‌ನ ರಕ್ಷಣಾ ಸಚಿವಾಲಯ (Ukraine Defense Ministry) ಹಿಂದೂ ದೇವತೆ ಕಾಳಿಯನ್ನು (Kali) ವಿಕೃತವಾಗಿ ಚಿತ್ರಿಸಿ ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಭಾರತ (India) ಹಾಗೂ ಹಿಂದೂ (Hindu) ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿವಾದಿತ ಕಾಳಿ ದೇವಿಯ ಚಿತ್ರವನ್ನು ಹಂಚಿಕೊಂಡಿದ್ದಕ್ಕೆ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನ್ ಝಾಪರೋವಾ (Emine Dzhaparova) ಕ್ಷಮೆ ಕೇಳಿದ್ದಾರೆ.

    ಕಾಳಿ ದೇವಿಯನ್ನು ಈ ರೀತಿಯಾಗಿ ಚಿತ್ರಿಸಿರುವುದಕ್ಕೆ ಉಕ್ರೇನ್ ವಿಷಾದಿಸುತ್ತದೆ. ಯುರೋಪಿಯನ್ ದೇಶ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ. ಭಾರತದ ಸಹಾಯವನ್ನು ಪ್ರಶಂಸಿಸುತ್ತದೆ ಎಂದು ತಿಳಿಸಿದ್ದಾರೆ.

    ಏಪ್ರಿಲ್ 30 ರಂದು ಉಕ್ರೇನ್‌ನ ರಕ್ಷಣಾ ಸಚಿವಾಲಯ ‘ವರ್ಕ್ ಆಫ್ ಆರ್ಟ್’ ಎಂಬ ಶೀರ್ಷಿಕೆಯೊಂದಿಗೆ ಕಾಳಿ ದೇವಿಯನ್ನು ಹೋಲುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿತ್ತು. ಸ್ಫೋಟದ ಹೊಗೆಯಲ್ಲಿ ಹಾಗೂ ಅಮೆರಿಕದ ನಟಿ ಮರ್ಲಿನ್ ಮನ್ರೋ ಅವರ ‘ಫ್ಲೈಯಿಂಗ್ ಸ್ಕರ್ಟ್’ ಭಂಗಿಯಲ್ಲಿ ದೇವಿಯನ್ನು ಹೋಲುವ ಚಿತ್ರವನ್ನು ಬರೆಯಲಾಗಿತ್ತು. ಈ ಚಿತ್ರವನ್ನು ಉಕ್ರೇನ್‌ನ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ಅವರು ರಚಿಸಿದ್ದರು. ಇದನ್ನೂ ಓದಿ: ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

    ಈ ಚಿತ್ರವನ್ನು ಉಕ್ರೇನ್‌ನ ರಕ್ಷಣಾ ಸಚಿವಾಲಯ ಪೋಸ್ಟ್ ಮಾಡಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ಉಂಟಾಗಿತ್ತು. ಟ್ವಿಟ್ಟರ್ ಬಳಕೆದಾರರು ಕಾಳಿ ದೇವಿಗೆ ಅವಮಾನ ಮಾಡಲಾಗಿದೆ. ಭಾರತೀಯರು ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಕಿಡಿಕಾರಿದ್ದರು.

    ವಿವಾದಿತ ಕಾಳಿ ದೇವಿಯನ್ನು ಹೋಲುವ ಚಿತ್ರವನ್ನು ಅಳಿಸಬೇಕೆಂಬ ಒತ್ತಾಯದ ಬಳಿಕ ಸಚಿವಾಲಯ ತನ್ನ ಟ್ವೀಟ್ ಅನ್ನು ಅಳಿಸಿ ಕ್ಷಮೆ ಕೇಳಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

  • ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – 5 ಮಕ್ಕಳು ಸೇರಿ 26 ಜನ ಸಾವು

    ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – 5 ಮಕ್ಕಳು ಸೇರಿ 26 ಜನ ಸಾವು

    ಕೀವ್: ಉಕ್ರೇನ್ (Ukraine) ಮೇಲೆ ಶುಕ್ರವಾರ ಸಂಜೆ ರಷ್ಯಾ (Russia) ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐದು ಮಕ್ಕಳು ಸೇರಿದಂತೆ 26 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಷ್ಯಾದ ದಾಳಿಯಿಂದ ಉಕ್ರೇನ್‍ನ ನಗರಗಳು ಜರ್ಜರಿತವಾಗಿದ್ದು, ಉಮಾನ್‍ನಲ್ಲಿ (Uman) ವಸತಿ ಕಟ್ಟಡಗಳು ನೆಲಸಮಗೊಂಡಿವೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದು ಉಕ್ರೇನ್ ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದೃಶ್ಯಗಳು ಮನಸ್ಸಿಗೆ ಘಾಸಿಗೊಳಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಫೇಲ್ – ಆಂಧ್ರದಲ್ಲಿ 48 ಗಂಟೆಗಳಲ್ಲಿ 9 ವಿದ್ಯಾರ್ಥಿಗಳು ಆತ್ಮಹತ್ಯೆ

