ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಅವರ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ ನೀಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನಿವಾಸಕ್ಕೆ ಭೇಟಿ ನೀಡಿ, ನವೀನ್ ಭಾವಚಿತ್ರಕ್ಕೆ ಹೂಮಾಲೆ ಹಾಕಿ ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಕುಟುಂಬಸ್ಥರಿಗೆ ಸಲೀಂ 1 ಲಕ್ಷ ರೂ. ಚೆಕ್ ವಿತರಿಸಿದರು. ಈ ವೇಳೆ ನವೀನ್ ಪಾರ್ಥೀವ ಶರೀರ ತರಬೇಕೆಂಬುದು ಕುಟುಂಬಸ್ಥರು ಸಲೀಂ ಮುಂದೆ ಆಗ್ರಹಿಸಿದರು. ಇದನ್ನೂ ಓದಿ: ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ, ಆದಷ್ಟು ಬೇಗ ಸರ್ಕಾರ ನವೀನ್ ಪಾರ್ಥಿವ ಶರೀರ ತರುವ ಕೆಲಸ ಮಾಡಬೇಕು. ಮೃತದೇಹ ತರುವುದರ ಜೊತೆಗೆ ಉಕ್ರೇನ್ ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು. ನವೀನ್ ಸಾವು ಸಾಕಷ್ಟು ದುಃಖ ತಂದಿದೆ. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ನವೀನ್ ಸಾವು ರಾಜ್ಯಕ್ಕೆ ಒಂದು ಸಂದೇಶ ಕೊಟ್ಟಿದೆ ಎಂದು ಹೇಳಿದರು.
ಕೀವ್: ಉಕ್ರೇನ್ ಮೇಲೆ ರಣರಕ್ಕಸ ಸ್ವರೂಪದಲ್ಲಿ ಸತತ 11ನೇ ದಿನವೂ ರಷ್ಯಾ ಸೇನಾ ಮುಗಿಬಿದ್ದಿದೆ. ಹಗಲು ರಾತ್ರಿ ಎನ್ನದೇ, ಉಸಿರಾಡಲು ಸ್ವಲ್ಪವೂ ಬಿಡದಂತೆ ಬಾಂಬ್‍ಗಳ ಸುರಿಮಳೆಗೈಯ್ಯುತ್ತಿದೆ. ಕೀವ್ ನಗರ ತತ್ತರಿಸಿ ಹೋಗಿದೆ.
ಈಗಾಗಲೇ ಖೇರ್ಸಾನ್ ನಗರ ವಶಪಡಿಸಿಕೊಂಡಿರುವ ರಷ್ಯಾ ಪಡೆಗಳು ಖಾರ್ಕಿವ್ ಮೇಲೆ ಪಟ್ಟು ಸಾಧಿಸಲು ನೈಟ್ ಆಪರೇಷನ್ ಕೈಗೊಂಡಿದೆ. ನೂರಾರು ಕ್ಷಿಪಣಿಗಳನ್ನು ಹಾರಿಸಿ ಭಾರೀ ಸಾವು ನೋವಿಗೆ ಕಾರಣವಾಗಿದೆ. ಸುಮಿ, ಮರಿಯುಪೋಲ್, ವೋಲ್ನೋವ್ಖಾ ನಗರಗಳಿಗೆ ಮುತ್ತಿಗೆ ಹಾಕಿದೆ. ಕೀವ್, ಬುಚಾ ನಗರಗಳಲ್ಲಿ ಜನವಸತಿ, ಸೇನೆಯ ವೈಮಾನಿಕ ನೆಲೆಗಳ ಮೇಲೆ ಶೆಲ್, ಮಿಸೈಲ್ ಟ್ಯಾಕ್ ಮಾಡಿದೆ. ಉಕ್ರೇನ್‍ನ ಛಾಶ್ಚಿಯಾ ನಗರವನ್ನು ಹಿಡಿತಕ್ಕೆ ತೆಗೆದುಕೊಂಡಿರೋದಾಗಿ ರಷ್ಯಾ ಘೋಷಿಸಿದೆ. ಸ್ಮಶಾನದಂತೆ ಆಗಿರುವ ಕೀವ್ ನಗರದ ಡ್ರೋನ್ ವಿಡೀಯೋ ರಿಲೀಸ್ ಮಾಡಿದೆ. ಈಗಾಗಲೇ ಎರಡು ರಿಯಾಕ್ಟರ್ ವಶಕ್ಕೆ ಪಡೆದಿರುವ ರಷ್ಯಾ ಪಡೆಗಳು ಈಗ ಮೂರನೇ ರಿಯಾಕ್ಟರ್ ಯೂಜ್‍ನೌಕ್ರೈನ್ಸ್ಕ್ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ: ಸೋಮವಾರ ಅಂತಿಮ ಹಂತದ ಮತದಾನ – ಮಾರ್ಚ್ 10ಕ್ಕೆ ಫಲಿತಾಂಶ
