ಮೂರು ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗದೆ ಇರುವ ವಿದ್ಯಾರ್ಥಿ ಶಾರುಖ್ ಅವರನ್ನು ಸಂಪರ್ಕ ಮಾಡಿ ತೊಂದರೆಯಲ್ಲಿ ಸಿಲುಕಿದ್ದೀರಾ ಎಂದು ಕೇಳಿದ್ದಾರೆ. ಬಳಿಕ ಶಾರುಖ್ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ನಾವು ಉಕ್ರೇನ್ ಗಡಿಭಾಗವನ್ನು ದಾಟಿ ಬರುತ್ತಿದ್ದೇವೆ. ಯಾರು ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗೆ ಶಾರುಖ್ ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
ಮಗ ಸಂಪರ್ಕಕ್ಕೆ ಸಿಕ್ಕಿ ಮಾತಾನಾಡಿರುವುದರಿಂದ ಸ್ಪಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಅಗಿದೆ ಎಂದು ಪೋಷಕರು ತಿಳಿಸಿದ್ದಾರೆ.
ಮಾಸ್ಕೋ: ಉಕ್ರೇನ್ ಮೇಲಿನ ದಾಳಿಯನ್ನು ವಿಶ್ವದ ಇತರ ದೇಶಗಳು ಮಾತ್ರವಲ್ಲದೇ ರಷ್ಯಾ ಕೂಡಾ ವಿರೋಧಿಸುತ್ತಿದೆ. ಯುದ್ಧ ಘೋಷಿಸಿದ ದೇಶದ ಒಳಗಿನವರೇ ಅಧ್ಯಕ್ಷನ ವಿರುದ್ಧ ಟೀಕೆ ಮಾಡಿದ್ದಾರೆ. ರಷ್ಯಾದ ಸಾಮಾನ್ಯ ಜನರು, ಕ್ರೀಡಾ ಪಟುಗಳು ಸೆಲೆಬ್ರಿಟಿಗಳು ಎನ್ನದೇ ಬಹುತೇಕ ಜನರು ಯುದ್ಧ ಬೇಡ ಎಂದೇ ಹೇಳಿದ್ದಾರೆ.
ರಷ್ಯಾದ ಮಾಸ್ಕೋ ಮೂಲದ ಉದ್ಯಮಿ ಅಲೆಕ್ಸ್ ಕೋನನಿಖಿನ್ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಪುಟಿನ್ ಅವರನ್ನು ರಷ್ಯಾದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸಿದ ಅಧಿಕಾರಿಗೆ ನಾನು 10 ಲಕ್ಷ ಡಾಲರ್(7.5 ಕೋಟಿ ರೂ.) ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ
ಪುಟಿನ್ ರಷ್ಯಾದ ಅಧ್ಯಕ್ಷನಲ್ಲ. ಅವರು ವಿಶೇಷ ಕಾರ್ಯಾಚರಣೆಯ ಭಾಗವಾಗಿ ರಷ್ಯಾದಲ್ಲಿ ಅನೇಕ ಅಪಾರ್ಟ್‍ಮೆಂಟ್ ಹಾಗೂ ಕಟ್ಟಡಗಳನ್ನು ಧ್ವಂಸ ಮಾಡಿದ್ದಾರೆ. ಇದಾದ ಬಳಿಕ ಚುನಾವಣೆಗಳನ್ನೂ ನಡೆಸಿಲ್ಲ. ಸಂವಿಧಾನವನ್ನು ಹಾಳುಮಾಡಿದ್ದಾರೆ. ತಮ್ಮ ವಿರೋಧಿಗಳನ್ನೂ ಕೊಂದಿದ್ದಾರೆ ಎಂದು ಬರೆದಿದ್ದಾರೆ.
ಕೀವ್: ಉಕ್ರೇನ್ ಪ್ರಜೆಗಳು ರಷ್ಯಾದ ಟ್ಯಾಂಕ್ ವಶಕ್ಕೆ ತೆಗೆದುಕೊಂಡು ಜಾಲಿ ರೈಡ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದೆ.