    ರಷ್ಯಾದ ನಿಯಂತ್ರಣದಲ್ಲಿರುವ ಪೂರ್ವ ನಗರವಾದ ಲುಗಾನ್ಸ್ಕ್‌ನ ನಿವಾಸಿಯೊಬ್ಬರು, ನನಗೆ ನನ್ನ ಮಕ್ಕಳನ್ನು ನೋಡಬೇಕು ಎನಿಸುತ್ತಿದೆ. ಅವರು ಬದುಕಿದ್ದಾರೋ ಇಲ್ಲವೋ ತಿಳಿದಿಲ್ಲ. ಅವರು ಅವಶೇಷಗಳ ಅಡಿಯಲ್ಲಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಬಹುಮಹಡಿ ವಸತಿ ಬ್ಲಾಕ್‍ನ ಅವಶೇಷಗಳ ನಡುವೆ ಬದುಕುಳಿದವರನ್ನು ಹುಡುಕಲು ಕ್ರೇನ್‍ಗಳನ್ನು ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ ದಾಳಿಗೆ ತಕ್ಕ ಉತ್ತರ ಕೊಡುತ್ತೇವೆ ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದನ ವಿರುದ್ಧ ಪ್ರತಿಭಟನೆ – ಕುಸ್ತಿಪಟುಗಳ ಭೇಟಿಯಾದ ಪ್ರಿಯಾಂಕಾ ಗಾಂಧಿ

  • ಟ್ವಿಟ್ಟರ್‌ನ ಬ್ಲೂಟಿಕ್ ನನಗೆ ಬೇಡ – ಕಿತ್ತಾಡಿಕೊಂಡ ಮಸ್ಕ್, ಸ್ಟೀಫನ್ ಕಿಂಗ್

    ಟ್ವಿಟ್ಟರ್‌ನ ಬ್ಲೂಟಿಕ್ ನನಗೆ ಬೇಡ – ಕಿತ್ತಾಡಿಕೊಂಡ ಮಸ್ಕ್, ಸ್ಟೀಫನ್ ಕಿಂಗ್

    ವಾಷಿಂಗ್ಟನ್: ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ (Twitter) ಸಿಇಒ ಎಲೋನ್ ಮಸ್ಕ್ (Elon Musk) ಕೆಲ ಪ್ರಭಾವಿ ವ್ಯಕ್ತಿಗಳಿಗೆ ಟ್ವಿಟ್ಟರ್ ಖಾತೆಗಳಲ್ಲಿ ಬ್ಲೂ ಟಿಕ್‌ಗಳನ್ನು (Blue Tick) ಪಡೆಯಲು ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ನೀಲಿ ಟಿಕ್ ನನಗೆ ಬೇಡ. ಬದಲಿಗೆ ಅದಕ್ಕೆ ವ್ಯಯಿಸಲಾಗುವ ಹಣವನ್ನು ಯುದ್ಧಪೀಡಿತ ಉಕ್ರೇನ್‌ಗೆ (Ukraine) ಸಹಾಯ ಮಾಡಲು ದೇಣಿಗೆ ನೀಡಿ ಎಂದು ಅಮೆರಿಕದ ಜನಪ್ರಿಯ ಲೇಖಕ ಸ್ಟೀಫನ್ ಕಿಂಗ್  (Stephen King) ಕಟುವಾಗಿಯೇ ಮಸ್ಕ್‌ಗೆ ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಲು ಪಾವತಿ ಮಾಡುವಂತಹ ಚಂದಾದಾರಿಕೆಯನ್ನು ಹೊರತಂದಿತ್ತು. ಕಳೆದ ವಾರ ಸೆಲೆಬ್ರಿಟಿ, ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಪಾವತಿ ಮಾಡದೇ ಹೋದ ಎಲ್ಲಾ ಬಳಕೆದಾರರ ಖಾತೆಗಳಲ್ಲಿ ನಿಲಿ ಟಿಕ್ ಮಾರ್ಕ್ ಮಾಯವಾಗಿತ್ತು. ಆದರೆ ಬಳಿಕ ಕೆಲ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ನೀಲಿ ಟಿಕ್ ಮಾರ್ಕ್‌ಗಳು ಮತ್ತೆ ಗೋಚರಿಸತೊಡಗಿವೆ. ಈ ಪೈಕಿ ಹೆಚ್ಚಿನವರು ತಮ್ಮ ಪರಿಶೀಲಿಸಿದ ಖಾತೆಗಾಗಿ ಯಾವುದೇ ರೀತಿಯಲ್ಲಿ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ನೀಲಿ ಟಿಕ್ ಮಾರ್ಕ್ ಅನ್ನು ಮರಳಿ ಪಡೆದಿರುವ ಪ್ರಭಾವಿ ವ್ಯಕ್ತಿಗಳ ಪೈಕಿ ಸ್ಟೀಫನ್ ಕಿಂಗ್ ಕೂಡಾ ಒಬ್ಬರು. ತಾವು ಟ್ವಿಟ್ಟರ್‌ನ ನೀಲಿ ಟಿಕ್‌ಗೆ ಚಂದಾದಾರರಾಗಿಲ್ಲವಾದರೂ ತಮ್ಮ ಖಾತೆಯಲ್ಲಿ ನೀಲಿ ಟಿಕ್ ಕಾಣಿಸುತ್ತಿದೆ ಎಂದು ಕಿಂಗ್ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, “ನಿಮಗೆ ಸ್ವಾಗತ, ನಿಮ್ಮ ಪರಿಶೀಲಿಸಿ ಖಾತೆಗಾಗಿ ಸ್ವತಃ ತಾವೇ ಪಾವತಿಸಿರುವುದಾಗಿ” ತಿಳಿಸಿದ್ದಾರೆ. ಈ ಬಳಿಕ ಸ್ಟೀಫನ್ ಕಿಂಗ್ ಹಾಗೂ ಮಸ್ಕ್ ನಡುವೆ ವಾಗ್ಯುದ್ಧ ಪ್ರಾರಂಭವಾಗಿದೆ.