ಝೈಟೋಮೀರ್‌ನ ಮೆಟ್ರೋ ಬಳಿ ಬಾಂಬ್ ಸ್ಫೋಟಗೊಂಡಿದೆ. ಒಡೆಸಾ ಉಡಾಯಿಸಲು ರಷ್ಯಾ ತಯಾರಿ ನಡೆಸಿದೆ. ಈ ಮಧ್ಯೆ, ಉಕ್ರೇನ್ ಸೇನೆಗಳು ಪ್ರತಿರೋಧ ತೋರುತ್ತಿವೆ. ರಷ್ಯಾದ ಸುಖೋಯ್ ಯುದ್ಧ ವಿಮಾನ, ಹೆಲಿಕಾಪ್ಟರ್, ಯುದ್ಧ ಟ್ಯಾಂಕ್‍ನ್ನು ಉಡೀಸ್ ಮಾಡಿದೆ. ಒಡೆಸಾದಲ್ಲಿ ರಷ್ಯಾ ಪಡೆ ಪ್ರವೇಶಿಸದಂತೆ, ನಗರದ ರಸ್ತೆಗಳಲ್ಲೆಲ್ಲಾ ಕಬ್ಬಿಣದ ಬೇಲಿಯನ್ನು ಉಕ್ರೇನ್ ಹಾಕಿದೆ. ಈ ಮಧ್ಯೆ, ಮರಿಯುಪೋಲ್, ವಾಲ್ನೋವ್ಖಾ ನಗರಗಳಲ್ಲಿ ಇವತ್ತು ಕೂಡ ರಷ್ಯಾ 11 ಗಂಟೆ ಕದನ ವಿರಾಮ ಪ್ರಕಟಿಸಿತ್ತು. ಇದನ್ನೂ ಓದಿ: ಶ್ವಾನಕ್ಕಾಗಿ ಉಕ್ರೇನ್‍ನಲ್ಲಿ ಲಗೇಜ್ ಬಿಟ್ಟು ಬಂದ ವಿದ್ಯಾರ್ಥಿನಿ ಕೀರ್ತನಾ
11ನೇ ದಿನ ರಷ್ಯಾ, ಉಕ್ರೇನ್ ಯಾವ ದೇಶಕ್ಕೆಷ್ಟು ಹಾನಿ:
ಉಕ್ರೇನ್ ಸೇನೆಯ 2119 – ಸೇನಾ ಕಟ್ಟಡಗಳು, 74 – ಕಂಟ್ರೋಲ್ ಪಾಯಿಂಟ್ಸ್, 68 – ರಾಡಾರ್ ಕೇಂದ್ರಗಳು, 80 – ಯುದ್ಧ ವಿಮಾನಗಳು, 108 – ಎಸ್-300 ಕ್ಷಿಪಣಿ, 748 – ಯುದ್ಧ ಟ್ಯಾಂಕ್‍ಗಳು, 76 – ರಾಕೆಟ್ ಲಾಂಚರ್‌ಗಳು, 274 – ಫಿರಂಗಿಗಳು, 532 – ವಿಶೇಷ ಸೇನಾ ವಾಹನಗಳು, 59 – ಡ್ರೋಣ್‍ಗಳು ನಾಶವಾಗಿದೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್
‼️ Urgent appeal by President @ZelenskyyUa: a missile strike on #Vinnytsia consisted of eight missiles; the airport is completely destroyed. The President called on the world to close the skies over #Ukraine and provide Ukraine with aircraft. pic.twitter.com/0s8nUneRZP
— Verkhovna Rada of Ukraine – Ukrainian Parliament (@ua_parliament) March 6, 2022
ರಷ್ಯಾ ಸೇನೆಯ, 11,000 – ಸೈನಿಕರು, 48 – ಹೆಲಿಕಾಪ್ಟರ್, 44 – ಯುದ್ಧ ವಿಮಾನ, 285 – ಯುದ್ಧ ಟ್ಯಾಂಕ್ , 109 – ಫಿರಂಗಿಗಳು, 985 – ಶಸ್ತ್ರಾಸ್ತ್ರ ವಾಹನ, 50 – ಕ್ಷಿಪಣಿ ವಾಹಕಗಳು, 2 – ಹೈಸ್ಪೀಡ್ ಬೋಟ್, 447 – ಸೇನಾ ಕಾರು, 60 – ಆಯಿಲ್ ಟ್ಯಾಂಕರ್‌ಗಳು, 4 – ಡ್ರೋಣ್‍ಗಳು, 21 – ಆ್ಯಂಟಿ ಏರ್‌ಕ್ರಾಫ್ಟ್ ವಾಹನಗಳು ಉಡೀಸ್ ಆಗಿದೆ ಎಂದು ಮಾಹಿತಿ ಹೊರಬಿದ್ದಿದೆ.
