Tag: Ukraine

  • ಭಾರತ್ ಮಾತಾ ಕೀ ಜೈ, ವಂದೇ ಮಾತರಂ: ಘೋಷಣೆ ಕೂಗಿದ ವಿದ್ಯಾರ್ಥಿಗಳು

    ಭಾರತ್ ಮಾತಾ ಕೀ ಜೈ, ವಂದೇ ಮಾತರಂ: ಘೋಷಣೆ ಕೂಗಿದ ವಿದ್ಯಾರ್ಥಿಗಳು

    ನವದೆಹಲಿ: ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 41 ಕರ್ನಾಟಕದ ವಿದ್ಯಾರ್ಥಿಗಳು ರೊಮೆನಿಯಾನಿಂದ ತಾಯ್ನಾಡಿಗೆ ಮರಳಿ ಬರುತ್ತಿರುವ ಖುಷಿಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿ ದೇಶಾಭಿಮಾನ ಮೆರೆದಿದ್ದಾರೆ.

    ನಗರದ ಶಶಾಂಕ್ ಹಾಗೂ ವಿವೇಕ್ ತಾಯ್ನಾಡಿಗೆ ಆಗಮಿಸಿದ್ದು ಅವರ ಪೋಷಕರಲ್ಲಿದ್ದ ಆತಂಕ ದೂರವಾಗಿದೆ. ನಿನ್ನೆ ಯುದ್ಧಭೂಮಿ ಖಾರ್ಕಿವ್‍ನ ಪಿಶಾಚಿನ್ ಎಂಬ ಸ್ಥಳದಿಂದ ಸತತ 45 ಗಂಟೆಗಳ ಕಾಲ ಪ್ರಯಾಣ ಮಾಡಿ ಕನ್ನಡಿಗರು ರೊಮೆನಿಯಾ ತಲುಪಿದ್ದರು. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

    ಸದ್ಯ ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿ ವಿಶ್ರಾಂತಿ ಪಡೆಯಲಿದ್ದು ಕೊರೊನಾ ಟೆಸ್ಟ್ ರಿಪೋರ್ಟ್ ಬಂದ ಬಳಿಕ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆ ಕಡೆ ಪ್ರಯಾಣ ಮಾಡಲಿದ್ದಾರೆ. ಶಶಾಂಕ್ ಮತ್ತು ವಿವೇಕ್ ಇಂದು ಸಂಜೆ ದೆಹಲಿಯಿಂದ ಹೈದರಾಬಾದ್ ಅಥವಾ ಬೆಂಗಳೂರಿಗೆ ಬರುವ ಸಾದ್ಯತೆ ಇದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

  • ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ನಮಗೆ ತಾರತಮ್ಯ ಮಾಡಿದ್ದಾರೆ – ತಮಿಳುನಾಡು ವಿದ್ಯಾರ್ಥಿಗಳು

    ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ನಮಗೆ ತಾರತಮ್ಯ ಮಾಡಿದ್ದಾರೆ – ತಮಿಳುನಾಡು ವಿದ್ಯಾರ್ಥಿಗಳು

