Tag: Ukraine

  • ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

    ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

    ಮಾಸ್ಕೋ: ರಷ್ಯಾ ಉಕ್ರೇನ್‌ ಯುದ್ಧ (Russia-Ukraine War) ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮಾಸ್ಕೋ (Moscow) ಮೇಲೆ ಡ್ರೋನ್‌ ದಾಳಿ (Drone Attacks) ನಡೆದಿದ್ದು, ಈ ದಾಳಿಯನ್ನು ಉಕ್ರೇನ್‌ ನಡೆಸಿದೆ ಎಂದು ರಷ್ಯಾ ಆರೋಪ ಮಾಡಿದೆ

    ಪಶ್ಚಿಮದಲ್ಲಿರುವ ಓಡಿಂಟ್ಸೊವೊ ಜಿಲ್ಲೆಯಲ್ಲಿ ಒಂದು ಡ್ರೋನ್‌ ಹೊಡೆದು ಉರುಳಿಸಲಾಗಿದೆ. ಇನ್ನು ಎರಡು ಡ್ರೋನ್‌ ಮೇಲೆ ದಾಳಿ ಮಾಡಿ ತಟಸ್ಥಗೊಳಿಸಿದ್ದರೂ ಅವು ಕಟ್ಟಡದ ಮೇಲೆ ಅಪ್ಪಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

    ಈ ದಾಳಿಯಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಎರಡು ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ ಎಂದು ನಗರದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

    ಉಕ್ರೇನ್‌ ಅಧಿಕಾರಿಗಳು ಘಟನೆಯನ್ನು ಒಪ್ಪಿಕೊಂಡಿಲ್ಲ. ನಗರ ಕೇಂದ್ರದ ನೈಋತ್ಯದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಈ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳ ಕಡೆಗೆ ತಿರುಗಿಸಲಾಗಿದೆ.

    ಭಾನುವಾರ ಬೆಳಗಿನ ಜಾವ ಈ ದಾಳಿ ನಡೆದಿದೆ. ಉಕ್ರೇನ್‌ ಗಡಿಯಿಂದ ಮಾಸ್ಕೋ 500 ಕೀ.ಮೀ ದೂರದಲ್ಲಿದೆ. ರಷ್ಯಾದ ಒಳಗಡೆ ನಡೆದ ದಾಳಿಗೆ ನಾನು ಕಾರಣ ಎಂದು ಉಕ್ರೇನ್‌ ಒಪ್ಪಿಕೊಂಡಿರುವುದು ಬಹಳ ವಿರಳ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಚೀನಾ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ವರದಿ

    ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಚೀನಾ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ವರದಿ

    ವಾಷಿಂಗ್ಟನ್: ಉಕ್ರೇನ್‌ (Ukraine) ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ (Russia) ಶಸ್ತ್ರಾಸ್ತ್ರ, ತಂತ್ರಜ್ಞಾನವನ್ನು ಚೀನಾ (China) ಒದಗಿಸುತ್ತಿದೆ ಎಂದು ಅಮೆರಿಕದ (America) ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಆರೋಪಿಸಿದೆ.

    2022 ರಲ್ಲಿ ಪಾಶ್ಚಿಮಾತ್ಯ ದೇಶಗಳೊಂದಿಗಿನ ವ್ಯಾಪಾರವು ಕುಸಿದ ನಂತರ ಚೀನಾವು ರಷ್ಯಾದ ಪ್ರಮುಖ ವ್ಯಾಪಾರ ಪಾಲುದಾರನಾಗಿ ಮಾರ್ಪಟ್ಟಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಿಂದ ರಷ್ಯಾಕ್ಕೆ ಬೆಂಬಲ ಒದಗಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಇನ್ಮುಂದೆ ರಷ್ಯಾದಲ್ಲಿ ಗಂಡು ಹೆಣ್ಣಾಗಿ.. ಹೆಣ್ಣು ಗಂಡಾಗಿ ಬದಲಾಗುವಂತಿಲ್ಲ

    PRC ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿಗಳು ನ್ಯಾವಿಗೇಷನ್ ಉಪಕರಣಗಳು, ಜ್ಯಾಮಿಂಗ್ ತಂತ್ರಜ್ಞಾನ ಮತ್ತು ಫೈಟರ್-ಜೆಟ್ ಭಾಗಗಳನ್ನು ಚೀನಾ ಒದಗಿಸಿದೆ. ಮಂಜೂರು ಮಾಡಿದ ರಷ್ಯಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿಗಳಿಗೆ ಇವುಗಳನ್ನು ರವಾನಿಸಿದೆ ಎಂದು ಹೇಳಿದೆ.

    ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವುದು ಚೀನಾವನ್ನು ಉತ್ತೇಜಿಸಿದೆ. 2022 ರ ಡಿಸೆಂಬರ್‌ನಲ್ಲಿ ರಷ್ಯಾದ ಕಚ್ಚಾ ತೈಲದ ಮೇಲೆ ಗ್ರೂಪ್ ಆಫ್ ಸೆವೆನ್ (G-7) USD 60 ಬೆಲೆಯ ಮಿತಿಯನ್ನು ವಿಧಿಸಿದ ನಂತರ ಮಾಸ್ಕೋಗೆ ಹೆಚ್ಚು ಅಗತ್ಯವಿರುವ ಆದಾಯ ಬರುತ್ತಿದೆ. ಇದನ್ನೂ ಓದಿ: ಸಿರಿಯಾದಲ್ಲಿ ಸ್ಫೋಟ – 6 ಮಂದಿ ಸಾವು, 23 ಜನರಿಗೆ ಗಾಯ

    ಯುದ್ಧದ ಆರಂಭದಲ್ಲಿ ಉಕ್ರೇನ್‌ ಮೇಲೆನ ದಾಳಿಗಾಗಿ ರಷ್ಯಾಗೆ ಮಾರಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಚೀನಾ ಉದ್ದೇಶಿಸಿತ್ತು ಎಂದು ಅಮೆರಿಕದ ಅಧಿಕಾರಿಯೊಬ್ಬರು ಆರೋಪಿಸಿದ್ದರು. ಆದರೆ ಯುದ್ಧ ಮುಂದುವರಿದಂತೆ ಚೀನಾ ಆ ಯೋಜನೆಯನ್ನು ಮುಂದೂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ಸೇನೆ ಹಿಮ್ಮೆಟ್ಟಿಸಲು USನ ಕ್ಲಸ್ಟರ್ ಬಾಂಬ್‌ ಬಳಸಿ ಉಕ್ರೇನ್‌ ದಾಳಿ – ವೈಟ್‌ಹೌಸ್‌ ರಿಯಾಕ್ಷನ್‌

    ರಷ್ಯಾ ಸೇನೆ ಹಿಮ್ಮೆಟ್ಟಿಸಲು USನ ಕ್ಲಸ್ಟರ್ ಬಾಂಬ್‌ ಬಳಸಿ ಉಕ್ರೇನ್‌ ದಾಳಿ – ವೈಟ್‌ಹೌಸ್‌ ರಿಯಾಕ್ಷನ್‌

    ವಾಷಿಂಗ್ಟನ್‌/ಕೀವ್‌: ಅಮೆರಿಕ (USA) ಪೂರೈಸಿದ ಕ್ಲಸ್ಟರ್‌ ಯುದ್ಧ ಸಾಮಗ್ರಿಗಳು ಉಕ್ರೇನ್‌ ಸೇನೆಯ ಬಳಿಯಿದೆ. ಕೀವ್‌ನ ಯುದ್ಧದ ಭಾಗವಾಗಿ ಮೈದಾನದಲ್ಲಿ ನಿಯೋಜಿಸಲಾಗಿದೆ. ರಷ್ಯಾ ಸೇನೆಯನ್ನ ಹಿಮ್ಮೆಟ್ಟಿಸಲು ಉಕ್ರೇನ್‌ ಕ್ಲಸ್ಟರ್‌ ಬಾಂಬ್‌ಗಳನ್ನ (Cluster Bombs) ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂದು ಅಮೆರಿಕ ಶ್ವೇತಭವನದ (White House) ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ನೀಡಿದ್ದಾರೆ.

    ನಾವು ಉಕ್ರೇನ್‌ನಿಂದ (Ukraine) ಆರಂಭಿಕ ಹಂತದ ಪ್ರತಿಕ್ರಿಯೆಗಳನ್ನ ಪಡೆದುಕೊಂಡಿದ್ದೇವೆ. ನಾವು ಪೂರೈಸಿದ ಯುದ್ಧ ಸಾಮಗ್ರಿಗಳನ್ನ ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿದ್ದಾರೆ. ಕ್ಲಸ್ಟರ್‌ ಯುದ್ಧ ಸಾಮಗ್ರಿಗಳು ರಷ್ಯಾದ ರಕ್ಷಣಾ ಪಡೆಗಳ ಮೇಲೆ ಪ್ರಭಾವ ಬೀರುತ್ತಿದೆ. ಶತ್ರು ಸೇನೆ ರಷ್ಯಾದ (Russia) ಸಾಂದ್ರತೆಯನ್ನು ಹೊರಹಾಕಲು ಮಾತ್ರ ಕ್ಲಸ್ಟರ್ ಬಾಂಬ್‌ಗಳನ್ನು ಬಳಸುವುದಾಗಿ ಉಕ್ರೇನ್ ಪ್ರತಿಜ್ಞೆ ಮಾಡಿದೆ ಎಂದು ಹೇಳಿದ್ದಾರೆ.

