Tag: Ukraine

  • ಉಕ್ರೇನ್‍ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದು: ಎನ್‍ಎಂಸಿ

    ನವದೆಹಲಿ: ಉಕ್ರೇನ್‍ನಿಂದ ಬಂದಿರುವ ವಿದೇಶಿ ವೈದ್ಯಕೀಯ ಪದವೀದರರು (Foreign Medical Graduates) ಭಾರತದಲ್ಲಿ ಇಂಟರ್ನ್‌ಶಿಪ್ (internships) ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ  ನ್ಯಾಷನಲ್‌ ಮೆಡಿಕಲ್‌ ಕಮಿಷನ್‌  (NMC) ತಿಳಿಸಿದೆ.

    ಭಾರತದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಅರ್ಜಿ ಸಲ್ಲಿಸ ಬಹುದಾಗಿದೆ. ಅಭ್ಯರ್ಥಿಗಳು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆಗ ರಾಜ್ಯ ವೈದ್ಯಕೀಯ ಕೌನ್ಸಿಲ್‍ಗಳು ಪರಿಗಣಿಸುತ್ತದೆ. ಕೊರೊನಾ, ಯುದ್ಧ ಮುಂತಾದ ಕಾರಣಗಳಿಂದ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವ ಕೆಲವು ವಿದೇಶಿ ವೈದ್ಯಕೀಯ ಪದವೀದರರು ಇದ್ದಾರೆ. ಅಂತಹ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‍ನ್ನು ಭಾರತದಲ್ಲಿ ಪೂರ್ಣಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುವುದು. ಇದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಎನ್‌ಎಂಸಿ ತಿಳಿಸಿದೆ. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್‍ನ್ನು ಸ್ಥಳೀಯವಾಗಿ ಖಾಸಗಿ ಕಾಲೇಜುಗಳಲ್ಲಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ರಾಷ್ಟೀಯ ಪರೀಕ್ಷಾ ಮಂಡಳಿ ನಡೆಸುವ ವಿದೇಶಿ ವೈದ್ಯಕೀಯ ಅರ್ಹತಾ ಪರೀಕ್ಷೆ(ಎಫ್‍ಎಂಜಿಇ)ಯನ್ನು ಅಭ್ಯರ್ಥಿಗಳು ಪೂರ್ಣಗೊಳಿಸಿರುವುದನ್ನು ರಾಜ್ಯ ವೈದ್ಯಕೀಯ ಕೌನ್ಸಿಲ್‍ಗಳು ಖಾತರಿ ಪಡಿಸಿಕೊಳ್ಳಬೇಕು. ಅಭ್ಯರ್ಥಿಯು ಎಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದರೆ 12 ತಿಂಗಳ ಇಂಟರ್ನ್‌ಶಿಪ್ ಅಥವಾ ಉಳಿದ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಎನ್‍ಎಂಸಿ ಹೇಳಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

  • ಮಜಾಟಾಕೀಸ್ ರಾಣಿಯ ಸ್ನೇಹಿತೆ ಉಕ್ರೇನ್ ನಲ್ಲಿ ಕಳೆದ 10 ದಿನಗಳು: ಶ್ವೇತಾ ಚೆಂಗಪ್ಪ ಬಿಚ್ಚಿಟ್ಟ ರಹಸ್ಯ

    ಮಜಾಟಾಕೀಸ್ ರಾಣಿಯ ಸ್ನೇಹಿತೆ ಉಕ್ರೇನ್ ನಲ್ಲಿ ಕಳೆದ 10 ದಿನಗಳು: ಶ್ವೇತಾ ಚೆಂಗಪ್ಪ ಬಿಚ್ಚಿಟ್ಟ ರಹಸ್ಯ

    ಜಾಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ ಅವರ ಫ್ಯಾಮಿಲಿಗೆ ತುಂಬಾ ಹತ್ತಿರವಾದ ಗೆಳತಿ ಸುಹಾನಿ ದಿವ್ಯ ಗಿರೀಶ್ ಉಕ್ರೇನ್ ನಲ್ಲಿ ಸಿಲುಕಿದ್ದರು. ಹೀಗಾಗಿ ಶ್ವೇತಾ ಕುಟುಂಬ ಆತಂಕದಲ್ಲಿತ್ತು. ಆದರೆ ಯುದ್ಧ ಪ್ರಾರಂಭವಾದ ೧೦ ದಿನಗಳ ನಂತರ ಸುಹಾನಿ ತಾಯ್ನಾಡಿಗೆ ಮರಳಿದ್ದು, ಇಡೀ ಕುಟುಂಬಕ್ಕೆ ಸಂತಸ ತಂದಿದೆ.

