Tag: Ukraine

  • ಉಕ್ರೇನ್-ರಷ್ಯಾ ಸಂಘರ್ಷ, ಕೇಂದ್ರ ಸರ್ಕಾರದ ಮೇಲಷ್ಟೆ ಜವಾಬ್ದಾರಿ ವಹಿಸಿ ಬಿಟ್ಟು ಬಿಡಬಾರದು: ಸಿದ್ದರಾಮಯ್ಯ

    ಉಕ್ರೇನ್-ರಷ್ಯಾ ಸಂಘರ್ಷ, ಕೇಂದ್ರ ಸರ್ಕಾರದ ಮೇಲಷ್ಟೆ ಜವಾಬ್ದಾರಿ ವಹಿಸಿ ಬಿಟ್ಟು ಬಿಡಬಾರದು: ಸಿದ್ದರಾಮಯ್ಯ

    ಬೆಂಗಳೂರು: ಉಕ್ರೇನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಉಕ್ರೇನ್-ರಷ್ಯಾ ನಡುವಿನ ಸಂಘರ್ಷದಿಂದಾಗಿ ಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಜನರನ್ನು ಮುಖ್ಯವಾಗಿ ವಿದ್ಯಾರ್ಥಿಗಳನ್ನು ವಾಪಸು ಕರೆತರಲು ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬದವರನ್ನು ಸಂಪರ್ಕಿಸಿ ಅವರಲ್ಲಿ ಭರವಸೆ ತುಂಬಬೇಕು. ಉಕ್ರೇನ್-ರಷ್ಯಾ ಸಂಘರ್ಷ ಅಂತಾರಾಷ್ಟ್ರೀಯ ವಿದ್ಯಮಾನವಾಗಿರುವ ಕಾರಣ ಕೇಂದ್ರ ಸರ್ಕಾರದ ನೆರವು-ಸಹಕಾರ ಅಗತ್ಯವಾದರೂ ಅವರ ಮೇಲಷ್ಟೆ ಜವಾಬ್ದಾರಿ ವಹಿಸಿ ಬಿಟ್ಟು ಬಿಡಬಾರದು. ಈ ಬಿಕ್ಕಟ್ಟು ಪರಿಹಾರವಾಗುವ ವರೆಗೆ ಇದರ ನಿರ್ವಹಣೆಗೆ ಮುಖ್ಯಮಂತ್ರಿಗಳು ವಿಶೇಷ ಅಧಿಕಾರಿಯನ್ನು ನೇಮಿಸಬೇಕು ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಸರ್ಕಾರ ವೆಬ್ ಪೋರ್ಟಲ್ ಪ್ರಾರಂಭಿಸಿದೆ.  http://ukraine.karnataka.tech/stranded ಈ ವೆಬ್ ಪೋರ್ಟಲ್ ಮೂಲಕ ಮಾಹಿತಿಗಳನ್ನ ಅಪ್ ಲೋಡ್ ಮಾಡಬಹುದಾಗಿದೆ. ಉಕ್ರೇನ್‍ನಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿದ ನೋಡಲ್ ಅಧಿಕಾರಿ ಮನೋಜ್ ರಾಜನ್, ಸಿಎಂ ಸೂಚನೆ ಮೇಲೆ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆ ರಾತ್ರಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ. 281 ಕನ್ನಡಿಗರ 27 ಜಿಲ್ಲೆಗಳ ವಿದ್ಯಾರ್ಥಿಗಳು ರಿಪೋರ್ಟ್ ಆಗಿದ್ದಾರೆ. ಅವರು ನಮಗೆ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ನಾವು ಕೇಂದ್ರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರದ 7 ಮಂದಿ ವಿದ್ಯಾರ್ಥಿಗಳ ಪರದಾಟ

    ಬೆಳಗಿನ ಜಾವ 6 ಗಂಟೆಯಲ್ಲಿ ನಡೆದಿರೋ ದಾಳಿಯ ಕುರಿತಾಗಿ ವಿದ್ಯಾರ್ಥಿಗಳ ಮಾಹಿತಿ ಪಡೆಯಲು ಆ್ಯಪ್ ಪ್ರಾರಂಭ ಮಾಡಿದ್ದೇವೆ. ಈ ಆ್ಯಪ್‌ನಲ್ಲಿ ವಿದ್ಯಾರ್ಥಿಗಳು ಮಾಹಿತಿ ಕೊಡಬಹುದು. ವಿದ್ಯಾರ್ಥಿಗಳು ಮಾಹಿತಿ ಅಪ್ ಲೋಡಬೇಕು. ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಕೊಟ್ಟ ಬಳಿಕ ಅವರ ಮಾಹಿತಿ ಕೇಂದ್ರ ಸರ್ಕಾರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೆ ಕೊಡುತ್ತೇವೆ. ವಿದ್ಯಾರ್ಥಿಗಳ ರಕ್ಷಣೆಗಾಗಿ ನಾವು ಕ್ರಮವಹಿಸಿದ್ದೇವೆ. ಪೋಷಕರು ಆತಂಕ ಪಡುವುದು ಬೇಡ. ನಾವು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳು ವೆಬ್ ಫೋರ್ಟ್‍ನಲ್ಲಿ ಸರಳವಾಗಿ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  • ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

    ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

    ಕೀವ್: ಯುದ್ಧ ವಿರೋಧಿ ಮತ್ತು ಮಾನವೀಯ ಕಾರಣಗಳಿಗಾಗಿ ಸದಾ ಮಿಡಿಯುವ ಹಾಲಿವುಡ್ ತಾರೆ, ಆಸ್ಕರ್ ಪ್ರಶಸ್ತಿ ವಿಜೇತ ಸೀನ್ ಪೆನ್ ಉಕ್ರೇನ್‍ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದ ಕುರಿತು ಸಾಕ್ಷ್ಯ ಚಿತ್ರ ಮಾಡಲು ಮುಂದಾಗಿದ್ದಾರೆ.

    ಉಕ್ರೇನ್‍ನ ಸರ್ಕಾರಿ ಅಧಿಕಾರಿಗಳು ತಮ್ಮ ನೆಲದಲ್ಲಿ ನಡೆಯುತ್ತಿರುವ ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತನಾಡುತ್ತಿದ್ದ ಪತ್ರಿಕಾಗೋಷ್ಠಿಯಲ್ಲೀ ಸೀನ್ ಭಾಗಿಯಾಗಿದ್ದರು. ಸಾಕ್ಷ್ಯ ಚಿತ್ರಕ್ಕೆ ಬೇಕಾದ ವಿವರಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಆಲಿಸುತ್ತಿದ್ದರು. ಈ ಸಾಕ್ಷ್ಯ ಚಿತ್ರವು ಡಾಕ್ ವೈಸ್ ವಲ್ರ್ಡ್ ನ್ಯೂಸ್ ಮತ್ತು ಎಂಡೀವರ್ ಕಂಟೆಂಟ್‍ನ ಸಹಯೋಗದೊಂದಿಗೆ ವೈಸ್ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಈ ಮೊದಲೇ ಸೀನ್ ಸಾಕ್ಷ್ಯ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆಯದಾಗಿ ನವೆಂಬರ್ 2021ರಲ್ಲಿ ಉಕ್ರೇನ್‍ಗೆ ಭೇಟಿ ನೀಡಿದ್ದ ಅವರು, ಈ ವೇಳೆ ಉಕ್ರೇನ್ ದೇಶದ ಮಿಲಿಟರಿ ಪ್ರತಿಷ್ಟಾನಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು ಎಂದು ವರದಿಯಾಗಿದೆ. ಅಲ್ಲದೇ, ಪೆನ್ ಅವರು ಉಕ್ರೇನಿಯನ್ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಉಕ್ರೇನಿಯನ್ ಉಪ ಪ್ರಧಾನಿ ಐರಿನಾ ವೆರೆಶ್‍ಚುಕ್ ಜೊತೆಗೆ ಸ್ಥಳೀಯ ಪತ್ರಕರ್ತರು ಮತ್ತು ಉಕ್ರೇನಿಯನ್ ಮಿಲಿಟರಿಯ ಸದಸ್ಯರೊಂದಿಗೆ ಅವರು ಮಾತನಾಡಿ ಸಾಕಷ್ಟು ವಿಷಯ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ಉಕ್ರೇನಿಯನ್ ರಾಯಭಾರ ಕಚೇರಿಯು ಈ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿ ಹೇಳಿಕೆ ನೀಡಿದ್ದು, ಉಕ್ರೇನ್‍ನಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ರೆಕಾರ್ಡ್ ಮಾಡಲು ಮತ್ತು ನಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಜಗತ್ತಿಗೆ ಸತ್ಯವನ್ನು ತಿಳಿಸಲು ವಿಶೇಷವಾಗಿ ಪೆನ್ ಅವರು ಕೈವ್‍ಗೆ ಬಂದಿದ್ದಾರೆ ಎಂದು ತಿಳಿಸಿತು. ‘ಉಕ್ರೇನ್‍ಗೆ ಬೆಂಬಲ ನೀಡುವವರಲ್ಲಿ ಸೀನ್ ಪೆನ್ ಕೂಡಾ ಒಬ್ಬರಾಗಿದ್ದಾರೆ. ಅವರ ಧೈರ್ಯ ಮತ್ತು ಪ್ರಾಮಾಣಿಕತೆಗೆ ನಮ್ಮ ದೇಶವು ಅವರಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ಶ್ಲಾಘಿಸಿದೆ.

  • ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರದ 7 ಮಂದಿ ವಿದ್ಯಾರ್ಥಿಗಳ ಪರದಾಟ

    ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರದ 7 ಮಂದಿ ವಿದ್ಯಾರ್ಥಿಗಳ ಪರದಾಟ

    ಚಿಕ್ಕಬಳ್ಳಾಪುರ: ಉಕ್ರೇನ್ ಹಾಗೂ ರಷ್ಯಾ ಯುದ್ದ ಸಂಘರ್ಷ ದಿಂದ ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 7 ಮಂದಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪೋಷಕರಲ್ಲಿ  ಆತಂಕ ಮನೆ ಮಾಡಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ತನ್ಮಯ್ ಗೌತಮ್ ಸಾಯಿಕೃಷ್ಣ, ನಯನ್ ರೆಡ್ಡಿ, ಹಾಗೂ ಪ್ರಶಾಂತ್ ನಾಯ್ಡು, ಬಾಗೇಪಲ್ಲಿ ತಾಲೂಕು ಚೇಳೂರು ಮೂಲದ ನೂರ್ ಅಹಮದ್ ಅವರ ಪುತ್ರಿ ಐಮನ್ ಬುಶ್ರಾ, ಗುಡಿಬಂಡೆ ತಾಲಕೂಕು ವರಲಕೊಂಡ ಲಕ್ಷಿಸಾಗರ ಗ್ರಾಮದ ಬಾಲಕೃಷ್ಣ ಅವರ ಪುತ್ರ ನವನೀತ್ ಹಾಗೂ ಚಿಕ್ಕಬಳ್ಳಾಪುರ ನಗರ ಡಿಎಆರ್ ಎಎಸ್‍ಐ ವಿಶ್ವನಾಥ್ ಅವರ ಪುತ್ರ ತೇಜ್ ಕುಮಾರ್ ಉಕ್ರೇನ್‍ನಲ್ಲಿ ಸಿಲುಕಿರುವರಾಗಿದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ವಿದ್ಯಾರ್ಥಿಗಳು ಸದ್ಯ ಕ್ಷೇಮವಾಗಿದ್ದು, ತಾವು ಇರುವ ಜಾಗದಲ್ಲಿ ಯಾವುದೇ ಯುದ್ದ ಭೀತಿ ಇಲ್ಲ. ಆದರೂ ಮುಂದೆ ಏನಾಗುತ್ತೋ ಅನ್ನೋ ಆತಂಕ ಅಂತೂ ಇದೆ ಅಂತ ತಿಳಿಸಿದ್ದಾರೆ. ಉಕ್ರೇನ್‍ನಲ್ಲಿ ತುರ್ತು ಪರಿಸ್ಥಿತಿ ಹಿನ್ನಲೆ ಎಟಿಎಂ ದಿನಸಿ ಅಂಗಡಿಗಳ ಬಳಿ ಕ್ಯೂ ಇದೆ. ಹೊರಗಡೆ ಹೋಗುವಂತಿಲ್ಲ ದೂರದಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿವೆ ಎಂದು ಅಂತ ಪೋಷಕರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ವಾಷಿಂಗ್ಟನ್: ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್‍ನಲ್ಲಿ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ  ವೆಬ್ ಪೋರ್ಟಲ್ ಪ್ರಾರಂಭ ಮಾಡಿದೆ.

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಸರ್ಕಾರ ವೆಬ್ ಫೋರ್ಟಲ್ ಪ್ರಾರಂಭಿಸಿದೆ.  http://ukraine.karnataka.tech/stranded ಈ ವೆಬ್ ಪೋರ್ಟಲ್ ಮೂಲಕ ಮಾಹಿತಿಗಳನ್ನ ಅಪ್ ಲೋಡ್ ಮಾಡಬಹುದಾಗಿದೆ.

    ಉಕ್ರೇನ್‍ನಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿದ ನೋಡಲ್ ಅಧಿಕಾರಿ ಮನೋಜ್ ರಾಜನ್, ಸಿಎಂ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆ ರಾತ್ರಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ. 27 ಜಿಲ್ಲೆಗಳ 281 ಕನ್ನಡಿಗರು ರಿಪೋರ್ಟ್ ಆಗಿದ್ದಾರೆ. ಅವರು ನಮಗೆ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ನಾವು ಕೇಂದ್ರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