    ದೊಡ್ಡ ಸಂಖ್ಯೆಯಲ್ಲಿ ಏಕಕಾಲಕ್ಕೆ ಸಣ್ಣ ಬಾಂಬ್‌ಗಳನ್ನು ಬಿಡುಗಡೆ ಮಾಡುವ ಕ್ಲಸ್ಟರ್ ಬಾಂಬ್​ಗಳನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದೆ. ಇವು ವಿಶಾಲ ಪ್ರದೇಶದಲ್ಲಿ ಭಾರೀ ಹಾನಿಯುಂಟು ಮಾಡಲಿವೆ. ಇದರಲ್ಲಿ ಕೆಲ ಬಾಂಬ್​ಗಳು ಸ್ಫೋಟಗೊಳ್ಳದೇ ದಶಕಗಳವರೆಗೆ ಭೂಮಿಯ ಮೇಲೆ ಉಳಿಯಬಹುದು. ನಂತರದಲ್ಲಿ ಇದು ಮಕ್ಕಳಿಗೆ ಅಪಾಯವನ್ನುಂಟು ಮಾಡಬಹುದು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    ಫೆಬ್ರವರಿ 2022 ರಲ್ಲಿ ರಷ್ಯಾದ ಆಕ್ರಮಣದಿಂದ ಪ್ರಾರಂಭವಾದ ಸಂಘರ್ಷದಲ್ಲಿ ಕ್ಲಸ್ಟರ್ ಬಾಂಬ್‌ಗಳನ್ನು ಬಳಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಹ ಅಗತ್ಯಬಿದ್ದರೆ ರಷ್ಯಾ ವಿರುದ್ಧ ಕ್ಲಸ್ಟರ್‌ ಬಾಂಬ್‌ಗಳನ್ನ ಬಳಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ

    ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ

    – ರಷ್ಯಾದ ಇಬ್ಬರು ದಂಪತಿ ಸಾವು

    ಮಾಸ್ಕೋ: ಭಾರೀ ಸ್ಫೋಟ ಸಂಭವಿಸಿದ ಘಟನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಕನಸಿನ ಯುರೋಪಿನ ಉದ್ದದ ಕ್ರಿಮಿಯಾ ಸೇತುವೆಗೆ (Crimea Kerch Bridge) ಮತ್ತೆ ಹಾನಿಯಾಗಿದೆ. ಇದರಿಂದ ಕ್ರಿಮಿಯಾ-ರಷ್ಯಾ ಸಂಪರ್ಕ ಕಡಿತಗೊಂಡಿದೆ.

    ಸೇತುವೆ ಮೇಲೆ ಸ್ಫೋಟಗಳು ಸಂಭವಿಸಿದ್ದು, ರಷ್ಯಾದ ಬೆಲ್ಗೊರೊಡ್ ಪ್ರದೇಶದ ದಂಪತಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹೆಣ್ಣುಮಗುವೊಂದು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದರ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ರಷ್ಯಾ ಆರೋಪಿಸಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ರಷ್ಯಾದ (Russia) ಯೋಧರಿಗೆ ಸಾಮಗ್ರಿಗಳನ್ನ (Military Equipment) ತಲುಪಿಸುವ ಪ್ರಮುಖ ಮಾರ್ಗವಾಗಿರುವ ಕ್ರಿಮಿಯಾ ಸೇತುವೆ ಮೇಲೆ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ದಾಳಿ ನಡೆದಿತ್ತು. ಸೇತುವೆ ಮಧ್ಯಭಾಗ ಸಂಪೂರ್ಣ ಧ್ವಂಸಗೊಂಡಿತ್ತು. ಇದಕ್ಕೆ ಉಕ್ರೇನ್‌ ಸೇನೆ ಕಾರಣ ಎಂದು ರಷ್ಯಾ ರಕ್ಷಣಾ ವಲಯದ ಅಧಿಕಾರಿಗಳು ಆರೋಪಿಸಿದ್ದರು. ಹಲವು ತಿಂಗಳ ಬಳಿಕ ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿತ್ತು. ಇದೀಗ ಮತ್ತೊಂದು ದಾಳಿ ನಡೆದಿದ್ದು, ದಂಪತಿಗಳಿಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ

    ಬೆಳಗ್ಗಿನ ಜಾವ 3:04 ಗಂಟೆಯಿಂದ 3:20ರ ಸುಮಾರಿಗೆ ಸೇತುವೆ ಮೇಲೆ ದಾಳಿ ನಡೆದಿದ್ದು, ಕ್ರಿಮಿಯಾ-ರಷ್ಯಾ ಸಂಪರ್ಕ ಸ್ಥಗಿತಗೊಂಡಿದೆ. ದಾಳಿಯ ವೀಡಿಯೋಗಳನ್ನು ಪರಿಶೀಲಿಸಿದ್ದೇವೆ. ಅಲ್ಲಿ ದಂಪತಿಗಳಿಬ್ಬರು ಸಾವನ್ನಪ್ಪಿದ್ದು, ಒಂದು ಹೆಣ್ಣು ಮಗು ಗಾಯಗೊಂಡಿದೆ ಎಂದು ಬೆಲ್ಗೊರೊಡ್‌ನ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್‌ಕೋವ್ ತಿಳಿಸಿದ್ದಾರೆ.

    ಸೇತುವೆಯ 145ನೇ ಕಂಬದ ಬಳಿ ದಾಳಿ ಸಂಭವಿಸಿದ್ದು, ಸೇತುವೆಗೆ ಹಾನಿಯಾಗಿದೆ. ಕ್ರಿಮಿಯನ್‌ ದ್ವೀಪಕ್ಕೆ ಸಮೀಪದಲ್ಲಿರುವ ಮಾರ್ಗದಲ್ಲೇ ಹಾನಿಯಾದ್ದು, ಸೇತುವೆ ಪಿಲ್ಲರ್‌ಗಳು ಸುರಕ್ಷಿತವಾಗಿವೆ. ಆದ್ರೆ ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಪಾಕಿಸ್ತಾನದಲ್ಲಿ 150 ವರ್ಷದಷ್ಟು ಹಳೆಯ ಹಿಂದೂ ದೇವಾಲಯ ನೆಲಸಮ – ಬೆಳಗ್ಗೆ ಎದ್ದು ನೋಡಿದ ಹಿಂದೂಗಳಿಗೆ ಶಾಕ್!

    ಉಕ್ರೇನ್‌ನ ಒಡೆಸಾ ಮಿಲಿಟರಿ ಆಡಳಿತದ ವಕ್ತಾರ ಸೆರ್ಹಿ ಬ್ರಾಚುಕ್ ಅವರು ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಸೇತುವೆಯ ಭಾಗವು ಮುರಿದುಹೋಗಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. 2014ರಲ್ಲಿ ಮಾಸ್ಕೋ ಈ ಸೇತುವೆಯನ್ನು ವಶಪಡಿಸಿಕೊಂಡಿತ್ತು. ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ (Kerch Bridge) ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

    ಕಳೆದ ವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಸೇತುವೆ ಮೇಲೆ ಭೀಕರ ಸ್ಫೋಟ ನಡೆದಿತ್ತು. ಸೇತುವೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಂಧನ ಸಾಗಿಸುತ್ತಿದ್ದ ರೈಲೊಂದರ 7 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ನಂತರ ರಷ್ಯಾ ಉಕ್ರೇನ್‌ ಕಾರಣವೆಂದು ಆರೋಪಿಸಿ ಉಕ್ರೇನ್‌ ಮೇಲೆ ತೀವ್ರತರ ದಾಳಿ ನಡೆಸಿತ್ತು. ಆದ್ರೆ ಉಕ್ರೇನ್‌ ತನ್ನ ವಿರುದ್ಧದ ಆರೋಪವನ್ನ ತಳ್ಳಿಹಾಕಿತ್ತು. ಸದ್ಯದ ದಾಳಿಗೆ ಕಾರಣ ತಿಳಿದುಬಂದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

    ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

    ಮಾಸ್ಕೋ: ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ (Russia) ಮೇಲೆ ದಂಗೆ ಏಳಲು ನಿರ್ಧರಿಸಿತ್ತು. ಆದರೆ ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ತಿಕೆಯ ಪರಿಣಾಮ ಹೋರಾಟವನ್ನು ವ್ಯಾಗ್ನರ್ ಮುಖ್ಯಸ್ಥ ಪ್ರಿಗೋಜಿನ್ ಕೈಬಿಟ್ಟಿದ್ದಾರೆ. ವ್ಯಾಗ್ನರ್ ಪಡೆಗಳು ದಕ್ಷಿಣ ರಷ್ಯಾದ ರೋಸ್ಟೋವ್ ಆನ್ ಡಾನ್ ಅನ್ನು ತೊರೆಯುತ್ತಿದ್ದ ವೇಳೆ ನಗರವಾಸಿಗಳು ಅವರತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.

