ವಾಷಿಂಗ್ಟನ್: ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್‌ಗೆ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಭರವಸೆ ನೀಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಬ್ಯಾಂಕ್, ನಾವು ಉಕ್ರೇನ್‌ಗೆ ತಕ್ಷಣದ ಬೆಂಬಲವನ್ನು ಒದಗಿಸಲು ಸಿದ್ಧರಿದ್ದೇವೆ. ಹಣಕಾಸು ಹಂಚಿಕೆ ಸೇರಿದಂತೆ ಇತರೆ ಬೆಂಬಲಕ್ಕಾಗಿ ಕ್ರಮಕೈಗೊಂಡಿದ್ದೇವೆ. ಇದಕ್ಕಾಗಿ ನಮ್ಮ ಎಲ್ಲಾ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?
ವಿಶ್ವ ಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಮಾತನಾಡಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ ಉಂಟಾಗಿರುವ ಹಿಂಸಾಚಾರ, ಜೀವಹಾನಿಯಿಂದ ವಿಶ್ವ ಬ್ಯಾಂಕ್ ಕಳವಳಗೊಂಡಿದೆ. ನಾವು ಉಕ್ರೇನ್‌ನ ದೀರ್ಘಕಾಲದ ಪಾಲುದಾರರಾಗಿದ್ದೇವೆ. ಇಂತಹ ನಿರ್ಣಾಯಕ ಕ್ಷಣದಲ್ಲಿ ದೇಶದ ಜನತೆಯ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!
ಉಕ್ರೇನ್‌ನಲ್ಲಿನ ವಿನಾಶಕಾರಿ ಬೆಳವಣಿಗೆಗಳು ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತವೆ. ಈ ವೆಚ್ಚಗಳನ್ನು ನಿರ್ಣಯಿಸಲು ನಾವು ಐಎಂಎಫ್‌ನೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತೇವೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
ಮಾಲ್ಪಾಸ್ ಅವರು ಶಾನಿವಾರದಂದೇ ಮ್ಯೂನಿಚ್‌ನಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದರು. ಉಕ್ರೇನ್ ಪ್ರದೇಶದ ಜನರಿಗೆ ವಿಶ್ವ ಬ್ಯಾಂಕ್‌ನ ಬೆಂಬಲ ಮತ್ತು ಸಹಾಯ ಒದಗಿಸುವ ಕುರಿತು ಆಶಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
Government of India, Ministry of Civil Aviation has allowed passengers traveling from Ukraine to travel by transit under India- Qatar bilateral air bubble arrangement.
ಉಕ್ರೇನ್ ಮೇಲೆ ರಷ್ಯಾ ದಾಳಿ ಪ್ರಾರಂಭಿಸಿದ ಬಳಿಕ ಉಕ್ರೇನ್‍ನ ವಾಯುಪ್ರದೇಶ ಮುಚ್ಚಿಹೋಗಿದೆ. ಇದೀಗ ಭಾರತೀಯರು ಕತಾರ್‍ನಿಂದ ಭಾರತಕ್ಕೆ ಮರಳಲು ಮೊದಲು ಕತಾರ್ ತಲುಪಬೇಕಾಗಿದೆ. ಆದರೆ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರು ಹೇಗೆ ಕತಾರ್ ಪ್ರವೇಶಿಸಬೇಕೆಂಬ ವಿಷಯವನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!
ಈ ಬಗ್ಗೆ ಕತಾರ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಭಾರತೀಯ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಉಕ್ರೇನ್‍ನಲ್ಲಿರುವ ಭಾರತದ ಪ್ರಯಾಣಿಕರಿಗೆ ಕತಾರ್‍ನಿಂದ ಭಾರತಕ್ಕೆ ಹಿಂದಿರುಗಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಉಕ್ರೇನ್‍ನಿಂದ ಭಾರತೀಯರು ಏರ್ ಬಬಲ್ ವ್ಯವಸ್ಥೆಯ ಅಡಿಯಲ್ಲಿ ಸಾರಿಗೆ ಮುಖಾಂತರ ಕತಾರ್ ಪ್ರವೇಶಿಸಬಹುದು ಎಂದು ತಿಳಿಸಿದೆ.