    ಬೆಳಗಿನ ಜಾವ 6 ಗಂಟೆಯಲ್ಲಿ ನಡೆದಿರೋ ದಾಳಿಯ ಕುರಿತಾಗಿ ವಿದ್ಯಾರ್ಥಿಗಳ ಮಾಹಿತಿ ಪಡೆಯಲು ಆ್ಯಪ್ ಪ್ರಾರಂಭ ಮಾಡಿದ್ದೇವೆ. ಈ ಆ್ಯಪ್‌ನಲ್ಲಿ ವಿದ್ಯಾರ್ಥಿಗಳು ಮಾಹಿತಿ ಕೊಡಬಹುದು. ವಿದ್ಯಾರ್ಥಿಗಳು ಮಾಹಿತಿ ಅಪ್ ಲೋಡಬೇಕು. ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಕೊಟ್ಟ ಬಳಿಕ ಅವರ ಮಾಹಿತಿ ಕೇಂದ್ರ ಸರ್ಕಾರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೆ ಕೊಡುತ್ತೇವೆ. ವಿದ್ಯಾರ್ಥಿಗಳ ರಕ್ಷಣೆಗಾಗಿ ನಾವು ಕ್ರಮವಹಿಸಿದ್ದೇವೆ. ಪೋಷಕರು ಆತಂಕ ಪಡುವುದು ಬೇಡ. ನಾವು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳು ವೆಬ್ ಫೋರ್ಟ್‍ನಲ್ಲಿ ಸರಳವಾಗಿ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಈವರೆಗೆ 281 ಜನ ನಮಗೆ ಉಕ್ರೇನ್ ನಿಂದ ಮಾಹಿತಿ ನೀಡಿದ್ದಾರೆ. 27 ಜಿಲ್ಲೆಗಳ ವಿದ್ಯಾರ್ಥಿಗಳು ಇದರಲ್ಲಿ ಇದ್ದಾರೆ. ಎಷ್ಟು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಇದ್ದಾರೆ ಅನ್ನೋ ಮಾಹಿತಿ ಇಲ್ಲ. ಆದರೆ ಎಲ್ಲಾ ವಿದ್ಯಾರ್ಥಿಗಳು ಮೆಡಿಕಲ್ ಎಜುಕೇಶನ್‍ಗೆ ಹೋಗಿದ್ದಾರೆ. 19, 20, 21 ವರ್ಷದವರು ಹೆಚ್ಚಾಗಿ ಇದ್ದಾರೆ. ನಮ್ಮ ಜೊತೆ ಅಲ್ಲಿ ಇರೋರು ಕಾಲ್ ಮಾಡಿ ಮಾತಾಡಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ. ಈವರೆಗೂ ಯಾವುದೇ ಸಾವು ನೋವು ರಿಪೋರ್ಟ್ ಅಗಿಲ್ಲ. ವಿದ್ಯಾರ್ಥಿಗಳ ಮಾಹಿತಿ ಉಕ್ರೇನ್ ರಾಯಭಾರಿ ಕಚೇರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಕೊಡೋದು ನಮ್ಮ ಮೊದಲ ಆದ್ಯತೆ. ಅಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ಊಟದ ವ್ಯವಸ್ಥೆ, ಇನ್ನಿತರ ಸೌಕರ್ಯ ಒದಗಿಸೋದು ನಮ್ಮ ಆದ್ಯತೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಉಕ್ರೇನ್‍ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆತರುವ ವಿಚಾರ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳ ಸುರಕ್ಷತೆಗೆ ಸಂಪೂರ್ಣ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

  • ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

    ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

    ನವದೆಹಲಿ: ರಷ್ಯಾ ದಾಳಿಯಿಂದಾಗಿ ಉಕ್ರೇನ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳು ಮೆಟ್ರೋ ಸುರಂಗದಲ್ಲಿ ಸತತ 30 ಗಂಟೆಗಳಿಂದ ಸಿಲುಕಿಕೊಂಡಿದ್ದಾರೆ. ಈ ನಡುವೆ ಕೆಲವು ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಲು ಸಹಾಯ ಕೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸುಮಾರು 16,000 ಭಾರತೀಯರು ಉಕ್ರೇನ್‍ನಲ್ಲಿ ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಅಪಾರ್ಟ್‍ಮೆಂಟ್‍ಗಳನ್ನು ಬಿಟ್ಟು ತೊರೆಯುತ್ತಿಲ್ಲ. ಆದರೆ ಇನ್ನು ಹಲವಾರು ಮಂದಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ರೈಲು ನಿಲ್ದಾಣಗಳಲ್ಲಿರುವ ಸುರಂಗಗಳಿಗೆ ತೆರಳಿ ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಈ ನಡುವೆ ಉಕ್ರೇನ್‍ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಉತ್ತರ ಪ್ರದೇಶದ ಬಲ್ಲಿಯಾ ಮೂಲದ ಮನೀಶ್ ಜೈಸ್ವಾಲ್ ಎಂಬವರು ಭಾರತೀಯರನ್ನು ಸ್ಥಳಾಂತರಿಸಲು ಶೀಘ್ರವೇ ವ್ಯವಸ್ಥೆಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಾವು ಅಸಹಾಯಕರಾಗಿದ್ದೇವೆ. ಬೆಳಿಗ್ಗೆಯಿಂದ ನಗರದಲ್ಲಿ ಮೂರು-ನಾಲ್ಕು ಬಾಂಬ್‍ಗಳ ದಾಳಿಯಾಗಿದೆ. ನಮಗೆ ಎಲ್ಲ ವಿಮಾನ ಮಾರ್ಗಗಳು ಮುಚ್ಚಲ್ಪಟ್ಟಿವೆ. ಸಾಧ್ಯವಾದಷ್ಟು ಬೇಗ ಭಾರತೀಯರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲು ನಾನು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸುತ್ತೇನೆ. ಈ ವೀಡಿಯೋವನ್ನು ಮನೀಶ್ ಜೈಸ್ವಾಲ್ ಅವರು ತಮ್ಮ ಅಪಾಟ್‍ಮೆಂಟ್‍ನಿಂದ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮತ್ತೊಂದು ವೀಡಿಯೋವನ್ನು ನಿಲೇಶ್ ಜೈನ್ ಅವರು ಹಂಚಿಕೊಂಡಿದ್ದು, ಸುಮಾರು 30 ಗಂಟೆಗಳ ಕಾಲ ಮೆಟ್ರೋ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ. ಜನರು ಮೆಟ್ರೋ ರೈಲ್ವೆ ನಿಲ್ದಾಣದ ಮಹಡಿ ಮೇಲೆ ಕುಳಿತುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇಂಟರ್​​ನೆಟ್ ಸಂಪರ್ಕವು ಉತ್ತಮವಾಗಿಲ್ಲ. ನಾವು ಬಾಂಬ್ ಸ್ಫೋಟಿಸುವ ಶಬ್ದವನ್ನು ಕೇಳುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ. ನಮ್ಮನ್ನು ಇಲ್ಲಿಂದ ತ್ವರಿತವಾಗಿ ಸ್ಥಳಾಂತರಿಸುವಂತೆ ನಾನು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ನಿಲೇಶ್ ಜೈನ್ ಕೋರಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

