Tag: Ukraine

  • ಭಾರತಕ್ಕೆ ಆದಷ್ಟು ಬೇಗ ಕರೆಸಿಕೊಳ್ಳುವಂತೆ ವಿದ್ಯಾರ್ಥಿನಿ ಮನವಿ

    ಭಾರತಕ್ಕೆ ಆದಷ್ಟು ಬೇಗ ಕರೆಸಿಕೊಳ್ಳುವಂತೆ ವಿದ್ಯಾರ್ಥಿನಿ ಮನವಿ

    ಮಡಿಕೇರಿ: ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಉಕ್ರೇನ್ ದೇಶ ನಲುಗಿ ಹೋಗುತ್ತಿದ್ದರೆ ಇತ್ತ ಕರ್ನಾಟಕದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ವಿದ್ಯಾರ್ಥಿಗಳು ಸಿಲುಕಿ ನರಳುವಂತಾಗಿದೆ.

    ರಷ್ಯಾ ಗಡಿಯಿಂದ ಕೇವಲ 30 ಕಿಲೋ ಮೀಟರ್ ದೂರದಲ್ಲಿ ಪಶ್ಚಿಮ ಉಕ್ರೇನ್‍ನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮಲ್ಲೇನಹಳ್ಳಿಯ ರಮೇಶ್ ಮತ್ತು ಸವಿತಾ ದಂಪತಿ ಮಗಳು ಅಕ್ಷಿತಾ ಅಕ್ಕಮ್ಮ ಸಿಲುಕಿದ್ದಾರೆ. ಅಕ್ಷಿತಾ ಉಕ್ರೇನ್‍ನ ಕಾರ್ಕಿವ್‍ನ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಅಕ್ಷಿತಾ ಅಕ್ಕಮ್ಮ ವೀಡಿಯೋ ಮೂಲಕವಾಗಿ ವಾಪಾಸ್ ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಪಶ್ಚಿಮ ಕಾರ್ಕಿವ್‍ನಿಂದ ರುಮೇನಿಯಾ ಗಡಿಗೆ 1500 ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದು, ಅಲ್ಲಿಗೆ ಯಾವುದೇ ಸಾರಿಗೆ ಸಂಪರ್ಕ ಇಲ್ಲದಿರುವುದು ಭಾರತಕ್ಕೆ ವಾಪಸ್ ಬರುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.  ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ರಷ್ಯಾ ಸಿಡಿಸುತ್ತಿರುವ ಬಾಂಬ್ ಮತ್ತು ಮಿಸಲ್ ಸ್ಫೋಟಗಳ ಶಬ್ಧ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕೇಳುತ್ತಿದ್ದು, ಅಕ್ಷಿತಾ ತೀವ್ರ ಆತಂಕಕ್ಕೆ ಒಳಗಾಗಿದ್ದಾಳೆ. ಮಿಷಲ್‌ಗಳ ಶಬ್ಧ ಕೇಳುತ್ತಿದ್ದಂತೆ ಜೀವಭಯದಿಂದ ಗ್ರೌಂಡ್ ಫ್ಲೋರ್‌ಗಳಿಗೆ ಹೋಗಿ ರಕ್ಷಣೆ ಪಡೆಯುತ್ತಿದ್ದೇವೆ. ಹೊರಗಡೆ ಎಲ್ಲಿಯೂ ಹೋಗುವಂತಿಲ್ಲ, ಇನ್ನೊಂದೆರಡು ದಿನಗಳಿಗಷ್ಟೆ ಆಗುವಷ್ಟು ಆಹಾರ ಪದಾರ್ಥಗಳಿದ್ದು ಆ ಬಳಿಕ ಏನು ಎನ್ನುವ ಆತಂಕವಿದೆ. ದಯಮಾಡಿ ಭಾರತ ಸರ್ಕಾರ ನಮ್ಮನ್ನು ಆದಷ್ಟು ಬೇಗ ವಾಪಸ್ ಕರೆದುಕೊಂಡು ಹೋಗಲಿ ಎಂದು ಅಕ್ಷಿತಾ ಅಕ್ಕಮ್ಮ ಮನವಿ ಮಾಡಿದ್ದಾಳೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಮಗಳ ಮನವಿ ಮಾಡುತ್ತಿರುವ ಸ್ಥಿತಿಯನ್ನು ನೋಡಿದ ಅವರ ತಂದೆ ರಮೇಶ್ ಮತ್ತು ತಾಯಿ ಸವಿತಾ ಕಣ್ಣೀರು ಹಾಕಿದ್ದಾರೆ. ನಮ್ಮ ಮಗಳು ಇರುವ ಸ್ವಲ್ಪ ದೂರದಲ್ಲೇ ಬಾಂಬ್‌ಗಳು ಸಿಡಿಸುತ್ತಿರುವ ಶಬ್ಧ ಕೇಳುತ್ತಿದ್ದು, ನಮ್ಮ ಮಕ್ಕಳನ್ನು ವಾಪಸ್ ಕರೆತರುವುದು ತಡವಾದಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ದಯಮಾಡಿ ಆದಷ್ಟು ಬೇಗ ನಮ್ಮ ಮಗಳು ಸೇರಿದಂತೆ ಅಲ್ಲಿ ಸಿಲುಕಿರುವ ಭಾರತೀಯನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.