    ಚೆನ್ನೈ: ಉಕ್ರೇನ್‌ನಿಂದ ಭಾರತಕ್ಕೆ ಮರಳಿರುವ ತಮಿಳುನಾಡು ವಿದ್ಯಾರ್ಥಿಗಳ ಗುಂಪೊಂದು ಸ್ಥಳಾಂತರಕ್ಕೆ ನೇಮಿಸಿದ್ದ ಅಧಿಕಾರಿಗಳು ನಮ್ಮನ್ನು ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಸ್ಥಳಾಂತರದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಕೆಲವು ದಕ್ಷಿಣ ಭಾರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಪರವಾಗಿದ್ದು, ನಮ್ಮ ಹೆಸರನ್ನು ಸ್ಥಳಾಂತರದ ಪಟ್ಟಿಯಿಂದ ಅಳಿಸಿದ್ದಾರೆ. ಹಾಗೂ ಕೇರಳದ ವಿದ್ಯಾರ್ಥಿಗಳಿಗಾಗಿ ಏರ್ಪಾಡು ಮಾಡಲಾಗಿದ್ದ ವಿಮಾನವನ್ನೂ ರದ್ದು ಮಾಡಿ, ಬದಲಾಯಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ತಮಿಳು ಮೂಲದ ವಿದ್ಯಾರ್ಥಿಯೊಬ್ಬ ನಾವು ವಿಮಾನಕ್ಕಾಗಿ 24-48 ಗಂಟೆಗಳ ಕಾಲ ಕಾದಿದ್ದೇವೆ. ಆದರೂ ಅಂದು ಬೆಳಗ್ಗೆ ಬಂದಿದ್ದ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಿದ್ದಾರೆ. ನಮ್ಮ ಹೆಸರನ್ನು ಅಳಿಸಿ ಆ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನೊಬ್ಬ ವಿದ್ಯಾರ್ಥಿ ನಮ್ಮನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದರು. ನಾವು ಮಾರ್ಚ್ 1 ರಂದು ಗಡಿ ತಲುಪಿದ್ದೆವು. ಮಾರ್ಚ್ 2 ರಂದು ವಿಮಾನವನ್ನು ನಿಗದಿಪಡಿಸಬೇಕಿತ್ತು. ಆದರೆ ಅದು ಆಗಿರಲಿಲ್ಲ ಎಂದರು. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ಪೋಲೆಂಡ್‌ನಲ್ಲಿ ಕೇರಳದ 15 ವಿದ್ಯಾರ್ಥಿಗಳಿಗಾಗಿ ಒಂದು ವಿಮಾನ ನಿಗದಿಪಡಿಸಲಾಗಿತ್ತು. ಆದರೆ ಅವರು ಕೇರಳದ ವಿದ್ಯಾರ್ಥಿಗಳಿಗೆ ತಿಳಿಸದೇ ಆ ವಿಮಾನವನ್ನು ರದ್ದುಗೊಳಿಸಿದ್ದರು. ಬದಲಿಗೆ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಆ ವಿಮಾನದಲ್ಲಿ ಕೂರಿಸಿದ್ದರು. ಇದರಿಂದ ಕೇರಳ ಮೂಲದ ವಿದ್ಯಾರ್ಥಿಗಳೂ ಆಕ್ರೋಶಗೊಂಡಿದ್ದರು ಎಂದಿದ್ದಾರೆ.

  • ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ಕೀವ್: ರಷ್ಯಾ-ಉಕ್ರೇನ್ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಸೇನೆ ಉಕ್ರೇನ್‍ನ 202 ಶಾಲೆ ಮತ್ತು 34 ಆಸ್ಪತ್ರೆಯನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.

    ಕೀವ್ ನಗರದ 202 ಶಾಲೆ, 34 ಆಸ್ಪತ್ರೆ ಮತ್ತು 1,500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾ ಸೇನೆ ಕ್ಷಿಪಣಿ, ರಾಕೆಟ್ ದಾಳಿಯ ಮೂಲಕ ಧ್ವಂಸ ಮಾಡಿದೆ. ಅಲ್ಲದೇ ಉಕ್ರೇನ್‍ನಲ್ಲಿರುವ 900ಕ್ಕೂ ಅಧಿಕ ವಸತಿ ಕಟ್ಟಡಗಳಲ್ಲಿ ನೀರು, ಕರೆಂಟ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಲೊಕೇಶನ್ ಶೇರ್ ಮಾಡಿದ ಝೆಲೆನ್ಸ್ಕಿ

    ರಷ್ಯಾ ದಾಳಿಗೆ ಖಾರ್ಕೀವ್ ಸಂಪೂರ್ಣ ಸ್ಮಶಾನದಂತಾಗಿದ್ದು, ಇಂದು ಕೂಡ ಪೆಟ್ರೋಲ್ ಪ್ಲಾಂಟ್‍ಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದೆ. ಇತ್ತ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್, ರಷ್ಯಾ ಸೇನಾ ವಾಹನಗಳ ಮೇಲೆ ಡ್ರೋಣ್ ದಾಳಿ ನಡೆಸುತ್ತಿದೆ. ಇತ್ತ ಉಕ್ರೇನ್‍ನ 26ಕ್ಕೂ ಹೆಚ್ಚು ಯುದ್ಧ ವಾಹನಗಳು ಸಂಪೂರ್ಣ ನೆಲಕಚ್ಚಿದೆ. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಮತ್ತೊಮ್ಮೆ ಗುಡುಗಿದ್ದಾರೆ. ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಝೆಲೆನ್ಸ್ಕಿ, ನಾನು ಕೀವ್‍ನಲ್ಲಿ ಇದ್ದು, ಇಲ್ಲಿಂದ ಓಡಿಹೋಗುವ ಪ್ರಶ್ನೆಯೇ ಇಲ್ಲ. ಯುದ್ಧವನ್ನು ಗೆಲ್ಲಲು ನಾವು ಯಾವ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ನನ್ನ ಕೊನೆ ಉಸಿರುರುವರೆಗೂ ಯುದ್ಧ ಮಾಡುತ್ತೇನೆ ಎಂದು ರಷ್ಯಾಗೆ ಎಚ್ಚರಿಕೆ ರವಾನಿಸಿದ್ದಾರೆ.