    ಕೂ ಆ್ಯಪ್‍ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿರುವ ಗುಜರಾತ್‍ನ ಭಾರತೀಯ ವಿದ್ಯಾರ್ಥಿಯೊಬ್ಬರು ಎಟಿಎಂಗಳು ಮತ್ತು ಅಂಗಡಿಗಳಲ್ಲಿ ಜನ ಕ್ಯೂನಲ್ಲಿ ನಿಂತಿದ್ದಾರೆ. ಎಲ್ಲರೂ ಭಯಭೀತರಾಗಿದ್ದಾರೆ. ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಅವರ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಭಾರತಕ್ಕೆ ವಿಮಾನಗಳ ಮೂಲಕ ಹಿಂದಿರುಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ತಿಳಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

  • ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್‍ಗೆ ಕಳುಹಿಸಲಾಗುತ್ತಿದೆ: ಸಿಎಂ

    ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್‍ಗೆ ಕಳುಹಿಸಲಾಗುತ್ತಿದೆ: ಸಿಎಂ

    ಬೆಂಗಳೂರು: ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್‍ಗೆ ಕಳುಹಿಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ವಿದೇಶಾಂಗ ಸಚಿವರ ಜೊತೆ ಬೆಳಗ್ಗೆ ಮಾತಾಡಿದ ಬೊಮ್ಮಾಯಿ ಅವರು, ಕರ್ನಾಟಕದ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿರಬೇಕು ಎಂದು ಕೇಳಿಕೊಂಡಿದ್ದಾರೆ. ಉಕ್ರೇನಿನ ಪಶ್ಚಿಮ ಭಾಗದಲ್ಲಿ ಸಿಲುಕಿದವರ ಸ್ಥಳಾಂತರ ಮಾಡುವ ಚಿಂತನೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಉಕ್ರೇನ್‍ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಸಿಕ್ಕಿಕೊಂಡಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇವತ್ತು ನಮ್ಮ ವಿದೇಶಾಂಗ ಸಚಿವ ಜೈಶಂಕರ್ ಅವರ ಜೊತೆ ಮಾತಾಡಿದ್ದೇನೆ. ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ಅವರು ಪಡೆದುಕೊಂಡಿದ್ದಾರೆ. ಕರ್ನಾಟಕದ ಬಹಳಷ್ಟು ವಿದ್ಯಾರ್ಥಿಗಳು ಮೆಡಿಕಲ್ ಕಲಿಯಲು ಹೋಗಿದ್ದಾರೆ. ಆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದರು.

    ಎಲ್ಲ ವಿದ್ಯಾರ್ಥಿಗಳನ್ನು ಸದ್ಯಕ್ಕೆ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು. ಇದಕ್ಕೆ ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡ್ತಿದೆ. ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ ಗೆ ಕಳಿಸ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳನ್ನು ರಸ್ತೆಯ ಮಾರ್ಗದಲ್ಲಿ ಸ್ಥಳಾಂತರ ಮಾಡುವ ಪ್ರಯತ್ನಗಳು ಆಗ್ತಿವೆ. ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆ ಮಾಡುಲು ತಿಳಿಸಿದ್ದೇವೆ. ಇದುವರೆಗೆ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿಲ್ಲ ಎಂದರು.