    ಫೆಬ್ರವರಿ 26 ರಂದು ಮಗಳು ದೇಶಕ್ಕೆ ವಾಪಸ್ ಬರುವುದಕ್ಕೆ ಫ್ಲೈಟ್ ಬುಕ್ ಆಗಿತ್ತು. ಆದರೆ ಕಾಲೇಜಿನಲ್ಲಿ ಸರಿಯಾದ ಮಾಹಿತಿ ನೀಡದೇ ಇದ್ದಿದ್ದರಿಂದ ಮಗಳು ಬರುವುದು ಕ್ಯಾನ್ಸಲ್ ಆಯಿತು. ಕಳೆದ 9 ತಿಂಗಳ ಹಿಂದೆ ಮಗಳು ಊರಿಗೆ ಬಂದಿದ್ದಳು ಎಂದು ತಂದೆತಾಯಿಗಳು ಕಣ್ಣೀರು ಹಾಕಿದ್ದಾರೆ. ಹೀಗೆ ಸಮಸ್ಯೆ ಆಗುತ್ತದೆ ಎಂದು ಗೊತ್ತಾಗಿದ್ದರೆ ಯಾವುದೇ ಕಾರಣಕ್ಕೂ ನಾವು ಅಲ್ಲಿ ಮೆಡಿಕಲ್ ಓದುವುದಕ್ಕೆ ಕಳುಹಿಸುತ್ತಿರಲಿಲ್ಲ ಎಂದಿದ್ದಾರೆ.

  • Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಕೀವ್: ರಷ್ಯಾ, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸುತ್ತಿದೆ. ಈ ನಡುವೆ ರಷ್ಯಾದ ಮಿಲಿಟರಿ ಪಡೆಯ ಯುದ್ಧ ಟ್ಯಾಂಕ್ ಮತ್ತು ವಾಹನಗಳ ಮೇಲಿರುವ ಝಡ್ (Z) ಮಾರ್ಕ್ ತೀವ್ರ ಚರ್ಚೆಗೆ ಕಾರಣವಾಗಿದೆ.

    ಏನಿದು Z ಮಾರ್ಕ್
    ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೂರನೇ ದಿನವಾದ ಇಂದು ಉಕ್ರೇನ್‍ನ ಕೀವ್ ನಗರದಲ್ಲಿ ಕ್ಷಿಪಣಿ, ಬಾಂಬ್‍ಗಳ ಸುರಿಮಳೆಗೈದಿದೆ. ಈ ಎಲ್ಲದರ ನಡುವೆ ರಷ್ಯಾದ ಯುದ್ಧ ಟ್ಯಾಂಕರ್, ಬಂಕರ್ ಮತ್ತು ಎಲ್ಲಾ ಯುದ್ಧೋಪಕರಣಗಳ ಮೇಲೆ Z ಮಾರ್ಕ್ ಒಂದು ಎಲ್ಲರ ಗಮನಸೆಳೆಯುತ್ತಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಸಾಮಾಜಿಕ ಜಾಲತಾಣಗಳಲ್ಲೂ ಕೂಡ Z ಮಾರ್ಕ್‍ನ ಟ್ಯಾಂಕರ್‌ಗಳ ವೀಡಿಯೋ ವೈರಲ್ ಆಗುತ್ತಿದೆ. ಆದರೆ ಈ ಮಾರ್ಕಿಂಗ್ ಬಗ್ಗೆ ರಷ್ಯಾ ಆರ್ಮಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಅಲ್ಲದೇ ಈ Z ಅಕ್ಷರ ರಷ್ಯಾದ ವರ್ಣಮಾಲೆಗಲಲ್ಲೂ ಇಲ್ಲ ಇದು ಸಿರಿಲಿಕ್ ಲಿಪಿಯಾಗಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

    ಈ ಮಾರ್ಕಿಂಗ್ ಬಗ್ಗೆ ಇದೀಗ ಎಲ್ಲಡೆ ಮಾತುಕತೆ ಆರಂಭವಾಗಿದ್ದು, ರಕ್ಷಣಾ ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ಸೇನೆಯ ಸೈನಿಕರು ಮತ್ತು ಯುದ್ಧ ಉಪಕರಣಗಳ ವ್ಯತ್ಯಾಸಕ್ಕಾಗಿ ಈ ಚಿಹ್ನೆ ಬಳಸಲಾಗುತ್ತಿದೆ. ಈ ಎರಡು ದೇಶಗಳ ಮಿಲಿಟರಿ ಪಡೆ ಟ್ಯಾಂಕ್‍ಗಳು ಒಂದೇ ರೀತಿ ಇರುವುದರಿಂದ ರಷ್ಯಾ ಈ ರೀತಿ ಮಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ರಷ್ಯಾದ ಬಲಿಷ್ಠ ಯುದ್ಧ ಟ್ಯಾಂಕರ್ T-72 ತದ್ರೂಪಿಯಾಗಿ ಉಕ್ರೇನ್‍ನ ಯುದ್ಧ ಟ್ಯಾಂಕರ್ T-80 ಇದೆ. ಈ ಎಲ್ಲಾ ಕಾರಣಗಳನ್ನು ಮನಗಂಡು ರಷ್ಯಾ ತನ್ನ ಯುದ್ಧೋಪಕರಣಗಳಿಗೆ Z ಮಾರ್ಕ್ ಮಾಡಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಉಕ್ರೇನ್‍ನ ಬಹುಮಹಡಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – ಭೀಕರ ದೃಶ್ಯ ವೈರಲ್

