ಬೆಳಗಾವಿ: ಉಕ್ರೇನ್‍ನಲ್ಲಿ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು ಯುದ್ಧ ಆರಂಭವಾದ ಹಿನ್ನೆಲೆ ಇಬ್ಬರು ಕುಟುಂಬಸ್ಥರ ಮನೆಯಲ್ಲಿ ಆತಂಕ ಮನೆಮಾಡಿದೆ. ಇಬ್ಬರು ವಿದ್ಯಾರ್ಥಿಗಳು ಕೂಡ ಸುರಕ್ಷಿತವಾಗಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಪ್ರಿಯಾ ನಿಡಗುಂದಿ ಹಾಗೂ ಗೋಕಾಕ್ ತಾಲೂಕಿನ ಘಟಪ್ರಭಾದ ನಿವಾಸಿ ಅಮೋಘಾ ಚೌಗಲಾ ಎಂಬ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು
ಸದ್ಯ ಉಕ್ರೇನ್‍ನಲ್ಲಿ ಯದ್ಧ ಆರಂಭವಾದ ಹಿನ್ನೆಲೆ ಕಾಲೇಜಿನ ವಸತಿ ನಿಲಯದಲ್ಲೇ ಇಬ್ಬರು ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿದ್ದರಿಂದ ಇಬ್ಬರು ವಿದ್ಯಾರ್ಥಿಗಳ ಕುಟುಂಬಸ್ಥರ ಮನೆಯಲ್ಲಿ ಆತಂಕ ಮನೆಮಾಡಿದೆ. ಇದನ್ನೂ ಓದಿ:ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ
ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ವಿಶ್ವವನ್ನೇ ಆತಂಕಕ್ಕೆ ದೂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸಿದ್ದಾರೆ. ಈ ವಿಚಾರವಾಗಿ ಯಾರಾದರೂ ಮಧ್ಯಪ್ರವೇಶಿಸಿದರೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಇತರ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್‍ನ ಕೈವ್, ಖಾರ್ಕಿವ್ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿವೆ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ನಡೆಸಲು ಉಕ್ರೇನ್ ಸಾಕಷ್ಟು ಫೇಮಸ್ ಪ್ಲೇಸ್‍ಗಳಿದ್ದು, ಉಕ್ರೇನ್‍ನಲ್ಲಿ ಭಾರತದ ಹಲವಾರು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ : ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆದರಿಸಿದ ಬಿಗ್ ಬಾಸ್ ಪ್ರಥಮ್
RRR
ಕಳೆದ ವರ್ಷ ಆಗಸ್ಟ್‌ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಅಭಿನಯದ ಬಹು ನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಉಕ್ರೇನ್‍ನಲ್ಲಿ ನಡೆಸಲಾಗಿತ್ತು. ಎಸ್‍ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಜ್ಯೂನಿಯರ್ ಎನ್‍ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಸಮುದ್ರಕನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ, ಶ್ರಿಯಾ ಸರನ್ ಮತ್ತು ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್‌ಆರ್‌ಆರ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಕಾಲ್ಪನಿಕ ಕಥಾಹಂದರವಾಗಿದೆ.
Team #RRRMovie arrives in #Ukraine for the last schedule of the film… Excited????????????????
99 ಸಾಂಗ್ಸ್
’99 ಸಾಂಗ್ಸ್’ ಸಿನಿಮಾ ನಿರ್ಮಾಣ ಮಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಈ ಸಿನಿಮಾದ ಹಾಡುಗಳನ್ನು ಉಕ್ರೇನ್‍ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಐಡಿಯಲ್ ಎಂಟರ್‍ಟೈನ್‍ಮೆಂಟ್ ಜೊತೆಗೆ ವೈಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. 99 ಸಾಂಗ್ಸ್ ಅನ್ನು ಭಾರತದಲ್ಲಿ ಮತ್ತು ಉಕ್ರೇನ್‍ನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. 99 ಸಾಂಗ್ಸ್‍ನ ಆರಂಭದಲ್ಲಿ ಇಹಾನ್ ಭಟ್ ಮತ್ತು ಎಡಿಲ್ಸಿ ವರ್ಗಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಆದಿತ್ಯ ಸೀಲ್, ಲೀಸಾ ರೇ ಮತ್ತು ಮನಿಶಾ ಕೊಯಿರಾಲಾ ಪೋಷಕ ಪಾತ್ರಗಳಲ್ಲಿದ್ದಾರೆ.