    ವಾಯು ಮಾರ್ಗದ ಮೂಲಕ ಸ್ಥಳಾಂತರ ಆಗುತ್ತಿಲ್ಲ. ಈ ಸಂಬಂಧ ವಿದೇಶಾಂಗ ಮಟ್ಟದಲ್ಲಿ ಮಾತುಕತೆಗಳನ್ನು ಮಾಡಲಾಗುತ್ತಿದೆ. ಉಕ್ರೇನಿನ ಪಶ್ಚಿಮ ಭಾಗದಲ್ಲಿರುವ ಸ್ಥಳಾಂತರ ರಸ್ತೆ ಮಾರ್ಗದ ಮೂಲಕ ಮಾಡಬಹುದೆಂಬ ಚಿಂತನೆ ನಡೀತಿದೆ. ಆದರೂ ಕೂಡ ಭಾರತೀಯ ರಾಯಭಾರಿ ಕಚೇರಿ ಹೇಳದ ಹೊರತು ಯಾರೂ ಹೋಗಬಾರದು. ಇಂಥ ಸಂದರ್ಭದಲ್ಲಿ ಸುಮ್ಮಸುಮ್ಮನೆ ಯಾರೂ ಬರಬಾರದು ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಸರಿಯಾದ ಸಂದರ್ಭ ನೋಡಿಕೊಂಡು ನಮ್ಮ ರಾಯಭಾರಿ ಕಚೇರಿ ಸಂದೇಶ ಕೊಡಲಿದೆ. ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಎಲ್ಲರ ಜೊತೆ ನಮ್ಮ ರಾಯಭಾರಿ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿ ಇದ್ದಾರೆ. ನಮ್ಮವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇವೆ. ನಮ್ಮ ಸರ್ಕಾರವೂ ಸಹಾಯವಾಣಿಯನ್ನು ಆರಂಭಿಸಿದೆ. ಭಾರತ ಸರ್ಕಾರವೂ ಸಹ ಆರಂಭಿಸಿದೆ. ಯುದ್ಧದ ಪರಿಸ್ಥಿತಿ ತಿಳಿದುಕೊಳ್ಳುವವರೆಗೂ ಎಲ್ಲರೂ ಎಚ್ಚರಿಕೆಯಿಂದಿರಬೇಕೆಂದು ವಿದೇಶಾಂಗ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

  • ರಷ್ಯಾ ದಾಳಿಗೆ ಮೊದಲ ದಿನ 137 ಮಂದಿ ಸಾವು: ಉಕ್ರೇನಿಯನ್‌ ಅಧ್ಯಕ್ಷ

    ರಷ್ಯಾ ದಾಳಿಗೆ ಮೊದಲ ದಿನ 137 ಮಂದಿ ಸಾವು: ಉಕ್ರೇನಿಯನ್‌ ಅಧ್ಯಕ್ಷ

    ಕೀವ್: ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಇದುವರೆಗೆ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿ 137 ಮಂದಿ ಹತರಾಗಿದ್ದಾರೆ ಎಂದು ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

    ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಈ ಯುದ್ಧದ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಮೃತರನ್ನು ಹೀರೋಗಳು ಎಂದು ಕರೆದಿದ್ದಾರೆ. ರಷ್ಯಾ ದಾಳಿ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಉಕ್ರೇನ್‌ ಮಿಲಿಟರಿಯನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡಲಾಗುವುದು. ಅಲ್ಲಿನ ಜನತೆಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ರಷ್ಯಾ ಹೇಳಿತ್ತು. ಆದರೆ ದೇಶದ ಪ್ರಜೆಗಳ ನೆಲೆಗಳು ಸಹ ದಾಳಿಯಿಂದ ತತ್ತರಿಸಿ ಹೋಗಿವೆ ಎಂದು ಉಕ್ರೇನಿಯನ್‌ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ.

    ಅವರು ಜನರನ್ನು ಕೊಲ್ಲುತ್ತಿದ್ದಾರೆ. ಶಾಂತಿಯಿಂದ ಕೂಡಿದ್ದ ನಗರಗಳನ್ನು ಮಿಲಿಟರಿ ಗುರಿಗಳಾಗಿ ಪರಿವರ್ತಿಸುತ್ತಿದ್ದಾರೆ. ಇದು ಮೋಸ, ಕ್ಷಮಿಸಲು ಅರ್ಹವಲ್ಲದ ನಡೆ ಎಂದು ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