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದರಿಂದ ಇದರ ಪ್ರಭಾವ ನೇರವಾಗಿ ಜಾಗತಿಕ ಮಾರುಕಟ್ಟೆ ಮೇಲೆ ಬಿದ್ದಿದೆ. ಇದರಲ್ಲಿ ಭಾರತೀಯ ಷೇರು ಮಾರುಕಟ್ಟೆ ಕೂಡಾ ಹೊರತಾಗಿಲ್ಲ.
ಇಂದು ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ಒಂದೇ ದಿನ 13 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್‍ಇ ಸೂಚ್ಯಂಕದಲ್ಲಿ 2,702 ಅಂಶ, ಎನ್‍ಎಸ್‍ಇ ಸೂಚ್ಯಂಕದಲ್ಲಿ 815.30 ಅಂಶ ನಷ್ಟವಾಗಿದೆ. ಈ ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಷೇರುಪೇಟೆ ನಷ್ಟಹೋಗಿರುವುದು ಇದೇ ಮೊದಲು.
ವಿದೇಶಿ ಹೂಡಿಕೆದಾರರ ಜೊತೆ ದೇಶಿಯ ಇನ್ವೆಸ್ಟರ್‍ಗಳು ಕೂಡ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಗೆ ಭಾರೀ ನಷ್ಟವಾಗಿದೆ. ಡಾಲರ್ ಎದುರು ರೂ. ಮೌಲ್ಯ 75.61 ರೂ.ಗೆ ಕುಸಿದಿದೆ. ಇನ್ನೂ ಉಕ್ರೇನ್ ಮೇಲಿನ ದಾಳಿಯಿಂದ ದೇಶದ ಮೇಲೆ ಏನೇನು ಪರಿಣಾಮ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!
100 ಡಾಲರ್ ದಾಟಿದ ಕಚ್ಛಾ ತೈಲ ಬೆಲೆ:
ಕಳೆದ 2-3 ದಿನಗಳಿಂದ 97.98 ಡಾಲರ್(7,429 ರೂ.) ಆಚೆ ಈಚೆ ಇದ್ದ 1 ಬ್ಯಾರಲ್ ಕಚ್ಛಾ ತೈಲದ ಬೆಲೆ ಯುದ್ಧ ಪ್ರಾರಂಭವಾಗುತ್ತಿದ್ದಂತೆ 105 ಡಾಲರ್(7,961 ರೂ.) ದಾಟಿದೆ. ಇದು 2014ರ ಬಳಿಕದ ಗರಿಷ್ಠ ಮಟ್ಟವಾಗಿದೆ.
ತೈಲ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಅತೀದೊಡ್ಡ ದೇಶ ರಷ್ಯಾ. ಯುರೋಪ್ ರಾಷ್ಟ್ರಗಳಿಗೆ ಶೇ.35 ರಷ್ಟು ಕಚ್ಚಾ ತೈಲ ರಷ್ಯಾದಿಂದಲೇ ಪೂರೈಕೆಯಾಗುತ್ತದೆ. ಯುದ್ಧ ನಿಲ್ಲದೇ ಹೀಗೆ ಮುಂದುವರೆದಲ್ಲಿ, ಆರ್ಥಿಕ ನಿರ್ಬಂಧಗಳ ಹೇರಿಕೆ ಹೆಚ್ಚಳವಾದಲ್ಲಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕನಿಷ್ಟ 7-8 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.