    ಉಕ್ರೇನ್ ನಿಂದ ಬಂದ ಗೆಳತಿಯ ಬಗ್ಗೆ ಶ್ವೇತಾ ಭಾವನಾತ್ಮಕವಾಗಿ ಬರೆದುಕೊಂಡಿದ್ದು, ನಮ್ಮ ಲಿಟಲ್ ಹನಿ ಸುಹಾನಿ ತಾಯ್ನಾಡಿಗೆ ಮತ್ತೆ ಮರಳಿದ್ದಾಳೆ. ಈ ೧೦ ದಿನಗಳಲ್ಲಿ ನಾವೆಲ್ಲರೂ ತುಂಬಾ ಆಘಾತ ಅನುಭವಿಸಿದ್ದೇವೆ. ಅದನ್ನು ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಕೊನೆಗೂ ನಮ್ಮ ಮನೆಯ ಭವಿಷ್ಯದ ಪುಟ್ಟ ಡಾಕ್ಟರ್ ತನ್ನ ಹೆತ್ತವರ ತೋಳುಗಳಿಗೆ ಮರಳಿದ್ದಾಳೆ. ನನ್ನ ಪ್ರಕಾರ ಸುಹಾನಿ ನೀನು ೧೯ ನೇ ವಯಸ್ಸಿನಲ್ಲಿಯೇ ನಿಜವಾದ ಯೋಧೆ. ನಿದ್ದೆಯಿಲ್ಲದ ರಾತ್ರಿಗಳು, ಫೋನ್ ಕರೆಗೂ ಸಿಗದೆ ನಿನ್ನ ಒದ್ದಾಟ. ಉದ್ವೇಗ, ಒತ್ತಡ, ಯುದ್ಧದ ಆತಂಕ ಎಲ್ಲವನ್ನು ನೆನಪಿಸಿಕೊಂಡರೆ ಈಗಲೂ ಭಯ ಆಗುತ್ತೆ ಎಂದಿದ್ದಾರೆ.  ಇದನ್ನೂ ಓದಿ: ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

     

    View this post on Instagram

     

    A post shared by Swetha Changappa (@swethachangappa)

    ಸುಹಾನಿ ಎಷ್ಟು ಕಿಲೋಮೀಟರ್ ನಡೆದಿದ್ದಾಳೆ. ಆಕೆಯ ಧೈರ್ಯವನ್ನು ನೋಡಿದರೆ ಖುಷಿಯಾಗುತ್ತೆ. ಉಕ್ರೇನ್ ಯುದ್ಧದ ಜಾಗದಿಂದ ಹೊರಬರಲು ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡು, ತುಂಬಾ ಶ್ರಮದಿಂದ ತನ್ನ ತಾಯ್ನಾಡಿಗೆ ಮರಳಿದ್ದಾಳೆ. ಈ ವೇಳೆ ಸುಹಾನಿ ತುಂಬಾ ಕಷ್ಟ ಅನುಭವಿಸಿದ್ದಾಳೆ. ಯುದ್ಧದಿಂದ ಕೆಲವು ಪ್ರೋಟೋಕಾಲ್ಗಳಿಂದ ಸ್ನೇಹಿತರಿಂದ ಬೇರ್ಪಟ್ಟಿದ್ದಾಳೆ. ಅಪರಿಚಿತರೊಂದಿಗೆ ಉಳಿಯುವುದು, ಜೀವವನ್ನು ಉಳಿಸಿಕೊಳ್ಳಲು ಸಿಕ್ಕ ಆಹಾರ ತಿನ್ನುವುದು. ಒಂದು ಕಡೆಯಿಂದ ಒಂದು ಕಡೆ ಹೋಗುವುದು. ಈ ಎಲ್ಲ ತೊಂದರೆಗಳಿಂದ ನಮ್ಮ ಹನಿ ಈಗ ಮುಕ್ತಳಾಗಿದ್ದಾಳೆ. ಅಂತಿಮವಾಗಿ ಪೋಷಕರ ಬಳಿಗೆ ಹಿಂತಿರುಗಿದ್ದಾಳೆ. ಈ ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ. ನನ್ನ ಪ್ರೀತಿಯ ಹುಡುಗಿಯೇ ನಿನ್ನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ನೀನು ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದೀಯ ಎಂದು ಗೆಳತಿಯ ಬಗ್ಗೆ ಶ್ವೇತಾ ಸುದೀರ್ಘವಾಗಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಸುಹಾನಿ ನಿನ್ನ ಚಿಕ್ಕ ಕುಟುಂಬಕ್ಕೆ ಒಳ್ಳೆಯದಾಗಲಿ. ನನ್ನ ಸ್ನೇಹಿತೆಗೊಸ್ಕರ ಪ್ರಾಥನೆ ಮಾಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ನನ್ನ ಸ್ನೇಹಿತೆ ಸುಹಾನಿ ಕಷ್ಟದ ಸಮಯದಲ್ಲಿ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಲವ್ ಯೂ ಆಲ್ ಎಂದು ಬರೆದು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಕೇಳಿಕೊಂಡಿದ್ದಾರೆ.