  • ನವೀನ್ ಮೃತದೇಹ ಸಿಕ್ಕಿದೆ: ಬೊಮ್ಮಾಯಿ

    ನವೀನ್ ಮೃತದೇಹ ಸಿಕ್ಕಿದೆ: ಬೊಮ್ಮಾಯಿ

    ಬೆಂಗಳೂರು: ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ ಶವಾಗಾರದಲ್ಲಿ ನವೀನ್‍ನ ಮೃತ ದೇಹ ಇಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನವೀನ್ ಮೃತ ದೇಹವನ್ನು ತರುವ ಬಗ್ಗೆ ಕೇಂದ್ರ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ. ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

    ರಷ್ಯಾ ಉಕ್ರೇನ್ ಮೇಲೆ ಇನ್ನೂ ದಾಳಿ ನಡೆಸುತ್ತಿದೆ. ಜೊತೆಗೆ ಉಕ್ರೇನ್‍ನಲ್ಲಿ ಶೆಲ್ ದಾಳಿ ಇನ್ನೂ ನಡೀತಿದೆ. ಅದು ನಿಂತ ಮೇಲೆ ಮೃತ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುವುದು ಚುನಾವಣೆ ವೇಳೆಯೇ ನಿರೀಕ್ಷೆ ಇತ್ತು. ಯುಪಿ, ಉತ್ತರಾಖಂಡ್, ಗೋವಾ, ಮಣಿಪುರಗಳಲ್ಲಿ ಜಯ ಸಾಧಿಸುವುದು ಗೊತ್ತಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆ ಚುನಾವಣಾ ಸಮಿಕ್ಷೆಗಳು ಸಹ ಬಂದಿದೆ. ಇನ್ನೂ ಎರಡು ದಿನ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

  • ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಕೀವ್: ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಂತೆಯೇ, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ.

    ಈ ಹಿಂದೆ ವಿಶ್ವ ಸಮರ 2ರ (1939-1945) ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನಗರಗಳನ್ನು ಆಕ್ರಮಿಸಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.

  • ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‍ನಲ್ಲಿ ಅರೆಸೈನಿಕ ಪಡೆಯನ್ನು ಸೇರಿಕೊಂಡಿದ್ದಾರೆ.

    ಸಾಯಿನಿಕೇಶ್ ರವಿಚಂದ್ರನ್ ಬಗ್ಗೆ ವಿಚಾರಿಸಲು ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿದಾಗ ಭಾರತೀಯ ಸೇನೆಗೆ ಸೇರಲು ಸಾಯಿನಿಕೇಶ್ ರವಿಚಂದ್ರನ್ ಅರ್ಜಿ ಸಲ್ಲಿಸಿದ್ದರು. ಆದರೆ ತಿರಸ್ಕರಿಸಲಾಗಿತ್ತು ಎಂದು ಅವರ ಪೋಷಕರು ತಿಳಿಸಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    2018ರಲ್ಲಿ ಸೈನಿಕೇಶ್ ಖಾರ್ಕಿವ್‍ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಉಕ್ರೇನ್‍ಗೆ ತೆರಳಿದ್ದರು. ಜುಲೈ 2022ರೊಳಗೆ ಕೋರ್ಸ್ ಪೂರ್ಣಗೊಳಿಸಬೇಕಿತ್ತು. ಈ ನಡುವೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿದ್ದು, ಸಾಯಿನಿಕೇಶ್ ಜೊತೆಗೆ ಪೋಷಕರು ಸಂಪರ್ಕ ಕಳೆದುಕೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ ನಂತರ ಸಾಯಿನಿಕೇಶ್ ರವಿಚಂದ್ರನ್ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಈ ವೇಳೆ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಯನ್ನು ಸೇರಿಕೊಂಡಿರುವುದಾಗಿ ತಮ್ಮ ಕುಟುಂಬಸ್ಥರಿಗೆ ತಿಳಿಸಿದರು.