    ಬಳಿಕ ಟ್ವೀಟ್ ಮಾಡಿರುವ ಸ್ಟೀಫನ್ ಕಿಂಗ್, “ನನಗೆ ಬ್ಲೂ ಟಿಕ್‌ನ ಅಗತ್ಯವಿರಲಿಲ್ಲ. ಇದಕ್ಕೆ ವ್ಯಯಿಸಲಾಗಿರುವ ಹಣವನ್ನು ಉಕ್ರೇನ್‌ಗೆ ದೇಣಿಗೆ ನೀಡಬಹುದಿತ್ತು. ಬ್ಲೂಟಿಕ್ ಚಂದದಾರಿಕೆ ಹಣ ಕೇವಲ 8 ಇದೆ. ಆದರೆ ಮಸ್ಕ್ ಇನ್ನೂ ಸ್ವಲ್ಪ ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡಬಹುದು ಎಂದು ಸಲಹೆ ನೀಡಿದ್ದಾರೆ.

    ಈ ವೇಳೆ ಮಸ್ಕ್ ತಾವು ಉಕ್ರೇನ್‌ಗೆ ಈ ಹಿಂದೆಯೇ ನೀಡಿದ್ದ ಸಹಾಯದ ಬಗ್ಗೆ ತಿಳಿಸಿದ್ದಾರೆ. ನಾನು ಈಗಾಗಲೇ ಉಕ್ರೇನ್‌ಗೆ 100 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದೇನೆ. ಆದರೆ ನೀವು ಇಲ್ಲಿಯವರೆಗೆ ಎಷ್ಟು ದೇಣಿಗೆ ನೀಡಿದ್ದೀರಿ ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಸ್ಟೀಫನ್ ಕಿಂಗ್‌ಗೆ ಸವಾಲೆಸೆದಿದ್ದಾರೆ. ಇದನ್ನೂ ಓದಿ: Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?

    ಮಸ್ಕ್ನ ಸ್ಪೇಸ್‌ಎಕ್ಸ್ ಯುದ್ಧ ಪೀಡಿತ ದೇಶವಾದ ಉಕ್ರೇನ್‌ನಲ್ಲಿ ಟರ್ಮಿನಲ್, ಹೊಸ ಉಪಗ್ರಹಗಳು, ಉಪಗ್ರಹ ಉಡಾವಣೆ ಮತ್ತು ಉಪಗ್ರಹ ನಿರ್ವಹಣೆಗಾಗಿ ಪಾವತಿಸುತ್ತಿದೆ. ಉಕ್ರೇನ್‌ನ ಉಪ ಪ್ರಧಾನ ಮಂತ್ರಿ ಮೈಖೈಲೊ ಫೆಡೋರೊವ್ ಅವರು ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್‌ನ ಕೆಲಸವನ್ನು ದೇಶದಲ್ಲಿ ಮುಂದುವರೆಸಿದ್ದಕ್ಕಾಗಿ ಮಸ್ಕ್‌ಗೆ ಧನ್ಯವಾದ ಅರ್ಪಿಸಿದ ಟ್ವೀಟ್ ಅನ್ನು ಸಹ ಮಸ್ಕ್ ಉಲ್ಲೇಖಿಸಿದ್ದಾರೆ.

    ಇತ್ತೀಚೆಗೆ ಪಾವತಿ ಮಾಡದೇ ಹೋದ ಪ್ರಭಾವಿ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಬ್ಲೂ ಟಿಕ್ ಅನ್ನು ಕಳೆದುಕೊಂಡಿದ್ದರು. ಇದಾದ ಕೇವಲ 3 ದಿನಗಳಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ಮತ್ತೆ ಬ್ಲೂ ಟಿಕ್ ಕಾಣಿಸಿಕೊಳ್ಳಲಾಗುತ್ತಿದೆ. ಕೆಲ ಪ್ರಭಾವಿ ವ್ಯಕ್ತಿಗಳ ಪರಿಶೀಲಿಸಿದ ಖಾತೆಗಳಿಗಾಗಿ ಮಸ್ಕ್ ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು. ಇದಾದ ಬಳಿಕ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಟ್ವಿಟ್ಟರ್ ಬಳಕೆದಾರರು ಉಚಿತವಾಗಿ ಬ್ಲೂ ಟಿಕ್ ಅನ್ನು ಪಡೆಯಬಹುದು ಎಂದು ವರದಿಯೊಂದು ತಿಳಿಸಿದೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

  • ಮಾನವೀಯ ನೆರವು ನೀಡಿ – ಪ್ರಧಾನಿ ಮೋದಿಗೆ ಉಕ್ರೇನ್‌ ಅಧ್ಯಕ್ಷ ಪತ್ರ

    ಮಾನವೀಯ ನೆರವು ನೀಡಿ – ಪ್ರಧಾನಿ ಮೋದಿಗೆ ಉಕ್ರೇನ್‌ ಅಧ್ಯಕ್ಷ ಪತ್ರ

    ನವದೆಹಲಿ: ಮಾನವೀಯ ನೆರವು ನೀಡುವಂತೆ ಭಾರತದ (India) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಕ್ರೇನ್‌ (Ukraine) ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelensky) ಮನವಿ ಮಾಡಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ವಿದೇಶಾಂಗ ಸಚಿವ ಎಮಿನೆ ಝಫರೋವಾ ಮುಖಾಂತರ ಮೋದಿ ಅವರಿಗೆ ಪತ್ರ ರವಾನಿಸಿದ್ದಾರೆ.