    ಶ್ವೇತಾ ಚೆಂಗಪ್ಪ ಇನ್‌ಸ್ಟಾದಲ್ಲಿ ಶೇರ್ ಮಾಡಿರುವ ವೀಡಿಯೋದಲ್ಲಿ ಸುಹಾನಿ ಏರ್‌ಪೋಟ್‌ನಿಂದ ಮರಳಿ ಬರುತ್ತಿರುವುದನ್ನು ಸೆರೆ ಹಿಡಿಯಾಲಾಗಿದೆ. ಈ ವೇಳೆ ಶ್ವೇತಾ ಕುಟುಂಬ ಮತ್ತು ಸುಹಾನಿ ಕುಟುಂಬ ಆಕೆಯನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿರುವುದು ಸಹ ರೆಕಾರ್ಡ್ ಆಗಿದೆ. ಕೊನೆಗೆ ಸುಹಾನಿ ಬರುವುದನ್ನು ನೋಡಿದ ಆಕೆಯ ಅಮ್ಮ ಹೋಗಿ ಅತ್ತು ಅಪ್ಪಿಕೊಳ್ಳುತ್ತಾರೆ. ನಂತರ ಶ್ವೇತಾ ಸಹ ಹೋಗಿ ಆಕೆಯನ್ನು ಅಪ್ಪಿಕೊಂಡು ತಾಯ್ನಾಡಿಗೆ ಸ್ವಾಗತ ಎಂದು ಹೇಳುತ್ತಿರುವ ಭಾವನಾತ್ಮಕ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

     

  • ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ಕೀವ್: ಉಕ್ರೇನ್ ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ತನ್ನ ದೇಶದಿಂದ ಓಡಿ ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ರಷ್ಯಾದ ಸ್ಟೇಟ್ ಡುಮಾ ಸ್ಪೀಕರ್ ವ್ಯಾಚೆಸ್ಲಾವ್ ಝೆಲೆನ್ಸ್ಕಿಪೋಲೆಂಡ್‌ನಲ್ಲಿ ಅಡಗಿದ್ದಾರೆ ಎಂಬ ಹೇಳಿಕೆ ನೀಡಿದ್ದರು.

    ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿವಾಸ ಮರಿನ್ಸ್ಕಿ ಪ್ಯಾಲೆಸ್ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇದೀಗ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಝೆಲೆನ್ಸ್ಕಿ ಎಲ್ಲಿದ್ದಾರೆ ಎಂಬುದು.

    ಝೆಲೆನ್ಸ್ಕಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವಿಷಯವನ್ನು ರಷ್ಯಾ ಹೇಳುತ್ತಿದ್ದಂತೆ ಇದನ್ನು ಝೆಲೆನ್ಸ್ಕಿ ಸುಳ್ಳು ಎಂದು ಸಾಬೀತು ಮಾಡಿದ್ದರು. ತಮ್ಮ ನಿವಾಸದ ಮುಂಭಾಗದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾ ಹಾಗೂ ತಾವು ದೇಶವನ್ನು ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ಯುದ್ಧ ಪ್ರಾರಂಭವಾಗುತ್ತಿದ್ದಂತೆ ಅಮೆರಿಕ ಉಕ್ರೇನ್ ಅಧ್ಯಕ್ಷನನ್ನು ಸ್ಥಳಾಂತರಿಸಲು ಮುಂದಾಗಿತ್ತು. ಆದರೆ ಅದನ್ನು ಝೆಲೆನ್ಸ್ಕಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ಅಧ್ಯಕ್ಷ ಕೀವ್ ತೊರೆದು ಪೋಲೆಂಡ್‌ನಲ್ಲಿ ಅಡಗಿದ್ದಾರೆ ಎಂಬ ವದಂತಿಯನ್ನು ಉಕ್ರೇನ್ ಸುಳ್ಳು ಎಂದಿದೆ.