ಚಿನ್ನದ ಬೆಲೆ ಶೇ.30 ರಷ್ಟು ಹೆಚ್ಚಳ:
ಯುದ್ಧದ ಪ್ರಭಾವ ನೇರವಾಗಿ ಬಂಗಾರದ ಮೇಲೆ ಬಿದ್ದಿದೆ. ಕೇವಲ ಒಂದೇ ದಿನದಲ್ಲಿ ಬಂಗಾರದ ಬೆಲೆ ಶೇ.30 ರಷ್ಟು ಹೆಚ್ಚಿದೆ. ಇಂದು 10 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ 2,500 ರೂ. ಹೆಚ್ಚಿದ್ದು, 54 ಸಾವಿರದ ಗಡಿದಾಟಿದೆ. ಆಭರಣದ ಚಿನ್ನದ ಬೆಲೆ 1,000 ರೂ. ಹೆಚ್ಚಿದ್ದು, 47ಸಾವಿರದ ಅಂಚಿನಲ್ಲಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
ರಸಗೊಬ್ಬರ ಪೂರೈಕೆ ವ್ಯತ್ಯಯ/ಬೆಲೆ ಹೆಚ್ಚಳ ಸಾಧ್ಯತೆ:
ಭಾರತಕ್ಕೆ ಡಿಎಪಿ ಸೇರಿ ಮೂರು ಬಗೆಯ ರಸಗೊಬ್ಬರವನ್ನು ಪೂರೈಸುವ ದೇಶಗಳಲ್ಲಿ ರಷ್ಯಾ ಪ್ರಮುಖ. ಯುದ್ಧದಿಂದ ಭಾರತಕ್ಕೆ ರಸಗೊಬ್ಬರ ಆಮದು ಕಷ್ಟಕರವಾಗಿದ್ದು, ಮುಂಗಾರು ಬೆಳೆಯ ಸಿದ್ಧತೆಯಲ್ಲಿರುವ ರೈತರಿಗೆ ಸಮಸ್ಯೆಯಾಗಲಿದೆ ಜೊತೆಗೆ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.
ಸೂರ್ಯಕಾಂತಿ ಎಣ್ಣೆ ದರ ಹೆಚ್ಚಳ:
ಉಕ್ರೇನ್‍ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಹೆಚ್ಚಿನ ಮಟ್ಟದಲ್ಲಿ ಆಮದು ಆಗುತ್ತದೆ. ಯುದ್ಧದಿಂದ ಆಮದು ಕಷ್ಟಸಾಧ್ಯವಾಗುವುದರಿಂದ ಸೂರ್ಯಕಾಂತಿ ಎಣ್ಣೆ ದುಬಾರಿಯಾಗುವ ಸಾಧ್ಯತೆ ಇದೆ.
ಮದ್ಯ ಪ್ರಿಯರಿಗೆ ಶಾಕ್:
ಯುದ್ಧದಿಂದ ಮದ್ಯದ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಉಕ್ರೇನ್ ವಿಶ್ವದಲ್ಲೇ ಅತೀ ಹೆಚ್ಚು ಬಾರ್ಲಿ ಪೂರೈಸುವ 5 ಪ್ರಮುಖ ದೇಶಗಳಲ್ಲಿ ಒಂದು. ಮದ್ಯ ತಯಾರಿಕೆಗೆ ಬಾರ್ಲಿ ಅಗತ್ಯ. ಯುದ್ಧದಿಂದಾಗಿ ಬಾರ್ಲಿ ಪೂರೈಕೆ ಏರುಪೇರಾಗುವುದರಿಂದ ಮದ್ಯದ ಬೆಲೆಯೂ ಹೊರೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯುದ್ಧ ವಿಚಾರದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸಬೇಡಿ – ಪುಟಿನ್ ನೇರ ಎಚ್ಚರಿಕೆ
ಮೊಬೈಲ್ ಉದ್ಯಮಕ್ಕೆ ಆಘಾತ:
ಮೊಬೈಲ್ ಬಿಡಿಭಾಗಗಳ ಪೂರೈಕೆಯಲ್ಲಿ ರಷ್ಯಾ ಮುಂದಿದೆ. ಯುದ್ಧದಿಂದ ಆಮದು-ರಫ್ತಿಗೆ ತೊಡಕಾಗುವ ಸಾಧ್ಯತೆ ಇರುವುದರಿಂದ ಮೊಬೈಲ್ ಉದ್ಯಮಕ್ಕೆ ಕಷ್ಟವಾಗಲಿದೆ.