    ಒಡೆಸ್ಸಾ ಪ್ರದೇಶದ ಮಿನಿ ದ್ವೀಪದಲ್ಲಿ ಎಲ್ಲಾ ಗಡಿ ಕಾವಲುಗಾರರನ್ನು ಗುರುವಾರ ಕೊಲ್ಲಲಾಯಿತು. ದ್ವೀಪವನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ ಎಂದು ಉಕ್ರೇನ್‌ನ ಗಡಿ ಸಿಬ್ಬಂದಿ ವರದಿ ಮಾಡಿದ್ದಾರೆ ಎಂದು ವೊಲೊಡಿಮಿರ್‌ ತಿಳಿಸಿದ್ದಾರೆ. ಇದನ್ನೂ ಓದಿ:  Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

  • ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ನವದೆಹಲಿ: ಭಾರತೀಯರು ಸೇರಿ ವಿಶ್ವದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್, ರಷ್ಯಾಗೆ ಯಾಕೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

    ಉನ್ನತ ಶಿಕ್ಷಣ ನೀಡುವಲ್ಲಿ ಭಾರತವೂ ಖ್ಯಾತಿ ಹೊಂದಿರುವಾಗ ಸಾವಿರಾರು ವಿದ್ಯಾರ್ಥಿಗಳು ಏಕೆ ರಷ್ಯಾ ಮತ್ತು ಉಕ್ರೇನ್‍ಗೆ ಮೆಡಿಕಲ್ ಮಾಡಲು ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    Medical education needs to stop burning out students. Now - STAT

    ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕವರು ಮೆಡಿಕಲ್ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು. ಒಂದು ವೇಳೆ ಸಿಗದಿದ್ದರೆ ಖಾಸಗಿ ಕಾಲೇಜು ಕೇಳಿದಷ್ಟು ಹಣ ಕಟ್ಟಿ ಓದಬೇಕಾಗುತ್ತೆ. ಆದರೆ ಎಲ್ಲ ಜನರು ಸ್ಥಿತಿವಂತರಾಗಿರುವುದಿಲ್ಲ. ಭಾರತಕ್ಕೆ ಹೋಲಿಸಿದರೆ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಬಹಳ ಕಡಿಮೆ ಇರುತ್ತೆ. ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶೇ.60 ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಶುಲ್ಕವಿರುತ್ತದೆ.

    ಅಲ್ಲದೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ ಉಕ್ರೇನ್ ನಲ್ಲಿ ಸೀಟ್ ಪಡೆಯುವುದು ಸುಲಭದ ಕೆಲಸ. ಭಾರತಕ್ಕೆ ಹೋಲಿಸಿದರೆ ಉಕ್ರೇನ್‍ನಲ್ಲಿ ಜೀವನ ನಿರ್ವಹಣೆ ವೆಚ್ಚವೂ ಕಡಿಮೆ ಇರುತ್ತೆ. ಇದರ ಜೊತೆಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಯುನೆಸ್ಕೋ, ಯುರೋಪಿಯನ್ ದೇಶಗಳ ಮಾನ್ಯತೆ ಇದೆ.

    A Time for Change: Nutrition Education in Medicine

    ಉಕ್ರೇನ್ ನಲ್ಲಿ ವಿದ್ಯಾರ್ಥಿಗಳ ಜೀವನ ವೆಚ್ಚ ಅಗ್ಗವಾಗಿರುವುದರಿಂದ ಇಲ್ಲಿಗೆ ಎಷ್ಟೋ ಜನರು ಶಿಕ್ಷಣ ಪಡೆಯಲು ಬರುತ್ತಾರೆ.

    ಉಕ್ರೇನ್‍ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇದ್ದು, ಅವರನ್ನು ರಕ್ಷಿಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯಕ್ಕೆ ಉಕ್ರೇನ್‍ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದಾಗಿ ನವದೆಹಲಿ ಮತ್ತು ಕೀವ್ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಭಾರತ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

  • ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ  ಉಕ್ರೇನ್ ಕರೆ!

    ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ವಾಷಿಂಗ್ಟನ್: ರಷ್ಯಾ ದಾಳಿಯಿಂದ ಮೂಲಸೌಕರ್ಯ ರಕ್ಷಿಸಿಕೊಳ್ಳಲು, ರಷ್ಯಾ ಸೈನ್ಯದ ವಿರುದ್ಧ ಸೈಬರ್ ಬೇಹುಗಾರಿಕೆ ಕಾರ್ಯಾಚರಣೆಗಳನ್ನು ನಡೆಸಲು ಉಕ್ರೇನ್ ಸರ್ಕಾರವು ದೇಶದ ಭೂಗತ ಹ್ಯಾಕರ್‌ಗಳಿಂದ ಸ್ವಯಂಸೇವಕರನ್ನು ಕೇಳುತ್ತಿದೆ.