    ಝೆಲೆನ್ಸ್ಕಿ ದೇಶವನ್ನು ತೊರೆಯುವ ವರದಿಗಳ ಮಧ್ಯೆ ಉಕ್ರೇನ್‌ನ ಮಾಜಿ ಪ್ರಧಾನಿ ಅಜರೋವ್, ಅಧ್ಯಕ್ಷ ಝೆಲೆನ್ಸ್ಕಿ ಕೀವ್‌ನ ಹೃದಯಭಾಗದಲ್ಲಿರುವ ಬಂಕರ್‌ನಲ್ಲಿರಬಹುದು ಎಂದಿದ್ದಾರೆ. ಏಕೆಂದರೆ ಈ ಬಂಕರ್ ಅಣ್ವಸ್ತ್ರ ದಾಳಿಗೂ ಹಾಳಾಗುವುದಿಲ್ಲ. ಕೀವ್‌ನಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಂಕರ್‌ನಲ್ಲೇ ಅಡಗಿ ಕೂತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಝೆಲೆನ್ಸ್ಕಿ ಶುಕ್ರವಾರ ರಾತ್ರಿ ತನ್ನ ಮೇಲೆ ರಷ್ಯಾ ಮಾರಣಾಂತಿಕ ದಾಳಿ ನಡೆಸಲು ಪ್ರಯತ್ನ ಪಟ್ಟಿದೆ ಎಂದಿದ್ದಾರೆ. ತಮ್ಮ ನಿವಾಸ ಮರಿನ್ಸ್ಕಿ ಅರಮನೆ ಮೇಲೆ ದಾಳಿ ಮಾಡಿರುವ ಫೋಟೋಗಳನ್ನು ಕೂಡಾ ಹಂಚಿಕೊಂಡಿದ್ದರು. ರಷ್ಯಾ ತನ್ನ ಮೇಲೆ ಮಾಡಿರುವ ದಾಳಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದ್ದರು.

    ಝೆಲೆನ್ಸ್ಕಿ ಶನಿವಾರ ಯುಎಸ್ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಸೆನೆಟ್‌ಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ಕೀವ್: ನಾನು ಕೀವ್‍ನಲ್ಲಿದ್ದೇನೆ. ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಹೊರತಾಗಿ ತಪ್ಪಿಸಿಕೊಂಡು ಹೋಗಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹೇಳಿದ್ದಾರೆ.

    ರಷ್ಯಾ ಉಕ್ರೇನ್ ಯುದ್ಧದ ನಡುವಯೇ ಉಕ್ರೇನ್ ಅಧ್ಯಕ್ಷ ಪೋಲೆಂಡ್‍ಗೆ ಪಲಾಯನ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಝೆಲೆನ್ಸ್ಕಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ಝೆಲೆನ್ಸ್ಕಿ ತಮ್ಮ ಕಚೇರಿಯಲ್ಲಿಯೇ ಇರುವುದು ಹಾಗೂ ಅವರ ಜೊತೆಗೆ ಮತ್ತೊಬ್ಬ ಅಧಿಕಾರಿ ಕೂಡ ಇರುವುದು ಕಂಡು ಬಂದಿದೆ. ನಾನು ಕೀವ್‍ನಲ್ಲಿದ್ದೇನೆ. ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಹೊರತಾಗಿ ತಪ್ಪಿಸಿಕೊಂಡು ಹೋಗಿಲ್ಲ ಎಂದು ವೀಡಿಯೋಗೆ ಶಿರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಯುದ್ಧ ಆರಂಭವಾಗುತ್ತಿದ್ದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಝೆಲೆನ್ಸ್ಕಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಜೊತೆಗೆ ತಮ್ಮ ರಾಷ್ಟ್ರಕ್ಕೆ ಆಹ್ವಾನವನ್ನು ನೀಡಿದ್ದವು. ಆದರೆ ಯಾವುದೇ ಕಾರಣಕ್ಕೂ ದೇಶ ತೊರೆಯುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದರು. ಇದೇ ವೇಳೆ ತಾವು ಈ ಹಿಂದೆ ದೇಶ ತೊರೆದಿದ್ದಾರೆ ಎನ್ನುವ ಊಹಾಪೋಹವನ್ನು ತಳ್ಳಿಹಾಕಿದ್ಧಾರೆ.