    ಉಕ್ರೇನ್‌ ವಿದೇಶಾಂಗ ಸಚಿವೆ ಎಮಿನೆ ಅವರು ಭಾರತ ಪ್ರವಾಸದಲ್ಲಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ವಿನಂತಿಸಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ – 100ಕ್ಕೂ ಅಧಿಕ ಜನ ಬಲಿ

    ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಹೆಚ್ಚುವರಿ ಮಾನವೀಯ ನೆರವಿಗಾಗಿ ಉಕ್ರೇನ್ ವಿನಂತಿಸಿದೆ. ಉಕ್ರೇನ್‌ಗೆ ವರ್ಧಿತ ಮಾನವೀಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ಲೇಖಿ ಟ್ವೀಟ್ ಮಾತಿ ತಿಳಿಸಿದ್ದಾರೆ.

    ರಷ್ಯಾದೊಂದಿಗಿನ ಯುದ್ಧವನ್ನು ನಿಲ್ಲಿಸಲು ಭಾರತ ಮಧ್ಯಪ್ರವೇಶ ಮಾಡಬೇಕು ಉಕ್ರೇನ್‌ ಸಚಿವರು ಒತ್ತಾಯಿಸಿದ್ದರು. ಮೋದಿ ಮತ್ತು ಇತರೆ ಉನ್ನತ ಅಧಿಕಾರಿಗಳು ಉಕ್ರೇನ್‌ಗೆ ಭೇಟಿ ನೀಡುವಂತೆ ಕೋರಿದ್ದರು. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಭಾರತದ ಪ್ರೆಸಿಡೆನ್ಸಿ ಅಡಿಯಲ್ಲಿ ಸೆಪ್ಟೆಂಬರ್ G20 ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಭಾಗವಹಿಸುವಿಕೆ ಬಗ್ಗೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಭಾರತದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಉಕ್ರೇನ್‌ ಶಾಲೆ ಮೇಲೆ ರಷ್ಯಾ ಡ್ರೋನ್‌ ದಾಳಿ – 3 ಸಾವು

    ಉಕ್ರೇನ್‌ ಶಾಲೆ ಮೇಲೆ ರಷ್ಯಾ ಡ್ರೋನ್‌ ದಾಳಿ – 3 ಸಾವು

    ಕೀವ್: ಒಂದು ವರ್ಷ ಕಳೆದರೂ ಉಕ್ರೇನ್‌ (Ukraine) ಮೇಲಿನ ರಷ್ಯಾ (Russia Drone) ದಾಳಿ ಇನ್ನೂ ನಿಂತಿಲ್ಲ. ಕೀವ್‌ನ ಶಾಲೆಯೊಂದಕ್ಕೆ ರಷ್ಯಾದ (Russia) ಡ್ರೋನ್‌ ಅಪ್ಪಳಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.

    ಕೀವ್‌ (Kyiv) ಮೇಲೆ ರಷ್ಯಾ ಮಂಗಳವಾರ ರಾತ್ರಿಯಿಡೀ ದಾಳಿ ನಡೆಸಿದೆ. ಈ ವೇಳೆ ಶಾಲೆಗೆ ಡ್ರೋನ್‌ ಅಪ್ಪಳಿಸಿತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೂ ನಾಲ್ಕು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ರಾಜ್ಯ ತುರ್ತು ಸೇವಾ ಘಟಕ ತಿಳಿಸಿದೆ. ಇದನ್ನೂ ಓದಿ: ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ಡ್ರೋನ್‌ ದಾಳಿಯಲ್ಲಿ ವಿದ್ಯಾರ್ಥಿಗಳಿದ್ದ ಎರಡು ಅಂತಸ್ತಿನ ಕಟ್ಟಡ ಹಾಗೂ ಅಧ್ಯಯನದ ಕಟ್ಟಡವೂ ಸಹ ನೆಲಸಮಗೊಂಡಿದೆ. ಡ್ರೋನ್‌ ಅಪ್ಪಳಿಸಿದಾಗ ಶಾಲೆಯ 300 ಚದರ ಮೀಟರ್‌ವರೆಗೂ ಬೆಂಕಿ ಆವರಿಸಿತು. ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ಮಾಡಿದರು.

    ರಷ್ಯಾ ನಿಯಮಿತವಾಗಿ ಉಕ್ರೇನ್ ವಿರುದ್ಧ ಕ್ಷಿಪಣಿ, ಫಿರಂಗಿಗಳು ಮತ್ತು ಡ್ರೋನ್‌ಗಳಿಂದ ದಾಳಿ ಮಾಡುತ್ತಿದೆ. ಇದರಿಂದ ಜನತೆ ವಿದ್ಯುತ್‌ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವಂತಾಗಿದೆ. ಇದನ್ನೂ ಓದಿ: ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ – 9 ಮಂದಿ ಸಾವು

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು 2022ರ ಫೆಬ್ರುವರಿ 24ರಂದು ಉಕ್ರೇನ್‌ ವಿರುದ್ಧ ಸಮರ ಸಾರಿದರು. ಎರಡೂ ದೇಶಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಿವೆ. ಸಾವಿರಾರು ಮಂದಿ ಯುದ್ಧದಲ್ಲಿ ಮಡಿದಿದ್ದಾರೆ. ಲಕ್ಷಾಂತರ ಮಂದಿ ಮನೆ ತೊರೆದು ನಿರಾಶ್ರಿತರಾಗಿದ್ದಾರೆ. ಎರಡೂ ದೇಶಗಳು ಕೋಟ್ಯಂತರ ಡಾಲರ್‌ ಮೌಲ್ಯದ ನಷ್ಟಕ್ಕೆ ತುತ್ತಾಗಿವೆ.

  • ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ICC

    ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ICC

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ನಡೆದ ಮಕ್ಕಳ ಅಪಹರಣ ಹಾಗೂ ಯುದ್ಧ ಅಪರಾಧಗಳ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ವಾರೆಂಟ್ ಹೊರಡಿಸಿದೆ.

    ನ್ಯಾಯಾಲಯವು ತನ್ನ ವಾರೆಂಟ್‌ನಲ್ಲಿ, ಉಕ್ರೇನಿನಿಂದ ಮಕ್ಕಳನ್ನು ಅಕ್ರಮವಾಗಿ ಗಡಿಪಾರು ಮಾಡುವ ಮತ್ತು ರಷ್ಯಾದ ಒಕ್ಕೂಟಕ್ಕೆ ಜನರನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ (War Crimes) ಪುಟಿನ್ ಜವಾಬ್ದಾರಿಯಾಗಿದ್ದಾರೆ. ಜನರನ್ನು ಕಾನೂನು ಬಾಹಿರವಾಗಿ ವರ್ಗಾಯಿಸಿರುವುದಕ್ಕೆ ಸಮಂಜಸವಾದ ಆಧಾರಗಳಿವೆ ಎಂದು ಹೇಳಿದೆ. ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

    ರಷ್ಯಾದ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನೂ ಬಂಧಿಸಲು ವಾರೆಂಟ್ ಹೊರಡಿಸಿದೆ. ಆದರೆ ಈ ಆರೋಪವನ್ನು ಮಾಸ್ಕೋ ತಳ್ಳಿಹಾಕಿದೆ. ರಷ್ಯಾದ ಸೇನಾಪಡೆಗಳು ದೌರ್ಜನ್ಯ ಎಸಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಉತ್ತರ ಕೊರಿಯಾ ಕೇವಲ 33 ಸೆಕೆಂಡ್‌ಗಳಲ್ಲಿ ಅಮೆರಿಕವನ್ನ ನಾಶ ಮಾಡುತ್ತೆ – ಚೀನಾ ತಜ್ಞರ ಸ್ಫೋಟಕ ಹೇಳಿಕೆ

  • ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ: ಝೆಲೆನ್ಸ್ಕಿ ಭವಿಷ್ಯ

    ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ: ಝೆಲೆನ್ಸ್ಕಿ ಭವಿಷ್ಯ

    ಕೀವ್: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಭವಿಷ್ಯ ನುಡಿದಿದ್ದಾರೆ.

    ಝೆಲೆನ್ಸ್ಕಿ ಅವರ ಈ ಹೇಳಿಕೆ ಉಕ್ರೇನ್‌ನ ‘ಇಯರ್’ (Year) ಹೆಸರಿನ ಸಾಕ್ಷ್ಯಚಿತ್ರದಲ್ಲಿ (Documentary) ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿರುವ ಹಿನ್ನೆಲೆ ಶುಕ್ರವಾರ ಇಯರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

    ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಕೆಲಸ ಮಾಡಲು ಪ್ರೇರೇಪಿಸಲಿದೆ. ಪರಭಕ್ಷಕಗಳು ಪರಭಕ್ಷಕನನ್ನು ತಿನ್ನುತ್ತವೆ. ಕೊಲೆಗಾರನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ, ಆದರೆ ಯಾವಾಗ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ಇದನ್ನೂ ಓದಿ: ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ

    ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿದ ಬಳಿಕ ಆಗಾಗ ಅಧ್ಯಕ್ಷ ಪುಟಿನ್ ಬಗ್ಗೆ ಅವರ ಆಂತರಿಕ ವಲಯದಲ್ಲೇ ಅಸಮಾಧಾನ ಹೊಂದಿರುವ ಬಗ್ಗೆ ರಷ್ಯಾದಲ್ಲಿ ವರದಿಯಾಗಿದೆ. ಪುಟಿನ್‌ರ ಆಪ್ತ ವಲಯದವರೇ ಅವರ ಬಗ್ಗೆ ಹೆಚ್ಚು ಹತಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದ ವೇಳೆಯೂ ರಷ್ಯಾದ ಸೈನಿಕರು ಅಧ್ಯಕ್ಷನ ವಿರುದ್ಧ ದೂರುವುದು ಹಲವು ವೀಡಿಯೋಗಳಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

  • ರಷ್ಯಾ, ಉಕ್ರೇನ್ ಯುದ್ಧಕ್ಕೆ 1 ವರ್ಷ – ಮತದಾನದಿಂದ ದೂರ ಉಳಿದ ಭಾರತ

    ರಷ್ಯಾ, ಉಕ್ರೇನ್ ಯುದ್ಧಕ್ಕೆ 1 ವರ್ಷ – ಮತದಾನದಿಂದ ದೂರ ಉಳಿದ ಭಾರತ

    ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia Ukraine War) ಸಾರಿ ಇಂದಿಗೆ 1 ವರ್ಷವಾಗಿದೆ. ಈ ಸಂಘರ್ಷದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡರೆ, ಅನೇಕರು ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆ ಉಕ್ರೇನ್‌ನಲ್ಲಿ ದಾಳಿ ಮಾಡುತ್ತಿರುವ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳಲು ವಿಶ್ವಸಂಸ್ಥೆ (United Nations) ನಿರ್ಣಯಿಸಿದೆ.