2.0
ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆಮಿ ಜಾಕ್ಸನ್ ಅಭಿನಯದ 2.0 ಸಿನಿಮಾದ ಸಾಂಗ್ ಶೂಟಿಂಗ್ ಉಕ್ರೇನ್‍ನ ಟನಲ್ ಆಫ್ ಲವ್‍ನಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದ ರೋಜಾ ಕಾದಲ್ ಎಂಬ ಹಾಡನ್ನು ಎ.ಆರ್ ರೆಹಮಾನ್ ಸಂಯೋಜಿಸಿದ್ದಾರೆ. ಇನ್ನೂ ಈ ಸಾಂಗ್‍ನಲ್ಲಿ ಬರುವ ಉಕ್ರೇನ್ ದೃಶ್ಯಗಳು ಬಹಳ ಅದ್ಭುತವಾಗಿ ಮೂಡಿಬಂದಿದೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ದೇವ್
ದೇವ್ ರಜತ್ ರವಿಶಂಕರ್ ಬರೆದು ನಿರ್ದೇಶಿಸಿರುವ 2019ರ ತಮಿಳಿನ ರೋಮ್ಯಾಂಟಿಕ್ ಆ್ಯಕ್ಷನ್ ಸಿನಿಮಾವಾಗಿದೆ. ಚಿತ್ರದಲ್ಲಿ ಕಾರ್ತಿಕ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಪ್ರಕಾಶ್ ರಾಜ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥಾವಸ್ತುವು ಮಾಜಿ ಭಾರತೀಯ ಕ್ರಿಕೆಟ್ ನಾಯಕ ಮತ್ತು ಸ್ಟಾರ್ ಆಲ್ ರೌಂಡರ್ ಕಪಿಲ್ ದೇವ್ ಅವರ ಜೀವನ ಪ್ರೇರಿತವಾಗಿದೆ. ಇನ್ನು ಈ ಸಿನಿಮಾದ ಶೂಟಿಂಗ್ ದೃಶ್ಯಗಳನ್ನು ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ, ಪುಣೆ, ಕುಲು, ಮನಾಲಿ, ಹಿಮಾಲಯ, ಗುಲ್ಮಾರ್ಗ್, ಉಕ್ರೇನ್ ಮತ್ತು ಕಾರ್ಪಾಥಿಯನ್ ಪರ್ವತಗಳಂತಹ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 2018ರ ನವೆಂಬರ್ ಆರಂಭದಲ್ಲಿ ಉಕ್ರೇನ್‍ನಲ್ಲಿ ಚಿತ್ರೀಕರಣ ಮಾಡಲಾಯಿತು.
ವಿನ್ನರ್
ವಿನ್ನರ್ 2017ರಲ್ಲಿ ತೆರೆಕಂಡ ತೆಲುಗಿನ ಆ್ಯಕ್ಷನ್, ಕಾಮಿಡಿ ಸಿನಿಮಾವಾಗಿದ್ದು, ಶ್ರೀ ಲಕ್ಷ್ಮಿ ನರಸಿಂಹ ಪ್ರೊಡಕ್ಷನ್ಸ್ ಮತ್ತು ಲಿಯೋ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಲ್ಲಮಲುಪು ಬುಜ್ಜಿ, ಟ್ಯಾಗೋರ್ ಮಧು ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ನಿರ್ದೇಶಕ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಸಾಯಿ ಧರಮ್ ತೇಜ್, ರಾಕುಲ್ ಪ್ರೀತ್ ಸಿಂಗ್ ಮತ್ತು ಜಗಪತಿ ಬಾಬು ನಟಿಸಿದ್ದಾರೆ. ಇದರ ಶೂಟಿಂಗ್ ಸ್ಥಳಗಳಲ್ಲಿ ಕೈವ್, ಎಲ್ವಿವ್ ಮತ್ತು ಇಸ್ತಾನ್‍ಬುಲ್‍ನಲ್ಲಿ ಚಿತ್ರೀಕರಿಸಲಾಗಿದೆ.
ಈ ಚಿತ್ರತಂಡವು ಉಕ್ರೇನ್‍ನಲ್ಲಿ ಮೂರು ಹಾಡುಗಳನ್ನು ಚಿತ್ರೀಕರಿಸಿದೆ. ವಿನ್ನರ್ ಸಿನಿಮಾ ಉಕ್ರೇನ್‍ನಲ್ಲಿ ಚಿತ್ರೀಕರಿಸಲಾದ ಮೊದಲ ಭಾರತೀಯ ಚಲನಚಿತ್ರವಾಗಿದೆ ಎಂದು ನಿರ್ದೇಶಕ ಗೋಪಿಚಂದ್ ಮಲಿನೇನಿ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದಾರೆ. ತಮ್ಮ ಭಾಷಣದಲ್ಲಿ ತಮ್ಮ ಈ ವಿಚಾರದಲ್ಲಿ ಬೇರೆಯವರು ಮಧ್ಯ ಪ್ರವೇಶ ಮಾಡಿದರೆ ರಷ್ಯಾ ಕೂಡಲೇ ಪ್ರತಿದಾಳಿ ನಡೆಸಲಿದೆ ಮತ್ತು ಇತಿಹಾಸದಲ್ಲಿ ಕೇಳರಿಯದ ರೀತಿ ತಿರುಗೇಟು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಲ್ಲಿ ಉಕ್ರೇನ್ ಮೇಲೆ ರಷ್ಯಾದ ಕಣ್ಣು ಯಾಕೆ? ಉಕ್ರೇನ್ ಎಷ್ಟು ಶ್ರೀಮಂತ ಇತ್ಯಾದಿ ವಿಚಾರಗಳ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ.