ಉಕ್ರೇನಿನಲ್ಲಿ ವಾಸಿಸುವ ಪುರುಷರ ಗುಂಪು ಹಿಮಾದಿಂದ ಕೂಡಿದ್ದ ರಸ್ತೆಯಲ್ಲಿ ಸಂತೋಷವಾಗಿ ತಾವು ವಶಕ್ಕೆ ಪಡೆದುಕೊಂಡಿದ್ದ ರಷ್ಯಾದ ಟ್ಯಾಂಕ್‍ನಲ್ಲಿ ಜಾಲಿರೈಡ್ ಮಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಇದೀಗ ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೇ ಈ ವೀಡಿಯೋ ಸಖತ್ ವೈರಲ್ ಸಹ ಆಗಿದೆ. ಇದನ್ನೂ ಓದಿ: ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ
ಈ ವೀಡಿಯೋ 24-ಸೆಕೆಂಡ್ ಇದ್ದು, ವೀಡಿಯೋದಲ್ಲಿ ಪ್ರಜೆಗಳ ಗುಂಪು ಹೆಚ್ಚಿನ ವೇಗದ ರಷ್ಯಾದ ಟ್ಯಾಂಕ್ ಓಡಿಸಿಕೊಂಡು ಅವರ ಮೇಲೆ ಕುಳಿತು ಸವಾರಿ ಮಾಡಿದ್ದಾರೆ. ಟ್ಯಾಂಕ್ ಸವಾರಿ ನಮಗೆ ಖುಷಿ ತರುತ್ತಿದೆ ಎಂದು ಹರ್ಷೋದ್ಗಾರವನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ರೈಡ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಫೋನ್‍ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ್ದಾನೆ. ಈ ವೀಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ ಕೊನೆಗೂ ನಾವು ಸಾಧಿಸಿದ್ವಿ. ‘ಉಕ್ರೇನ್‍ಗೆ ವೈಭವ ಮರಳಿದೆ’ ಎಂದು ಫೋಷಣೆಯನ್ನು ಕೂಗುತ್ತ ರೈಡ್ ಎಂಜಯ್ ಮಾಡುತ್ತಿರುವುದನ್ನು ನಾವು ರೆಕಾರ್ಡ್ ಮಾಡಲಾಗಿದೆ. ಈ ನಡುವೆ ವೀಡಿಯೋ ಮಾಡುತ್ತಿದ್ದ ವ್ಯಕ್ತಿ ತನ್ನ ಇತರ ಗೆಳೆಯರನ್ನು ನಕ್ಕು ಹುರಿದುಂಬಿಸುತ್ತಿರುವುದನ್ನು ನಾವು ಗಮನಿಸಬಹುದು.
ಖಾರ್ಕಿವ್‍ನಲ್ಲಿ ಹಿಮದಿಂದ ಆವೃತವಾದ ಮೈದಾನದಲ್ಲಿ ಸಂಚರಿಸುತ್ತಿರುವ ಮಿಲಿಟರಿ ವಾಹನವನ್ನು ಡೈಲಿ ಮೇಲ್‍ನ ಟಿ-80ಬಿವಿಎಂ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕ್ ಎಂದು ಗುರುತಿಸಲಾಗಿದೆ.
ಹಲವಾರು ಉಕ್ರೇನಿಯನ್ನರು, ರಷ್ಯಾದ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ತ್ಯಜಿಸುವ ವೀಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಯುದ್ಧದಿಂದ ಸೆರೆಹಿಡಿಯಲ್ಪಟ್ಟ ಅಥವಾ ಯುದ್ಧದಿಂದ ಓಡಿಹೋದ ಸೈನಿಕರು ಇವುಗಳನ್ನು ಬಿಟ್ಟುಹೋದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ!
ಉಕ್ರೇನ್‍ನಲ್ಲಿ ಯುದ್ಧದಲ್ಲಿ ಹೋರಾಡುತ್ತಿರುವ ರಷ್ಯಾದ ಸೈನಿಕರು ಅಸ್ತವ್ಯಸ್ತರಾಗಿದ್ದಾರೆ. ‘ಎಲ್ಲರ ಮೇಲೆ ಗುಂಡು ಹಾರಿಸಲು’ ಹೇಳಿದಾಗ ಅವರು ಅಳುತ್ತಿದ್ದಾರೆ ಎಂದು ನಿನ್ನೆ ಪೆಂಟಗನ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತ್ತು.
ಧಾರವಾಡ: ಯುದ್ಧ ಮನುಕುಲದ ಶತ್ರು, ಸದ್ಯ ಯುದ್ಧ ನಡೆಯುತ್ತಿರುವದು ದುರದೃಷ್ಟಕರ ಸಂಗತಿ ಎಂದು ಧಾರವಾಡದ ಮಹಾಮನೆ ಮಠದ ಬಸವಾನಂದ ಶ್ರೀ ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ, ಉಕ್ರೇನ್ ಯುದ್ಧ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನಲ್ಲಿ ಹಣ, ಶಸಾಸ್ತ್ರ ಜಾಸ್ತಿ ಆದಾಗ ಯುದ್ಧ ಆಗಿಯೇ ಆಗುತ್ತವೆ, ಯುದ್ಧಗಳು ನಡೆಯಬಾರದು ಎನ್ನುವುದು ಎಲ್ಲರ ಅಪೇಕ್ಷೆ. ಯಾವ ಯಾವುದೋ ನೆಪದಲ್ಲಿ ಯುದ್ಧಗಳು ನಡೆಯುತ್ತಲೇ ಇರುತ್ತವೆ, ಇದೀಗ ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಆದಷ್ಟು ಬೇಗ ನಿಲ್ಲಲಿ. ವಿಶ್ವ ಸಂಸ್ಥೆ ಯುದ್ಧದ ವಿಚಾರವಾಗಿ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದರು. ಇದನ್ನೂ ಓದಿ: ನಮ್ಮ ಮಕ್ಕಳು ಎಲ್ಲಿದ್ದಾರೆಂಬ ಮಾಹಿತಿಯಾದರೂ ಕೊಡಿ: ಐಡಾ ಮೆಲ್ವಿನ್ ಕಣ್ಣೀರು
ಉಕ್ರೇನ್‍ನಲ್ಲಿ ಅನೇಕ ವಿದ್ಯಾರ್ಥಿಗಳು ಸಿಳುಕಿಕೊಂಡಿದ್ದಾರೆ, ಅವರನ್ನು ಮತ್ತೆ ತಾಯ್ನಾಡಿಗೆ ಮತ್ತೆ ಕರೆ ತರಲು ಭಾರತ ಸರ್ಕಾರ ಒಳ್ಳೆ ವ್ಯವಸ್ಥೆ ಮಾಡಿದೆ. ಕೆಲದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಸರ್ಕಾರ ಸಿದ್ಧವಿತ್ತು, ಆದರೆ ಯುದ್ಧ ಆಗುತ್ತೋ, ಇಲ್ಲವೋ ಅನ್ನೋ ಗೊಂದಲವಿತ್ತು. ಹಾಗಾಗಿ ಸ್ವಲ್ಪ ಹಿಂಜರಿದು ಬಿಟ್ಟರು. ಅಲ್ಲಿ ಓದಲು ಹೋದ ಕರ್ನಾಟಕದ ಹುಡುಗ ಜೀವ ಕಳೆದುಕೊಂಡಿದ್ದಾನೆ ಇದು ನೋವಿನ ಸಂಗತಿ. ಇದೀಗ ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆ ತರಲಿ. ಈ ನಷ್ಟ, ಜೀವ ಹಾನಿ ಬೇಗ ನಿಲ್ಲುವಂತಾಗಲಿ ಎಂದು ನುಡಿದರು. ಇದನ್ನೂ ಓದಿ: ಹೂ ತಗೊಂಡು ನಾವೇನು ಮಾಡ್ಬೇಕು- ಕೇಂದ್ರದ ವಿರುದ್ಧ ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳು ಗರಂ
ಜೈಲಿನಲ್ಲಿರುವ ಕ್ರೆಮ್ಲಿನ್ ವಿಮರ್ಶಕ ಹಾಗೂ ವಿಪಕ್ಷ ನಾಯಕ ಅಲೆಕ್ಸಿ ನಾವೆಲ್ನಿ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ. ಪುಟಿನ್ ಅವರನ್ನು ʼನಿಸ್ಸಂಶಯವಾಗಿ ಹುಚ್ಚು ತ್ಸಾರ್ʼ ಎಂದು ಕರೆದಿರುವ ನಾವೆಲ್ನಿ, ರಷ್ಯನ್ನರು ಯುದ್ಧವನ್ನು ಬೆಂಬಲಿಸುವುದಿಲ್ಲ ಎಂದು ಜಗತ್ತಿಗೆ ಹೇಳಬೇಕು ಎಂದು ಕರೆ ನೀಡಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನ್ ಮೇಲೆ ತಮ್ಮ ದಾಳಿಯನ್ನು ವಿಸ್ತರಿಸುತ್ತಿರುವಂತೆ, ಬ್ಯಾಕ್ ಹೋಮ್ ಪ್ರದರ್ಶನಕಾರರು ಯುದ್ಧವನ್ನು ಖಂಡಿಸುವ ಪೋಸ್ಟರ್‌ಗಳನ್ನು ಹಿಡಿದು ‘ಯುದ್ಧ ಬೇಡ’ ಎಂದು ಘೋಷಣೆ ಕೂಗುತ್ತಾ ನಗರಗಳಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ. ಸ್ವತಂತ್ರ ಮೇಲ್ವಿಚಾರಣಾ ಗ್ರೂಪ್ OVD-ಇನ್ಫೋ ಪ್ರಕಾರ, ರಷ್ಯಾದಲ್ಲಿ ಒಟ್ಟು 7,000 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ
ಪುಟಿನ್ ಅವರ ವಿರೋಧಿಗಳಲ್ಲಿ ಪ್ರಮುಖರಾದ ನಾವೆಲ್ನಿ ಅವರು ಜರ್ಮನಿಯಿಂದ ಹಿಂದಿರುಗಿದ ನಂತರ ಕಳೆದ ವರ್ಷ ಜೈಲಿನಲ್ಲಿದ್ದಾರೆ. ಶಾಂತಿ ಸ್ಥಾಪನೆಗಾಗಿ ನಾವು ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ಪುಟಿನ್ ವಿರುದ್ಧ ರಷ್ಯನ್ನರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪುಟಿನ್ ನಡೆಗೆ ರಷ್ಯಾ ತಾರಾಗಣ, ಕ್ರೀಡಾಪಟುಗಳು, ಚಿಂತಕರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ
ನಾನು ಯುಎಸ್‌ಎಸ್‌ಆರ್‌ನವನು. ನಾನು ಹುಟ್ಟಿದ್ದೇ ಇಲ್ಲಿ. ಬಾಲ್ಯದಿಂದಲೂ ಈ ನೆಲದಲ್ಲಿ ಆಡಿ ಬೆಳೆದಿದ್ದೇನೆ. ಶಾಂತಿಗಾಗಿ ಬೀದಿಗಿಳಿದು ಹೋರಾಡಲು ಕರೆ ನೀಡುತ್ತೇನೆ. ಆದರೆ ಪುಟಿನ್ ರಷ್ಯಾದವನಲ್ಲ ಎಂದು ನಾವೆಲ್ನಿ ತಿಳಿಸಿದ್ದಾರೆ.
ಬೀದರ್ : ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ನವೀನ್ ಸಾವಿನ ಬೆನ್ನಲ್ಲೇ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದ್ದು ಬೀದರ್ ಮೂಲದ ಶಶಾಂಕ್ ಹಾಗೂ ವಿವೇಕ್ ಇನ್ನೂ ಖಾರ್ಕಿವ್‍ನಲ್ಲೇ ಸಿಲುಕಿರುವುದು ಆತಂಕಕ್ಕೆ ಕಾರಣವಾಗಿದೆ.
ಆತಂಕದಲ್ಲಿ ನಿನ್ನೆ ಖಾರ್ಕಿವ್‍ನಿಂದ ರೈಲ್ವೆ ಸ್ಟೇಷನ್‍ಗೆ ಹೋಗಿ ರೈಲು ಸಿಗದ ಕಾರಣ ಅಲ್ಲಿಂದ ಖಾರ್ಕಿವ್‍ನ ಪಿಶೋಚಿನ್‍ಗೆ ನಡೆದುಕೊಂಡು ಹೋಗಿ ತಂಗಿದ್ದಾರೆ. ಕ್ಷಿಪಣಿ, ಮಿಸೈಲ್ ಗಳ ಸ್ಫೋಟ, ಟ್ಯಾಂಕರ್ ಸದ್ದಿನ ನಡುವೆ ಜೀವ ಭಯದಲ್ಲಿಯೇ 40 ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಾ ವಿದ್ಯಾರ್ಥಿಗಳು ಪಿಶೋಚಿನ್ ನಗರ ತಲುಪಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
ಕೀವ್: ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿ ವಾರವೇ ಕಳೆದಿದೆ. ಯುದ್ಧ ಸಾರಿದ ದೇಶವೇ 7,000 ಯೋಧರನ್ನು ಕಳೆದುಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.
ರಷ್ಯಾ ಪಡೆ ಉಕ್ರೇನ್ ಪ್ರಮುಖ ನಗರಗಳನ್ನು ವಷಕ್ಕೆ ಪಡೆದುಕೊಂಡಿದ್ದರೂ ಅವರು ದಿಕ್ಕು ದೆಸೆ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಇದೀಗ ನಾವು ಅವರಿಗೆ ತಿರುಗೇಟು ನೀಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!
President Volodymyr Zelensky of Ukraine portrayed invading Russian troops as directionless, even as Russia captured the city of Kherson.
ನಾವು ಕೇವಲ 1 ವಾರದಲ್ಲಿ ಶತ್ರುಗಳ ಯೋಜನೆಯನ್ನು ಬುಡಮೇಲು ಮಾಡಿದ್ದೇವೆ. ನಮ್ಮದೇ ಜನರ ಮೇಲೆ ವಿಷ ಬೀಜ ಬಿತ್ತಿ ದೇಶದ ವಿರುದ್ಧ ನಿಲ್ಲುವಂತೆ ರಷ್ಯಾ ಮಾಡಿತ್ತು. ನಮ್ಮ ಜನರಲ್ಲಿ ಸಹೃದಯತೆ ಹಾಗೂ ಸ್ವತಂತ್ರತೆಗಳೆಂಬ ಎರಡು ವಿಚಾರಗಳಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ
ನಾವೀಗ ರಷ್ಯಾದ ಸೈನಿಕರನ್ನು ನಿಯಂತ್ರಿಸುತ್ತಿದ್ದೇವೆ. ಭದ್ರತಾ ಪಡೆ, ಸಿಬ್ಬಂದಿ, ಸ್ಥಳೀಯರು ಎಲ್ಲರೂ ಸೇರಿ ಅವರನ್ನು ಸೆರೆ ಹಿಡಿದು ಅವರಿಗೆ ನಾವು ತಿರುಗೇಟು ನೀಡುತ್ತಿದ್ದೇವೆ. ಅವರು ಏಕೆ ಇಲ್ಲಿದ್ದಾರೆ ಎಂಬ ಬಗ್ಗೆ ಗೊಂದಲ ಹೊಂದಿದ್ದಾರೆ. ಅವರು ಸಂಖ್ಯೆಯಲ್ಲಿ ನಮಗಿಂತ 10 ಪಟ್ಟು ಹೆಚ್ಚಿದ್ದರೂ ಅವರಲ್ಲಿ ಶಕ್ತಿಯಿಲ್ಲ ಎಂದು ಝೆಲೆನ್ಸ್ಕಿ ರಷ್ಯಾದ ಯೋಧರನ್ನು ವ್ಯಂಗ್ಯ ಮಾಡಿದ್ದಾರೆ.
ಉಡುಪಿ: ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ನಮಗೆ ಮ್ಯಾಕ್ಲಿನ್ ಫೋನ್ ಮಾಡಿದ್ದೇ ಕಡೆ. ಆನಂತರ ಯಾವುದೇ ಸಂದೇಶ ಬಂದಿಲ್ಲ. 24 ಗಂಟೆ ನಂತರ ಸಂಪರ್ಕ ಮಾಡುವುದಾಗಿ ಹೇಳಿದ್ದಾರೆ. ಖಾರ್ಕೀವ್ ನಲ್ಲಿ ಇರುವ 40 ಜನ ವಿದ್ಯಾರ್ಥಿಗಳ ಗುಂಪು ಎಲ್ಲಿದೆ, ಹೇಗಿದೆ ಎಂಬ ಮಾಹಿತಿಯಾದರೂ ಕೊಡಿ ಉಡುಪಿಯ ಮೆಲ್ವಿನ್ ಮತ್ತು ಐಡಾ ದಂಪತಿ ಕಣ್ಣೀರಿಟ್ಟು ವಿನಂತಿ ಮಾಡಿದ್ದಾರೆ.
ಉಡುಪಿಯ ಕೆಮ್ಮಣ್ಣು ನಿವಾಸಿ ಮೆಲ್ವಿನ್ ರೊಡ್ರಿಗಸ್ ಮತ್ತು ಐಡಾ ದಂಪತಿ ಪುತ್ರ ಗ್ಲೆನ್ವಿಲ್ ಮ್ಯಾಕ್ಲಿನ್ ರೋಡ್ರೀಗಸ್ ಉಕ್ರೇನಲ್ಲಿ ಎಂಬಿಬಿಎಸ್ ಮಾಡುತ್ತಿದ್ದು, ರಷ್ಯಾ ದಾಳಿಗೆ ಸಿಲುಕಿದ್ದಾರೆ. ಸುಮಾರು 40 ವಿದ್ಯಾರ್ಥಿಗಳ ಗುಂಪು ಖಾರ್ಕಿವ್ ಹಾಸ್ಟೆಲ್ ನಿಂದ ಸುಮಾರು 30 ಕಿಲೋಮೀಟರ್ ನಡೆದುಕೊಂಡು ಹೋಗಿ ಖಾರ್ಕಿವ್ ಪಟ್ಟಣದ ವ್ಯಾಪ್ತಿಯಿಂದ ಹೊರಗೆ ಇದ್ದಾರೆ.
ಹಾಸ್ಟೆಲ್‍ನಿಂದ ಎಂಟು ಕಿಲೋಮೀಟರ್ ದೂರದಲ್ಲಿ ರೈಲ್ವೆ ಸ್ಟೇಷನ್ ಇದೆ. ರಾಯಬಾರಿ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ ಯಾವುದೇ ಲಗೇಜುಗಳನ್ನು ತೆಗೆದುಕೊಂಡು ಹೋಗಬಾರದು. ಕೇವಲ ಒರಿಜಿನಲ್ ಡಾಕ್ಯುಮೆಂಟ್ ಮಾತ್ರ ತೆಗೆದುಕೊಂಡು ಹೋಗಬೇಕು ಎಂಬ ಸೂಚನೆ ಬಂದಿದೆ. ಒಂದು ಬ್ಯಾಗ್‍ನ ಜೊತೆ ಮ್ಯಾಕ್ಲಿನ್ ಹಾಸ್ಟೆಲಿನಿಂದ ಹೊರಟು ಹೋಗಿದ್ದಾರೆ ಎಂದು ತಂದೆ ಮೆಲ್ವಿನ್ ರೋಡ್ರೀಗಸ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
ಖಾರ್ಕೀವ್ ಪಟ್ಟಣದಿಂದ ಸುಮಾರು 1500 ಕಿಲೋಮೀಟರ್ ದೂರ ಸಂಚಾರ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಫೋನ್ ನೆಟ್‍ವರ್ಕ್ ಸಿಗುವುದಿಲ್ಲ. 24 ಗಂಟೆಯ ನಂತರ ಸಂಪರ್ಕಿಸುತ್ತೇನೆ ಎಂದು ಮ್ಯಾಕ್ಲಿನ್ ಗ್ಲೆನ್ವಿಲ್ ಫೆರ್ನಾಂಡೀಸ್ ಹೇಳಿದ್ದಾನೆ. ಉಕ್ರೇನ್‍ನ ಲಿವ್ಯೂ ಪ್ರದೇಶಕ್ಕೆ ಬಂದು ತಲುಪಿದ ನಂತರ ಅಲ್ಲಿ ರಾಯಭಾರಿ ಕಚೇರಿ ಅಧಿಕಾರಿಗಳು ಉಕ್ರೇನ್ ಗಡಿ ದಾಟಿಸುತ್ತಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ
ರೈಲು ಲಿವ್ಯೂ ಪ್ರದೇಶಕ್ಕೆ ತಲುಪಿ, ಅಲ್ಲಿಂದ ಏರ್‍ಲಿಫ್ಟ್ ಆದರೆ ಎರಡು ದಿನಗಳ ಒಳಗೆ ಮ್ಯಾಕ್ಲಿನ್ ಉಡುಪಿಗೆ ತಲುಪಬಹುದು. ಅಲ್ಲಿಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ ಯಾವುದನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಂಡಿಯನ್ ಕಂಟ್ರೋಲ್ ರೂಮ್, ಡಿಸಿ ಕಚೇರಿಯಿಂದ ಮಾಹಿತಿ ಬರುತ್ತಿದೆ. ಶಿಫ್ಟ್ ಮಾಡುವ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರ ನೋಡಿಕೊಳ್ಳುವುದಾಗಿ ನಮಗೆ ಭರವಸೆ ನೀಡಿದೆ. ದೆಹಲಿ ಗೆ ಬಂದು ಅಲ್ಲಿಂದ ಮುಂಬೈ ಮೂಲಕ ಉಡುಪಿಗೆ ಕಳುಹಿಸಬಹುದು ಅಥವಾ ಡೆಲ್ಲಿ ಇಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮ್ಯಾಕ್ಲಿನ್ ನಮಗೇ ಧೈರ್ಯ ತುಂಬಿಸುತ್ತಿದ್ದಾನೆ. ಎಲ್ಲರೂ ಸೇಫ್ ಆಗಿದ್ದಾರೆ ಎಂದು ಮೆಲ್ವಿನ್ ಹೇಳಿದರು.
ತಾಯಿ ಐಡಾ ರೋಡ್ರೀಗಸ್ ಮಾತನಾಡಿ, ಹಾಸ್ಟೆಲ್ನಲ್ಲಿ ಮತ್ತು ಸೂಪರ್ ಬಜಾರ್ ಗಳಲ್ಲಿ ಸ್ಟಾಕ್ ಗಳು ಖಾಲಿ ಆಗುತ್ತಿರುವುದರಿಂದ ಬೇಕಾದಷ್ಟು ಆಹಾರ ಸಿಗುತ್ತಿಲ್ಲ. ಎರಡು ದಿನ ಉಪ್ಪಿಟ್ಟು ಮಾತ್ರ ತಿಂದು ದಿನ ಕಳೆದಿದ್ದಾರೆ. ಚಾಕಲೇಟು ಬ್ರೆಡ್ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಸಿಕ್ಕಿದ್ದನ್ನು ತಿಂದು ಜೀವ ಉಳಿಸುತ್ತಿದ್ದೇವೆ ಎಂದು ಮಗ ಹೇಳಿರುವುದನ್ನು ನೆನಪಿಸಿಕೊಂಡು ಐಡಾ ರೋಡ್ರೀಗಸ್ ಕಣ್ಣೀರಿಟ್ಟರು. ತಮ್ಮ ಬಂಕರ್ ನಲ್ಲಿ ಭಾರತದ 42ಜನ ವಿದ್ಯಾರ್ಥಿಗಳು ಸಿಲುಕಿದ್ದಾರೆ ಪಕ್ಕದ ಬಂಕರ್ ಗಳ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲ. ಇದನ್ನೂ ಓದಿ: ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಹಾಸ್ಟೆಲ್ ಬಿಲ್ಡಿಂಗ್‍ನ ಕೆಳ ಅಂತಸ್ತಿನಲ್ಲಿ ಸದ್ಯ ಉಳಿದುಕೊಂಡಿದ್ದ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನ ಕೊಠಡಿಗಳಿಗೆ ಬಿಡುತ್ತಿಲ್ಲ. ಕಳೆದ ಎರಡು ದಿನಗಳಿಂದ ಸುತ್ತಮುತ್ತ ವಿಪರೀತ ದಾಳಿ ಆಗುತ್ತಿರುವುದರಿಂದ ವಿದ್ಯಾರ್ಥಿಗಳು ಲಿವ್ಯೂ ತಲುಪಿದ ನಂತರ ಯಾವ ದೇಶದ ಗಡಿಯ ಮೂಲಕ ಏರ್ಲಿಫ್ಟ್ ಮಾಡುತ್ತಾರೆ ಎಂಬ ಬಗ್ಗೆ ಅವನಿಗೂ ಮಾಹಿತಿ ಇಲ್ಲ. ನಮ್ಮ ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯಾದರು ಕೊಡಿ ಎಂದು ಮೆಲ್ವಿಲ್ ಐಡಾ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.
ಮುಂಬೈ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಬಾಲಿವುಡ್ ನಟ ಸೋನು ಸೂದ್ ಮುಂದಾಗಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ. ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ನಡುವೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ನಟ ಸೋನು ಸೂದ್ ಆಪತ್ಭಂದವನಂತೆ ಅನೇಕ ವಿದ್ಯಾರ್ಥಿಗಳನ್ನು ರಕ್ಷಿಸಲು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನೂ ಹಲವಾರು ವಿದ್ಯಾರ್ಥಿಗಳು ಸೋನು ಸೂದ್ ಚಾರಿಟಿ ಸಂಸ್ಥೆಯಿಂದ ಸಹಾಯ ಪಡೆದಿರುವ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸುರಕ್ಷಿತವಾಗಿ ಮನೆಗೆ ತೆರಳಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ
ಈ ಮುನ್ನ ಕೋವಿಡ್-19 ಲಾಕ್‍ಡೌನ್ ವೇಳೆ ವಲಸಿಗರಿಗೆ ತಮ್ಮ ಮನೆಗಳಿಗೆ ತೆರಳಲು ಸಹಾಯ ಮಾಡುವ ಮೂಲಕ ಸೋನುಸೂದ್ ಪ್ರಶಂಸೆ ಪಡೆದಿದ್ದರು. ಇದೀಗ ಯುದ್ಧ ಪೀಡಿತ ಉಕ್ರೇನ್‍ನ ಖಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ತಲುಪಲು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವ ಸೋನು ಸೂದ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
That’s my job.
I am glad that I was able to do my bit,
Big thank you to Government of India for all the support.
Jai hind ???????? https://t.co/KWhf7R4pP9
ಇದೇ ವಿಚಾರವಾಗಿ ಈ ಮುನ್ನ ಸೋನು ಸೂದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಸ್ಥಳೀಯ ಟ್ಯಾಕ್ಸಿಗಳನ್ನು ವಿದ್ಯಾರ್ಥಿಗಳಿರುವ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರನ್ನು ಖಾರ್ಕಿವ್‍ನ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಅವರನ್ನು ರೈಲಿನಲ್ಲಿ ಎಲ್ವಿವ್ ನಗರದ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗುತ್ತದೆ. ಅವರನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಉಕ್ರೇನ್‍ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಈ ಕಠಿಣ ಸಮಯದಲ್ಲಿ ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳನ್ನು ಗಡಿ ದಾಟಿ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದೇವೆ. ಹೀಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರೋಣ, ಅವರಿಗೆ ನಮ್ಮ ಅವಶ್ಯಕತೆ ಇದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿಯೊಬ್ಬರು ಸೋನು ಸೂದ್ ಸಹಾಯ ಕುರಿತಂತೆ ವೀಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸೋನು ಸುದ್ ಅವರು, ಅದು ನನ್ನ ಕೆಲಸ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಇದರಿಂದ ನನಗೆ ಸಂತಸವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ, ಭಾರತ ಸರ್ಕಾರದಕ್ಕೆ ದೊಡ್ಡ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪೋಲೆಂಡ್‍ನಿಂದ ವಿಶೇಷ ವಿಮಾನದ ಮೂಲಕ ಹಿಂದಿರುಗಿದ ಉಕ್ರೇನ್‍ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಬುಕಾರೆಸ್ಟ್‌ನಿಂದ ಬಂದ 218 ನಾಗರಿಕರನ್ನು ಪ್ರಾದೇಶಿಕ ಭಾಷೆಗಳಲ್ಲಿಯೇ ಮಾತನಾಡುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ.
ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ. ನಿಮ್ಮನ್ನು ಸುರಕ್ಷಿತವಾಗಿ ಇಲ್ಲಿಗೆ ಕರೆ ತಂದಿರುವ ವಿಮಾನ ಸಿಬ್ಬಂದಿಗೆ ಧನ್ಯವಾದ ಹೇಳೋಣ ಎಂದು ಅವರು ವಿಶೇಷ ಇಂಡಿಗೋ ವಿಮಾನದ ಸಾರ್ವಜನಿಕ ವಿಳಾಸ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
Grateful to our airline crew and pilots for their service and support to Government’s efforts in bringing our citizens back home. #OperationGangapic.twitter.com/Q9uUcRP0uA
ನಮ್ಮ ನಾಗರಿಕರನ್ನು ಮರಳಿ ಮನೆಗೆ ಕರೆತರುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಪ್ರಯತ್ನಗಳಿಗೆ ಅವರ ಸೇವೆ ಮತ್ತು ಬೆಂಬಲಕ್ಕಾಗಿ ನಮ್ಮ ವಿಮಾನಯಾನ ಸಿಬ್ಬಂದಿ ಮತ್ತು ಪೈಲಟ್‍ಗಳಿಗೆ ನಾನು ಕೃತಜ್ಞಳಾಗಿದ್ದೇನೆ ಎಂದರು. ಇದರ ಮಧ್ಯೆ ಉಕ್ರೇನ್‍ನಲ್ಲಿ ಸಿಲುಕಿರುವ 183 ಭಾರತೀಯರನ್ನು ಹೊತ್ತ ಬುಕಾರೆಸ್ಟ್‌ನಿಂದ ಮತ್ತೊಂದು ವಿಮಾನ ಗುರುವಾರ ಬೆಳಗ್ಗೆ ಮುಂಬೈಗೆ ಬಂದಿಳಿದಿದೆ. ಬುಕಾರೆಸ್ಟ್‌ನಿಂದ ಮುಂಬೈಗೆ ಮೂರನೇ ಸ್ಥಳಾಂತರಿಸುವ ವಿಮಾನದ ಪ್ರಯಾಣಿಕರನ್ನು ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಸ್ವಾಗತಿಸಿದರು. ಇದನ್ನೂ ಓದಿ: ನಿಮ್ಮ ಒಂದು ಮತದಿಂದ ಯುಪಿ ದೇಶದ ನಂ.1 ಆರ್ಥಿಕತೆ ರಾಜ್ಯವಾಗುತ್ತೆ: ಯೋಗಿ ಆದಿತ್ಯನಾಥ್
ಇಲ್ಲಿಯವರೆಗೆ ಸುಮಾರು ನಾಲ್ಕರಿಂದ ಐದು ಸಾವಿರ ಭಾರತೀಯರನ್ನು ಮನೆಗೆ ಕರೆತರಲಾಗಿದೆ. ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆಯು ಉಕ್ರೇನ್ ಮತ್ತು ನೆರೆಯ ದೇಶಗಳಲ್ಲಿ ಇನ್ನೂ ಸಿಲುಕಿರುವವರನ್ನು ಮರಳಿ ಕರೆತರುವುದನ್ನು ಮುಂದುವರಿಸುತ್ತದೆ.