    ರಷ್ಯಾ ಯುದ್ಧ ಆರಂಭಿಸಿದ ನಂತರ ಉಕ್ರೇನಿನ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಪ್ರಯತ್ನ ನಡೆಸಲಾಗಿತ್ತು. ಆದರೆ ಉಕ್ರೇನಿನ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.

  • ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿಗೆ ಟೆನ್ಶನ್ – ಮೋದಿಗೆ ಪತ್ರ

    ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿಗೆ ಟೆನ್ಶನ್ – ಮೋದಿಗೆ ಪತ್ರ

    ಹೈದರಾಬಾದ್: ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿ ಈಗ ಉಕ್ರೇನ್‍ನಲ್ಲಿ ಸಿಲುಕಿರುವ ಮಗನನ್ನು ರಕ್ಷಣೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ಈ ಹಿಂದೆ ಕೊರೊನಾ ಲಾಕಾಡೌನ್ ವೇಳೆ ನೆಲ್ಲೂರಿನಲ್ಲಿ ಸಿಲುಕಿದ್ದ ಮಗನಿಗಾಗಿ 1,400 ಕಿ.ಮೀ ಸ್ಕೂಟರ್‍ನಲ್ಲಿ ಸವಾರಿ ಮಾಡಿದ್ದರು. ತೆಲಂಗಾಣದ ಶಿಕ್ಷಕಿ ರಜಿಯಾ ಬೇಗಂ ಇದೀಗ ಮತ್ತೆ ತಮ್ಮ ಮಗನನ್ನು ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಉಕ್ರೇನ್‍ನಲ್ಲಿ 19 ವರ್ಷದ ಮಗ ನಿಜಾಮುದ್ದೀನ್ ಅಮಾನ್ ಸಿಲುಕಿದ್ದಾನೆ. ಎಂಬಿಬಿಎಸ್ ಓದಲು ಉಕ್ರೇನ್‍ಗೆ ತೆರಳಿದ್ದನು. ನಾನು ತೆಲಂಗಾಣದ ಶಾಲಾ ಶಿಕ್ಷಕಿಯಾಗಿದ್ದೇನೆ. ಮಗನನ್ನು ಭಾರತಕ್ಕೆ ವಾಪಸ್ ಕರೆತರಲು ಸಹಾಯ ಮಾಡಿ ಎಂದು ರಿಜಿಯಾ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಗೃಹ ಸಚಿವ ಮೊಹಮ್ಮದ್ ಅಲಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈಶಾನ್ಯ ಉಕ್ರೇನ್‍ನಲ್ಲಿರುವ ಸುಮಿ ನಗರದಲ್ಲಿ ಮಗನಿದ್ದಾನೆ. ಮಗನನ್ನು ಭಾರತಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿ. ನನ್ನ ಮಗನ ಜೊತೆಗೆ ಭಾರತದ ಎಲ್ಲಾ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಎಂದು ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

  • ರಷ್ಯಾ-ಉಕ್ರೇನ್ ಯುದ್ಧ: ಗಗನಕ್ಕೇರಿದ ಅಡುಗೆ ಎಣ್ಣೆ ದರ

    ರಷ್ಯಾ-ಉಕ್ರೇನ್ ಯುದ್ಧ: ಗಗನಕ್ಕೇರಿದ ಅಡುಗೆ ಎಣ್ಣೆ ದರ

    ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದೆ.

    ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಅಡುಗೆ ತೈಲ ದರ ಏರಿಕೆಯಾಗುತ್ತಿದ್ದು, ಕೆಲ ಪ್ರಾವಿಷನ್ ಸ್ಟೋರ್‌ಗಳಿಗೆ ಸ್ಟಾಕ್ ಕೂಡ ಕಡಿಮೆ ಬರುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದ ಒಂದು ಲೀಟರ್ ಅಡುಗೆ ಎಣ್ಣೆ ದರ ಬರೋಬ್ಬರಿ 30-45 ರೂ ಏರಿಕೆಯಾಗಿದೆ. ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸುವ ಫೇಸ್‍ಬುಕ್, ಟ್ವಿಟ್ಟರ್‌ ಖಾತೆ ಮೇಲೆ ರಷ್ಯಾ ನಿಷೇಧ ಹೇರಿದೆ