    ಈ ಹಿಂದೆ 1944ರಲ್ಲಿ ನಾರ್ಮಂಡಿ ವಶ ಪಡೆಯುವ ವೇಳೆ ಮಿತ್ರ ರಾಷ್ಟ್ರಗಳಿಗೆ ತಿಳಿಯಲೆಂದು ಅಮೆರಿಕ ತನ್ನ ಸೇನಾ ವಾಹನಗಳ ಮೇಲೆ ಕಪ್ಪು ಮತ್ತು ಬಿಳಿ ಪಟ್ಟಿಗಳನ್ನು ಹಾಕಿಕೊಂಡಿತ್ತು.

  • ಉಕ್ರೇನ್ ಬಂಕರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಉಕ್ರೇನ್ ಬಂಕರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದು, ವಿಶ್ವದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಮನೆಯನ್ನು ಕಳೆದುಕೊಂಡು ಇರಲು ಜಾಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ಮಧ್ಯೆ ಮಹಿಳೆಯೊಬ್ಬರು ಬಂಕರ್‌ನಲ್ಲಿ ಮಗುವಿಗೆ ಜನ್ಮವನ್ನು ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    23 ವರ್ಷದ ಅಮೀದ್ ಚವ್ಸ್ ರಷ್ಯಾ ದಾಳಿಗೆ ಹೆದರಿ ಮೆಟ್ರೋ ಸ್ಟೇಶನ್ ಸಿಟಿ ಬಳಿ ಇರುವ ಬಂಕರ್‌ನಲ್ಲಿ ಅಡಗಿ ಕುಳಿತಿದ್ದರು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆಯ ಕಿರುಚಾಟವನ್ನು ಕೇಳಿ ಉಕ್ರೇನ್ ಪೊಲೀಸರು ಸಹಾಯ ಬಂದಿದ್ದಾರೆ. ಆಗ ವೈದ್ಯರು ಬಂಕರ್‌ನಲ್ಲಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

    ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ರಷ್ಯಾ ಸೇನೆ ಮತ್ತು ಕ್ಷಿಪಣಿಗಳು ಉಕ್ರೇನ್ ಮೇಲೆ ದಾಳಿ ನಡೆಸಿತು. ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಯೂರೋಪ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಉಕ್ರೇನ್ ಮೇಲೆ ಸತತ ಮೂರನೇ ದಿನವೂ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‍ನಲ್ಲಿ ಈವರೆಗೆ 198 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ರಷ್ಯಾ ಸೇನಾ ಪಡೆ ಉಕ್ರೇನ್ ರಾಜಧಾನಿ ಕೀವ್ ಪ್ರವೇಶಿಸಿದ್ದು, ಬೃಹತ್ ಕಟ್ಟಡಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‌ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್‍ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಕೀವ್ ತೊರೆಯುವಂತೆ ಅಮೆರಿಕ ಝೆಲೆಸ್ಕಿಗೆ ಸಲಹೆ ನೀಡಿತ್ತು. ಆದರೆ ದೊಡ್ಡಣ್ಣನ ಸಲಹೆಯನ್ನು ಉಕ್ರೇನ್ ಅಧ್ಯಕ್ಷ ಧಿಕ್ಕರಿಸಿದ್ದಾರೆ. ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗ್ಯಾವ ಜೀವ ಭಯ ಇಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

  • ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ಸಂಪರ್ಕ ಸಿಗದೇ ಪಾಲಕರು ಕಂಗಾಲು

    ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ಸಂಪರ್ಕ ಸಿಗದೇ ಪಾಲಕರು ಕಂಗಾಲು

    ಧಾರವಾಡ: ಉಕ್ರೇನ್‍ನಲ್ಲಿ ಧಾರವಾಡದ ಮತ್ತೋರ್ವ ವಿದ್ಯಾರ್ಥಿನಿ ಸಿಲುಕಿಕೊಂಡಿದ್ದು ಸಂಪರ್ಕಕ್ಕೆ ಸಿಗದೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಮೆಹಬೂಬ ನಗರದ ಫೌಜಿಯಾ ಮುಲ್ಲಾ ಉಕ್ರೇನ್‍ದಲ್ಲಿ ಸಿಲುಕಿದ ವಿದ್ಯಾರ್ಥಿನಿ. ಧಾರವಾಡದಲ್ಲಿ ಇರುವ ಈ ವಿದ್ಯಾರ್ಥಿನಿಯ ಕುಟುಂಬದವರು ಸತತವಾಗಿ ವಿದ್ಯಾರ್ಥಿನಿಗೆ ಸಂಪರ್ಕ ಮಾಡುತ್ತಿದ್ದಾರೆ. ಆದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ನಿನ್ನೆ ಕರೆ ಮಾಡಿದ್ದ ಫೌಜಿಯಾ, ಆರಾಮಾಗಿ ಇದ್ದೇವೆ. ರಾಯಭಾರಿ ಕಚೇರಿ ಸಂಪರ್ಕದಲ್ಲಿದ್ದೇವೆ ಎಂದಿದ್ದಳು.

    ರಾಯಭಾರ ಕಚೇರಿ ನಿನ್ನೆ ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಹೇಳಿತ್ತು. ಆದರೆ ಫೌಜಿಯಾ ನಿನ್ನೆ ಸಂಜೆ ಮಾಡಿದ್ದ ಕರೆಯೇ ಕೊನೆಯದಾಗಿರುವುದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಫೌಜಿಯಾ ತಂದೆ ಮಹಮ್ಮದ್ ಇಸಾಕ್ ಅವರು, ನಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು, ನಮ್ಮ ರಾಜ್ಯದ ಅನೇಕರು ಫೌಜಿಯಾ ಅವಳ ಜೊತೆಯಲ್ಲಿದ್ದಾರಂತೆ ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ಟರ್ನಾಪಿಲ್ ನಗರದಲ್ಲಿ ಸಿಲುಕಿರುವ ಯುವತಿ ಬಳಿ 8 ದಿನಕ್ಕೆ ಆಗುವಷ್ಟು ಆಹಾರ ಇದೆ ಎಂದು ಮಾಹಿತಿ ನೀಡಿದ ಅವರು, ಡಿಸೆಂಬರ್‍ಲ್ಲಿ ಅವಳು ಉಕ್ರೇನ್‍ಗೆ ಹೋಗಿದ್ದಳು. ವಾಪಸ್ ಬರಲು ಕತಾರ ಏರಲೈನ್ಸ್‍ಗೆ ಟಿಕೆಟ್ ಸಹ ಬುಕ್ ಮಾಡಿದ್ದಳು ಎಂದು ಹೇಳಿದರು. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

  • ರಷ್ಯಾ ಮಾಧ್ಯಮಗಳ ಜಾಹೀರಾತಿಗೆ ನಿರ್ಬಂಧ  ಹೇರಿದ ಫೇಸ್‍ಬುಕ್

    ರಷ್ಯಾ ಮಾಧ್ಯಮಗಳ ಜಾಹೀರಾತಿಗೆ ನಿರ್ಬಂಧ ಹೇರಿದ ಫೇಸ್‍ಬುಕ್

    ವಾಷಿಂಗ್ಟನ್: ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರಿಸಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧ ಸಂಘರ್ಷ ವಿಶ್ವದಲ್ಲೇ ಭಾರಿ ಆತಂಕವನ್ನುಂಟು ಮಾಡಿದೆ. ಇದರ ನಡವಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಣ ಸಂಪಾದಿಸುವ ರಷ್ಯಾದ ಮಾಧ್ಯಮಗಳಿಗೆ ಫೇಸ್‍ಬುಕ್ ನಿರ್ಬಂಧ ವಿಧಿಸಿದೆ.

    ನಿನ್ನೆ ರಷ್ಯಾದ ನಾಲ್ಕು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ವಿಚಾರದ ಸ್ವತಂತ್ರ ಫ್ಯಾಕ್ಟ್ ಚೆಕ್ ಮತ್ತು ಲೇಬಲ್ ಹಾಕುವುದನ್ನು ನಿಲ್ಲಿಸುವಂತೆ ರಷ್ಯಾದ ಅಧಿಕಾರಿಗಳು ನಮಗೆ ಆದೇಶಿಸಿದರು. ಅದನ್ನು ನಾವು ನಿರಾಕರಿಸಿದ್ದೇವೆ ಎಂದು ಫೇಸ್‍ಬುಕ್‍ನ ಮಾತೃ ಸಂಸ್ಥೆ ಮೆಟಾದ ನಿಕ್ ಕ್ಲೆಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ನಾವು ಈಗ ರಷ್ಯಾದ ಮಾಧ್ಯಮಗಳು ವಿಶ್ವದ ಯಾವುದೇ ಭಾಗದಲ್ಲಿ ನಮ್ಮ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು ನಿಷೇಧಿಸುತ್ತಿದ್ದೇವೆ. ಫೇಸ್‍ಬುಕ್ ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಿಗೆ ಲೇಬಲ್ ಹಾಕುವುದನ್ನು ಮುಂದುವರಿಸುತ್ತದೆ ಎಂದು ಫೇಸ್‍ಬುಕ್‍ನ ಭದ್ರತಾ ನೀತಿ ವಿಭಾಗ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನೆಲೆಗಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ನೆಟ್‍ವರ್ಕ್‍ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕೆಲವೊಮ್ಮೆ ತಪ್ಪುದಾರಿಗೆಳೆಯುವ ಮಾಹಿತಿ ಕೂಡ ಕಂಡುಬರುತ್ತಿದೆ. ದಶಕಗಳಲ್ಲಿ ತಲೆದೋರಿರುವ ಯುರೋಪಿನ ಅತಿದೊಡ್ಡ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ಗುರುತಿಸುವತ್ತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ಸಂಘರ್ಷದ ನೈಜ-ಸಮಯದ ಮೇಲ್ವಿಚಾರಣೆ ಕೂಡ ಮಾಡುತ್ತಿವೆ. ಇದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ರಷ್ಯಾದ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ, ಫೇಸ್‍ಬುಕ್ ಬಳಕೆಯನ್ನು ಸೀಮಿತಗೊಳಿಸಲಾಗುತ್ತಿದೆ. ಉಕ್ರೇನ್‍ನಲ್ಲಿ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷಕ್ಕೆ ಪ್ರತಿಕ್ರಿಯೆಯಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಫೇಸ್‍ಬುಕ್ ವಿಶೇಷ ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಿದೆ ಎಂದು ಗ್ಲೀಚರ್ ಹೇಳಿದ್ದಾರೆ. ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

    ಉಕ್ರೇನ್ ರಾಜಧಾನಿ ಕಿವ್‍ನಲ್ಲಿ ಇಂಟರ್‌ನೆಟ್‌ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಮೂರನೇ ದಿನವಾಗಿದೆ. ಇದು ಯುದ್ಧದಿಂದಾಗ ಪರಿಣಾಮವೋ, ಸೈಬರ್ ಸಮಸ್ಯೆಯೋ, ಬೇಕಂತಲೇ ಆಗಿದ್ದೋ ಎಂಬುದು ಇನ್ನೂ ಗೊತ್ತಾಗಿಲ್ಲ.

  • ಉಕ್ರೇನ್‍ನ ಬಹುಮಹಡಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – ಭೀಕರ ದೃಶ್ಯ ವೈರಲ್

    ಉಕ್ರೇನ್‍ನ ಬಹುಮಹಡಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – ಭೀಕರ ದೃಶ್ಯ ವೈರಲ್

    ಕೀವ್‌: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತನ್ನ ಹಿಡಿತವನ್ನು ಬಲಗೊಳಿಸುತ್ತಿದೆ. ಇಂದು ಉಕ್ರೇನ್‍ನ ಬಹುಮಹಡಿ ಕಟ್ಟಡ ಒಂದಕ್ಕೆ ಕ್ಷಿಪಣಿ ದಾಳಿ ನಡೆಸಿ ನಾಶ ಪಡಿಸಿದೆ.

    ಉಕ್ರೇನ್‍ನ ಕೀವ್‌ ನಗರದಲ್ಲಿರುವ ಜನ ವಸತಿ ಇದ್ದ ಬಹುಮಹಡಿ ಕಟ್ಟಡಕ್ಕೆ ರಷ್ಯಾದ ಮಿಲಿಟರಿ ಪಡೆ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಕಟ್ಟಡಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. 6A ಲೋಬೊನವ್ಸ್ಕಿ ಅವೆನ್ಯೂ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ ಕಟ್ಟಡದ ಒಂದು ಭಾಗ ದ್ವಂಸವಾಗಿದ್ದು, ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ದಾಳಿ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಕ್ರೇನ್ ಸಚಿವಾಲಯದ ಅಧಿಕಾರಿ, ಕ್ಷಿಪಣಿ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ. ಕಟ್ಟಡದ ನೆಲಮಹಡಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಕಟ್ಟಡದಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಿ ಸ್ಥಳಾಂತರಿಸಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಈ ಮೊದಲು ಕೈವಾದ ಜುಲಿಯಾನಿ ವಿಮಾನ ನಿಲ್ದಾಣದ ಪಕ್ಕ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಈಗಾಗಲೇ ಉಕ್ರೇನ್‍ನ ಹಲವು ಪ್ರದೇಶಗಳನ್ನು ರಷ್ಯಾ ಮಿಲಿಟರಿ ಪಡೆ ಸುತ್ತುವರಿದಿದ್ದು, ಅಲ್ಲಲ್ಲಿ ಬಾಂಬ್‍ಗಳ ದಾಳಿ ನಡೆಯುತ್ತಿದೆ.

  • ಉಕ್ರೇನ್‍ನಲ್ಲಿ ಊಟಕ್ಕಾಗಿ ಭಾರತೀಯರ ಪರದಾಟ, ಕುಡಿಯಲೂ ಸಿಗ್ತಿಲ್ಲ ನೀರು..!

    ಉಕ್ರೇನ್‍ನಲ್ಲಿ ಊಟಕ್ಕಾಗಿ ಭಾರತೀಯರ ಪರದಾಟ, ಕುಡಿಯಲೂ ಸಿಗ್ತಿಲ್ಲ ನೀರು..!

    ಹುಬ್ಬಳ್ಳಿ: ಉಕ್ರೇನ್‍ನಲ್ಲಿ ಊಟಕ್ಕಾಗಿ ಭಾರತೀಯರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೆ ಕುಡಿಯಲು ನೀರು ಕೂಡ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಕನ್ನಡಿಗರು ಕಣ್ಣೀರು ಹಾಕುತ್ತಾ ಕೈಮುಗಿದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಉಕ್ರೇನ್ ನಲ್ಲಿ ಸಿಲುಕಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನಾಝಿಲಾ ಅವರ ತಾಯಿ ನೂರ್ ಜಹಾನ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಮಗಳ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ಸರ್ಕಾರ ಆದಷ್ಟು ಬೇಗ ನಮ್ಮ ಮಕ್ಕಳನ್ನ ಸುರಕ್ಷಿತವಾಗಿ ಕರೆತರಲಿ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ


    ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಇದೇ 9 ರಂದು ಹುಬ್ಬಳ್ಳಿಯ ಶಾಂತಿನಗರದ ನಿವಾಸಿ ನಾಝಿಲಾ ಉಕ್ರೇನ್‍ಗೆ ತೆರಳಿದ್ದರು. ಅಲ್ಲಿಗೆ ತೆರಳಿದ ಬಳಿಕ ನಾಝಿಲಾ ಅವರು ಕುಟುಂಬದ ಜೊತೆಗೆ ಕಳೆದೆರಡು ದಿನಗಳಿಂದ ಸಂಪರ್ಕದಲ್ಲಿದ್ದರು. ಆದರೆ ನಿನ್ನೆ 2 ಗಂಟೆಯಿಂದ ಸಂಪರ್ಕ ಕಡಿತಗೊಂಡಿದ್ದು, ಇದರಿಂದಾಗಿ ಕುಟುಂಬಕ್ಕೆ ದಿಕ್ಕು ದೋಚದಂತಾಗಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ಉಕ್ರೇನ್‍ನಲ್ಲಿ ಇಂಟರ್ನೆಟ್ ಸಮಸ್ಯೆಯಿಂದ ಸಂಪರ್ಕ ಕಡಿತವಾಗಿದೆ. ಹೀಗಾಗಿ ಮಗಳ ಜೊತೆಗೆ ಸಂಪರ್ಕ ಸಿಗದ ಕಾರಣ ಕುಟುಂಬ ಆತಂಕಕ್ಕೀಡಾಗಿದೆ.

  • ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ಕೀವ್‌: ರಷ್ಯಾ ದಾಳಿಗೆ ಉಕ್ರೇನ್ ತತ್ತರಗೊಂಡಿದ್ದು, ಬಾಂಬ್ ದಾಳಿ ವೇಳೆ ತಂದೆ-ತಾಯಿಯನ್ನು ಕಳೆದುಕೊಂಡ ಬಾಲಕನೊಬ್ಬನ ಆಕ್ರಂದನ ನಡು ಬೀದಿಯಲ್ಲೇ ಮುಗಿಲು ಮುಟ್ಟಿರುವ ಮನಕಲಕುವ ವೀಡಿಯೋವೊಂದು ವೈರಲ್ ಆಗಿದೆ.

    ರಷ್ಯಾ ಉಕ್ರೇನ್ ಮೇಲೆ ಎಲ್ಲಾ ಕಡೆ ದಾಳಿ ನಡೆಸುತ್ತಿದೆ. ಜನವಸತಿ ಪ್ರದೇಶದ ಮೇಲೆ ಫೈಟರ್ ಜೆಟ್‍ಗಳ ಬಾಂಬ್ ದಾಳಿಯಾಗುತ್ತಿದೆ. ಜನರು ತಮ್ಮ ಬಂಧು ಬಳಗವನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಬಾಂಬ್ ಸ್ಫೋಟದಲ್ಲಿ ಧೈರ್ಯ ತುಂಬುತ್ತಿದ್ದ ಪೋಷಕರನ್ನೇ ಕಳೆದುಕೊಂಡ ಬಾಲಕ ಗೋಳಾಟ ನಡೆಸುತ್ತಿದ್ದಾನೆ. ಆದರೆ ಅಲ್ಲಿರುವವರ್ಯಾರು ಆತನನ್ನು ಸಮಾಧಾನ ಪಡಿಸಲು ಜನರಿಲ್ಲದ ಪರಿಸ್ಥಿತಿಯಲ್ಲದ ಸ್ಥಿತಿಯಲ್ಲಿದ್ದಾರೆ. ಜನರು ಯಾವಾಗ ಎಲ್ಲಿ ಬಾಂಬ್ ದಾಳಿ ಉಂಟಾಗುತ್ತದೆ ಎನ್ನುವ ಭೀತಿಯಲ್ಲಿದ್ದಾರೆ.

    ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‍ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್‍ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಕೀವ್ ತೊರೆಯುವಂತೆ ಅಮೆರಿಕ ಝೆಲೆನ್‍ಸ್ಕಿಗೆ ಸಲಹೆ ನೀಡಿತ್ತು. ಆದರೆ ದೊಡ್ಡಣ್ಣನ ಸಲಹೆಯನ್ನು ಉಕ್ರೇನ್ ಅಧ್ಯಕ್ಷ ಧಿಕ್ಕರಿಸಿದ್ದಾರೆ. ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗ್ಯಾವ ಜೀವ ಭಯ ಇಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

  • ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

    ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

    ಬೆಳಗಾವಿ: ಉಕ್ರೇನ್‌ನಲ್ಲಿ ಬೆಳಗಾವಿ ಯೋಧರೊಬ್ಬರ ಪುತ್ರಿ ಸಿಲುಕಿಕೊಂಡು ಪರದಾಡುತ್ತಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಮಗಳನ್ನ ರಕ್ಷಿಸುವಂತೆ ಪ್ರಧಾನಿ ಮೋದಿಗೆ ಯೋಧ ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಗೋಕಾಕ ಫಾಲ್ಸ್‌ನ ನಿವಾಸಿ ರಜೀಯಾ ಬಾಗಿ ಉಕ್ರೇನ್‍ನಲ್ಲಿ ಎಂಬಿಬಿಎಸ್ ದ್ವೀತಿಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಕ್ರೇನಿನಲ್ಲಿ ಸಿಲುಕಿರುವ ಮಗಳನ್ನು ರಕ್ಷಿಸುವಂತೆ ಪ್ರಧಾನಿಗೆ ಸೈನಿಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ವಿದ್ಯಾರ್ಥಿನಿ ರಜೀಯಾ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕು. ಉಕ್ರೇನ್ ಬಾರ್ಡರ್ ಕ್ರಾಸ್ ಆಗೋವರೆಗೂ ಏನಾದರೂ ಪರ್ಯಾಯ ವ್ಯವಸ್ಥೆ ಕಲ್ಪಸಬೇಕು. ಸದ್ಯ ನಮಗೆ ನೀರು, ಆಹಾರ ಸರಬರಾಜು ಆಗುತ್ತಿಲ್ಲ. ದಯವಿಟ್ಟು ನಮ್ಮನ್ನು ಕಾಪಾಡವಂತೆ ವಿದ್ಯಾರ್ಥಿನಿ ತನ್ನ ತಂದೆಗೆ ಕಳಿಸಿರೋ ವೀಡಿಯೋ ಸಂದೇಶದಲ್ಲಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ರಜೀಯಾ ತಂದೆ ಯಾಸಿನ ಬಾಗಿ ಅವರು ಭಾರತೀಯ ಸೇನೆಯಲ್ಲಿ ಸಿಆರ್ ಪಿಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೇ ನೀಡಿದ ಯಾಸಿನ್, ಎರಡು ದಿನಗಳಿಂದ ಮಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಗಳು ಎರಡು ದಿನಗಳ ಕಾಲ ಸಂಪರ್ಕಕ್ಕೆ ಸಿಕ್ಕಿದ್ದಳು. ಬಳಿಕ ಸಂಪರ್ಕಕ್ಕೆ ಸಾಧ್ಯವಾಗಿಲ್ಲ. ರಜಿಯಾ ಇರೋ ಜಾಗದ ಬಳಿ ಬಾಂಬ್ ದಾಳಿಗಳು ನಡೆಯುತ್ತಿವೆ.

    ಫೈರಿಂಗ್ ಆಗುತ್ತಿದ್ದೆ ಸೈನಿಕರು ಓಡಾಡುತ್ತಿದ್ದರು ಎಂದು ಮಗಳು ತಿಳಿಸಿದ್ದಾಳೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ನೆರವಿಗೆ ಧಾವಿಸಬೇಕು. ವಿದ್ಯಾಭ್ಯಾಸಕ್ಕಾಗಿ ಹೋಗಿರೋ ಮಕ್ಕಳ ರಕ್ಷಣೆ ಮಾಡಬೇಕು ಎಂದು ಯಾಸಿನ ಬಾಗಿ ಮನವಿ ಮಾಡಿಕೊಂಡಿದ್ದಾರೆ.

  • ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಕೀವ್: ಉಕ್ರೇನ್ ಹಾಗೂ ರಷ್ಯಾ ಯುದ್ದ ಸಂಘರ್ಷ ವಿಶ್ವದಲ್ಲಿಯೇ ಭಾರಿ ಆತಂಕವನ್ನುಂಟು ಮಾಡಿದೆ. ಈ ಆತಂಕದ ನಡುವೆಯೇ ಹೊಸ ಜೀವನದ ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಇದೀಗ ದೇಶ ಸೇವೆಗಾಗಿ ಗನ್ ಹಿಡಿದಿದೆ.

    ಕೀವ್ ಸಿಟಿ ಕೌನ್ಸಿಲ್‍ನ ಡೆಪ್ಯೂಟಿ ಆಗಿರುವ 21 ವರ್ಷದ ಅರಿವಾ, ಸಾಫ್ಟ್ವೇರ್‌ ಎಂಜಿನಿಯರ್ ಆಗಿರುವ ಫರ್ಸಿನ್ ಅವರನ್ನು ವಿವಾಹವಾಗಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‍ನ ಕಲ್ಯಾಣ ಮಂಟಪವೊಂದರಲ್ಲಿ  ಈ ಜೋಡಿ, ನಿನ್ನೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಇಂದು ದೇಶ ಸೇವೆಗೆ ಗನ್‌ ಹಿಡಿದು ಹೋರಾಡುತ್ತಿದ್ದಾರೆ.

    ಯಾರಿನಾ ಅರಿವಾ ಮತ್ತು ಆಕೆಯ ಸಂಗಾತಿ ಸ್ವ್ಯಾಟೋಸ್ಲಾವ್ ಫರ್ಸಿನ್ ಮೇ ತಿಂಗಳಲ್ಲಿ ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ರೆಸ್ಟೋರೆಂಟ್‍ವೊಂದರಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿರುವ ಪರಿಣಾಮ ಅವರು ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಯುದ್ಧದ ನಡುವೆಯೇ ಅವರು ಅವಸರದಲ್ಲಿ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ

    ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್ ಯುದ್ಧದ ನೆಲೆಯಾಗಿ ಮಾರ್ಪಟ್ಟಿದೆ. ಎಲ್ಲೆಡೆ ಗುಂಡು, ಕ್ಷಿಪಣಿ, ಬಾಂಬ್‍ಗಳ ಸದ್ದು ಕೇಳುತ್ತಿದೆ. ಜನ ಪ್ರಾಣಭೀತಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಎಷ್ಟೋ ಮಂದಿ ವಿದೇಶಿಗರು ತಮ್ಮ ತವರುಗಳಿಗೆ ಕಾಲ್ಕಿತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲೂ ಜೋಡಿಯೊಂದು ನಿರಾತಂಕವಾಗಿ ಮದುವೆ ಸಮಾರಂಭ ಏರ್ಪಡಿಸಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಣ್ಣಲ್ಲಿ ನೀರು ತರಿಸುತ್ತಿದೆ 80 ವರ್ಷದ ವ್ಯಕ್ತಿ ಉಕ್ರೇನ್ ಸೇನೆಗೆ ಸೇರಲು ನಿಂತಿರುವ ಫೋಟೋ!

    ರಷ್ಯಾ ಪಡೆಗಳು ಈಗಾಗಲೇ ಉಕ್ರೇನ್ ದೇಶದಲ್ಲಿ ಕಾಣಿಸಿಕೊಂಡಿವೆ. ಉಕ್ರೇನ್‍ನಲ್ಲಿ ಈಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಭವಿಷ್ಯ ಹೇಗಿರುತ್ತದೋ ಗೊತ್ತಿಲ್ಲ. ನಾವಿಬ್ಬರು ಈಗಲೇ ಮದುವೆಯಾಗೋಣ ಎಂದು ಯಾರಿನಾ ಅರಿವಾ ಮತ್ತು ಸ್ವ್ಯಾಟೋಸ್ಲಾವ್ ಫರ್ಸಿನ್ ಜೋಡಿ ನಿರ್ಧರಿಸಿ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಉಕ್ರೇನ್ ನಗರಗಳಿಂದ ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ರಸ್ತೆಗಳು ಮತ್ತು ಸುರಂಗ ಮಾರ್ಗಗಳಲ್ಲಿ ಜನರು ಉಸಿರುಗಟ್ಟಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶಗಳು ಈ ಜೋಡಿ ತರಾತುರಿಯಲ್ಲಿ ಮದುವೆಯಾಗಲು ಕಾರಣವಾಯಿತು.

    ಈ ಸಂದರ್ಭ ತುಂಬಾ ಭಯಾನಕವಾಗಿದೆ. ಆದರೂ ಪ್ರತಿಯೊಬ್ಬರ ಬದುಕಿನಲ್ಲೂ ಇದು ಸಂತೋಷದ ಕ್ಷಣ. ನಾವು ಹೊರಗೆ ಹೋದರೆ ಗುಂಡು ಸೈರನ್ ಶಬ್ದಗಳನ್ನು ಕೇಳುತ್ತೇವೆ. ನಮ್ಮ ಭೂಮಿಗಾಗಿ ಹೋರಾಡುವ ಕ್ಷಣವಿದು. ಈ ಸಂದರ್ಭದಲ್ಲಿ ನಾವು ಸಾಯಲೂಬಹುದು. ಅದೆಲ್ಲಕ್ಕಿಂತ ಮೊದಲು ನಾವು ಒಟ್ಟಿಗೆ ಇರಲು ಬಯಸಿದ್ದೇವೆ ಎಂದು ಅರಿವಾ ಪ್ರತಿಕ್ರಿಯಿಸಿದ್ದಾರೆ.