  • ಉಕ್ರೇನ್ ವಾರ್ – ರಷ್ಯಾದ ಮೇಜರ್ ಜನರಲ್ ಸಾವು

    ಉಕ್ರೇನ್ ವಾರ್ – ರಷ್ಯಾದ ಮೇಜರ್ ಜನರಲ್ ಸಾವು

    ಕೀವ್: ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಜನರಲ್ ವಿಟಾಲಿ ಗೆರಾಸಿಮೊವ್ ಸೋಮವಾರ ಸಾವನ್ನಪ್ಪಿದ್ದು, ಹಿರಿಯ ಕಮಾಂಡರ್ ಕಳೆದುಕೊಂಡು ರಷ್ಯಾಗೆ ಮತ್ತೊಂದು ದೊಡ್ಡ ನಷ್ಟವುಂಟಾಗಿದೆ ಎಂದು ಉಕ್ರೇನ್ ತಿಳಿಸಿದೆ.

    ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು. ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಟಾಲಿ ಗೆರಾಸಿಮೊವ್ ಅವರ ಪಾತ್ರವಿದ್ದು, ಅವರಿಗೆ 2014 ರಲ್ಲಿ ‘ಕ್ರೈಮಿಯಾ ಹಿಂದಿರುಗುವಿಕೆಗಾಗಿ ಪದಕವನ್ನು ನೀಡಲಾಗಿತ್ತು. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಈಗಾಗಲೇ ರಷ್ಯಾದ ಅನೇಕ ಹಿರಿಯ ರಕ್ಷಣಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ರಷ್ಯಾ ಸೈನ್ಯದಲ್ಲಿನ ಸಂವಹನ ಮತ್ತು ಘಟಕಗಳ ಸ್ಥಳಾಂತರಿಸುವಿಕೆಯೊಂದಿಗೆ ಗಮನಾರ್ಹ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ರಷ್ಯಾದ 7ನೇ ವಾಯುಸೇನೆ ವಿಭಾಗದ ಕಮಾಂಡಿಂಗ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಮತ್ತು 41 ನೇ ಕಂಬೈನ್ಡ್ ಆಮ್ರ್ಸ್ ಆರ್ಮಿಯ ಉಪ ಕಮಾಂಡರ್ ಅನ್ನು ಸ್ನೈಪರ್ ಮೃತಪಟ್ಟ ನಂತರ ಇದೀಗ ವಿಟಾಲಿ ಗೆರಾಸಿಮೊವ್ ಸಾವನ್ನಪ್ಪಿದ್ದಾರೆ.

  • ಸಾಮಾಜಿಕ ಜಾಲತಾಣದಲ್ಲಿ ಲೊಕೇಶನ್ ಶೇರ್ ಮಾಡಿದ ಝೆಲೆನ್ಸ್ಕಿ

    ಸಾಮಾಜಿಕ ಜಾಲತಾಣದಲ್ಲಿ ಲೊಕೇಶನ್ ಶೇರ್ ಮಾಡಿದ ಝೆಲೆನ್ಸ್ಕಿ

    ಕೀವ್: ಯಾರಿಗೂ ಹೆದರಿ ಅಡಗಿಕೊಂಡಿಲ್ಲ ಎಂದು ತಿಳಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಾವು ಇರುವ ಸ್ಥಳವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಇನ್‍ಸ್ಟಾಗ್ರಾಮ್‌ನಲ್ಲಿ ಮತ್ತೊಂದು ವೀಡಿಯೋ ಪೋಸ್ಟ್ ಮಾಡಿರುವ ಅವರು, ನಾನು ಬ್ಯಾಂಕೋವಾ ಸ್ಟ್ರೀಟ್‍ನಲ್ಲಿರುವ ಕೀವ್‍ನಲ್ಲಿ ಇರುತ್ತೇನೆ. ನಾನು ಯಾರಿಗವೂ ಹೆದರಿ ಅಡಗಿಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ನಮ್ಮ ಈ ದೇಶಭಕ್ತಿಯ ಯುದ್ಧವನ್ನು ಗೆಲ್ಲಲು ನಾವು ಯಾವ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ನನ್ನ ಕೊನೆ ಉಸಿರುರುವರೆಗೂ ಯುದ್ಧ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ – ಯಾವ ಸಮೀಕ್ಷೆ ಏನು ಹೇಳಿವೆ?