    ಉಕ್ರೇನ್ (Ukraine) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತನೇ ರಷ್ಯಾ ಸೇನೆ ವಿರುದ್ಧ ಬಂಡಾಯ ಎದ್ದಿದ್ದ. ಯೆವ್ಗೆನಿ ಪ್ರಿಗೋಜಿನ್ ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದು ದಾಳಿಗೆ ಮುಂದಾಗಿತ್ತು.

    ವ್ಯಾಗ್ನರ್ ಸೇನೆ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ಬಳಿಕ ಮಾಸ್ಕೋದ ಹೆಚ್ಚಿನ ಭಾಗವನ್ನು ಆಕ್ರಮಿಸಿ ಮುಂದುವರಿದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

    ಇದೀಗ ಮಾಸ್ಕೋ ಸಮೀಪ ಬಂದಿದ್ದ ವ್ಯಾಗ್ನರ್‌ಗಳಿಗೆ ವಾಪಸಾಗುವಂತೆ ಸೂಚಿಸಲಾಗಿದೆ. ಅದರಂತೆ ವ್ಯಾಗ್ನರ್ ಪಡೆಗಳು ನಗರವನ್ನು ತೊರೆಯುವ ಸಂದರ್ಭ ರಷ್ಯನ್ನರು ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೇ ಹೊರಟಿದ್ದ ಖಾಸಗಿ ಸೇನೆಗೆ ಟಾ ಟಾ.. ಬೈ ಬೈ ಹೇಳಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.

    ವ್ಯಾಗ್ನರ್ ಗುಂಪು ಟೆಲಿಗ್ರಾಂನಲ್ಲಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಶಸ್ತ್ರಸಜ್ಜಿತ ವಾಹನಗಳು ಹಾಗೂ ಟ್ಯಾಂಕರ್‌ಗಳು ಪಟ್ಟಣವನ್ನು ತೊರೆಯುವ ದೃಶ್ಯವಿದೆ. ಈ ವೇಳೆ ಹತ್ತಾರು ಜನರು ವ್ಯಾಗ್ನರ್.. ವ್ಯಾಗ್ನರ್.. ಎಂದು ಘೋಷಣೆ ಕೂಗಿದ್ದಾರೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಈ ವೇಳೆ ಜನರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

  • ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಮಾಸ್ಕೋ: ಉಕ್ರೇನ್‌ (Ukraine ) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಆಪ್ತನೇ ಈಗ ರಷ್ಯಾ ಸೇನೆ ವಿರುದ್ಧ ಬಂಡಾಯ ಏಳುವ ಮೂಲಕ ಶಾಕ್‌ ನೀಡಿದ್ದಾನೆ.

    ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ದಾಳಿಯ ಎಚ್ಚರಿಕೆ ನೀಡಿದೆ.

    ತನ್ನ ಸೇನೆಯ ಮೇಲೆಯೇ ದಾಳಿ ಮಾಡುತ್ತಿರುವ ರಷ್ಯಾ ಸೇನೆಯ ವಿರುದ್ಧ ದಾಳಿ ನಡೆಸುತ್ತೇನೆ. ರಷ್ಯಾ ಸೇನಾ ನಾಯಕತ್ವವನ್ನೇ ಅಂತ್ಯಗೊಳಿಸಲು ಯಾವುದೇ ಕ್ರಮಕ್ಕೂ ನಾನು ಸಿದ್ಧನಿದ್ದೇನೆ ಎಂದು ಯೆವ್ಗೆನಿ ಪ್ರಿಗೋಜಿನ್ ಶಪಥ ಮಾಡಿದ್ದಾನೆ.  ಇದನ್ನೂ ಓದಿ: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಆಶೀರ್ವಾದ ಪಡೆದ ಅಮೆರಿಕ ಗಾಯಕಿ

    ವ್ಯಾಗ್ನರ್‌ ಪಡೆ ಎಂದರೇನು?
    ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ.  ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ.

    ತಿರುಗಿ ಬಿದ್ದಿದ್ದು ಯಾಕೆ?
    ಈ ವರ್ಷದ ಜನವರಿಯಲ್ಲಿ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಉಪ್ಪು ತಯಾರಿಸುವ ಪಟ್ಟಣವಾದ ಸೊಲೆಡಾರ್ ಅನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈ ಪ್ರದೇಶವನ್ನು ಗೆದ್ದ ಶ್ರೇಯಸ್ಸು ವಿಚಾರವಾಗಿ ವ್ಯಾಗ್ನರ್‌ ಪಡೆ ಮತ್ತು ರಷ್ಯಾ ಸೇನೆಯ ಬಗ್ಗೆ ಕಿತ್ತಾಟ ನಡೆಯುತ್ತಿತ್ತು. ಯೆವ್ಗೆನಿ ಪ್ರಿಗೋಜಿನ್ ಇದರ ಕ್ರೆಡಿಟ್‌ ನಮಗೆ ಸಿಗಬೇಕು ಎಂದು ಹೇಳಿದ್ದ.