ವಾಹನ ಉದ್ಯಮಕ್ಕೆ ಪೆಟ್ಟು:
ವಾಹನ ಎಕ್ಸಾಸ್ಟ್ ವ್ಯವಸ್ಥೆಗೆ ಪಲಾಡಿಯಂ ಲೋಹ ಅಗತ್ಯ. ಪಲಾಡಿಯಂ ಲೋಹವನ್ನು ಹೆಚ್ಚು ರಫ್ತು ಮಾಡುವ ದೇಶ ರಷ್ಯಾ. ಯುದ್ಧ ಬಿಕ್ಕಟ್ಟಿನ ಬಳಿಕ ಪಲಾಡಿಯಂ ಲೋಹದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಕೆಮಿಕಲ್ಸ್, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‍ಗಳೊಂದಿಗೆ ಕೈಗಾರಿಕೆಯಲ್ಲಿ ಬಳಕೆಯಾಗುವ ರಿಯಾಕ್ಟರ್ಸ್, ಬಾಯ್ಲರ್ ಯಂತ್ರ, ಮೆಕಾನಿಕಲ್ ವಸ್ತು, ಎಣ್ಣೆ ಬೀಜ ಕೂಡಾ ದುಬಾರಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?
ಕೇವಲ ರಷ್ಯಾ ಹಾಗೂ ಉಕ್ರೇನ್‍ನಿಂದ ಆಮದು ಆಗುವ ವಸ್ತುಗಳಿಗಷ್ಟೇ ಭಾರತದಲ್ಲಿ ಪೆಟ್ಟು ಬೀಳದೇ ರಫ್ತಿನಿಂದಲೂ ನಷ್ಟವಾಗುವ ಸಾಧ್ಯತೆ ಇದೆ. ಭಾರತದಿಂದ ಉಕ್ರೇನ್‍ಗೆ ರಫ್ತಾಗುವ ವಸ್ತುಗಳ ಪೈಕಿ ಸಿಂಹಭಾಗ ಔಷಧಿಗಳದ್ದಾಗಿದೆ. ಮೌಲ್ಯದ ಲೆಕ್ಕದಲ್ಲಿ ಉಕ್ರೇನ್‍ಗೆ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಅತೀದೊಡ್ಡ ದೇಶವಾಗಿದೆ.
ಹಣ್ಣು, ಕಾಫಿ, ಟೀ ಪುಡಿ ಉದ್ಯಮಕ್ಕೂ ಯುದ್ಧದಿಂದ ಹೊಡೆತ ಬೀಳಲಿದ್ದು, ಇವುಗಳ್ನು ಉಕ್ರೇನ್‍ಗೆ ಭಾರತ ರಫ್ತು ಮಾಡುತ್ತದೆ.
ನವದೆಹಲಿ: ರಷ್ಯಾ-ಉಕ್ರೇನ್ ಮೇಲೆ ಯುದ್ಧ ಆರಂಭಿಸುತ್ತಿದ್ದಂತೆ ಭಾರತ ಮಧ್ಯಪ್ರವೇಶಿಸಬೇಕೆಂಬ ಮಾತು ಕೇಳಿಬರುತ್ತಿತ್ತು. ಇದೀಗ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಇಂದು ರಾತ್ರಿ ಮಾತುಕತೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಅರಂಭಿಸುತ್ತಿದ್ದಂತೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್‍ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ. ನಾವು ಈ ಮೊದಲು ರಷ್ಯಾದ ಮಿಲಿಟರಿ ಪಡೆ ನಮ್ಮ ಗಡಿ ಪ್ರದೇಶದಿಂದ ಒಳಬರದಂತೆ ತಿಳಿಸಿದ್ದೇವು ಆದರೂ ಬಂದಿದ್ದಾರೆ ಹಾಗಾಗಿ ಉಕ್ರೇನ್, ರಷ್ಯಾದ ಮಿಲಿಟರಿ ಪಡೆಗಳನ್ನು ಹೊಡೆದುರುಳಿಸಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಿದ್ದು, ಭಾರತ ಕೂಡಲೇ ಮಧ್ಯಪ್ರವೇಶಿಸಿ ಮಾತುಕತೆಗೆ ಮುಂದಾಗಿ ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
ಇದಲ್ಲದೇ ವಿಶ್ವದ ಹಲವು ದೇಶಗಳೂ ಕೂಡ ಭಾರತ ಮಧ್ಯಪ್ರವೇಶಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಭಾರತದ ಪ್ರಧಾನಿ ಮೋದಿ ಮಾತುಕತೆ ನಡೆಸಿದರೆ ಯುದ್ಧ ನಿಲ್ಲಿಸಬಹುದೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕಿವ್: ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವುದನ್ನು ಇಡೀ ವಿಶ್ವ ನೋಡುತ್ತಿದೆ. ಆದರೆ ಅಲ್ಲಿನ ಜನರು ಹೊರಗೆ ಏನು ನಡೆಯುತ್ತಿದೆ ಎಂಬುದೇ ತಿಳಿಯದೆ ಉಸಿರು ಬಿಗಿಯಾಗಿಸಿ ಒದ್ದಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಬಾಂಬುಗಳ ದಾಳಿ ನಡೆಸುತ್ತಿದ್ದು, ಉಕ್ರೇನ್ ನಿವಾಸಿಗಳಿಗೆ ಸರ್ಕಾರ ತಮ್ಮ ಜೀವ ಉಳಿಸಿಕೊಳ್ಳಲು ಬಂಕರ್ ಹಾಗೂ ಮೆಟ್ರೋ ಸುರಂಗಗಳಿಗೆ ತೆರಳುವಂತೆ ಸೂಚನೆ ನೀಡಿದೆ. ಇದರಂತೆ ಸಾವಿರಾರು ಜನರು ದಿಕ್ಕು ತೋಚದೇ ಸುರಂಗ ಮಾರ್ಗ ಹಾಗೂ ಬಂಕರ್‍ಗಳಿಗೆ ತೆರಳಿ ಬೀಡು ಬಿಟ್ಟಿದ್ದಾರೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬರು, ಇಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ನಮಗೆ ಬಂಕರ್ ಇಲ್ಲವೇ ಮೆಟ್ರೋ ಸುರಂಗಗಳಿಗೆ ಹೋಗಿ ಜೀವ ಉಳಿಸಿಕೊಳ್ಳು ಸಲಹೆ ನೀಡಲಾಗಿದೆ. ಹೀಗಾಗಿ ನಾವು ಮೆಟ್ರೋ ಸುರಂಗಗಳಲ್ಲಿ ಆಶ್ರಯ ಪಡೆದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ನಾವೆಲ್ಲರೂ ಸುರಕ್ಷಿತವಾಗಿದ್ದೇವೆ: ಉಕ್ರೇನ್‍ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು
ಮೆಟ್ರೋ ಸುರಂಗಗಳಲ್ಲಿ ಸಾವಿರಾರು ಜನರು ಜೀವ ಉಳಿಸಿಕೊಳ್ಳಲು ತೆರಳಿದ್ದು, ಇದರಲ್ಲಿ ಕರ್ನಾಟಕದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಸದ್ಯ ಯಾರಿಗೂ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಕರ್ನಾಟಕ ಮೂಲದ ವಿದ್ಯಾರ್ಥಿ ಉಕ್ರೇನ್‍ನಿಂದ ಸಂದೇಶವನ್ನು ತಲುಪಿಸಿದ್ದಾರೆ.
ಕಿವ್: ರಷ್ಯಾ ದಾಳಿಯ ವಿರುದ್ಧ ತಮ್ಮ ದೇಶವನ್ನು ರಕ್ಷಿಸಲು ಬಯಸುವ ಎಲ್ಲಾ ನಾಗರಿಕರಿಗೆ ಸರ್ಕಾರ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾ ದಾಳಿ ಬಗ್ಗೆ ಇನ್ನೂ ತಮ್ಮ ಆತ್ಮ ಸಾಕ್ಷಿಯನ್ನು ಕಳೆದುಕೊಳ್ಳದ ಎಲ್ಲರಿಗೂ ರಷ್ಯಾ ವಿರುದ್ಧ ಪ್ರತಿಭಟಿಸುವ ಸಮಯ ಬಂದಿದೆ. ದೇಶವನ್ನು ರಕ್ಷಿಸಲು ಸಿದ್ಧರಾಗಿರುವ ಉಕ್ರೇನ್‍ನ ಎಲ್ಲಾ ನಾಗರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದೇವೆ ಹಾಗೂ ಎಲ್ಲಾ ನಿರ್ಬಂಧವನ್ನು ತೆಗೆದು ಹಾಕುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿಚಾರದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸಬೇಡಿ – ಪುಟಿನ್ ನೇರ ಎಚ್ಚರಿಕೆ
ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಈಗಾಗಲೇ ಯುದ್ಧ ಸಾರಿದ್ದು, ಭಾರತೀಯ ಕಾಲಮಾನ ಇಂದು ಬೆಳಗ್ಗೆ 6 ಗಂಟೆಗೆ ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ವಿಚಾರವಾಗಿ ಇತರ ಯಾವುದೇ ರಾಷ್ಟ್ರಗಳು ಮೂಗು ತೂರಿಸದಂತೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?
ಉಕ್ರೇನ್‍ನಲ್ಲಿ ಇದೀಗ ರಷ್ಯಾ ದಾಳಿಗೆ ಜನರು ಬಲಿಯಾಗುತ್ತಿದ್ದು, ಕಾರ್ನಾಟಕ-ಭಾರತ ಸೇರಿದಂತೆ ಇತರ ದೇಶದ ವಿದ್ಯಾರ್ಥಿಗಳೂ ಸಿಲುಕಿಕೊಂಡಿದ್ದಾರೆ.
ಬೆಳಗಾವಿ: ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರಲು ಸರ್ವಪ್ರಯತ್ನ ಮಾಡಲಾಗುತ್ತಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆಸುವ ಪ್ರಯತ್ನ ಸರ್ಕಾರ ಮಾಡ್ತಿದೆ. ಬೆಳಗಾವಿ ಇಬ್ಬರು, ವಿಜಯಪುರದ ಒಬ್ಬ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಸರ್ಕಾರ ಹೆಚ್ಚಿನ ಪ್ರಯತ್ನ ಮಾಡಿ ವಿದ್ಯಾರ್ಥಿಗಳನ್ನ ಮರಳಿ ಸುರಕ್ಷಿತವಾಗಿ ಕರೆತಲಾಗುತ್ತದೆ ಎಂದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!
ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಸಿಎಂ ಬೊಮ್ಮಾಯಿ ಗಮನಕ್ಕೆ ತರಲಾಗಿದೆ. ಈಗಾಗಲೇ ಎಲ್ಲ ಜಿಲ್ಲಾಧಿಕಾರಿ ಸೂಚನೆ ಕೊಡಲಾಗಿದ್ದು, ವಿದ್ಯಾರ್ಥಿಗಳ ನೆರವಿಗೆ ಧಾವಿಸುವಂತೆ ತಿಳಿಸಲಾಗಿದೆ. ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಪೋಷಕರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ನವದೆಹಲಿ: ಉಕ್ರೇನ್‍ನಲ್ಲಿ ನನ್ನ ಕೋಚ್ ನಿಕಿಟಿನ್ ಯೆವ್ಹೆನ್ ಮನೆ ಮುಂದೆಯೇ ಬಾಂಬ್ ದಾಳಿ ನಡೆದಿದೆ ಎಂದು ಟೋಕಿಯೋ ಪ್ಯಾರಾಲಂಪಿಕ್ಸ್‌ನ ಕಂಚಿನ ಪದಕ ಗೆದ್ದಿದ್ದ ಶರದ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿರುವ ಶರದ್ ಕುಮಾರ್, ನಾನು ನನ್ನ ಕೋಚ್ ಬಗ್ಗೆ ಚಿಂತೆ ಆಗುತ್ತಿದೆ. ಉಕ್ರೇನ್‍ನ ಖಾರ್ಕಿವ್‍ನಲ್ಲಿರುವ ಅವರ ಮನೆಯ ಮುಂದೆ ಬಂಬ್ ದಾಳಿ ನಡೆದಿದೆ. ಅವರೊಂದಿಗೆ ಮಾತನಾಡಿದ್ದೇನೆ ಮನೆಯ ನೆಲಮಹಡಿಯಲ್ಲಿ ಇದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ
Just spoke to my coach in Ukraine Kharkiv , he is worried , he can hear bombing from his room, he is planning to move to his garage underground.
ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಶರದ್ ಕುಮಾರ್‌ಗೆ ನಿಕಿಟಿನ್ ಯೆವ್ಹೆನ್ ಕೋಚ್ ಆಗಿದ್ದರು. ಉತ್ತರಪ್ರದೇಶ ಮೂಲದ ಶರದ್‍ಗೆ ನಿಕಿಟಿನ್ ಯೆವ್ಹೆನ್ ಮುಂದಿನ ಪ್ಯಾರಾಲಂಪಿಕ್ಸ್ ತಯಾರಿಗಾಗಿ ಹಲವು ಸಲಹೆಗಳನ್ನು ನೀಡುತ್ತಿದ್ದರು. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಷ್ಯಾದ ಭೂಸೇನಾ ಪಡೆಗಳು ನಾನಾ ಕಡೆಗಳಿಂದ ಉಕ್ರೇನ್ ಗಡಿ ಭಾಗಗಳನ್ನು ಪ್ರವೇಶಿಸಿವೆ. ಈ ವೇಳೆ ರಷ್ಯಾದ 50 ಆಕ್ರಮಣಕಾರರನ್ನು ಹತ್ಯೆಗೈದಿರುವುದಾಗಿ ಉಕ್ರೇನ್ ತಿಳಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ದೇಶದ ನಾನಾ ಭಾಗಗಳ ತಲ್ಲಣಕ್ಕೆ ಕಾರಣವಾಗಿದೆ. ಉಕ್ರೇನ್ ನಲ್ಲಿ ವಾಸವಿರುವ ಭಾರತೀಯರೂ ಸೇರಿದಂತೆ ಅನೇಕ ರಾಷ್ಟ್ರಗಳ ಜನರು ಜೀವ ಹಿಡಿದುಕೊಂಡು ತವರಿಗೆ ಮರಳಲು ಕಾಯುತ್ತಿದ್ದಾರೆ. ತಮ್ಮವರು ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇಂಥದ್ದೊಂದು ಪ್ರಾರ್ಥನೆಯನ್ನು ಬಿಗ್ ಬಾಸ್ ಖ್ಯಾತಿಯ, ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಕೂಡ ಮಾಡಿದ್ದಾರೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್
ಕನ್ನಡ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಸ್ನೇಹಿತೆ ಸುಹಾನಿ ದಿವ್ಯ ಗಿರೀಶ್ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಉಕ್ರೇನ್ ಗೆ ಹೋದವರು ಯುದ್ಧದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರಂತೆ. ಉಕ್ರೇನ್ ನಲ್ಲಿ ತಮ್ಮ ಗೆಳತಿ ಹೇಗಿದ್ದಾರೋ ಏನೋ ಎನ್ನುವ ಆತಂಕವನ್ನು ಶ್ವೇತಾ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶುರುವಾದಾಗ ನನಗೆ ತಕ್ಷಣವೇ ನೆನಪಾಗಿದ್ದು, ಗೆಳತಿ ಸುಹಾನಿ ಮತ್ತು ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು. ಅವರ ರಕ್ಷಣೆಗೆ ಕೂಡಲೇ ಭಾರತ ಸರ್ಕಾರ ಕ್ರಮ ತಗೆದುಕೊಳ್ಳಬೇಕು. ಎಲ್ಲ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ, ಅಲ್ಲಿರುವ ಭಾರತೀಯರಿಗೆ ಧೈರ್ಯ ಹೇಳುವ ಕೆಲಸ ಆಗಬೇಕು ಎಂದಿದ್ದಾರೆ ಶ್ವೇತಾ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ಯುದ್ಧ ಶುರುವಾದಾಗಿನಿಂದ ತಮಗೆ ಯಾವ ಕೆಲಸದಲ್ಲೂ ಆಸಕ್ತಿ ಕಾಣುತ್ತಿಲ್ಲ ಎಂದಿರುವ ಅವರು, ಎಲ್ಲರೂ ನನ್ನ ಗೆಳತಿಯ ಸುರಕ್ಷತೆಗಾಗಿ ಪ್ರಾರ್ಥಿಸಿ ಅಂದಿದ್ದಾರೆ. ಅವರ ಕುಟುಂಬಕ್ಕೂ ಕೂಡ ಧೈರ್ಯ ತುಂಬುವ ಕೆಲಸ ಆಗಲಿ ಎಂದು ಶ್ವೇತಾ ಬರೆದುಕೊಂಡಿದ್ದಾರೆ.