    ರಷ್ಯಾದ ಪಡೆಗಳು ಉಕ್ರೇನ್ ನಗರಗಳ ಮೇಲೆ ದಾಳಿ ಮಾಡುತ್ತಿದ್ದಂತೆ, ಸ್ವಯಂಸೇವಕರಿಗೆ ನಿನ್ನೆ ಹ್ಯಾಕರ್ ಫೋರಮ್‍ಗಳಲ್ಲಿ ಕಾಣಿಸಿಕೊಳ್ಳಲು ಗೂಗಲ್ ಮೂಲಕ ತಿಳಿಸಲಾಗಿದೆ. ದಾಳಿ ಹಿನ್ನೆಲೆ ಅನೇಕ ನಿವಾಸಿಗಳು ರಾಜಧಾನಿ ಕೀವ್ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

    ಉಕ್ರೇನಿಯನ್ ಸೈಬರ್ ಸಮುದಾಯ, ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸಮಯವಾಗಿದೆ ಎಂದು ಉಕ್ರೇನ್ ಪೋಸ್ಟ್ ಮಾಡಿದೆ. ಹ್ಯಾಕರ್‍ಗಳು ಮತ್ತು ಸೈಬರ್ ಸೆಕ್ಯುರಿಟಿ ಪರಿಣಿತರನ್ನು ಗೂಗಲ್ ಡಾಕ್ಸ್ ಮೂಲಕ ಅಪ್ಲಿಕೇಶನ್ ಸಲ್ಲಿಸಲು ಕೇಳಿದೆ.

    ಕೀವ್‍ನಲ್ಲಿರುವ ಸೈಬರ್ ಸೆಕ್ಯುರಿಟಿ ಕಂಪನಿಯ ಸಹ-ಸಂಸ್ಥಾಪಕ ಯೆಗೊರ್ ಔಶೇವ್ ಅವರನ್ನು ನಿನ್ನೆ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಈ ವೇಳೆ ಅವರು ಸೈಬರ್ ರಕ್ಷಣೆ ಬಗ್ಗೆ ಪೋಸ್ಟ್ ಮಾಡುವಂತೆ ಕೋರಿಕೊಂಡಿದ್ದು, ಇದನ್ನು ಬರೆದಿದ್ದಾರೆ ಎಂದು ರಾಯಿಟರ್ಸ್‍ಗೆ ತಿಳಿಸಿದರು. ಇದನ್ನೂ ಓದಿ:  Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    ಔಶೇವ್ ಅವರ ಸಂಸ್ಥೆಯ ಸೈಬರ್ ಯೂನಿಟ್ ಟೆಕ್ನಾಲಜೀಸ್ ನಿರ್ಣಾಯಕ ಮೂಲಸೌಕರ್ಯಗಳ ರಕ್ಷಣೆಯಲ್ಲಿ ಉಕ್ರೇನ್ ಸರ್ಕಾರದೊಂದಿಗೆ ಕೆಲಸ ಮಾಡಲು ಹೆಸರುವಾಸಿಯಾಗಿದೆ.

  • ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ – ಸೆಲ್ಫಿ ವೀಡಿಯೋ ವೈರಲ್

    ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ – ಸೆಲ್ಫಿ ವೀಡಿಯೋ ವೈರಲ್

    ಬೀದರ್: ಉಕ್ರೇನ್‍ನ ಮೆಟ್ರೋದಲ್ಲಿ ಸಿಲುಕಿಕೊಂಡಿರುವ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲ್ಫಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋ ಮಾಡಿ ಮೆಟ್ರೋದಲ್ಲಿ ಸೇಫಾಗಿರುವ ಕನ್ನಡಗರನ್ನು ತೋರಿಸಿದ್ದಾರೆ. ನಾವೆಲ್ಲ ಮೆಟ್ರೋದಲ್ಲಿ ಸೇಫಾಗಿ ಇದ್ದು ಪೋಷಕರು, ಸ್ನೇಹಿತರು, ಸಂಬಂಧಿಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ದೇಶದಲ್ಲಿ ಸಿಲುಕಿದ ಹಾವೇರಿಯ 9 ವೈದ್ಯಕೀಯ ವಿದ್ಯಾರ್ಥಿಗಳು – ಪೋಷಕರಲ್ಲಿ ಆತಂಕ

    Bidar

    ಎಂಬ್ಯೇಸಿ ಮತ್ತು ಉಕ್ರೇನ್ ಸರ್ಕಾರ ನಮ್ಮ ಜೊತೆಗೆ ಇದೆ. ನಿಮ್ಮ ಮೆಸೇಜಿಗೆ ನಾನು ರಿಪ್ಲೇ ಮಾಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಂಟರ್​ನೆಟ್ ಹಾಗೂ ಬ್ಯಾಟರಿ ಚಾರ್ಜ್ ಇಲ್ಲ. ಜೊತೆಗೆ ಹತ್ತಿರದ ಮೆಟ್ರೋ ಸ್ಟೇಷನ್‍ಗೆ ಹೋಗಿ ಸೇಫಾಗಿರಿ ಎಂದು ಭಾರತ ಸರ್ಕಾರ ಹೇಳಿದೆ ಎಂದು ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋದಲ್ಲಿ ಹೇಳಿದ್ದಾರೆ.  ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?