    ಅಡುಗೆ ಎಣ್ಣೆಗಾಗಿ ರಷ್ಯಾದ ಮೇಲೆ ಹೆಚ್ಚಾಗಿ ಅವಲಂಬನೆಯಾಗಿರುವುದರಿಂದ ಈ ಯುದ್ಧದ ಪರಿಣಾಮವಾಗಿ ಎಲ್ಲಾ ವೆರೈಟಿ ಅಡುಗೆ ಎಣ್ಣೆಗಳ ದರ ಏರಿಕೆಯಾಗಿದೆ. ಮತ್ತೊಂದೆಡೆ ಚಿನ್ನ ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    ಅಡುಗೆ ಎಣ್ಣೆ ದರ:
    ಸನ್ ಫ್ಯೂರ್ ಎಣ್ಣೆ – 140- 180
    ಗೋಲ್ಡ್ ವಿನ್ನರ್ – 145- 166
    ಪಾಮ್ ಆಯಿಲ್ – 140- 160
    ಶೇಂಗಾ ಎಣ್ಣೆ – 150- 185

  • ರಷ್ಯಾ ದಾಳಿಯಿಂದ 28 ಮಕ್ಕಳು ಸಾವು, 840 ಮಕ್ಕಳಿಗೆ ಗಾಯ – ಉಕ್ರೇನ್ ಸರ್ಕಾರ

    ರಷ್ಯಾ ದಾಳಿಯಿಂದ 28 ಮಕ್ಕಳು ಸಾವು, 840 ಮಕ್ಕಳಿಗೆ ಗಾಯ – ಉಕ್ರೇನ್ ಸರ್ಕಾರ

    ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಲಿಂದಲೂ ಇದುವರೆಗೂ 28 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 840 ಮಕ್ಕಳು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.

    ಮಾಧ್ಯಮವೊಂದರಲ್ಲಿ ಮಾತನಾಡಿದ ಉಕ್ರೇನ್‍ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಒಲೆಕ್ಸಿ ಡ್ಯಾನಿಲೋವ್ ಅವರು, ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಮತ್ತು ಮಕ್ಕಳಿಗೆ ಅವಕಾಶ ಮಾಡಿಕೊಡುವಂತೆ ರಷ್ಯಾಕ್ಕೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಾನವೀಯತೆ ಎಲ್ಲದ್ದಕ್ಕಿಂತ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

    ರಷ್ಯಾ ಉಕ್ರೇನ್ ಮೇಲೆ ಫೆಬ್ರವರಿ 24 ರಂದು ದಾಳಿ ನಡೆಸಲು ಆರಂಭಿಸಿತು. ಅಂದಿನಿಂದ ದೇಶಾದ್ಯಂತ ಮುಷ್ಕರಗಳು ಪ್ರಾರಂಭಗೊಂಡಿತು. ರಷ್ಯಾ ಆಕ್ರಮಣದಿಂದ ಉಕ್ರೇನ್‍ನಲ್ಲಿ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಒಂದು ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಈ ವಾರಾಂತ್ಯದಲ್ಲಿ ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಮೂರನೇ ಸುತ್ತಿನ ಮಾತುಕತೆ ನಡೆಸಲು ಯೋಜಿಸಿದೆ. ಇದನ್ನೂ ಓದಿ: ಕದನ ವಿರಾಮ ಘೋಷಿಸಿ: ರಷ್ಯಾ, ಉಕ್ರೇನ್‌ಗೆ ಭಾರತ ಮನವಿ

  • ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಕೀವ್: ಉಕ್ರೇನ್‍ನ 2 ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದು, ಈ ಅವಧಿಯಲ್ಲಿ ಉಕ್ರೇನ್ ಬಿಟ್ಟು ತೆರಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ.

    ಈಗಾಗಲೇ ರಷ್ಯಾ ದಾಳಿಗೆ ಉಕ್ರೇನ್‌ ನಲುಗಿ ಹೋಗಿದೆ.  ಆದರೆ ರಷ್ಯಾ ಮುಂದಿನ 6 ಗಂಟೆಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಮರಿಯುಪೋಲ್, ವೋಲ್‍ನೋವಾಕ ನಗರಗಳಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಕದನ ವಿರಾಮದ ನಂತರ ಮತ್ತಷ್ಟು ದಾಳಿ ನಡೆಯಲಿದೆ. ಭಾರತೀಯ ಕಾಲಮಾನಕ್ಕೆ ಅನ್ವಯವಾಗುವಂತೆ ಇಂದು ಸಂಜೆ 7:30ಕ್ಕೆ ಕದನ ವಿರಾಮ ಅಂತ್ಯವಾಗಲಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