ಮಾಸ್ಕೋ: ರಷ್ಯಾ – ಉಕ್ರೇನ್ ಮೇಲೆ ಯುದ್ಧ ಘೋಷಿಸುತ್ತಿದ್ದಂತೆ ಮಾಸ್ಕೋ ಮತ್ತು ಉಕ್ರೇನ್ ನಡುವಿನ ರಾಜತಾಂತ್ರಿಕ ಸಂಬಂಧ ಮುರಿದು ಬಿದ್ದಿದೆ. ಇತ್ತ ರಷ್ಯಾ- ಉಕ್ರೇನ್ ಯುದ್ಧ ವಿಚಾರವಾಗಿ ಇತರ ರಾಷ್ಟ್ರಗಳು ಮೂಗುತೂರಿಸಬೇಡಿ ಎಂದು ಪುಟಿನ್ ನೇರವಾಗಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ. ಈ ವಿಚಾರದಲ್ಲಿ ಯಾವುದೇ ರಾಷ್ಟ್ರಗಳು ಮೂಗುತೂರಿಸದಂತೆ ಇತರ ರಾಷ್ಟ್ರಗಳಿಗೆ ವಾಡ್ಲಿಮಿರ್ ಪುಟೀನ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಇತ್ತೀಚಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು, ಹಸ್ತಕ್ಷೇಪ ಮಾಡುವ ಇತರ ರಾಷ್ಟ್ರಗಳು ಪರಿಣಾಮ ಎದುರಿಸಬೇಕಾದಿತು. ಈ ಹಿಂದೆ ಎಂದೂ ನೋಡಿರದ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟೀನ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದ 6 ಮಿಲಿಟರಿ ವಿಮಾನ ಪತನ – 50 ಸೈನಿಕರನ್ನು ಹತ್ಯೆಗೈದ ಉಕ್ರೇನ್
ಈ ಬಗ್ಗೆ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಪ್ರತಿಕ್ರಿಯಿಸಿ, ಪುಟಿನ್ ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಗೆಲ್ಲುತ್ತದೆ. ಇದೊಂದು ಆಕ್ರಮಣಕಾರಿ ಯುದ್ಧ ಜಗತ್ತು ಪುಟೀನ್ ಅವರನ್ನು ತಡೆಯಬಹುದು ಮತ್ತು ತಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ಉಕ್ರೇನ್‍ನಿಂದ ಜನ ಮಹಾವಲಸೆ ಆರಂಭಿಸಿದ್ದಾರೆ. ರಷ್ಯಾ ಮತ್ತು ಭಾರತದ ನಡುವೆ ಉತ್ತಮ ಸಂಬಂಧವಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷರಾದ ವಾಡ್ಲಿಮಿರ್ ಪುಟೀನ್ ಜೊತೆ ಮಾತುಕತೆ ನಡೆಸಬೇಕಾಗಿದೆ ಎಂದು ಉಕ್ರೇನ್ ರಾಯಭಾರಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟೀನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್‍ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ. ನಾವು ಈ ಮೊದಲು ರಷ್ಯಾದ ಮಿಲಿಟರಿ ಪಡೆ ನಮ್ಮ ಗಡಿ ಪ್ರದೇಶದಿಂದ ಒಳಬರದಂತೆ ತಿಳಿಸಿದ್ದೇವು ಆದರೂ ಬಂದಿದ್ದಾರೆ ಹಾಗಾಗಿ ಉಕ್ರೇನ್, ರಷ್ಯಾದ ಮಿಲಿಟರಿ ಪಡೆಗಳನ್ನು ಹೊಡೆದುರುಳಿಸಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಿದ್ದು, ಭಾರತ ಕೂಡಲೇ ಮಧ್ಯಪ್ರವೇಶಿಸಿ ಮಾತುಕತೆಗೆ ಮುಂದಾಗಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಹಿನ್ನೆಲೆ ರಷ್ಯಾ ದೇಶದ ನಡೆಯನ್ನು ಬ್ರಿಟನ್ ಮತ್ತು ಮಿತ್ರರಾಷ್ಟ್ರಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನಿಡಿದ್ದಾರೆ. ಇತ್ತ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನಾಳೆ ಜಿ 7 ರಾಷ್ಟ್ರಗಳ ಸಭೆ ಕರೆದಿದ್ದಾರೆ. ಅಮೇರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಯುಕೆ, ಜಪಾನ್, ಇಟಲಿ ನಡುವೆ ನಾಳೆ ಜಿ7 ಸಭೆ ನಡೆಯಲಿದೆ.