    ವಿಶ್ವಸಂಸ್ಥೆ ನಡೆಸಿದ ಸದಸ್ಯ ರಾಷ್ಟ್ರಗಳ ಮಹಾ ಸಭೆಯಲ್ಲಿ ತಮ್ಮ ನಿರ್ಣಯವನ್ನು ತಿಳಿಸುವಂತೆ ಮತದಾನ ನಡೆಸಲಾಯಿತು. ವಿಶ್ವಸಂಸ್ಥೆಯ ಉದ್ದೇಶವನ್ನು 141 ರಾಷ್ಟ್ರಗಳು ಬೆಂಬಲಿಸಿದ್ದು, ರಷ್ಯಾ ಸೇರಿದಂತೆ 7 ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಭಾರತ (India), ಚೀನಾ (China) ಸೇರಿದಂತೆ 32 ದೇಶಗಳು ಮತ ಹಾಕದೇ ತಮ್ಮ ತಟಸ್ಥ ನಿಲುವನ್ನು ತೋರ್ಪಡಿಸಿಕೊಂಡಿದೆ.

    ಭಾರತ ಉಕ್ರೇನ್‌ನ ಪ್ರಸ್ತುತ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದೆ. ರಷ್ಯಾ ಹಾಗೂ ಉಕ್ರೇನ್ ಆದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸಿ, ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದೆ. ಇದನ್ನೂ ಓದಿ: ಕೆನಡಾ ಪೌರತ್ವ ಬದಲಾಯಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀರ್ಮಾನ

    ಇದೇ ವೇಳೆ ಚೀನಾ ಕೂಡಾ ತಟಸ್ಥ ನಿಲುವನ್ನು ತೋರಿದ್ದು, ಶಾಂತಿಯುತವಾಗಿ ಮಾತುಕತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ರಷ್ಯಾ ಹಾಗೂ ಉಕ್ರೇನ್‌ಗೆ ಪಾಠ ಹೇಳಲು ಮುಂದಾಗಿದೆ. ಎಲ್ಲಾ ಸಮಸ್ಯೆಗಳಿಗೂ ಅಣ್ವಸ್ತ್ರವೇ ಮುಖ್ಯವಲ್ಲ. ಅಸ್ತ್ರಗಳನ್ನು ಕಳುಹಿಸುವುದರಿಂದ ಶಾಂತಿಯನ್ನು ಕಾಪಾಡಲು ಸಾಧ್ಯವಿಲ್ಲ. ಇದು ಯುದ್ಧಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದು ಚೀನಾ ವಿಶ್ವಸಂಸ್ಥೆಗೆ ತಿಳಿಸಿದೆ.

    ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಭಾರೀ ಮೊತ್ತದ ಶಸ್ತ್ರಾಸ್ತ್ರಗಳನ್ನು ಒದಗಿಸಿವೆ. ಅಮೆರಿಕ ಹಾಗೂ ನ್ಯಾಟೋ ಕಳೆದ ವಾರ ಚೀನಾ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ನೀಡಲು ಮುಂದಾಗುತ್ತಿದೆ ಎಂದು ಆರೋಪಿಸಿ, ಎಚ್ಚರಿಕೆಯನ್ನು ನೀಡಿತ್ತು. ಆದರೆ ಈ ಆರೋಪವನ್ನು ಚೀನಾ ತಳ್ಳಿಹಾಕಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಶಾ ಶಾಕ್‌ – ಬೆಂಗಳೂರು ಗೆಲ್ಲಲು ಬಿಗ್ ಟಾಸ್ಕ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ಯುದ್ಧದ ಸ್ಥಿತಿ ನಿರ್ಮಾಣವಾಗಲು ಪಾಶ್ಚಿಮಾತ್ಯರೇ ಕಾರಣ. ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಅವರೇ. ಅದರಿಂದ ಸಂತ್ರಸ್ತರಾದವರು, ಎಲ್ಲದಕ್ಕೂ ಪಾಶ್ಚಿಮಾತ್ಯ ಗುಂಪೇ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪರೋಕ್ಷವಾಗಿ ಅಮೆರಿಕಾವನ್ನ ದೂಷಿಸಿದ್ದಾರೆ.

    ಅಮೆರಿಕ (USA) ಅಧ್ಯಕ್ಷ ಜೋ ಬೈಡನ್ (Joe Biden) ಉಕ್ರೇನ್‌ಗೆ ಅಚ್ಚರಿ ಭೇಟಿ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಉಕ್ರೇನ್ ಮೇಲಿನ ಸಮರ ಶುರುವಾಗಿ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ರಷ್ಯಾ ಅಸೆಂಬ್ಲಿಯಲ್ಲಿ ಮಾತನಾಡಿದ ಪುಟಿನ್, ಪಾಶ್ಚಿಮಾತ್ಯರು ಸ್ಥಳೀಯ ಬಿಕ್ಕಟ್ಟನ್ನು ಜಾಗತಿಕ ಸಂಘರ್ಷವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಲಿದ್ದೇವೆ. ರಾಷ್ಟ್ರದ ಉಳಿಯುವಿಕೆಯ ಕುರಿತಾಗಿ ನಾವು ಮಾತನಾಡುತ್ತಿದ್ದೇವೆ ಎಂದು ಪುಟಿನ್ ಎಚ್ಚರಿಸಿದ್ದಾರೆ.

    ಉಕ್ರೇನ್ ಜೊತೆಗೆ ಯುದ್ಧ ತಡೆಯಲು ರಷ್ಯಾ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಶಾಂತಿಯುತ ಮಾತುಕತೆಯನ್ನೂ ನಡೆಸುತ್ತಿದೆ. ಆದ್ರೆ ನಮ್ಮ ಬೆನ್ನ ಹಿಂದೆಯೇ ನಿಂತು ಅನೇಕ ತಂತ್ರಗಳನ್ನು ಎಣೆಯಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಸಹೋದರ-ಸಹೋದರಿ ಕುರಿತು ಅಶ್ಲೀಲ ಪ್ರಶ್ನೆ; ಪಾಕ್‌ ವಿವಿ ವಿರುದ್ಧ ಆಕ್ರೋಶ

    ಪಾಶ್ಚಿಮಾತ್ಯರು ಜಗತ್ತಿನಾದ್ಯಂತ ಗೊಂದಲ ಮತ್ತು ಯುದ್ಧವನ್ನು ಬಿತ್ತುವ ಕೆಲಸ ಮಾಡಿದರು. ಪಾಶ್ಚಿಮಾತ್ಯರ ಬೆಂಬಲ ಪಡೆದ ಉಕ್ರೇನ್ ಕ್ರಿಮಿಯಾ ಮೇಲೆ ಆಕ್ರಮಣಕ್ಕೆ ಯೋಜನೆ ರೂಪಿಸಿತ್ತು. ಪಾಶ್ಚಿಮಾತ್ಯರು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೇನೆಯ ದೃಷ್ಟಿಯಲ್ಲಿ ಉಕ್ರೇನ್‌ನ್ನು ವಶಕ್ಕೆ ಪಡೆದರು. ಕೀವ್ ಪ್ರಭುತ್ವದಲ್ಲಿ ಸ್ವತಃ ಉಕ್ರೇನ್ ಜನರೇ ಒತ್ತೆಯಾಳುಗಳಾದರು ಎಂದು ಪುಟಿನ್ ಹೇಳಿದ್ದಾರೆ.

    Joe Biden 2

    1991ರಲ್ಲಿ ಸೋವಿಯತ್ ಒಕ್ಕೂಟದ ವಿಭಜನೆಯಾದ ದಿನಗಳಿಂದಲೂ ಉಕ್ರೇನ್ ಬಿಕ್ಕಟ್ಟು ಮುಂದುವರಿದಿದೆ. ಯುದ್ಧದ ಆರಂಭದಿಂದ ಈವರೆಗೂ ರಷ್ಯಾದ ಪಡೆಗಳು ಪ್ರಮುಖವಾಗಿ ಮೂರು ಬಾರಿ ಯುದ್ಧ ಭೂಮಿಯಿಂದ ಹಿಂದಕ್ಕೆ ಮರಳಿವೆ. ಆದರೆ ಈಗಲೂ ಉಕ್ರೇನ್‌ನ 5ನೇ ಒಂದು ಭಾಗದಷ್ಟು ಪ್ರದೇಶವು ರಷ್ಯಾ ನಿಯಂತ್ರಣದಲ್ಲಿದೆ. ಯುದ್ಧದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ; 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ

    ಇದೀಗ ವಾಷಿಂಗ್ಟನ್‌ನಲ್ಲಿ ಕೆಲವು ಮಂದಿ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಹಾಗಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹಾಗೂ ನ್ಯೂಕ್ಲಿಯರ್ ಕಾರ್ಪೊರೇಷನ್ ಸಹ ರಷ್ಯಾದ ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಲು ಸಜ್ಜಾಗಬೇಕಿದೆ. ರಷ್ಯಾ-ಅಮೆರಿಕ ನಡುವಿನ ಶಸ್ತ್ರಾಸ್ತ್ರಗಳ ನಿಯಂತ್ರಣ ಒಪ್ಪಂದದಿಂದ (START-ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ) ರಷ್ಯಾ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗಿದೆ ಎಂದು ಹೇಳಿದ್ದಾರೆ.

    ಹೊಸ ಸ್ಟಾರ್ಟ್ ಒಪ್ಪಂದಕ್ಕೆ 2010ರಲ್ಲಿ ಸಹಿ ಮಾಡಲಾಗಿತ್ತು. 2011ರಲ್ಲಿ ಒಪ್ಪಂದ ಜಾರಿಗೆ ಬಂದಿತು. 2021ರಲ್ಲಿ ಜೋ ಬೈಡನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ 5 ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಒಪ್ಪಂದವು ಅಮೆರಿಕ ಮತ್ತು ರಷ್ಯಾ ನಿಯೋಜಿಸಬಹುದಾದ ಪರಮಾಣು ಸಿಡಿತಲೆಗಳ ಸಂಖ್ಯೆ, ಜಲಾಂತರ್ಗಾಮಿ ಕ್ಷಿಪಣಿಗಳು ಹಾಗೂ ಬಾಂಬರ್‌ಗಳನ್ನು ಮಿತಿಗೊಳಿಸುತ್ತದೆ.

    ತಜ್ಞರ ಪ್ರಕಾರ ಸುಮಾರು 6,000 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿರುವ ರಷ್ಯಾವು ವಿಶ್ವದಲ್ಲೇ ಅತಿ ದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ದೇಶವಾಗಿದೆ. ಆದ್ರೆ ಅಮೆರಿಕ ಭೂಮಿ ಗ್ರಹವನ್ನ ಹಲವು ಬಾರಿ ನಾಶಮಾಡಲು ಸಾಧ್ಯವಾಗುವಂತ ವಿಶ್ವದ ಶೇ.90 ರಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

    ಒಂದು ದಿನದ ಹಿಂದೆಯಷ್ಟೇ ಉಕ್ರೇನ್‌ಗೆ ಅಚ್ಚರಿ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ರಕ್ಷಣೆಗೆ ಭಾರೀ ಶಸ್ತ್ರಾಸ್ತ್ರಗಳ ನೆರವು ನೀಡುವುದಾಗಿ ಶ್ವೇತಭವನದ ಹೇಳಿಕೆಯಲ್ಲಿ ಘೋಷಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್‌ಗೆ ಜೋ ಬೈಡನ್ ಅಚ್ಚರಿ ಭೇಟಿ – ಭಾರೀ ಶಸ್ತ್ರಾಸ್ತ್ರ ನೆರವು ಘೋಷಿಸಿದ US ಅಧ್ಯಕ್ಷ

    ಉಕ್ರೇನ್‌ಗೆ ಜೋ ಬೈಡನ್ ಅಚ್ಚರಿ ಭೇಟಿ – ಭಾರೀ ಶಸ್ತ್ರಾಸ್ತ್ರ ನೆರವು ಘೋಷಿಸಿದ US ಅಧ್ಯಕ್ಷ

    ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia Ukraine War) ಶುರು ಮಾಡಿ ಇದೇ ಫೆಬ್ರವರಿ 24ಕ್ಕೆ ಒಂದು ವರ್ಷ ತುಂಬಲಿದೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.

    ಅಮೆರಿಕ ಅಧ್ಯಕ್ಷ (US President) ಜೋ ಬೈಡನ್ (Joe Biden) ಕೀವ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೆಂಡ್‌ಗೆ ತೆರಳಿದ್ದ ಜೋ ಬೈಡನ್ ಅಲ್ಲಿನ ಅಧ್ಯಕ್ಷರ ಜೊತೆಗೆ ದಿಢೀರ್ ಆಗಿ ಉಕ್ರೇನ್‌ಗೆ ತೆರಳಿದ್ದಾರೆ. ಇದನ್ನೂ ಓದಿ: ಕಿಮ್ ಜಾಂಗ್ ಉನ್ ಮಗಳ ಹೆಸರನ್ನು ಉತ್ತರ ಕೊರಿಯಾದ ಯಾರೂ ತಮ್ಮ ಮಕ್ಕಳಿಗೆ ಇಡುವಂತಿಲ್ಲ!

    ಕೀವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ (Volodymyr Zelensky) ಜೊತೆಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನಿಗರ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದಲ್ಲದೇ ಶಸ್ತ್ರಾಸ್ತ್ರ ವಿತರಣೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಉಕ್ರೇನ್ ರಕ್ಷಿಸಲು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್

    `ಉಕ್ರೇನಿಯನ್ ಜನರನ್ನು ವೈಮಾನಿಕ ಬಾಂಬ್ ದಾಳಿಯಿಂದ ರಕ್ಷಿಸಲು ಫಿರಂಗಿ, ಮದ್ದು-ಗುಂಡುಗಳು, ರಕ್ಷಣಾ ವ್ಯವಸ್ಥೆಗಳು ಹಾಗೂ ವಾಯು ಕಣ್ಗಾವಲು ರಾಡರ್‌ಗಳು ಸೇರಿದಂತೆ ನಿರ್ಣಾಯಕ ಸಲಕರಣೆಗಳನ್ನು ಪೂರೈಸುತ್ತೇನೆ ಎಂಬುದಾಗಿ ಶ್ವೇತಭವನದ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಳಿಕ ಝಲೆನ್ಸ್ಕಿ, ಬೈಡನ್ ಭೇಟಿಯನ್ನು ಬೆಂಬಲದ ಸಂಕೇತ ಸ್ವಾಗತಿಸಿದ್ದಾರೆ. ಈ ಬೆಳವಣಿಗೆ ರಷ್ಯಾಗೆ ಮತ್ತಷ್ಟು ಕೋಪ ಉಂಟುಮಾಡಿದೆ.

    ಇತ್ತೀಚೆಗೆ ಬ್ರಿಟನ್ ಸಹ ಉಕ್ರೇನ್‌ಗೆ ಸೇನಾ ನೆರವು ಘೋಷಣೆ ಮಾಡಿತು. ರಷ್ಯಾವನ್ನು ಹಿಮ್ಮೆಟ್ಟಿಸಲು ಮೇ ತಿಂಗಳ ವೇಳೆಗೆ ಯುದ್ಧ ವಿಮಾನಗಳು ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಕೀವ್‌ಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k