ಚೆನ್ನೈ: ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿರುವ ವಿದ್ಯಾರ್ಥಿಗಳು ವಾಪಸ್ ತಾಯ್ನಾಡಿಗೆ ಬರಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ತಾವು ಇಷ್ಟಪಟ್ಟು ಸಾಕಿರುವ ಶ್ವಾನಗಳನ್ನು ಕೂಡ ತಮ್ಮ ಜೊತೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಚೆನ್ನೈನ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ವಾಪಸ್ಸಾಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಕೀರ್ತನಾ, ಸಾಕುಪ್ರಾಣಿಯನ್ನು ತರಲು ಅವಕಾಶ ನೀಡದ ಕಾರಣ ನಾನು ನಾಲ್ಕು ಬಾರಿ ವಿಮಾನ ರದ್ದುಗೊಳಿಸಬೇಕಾಯಿತು. ನಾನು ಎರಡು-ಮೂರು ದಿನಗಳವರೆಗೆ ಕಾದಿದ್ದೆ. ಕೊನೆಗೂ ರಾಯಭಾರ ಕಚೇರಿಯಿಂದ ನನಗೆ ಕರೆ ಬಂತು. ಅವರು ನನ್ನೊಂದಿಗೆ ಸಾಕುಪ್ರಾಣಿಯನ್ನು ಕರೆದೊಯ್ಯಲು ಅವಕಾಶ ನೀಡಿದರು ಎಂದು ತಿಳಿಸಿದರು. ಇದನ್ನೂ ಓದಿ: ಪರಮಾಣು ಘಟಕ ನಾಶಕ್ಕೆ ಉಕ್ರೇನ್ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್ ಮಾಜಿ ಪಿಎಂ ಆರೋಪ
ವಿಶೇಷ ಎಂದರೆ ಎರಡು ವರ್ಷದ ಪೆಕಿಂಗೀಸ್ ತಳಿಯ ನಾಯಿಮರಿ ಕ್ಯಾಂಡಿಯನ್ನು ತರುವುದಕ್ಕಾಗಿ ಕೀರ್ತನಾ ತಮ್ಮ ಲಗೇಜ್ ಗಳನ್ನು ಉಕ್ರೇನ್‍ನಲ್ಲಿಯೇ ಬಿಟ್ಟುಬಂದಿದ್ದಾರೆ. ಯಾಕೆಂದರೆ ನಾಯಿಮರಿ ಬೇಕಾದರೆ ಲಗೇಜ್ ಬಿಟ್ಟು ಬರಬೇಕಾಗಿತ್ತು. ಹೀಗಾಗಿ ಅಧಿಕಾರಿಗಳ ಷರತ್ತಿಗೆ ಒಪ್ಪಿದೆ. ನನಗೆ ಲಗೇಜ್‍ಗಿಂತ ನನ್ನ ಸಾಕುಪ್ರಾಣಿ ಮುಖ್ಯ ಎಂದು ಅದನ್ನೇ ಚೆನ್ನೈಗೆ ತಂದಿರುವೆ ಎಂದು ಕೀರ್ತನಾ ಹೇಳಿದರು. ಇದನ್ನೂ ಓದಿ: ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?
ಕೀರ್ತನಾ ತಮಿಳುನಾಡಿನ ಮೈಲಾಡುತುರೈ ನಿವಾಸಿಯಾಗಿದ್ದು, ಉಕ್ರೇನ್‍ನ ಉಜ್ಹೋರೋಡ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ 5ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಈ ಹಿಂದೆ ಕೀರ್ತನಾ ಅವರು, ಕ್ಯಾಂಡಿಯನ್ನು ಬಿಟ್ಟು ಬರಲು ಒಪ್ಪಿರಲಿಲ್ಲ. ಇದೀಗ ಭಾರತೀಯ ರಾಯಭಾರ ಕಚೇರಿಯು ಕ್ಯಾಂಡಿಯನ್ನು ಕರೆದೊಯ್ಯಲು ಅವಕಾಶ ನೀಡುವವರೆಗೆ ತಾನು ತಯ್ನಾಡಿಗೆ ತೆರಳಲ್ಲ ಎಂದು ಪಟ್ಟು ಹಿಡಿದಿದ್ದರು.
ಇತ್ತ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಭಾಗವಾಗಿ ಸರ್ಕಾರವು ಹಲವಾರು ವಿಶೇಷ ವಿಮಾನಯಾನ ಸಂಸ್ಥೆಗಳನ್ನು ಸೇವೆಗೆ ನಿಯೋಜಿಸಿವೆ. ಅಂತೆಯೇ ಶನಿವಾರ ಕೀರ್ತನಾ ‘ಕ್ಯಾಂಡಿ’ ಜೊತೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆ ವೇಳೆ ತಮ್ಮ ಕುಟುಂಬ ಸದಸ್ಯರಿಂದ ಭಾವನಾತ್ಮಕ ಸ್ವಾಗತ ಪಡೆದರು.
ಬೆಂಗಳೂರು: ಮಗಳನ್ನ ಜೀವಂತವಾಗಿ ನೋಡ್ತೀನಿ ಅಂತ ನಾನು ಅಂದುಕೊಂಡಿರಲಿಲ್ಲ. ಮಗಳು ಪ್ರತಿಬಾರಿಯೂ ಕರೆ ಮಾಡಿದಾಗ ‘ಲವ್ ಯೂ ಪಪ್ಪಾ’ ಅಂದಾಗ ಆಗ್ತಿದ್ದ ನೋವು ಯಾರಿಗೂ ಹೇಳೋದಕ್ಕೆ ಆಗಲ್ಲ ಎಂದು ಹೇಳುತ್ತಾ ವೈಟ್ ಫೀಲ್ಡ್ ಮೂಲದ ವಿದ್ಯಾರ್ಥಿನಿ ಇಶಾ ತಂದೆ ಭಾವುಕರಾದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗಳು ತುಂಬಾ ಕಷ್ಟದಿಂದ ಖಾರ್ಕಿವ್ ನಿಂದ ಬಂದಿದ್ದಾಳೆ. ಅಲ್ಲಿ ಅವಳಿಗೆ ತುಂಬಾ ಕಷ್ಟವಾಗಿದೆ. ಮಗಳು ನೆಟ್‍ವರ್ಕ್ ಸಿಕ್ಕಿದ ಕೂಡಲೇ ಕರೆ ಮಾಡುತ್ತಿದ್ದಳು. 7 ದಿನ ನಿದ್ದೆಯಿಲ್ಲದೇ ಮಗಳಿಗಾಗಿ ಕಾಯುತ್ತಿದ್ದೆವು ಎಂದು ಕಣ್ಣೀರಾಕಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದು: ಎನ್‍ಎಂಸಿ
ನಮ್ಮ ದೇಶದಲ್ಲೇ ಕಡಿಮೆ ಫೀಸ್ ಇದಿದ್ದರೆ ಮಗಳನ್ನ ಉಕ್ರೇನ್‍ಗೆ ಕಳುಹಿಸಿ ಓದಿಸೋ ಅಗತ್ಯ ಬರುತ್ತಿರಲಿಲ್ಲ ಅಂತಾ ತಂದೆ ಹೇಳಿದರು. ಇತ್ತ ಮಗಳು ಅಲ್ಲಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾಳೆ. ಅಲ್ಲಿ ತುಂಬಾ ಕಷ್ಟದ ಪರಿಸ್ಥಿತಿ ಇತ್ತು. ಖಾರ್ಕಿವ್ ನಿಂದ 8 ಕಿಲೋ ನಡೆದುಕೊಂಡು ಬಂದು ರೈಲು ಹತ್ತಿ ಹೇಗೋ ಬಾರ್ಡರ್ ಗೆ ರಿಚ್ ಆಗಿ ಸೇಫ್ ಆಗಿ ಭಾರತಕ್ಕೆ ಬಂದಿದ್ದೇನೆ. ನಮ್ಮ ಖಾರ್ಕಿವ್ ನಿಂದ ಬಾರ್ಡರ್ ಗೆ ಬರೋ ಜರ್ನಿ ಬಹಳ ಕಷ್ಟದಿಂದ ಕೂಡಿತ್ತು. ನಮಗೆ ಟ್ರೈನ್ ಹತ್ತಲು ಸಹ ಬಿಡಲಿಲ್ಲ, ಹೇಗೋ ಸಾಧನೆ ಮಾಡಿ ಬಂದಿದ್ದೇನೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಅಂತಾ ಈಶಾ ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ಯಾರಿಗೂ ಬೇಡ ಎಂಬುದನ್ನು ಪುಟಿನ್‍ಗೆ ಅರ್ಥ ಮಾಡಿಸಿ: ಕುಲೆಬಾ
ಖಾರ್ಕಿವ್‍ನಲ್ಲಿ ಬಾಂಬ್ ದಾಳಿ ಶೆಲ್ ದಾಳಿ ಇತ್ತು. ಕ್ಷಣ ಕ್ಷಣಕ್ಕೂ ಬಾಂಬ್‍ಗಳು ಬೀಳುತ್ತಿದ್ದವು. ನಾವು ಬಂಕರ್‍ಗಳಲ್ಲಿ ಊಟ, ನೀರು ಇಲ್ಲದೆ ಇದ್ದೆವು. ಬಾಂಬ್ ದಾಳಿಗೆ ನಮ್ಮ ಯುನಿವರ್ಸಿಟಿ ನಾಶವಾಯ್ತು, ನಮ್ಮ ಸೀನಿಯರ್ ನವೀನ್ ಮೃತರಾದ್ರು. ರೈಲುಗಳಲ್ಲಿ ತುಂಬಾ ಭಯದ ವಾತವರಣವಿತ್ತು. ಉಕ್ರೇನ್ ಸೈನಿಕರು ಬಿಡ್ತಿರಲಿಲ್ಲ, ಇಂಡಿಯನ್ಸ್‍ನ ಕಪ್ಪು ಜನರನ್ನ ಟ್ರೈನ್ ಹತ್ತಲು ಬಿಡಲಿಲ್ಲ. ಆದರೂ ನಾನು ಬಂದ ಟ್ರೈನ್ ನಲ್ಲಿ 20 ಜನ ಇಂಡಿಯನ್ಸ್ ಕಷ್ಟಪಟ್ಟು ಹತ್ತಿಕೊಂಡು ಬಂದೆವು. ಬಾರ್ಡರ್ ಗೆ ರೀಚ್ ಆಗಲು ತುಂಬಾ ಕಷ್ಟವಾಗಿತ್ತು. 5 ರಿಂದ 10 ನಿಮಿಷಕ್ಕೆ ಬಾಂಬ್ ದಾಳಿಯಾಗ್ತಿದ್ದ ಕಾರಣ ತುಂಬಾ ಭಯವಾಗ್ತಿತ್ತು. ಬಾರ್ಡರ್‍ಗೆ ಬಂದ ಮೇಲೆ 5 ನಿಮಿಷದಲ್ಲಿ ಇಮಿಗ್ರೇಷನ್ ಎಲ್ಲ ಆಯ್ತು. ತುಂಬಾ ಚೆನ್ನಾಗಿ ಎಂಬ್ಬೆಸ್ಸಿ ಅಧಿಕಾರಿಗಳು ನೋಡಿಕೊಂಡ್ರು ಎಂದು ಹೇಳಿದಳು. ಇದನ್ನೂ ಓದಿ: ನೇರವಾಗಿ ರಷ್ಯಾವನ್ನು ಎದುರಿಸಲು ಮತ್ತೆ ಹಿಂದೇಟು ಹಾಕಿದ ನ್ಯಾಟೋ
ಮುಂಬೈ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಆಪರೇಷನ್ ಗಂಗಾ ಯಶಸ್ಸಿಗೆ ಜಾಗತಿಕ ರಂಗದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಲವಾರು ದೊಡ್ಡ ದೇಶಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಕಷ್ಟಪಡುತ್ತಿವೆ. ಆದರೆ ಭಾರತದ ಬೆಳೆಯುತ್ತಿರುವ ಪ್ರಭಾವದಿಂದಾಗಿ ಆಪರೇಷನ್ ಗಂಗಾ ಯೋಜನೆ ಉಕ್ರೇನ್‌ನ ಯುದ್ಧ ವಲಯದಿಂದ ಸಾವಿರಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಮರಳಿ ತರಲು ಸಾಧ್ಯವಾಗುತ್ತಿದೆ ಎಂದರು. ಇದನ್ನೂ ಓದಿ: ಯುದ್ಧವನ್ನು 6 ಗಂಟೆಗಳ ಕಾಲ ನಿಲ್ಲಿಸೋದು ಸಾಮಾನ್ಯದ ಮಾತಾ!: ಹಾಲಪ್ಪ
ಕಳೆದ ವಾರದಿಂದ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಆಪರೇಷನ್ ಗಂಗಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಉಕ್ರೇನ್‌ನಲ್ಲಿ ಸಿಲುಕಿದ್ದ 13,700 ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ಮರಳಿಸಲಾಗಿದೆ ಎಂದು ಭಾರತ ಸರ್ಕಾರ ಶನಿವಾರ ತಿಳಿಸಿದೆ.
ಹುಬ್ಬಳ್ಳಿ: ಉಕ್ರೇನ್‍ನಿಂದ ಮರಳಿ ತಾಯ್ನಾಡಿಗೆ ಬಂದ ವಿದ್ಯಾರ್ಥಿನಿಯನ್ನು ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬರ ಮಾಡಿಕೊಂಡರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಚೈತ್ರಾ ಗಂಗಾಧರ ಸಂಶಿ ಅವರು ಸುರಕ್ಷಿತವಾಗಿ ವಾಪಸ್ಸಾದರು. ಅವರನ್ನು ಸ್ವತಃ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದರು. ಇದನ್ನೂ ಓದಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ತಂಙಳ್ ನಿಧನ
ಡೆಲ್ಲಿ ಮೂಲಕ ಬೆಂಗಳೂರಿಗೆ ಬಂದಿದ್ದ ಚೈತ್ರ ಇಂದು ಬೆಳಗ್ಗೆ ಸಿಎಂ ಜೊತೆಗೆ ಒಂದೇ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದರು. ಧಾರವಾಡ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಪರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿಯವರು ಸ್ವಾಗತಿಸಿ, ಶುಭ ಹಾರೈಸಿದರು.
ಬಳಿಕ ಮಾತನಾಡಿದ ಸಿಎಂ ನಮ್ಮ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ವಾಪಸ್ಸು ಕರೆ ತರಲಾಗುತ್ತದೆ. ಇಲ್ಲಿಗೆ ಬಂದವರ ಮುಂದಿನ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದರು. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?
ತುಮಕೂರು: ಯುದ್ಧದ ನಡುವೆ ಉಕ್ರೇನ್ ಒಳಗಡೆ ಪ್ರವೇಶ ಮಾಡಿ ಭಾರತೀಯರನ್ನು ರಕ್ಷಣೆ ಮಾಡುವ ಗಟ್ಸ್ ಇಲ್ಲ ಅನ್ನೋರು ಮೊದಲು ತಾವು ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು ಎಂದು ಉಕ್ರೇನ್‍ನಿಂದ ವಾಪಸ್ಸಾದ ತುಮಕೂರಿನ ವಿದ್ಯಾರ್ಥಿ ಸುಜಯ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಬೆಳಗ್ಗೆ ತುಮಕೂರು ನಗರದ ಮಾರುತಿ ನಗರದ ಮನೆಗೆ ಬಂದು ತಲುಪಿದ ಸುಜಯ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಭಾರತದ ಎಂಬೆಸ್ಸಿಯ ಸಹಾಯ, ಕಾಳಜಿಯನ್ನು ಕೊಂಡಾಡಿದ್ದಾರೆ. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಎರಡೂ ಪದೇ, ಪದೇ ಫೋನ್ ಮೆಸೇಜ್ ಮಾಡಿ ನಮ್ಮನ್ನು ವಿಚಾರಿಸಿಕೊಳ್ಳುತಿತ್ತು. ಪೈವ್ ಸ್ಟಾರ್ ಹೊಟೇಲ್‍ನಲ್ಲಿ ಇರಿಸಿ ಊಟ ತಿಂಡಿ ಕೊಟ್ಟಿದೆ. ಉಕ್ರೇನ್ ಗಡಿಯಿಂದ ತುಮಕೂರಿನವರೆಗೂ ಒಂದು ರೂಪಾಯಿಯೂ ನಾವು ಖರ್ಚು ಮಾಡಿಲ್ಲ. ಎಲ್ಲವನ್ನು ಸರ್ಕಾರ ನೋಡಿಕೊಂಡಿದೆ. ಇಷ್ಟಾದ ಮೇಲೂ ಸರ್ಕಾರಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ತಮ್ ಧಮ್ ತೋರಿಸಿಬೇಕು ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಬಂದು ಪೋಷಕರನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ: ವಿದ್ಯಾರ್ಥಿನಿ
ಯುದ್ಧದ ಸನ್ನಿವೇಶದಲ್ಲಿ ಭಾರತ ಉಕ್ರೇನ್‍ಗೆ ಬಂದು ಭಾರತೀಯರನ್ನು ರಕ್ಷಿಸುವಷ್ಟು ನಿರೀಕ್ಷೆ ಮಾಡುವುದು ತಪ್ಪು. ಆದರೆ ಭಾರತೀಯ ರಾಯಭಾರ ಕಚೇರಿಯವರು ಅವರ ಪ್ರಯತ್ನ ಮೀರಿ ಕೆಲಸ ನಿರ್ವಹಿಸಿದ್ದಾರೆ. ನಾವು ಇಂತಹ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದೇವೆ ಎಂದರೆ ಅದು ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಅಲ್ಲಿನ ಪರಿಸ್ಥಿತಿ ನೋಡಿ ನಾವು ಭಾರತ, ಉಕ್ರೇನ್‍ಗೆ ಬಂದು ಭಾರತೀಯರಿಗೆ ಸಹಾಯ ಮಾಡಲು ಸಾಧ್ಯವಿರಲಿಲ್ಲ ಅದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಉಕ್ರೇನ್ ಮತ್ತು ರಷ್ಯಾದ ಯುದ್ಧ ವಿಮಾನಗಳು ರಾಕೆಟ್‍ಗಳು, ಕ್ಷಿಪಣಿಗಳ ಮಧ್ಯೆ ಭಾರತ ಏರ್‌ಲಿಫ್ಟ್ ಮಾಡುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಇಷ್ಟು ಸಹಾಯ ಮಾಡಿರುವುದು ಗ್ರೇಟ್ ಎಂದು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ
ಕೊಪ್ಪಳ: ಭಾರತೀಯರ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಶನಿವಾರ 6 ಗಂಟೆಗಳ ಕಾಲ ನಿಲ್ಲಿಸಿದ್ದಾರೆ. ಇಬ್ಬರ ಜಗಳವನ್ನು 6 ಗಂಟೆ ನಿಲ್ಲಿಸುವುದು ಸಾಮಾನ್ಯದ ಮಾತಾ ಎಂದು ಗಣಿ ಸಚಿವ ಹಾಲಪ್ಪ ಪ್ರಶ್ನಿಸಿದರು.
ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ವಿಚಾರವಾಗಿ ನಡೆದ ಚರ್ಚೆ ಹಿನ್ನೆಲೆಯಲ್ಲಿ ಹಾಲಪ್ಪ ಆಚಾರ್ ಭಾನುವಾರ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ
ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿಯನ್ನು ಕೆಲವರು ಅರ್ಥ ಮಾಡಿಕೊಳ್ಳಲ್ಲ. ಯದ್ಧ ನಡೆಯುವಾಗ ಆ ದೇಶದ ಒಳಗೆ ಹೋಗಲು ಆಗುತ್ತಾ? ಆದರೂ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು ಮನೆಗೆ ಮುಟ್ಟಿಸಿದ್ದೇವೆ ಎಂದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ
ಯುದ್ಧ ನಡೆಯುವಾಗ ಸಾಕಷ್ಟು ತೊಂದರೆಯಾಗುತ್ತದೆ. ಯಾರೇ ಆದರೂ ಅದನ್ನು ಅನುಭವಿಸಬೇಕು. ಆದರೆ ಅನುಭವಿಸಿದ ಸಮಸ್ಯೆಯನ್ನು ರಾಷ್ಟ್ರದ ಮೇಲೆ ಹಾಕಬಾರದು. ನಮ್ಮ ಸರ್ಕಾರದ ಕಾಳಜಿ ಎಷ್ಟಿದೆ ಎನ್ನುವುದನ್ನು ಅನೇಕ ರಾಷ್ಟ್ರಗಳು ನೋಡುತ್ತಿವೆ. ಕೆಲ ವಿದ್ಯಾರ್ಥಿಗಳು ಅವರ ಭಾವನೆ ಹಂಚಿಕೊಂಡಿದ್ದಾರೆ. ಇದಕ್ಕೆ ನಾನು ರಿಯಾಕ್ಟ್ ಮಾಡಲ್ಲ ಎಂದು ಹಾಲಪ್ಪ ಆಚಾರ್ ಹೇಳಿದರು.
ಬೀದರ್: ಉಕ್ರೇನ್‍ನಿಂದ ಬಂದು ಪೋಷಕರು ಹಾಗೂ ಬೀದರ್ ಜನರನ್ನು ನೋಡುತ್ತೇನೆ ಅಂದುಕೊಂಡಿರಲಿಲ್ಲ ಎಂದು ಉಕ್ರೇನ್‍ನಲ್ಲಿ ಸಿಲುಕಿದ್ದ ಬಸವಕಲ್ಯಾಣಕ್ಕೆ ವಿದ್ಯಾರ್ಥಿನಿ ವೈಷ್ಣವಿ ತಿಳಿಸಿದರು.
ಉಕ್ರೇನ್‍ನಿಂದ ಬಸವ ಕಲ್ಯಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬೀದರ್‌ಗೆ ಬರುತ್ತೇನೆ ಅಂದುಕೊಂಡಿರಲಿಲ್ಲಾ. ಸದ್ಯ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು.
ನಮ್ಮ ತಂದೆ ಕೃಷಿಕರಾದರು. ನನ್ನ ಆಸೆಯಂತೆ ಎಂಬಿಬಿಎಸ್ ಮಾಡಲು ಉಕ್ರೇನ್‍ಗೆ ಕಳಿಸಿದ್ದರು. ಆದರೆ ನಾನು ಉಕ್ರೇನ್‍ಗೆ ಹೋದ ಮೂರು ತಿಂಗಳಲ್ಲಿ ಈ ರೀತಿ ಪರಿಸ್ಥಿತಿ ಬಂತು. ರಷ್ಯಾದಿಂದ ಅತಿ ಹೆಚ್ಚು ದಾಳಿಯಾದ ಉಕ್ರೇನ್‍ನ ಖಾರ್ಕಿವ್‍ನಲ್ಲೆ ನಾವು ಇದ್ದೆವು. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಹಾಯದಿಂದ ನಾವು ಭಾರತಕ್ಕೆ ತಲುಪಲು ಸಾಧ್ಯವಾಯಿತು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಪುಟಿನ್ ಜೊತೆ ಮಾತನಾಡಿ ನಮಗೆ ತೊಂದರೆಯಾಗದಂತೆ ನೋಡಿಕೊಂಡರು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ:ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ
ಉಕ್ರೇನ್‍ನಲ್ಲಿದ್ದ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಸಕರು, ತಹಶೀಲ್ದಾರ್ ಅವರು ನಿರಂತರ ಸಂಪರ್ಕದಲ್ಲಿ ಇದ್ದರು ಎಂದ ಅವರು, ನಮ್ಮ ಸ್ನೇಹಿತರು ಇನ್ನೂ ಅಲ್ಲೇ ಇದ್ದಾರೆ. ಅವರು ಸುರಕ್ಷಿತವಾಗಿ ಬಂದರೆ ಅವರ ಪೋಷಕರಿಗೆ ಖುಷಿಯಾಗುತ್ತದೆ ಎಂದರು. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ
ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ವಿಧಾನಸಭಾ ಚುನಾವಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಜನವರಿಯಿಂದ ಅಲ್ಲಿನ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದೆ. ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಷ್ಠುರವಾಗಿ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುದ್ಧದ ವಿಚಾರವಾಗಿ ಉಕ್ರೇನ್‍ನಲ್ಲಿರುವ ಭಾರತೀಯರಿಗೆ ಸರ್ಕಾರ ಫೆಬ್ರವರಿ 15ರ ಹಿಂದೆಯೇ ಉಕ್ರೇನ್‍ನ್ನು ಬಿಡುವಂತೆ ಸಲಹೆಯನ್ನು ನೀಡಿತ್ತು ಎಂದರು.
ಉಕ್ರೇನ್‍ನಲ್ಲಿ ಭಾರತೀಯರನ್ನು ರಕ್ಷಿಸಲು ಆಪರೇಷನ್ ಗಂಗಾವನ್ನು ಪ್ರಾರಂಭಿಸಿ 13,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಉಕ್ರೇನ್‍ನಿಂದ ಈಗಾಗಲೇ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳೂ ಸುರಕ್ಷಿತವಾಗಿ ಬರುವವರಿದ್ದಾರೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.
ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಸರ್ಕಾರವು ರಷ್ಯಾದೊಂದಿಗೆ ಮಾತನಾಡಿ, ರಷ್ಯಾ ಭಾಷೆಯನ್ನು ಮಾತನಾಡುವ 4 ತಂಡಗಳನ್ನು ಉಕ್ರೇನ್‍ನ ನಾಲ್ಕು ಗಡಿ ರಾಷ್ಟ್ರಗಳಿಗೆ ಕಳುಹಿಸಲಾಗಿದೆ. ಮಾರ್ಚ್ 4ರವರೆಗೆ, ಉಕ್ರೇನ್‍ನಿಂದ 16,000 ನಾಗರಿಕರನ್ನು ಹೊರತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ:ರಷ್ಯಾದ ತೈಲದಲ್ಲಿ ಉಕ್ರೇನ್ ಪ್ರಜೆಗಳ ರಕ್ತದ ವಾಸನೆ ಬೆರೆತಿದೆ: ಉಕ್ರೇನ್ ವಿದೇಶಾಂಗ ಸಚಿವ
ರಷ್ಯಾದ ಮಿಲಿಟರಿ ಆಕ್ರಮಣದಿಂದಾಗಿ ಫೆಬ್ರವರಿ 24ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಅದರ ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್‍ಗಳಿಗೆ ಬರುವಂತೆ ತಿಳಿಸಿ, ಅಲ್ಲಿಂದ ರಕ್ಷಿಸಲಾಗುತ್ತಿದೆ. ಇದನ್ನೂ ಓದಿ: ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ
ಉತ್ತರ ಪ್ರದೇಶದಲ್ಲಿ ಏಳು ಹಂತದ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದೆ. ಮಾರ್ಚ್ 10 ರಂದು ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.