    ನಂತರದ ದಿನಗಳಲ್ಲಿ ರಷ್ಯಾ ಸೇನೆ ನಮಗೆ ಸರಿಯಾಗಿ ಮದ್ದುಗುಂಡುಗಳನ್ನು ಪೂರೈಸುತ್ತಿಲ್ಲ ಎಂದು ಕಿಡಿಕಾರಿದ್ದ. ಅಷ್ಟೇ ಅಲ್ಲದೇ ರಷ್ಯಾದ ಮಿಲಿಟರಿ ನಾಯಕರು ಸರಿಯಾಗಿ ಸೇನೆಯನ್ನು ಮುನ್ನಡೆಸುತ್ತಿಲ್ಲ ಎಂದು ದೂರಿದ್ದ. ಮಿಲಿಟರಿ ನಾಯಕರ ಕುರಿತಾಗಿ ಈತನ ಹೇಳಿಕೆಯ ಬಗ್ಗೆ ತಿಳಿದಿದ್ದರೂ ಪುಟಿನ್‌ ತಲೆಕೆಡಿಸಿಕೊಂಡಿರಲಿಲ್ಲ. ಈ ಕಿತ್ತಾಟ ಜಾಸ್ತಿ ಆಗಿದ್ದು, ಇಂದು ರಷ್ಯಾ ಸೇನೆ ತನ್ನ ಪಡೆಗಳನ್ನು ಗುರಿಯಾಗಿಸಿ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಿದ್ದಕ್ಕೆ ಯೆವ್ಗೆನಿ ಪ್ರಿಗೋಜಿನ್ ಸಿಟ್ಟಾಗಿ ದಾಳಿ ಮಾಡಿ ರಷ್ಯಾ ಸೇನಾ ಮುಖ್ಯಸ್ಥರನ್ನು ಕೆಳಗೆ ಇಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.

     

    ಈಗ ರಷ್ಯಾದಲ್ಲಿ ಏನಾಗುತ್ತಿದೆ?
    ವ್ಯಾಗ್ನರ್ ಗುಂಪಿನ ಮುಖ್ಯಸ್ಥ  ಪ್ರಿಗೋಜಿನ್ ಮಾಸ್ಕೋ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಕ್ಸ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರೋಸ್ಟೊವ್‌ನಲ್ಲಿ ಮನೆಗಳಿಂದ ಹೊರಬರಬೇಡಿ ಎಂದು ಜನರಲ್ಲಿ ರಷ್ಯಾ ಅಧಿಕಾರಿಗಳು ಕೇಳಿದ್ದಾರೆ.

  • ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    – ಹಿರೋಷಿಮಾ, ನಾಗಸಾಕಿ ಅಣ್ವಸ್ತ್ರಕ್ಕಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿ ರಷ್ಯಾದ ಅಣ್ವಸ್ತ್ರ

    ಮಾಸ್ಕೋ: ಉಕ್ರೇನ್ (Ukranine) ಮೇಲೆ ವರ್ಷದಿಂದ ಯುದ್ಧ ಮಾಡುತ್ತಿರುವ ರಷ್ಯಾ (Russia) ಇದೀಗ ತನ್ನ ಮೊದಲ ಬ್ಯಾಚ್‌ನ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬೆಲಾರಸ್‌ಗೆ (Belarus) ಕಳುಹಿಸಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶುಕ್ರವಾರ ತಿಳಿಸಿದ್ದಾರೆ. ಈ ವಿಚಾರ ದೃಢವಾಗುತ್ತಲೇ ಇಡೀ ಜಗತ್ತಿಗೆ ಭೀತಿ ಉಂಟಾಗಿದೆ.

    ಸೆಂಟ್ ಪೀಟರ್ಸ್ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿರುವ ಪುಟಿನ್, ಈ ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪಿಸುವ ಗುರಿಯಿದೆ. ಇದು ರಷ್ಯಾ ಹಾಗೂ ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುತ್ತಿರೋ ಎಲ್ಲಾ ವಿರೋಧಿಗಳಿಗೂ ತಿರುಗೇಟಿನ ಕ್ರಮವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರದ ಬಳಕೆ ಮಾಡುತ್ತದೋ ಎಂಬ ಪ್ರಶ್ನೆಗೆ ಕಾರಣವಾಗಿದೆ ಮಾತ್ರವಲ್ಲದೇ ಜಗತ್ತಿನ ನಿದ್ದೆಗೆಡಿಸಿದಂತಾಗಿದೆ.

    ಈ ವಾರ ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು, ನಾವು ರಷ್ಯಾದಿಂದ ಬಾಂಬ್‌ಗಳು ಹಾಗೂ ಕ್ಷಿಪಣಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾಂಬ್‌ಗಳು ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬಳಸಲಾಗಿದ್ದ ಅಣ್ವಸ್ತ್ರಕ್ಕಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್‌ ರಾಜಕಾಲುವೆ

    ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧ ಆರಂಭವಾಗಿ ವರ್ಷವೇ ಕಳೆದಿದೆ. ಯುದ್ಧ ಇನ್ನೇನು 500ನೇ ದಿನ ಪೂರೈಸಲಿದೆ. ಅಮೆರಿಕ ಈ ಯುದ್ಧದ ಬಗ್ಗೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಇದೀಗ ರಷ್ಯಾ ನೇರವಾಗಿ ಅಣ್ವಸ್ತ್ರವನ್ನೇ ತನ್ನ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಕಳುಹಿಸಿ ಕೊಟ್ಟಿದೆ. ಬೆಲಾರಸ್‌ನ ಗಡಿಯಿಂದ ಉಕ್ರೇನ್‌ನ ರಾಜಧಾನಿ ಕೀವ್‌ಗೆ ಕೇವಲ 200 ಕಿ.ಮೀ ದೂರವಿದೆ. ಇದೀಗ ರಷ್ಯಾ ನೇರವಾಗಿ ಕೀವ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು

  • ಉಕ್ರೇನ್‌ನಲ್ಲಿ ಜಲಾಶಯ ಸ್ಫೋಟ – ಸಾವಿರಾರು ಮಂದಿ ಸ್ಥಳಾಂತರ

    ಉಕ್ರೇನ್‌ನಲ್ಲಿ ಜಲಾಶಯ ಸ್ಫೋಟ – ಸಾವಿರಾರು ಮಂದಿ ಸ್ಥಳಾಂತರ

    ಕೀವ್‌: ಉಕ್ರೇನ್ (Ukraine) ಹೃದಯ ಚೂರುಚೂರಾಗಿದ್ದು ನೀಪರ್ ನದಿಗೆ ಅಡ್ಡಲಾಗಿ ನಿರ್ಮಿಸಿದ ನೋವಾ ಕಖೋವ್ಕಾ (Nova Kakhovka Dam) ಜಲಾಶಯವನ್ನು ಸ್ಫೋಟಿಸಲಾಗಿದೆ.

    ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ನೀರಿನ ಪ್ರವಾಹ ಉಂಟಾಗಿದ್ದು, ತಗ್ಗುಪ್ರದೇಶದ ಜನ ಎದ್ನೋ ಬಿದ್ನೋ ಎಂದು ಓಡಿ ಪ್ರಾಣ ಉಳಿಸಿಕೊಂಡಿದ್ದು ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಖೇರ್ಸಾನ್‍ಗೆ 30 ಕಿಲೋಮೀಟರ್ ದೂರದಲ್ಲಿರುವ ಈ ಡ್ಯಾಂ ಉಕ್ರೇನ್ ಪಾಲಿಗೆ ಜೀವನಾಡಿಯಾಗಿತ್ತು.  ಇದನ್ನೂ ಓದಿ: ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

    ಈ ಡ್ಯಾಂ ಸಮೀಪ ಕಳೆದ ಕೆಲ ದಿನಗಳಿಂದ ಭಾರೀ ದಾಳಿಗಳು ನಡೆಯುತ್ತಿದ್ದವು. ಇದು ರಷ್ಯಾ (Russia) ಕೆಲಸ ಎಂದು ಉಕ್ರೇನ್ ಆರೋಪಿಸುತ್ತಿದೆ. ಆದರೆ ರಷ್ಯಾ ಇದು ನಮ್ಮ ಕೆಲಸವಲ್ಲ. ಇದು ಭಯೋತ್ಪಾದಕ ದಾಳಿ ಎಂದು ತಿರುಗೇಟು ನೀಡಿದೆ.

    ಈ ಡ್ಯಾಂ ಎತ್ತರ 30 ಮೀಟರ್ ಇದ್ದು, ನೂರಾರು ಮೀಟರ್ ಉದ್ದ ಇತ್ತು. 1956ರಲ್ಲಿ ಜಲ ವಿದ್ಯುತ್‌ಗಾಗಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿತ್ತು.

  • ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ಕೀವ್: ರಷ್ಯಾ ವಾಯುಪಡೆಯು ಮಂಗಳವಾರ ಉಕ್ರೇನಿನ (Ukraine) ಕೀವ್ ಮೇಲೆ ನಡೆಸಿದ ದಾಳಿಯನ್ನ ತಡೆಯುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಗಿದ್ದು, ರಷ್ಯಾದ 18 ಕ್ಷಿಪಣಿಗಳನ್ನ (Cruise Missiles) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ತಡರಾತ್ರಿ ರಷ್ಯಾದ ಕ್ಷಿಪಣಿಗಳು ವಾಯು, ಸಮುದ್ರ ಹಾಗೂ ಭೂಸೇನೆ ಸೇರಿದಂತೆ ಮೂರು ವಿಭಾಗಳಿಂದ ಉಕ್ರೇನಿನ ರಾಜಧಾನಿ ಕೀವ್ ಮೇಲೆ ದಾಳಿ (Russian Air Attack) ನಡೆಸಿತ್ತು. ಆದ್ರೆ ಪಾಶ್ಚಿಮಾತ್ರ ರಾಷ್ಟ್ರಗಳು ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್ ರಷ್ಯಾ ದಾಳಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಯಾವುದೇ ಸಾವು ನೋವುಗಳಾಗಿಲ್ಲ ಎಂದು ತಿಳಿದುಬಂದಿದೆ.

    ರಷ್ಯಾ ಕಳೆದ ರಾತ್ರಿ ಉಕ್ರೇನ್ ರಾಜಧಾನಿಯನ್ನ ಗುರಿಯಾಗಿಸಿ MiG-31K ಯುದ್ಧವಿಮಾನದಿಂದ 6 Kinzhal ಏರೋ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಕಪ್ಪು ಸಮುದ್ರದ ಹಡಗುಗಳಿಂದ 9 ಕ್ರೂಸ್ ಕ್ಷಿಪಣಿ ಹಾಗೂ ಮೂರು ಭೂ ಆಧಾರಿತ S-400 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಲ್ಲದೇ ಇರಾನ್ ಡ್ರೋನ್‌ಗಳಿಂದಲೂ ದಾಳಿ ನಡೆಸಿತ್ತು ಎಂದು ಉಕ್ರೇನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೆ ಪ್ರತಿದಾಳಿ ನಡೆಸಿದ ಉಕ್ರೇನ್ ಅಮೆರಿಕ ನಿರ್ಮಿತ ಪೇಟ್ರಿಯಾಟಿಕ್ ಕ್ಷಿಪಣಿಗಳನ್ನು ಒಳಗೊಂಡಂತೆ ಉಕ್ರೇನಿನ ಮಿತ್ರರಾಷ್ಟ್ರಗಳು ಒದಗಿಸಿದ್ದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

    ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಸತತವಾಗಿ ಮುಂದುವರಿಸಿದೆ. ಈ ತಿಂಗಳಲ್ಲಿ ರಷ್ಯಾ 8ನೇ ಬಾರಿಗೆ ರಾಜಧಾನಿಯನ್ನು ಗುರಿಯಾಗಿಸಿ ವಾಯುಸೇನೆಯ ಮೇಲೆ ದಾಳಿ ನಡೆಸಿದೆ. ನಡುವೆ ಒಂದು ವಾರ ಬಿಡುವು ನೀಡಲಾಗಿತ್ತು. ಬಳಿಕ ಮತ್ತೆ ರಷ್ಯಾ ತನ್ನ ಆಕ್ರಮಣ ಮುಂದುವರಿಸಿದೆ. ಇದಕ್ಕೆ ವಿವಿಧ ದೇಶಗಳಿಂದ ಸಹಾಯ ಪಡೆಯುತ್ತಿರುವ ಉಕ್ರೇನ್ ಪ್ರತಿದಾಳಿಯನ್ನ ಸಮರ್ಥವಾಗಿ ಎದುರಿಸುತ್ತಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್

  • ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    – ಪುಟಿನ್‌ ಪಡೆ ದಾಳಿಗೆ ಉಕ್ರೇನ್‌ನ 21 ಮಂದಿ ಬಲಿ

    ಕೀವ್: ಉಕ್ರೇನ್‌ನ (Ukraine) ದಕ್ಷಿಣ ಖೆರ್ಸನ್‌ ಪ್ರದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್‌ (Kherson) ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.

    ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್‌ವೇರ್ ಅಂಗಡಿ, ಸೂಪರ್‌ ಮಾರ್ಕೆಟ್‌ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ:  ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

    ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್‌ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್‌ ಶೆಲ್‌ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್‌ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್‌ಮಾರ್ಕೆಟ್‌ನಲ್ಲಿ ಶೆಲ್‌ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಖೆರ್ಸನ್‌ನಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಜನರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ನಗರ ಪ್ರವೇಶಿಸುವುದು ಮತ್ತು ಹೊರ ಹೋಗುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಹಾರ ಮತ್ತು ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