    ರಷ್ಯಾ ಉಕ್ರೇನ್ ಯುದ್ಧದ ನಡುವಯೇ ಉಕ್ರೇನ್ ಅಧ್ಯಕ್ಷ ಪೋಲೆಂಡ್‍ಗೆ ಪಲಾಯನ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಝೆಲೆನ್ಸ್ಕಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್

    ರಷ್ಯಾ ಯುದ್ಧ ಆರಂಭಿಸಿದ ನಂತರ ಉಕ್ರೇನಿನ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಪ್ರಯತ್ನ ನಡೆಸಲಾಗಿತ್ತು. ಆದರೆ ಉಕ್ರೇನಿನ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.

  • ನಮ್ಮ ಬೇಡಿಕೆಗಳಿಗೆ ಒಪ್ಪಿದ ಮರುಕ್ಷಣವೇ ಯುದ್ಧ ನಿಲ್ಲಿಸುತ್ತೇವೆ: ರಷ್ಯಾ

    ನಮ್ಮ ಬೇಡಿಕೆಗಳಿಗೆ ಒಪ್ಪಿದ ಮರುಕ್ಷಣವೇ ಯುದ್ಧ ನಿಲ್ಲಿಸುತ್ತೇವೆ: ರಷ್ಯಾ

    ಮಾಸ್ಕೋ: ರಷ್ಯಾದ (Russia) ಹಲವು ಬೇಡಿಕೆಗಳನ್ನು ಉಕ್ರೇನ್ (Ukraine) ಒಪ್ಪಿದ ಮರುಕ್ಷಣವೇ ಆ ದೇಶದ ಮೇಲಿನ ಯುದ್ಧವನ್ನು ನಿಲ್ಲಿಸುವುದಾಗಿ ರಷ್ಯಾ ಘೋಷಣೆ ಮಾಡಿದೆ.

    ರಷ್ಯಾ ಬೇಡಿಕೆ ಏನು?: ಉಕ್ರೇನ್ ತನ್ನ ಸೇನಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ನ್ಯಾಟೊ ಸೇರಿ ಯಾವುದೇ ಒಕ್ಕೂಟವನ್ನು ಉಕ್ರೇನ್ ಸೇರದಂತೆ ಸಂವಿಧಾನ ಬದಲಾವಣೆ ಹಾಗೂ ಡೊನೆಟ್‍ಸ್ಕ್ ಮತ್ತು ಲುಗಾನ್‍ಸ್ಕ್ ಪ್ರತ್ಯೇಕ ಪ್ರದೇಶಗಳನ್ನು ಸ್ವಾಯತ್ತ ಪ್ರಾಂತ್ಯಗಳೆಂದು ಗುರುತಿಸಬೇಕು ಎಂಬುದು ರಷ್ಯಾದ ಬೇಡಿಕೆಗಳಾಗಿವೆ. ಈ ಎಲ್ಲಾ ಬೇಡಿಕೆಗಳು ಈಡೇರಿದ ಮರುಕ್ಷಣವೇ ಉಕ್ರೇನ್ ಮೇಲಿನ ದಾಳಿ ನಿಲ್ಲಲಿದೆ ಎಂದು ಕ್ರೆಮ್ಲಿನ್ ( Kremlin spokesman)ವಕ್ತಾರ ಡಿಮಿಟ್ರಿ ಪೆಸ್ಕೋವ್ (Dmitry Peskov) ಅವರು ಹೇಳಿದ್ದಾರೆ.

    ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪೆಸ್ಕೋವ್ ಅವರು, ನಮ್ಮ ಬೇಡಿಕೆಗಳಿಗೆ ಒಪ್ಪಿದ ಮರುಕ್ಷಣವೇ ನಮ್ಮ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂಬ ಸಂದೇಶವನ್ನು ಉಕ್ರೇನ್‍ಗೆ ನೀಡಿದ್ದೇವೆ. ಈ ನಮ್ಮ ಷರತ್ತುಗಳು ಏನು ಎಂಬುದು ಉಕ್ರೇನ್‍ಗೆ ಚೆನ್ನಾಗಿ ಗೊತ್ತಿದೆ. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು. ಇದಕ್ಕಾಗಿ ಉಕ್ರೇನ್ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು. ಜೊತೆಗೆ ಮೊದಲು ಉಕ್ರೇನ್ ಯೋಧರು ಯುದ್ಧವನ್ನು ನಿಲ್ಲಿಸಬೇಕು. ಆಗ ಯಾರೂ ಸಹ ಅವರ ಮೇಲೆ ದಾಳಿ ನಡೆಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ರಷ್ಯಾದ ಸೇನಾ ಪಡೆಗಳು ಉಕ್ರೇನ್ ಮೇಲೆ ಶೆಲ್ ದಾಳಿಗಳನ್ನು ಹೆಚ್ಚಿಸುತ್ತಿರುವ ಬೆನ್ನಲ್ಲೇ, ರಷ್ಯಾದ ಮೇಲಿನ ನಿಬರ್ಂಧಗಳನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

  • ಯುದ್ಧ ಪೀಡಿತ ಉಕ್ರೇನ್‍ನಿಂದ ಒಂಟಿಯಾಗಿ ಪ್ರಯಾಣಿಸಿದ 11 ವರ್ಷದ ಬಾಲಕ

    ಯುದ್ಧ ಪೀಡಿತ ಉಕ್ರೇನ್‍ನಿಂದ ಒಂಟಿಯಾಗಿ ಪ್ರಯಾಣಿಸಿದ 11 ವರ್ಷದ ಬಾಲಕ

    ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು, ಅಲ್ಲಿನ ನಿವಾಸಿಗಳು ವಾಸಸ್ಥಳ ತೊರೆದು ಬೇರೆಡೆ ವಲಸೆ ಹೋಗುತ್ತಿದ್ದಾರೆ. ಉಕ್ರೇನ್‍ನ ಝಪೊರಿಜಿಯಾ ಪ್ರದೇಶದ 11 ವರ್ಷದ ಬಾಲಕ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿ ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ. ಈ ಹುಡುಗನನ್ನು ಉಕ್ರೇನ್ ವಿದೇಶಾಂಗ ಸಚಿವರು ದಿ ಬಿಗ್ಗೆಸ್ಟ್ ಹೀರೋ ಆಫ್ ಲಾಸ್ಟ್ ನೈಟ್ ಎಂದು ಬಣ್ಣಿಸಿದ್ದಾರೆ.

    ಒಂದು ಬ್ಯಾಗ್‍ನಲ್ಲಿ ಟೆಲಿಫೋನ್ ನಂಬರ್, ಪಾಸ್ ಪೋರ್ಟ್ ಮತ್ತು ತಿನ್ನಲು ಆಹಾರವಿರುವ ಪೇಪರ್ ಬ್ಯಾಗ್‍ನ್ನು ಹೆಗಲ ಮೇಲೆ ಹಾಕಿ ಹೊರಡು ಎಂದು ನನ್ನ ತಾಯಿ ಹೇಳಿ ಕಳುಸಿದ್ದಾರೆ. ಧೈರ್ಯ ಮಾಡಿ ರೈಲು ಹತ್ತಿ ಗಡಿ ತಲುಪಿದೆ. ರೈಲು ಪ್ರಯಾಣದ ನಂತರ ಸ್ಲೋವಾಕಿಯಾದಲ್ಲಿರುವ ಸಂಬಂಧಿಕರು ಇರುವ ಸ್ಥಳಕ್ಕೆ ತಲುಪಿದ್ದಾನೆ. ಬಾಲಕನ ನಗು, ನಿರ್ಭಯತೆ ಮತ್ತು ಸಮರ್ಪಣೆ ಎಲ್ಲವೂ ನಿಜವಾದ ನಾಯಕನ ಗುಣಗಳು ಎಂದು ಉಕ್ರೇನಿಯನ್ ಗೃಹ ಸಚಿವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಗಡಿ ಕಾವಲುಗಾರರು ಬಾಲಕನ ಬಳಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬ್ರಾಟಿಸಾಲ್ವಾದಿಂದ ಬಂದ ಸಂಬಂಧಿಕರಿಗೆ ಬಾಲಕನನ್ನು ಹಸ್ತಾಂತರಿಸಿದ್ದಾರೆ. ಈ ವಿಚಾರ ತಿಳಿದ ಬಾಲಕನ ತಾಯಿ ಸ್ಲೋವಾಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