    ಇಂದು ರಾತ್ರಿ ಕ್ಷಿಪಣಿ ದಾಳಿ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಖಾರ್ಕಿವ್‌, ಕೀವ್‌ ಸುಮಿ ಮೇಲೆ ಬಾಂಬ್‌ ದಾಳಿ ನಡೆಯುವ ಸಾಧ್ಯತೆಯಿದೆ. ಮರಿಯುಪೋಲ್‌ಗೆ ಮುತ್ತಿಗೆ ಹಾಕುತ್ತಿರುವಾಗ, ರಷ್ಯಾದ ಪಡೆಗಳು ಅದರ ವಿದ್ಯುತ್, ಆಹಾರ, ನೀರು ಮತ್ತು ಸಾರಿಗೆಯನ್ನು ಕಡಿತಗೊಳಿಸಿದ್ದವು. ಇದರಿಂದ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಬಾಂಬ್‌ ದಾಳಿ ಮಾಡುತ್ತಿದೆ ಎಂದು ಟೀಕಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಲ್ಪ ಅವಧಿಯವರೆಗೆ ಕದನ ವಿರಾಮ ಘೋಷಿಸಿದೆ. ಇದನ್ನೂ ಓದಿ: ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ

    ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸುವಂತೆ ಭಾರತ ಕೋರಿತ್ತು. ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎರಡೂ ದೇಶಗಳು ಕದನ ವಿರಾಮವನ್ನು ಅನುಷ್ಠಾನಗೊಳಿಸಬೇಕಿದೆ. ಐರೋಪ್ಯ ಒಕ್ಕೂಟಗಳು ಕದನ ವಿರಾಮ ಘೋಷಿಸಲು ಹಲವು ದಿನಗಳಿಂದಲೇ ರಷ್ಯಾ ಹಾಗೂ ಉಕ್ರೇನ್‍ಗೆ ಮನವಿ ಮಾಡಿದ್ದವು. ಭಾರತ ಶುಕ್ರವಾರ ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿತ್ತು.  ಇದನ್ನೂ ಓದಿ: ಕದನ ವಿರಾಮ ಘೋಷಿಸಿ: ರಷ್ಯಾ, ಉಕ್ರೇನ್‌ಗೆ ಭಾರತ ಮನವಿ

  • ಕದನ ವಿರಾಮ ಘೋಷಿಸಿ: ರಷ್ಯಾ, ಉಕ್ರೇನ್‌ಗೆ ಭಾರತ ಮನವಿ

    ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಭೀಕರ ಯುದ್ಧ ನಡೆಸುತ್ತಿದ್ದು, ಅಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಭಾರತ ಅವರೆಲ್ಲರನ್ನೂ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದರೂ ಹಲವರು ಇನ್ನೂ ಯುದ್ಧದ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ಕದನ ವಿರಾಮ ಘೋಷಿಸುವಂತೆ ರಷ್ಯಾ ಹಾಗೂ ಉಕ್ರೇನ್‌ಗೆ ಭಾರತ ಮನವಿ ಮಾಡಿದೆ.

    ಉಕ್ರೇನ್‌ನಲ್ಲಿ ಫಿರಂಗಿ ದಾಳಿ ನಡೆಯುತ್ತಿದೆ. ಅಲ್ಲಿನ ಪರಿಸ್ಥಿತಿ ಅಪಾಯಕಾರಿಯಾಗಿದ್ದು, ಇಂತಹ ಸನ್ನಿವೇಶದಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರಯಾಣಿಸುವುದು ನಮಗೆ ಇಷ್ಟವಿಲ್ಲ. ಅವರ ಪ್ರಯಾಣಕ್ಕೆ ಸುರಕ್ಷಿತ ಮಾರ್ಗ ಬೇಕು. ಆಗ ಮಾತ್ರ ನಾವು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬಹುದು ಎಂದು ಭಾರತ ತಿಳಿಸಿದೆ. ಇದನ್ನೂ ಓದಿ: ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

     

    ವಿದ್ಯಾರ್ಥಿಗಳ ಸ್ಥಳಾಂತರಕ್ಕಾಗಿ ಎರಡೂ ಕಡೆಯವರು ಸ್ಥಳೀಯ ಕದನ ವಿರಾಮ ಘೋಷಿಸಿ ಎಂದು ಭಾರತ ರಷ್ಯಾ ಹಾಗೂ ಉಕ್ರೇನ್‌ಗೆ ಮನವಿ ಮಾಡಿದೆ.