ಪ್ರಜಾಪ್ರಭುತ್ವ ದೇಶ:
ರಷ್ಯಾ-ಉಕ್ರೇನ್ ನಿವಾಸಿಗಳ ಧರ್ಮ, ಆಚಾರ, ವಿಚಾರ, ಆಹಾರ, ಉಡುಗೆ ಎಲ್ಲವೂ ಒಂದೇ. ಇದರ ಜೊತೆ ಉಕ್ರೇನ್‌ನಲ್ಲಿ ಫಲವತ್ತಾದ ಭೂಮಿ, ಖನಿಜ ಸಂಪತ್ತು ಹೇರಳವಾಗಿದೆ. ಪ್ರಾಚೀನ ನಾಗರಿಕತೆಯ ಪರಂಪರೆ ಉಳ್ಳ ಉಕ್ರೈನ್, ಕಮ್ಯುನಿಸ್ಟ್ ಸೋವಿಯತ್ ತೆಕ್ಕೆಯಲ್ಲಿ ಬಹುಕಾಲ ಇತ್ತು. 1991 ರಲ್ಲಿ ಸೋವಿಯತ್ ಪತನವಾಗಿ 15 ಹೋಳುಗಳಾದಾಗ ಮರಳಿ ಜನಿಸಿದ ಉಕ್ರೈನ್ ಸಮೃದ್ಧವಾಗಿ ಬೆಳೆಯತೊಡಗಿತು.
ಸ್ಟಾಲಿನ್‌ನಂತಹ ಸರ್ವಾಧಿಕಾರಿಯ ಕಾಲದಲ್ಲಿ ಉಕ್ರೇನ್‌ನಲ್ಲಿ ಬರಗಾಲವನ್ನುಂಟುಮಾಡಿ ಉಕ್ರೇನಿಯನ್ನರನ್ನು ಉಪವಾಸದಲ್ಲಿರಿಸಿ, ಸಾಯಿಸಿ, ಆ ಜಾಗದಲ್ಲಿ ರಷ್ಯನ್ನರನ್ನು ವಲಸೆ ಕಳುಹಿಸಿದಂತಹ ಕೆಲಸವನ್ನೂ ರಷ್ಯಾ ಮಾಡಿತ್ತು. ರಷ್ಯಾದ ಹಿಡಿತದಲ್ಲಿದ್ದಷ್ಟು ದಿನವೂ ರಷ್ಯನ್ ನುಡಿಯ ಹೇರಿಕೆಯನ್ನು ಅನುಭವಿಸಿದ್ದ ಉಕ್ರೇನ್ ಸೋವಿಯತ್ ಪತನದ ಬಳಿಕ ಒಂದು ಆಧುನಿಕ ಪ್ರಜಾಪ್ರಭುತ್ವ ದೇಶವಾಗಿ ಬೆಳೆಯತೊಡಗಿತು.
ರಷ್ಯಾದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ತನ್ನ ಎದುರಾಳಿಗಳನ್ನು ಕೊಂದು ಇಲ್ಲವೇ ಜೈಲಿಗೆ ದಬ್ಬಿ ಮೆರೆಯುತ್ತಿದ್ದ ಪುಟಿನ್‌ಗೆ ಪಕ್ಕದಲೇ ಒಂದು ಯಶಸ್ವಿ ಪ್ರಜಾಪ್ರಭುತ್ವ ನೆಲೆಯಾಗಿ ಉಕ್ರೇನ್ ಬದಲಾಗುತ್ತಿರುವುದು ಇಷ್ಟವಾಗುತ್ತಿರಲಿಲ್ಲ. ಉಕ್ರೇನಿಯನ್ನರನ್ನು ನೋಡಿ ಎಲ್ಲಿ ರಷ್ಯನ್ನರು ಬಂಡೇಳುತ್ತಾರೋ ಎನ್ನುವ ಆತಂಕ ರಷ್ಯಾಗೆ ಇತ್ತು. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ಪುಟಿನ್ ಮಾಡಿದ್ದು ಏನು?
ಸಂಪತ್ಭರಿತ ದೇಶವಾಗಿರುವ ಉಕ್ರೇನ್ ಮೇಲೆ ಕಣ್ಣು ಹಾಕಿದ್ದ ಪುಟಿನ್ ಉಕ್ರೇನ್‌ನಲ್ಲಿರುವ ಬಂಡಾಯ ಹೋರಾಟಗಾರರಿಗೆ ಸಹಕಾರ ನೀಡತೊಡಗಿದರು. ಒಂದು ದೇಶವನ್ನು ಕೆಡವಬೇಕಾದರೆ ಆ ದೇಶದ ಸರ್ಕಾರದ ವಿರುದ್ಧವೇ ಜನರನ್ನು ದಂಗೆ ಏಳುವಂತೆ ಮಾಡುವು ತಂತ್ರ ಹೊಸದೆನಲ್ಲ. ಈ ತಂತ್ರವನ್ನೇ ಬಳಸಿಕೊಂಡ ರಷ್ಯಾ ಉಕ್ರೇನ್ ಬಂಡಾಯ ಹೋರಾಟಗಾರರಿಗೆ ಆರ್ಥಿಕ ಸಹಕಾರ, ಶಸ್ತ್ರಾಸ್ತ್ರವನ್ನು ನೀಡಿ ಬಂಡಾಯ ಏಳುವಂತೆ ಮಾಡಿ ಯಶಸ್ವಿಯಾಯಿತು.
ನ್ಯಾಟೋ ಸಹಕಾರ:
ರಷ್ಯಾದಿಂದ ಕಿರಿಕ್ ಜಾಸ್ತಿ ಆಗುತ್ತಿದ್ದಂತೆ ಉಕ್ರೇನ್ ಯುರೋಪ್ ರಾಷ್ಟ್ರಗಳ ಪರ ವಾಲತೊಡಗಿತು. ಯುರೋಪಿನ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇರಲು ಯತ್ನಿಸುತ್ತಿದ್ದಂತೆ ಪುಟಿನ್ ಸಿಟ್ಟಿಗೆ ಕಾರಣವಾಗಿತು. ಯಾವುದೇ ಕಾರಣಕ್ಕೂ ಉಕ್ರೇನ್ ನ್ಯಾಟೋಗೆ ಸೇರಬಾರದು ಮೊದಲು ಹೇಗಿತ್ತೋ ಅದೇ ರೀತಿಯಾಗಿ ಮುಂದುವರಿಯಬೇಕು ಎನ್ನುವುದು ಪುಟಿನ್ ವಾದ. ಈ ವಾದಕ್ಕೆ ಉಕ್ರೇನ್ ಸೊಪ್ಪು ಹಾಕದ ಕಾರಣ ಪುಟಿನ್ ಈಗ ಯುದ್ಧ ಘೋಷಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ರಷ್ಯಾಗೆ ಭಯ ಯಾಕಿಲ್ಲ?
ಪ್ರಸ್ತುತ ವಿಶ್ವದ ಸೂಪರ್ ಪವರ್ ದೇಶವಾದ ಅಮೆರಿಕ ಈಗಾಗಲೇ ಕೋವಿಡ್‌ನಿಂದ ಆರ್ಥಿಕವಾಗಿ ಭಾರೀ ನಷ್ಟವಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಯುರೋಪ್ ದೇಶಗಳು ಕೊರೊನಾದಿಂದ ಈಗಷ್ಟೇ ಚೇತರಿಕೆ ಕಾಣುತ್ತಿದೆ.
ಆರ್ಥಿಕತೆ ನೆಲಕಚ್ಚಿರುವ ಯುರೋಪ್ ದೇಶಗಳು ಯುದ್ಧಕ್ಕೆ ಆಸಕ್ತಿ ತೋರಿಸಿದರೂ ಭಾರೀ ನಷ್ಟ ಅನುಭವಿಸಲಿದೆ. ರಷ್ಯಾಗೆ ವಿವಿಧ ದೇಶಗಳು ನಿರ್ಬಂಧ ಹೇರಿದರೂ ರಷ್ಯಾ ಈಗಾಗಲೇ ತನ್ನ ಕಾಲ ಮೇಲೆ ನಿಂತುಕೊಂಡಿದೆ. ತೈಲವನ್ನು ತಾನೇ ಉತ್ಪಾದನೆ ಮಾಡುತ್ತದೆ. ಆಹಾರ ಸಾಮಾಗ್ರಿಗಳಿಗೆ ಯಾವುದೇ ಸಮಸ್ಯೆ ಆಗಲಾರದು. ಇದನ್ನೂ ಓದಿ: Russia-Ukraine Crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
ಚೀನಾ ಈಗಾಗಲೇ ರಷ್ಯಾಗೆ ಸಹಕಾರ ನೀಡಿದೆ. ಎಸ್ 400 ವಾಯು ರಕ್ಷಣಾ ವ್ಯವಸ್ಥೆ ಹೊಂದಿರುವ ಏಕೈಕ ರಾಷ್ಟ್ರ ರಷ್ಯಾ. ಮಿಲಿಟರಿ, ವಾಯು, ನೌಕಾ ಸೇನೆ ವಿಚಾರದಲ್ಲೂ ರಷ್ಯಾ ಪ್ರಭಲ ದೇಶವಾಗಿ ಹೊರಹೊಮ್ಮಿದೆ. ಈ ಎಲ್ಲ ಕಾರಣದಿಂದ ಪುಟಿನ್ ಅಮೆರಿಕ, ನ್ಯಾಟೋ ಪಡೆಗಳ ಬೆದರಿಕೆಗೆ ಜಗ್ಗದೇ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದಾರೆ.
ಕೈವ್: ತನ್ನ ಮೇಲೆ ಯುದ್ಧ ಸಾರಿರುವ ರಷ್ಯಾದ 6 ಮಿಲಿಟರಿ ಯುದ್ಧ ವಿಮಾನಗಳನ್ನು ನಮ್ಮ ಸೇನೆ ಹೊಡೆದುರುಳಿಸಿದೆ. ಅಲ್ಲದೇ 50 ರಷ್ಯಾ ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಉಕ್ರೇನ್ ತಿಳಿಸಿದೆ.
ರಷ್ಯಾದ ಭೂಸೇನಾ ಪಡೆಗಳು ನಾನಾ ಕಡೆಗಳಿಂದ ಉಕ್ರೇನ್ ಗಡಿ ಭಾಗಗಳನ್ನು ಪ್ರವೇಶಿಸಿವೆ. ಈ ವೇಳೆ ರಷ್ಯಾದ 50 ಆಕ್ರಮಣಕಾರರನ್ನು ಹತ್ಯೆಗೈದಿರುವುದಾಗಿ ಉಕ್ರೇನ್ ತಿಳಿಸಿದೆ.
ಕ್ರಿಮಿಯನ್ ಗಡಿಯಲ್ಲಿ ನಡೆದ ಶೆಲ್ ದಾಳಿಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ಗಡಿ ಸಿಬ್ಬಂದಿ ಹೇಳಿದ್ದಾರೆ. ಇದು ರಷ್ಯಾ ಆಕ್ರಮಣದ ಅಧಿಕೃತವಾಗಿ ದೃಢಪಡಿಸಿದ ಮಿಲಿಟರಿ ಮೊದಲ ಸಾವಾಗಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ದೇಶದ ಪೂರ್ವದಲ್ಲಿ ಆರು ರಷ್ಯಾದ ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಉರುಳಿಸಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಜಂಟಿ ಫೋರ್ಸ್ ಕಮಾಂಡ್ ಪ್ರಕಾರ, ಇಂದು ಜಂಟಿ ಪಡೆಗಳ ಕಾರ್ಯಾಚರಣೆಯ ಪ್ರದೇಶದಲ್ಲಿ ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೈವ್ ಬಳಿಯಿದ್ದ ಮಿಲಿಟರಿ ಹೆಡ್‌ಕ್ವಾಟ್ರಸ್, ಏರ್‌ಪೋರ್ಟ್, ಸೇನಾನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಉಕ್ರೇನ್‌ನ ಉಪ ಆಂತರಿಕ ಸಚಿವ ಆ್ಯಂಥೊನಿ ಗೆರಾಶ್ಚೆಂಕೊ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ನವದೆಹಲಿ: ರಷ್ಯಾ – ಉಕ್ರೇನ್ ವಿರುದ್ಧ ಯುದ್ಧ ಘೋಷಿಸುತ್ತಿದ್ದಂತೆ ಈ ಎರಡು ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವ ಕಾರ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕೆಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಮನವಿ ಮಾಡಿಕೊಂಡಿದ್ದಾರೆ.
ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ಉಕ್ರೇನ್‍ನಿಂದ ಜನ ಮಹಾವಲಸೆ ಆರಂಭಿಸಿದ್ದಾರೆ. ರಷ್ಯಾ ಮತ್ತು ಭಾರತದ ನಡುವೆ ಉತ್ತಮ ಸಂಬಂಧವಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷರಾದ ವಾಡ್ಲಿಮಿರ್ ಪುಟೀನ್ ಜೊತೆ ಮಾತುಕತೆ ನಡೆಸಬೇಕಾಗಿದೆ ಎಂದು ಉಕ್ರೇನ್ ರಾಯಭಾರಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ಈ ಬಗ್ಗೆ ಮಾತನಾಡಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟೀನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್‍ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ. ನಾವು ಈ ಮೊದಲು ರಷ್ಯಾದ ಮಿಲಿಟರಿ ಪಡೆ ನಮ್ಮ ಗಡಿ ಪ್ರದೇಶದಿಂದ ಒಳಬರದಂತೆ ತಿಳಿಸಿದ್ದೇವು ಆದರೂ ಬಂದಿದ್ದಾರೆ ಹಾಗಾಗಿ ಉಕ್ರೇನ್, ರಷ್ಯಾದ ಮಿಲಿಟರಿ ಪಡೆಗಳನ್ನು ಹೊಡೆದುರುಳಿಸಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಿದ್ದು, ಭಾರತ ಕೂಡಲೇ ಮಧ್ಯಪ್ರವೇಶಿಸಿ ಮಾತುಕತೆಗೆ ಮುಂದಾಗಬೇಕು ಎಂದು ಕೇಳಿಕೊಂಡಿದ್ದಾರೆ.
ಉಕ್ರೇನ್‍ನಲ್ಲಿ ಆತಂಕ ಮನೆ ಮಾಡಿದ್ದು, 5 ನಗರಗಳಲ್ಲಿ ಮಹಾವಲಸೆ ಆರಂಭವಾಗಿದೆ. ಇತ್ತ ಉಕ್ರೇನ್, ರಷ್ಯಾ ನಡುವೆ ಯುದ್ಧ ಘೋಷಣೆ ಆಗುತ್ತಿದ್ದಂತೆ ಅಂತರಾಷ್ಟ್ರೀಯ ಗಡಿಗಳಲ್ಲಿ ಭಾರತ ಮುನ್ನಚ್ಚರಿಕೆ ವಹಿಸಿದೆ. ಡ್ರೋನ್ ಮೂಲಕ ಬಿಎಸ್‍ಎಫ್ ಪರಿಶೀಲನೆ ಮಾಡಲಾರಂಭಿಸಿದೆ. ಅಂತರಾಷ್ಟ್ರೀಯ ಗಡಿಗಳಲ್ಲಿ ಭದ್ರತಾ ಪಡೆಗಳು ಆಕ್ಟಿವ್ ಆಗಿದ್ದು, ಭಾರತೀಯ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆದಿದ್ದು, ಉಕ್ರೇನ್‍ನಲ್ಲಿನ ಪರಿಸ್ಥಿತಿಯ ಕುರಿತು ಅಜಿತ್ ದೋವಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
ಬೆಂಗಳೂರು: ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸುಮಾರು ಭಾರತದ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ಯುದ್ಧ ಪ್ರಾರಂಭವಾಗಿದ್ದರಿಂದ 100 ವಿದ್ಯಾರ್ಥಿಗಳು ಎರಡು ಬಸ್‍ಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ 10 ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಉಕ್ರೇನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಬಜೆಟ್‍ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ – ಪೂರ್ವಭಾವಿ ಸಭೆಯಲ್ಲಿ ಸಿಎಂ ಸ್ಪಷ್ಟನೆ
ಉಕ್ರೇನ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತವಾಗಿರಲು ಭಾರತೀಯ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನವನ್ನು ನೀಡಿದೆ. ವಿಮಾನಗಳು ಪುನ: ಪ್ರಾರಂಭವಾದಾಗ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ವಿದೇಶಾಂಗ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ಉಕ್ರೇನ್‍ನಲ್ಲಿ ಯುದ್ಧದ ಛಾಯೆಯಿಂದಾಗಿ ಕಳೆದ ವಾರವೇ 200 ಭಾರತೀಯರು ಮರಳಿದ್ದರು. ಆಗ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲವೇ ಎಂಬುದಕ್ಕೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ಬ್ಯಾಚ್‍ಗಳಲ್ಲಿ ಭಾರತಕ್ಕೆ ಮರಳುತ್ತಿದ್ದು, ಈ ಬ್ಯಾಚ್ ಕಡೆಯದಾಗಿತ್ತು. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ಮಾಸ್ಕೋ: ರಷ್ಯಾ ಸೇನೆ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದೆ. ದಾಳಿಯ ಕೆಲವೇ ಗಂಟೆಗಳ ನಂತರ ಉಕ್ರೇನ್ ಸೇನಾ ವಾಯುನೆಲೆಗಳು ಮತ್ತು ಅದರ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ವರದಿಯನ್ನು ನೀಡಿದೆ.
ಈ ವರದಿಯಲ್ಲಿ, ಉಕ್ರೇನಿಯನ್ ಸೇನಾ ವಾಯುನೆಲೆಗಳಲ್ಲಿನ ಮಿಲಿಟರಿ ಮೂಲಸೌಕರ್ಯವನ್ನು ನಾಶಮಾಡಲಾಗಿದೆ. ರಾಜಧಾನಿ ಕೈವ್‍ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಿದೆ. ಈ ನಡುವೆ ರಷ್ಯಾದ ಐದು ಯುದ್ಧ ವಿಮಾನ ಮತ್ತು ಹೆಲಿಕ್ಯಾಪ್ಟರ್ ನನ್ನು ಉಕ್ರೇನ್ ನಾಶ ಮಾಡಿದೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ವ್ಲಾಡಿಮಿರ್ ಪುಟಿನ್ ಇಂದು ಉಕ್ರೇನ್ ಮೇಲೆ ದಾಳಿ ಮಾಡುವುದಾಗಿ ಘೋಷಿಸಿದಾಗ ಎಲ್ಲ ಕಡೆ ಇದು ಸಂಚಲನ ಸೃಷ್ಟಿ ಮಾಡಿತ್ತು. ಯುದ್ಧ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ನಲ್ಲಿ ಸ್ಫೋಟಗಳು ಕೇಳಿಬಂದವು. ಈ ವೇಳೆ ವಿದೇಶಾಂಗ ಸಚಿವರು ಉಕ್ರೇನ್ ಮೇಲೆ ರಷ್ಯಾ ‘ಪೂರ್ಣ ಪ್ರಮಾಣದ ಆಕ್ರಮಣ’ ನಡೆಸುತ್ತಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ವಾರ ಪೂರ್ತಿ ಅಮೆರಿಕ, ರಾಜತಾಂತ್ರಿಕತೆ ಮತ್ತು ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಿದರೂ ಸಹ ಪುಟಿನ್ ಅವರನ್ನು ಯುದ್ದ ಮಾಡದಂತೆ ತಡೆಯಲು ಸಾಧ್ಯವಾಗಿಲ್ಲ. ಅವರು ಉಕ್ರೇನ್ ಗಡಿಯಲ್ಲಿ 1,50,000 ರಿಂದ 2,00,000 ಸೈನಿಕರನ್ನು ಉಕ್ರೇನ್ ಮೇಲೆ ದಾಳಿ ಮಾಡುವುದಕ್ಕಾಗಿಯೇ ಕಳುಹಿಸಿದ್ದರು.
‘ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ’ ಎಂದು ಪುಟಿನ್ ಹೇಳಿದ ತಕ್ಷಣ ಎಲ್ಲ ಕಡೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಪಾಶ್ಚಿಮಾತ್ಯ ನಾಯಕರಿಂದ ಈ ಘೋಷಣೆ ವಿರುದ್ಧ ಖಂಡನೆ ಕೇಳಿಬಂತು. ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಈ ಯುದ್ಧ ಭಾರೀ ಪರಿಣಾಮ ಬಿರುತ್ತೆ ಎಂದು ಎಲ್ಲ ಕಡೆ ಭೀತಿ ಪ್ರಾರಂಭವಾಗಿದೆ.
ಪ್ರಕಟಣೆಯ ಸ್ವಲ್ಪ ಸಮಯದ ನಂತರ, ಉಕ್ರೇನ್‍ನ ರಾಜಧಾನಿ ಕೈವ್ ಮತ್ತು ಇತರ ಹಲವಾರು ನಗರಗಳಲ್ಲಿ ದಾಳಿ ನಡೆದಿದ್ದು, ಸ್ಫೋಟಗಳು ಕೇಳಿಬಂದವು. ಈ ವೇಳೆ ಉಕ್ರೇನಿಯನ್ ಗಡಿ ಕಾವಲುಗಾರರು ರಷ್ಯಾದ ಮತ್ತು ಬೆಲರೂಸಿಯನ್ ಗಡಿಗಳಲ್ಲಿ ದಾಳಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಉಕ್ರೇನಿಯನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಫೇಸ್‍ಬುಕ್ ಪೋಸ್ಟ್‍ನಲ್ಲಿ, ರಷ್ಯಾ ತನ್ನ ದೇಶದ ‘ಮಿಲಿಟರಿ ಮೂಲಸೌಕರ್ಯ’ದ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಗಾಬರಿಯಾಗದಂತೆ ನಾಗರಿಕರಿಗೆ ಧೈರ್ಯ ಕೊಟ್ಟಿದ್ದು, ನಾವು ಈ ಯುದ್ಧದಲ್ಲಿ ಜಯವನ್ನು ಸಾಧಿಸುತ್ತೇವೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
ಪುಟಿನ್ ಇದೀಗ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ. ಶಾಂತಿಯುತ ಉಕ್ರೇನಿಯನ್ ನಗರಗಳು ಗಲಭೆಗಳಿಂದ ತುಂಬಿದೆ ಎಂದು ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿದ್ದಾರೆ. ಇದು ಆಕ್ರಮಣಕಾರಿ ಯುದ್ಧ, ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಗೆಲ್ಲುತ್ತದೆ. ಜಗತ್ತು ಪುಟಿನ್ ಅವರನ್ನು ತಡೆಯಬೇಕು ಎಂದು ಬರೆದುಕೊಂಡಿದ್ದಾರೆ.
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ವಾಸವಾಗಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯೆಯೇ ದೆಹಲಿಗೆ ವಾಪಸ್ ಆಗಿದೆ.
ಈಗಾಗಲೇ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಚರಣೆ ನಡೆಸುತ್ತಿದೆ. ಇದರ ಮಧ್ಯೆ ಉಕ್ರೇನ್ ತನ್ನ ಭದ್ರತೆಗಾಗಿ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಸಾವಿರಾರು ಭಾರತೀಯರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ಬರಲು ಕಾಯುತ್ತಿದ್ದಾರೆ.
ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಗ್ಗೆ ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವಂತೆ ತನ್ನ ಸೇನೆಗೆ ಪುಟಿನ್ ಸೂಚನೆ ನೀಡಿದ್ದಾರೆ. ಸೂಚನೆ ಬೆನ್ನಲ್ಲೇ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಚರಣೆ ನಡೆಯುತ್ತಿರುವುದರಿಂದ, ಎಲ್ಲಾ ವಾಣಿಜ್ಯ ವಿಮಾನಗಳು ಹೆಚ್ಚಿನ ಅಪಾಯದಲ್ಲಿವೆ. ಈ ಹಿನ್ನೆಲೆಯಲ್ಲಿ ಆದರೆ ಉಕ್ರೇನ್‍ಗೆ ಹೋಗುವ ಎಲ್ಲಾ ವಿಮಾನಗಳಿಗೆ ಏರ್‌ಮೆನ್‍ಗಳಿಗೆ ಸರ್ಕಾರ ಸೂಚನೆಯನ್ನು ನೀಡಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ವಾಪಾಸಾಗಲು ನಿರ್ಧರಿಸಿತು. ಇದನ್ನೂ ಓದಿ:ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
ಜುಲೈ 2014ರಲ್ಲಿ ಮಲೇಷ್ಯಾ ಏರ್‍ಲೈನ್ಸ್ ವಿಮಾನವನ್ನು ಹೊಡೆದುರುಳಿಸಲಾಯಿತು. ಉಕ್ರೇನ್‍ನ ಸಶಸ್ತ್ರ ಪಡೆಗಳು ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳ ನಡುವಿನ ಯುದ್ಧದಲ್ಲಿ ವಿಮಾನದಲ್ಲಿದ್ದ ಎಲ್ಲಾ 298 ಜನರು ಸಾವನ್ನಪ್ಪಿದರು.
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧದ ಘೋಷಣೆ ಬೆನ್ನಲ್ಲೇ ಭಾರತೀಯ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಚಿನ್ನ, ಬೆಳ್ಳಿಯ ಬೆಲೆಗಳು ಗಗನಕ್ಕೆ ಏರಿವೆ.
2,000ಕ್ಕೂ ಅಧಿಕ ಪಾಯಿಂಟ್ಸ್ ಸೆನ್ಸೆಕ್ಸ್ ಕುಸಿತ ಕಂಡರೆ ನಿಫ್ಟಿ 600 ಪಾಯಿಂಟ್ಸ್ ಕುಸಿದಿದೆ. ಯುದ್ಧ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದು, ಪ್ರತಿ ಬ್ಯಾರಲ್ ಬೆಲೆ 100 ಡಾಲರ್ ಮೀರಿದೆ. ಈ ಹಿಂದೆ ಪ್ರತಿ ಬ್ಯಾರಲ್ ಬೆಲೆಯೂ 60-70 ಡಾಲರ್ ಆಸುಪಾಲಿನಲ್ಲಿತ್ತು. ನವೆಂಬರ್ 4ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯವಾಗಿದೆ.
ಚಿನ್ನದ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಂದು 24 ಕ್ಯಾರೆಟ್‍ನ 10 ಗ್ರಾಂ ಚಿನ್ನಕ್ಕೆ 5,320ರೂ. ಹಾಗೂ 22 ಕ್ಯಾರೆಟ್‍ನ 10 ಗ್ರಾಂ ಬಂಗಾರಕ್ಕೆ 4,750 ರೂಪಾಯಿಯಾಗಿದೆ. ನಿನ್ನೆಗಿಂತ ಇಂದು ಒಂದು ಗ್ರಾಂಗೆ 150 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನಕ್ಕೆ 1,500 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ:ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
ಜೊತೆಗೆ ಒಂದು ಕೆಜಿ ಬೆಳ್ಳಿಗೆ 68,400 ರೂಪಾಯಿ ಹೆಚ್ಚಳವಾಗಿದೆ. ನಿನ್ನೆಗಿಂತ ಇಂದು ಬೆಳ್ಳಿ ಬೆಲೆಯಲ್ಲಿ 2,200 ರೂ ಏರಿಕೆಯಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರೋ ಯುದ್ಧದಿಂದಾಗಿ ಚಿನ್ನ ಹಾಗೂ ಬೆಳ್ಳಿ ಏರಿಕೆಯಾಗಿದೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ
ಯುದ್ಧದ ಭೀತಿಯಿಂದಾಗಿ ಈಗಾಗಲೇ ಉಕ್ರೇನ್‍ನಿಂದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳು ವಾಪಸ್ಸಾಗಿದ್ದಾರೆ. ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದೆ. ಭಾರತೀಯ ಪ್ರಜೆಗಳು ದೆಹಲಿಯ ಅಂತರಾಷ್ಟ್ರೀಯ ವಿಮಾನಯಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ವಾಷಿಂಗ್‍ಟನ್: ಉಕ್ರೇನ್ ವಿರುದ್ಧದ ದಾಳಿಗೆ ಜಗತ್ತು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇದು ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಜಟಿಲಗೊಂಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿಲ್, ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸುತ್ತಿದ್ದಂತೆ ಗುರುವಾರ ಮಾತನಾಡಿದ ಜೋ ಬೈಡೆನ್ ಅವರು, ಉಕ್ರೇನ್ ವಿರುದ್ಧದ ದಾಳಿ ರಷ್ಯಾದ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಚೋದಿತ ಮತ್ತು ನ್ಯಾಯ ಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ
ಗುರುವಾರ ಬೆಳಗ್ಗೆ 9:00 ಗಂಟೆಗೆ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರೊಂದಿಗೆ ವರ್ಚುವಲ್ ಸಭೆ ನಡೆಸಬೇಕಾಗಿತ್ತು. ಆದರೆ ಸಾರ್ವಜನಿಕರ ಟೀಕೆಗಳಿಂದ ವಾಷಿಂಗ್ಟನ್‍ನ ಶ್ವೇತಭವನದಲ್ಲಿ ಮಧ್ಯಾಹ್ನ ಸಭೆ ಆರಂಭವಾಗಲಿದೆ.
#UkraineRussiaCrisis | I’ll be monitoring the situation from White House this evening & get regular updates from my national security team. Tomorrow, I’ll meet with my G7 counterparts in the morning… We’ll coordinate with our NATO allies: US President Joe Biden
Prayers of the entire world are with the people of Ukraine tonight as they suffer an unprovoked & unjustified attack by Russian military forces. President Putin has chosen a premeditated war that will bring a catastrophic loss of life and human suffering: US President Joe Biden pic.twitter.com/OdyHXAWtzm
ಬಿಡೆನ್ ಅವರು ರಷ್ಯಾದಿಂದ ಜರ್ಮನಿಗೆ ನಾರ್ಡ್ ಸ್ಟ್ರೀಮ್-2 ನೈಸರ್ಗಿಕ ಅನಿಲ ಪೈಪ್‍ಲೈನ್‍ಗೆ ನಿರ್ಬಂಧಗಳನ್ನು ವಿಧಿಸುವುದಾಗಿ ಬುಧವಾರ ಘೋಷಿಸಿದ್ದಾರೆ. ಇದು ಶಕ್ತಿ-ಸಮೃದ್ಧ ಮಾಸ್ಕೋದ ಅತ್ಯುನ್ನತ ಶಕ್ತಿ ಮತ್ತು ಭೌಗೋಳಿಕ ರಾಜಕೀಯ ಯೋಜನೆಗಳಲ್ಲಿ ಒಂದಾಗಿದೆ. ಜರ್ಮನಿಯು ಈ ಯೋಜನೆ ಮುಂದುವರಿಸುವುದನ್ನು ತಡೆಯುವುದಾಗಿ ಮೊದಲೇ ಘೋಷಿಸಿತ್ತು. ರಷ್ಯಾ ನಡೆಗೆ ಫ್ರಾನ್ಸ್, ಜರ್ಮನಿ ಸೇರಿದಂತೆ ಅನೇಕ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ: ಪುಟಿನ್ ಅಧಿಕೃತ ಘೋಷಣೆ