    ಖಾರ್ಕಿವ್‌ನಲ್ಲಿ 300 ಭಾರತೀಯರು ಹಾಗೂ ಸುಮಿಯಲ್ಲಿ 700 ಭಾರತೀಯರು ಸಿಲುಕಿರುವುದಾಗಿ ವರದಿಗಳು ತಿಳಿಸಿವೆ. ಇದೀಗ ಉಕ್ರೇನ್‌ನಲ್ಲಿ ಒಟ್ಟು 2,000 ದಿಂದ 3,000 ಭಾರತೀಯರು ಸಿಲುಕಿರುವುದಾಗಿ ಅಂದಾಜಿಸಲಾಗಿದೆ. ಇದನ್ನೂ ಓದಿ: ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸುವಂತೆ ಭಾರತ ಕೋರಿದ್ದು, ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎರಡೂ ದೇಶಗಳು ಕದನ ವಿರಾಮವನ್ನು ಅನುಷ್ಠಾನಗೊಳಿಸಬೇಕಿದೆ. ಐರೋಪ್ಯ ಒಕ್ಕೂಟಗಳು ಕದನ ವಿರಾಮ ಘೋಷಿಸಲು ಹಲವು ದಿನಗಳಿಂದಲೇ ರಷ್ಯಾ ಹಾಗೂ ಉಕ್ರೇನ್‌ಗೆ ಮನವಿ ಮಾಡುತ್ತಿವೆ. ಭಾರತ ಶುಕ್ರವಾರ ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿದೆ.

  • ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

    ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

    ನವದೆಹಲಿ: ಉಕ್ರೇನ್‍ನಲ್ಲಿ, ರಷ್ಯಾ ಸೈನಿಕರ ಗುಂಡಿನ ದಾಳಿಗೆ ಗಾಯಗೊಂಡಿರುವ ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

    ಉಕ್ರೇನ್‍ನ ರಾಜಧಾನಿ ನಗರ ಕೀವ್‍ನಲ್ಲಿ ರಷ್ಯಾದ ಗುಂಡಿನ ದಾಳಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಹರ್ಜೊತ್ ಸಿಂಗ್‍ನ ವೈದ್ಯಕೀಯ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ತಿಳಿಸಿದೆ.

    ಮೊನ್ನೆ ಫೆಬ್ರವರಿ 27ರಂದು 31 ವರ್ಷದ ಹರ್ಜೊತ್ ಸಿಂಗ್ ತನ್ನಿಬ್ಬರು ಸ್ನೇಹಿತರೊಂದಿಗೆ ಪಶ್ಚಿಮ ಉಕ್ರೇನ್‍ನಲ್ಲಿರುವ ಎಲ್ವಿವ್ ನಗರಕ್ಕೆ ಯುದ್ಧಪೀಡಿತ ಕೀವ್ ನಗರದಿಂದ ಹೋಗಲು ಕ್ಯಾಬ್ ಹತ್ತಿದ್ದರು. ಈ ವೇಳೆ ಅವರ ಎದೆಭಾಗ ಸೇರಿದಂತೆ ದೇಹದ ಮೇಲೆ ನಾಲ್ಕು ಬುಲ್ಲೆಟ್ ಬಿದ್ದಿದೆ. ಹರ್ಜೊತ್ ಸಿಂಗ್ ದೆಹಲಿ ಮೂಲದವರು. ಈ ಘಟನೆ ಬಗ್ಗೆ ನಮಗೆ ಅರಿವಿದೆ. ನಮ್ಮ ರಾಯಭಾರಿಗಳು ಅವರ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದೇವೆ. ಕೀವ್ ನ ಆಸ್ಪತ್ರೆಯಲ್ಲಿ ಹರ್ಜೊತ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಭಾರತವು ಮೊನ್ನೆ  ಪೋಲೆಂಡ್ ಮೂಲಕ ಉಕ್ರೇನ್‍ಗೆ ಔಷಧಿಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವಿನ ಮೊದಲ ಭಾಗವನ್ನು ಕಳುಹಿಸಿದೆ. ಉಕ್ರೇನ್‍ನ ಗಡಿಯಲ್ಲಿ ನೆರೆದಿರುವ ಜನರಿಗೆ ಯುದ್ಧ ಪೀಡಿತ ರಾಷ್ಟ್ರದಿಂದ ನಿರ್ಗಮಿಸಲು ಸಹಾಯ ಮಾಡಲು ಭಾರತವು ನೆರವು ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು